ಹಲವಾರು ಸಮಾನಾಸಕ್ತ ಗೆಳೆಯರು ಸೇರಿ ಪ್ರಕೃತಿ ಪ್ರಕಾಶನದ ಹೆಸರಿನಲ್ಲಿ ಪುಸ್ತಕ ಪ್ರಕಾಶನವೊಂದನ್ನು ಪ್ರಾರಂಭಿಸಿದ್ದಾರೆ. ಗೆಳೆಯರ ಈ ಪ್ರಯತ್ನಕ್ಕೆ ಋತುಮಾನ ಬೆನ್ನೆಲುಬಾಗಿ ನಿಲ್ಲಲಿದ್ದು ಈ ಪ್ರಕಾಶನದ ಆನ್ ಲೈನ್ ಪುಸ್ತಕ ಮಾರಾಟವೂ ಸೇರಿದಂತೆ, ಪ್ರಕಾಶನಕ್ಕೆ ಸಂಬಂಧಿಸಿದ ಆನ್ ಲೈನ್ ಪ್ರಚಾರದಲ್ಲೂ ಕೈ ಜೋಡಿಸಲಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರ ಹಂಚಿಕೊಳ್ಳಲಾಗುವುದು.
ಸ್ನೇಹಿತರ ಹೊಸ ಪ್ರಯತ್ನಕ್ಕೆ ಋತುಮಾನ ಶುಭ ಕೋರುತ್ತದೆ.
ಪ್ರಕೃತಿ ಪ್ರಕಾಶನದ ಉದ್ದೇಶ:
“ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪ್ರಕಾಶನ ಸಂಸ್ಥೆಗಳು ಅನೇಕ ವರ್ಷಗಳಿಂದ ಉತ್ತಮ ಪುಸ್ತಕಗಳನ್ನು ಹೊರತರುತ್ತಿದೆ. ನಾವು ‘ಪ್ರಕೃತಿ’ ಪ್ರಕಾಶನ ಆರಂಭಿಸಲು ಯಾವುದೇ ಪೂರ್ವಯೋಜನೆ ಆಲೋಚನೆಗಳಿರಲಿಲ್ಲ. ಒಬ್ಬ ಕವಿಯನ್ನು ಊಹಿಸಲಾಗದ ಸ್ಥಿತಿಯಲ್ಲಿ ನೋಡಿದ ಆಘಾತ, ಯಾವುದನ್ನೋ ಓದಿದ ಬೆರಗು, ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ, ಹೀಗೆ ಕ್ಷಣಿಕ ಸ್ಪಂದನೆಯನ್ನು ಮೀರಿದ ಒತ್ತಾಸೆಯು ನಮ್ಮೊಳಗೆ ಮೊಳೆತು ಈ ಪ್ರಕಾಶನದ ಹುಟ್ಟಿಗೆ ಕಾರಣವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಕವನ ಸಂಕಲವೊಂದನ್ನು
ಹಂಚಿಕೊಳ್ಳುತ್ತಿದ್ದೇವೆ. ಹಿರಿಯರು ಕಿರಿಯರು ಎನ್ನುವ ವಿಂಗಡನೆಯಿಲ್ಲದೆ, ಕವಿತೆ ಕತೆ, ಕಾದಂಬರಿ ಎನ್ನುವ ಕಟ್ಟುಪಾಡುಗಳಿರದೆ, ಯಾವುದೇ ಟಾರ್ಗೆಟ್ಟುಗಳ ಹಂಗಿಲ್ಲದೆ, ಓದಿನ ಬೆಸುಗೆಯಲ್ಲಿ ಸುಖಿಸುವ ಪ್ರಯತ್ನವಿದು. ಇಲ್ಲಿ ಯಾವುದೇ ಸ್ಪರ್ಧೆಗಳಿಲ್ಲ, ಅರ್ಜಿಗಳಿಲ್ಲ, ಬಹುಮಾನಗಳಿಲ್ಲ. ನಮ್ಮಿಷ್ಟದ ಬರಹಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಸಹೃದಯರಿಗೆ ತಲುಪಿಸುವುದು, ನಾವು ಆ ಬರಹಗಳಿಗೆ ಕೊಡಬಹುದಾದ ಸಣ್ಣ ಗೌರವ ಅನ್ನುವುದುನಮ್ಮ ನಂಬಿಕೆ. ಇಷ್ಟೇ ಈ ಪ್ರಕಾಶನದ ಉದ್ದೇಶ ಮತ್ತು ಮಹತ್ವಾಕಾಂಕ್ಷೆ.”
– ಸಂಚಾಲಕರು, ಪ್ರಕೃತಿ ಪ್ರಕಾಶನ.
ಒಳ್ಳೆಯ ಪ್ರಯತ್ನ ಸರ್
Abhinandane!
ಪ್ರಕೃತಿಯೇ ದೇವರು!
best of luck
ಒಳ್ಲೆಯದಾಗಲಿ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ.
A nice initiative. All the best.
ಖುಷಿಯಾಯಿತು. ಒಳಿತಾಗಲಿ. ಎಚ್.ಎಸ್.ಆರ್.
Best wishes Vikram !!!! Prakash KULKARNI, IISc, BLore
Nimma e prayatnakke shubavagali,, olleyadagali.