ಋತುಮಾನ ಪುಸ್ತಕ – ೧೧
1991ರ ಚಳಿ ತುಂಬಿದ ಒಂದು ರಾತ್ರಿ ಭಾರತೀಯ ಸೈನಿಕರು ಮತ್ತು ಅಧಿಕಾರಿಗಳ ಗುಂಪೊಂದು ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಸಂಶಯದ ಮೇಲೆ ಕಾಶ್ಮೀರದ ಎರಡು ಹಳ್ಳಿಗಳಿಗೆ ನುಗ್ಗಿ, ಮನೆಯಲ್ಲಿದ್ದ ಗಂಡಸರನ್ನು ಹೊರಗೆಳೆದು ಚಿತ್ರಹಿಂಸೆ ನೀಡಿದರು. ಗ್ರಾಮಸ್ಥರು ಹೇಳುವ ಪ್ರಕಾರ ಅನೇಕ ಹೆಂಗಸರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಸಂತ್ರಸ್ತರಿಗೆ ಯಾವುದೇ ನ್ಯಾಯ ಸಿಗುವ ಅವಕಾಶಗಳಿಲ್ಲದಂತೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನಗಳಾದವು. ಇದಾದ 21 ವರುಷಗಳ ನಂತರ 2012ರಲ್ಲಿ ದೇಶದಾದ್ಯಂತ ಕೋಲಾಹಲ ಎಬ್ಬಿಸಿದ ನಿರ್ಭಯಾ ಪ್ರಕರಣದಿಂದ ಕುನನ್ ಪೋಶ್ಪೋರ ದುರ್ಘಟನೆಯು ಮತ್ತೆ ಮುನ್ನೆಲೆಗೆ ಬಂತು. ಕಾಶ್ಮೀರದ ಇಪ್ಪತ್ತರ ಹರೆಯದ ಯುವತಿಯರ ತಂಡವೊಂದು ಕಾಲಗರ್ಭದಲ್ಲಿ ಹುದುಗಿಹೋಗಿದ್ದ ಪ್ರಕರಣವನ್ನು ಪುನಃ ತೆರೆದರು. ಅಂದು ಬದುಕುಳಿದವರು ಏನಾದರು ಎಂದು ನೋಡುವಂತೆ ನಮ್ಮನ್ನು ಪ್ರೇರೇಪಿಸಿದರು. ಈ ಪುಸ್ತಕವು ನ್ಯಾಯದ ಪ್ರಶ್ನೆ, ಕಳಂಕದ ಪ್ರಶ್ನೆಯ ಜೊತೆಗೆ ಪ್ರಭುತ್ವದ ಜವಾಬ್ದಾರಿ ಮತ್ತು ಆಘಾತದಿಂದ ದೀರ್ಘಾವಧಿಯಲ್ಲಿ ಉಂಟಾಗುವ ಪರಿಣಾಮದಂತಹ ಪ್ರಶ್ನೆಗಳನ್ನು ಪರೀಶೀಲಿಸುತ್ತದೆ.
ಅನುವಾದ : ಕಿರಣ್ ಮಂಜುನಾಥ್ – ಸಂಪಾದಕ ಬಳಗ , ಋತುಮಾನ
………………………
ಈ ಪುಸ್ತಕ ತರುವಲ್ಲಿ ಹಲವರು ನಮಗೆ ನಿಸ್ವಾರ್ಥತೆಯಿಂದ ನೆರವಾಗಿದ್ದಾರೆ. ಅವರನ್ನೆಲ್ಲಾ ಋತುಮಾನ ಬಳಗ ಕೃತಜ್ಞತೆಯಿಂದ ನೆನೆಯುತ್ತದೆ. ಈ ಕೃತಿಯ ಹಕ್ಕುಗಳನ್ನು ಉಚಿತವಾಗಿ ನೀಡಿದ ಜುಬಾನ್ ಬಳಗ, ಕನ್ನಡ ಅನುವಾದಕ್ಕೆ ಮುನ್ನುಡಿ ಬರೆದುಕೊಟ್ಟ ಸಹನಾ ಮಂಜೇಶ್, ಬೂನ್ಯಿತಾಲ್ ಪದ್ಯವನ್ನು ಅನುವಾದ ಮಾಡಿಕೊಟ್ಟ ಭೂಮಿಕಾ ರಾಜನ್, ನತಾಶಾ ರಾತರ್ ಅವರು ಬಿಡಿಸಿದ್ದ ಮೂಲ ಚಿತ್ರವನ್ನು ಮುಖಪುಟಕ್ಕಾಗಿ ಪುನರ್ ನಿರ್ಮಿಸಿಕೊಟ್ಟ ಚೇತನಾ ತೀರ್ಥಹಳ್ಳಿ, ಮುಖಪುಟ ವಿನ್ಯಾಸ ಮಾಡಿದ ನನಿತ್ ಬಿ ಎಸ್, ಎಂದಿನಂತೆ ನಮ್ಮ ಪುಸ್ತಕ ವಿನ್ಯಾಸ ಮಾಡಿದ ಮಹಾಂತೇಶ್ ದೊಡ್ಡಮನಿ, ಈ ಕೃತಿ ಹೊರಬರುವಲ್ಲಿ ಉಪಯುಕ್ತ ಸಲಹೆಗಳನ್ನು ನೀಡಿದ ಸಂವರ್ತ ಸಾಹಿಲ್ ಅವರಿಗೆ ಋತುಮಾನ ಆಭಾರಿ.
ಮುಂದಿನ ಸೋಮವಾರದಿಂದ ಎಲ್ಲಾ ಅಂಗಡಿಗಳಲ್ಲೂ ಪುಸ್ತಕ ಲಭ್ಯವಿರುತ್ತದೆ. ಈಗ ಋತುಮಾನ ಸ್ಟೋರ್ ವೆಬ್ಸೈಟ್ ಮತ್ತು ಆ್ಯಪ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಲಿಂಕ್ ಕಾಮೆಂಟಿನಲ್ಲಿದೆ. ಇ-ಬುಕ್ ರೂಪದಲ್ಲಿಯೂ ಋತುಮಾನ ಆ್ಯಪ್ ನಲ್ಲಿ ಸಿಗುತ್ತದೆ.
WhatsApp : 9480035877
ಮುಖಬೆಲೆ : 360/- ಪ್ರೀ ಆರ್ಡರ್ ಬೆಲೆ : 275/-
https://store.ruthumana.com/product/kunan-poshpora-nenapu-nimagideye/