ನನ್ನ ದೇವರು

ಮನುಷ್ಯ ಸಮಾಜದಲ್ಲಿ ದೇವರು ಎನ್ನುವ ಪರಿಕಲ್ಪನೆ ವಿಶಿಷ್ಟವಾದದ್ದು. ನಾವು ನಂಬಲಿ ಬಿಡಲಿ ನಮ್ಮೆಲ್ಲರ ಮನಸಿನಲ್ಲೂ, ಆಲೋಚನೆಗಳಲ್ಲೂ, ಒಂದಲ್ಲ ಒಂದು ರೂಪದಲ್ಲಿ ದೇವರ ಅಸ್ತಿತ್ವ ಇದೆ. ಈತ ಏಕಕಾಲಕ್ಕೆ ವೈಯಕ್ತಿಕವೂ ಹೌದು. ಸಾರ್ವತ್ರಿಕವೂ ಹೌದು. ಈ ಅಂಕಣದಲ್ಲಿ ಕೆಲವು ಆಯ್ದ ಬರಹಗಾರರು ತಮ್ಮ ಖಾಸಗಿ ದೇವರ ವಿವರವನ್ನಿಲ್ಲಿ ಅನಾವರಣಗೊಳಿಸಿದ್ದಾರೆ. ” ನನ್ನ ದೇವರು” ಹೆಸರಿನ ಈ ಅಂಕಣ ಈ ಭಾನುವಾರದಿಂದ ಋತುಮಾನದಲ್ಲಿ ಪ್ರಕಟಗೊಳ್ಳಲಿದೆ. ನಿರೀಕ್ಷಿಸಿ..
ಈ ನಡುವೆ ನೀವು ಕೂಡ ನಿಮ್ಮ ದೇವರ ಕುರಿತ ಅನುಭವಗಳನ್ನು “ನನ್ನ ದೇವರು”ಗೆ ಕಳುಹಿಸಬಹುದು. ೫೦೦ ಪದಗಳಿಗೆ ಮೀರದಂತೆ ನಿಮ್ಮ ಬರಹಗಳನ್ನು [email protected] ಗೆ ಮಿಂಚಂಚೆ ಮೂಲಕ ಕಳುಹಿಸಿಕೊಡಿ. ಸೂಕ್ತವೆನಿಸಿದರೆ ಋತುಮಾನದಲ್ಲಿ ಪ್ರಕಟಿಸಲಾಗುವುದು.

ಪ್ರತಿಕ್ರಿಯಿಸಿ