ನೀ ಇಲ್ಲದಕ್ಕ…

divderspverticle

ನೀ ಇಲ್ಲದಕ್ಕ…
ಮಾವಿನ ಹಣ್ಣ ಕಪ್ಪಾಗ್ಯಾವ
ಬೇವಿನ ಎಲಿ ಉಪ್ಪಾಗ್ಯಾವ
ಚಿಗಿರೆಲಿ ಸಪ್ಪಗಾಗ್ಯಾವ
ಮನಿಯೊಳಗಿನ ಬೆಕ್ಕು ನಾಯಿ ಬೆಪ್ಪಗ್ಯಾವ
ಗ್ವಾಡಿಮ್ಯಾಲಿನ ಗಿಳಿ ,ನಿನ್ನಿಆಗ್ತಿನ0ದ ಮಳಿ
ಎರಡು ಸುಳ್ಳ ಹೇಳಿದಾವ

img-20161007-wa0006ನೀ ಇಲ್ಲದಕ್ಕ…
ಅ0ಗೈ ಗೆರಿ ಅಳಕಿದಾವ
ಮು0ಗೈಯಾಗಿನ ಉ0ಗುರ ಉದರಿ ಬಿದ್ದಾವ
ಮ0ಗ್ಯಾಮನಸ್ಸ ಮುದ್ದಿ ಆಗೇತಿ
ಹೆ0ಗ್ಸರ ಮ್ಯಾಲಿನ ಮೋಹ ಅಳದೈತಿ
ಮನಸ್ಸಿನ ಎಲುವು ಉಳಕಿ ಮುಳ್ಳು ಮುರಿದು
ಅರ್ದಾ ಅದರಾಗ ಉಳಿದು ಅಳಕ ಹಿಡದೈತಿ
ನೀ ಇಲ್ಲದಕ್ಕ…
ಹೊಲದಾಗ ಬಿತ್ತಿ ಬ0ದ ಕಾಳ ಮೊಳಕಿ ಒಡೆದಿಲ್ಲ
ಕೂಡಿಟ್ಟ ನೀರ ಹಾ0ಗ ಕರಿಗಿದಾವ
ಎಣ್ಣಿಗಾಯಿ ಬದ್ನಿಕಾಯಿ ಪು0ಡಿಪಲ್ಲೇ ರೊಟ್ಟಿ ತಿ0ದ್ರು
ಒ0ದು ತುತ್ತು ರುಚಿ ಕೊಡತಿಲ್ಲ.

ನೀ ಇಲ್ಲದಕ್ಕ….
ಹಕ್ಕ್ಯಾಗಿನ ದನಗೊಳ ಮಲಿ ಬಿಗಿದ ಬಿಕ್ಕಾತಾವ
ಹಸಿವು ಅಳವೆತ್ತಿದ್ರು ಹಸುಗರಾ ಕುಸಕ್ಯಾಡಾತಾವ
ವಾರದ ಜ0ಗಮರು ಭಿಕ್ಷುಕ ಬ0ದು ತೊಲ ಬಾಗ್ಲಾಗ ನಿ0ತಾರ
ಬಸವಣ್ಣ ಗುಡಿ ಪೂಜಾ ಗ0ಟಿ ಸಪ್ಪಳ ಇಲ್ಲದಕ್ಕ ಕಿವಿ ತಿರಿಗ್ಯಾವ
ಎಲ್ಲಾನು ನನಗ ತಿರುವು ಮುಗಿ ಬೀಳಾಕತೈತಿ…
ಅಯ್ಯೋ ಪಾಪ ಅ0ತಾರ
ಹೇಳಿ ಹೊಗು ಕಾರಣಾ
ಇದಕ್ಕ ಹೊಣಿ
ನಾನಾ…ನೀನಾ….

 ಚಿತ್ರಗಳು- ಮಹಾಂತೇಶ್

ಪ್ರತಿಕ್ರಿಯಿಸಿ