ಹೈದರಾಬಾದಿನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಮ್ಮೆಲ್ಲರನ್ನು ತಲ್ಲಣಗೊಳಿಸಿತು . ಅತ್ಯಾಚಾರದ ಆರೋಪ ಹೊತ್ತ ನಾಲ್ವರು ಪೊಲೀಸ್ ಎನ್ಕೌಂಟರ್ ನಲ್ಲಿ ಹತರಾದರು . ಮೀಡಿಯಾಗಳು ಮತ್ತು ಹೆಚ್ಚಿನ ಜನತೆ ಎನ್‌ಕೌಂಟರ್ ಅನ್ನು ಸಂಭ್ರಮಿಸಿದರು. ನಮ್ಮ ವ್ಯವಸ್ಥೆಯ ನ್ಯಾಯದಾನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬವು ಈ ತೆರನಾದ ತಕ್ಷಣದ ನ್ಯಾಯವೆಂದು ಕಾಣಿಸುವ ಕ್ರಮಕ್ಕೆ ಸಿಕ್ಕಿರುವ ಜನಬೆಂಬಲದ ಹಿನ್ನಲೆ ಎಂದು ಭಾವಿಸಿದರೂ ಇಂತಹ ನಡೆಗಳಿಂದಾಗುವ ದೀರ್ಘಕಾಲಿಕ ಪರಿಣಾಮಗಳೇನು ಮತ್ತು ಅತ್ಯಾಚಾರದ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಮತ್ತು ಪರೀಕ್ಷೆ ಶೀಘ್ರವಾಗಿ ಮುಗಿಸಲು ಸಾಧ್ಯವೇ ? ನಮ್ಮ ವ್ಯವಸ್ಥೆಯಲ್ಲಿನ ತೊಡಕುಗಳೇನು ? ನಮ್ಮ ಮುಂದಿರುವ ದಾರಿಗಳೇನು ? ಎಂಬುದರ ಕುರಿತಾಗಿ ಅಶೋಕ್ ಗುಬ್ಬಿ ಅವರೊಡನೆ ಮುಕುಂದ್ ಸೆಟ್ಲೂರ್ ಋತುಮಾನಕ್ಕಾಗಿ ನಡೆಸಿರುವ ಸಂದರ್ಶನದ ಮೊದಲ ಭಾಗ ಇಲ್ಲಿದೆ . ಅಶೋಕ್ ಗುಬ್ಬಿ ವೃತ್ತಿಯಲ್ಲಿ ವಕೀಲರು. ಲೈಂಗಿಕ ಶೋಷಣೆಗೆ ಒಳಗಾದ ಜನರಿಗೆ ನೆರವಾಗುವ ಎನ್. ಜಿ. ಒ ಗೆ ಸಲಹೆಗಾರರು ಮತ್ತು ಪೊಲೀಸ್ ಹಾಗೂ ಇತರೆ ಅಧಿಕಾರಿ ವರ್ಗಕ್ಕೆಅತ್ಯಾಚಾರ ಪ್ರಕರಣಗಳಲ್ಲಿ Standard Operating Procedures ಫಾಲೋ ಮಾಡುವಲ್ಲಿ ಹೆಚ್ಚಿನ ತಿಳುವಳಿಕೆಗಾಗಿ ಸಂವಾದ ಮತ್ತು ಕಾರ್ಯಾಗಾರಗಳನ್ನು ನಡೆಸುತಿದ್ದಾರೆ .