ಆರ್ನಾಲ್ಡ್ ಬಾಕೆ – ಜಾನಪದ ಅಧ್ಯಯನ (1938) & ಮರು ಅಧ್ಯಯನ (1984)

ಆರ್ನಾಲ್ಡ್ ಆಡ್ರಿಯಾನ್ ಬಾಕೆ (ಆರ್ನಾಲ್ಡ್ ಏಡ್ರಿಯನ್ ಬೇಕ್) (1899-1963) ಓರ್ವ ಡಚ್ ವಿದ್ವಾಂಸ . ಭಾರತೀಯ ಜಾನಪದ ಅಧ್ಯಯನದ ಇತಿಹಾಸದಲ್ಲಿ ವಿದ್ಯುನ್ಮಾನ ಮಾಧ್ಯಮಗಳಾದ ವೈರ್ ರೆಕಾರ್ಡಿಂಗ್ , ಮೂಕಿ ಚಿತ್ರ, ಕಪ್ಪು-ಬಿಳಿ ಛಾಯಾಚಿತ್ರ ಈ ಎಲ್ಲ ಮಾಧ್ಯಮಗಳಲ್ಲಿ  ಪ್ರಥಮ ದಾಖಲೀಕರಣ ಮಾಡಿದ ಕೀರ್ತಿ ಆರ್ನಾಲ್ಡ್ ಬಾಕೆ-ಗೆ ಸಲ್ಲುತ್ತವೆ.

ಆರ್ನಾಲ್ಡ್ ಆಡ್ರಿಯಾನ್ ಬಾಕೆ (Arnold Adrian Bake) (1899-1963) ಓರ್ವ ಡಚ್ ವಿದ್ವಾಂಸ .  1899ರಲ್ಲಿ ಹಾಲೆಂಡ್-ನಲ್ಲಿ ಜನನ, ಓದು-ಅಭ್ಯಾಸಗಳಲ್ಲಿ ಸದಾ ಕೌತುಕ ಜಿಜ್ಞಾಸೆ ಹೊಂದಿದ ಈತನಿಗೆ ಭಾರತೀಯ ಸಂಗೀತ ದಲ್ಲಿ ತೀವ್ರ ಒಲವಿತ್ತು . ಈತ ಭಾರತೀಯ ಸಂಗೀತದಲ್ಲಿ  ಹೆಚ್ಚಿನ ವ್ಯಾಸಂಗ ಹಾಗೂ ಪಿಎಚ್.ಡಿ. ಪದವಿ  ಪಡೆಯಲು ಬಂಗಾಲದ ಶಾಂತಿನೀಕೇತನ ಸಂಸ್ಥೆಯ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ (1861-1941) ಬಳಿ ಅಧ್ಯಯನವನ್ನು 1924-ರಿಂದ 1929-ರತನಕ ವ್ಯಾಸಂಗ ಮಾಡಿದ. ರವೀಂದ್ರನಾಥ ಟಾಗೋರ-ರ ಪ್ರೇರಣೆಯಿಂದ ಭಾರತೀಯ ಜನಪದ  ಕಲೆಗಳು, ಹಾಡು ಹಾಗೂ ಬುಡಕಟ್ಟು ಜನವರ್ಗದವರ ದೇಶೀ ಸಂಸ್ಕೃತಿಯನ್ನು ಅರಿಯಲು ಮುಂದಾದರು. ಈತ 1931ರಿಂದ 1934ರ ತನಕ ಉತ್ತರ ಭಾರತ ಬೆಂಗಾಲ್, ನೇಪಾಲ್, ಹಾಗೂ ಲಡಕ್ ಈ ಭಾಗಗಳಲ್ಲಿ ಸಂಚರಿಸಿ ಜನಜೀವನದ ಅಮೂಲ್ಯ ಹಾಡುಗಳನ್ನು ಮೊದಲಾಗಿ  ವ್ಯಾಕ್ಸ್ ಸಿಲಿಂಡರ್ ಮಾಧ್ಯಮದಲ್ಲಿ ದಾಖಲೀಕರಣ ಮಾಡಿದ.   ಆ ಬಳಿಕ 16 ಎಂಎಂ ಕ್ಯಾಮೆರಾ ಮೂಲಕ ಚಲನಚಿತ್ರಗಳನ್ನು ತೆಗೆಯುವ ಸಾಹಸ ಮಾಡಿದ.  ಅಂದು ಲಭ್ಯವಿದ್ದ ಯಂತ್ರೋಪಕರಣಗಳ ಮೂಲಕ ಎಲ್ಲವನ್ನು ದಾಖಲೀಕರಣ ಮಾಡಬೇಕು, ಅಧ್ಯಯನದ ಒರೆಗೆ  ಹಚ್ಚಬೇಕು ಎನ್ನುವ  ಈತನ ಹಂಬಲಕ್ಕೆ ಜೋಡಿಯಾದದ್ದು ಪಿಯಾನೋ ವಾದಕಿಯಾದ ಕೊರ್ನೆಲಿಯಾ.  ಆರ್ನಾಲ್ಡ್ ಬಾಕೆ 1934-ರ ದಶಕದಲ್ಲಿ ಭಾರತದ ಉದ್ದಗಲಕ್ಕೂ ಸಂಚರಿಸಿ, ಹಿಂದೂ, ಮುಸಲ್ಮಾನ್, ಜೈನ, ಪಾರಸಿ, ಕ್ರಿಶ್ಚಿಯನ್, ಹಾಗೂ ಬುಡಕಟ್ಟು  ಜನವರ್ಗದವರ ಹಲವಾರು ಮಾಹಿತಿಗಳನ್ನು, ಮೌಖಿಕ ಸಾಹಿತ್ಯವನ್ನು, ವಾದ್ಯ-ಉಪಕರಣಗಳ ಪರಿಚಯವನ್ನು ಹಾಗೂ ಅವುಗಳ ಇತಿಹಾಸದ ಬಗ್ಗೆ  ಹೆಚ್ಚಾಗಿ ತಿಳಿದು ಕ್ಷೇತ್ರಾಧ್ಯಯನ ನಡೆಸಲು  ಮುಂದಾದ.

ಕರ್ನಾಟಕ ಜಾನಪದ ಅಧ್ಯಯನದ ಇತಿಹಾಸದಲ್ಲಿ ವಿದ್ಯುನ್ಮಾನ ಮಾಧ್ಯಮಗಳಾದ ವೈರ್ ರೆಕಾರ್ಡಿಂಗ್ , ಮೂಕಿ ಚಿತ್ರ, ಕಪ್ಪು-ಬಿಳಿ ಛಾಯಾಚಿತ್ರ ಈ ಎಲ್ಲ ಮಾಧ್ಯಮಗಳಲ್ಲಿ  ಪ್ರಥಮ ದಾಖಲೀಕರಣ ಮಾಡಿದ ಕೀರ್ತಿ ಆರ್ನಾಲ್ಡ್ ಬಾಕೆ-ಗೆ ಸಲ್ಲುತ್ತವೆ. ಪ್ರಸ್ತುತ ಜಾನಪದ ಅಧ್ಯಯನದ ಸ್ವರೂಪ ಹಾಗೂ ಕ್ಷೇತ್ರಕಾರ್ಯ ತಂತ್ರ ವಿಧಾನಗಳಲ್ಲಿ ಬಹಳಷ್ಟು ಸುಧಾರಣೆಗಳು ಬಂದಿವೆ. ಜಾನಪದ ಮೀಮಾಂಸೆ, ಚರಿತ್ರೆ ನಿರ್ಮಾಣ ಅಥವಾ ಮೌಖಿಕ ಇತಿಹಾಸ ಅಧ್ಯಯನ ನಡೆಸುವವರು ಅಗತ್ಯವಾಗಿ   ಈ ಹಿಂದೆ ಮಾಡಿರಬಹುದಾದ ದಾಖಲೆಗಳನ್ನು ಇರಿಸಿಕೊಂಡು ಮರು ಅಧ್ಯಯನ ಮಾಡುವುದರ ಮೂಲಕ ಪುನರಪಿ  ಜಾನಪದ ಇತಿಹಾಸವನ್ನು ಮತ್ತು ವೈಶಿಷ್ಟ್ಯಗಳನ್ನು  ತೌಲನಿಕವಾಗಿ ಅಧ್ಯಯನ ಹಾಗೂ ವಿಶ್ಲೇಷಣೆ ಮಾಡಲು ಸಾಧ್ಯವಿದೆ. 1938ರ  ಸಂದರ್ಭದಲ್ಲಿ ನಡೆದ ಕ್ಷೇತ್ರಕಾರ್ಯ ಮತ್ತು ದಾಖಲೀಕರಣದ ಮಾಹಿತಿಗಳು ಅತ್ಯಂತ ಮೌಲಿಕವಾದುದ್ದಾಗಿವೆ. ಬಹುಶಃ ವೈಜ್ಞಾನಿಕ ನೆಲೆಗಟ್ಟಿನಲ್ಲಿ  ಆಧುನಿಕ ಹತ್ಯಾರ ಅಥವಾ  ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪ್ರಥಮ ದಾಖಲೀಕರಣದಂತಹ ಸಂಗ್ರಹ  ಪ್ರಯತ್ನ ಆರ್ನಾಲ್ಡ್ ಬಾಕೆಯಿಂದ  ಸಾಧಿತವಾಗಿವೆ.

1- ಈತ ಬಿಟ್ಟುಹೋದ ಅನೇಕ ಟಿಪ್ಪಣಿ, ಮಾಧ್ಯಮದ ಮುದ್ರಿತ ಆಕರಗಳು ಅಮೇರಿಕಾದ ಕ್ಯಾಲಿಫೋರ್ನಿಯಾದ  ಲಾಸ್ ಏಂಜಲೀಸ್ ವಿಶ್ವವಿದ್ಯಾನಿಲಯದ ಆರ್ಕೈವ್  ನಲ್ಲಿ  ಸಂರಕ್ಷಿಸಿಡಲಾಗಿದೆ.

2- ಸುಮಾರು 1938-39ನೇ ಇಸವಿಯಲ್ಲಿ 14 ತಿಂಗಳುಗಳ ಕಾಲ ಭಾರತದ ಉದ್ದಗಲಕ್ಕೂ ಸಂಚರಿಸಿ 768ಕ್ಕೂ ಮಿಗಿಲಾಗಿ ವಿವಿಧ ಪ್ರಕಾರಗಳನ್ನು ದಾಖಲಿಸಿರುವರು. ಶ್ರೀಲಂಕಾ, ತಮಿಳ್ನಾಡು, ಕೇರಳ, ಕರ್ನಾಟಕ , ಆಂದ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಸಿಂದ್-ಗಡಿಭಾಗ, ಪಾಕಿಸ್ಥಾನ ಇತ್ಯಾದಿ ಪ್ರದೇಶಗಳಲ್ಲಿ ಸಂಚರಿಸಿ ವಿವಿಧ ಬಗೆಯ ಮೌಖಿಕ ಸಂಪನ್ಮೂಲ ಧ್ವನಿ ಮುದ್ರಿಸಿಕೊಂಡು ಅಧ್ಯಯನ ನಡೆಸಿರುವರು.

3-ಪ್ರೊ. ಆರ್ನಾಲ್ಡ್ ಬಾಕೆ ಸಂಗ್ರಹಿಸಿದ ಎಲ್ಲ ಸಾಮಗ್ರಿಗಳನ್ನು ಆಧುನಿಕ ತಂತ್ರ ಉಪಕರಣ ಬಳಸಿ 1967ರಲ್ಲಿ ನಕಲು ಮಾಡಿಕೊಳ್ಳಲಾಯಿತು. ಪ್ರೊ. ಬಾಕೆ ಸಂಗ್ರಹದಲ್ಲಿ ಕರ್ನಾಟಕದ ಯಕ್ಷಗಾನ ಹಾಡುಗಳು, ತುಳು ಪಾಡ್ದನಗಳು ಸೇರಿವೆ. ಧಾರ್ಮಿಕ ಪರಂಪರೆಯ ಅನೇಕ ಮೌಖಿಕ ಸಂಪತ್ತನ್ನು ಈ ಸಂಗ್ರಹದಲ್ಲಿ ಕಾಣಬಹುದು. ಹಿಂದು, ಮುಸ್ಲಿಮ್, ಜೈನ, ಕ್ರಿಶ್ಚಿಯನ್, ಜ್ಯೂ, ಬೌದ್ಧ ಸಂಸ್ಕೃತಿ ಮತ್ತು ದೇಶೀಯ ಜನಾಂಗಿಕ ಅಧ್ಯಯನಕ್ಕೆ ಸಂಬಂಧಿಸಿದ ಅನೇಕ ಪ್ರಕಾರಗಳನ್ನು ಪ್ರೊ. ಬಾಕೆ ಸಂಗ್ರಹಿಸಿರುವರು.

4-ದೇಶೀಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ (ಕರ್ನಾಟಕ ಮತ್ತು ಹಿಂದೂಸ್ತಾನಿ) ಕುರಿತಂತೆ ಅನೇಕ ಮಾಹಿತಿ ಸಂಗ್ರಹ ಇವರಿಂದ ನಡೆದಿವೆ. ಜನಪದ ಹಾಡುಗಳಲ್ಲಿ ಹೆಂಗಸರ ಹಾಡುಗಳು ಹಬ್ಬ-ಆಚರಣೆಯ ಹಾಡುಗಳು, ಪುರಾಣ ನಿರೂಪಣೆಗಳು; ಉದಾ- ವಿಲ್ಲು ಪಾಟ್ಟು, (ತಮಿಳ್ನಾಡು-ಕೇರಳ), ನೃತ್ಯ -ಹಾಡುಗಾರಿಕೆ ಕಥಕ್ಕಳಿ (ಕೇರಳ) ಯಕ್ಷಗಾನ (ಕನರ್ಾಟಕ) ಚೌತನಾಟಕಂ (ಕೇರಳ) ಓಟ್ಟಂ ತುಳ್ಳಲ್ (ಕೇರಳ) ಕೋಲಾಟಂ, ಒಯಿಲಾಟ್ಟಂ-ನೃತ್ಯ ಪ್ರಕಾರ ಇತ್ಯಾದಿ.

5-1938-39ರಲ್ಲಿ ಪ್ರೊ. ಆರ್ನಾಲ್ಡ್ ಬಾಕೆ ಸಂಗ್ರಹಿಸಿದ ಶ್ರವ್ಯ-ದೃಶ್ಯ ಮಾಧ್ಯಮದ ಸಾಮಗ್ರಿಗಳಲ್ಲಿ ತಿಳಿಸಿದ ಜನಪದ ಪ್ರಕಾರ ಹಾಗೂ ವಕ್ತೃ ಅಥವಾ ವಕ್ತೃವಿನ ಸಂಬಂಧಿಗಳನ್ನು ಗುರುತಿಸುವ ಪುನರ್ ಅನ್ವೇಷಣಾ ದಾಖಲಾತಿ 1984 ಮತ್ತು 1984ರಲ್ಲಿ ಪ್ರೊ. ಜೈರಾಜ್ಬಾಯ್ ಮತ್ತು ಎಮಿ ಕ್ಯಾಟಲೀನ್ ತಂಡದವರಿಂದ ಜರುಗಿತು. ಈ ಪುನರ್ ಅನ್ವೇಷಣಾ ತಂಡದ ತಾಂತ್ರಿಕ – ಸಲಕರಣೆಗೂ ಬಹಳಷ್ಟು ವ್ಯತ್ಯಾಸವಿದೆ.

6- 12-2-2017ರಂದು ಆರ್ನಾಲ್ಡ್ ಬಾಕೆ ಮರು ಅಧ್ಯಯನ ದಾಖಲೆಗಳ ಪ್ರಾದೇಶಿಕ ಆರ್ಕೈವ್ಸ್ ಚಾಲನೆ ಮಾಡಲಾಗಿದೆ,
ಸಾಂಸ್ಕೃತಿಕ ಅಧ್ಯಯನ ಸಂಸ್ಥೆ Under Registration
ಟಾಗೋರ್ ಮತ್ತು ಆರ್ನಾಲ್ಡ್ ಬಾಕೆ ೧೯೩೮ ‘ಇಂಡಿಯಾನ’ ದಾಖಲೀಕರಣ: ಮರು ಅಧ್ಯಯನ ಸಂಪನ್ಮೂಲ ಕೇಂದ್ರ ಪ್ರೇರಣೆ
ಮರು-ಅಧ್ಯಯನ ಸಂಪನ್ಮೂಲ ಕೇಂದ್ರ
Inspired: Tagore & Arnold Bake 1938 (Indiana) Field-lore Archives Restudy Centre (ITAB-FARC)
(Under Registration)

ಕೃಪೆ  : ಎಸ್. ಎ. ಕೃಷ್ಣಯ್ಯ | ನಿರ್ದೇಶಕರು , ಪ್ರಾಚ್ಯಸಂಚಯ ಸಂಶೋಧನ ಕೇಂದ್ರ- ಉಡುಪಿ.  |  [email protected]

One comment to “ಆರ್ನಾಲ್ಡ್ ಬಾಕೆ – ಜಾನಪದ ಅಧ್ಯಯನ (1938) & ಮರು ಅಧ್ಯಯನ (1984)”
  1. ನಮಸ್ಕಾರ
    ವೀಡಿಯೋ ಮುದ್ರಿಕೆ ಟೈಟಲ್-ನಲ್ಲಿ (ಕೊನೆಯ ಭಾಗ) Ami ಎಂಬುದನ್ನು Amy ಮಾಡಿಕೊಳ್ಳುವುದು
    Amy Catlin-Jairazbhoy, Ph.D.
    Professor (Adjunct)
    Ethnomusicology Department
    UCLA Herb Alpert School of Music
    Los Angeles CA 90095
    http://www.apsara-media.com

    ನನ್ನ ಇ-ಮೇಲ್ – [email protected] ಕೊಡುವುದು

    12-2-2017ರಂದು ಆರ್ನಾಲ್ಡ್ ಬಾಕೆ ಮರು ಅಧ್ಯಯನ ದಾಖಲೆಗಳ ಪ್ರಾದೇಶಿಕ ಆರ್ಕೈವ್ಸ್ ಚಾಲನೆ ಮಾಡಲಾಗಿದೆ,
    ಸಾಂಸ್ಕೃತಿಕ ಅಧ್ಯಯನ ಸಂಸ್ಥೆ Under Registration
    ಟಾಗೋರ್ ಮತ್ತು ಆರ್ನಾಲ್ಡ್ ಬಾಕೆ ೧೯೩೮ ‘ಇಂಡಿಯಾನ’ ದಾಖಲೀಕರಣ: ಮರು ಅಧ್ಯಯನ ಸಂಪನ್ಮೂಲ ಕೇಂದ್ರ ಪ್ರೇರಣೆ
    ಮರು-ಅಧ್ಯಯನ ಸಂಪನ್ಮೂಲ ಕೇಂದ್ರ
    Inspired: Tagore & Arnold Bake 1938 (Indiana) Field-lore Archives Restudy Centre (ITAB-FARC)
    (Under Registration)

ಪ್ರತಿಕ್ರಿಯಿಸಿ