ರಷ್ಯಾದ ಕ್ರಾಂತಿ – ವಾಸ್ತವವಾಗಿ ನಡೆದದ್ದೇನು? (ಕಾಮಿಕ್ ಶೈಲಿಯಲ್ಲಿ ಚಿತ್ರಕಥನ)

ಕಳೆದ ಅಕ್ಟೋಬರ್‌ನಲ್ಲಿ ರಷ್ಯಾದ ಕ್ರಾಂತಿ ಶತಮಾನೋತ್ಸವ ಕಂಡಿತು. 1917ರ ರಷ್ಯಾದ ಅಕ್ಟೋಬರ್ ಕ್ರಾಂತಿ ಜಗತ್ತಿನ ಎಲ್ಲ ಶ್ರಮಜೀವಿಗಳು ಮತ್ತು ಒಂದು ಮಾನವೀಯ, ಶೋಷಣಾರಹಿತ ಸಮಾಜದ ಕನಸು ಕಾಣುವವರು ಎಂದೂ ಮರೆಯಲಾಗದ ಒಂದು ಐತಿಹಾಸಿಕ ಘಟನೆ. ಇದರ ಪ್ರತ್ಯಕ್ಷದರ್ಶಿ ಅಮೆರಿಕನ್ ಪತ್ರಕರ್ತ ಜಾನ್ ರೀಡ್ ಆ ಕ್ರಾಂತಿಯ ದಿನಗಳನ್ನು ‘ಜಗತ್ತನ್ನು ನಡುಗಿಸಿದ ಹತ್ತು ದಿನಗಳು’ ಎಂದು ವರ್ಣಿಸಿದ್ದರು. ಈ ಕ್ರಾಂತಿ ಸೃಷ್ಟಿಸಿದ್ದ ಒಂದು ಹೊಸ ಮಾದರಿಯ ಪ್ರಭುತ್ವ ನಿಜವಾಗಿಯೂ ಜಗತ್ತನ್ನು ನಡುಗಿಸಿತು.

ನಿಮ್ಮ ಮುಂದಿರುವ ಈ ಸಚಿತ್ರ ಕಥನ ಮೊದಲ ಮಹಾಯುದ್ಧದ ಹಿನ್ನೆಲೆಯಲ್ಲಿ ರಷ್ಯದಲ್ಲಿ ಸಂಭವಿಸಿದ ಬೆಳವಣಿಗೆಗಳು, ಕ್ರಾಂತಿ ನಡೆದ ದಿನಗಳು ಮತ್ತು ನಂತರ ಸುಮಾರು ಐದು ವರ್ಷಗಳ ಕಾಲ ಆ ಕ್ರಾಂತಿಯನ್ನು ಅದೇ ಮಹಾಯುದ್ಧಕ್ಕೆ ಕಾರಣರಾದವರ ಸತತ ದಾಳಿಗಳಿಂದ ಬ್ರಿಟಿಷ್ ಟ್ಯಾಂಕುಗಳಿಂದ, ಫ್ರೆಂಚ್ ಸಮರ ನೌಕೆಗಳಿಂದ, ಅಮೆರಿಕನ್, ಜಪಾನೀ ಹಸ್ತಕ್ಷೇಪಕೋರರಿಂದ ರಕ್ಷಿಸಿಕೊಂಡ ಬಗೆಯ ಒಂದು ಚಿತ್ರಣವನ್ನು ಕಾಮಿಕ್ ಶೈಲಿಯಲ್ಲಿ ಚಿತ್ರಕಥನಗಳೊಂದಿಗೆ ಕೊಡುತ್ತದೆ.

ಈ ಚಿತ್ರ ಕಥನವನ್ನು ‘ಕ್ರಿಯಾ ಪುಸ್ತಕ’ ಪ್ರಕಟಿಸಿರುವ “ರಷ್ಯಾದ ಕ್ರಾಂತಿ – ವಾಸ್ತವವಾಗಿ ನಡೆದದ್ದೇನು?” ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ . ಕೃತಿಯಲ್ಲಿರುವ ಚಿತ್ರ ಕಥನ ಮೂರು – “ರಾಜಪ್ರಭುತ್ವವನ್ನು ಕಿತ್ತೆಸೆದರು”, “ಸಮಾಜವಾದಿ ಕ್ರಾಂತಿಯತ್ತ” ಮತ್ತು “ಕ್ರಾಂತಿಯ ರಕ್ಷಣೆಯಲ್ಲಿ” – ಎಂಬ ಭಾಗಗಳಲ್ಲಿ ಇದೆ. ಇಲ್ಲಿ ಎರಡನೆಯ ಭಾಗ ಅಂದರೆ “ಸಮಾಜವಾದಿ ಕ್ರಾಂತಿಯತ್ತ” ಭಾಗದ ಪೂರ್ಣ ಚಿತ್ರಣ ಇದೆ. ಮೊದಲ “ರಾಜಪ್ರಭುತ್ವವನ್ನು ಕಿತ್ತೆಸೆದರು” ಭಾಗದಲಿ ಏನಿದೆ ಎಂಬುದು ಎರಡನೆಯ ಭಾಗ ಗ್ರಹಿಸಲು ಅಗತ್ಯ.

ಮೊದಲ ಮಹಾಯುದ್ಧ, ಮಹಾಯುದ್ಧದ ಅವಧಿಯಲ್ಲಿ ಮತ್ತು ಮೊದಲು ಆಂತರಿಕವಾಗಿ ರಷ್ಯಾದಲ್ಲಿ ನಡೆದ ರಾಜಕೀಯ ತುಮುಲ, ಲೆನಿನ್ ನಾಯಕತ್ವದ ಬೊಲ್ಶೆವಿಕ್ ಪಕ್ಷ ಒಂದು ಕ್ರಾಂತಿಕಾರಿ ಶಕ್ತಿಯಾಗಿ ಸಂಘಟಿತವಾದದ್ದು, ಮೊದಲ ಮಹಾಯುದ್ಧದ ಪರಿಣಾಮವಾಗಿ ಆಹಾರ ಕೊರತೆಯಿಂದ ಕಂಗಾಲಾಗಿದ್ದ ಜನರು ಸಾಮ್ರಾಟನ ಯುದ್ಧಕೋರ ನಿರಂಕುಶ ಪ್ರಭುತ್ವದ ವಿರುದ್ಧ ಬಂಡೆದ್ದು ರಾಜಪ್ರಭುತ್ವವನ್ನು ಕಿತ್ತೆಸೆದ ಫೆಬ್ರುವರಿ 1917ರ ಪ್ರಜಾಪ್ರಭುತ್ವ ಕ್ರಾಂತಿ; ಅದರ ನಂತರ ಬಂದ ಹಂಗಾಮಿ ಬೂರ್ಜ್ವಾ ಸರ್ಕಾರ ಶಾಂತಿ, ಬ್ರೆಡ್ ಬಗ್ಗೆ ಜನರ ಒತ್ತಾಯಗಳನ್ನು ಲೆಕ್ಕಿಸದೆ ರಾಜಪ್ರಭುತ್ವದ ನೀತಿ-ಶೈಲಿಗಳನ್ನೇ ಮುಂದುವರೆಸಿದ್ದು; ಎರಡನೇ ಪ್ರಭುತ್ವವಾಗಿ ಬೊಲ್ಶೆವಿಕ್ ಪಕ್ಷದ ನಾಯಕತ್ವದಲ್ಲಿ ಕಾರ್ಮಿಕರ ರೈತರ ಸೈನಿಕರ ಸೋವಿಯೆಟುಗಳ ಒಕ್ಕೂಟದ ಉದಯ, ಎರಡು ಪ್ರಭುತ್ವಗಳ ನಡುವೆ ಸಂಘರ್ಷ, ಬೂರ್ಜ್ವಾ ಪ್ರಭುತ್ವದ ವಿರುದ್ಧ ಎರಡನೇ ಕ್ರಾಂತಿಗೆ ಬೊಲ್ಶೆವಿಕರು ಅಣಿ ನೆರೆಸುತ್ತಾ ಬಂದ ಅಗಸ್ಟ್ ೧೯೧೭ರವರೆಗಿನ ಚಿತ್ರಣ – ಇವು ಮೊದಲ “ರಾಜಪ್ರಭುತ್ವವನ್ನು ಕಿತ್ತೆಸೆದರು” ಭಾಗದಲ್ಲಿದೆ.

“ಸಮಾಜವಾದಿ ಕ್ರಾಂತಿಯತ್ತ” ಭಾಗ : ನೋಡಿ – ಓದಿ.

ಉಳಿದ ಭಾಗಗಳನ್ನು ಓದಲು ಈ ಪುಸ್ತಕವನ್ನು ಋತುಮಾನ ಸ್ಟೋರ್ ನ ಈ ಕೆಳಗಿನ ಕೊಂಡಿಯಲ್ಲಿ ಕೊಳ್ಳಬಹುದು.
http://store.ruthumana.com/product/russiada-kranti-vasthavavagi-nadaddenu/

ಪ್ರತಿಕ್ರಿಯಿಸಿ