ಪ್ರಕೃತಿ ಪ್ರಕಾಶನದ ಹೊಸ ಪುಸ್ತಕ : ‘ನೆನಪೇ ಸಂಗೀತ’

‘ರಾಮು ಕವಿತೆಗಳು’ ಹಾಗು ‘ನಕ್ಷತ್ರ ಕವಿತೆಗಳು’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿ ಕಾವ್ಯಾಸಕ್ತರ ಅಪಾರ ಮೆಚ್ಚುಗೆ ಗಳಿಸಿದ ಬಳಿಕ, ಪ್ರಕೃತಿ ಪ್ರಕಾಶನವು ಇದೀಗ ಮೂರನೆಯ ಪುಸ್ತಕವನ್ನು ಹೊರ ತರಲು ಸಜ್ಜಾಗಿದೆ.
ವಿದ್ಯಾಭೂಷಣರ ಜೀವನ ಕಥನ ‘ನೆನಪೇ ಸಂಗೀತ’, ಜನವರಿ ೧೯ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನ
ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ. ಅಂದು ಜಯಂತ್ ಕಾಯ್ಕಿಣಿ,
ಅಬ್ದುಲ್ ರಶೀದ್, ಲಕ್ಷ್ಮೀಶ ತೋಳ್ಪಾಡಿ, ಹಾಗು ವಿದ್ಯಾಭೂಷಣರು ಉಪಸ್ಥಿತರಿರುತ್ತಾರೆ.
ಎಲ್ಲರಿಗೂ ಆದರದ ಸ್ವಾಗತ.

ಋತುಮಾನ ಅನ್ಲೈನ್ ಮಳಿಗೆಯ ಈ ಕೆಳಗಿನ ಕೊಂಡಿಯಲ್ಲಿ ನೀವು ಪ್ರಿ ಆರ್ಡರ್ ಮಾಡಬಹುದು. ರೂ. 180 ಮುಖಬೆಲೆಯ ಪುಸ್ತಕ ಪ್ರೀ ಆರ್ಡರ್ ಅವಧಿಯಲ್ಲಿ ರೂ. 150 ಗಳಿಗೆ ಲಭ್ಯವಿದೆ. ಪುಸ್ತಕ ಅನಾವರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದವರು ಇಲ್ಲಿ ಖರೀದಿಸಲು ಮನವಿ.

– ಪ್ರಕೃತಿ ಪ್ರಕಾಶನ

ಪ್ರತಿಕ್ರಿಯಿಸಿ