ದೇವನೂರು ಮಹಾದೇವ ಅವರ ಕತೆಗಳ ಆಡಿಯೋ ಬುಕ್ ಈಗ ಋತುಮಾನ ಆಪ್ ನಲ್ಲಿ !

ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿಸಿದ ದೇವನೂರು ಮಹಾದೇವ ಅವರ ಕತೆಗಳ ಆಡಿಯೋ ಬುಕ್ ಈಗ ಋತುಮಾನ ಆಪ್ ನಲ್ಲಿ !
ತನಗನ್ನಿಸಿದ್ದನ್ನು ಕಲೆಯಾಗಿ ರೂಪಿಸಲು ದೇವನೂರ ಮಹಾದೇವ ದಕ್ಕಿಸಿಕೊಂಡ ಶೈಲಿ ವಿಶಿಷ್ಟವಾದದ್ದು. ನಂಜನಗೂಡಿನ ಸೀಮೆಯ ಮಾತುಗಳನ್ನು ಅವುಗಳ ಬೇರೆ ಬೇರೆ ರೂಪದಲ್ಲೇ ಬಳಸಿ ಕತೆಗೆ ಬೇಕಾದ ಲಯಬದ್ಧತೆ ಸಾಧಿಸಿರುವುದು ಅವರ ಕತೆಗಳಲ್ಲಿನ ವಿಶೇಷ. ಮಹಾದೇವರ ಎಲ್ಲಾ ಕತೆಗಳನ್ನು ಓದುತ್ತಾ ಹೋದಂತೆ ಅವರು ಬದುಕಿನ ಬಾಗಿಲು ತೆರೆಯಲು ಬಳಸುವ ಅನುಮಾನದ, ಯಾರನ್ನೂ ಕೂಡಲೇ ತಿರಸ್ಕರಿಸದ ಒಳ್ಳೆಯತನದ ನಿಲುವು ಗೊತ್ತಾಗುತ್ತಾ ಹೋಗುತ್ತದೆ. ಈ ಕೇಳುಪುಸ್ತಕ ಮಹಾದೇವ ಅವರ ದ್ಯಾವನೂರು ಸಂಕಲನದ ಎಲ್ಲಾ ಕತೆಗಳು ಅಲ್ಲದೇ ಕತೆಯಂತಿರುವ ಎರಡು ಚಿತ್ರಣಗಳನ್ನು ಒಳಗೊಂಡಿದೆ.
ಧ್ವನಿ : ಯತೀಶ್ ಕೊಳ್ಳೇಗಾಲ
ಸಂಗೀತ : ಪ್ರಶಾಂತ್ ಪಿ. ಪಿ

*********************
Download RUTHUMANA App here :
** Android *** :
** iphone ** :
MEAFL20 ಕೂಪನ್ ಬಳಸಿ. ಇ- ಪುಸ್ತಕ, ಆಡಿಯೋ ಪುಸ್ತಕಗಳ ಮೇಲೆ 20% ರಿಯಾಯಿತಿ ಪಡೆಯಿರಿ, ಋತುಮಾನ ಮೊಬೈಲ್ ಆಪ್ ನಲ್ಲಿ ಮಾತ್ರ.

ಪ್ರತಿಕ್ರಿಯಿಸಿ