ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ “ಸ್ಮಾರ್ಟ್ ಸಿಟಿ” ಗೆ ಸಾಂಸ್ಕೃತಿಕ ಪ್ರತಿಸ್ಪಂದನೆ. ಕನ್ನಡದ ಹಿರಿಯ ಮತ್ತು ಮಹತ್ವದ ವಿಮರ್ಶಕ ಚಿಲ್ಕುಂದ ನಾಗಪ್ಪಶಾಸ್ತ್ರಿ ರಾಮಚಂದ್ರನ್ (ಸಿ ಎನ್ ಆರ್ ) ಅವರು ಕನ್ನಡ ಕಥಾ ಲೋಕದ ಎರಡು ಶ್ರೇಷ್ಟ ಪಾತ್ರಗಳಾದ ಮಂದಣ್ಣ ಮತ್ತು ಹಡೆವೆಂಕಟರನ್ನಿಟ್ಟುಕೊಂಡು “ಸ್ಮಾರ್ಟ್ ಸಿಟಿ” ಯೋಜನೆಯನ್ನು ವಿಶ್ಲೇಷಿಸಿದ್ದಾರೆ.
“ಋತುಮಾನ” ದ ಉತ್ಸಾಹಿ ತರುಣರಿಗೆ:
ನಮಸ್ಕಾರ. ನನ್ನ ಮಾತು ಮತ್ತು ಚಿತ್ರ ತುಂಬಾ ಸ್ಪಷ್ಟವಾಗಿ ಆಕರ್ಷಕವಾಗಿ ಬಂದಿವೆ; ಇದರ ಹಿಂದೆ ಸಾಹಿತ್ಯಕ-ಸಾಮಾಜಿಕ ಚಿಂತನೆಯನ್ನು ಕುರಿತ ನಿಮ್ಮ ಬದ್ಧತೆ ಎದ್ದು ಕಾಣುತ್ತದೆ. ಕೃತಜ್ಞನಾಗಿದ್ದೇನೆ.
ಇದೇ ಬಗೆಯಲ್ಲಿ ಇತರ ಲೇಖಕರ, ಚಿಂತಕರ, ವಿಚಾರಗಳು ನಿಮ್ಮ ’ದೃಶ್ಯ, ವಾಕ್ ಮಾಧ್ಯಮ’ದಲ್ಲಿ ಬರುತ್ತಿರಲಿ ಮತ್ತು ಆ ಮೂಲಕ ಕರ್ನಾಟಕದ ಮೂಲೆ ಮೂಲೆಗಳನ್ನು ತಲಪಲಿ ಎಂದು ಹಾರೈಸುತ್ತೇನೆ. ಸಿ. ಎನ್. ರಾಮಚಂದ್ರನ್
ಪ್ರಿಯ ಗೆಳೆಯರೇ,
ತುಂಬಾ ಒಳ್ಳೆಯ ವಿಶ್ಲೇಷಣೆ ಇರುವ ವಿಡಿಯೋ ಹಾಕಿದ್ದೀರಿ.
ಇಂತಹ ವಿಡಿಯೊ ಜೊತೆಗೆ ಅವುಗಳ transcript ಲೇಖನವನ್ನೂ ಹಾಕಿದರೆ ಉಪಯುಕ್ತ ಆಗುತ್ತದೆ. ಪ್ರಯತ್ನಿಸಿ.
ನಿಮ್ಮ ಇಂತಹ ಕೆಲಸಗಳು ಬಹುಕಾಲ ನೆನಪಿನಕೋಶದಲ್ಲಿ ಇರುವಂತಹದು.
ನಿಮ್ಮ ತಂಡಕ್ಕೆ ಒಳಿತಾಗಲಿ