ಕನ್ನಡದ ಪ್ರಮುಖ ಕವಿಗಳ ಉತ್ತಮ ಕವಿತೆಗಳನ್ನು ವಿವಿಧ ಕಲಾವಿದರು ಪ್ರಸ್ತುತಿಪಡಿಸುವ ವಿಡಿಯೋ ಸರಣಿ ಇದು. ಈ ಸರಣಿಯ ಮೊದಲ ಕಂತಿನಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವದ ನೆನಪಿನಿಂದ ಇದನ್ನು ಆರಂಭಿಸುತ್ತಿದ್ದೇವೆ. ಭಾವದ ಕಡೆಗೆ ಕವಿತೆಯಲ್ಲಿ ಕವಿಯ ಮನಸ್ಸು ವಾಲಿದಷ್ಟನ್ನು ನಿಖರವಾಗಿ ಅರ್ಥೈಸಲಾಗದಿದ್ದರೂ, ಸಾಧ್ಯವಾದಷ್ಟು ಅದರ ನಾದಶಕ್ತಿಯನ್ನು ಧ್ವನಿಸುವ ಕೆಲಸವನ್ನು ಈ ಸರಣಿ ಮಾಡಲೆತ್ನಿಸುತ್ತದೆ. ಋತುಮಾನ ಮತ್ತು ಲೋಕಚರಿತ ಸಂಸ್ಥೆಗಳು ಇದನ್ನು ಸಂಯುಕ್ತವಾಗಿ ಪ್ರಸ್ತುತಪಡಿಸಲಿವೆ. ಸರಣಿಯ ಮೊದಲ ಕಂತಿನಲ್ಲಿ ನಾಟಕಕಾರ ಚನ್ನಕೇಶವ ಅವರು ಅಡಿಗರ `ಚಂಡೆಮದ್ದಳೆ’ ಸಂಕಲನದ `ಹಿಮಗಿರಿಯ ಕಂದರ’ ಕವಿತೆಯನ್ನು – ಅದೇ ಸಂಕಲನದ `ಗೊಂದಲಪುರ’, `ಇದನ್ನು ಬಯಸಿರಲಿಲ್ಲ’ ಸಂಕಲನದ `ದೆಹಲಿಯಲ್ಲಿ’, `ಭೂಮಿಗೀತ’ – ಕವಿತೆಗಳ ಆಯ್ದ ಭಾಗಗಳನ್ನು ಒಟ್ಟುಗೂಡಿಸಿ, ಸಂಯೋಜಿಸಿ ಪ್ರಸ್ತುತಪಡಿಸಿದ್ದಾರೆ.
ಚೆನ್ನಕೇಶವನರವರ ಕವಿತಾ ಅದ್ಭುತವಾಗಿದೆ