ತಿಳಿ ೧ : ಭಾರತದ ಮಹಾನಗರಗಳಲ್ಲಿ ಜಾತಿ ಆಧಾರಿತ ವಸತಿ ಬೇಧ

ಈ ಉಪನ್ಯಾಸವು ಪ್ರಸ್ತುತ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ನೂರ ನಲವತ್ತೇಳು ನಗರಗಳಲ್ಲಿ ಮೊಹಲ್ಲಾಗಳಿಂದ ಸಂಗ್ರಹಿಸಿದ ಮಾಹಿತಿಯು, ನಗರ ದೊಡ್ಡದೋ, ಚಿಕ್ಕದೋ, ಜಾತಿ ವಿಂಗಡಣೆ ಇದ್ದೇ ಇದೆ ಎಂದು ತೋರಿಸುತ್ತದೆ. ನವೀನ್ ಭಾರತಿ ಮತ್ತು ತಂಡದವರು , ಭಾರತೀಯ ನಗರ ಪ್ರದೇಶಗಳಲ್ಲಿನ ಕೇಂದ್ರ ಸಮಸ್ಯೆ ಯಾದ ಜಾತಿ ವಿಭಜನೆಯು ಹೇಗೆ ದೇಶದಾದ್ಯಂತ, ಎಲ್ಲ ಗಾತ್ರದ ಪಟ್ಟಣಗಳಲ್ಲಿ ಯೂ ದಟ್ಟ ವಾಗಿದೆ ಎಂಬುದನ್ನು ಚರ್ಚಿಸುತ್ತಾರೆ. ನಗರೀಕರಣ ದಲ್ಲಿ ಸಾಂಪ್ರದಾಯಿಕ ಜಾತಿ ತಾರತಮ್ಯ ನಶಿಸಿಹೋಗುತ್ತದೆ ಎಂಬ ಸಾಮಾನ್ಯ ನಂಬಿಕೆಯನ್ನು ಈ ಅಧ್ಯಯನ ದ ಫಲಿತಾಂಶ ಗಳು ಬುಡ ಮೇಲಾಗಿಸುತ್ತವೆ. ಈ ಉಪನ್ಯಾಸವು ಇನ್ನೂ ಹೆಚ್ಚಿನ ಸೂಕ್ಶ್ಮ ಫಲಿತಗಳನ್ನು ಮುಂದೊಡ್ಡಿ, ನಗರ ಭಾರತದಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ಹೇಗೆ ಮತ್ತಷ್ಟು ಮೂಲೆಗುಂಪಿಗೆ ಒಳಗಾಗುತ್ತವೆ ಎಂಬುದನ್ನು ತೋರಿಸುತ್ತದೆ.

ಪ್ರತಿಕ್ರಿಯಿಸಿ