ಮೀನಿನ ಬುಟ್ಟಿ – ಋತುಮಾನದಿಂದ ಮೊದಲ ಮಕ್ಕಳ ಚಿತ್ರ ಪುಸ್ತಕ

ಮೊಗ್ಗು – ಮಕ್ಕಳ ಋತುಮಾನ

ಮಕ್ಕಳ ಪುಸ್ತಕಗಳಿಗಾಗಿಯೇ ‘ಮೊಗ್ಗು’ ಎಂಬ ಹೊಸ ಪ್ರಕಾಶನ ವಿಭಾಗವನ್ನು ಋತುಮಾನ ಆರಂಭಿಸುತ್ತಿದ್ದೇವೆ. ಈ ಮೂಲಕ ವೈವಿಧ್ಯಮಯ ಮಕ್ಕಳ ಚಿತ್ರ ಪುಸ್ತಕಗಳನ್ನು ಪ್ರಕಟಿಸುವುದು ನಮ್ಮ ಅಭಿಲಾಷೆ.

ಮೊಗ್ಗಿನ ಮೊದಲ ಪುಸ್ತಕವಾಗಿ ಮಕ್ಕಳಿಗೆ ಕನ್ನಡ ನಾಡಿನ ಮೀನುಗಳನ್ನು ಕತೆಯ ಮೂಲಕ ಪರಿಚಯಿಸುವ “ಮೀನಿನ ಬುಟ್ಟಿ” ಚಿತ್ರ ಪುಸ್ತಕವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಋತುಮಾನದ ಸಂಪಾದಕ ಬಳಗದ ಕಿರಣ್ ಮಂಜುನಾಥ್ ಕತೆ ಬರೆದಿದ್ದಾರೆ. ನಿಹಾರಿಕಾ ಶೆಣೈ ಕಣ್ಮನ ಸೆಳೆಯುವ ಚಿತ್ರಗಳನ್ನು ಬಿಡಿಸಿದ್ದಾರೆ. ಸದ್ಯದಲ್ಲೇ ಇದರ ಇಂಗ್ಲಿಷ್ ಆವೃತ್ತಿಯೂ ನಿಮಗೆ ದೊರೆಯಲಿದೆ.

ಇದರೊಂದಿಗೆ moggubooks.com ಎನ್ನುವ ಮಕ್ಕಳ ಪುಸ್ತಕಗಳಿಗಾಗಿಯೇ ಮೀಸಲಾದ ವೆಬ್‌ಸೈಟನ್ನು ಅನಾವರಣಗೊಳಿಸುತಿದ್ದೇವೆ . ಕನ್ನಡ, ಇಂಗ್ಲಿಷ್ ಹಿಂದಿ ಭಾಷೆಗಳಿಂದ ಮೊದಲ್ಗೊಂಡು ಭಾರತದ ಎಲ್ಲಾ ಭಾಷೆಗಳಲ್ಲಿ ಲಭ್ಯವಿರುವ ಮಕ್ಕಳ ಪುಸ್ತಕಗಳನ್ನು ಒಂದೆಡೆ ದೊರಕುವಂತೆ ಮಾಡುವುದು ನಮ್ಮ ಗುರಿ. ಸಮಯದ ಅಭಾವದಿಂದ ಈಗ ಕೆಲವು ಪುಸ್ತಕಗಳು ಅಲ್ಲಿವೆ . ಮುಂದಿನ ಒಂದು ತಿಂಗಳಲ್ಲಿ ಎಲ್ಲಾ ಪ್ರಕಾಶಕರ ತರತರದ ಪುಸ್ತಕಗಳನ್ನು ನೀವಿಲ್ಲಿ ನಿಮ್ಮ ಮಕ್ಕಳಿಗಾಗಿ ಕೊಳ್ಳಬಹುದು.

“ಮೀನಿನ ಬುಟ್ಟಿ ” ಪುಸ್ತಕವನ್ನು ಮೊಗ್ಗು ಬುಕ್ಸ್ (moggubooks.com) ಅಥವಾ ಋತುಮಾನ ಸ್ಟೋರ್ (store.ruthumana.com) ಮಿಂದಾಣ ದಲ್ಲಿ ಕೊಳ್ಳಬಹುದು.

ಕನ್ನಡ ನಾಡಿನ ಚಿಣ್ಣರಿಗೆ ಮಕ್ಕಳ ದಿನದ ಶುಭ ಹಾರೈಕೆಗಳು.

ಪ್ರತಿಕ್ರಿಯಿಸಿ