ಋತುಮಾನದ ಅಂಗಡಿಗೊಮ್ಮೆ ಭೇಟಿ ಕೊಡಿ

ಪುಸ್ತಕ ಓದಲು ಪುರಸೊತ್ತಿಲ್ಲದ ಜಗತ್ತಿನಲ್ಲಿ ರಾಶಿ ರಾಶಿ ಪುಸ್ತಕಗಳು ಬಿಡುಗಡೆಯಾಗುತ್ತವೆ. ಜೊತೆಗೆ ಫೇಸ್ ಬುಕ್ಕಿನಲ್ಲಿ, ವಾಟ್ಸ್ ಅಪ್ ಗ್ರೂಪುಗಳಲ್ಲಿ ಆ ಪುಸ್ತಕ ಓದಿದ್ರಾ? ಈ ಪುಸ್ತಕ ಓದಿದ್ರಾ? ಅನ್ನೋ ಪ್ರಲೋಭನೆಗಳು ಬೇರೆ. ಎಲ್ಲರೂ ಬ್ಯೂಸಿ ಬ್ಯೂಸಿ ಯಾಗಿರುವಾಗ ಯಾವುದನೆಂದು ಓದುವುದು? ಎಲ್ಲಿ ಹುಡುಕಿಕೊಂಡು ಹೋಗುವುದು?

ಈ ಮಹಾನ್ ಸಮಸ್ಯೆಯ ಬಗ್ಗೆ ಯೋಚಿಸಿದಾಗ ನಮಗೆ ಹೊಳೆದದ್ದೇ ಋತುಮಾನ ಸ್ಟೋರ್!
ನಾವು ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲ ಸೇಲಿಗಿಡುವುದಿಲ್ಲ. ನಮ್ಮ ಸ್ಟೋರಿನಲ್ಲಿ ಇಟ್ಟ ಪುಸ್ತಕಗಳನ್ನ ನೀವು ಓದದೇ ಇರೋ ಹಾಗಿಲ್ಲ. ಎಲ್ಲಾ ಕಡೆ ಸಿಗೋ ಬುಕ್ಕುಗಳು ಇಲ್ಲಿ ಸಿಗುವುದಿಲ್ಲ. ಇಲ್ಲಿ ಸಿಗುವ ಪುಸ್ತಕಗಳು ಎಲ್ಲ ಕಡೆ ಸಿಗೋ ಖಾತರಿ ಇಲ್ಲ.

ನಿಮಗೆ ಓದು ಸುಖವೋ, ನರಕ ಯಾತನೆಯೋ ನಮಗೆ ತಿಳಿದಿಲ್ಲ. ಇಲ್ಲಿ ಪುಸ್ತಕ ಖರೀದಿಸಿ ಈ ಸ್ಟೋರ್ ಅನ್ನು ಉಳಿಸಿ ಬೆಳೆಸುವುದನ್ನ ಮಾತ್ರ ನೀವು ಮರೆಯುವ ಹಾಗಿಲ್ಲ.

ಪುಸ್ತಕವೊಂದೇ ಅಲ್ಲ. ಮುಂದೆ ಸ್ನೇಹಿತರ ಅಪರೂಪದ ಪೇಂಟಿಂಗ್ ಗಳು, ಕರ್ನಾಟಕದಲ್ಲೇ ತಯಾರಾಗುವ ಕೈ ಮಗ್ಗದ ಬಟ್ಟೆಗಳು, ರುಚಿಯಾದ ಕರ್ನಾಟಕದ ಸ್ವಾದಿಷ್ಟಪೂರ್ಣ ತಿನಿಸುಗಳು- ಅವೆಲ್ಲ ನಮ್ಮಲ್ಲಿ ಸಿಗುತ್ತದೆ ಹಿತವಾಗಿ, ಮಿತವಾಗಿ.

ಹುಟ್ಟಿದ ಹಬ್ಬಕ್ಕೆ, ಪ್ರೇಮಿಗಳ ದಿನಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ- ಉಡುಗೊರೆ ಕೊಡಲು ಪಡೆದುಕೊಳ್ಳಲು ಎಷ್ಟೊಂದು ನೆವಗಳು. ಅವೆಲ್ಲವನ್ನು ಇನ್ನಷ್ಟು ಚಂದಗಾಣಿಸಲು ಇದೋ ಇಲ್ಲಿದೆ ಋತುಮಾನ ಸ್ಟೋರ್.

store.ruthumana.com

(ಮರೆತ ಮಾತು- ಇದು ಲಾಭದ ಉದ್ದೇಶಕ್ಕಾಗಿ ಮಾಡಿರುವ ಈ-ಕಾಮರ್ಸ್ ಸೈಟ್ ಅಲ್ಲ. ಅದಾಗಿ ಒಂದು ವೇಳೆ ಲಾಭ ಬಂದಲ್ಲಿ ಅದನ್ನು ಋತುಮಾನದ ಕಾರ್ಯಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು. ಈ ಸಂಬಂಧದ ಖರ್ಚು-ವೆಚ್ಚದ ಮಾಹಿತಿ ಋತುಮಾನ ವಾರ್ಷಿಕ ವರದಿಯಲ್ಲಿ ದೊರೆಯುತ್ತದೆ.)

One comment to “ಋತುಮಾನದ ಅಂಗಡಿಗೊಮ್ಮೆ ಭೇಟಿ ಕೊಡಿ”

Leave a Reply to kaavyayaana Cancel reply