ಹೆಮಿಂಗ್ವೆ ಕತೆ : ಒಂದು ತಿಳಿ ಬೆಳಕಿನ ಕೆಫೆ

ಆಗಲೇ ಬಹಳ ತಡರಾತ್ರಿಯಾಗಿದ್ದರಿಂದ  ಆ ಕೆಫೆಯಲ್ಲಿ,   ಬೀದಿ ದೀಪದ ಬೆಳಕಿನಿಂದ ಮೂಡಿದ್ದ ಮರದ ಎಲೆಗಳ ನೆರಳಿನಲ್ಲಿ ಕುಳಿತಿದ್ದ ವಯಸ್ಸಾದ ವ್ಯಕ್ತಿಯನ್ನು ಹೊರತುಪಡಿಸಿ ಇನ್ನ್ಯಾರೂ ಇರಲಿಲ್ಲ. ಬೆಳಗ್ಗಿನ ಹೊತ್ತು ಆ ರಸ್ತೆ ಸಾಕಷ್ಟು ಧೂಳಿನಿಂದ ತುಂಬಿರುತ್ತಿತ್ತು , ಆದರೆ ರಾತ್ರಿ ಹೊತ್ತು ಇಬ್ಬನಿ ಸುರಿದು ಧೂಳು ನೆಲ ಸೇರುತ್ತಿದ್ದ ಕಾರಣ ಆ ಮುದುಕ ತಡರಾತ್ರಿ ಅಲ್ಲಿ ಕೂತು ಊಟ ಮಾಡಲು ಇಷ್ಟಪಡುತ್ತಿದ್ದ ಮತ್ತು ಆ ಮುದುಕ ಕಿವುಡ , ರಾತ್ರಿ ಸಂಪೂರ್ಣ ನಿಶಬ್ಧತೆಯಲ್ಲಿ ಅವನಿಗೆ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತಿತ್ತು . ಆ ಕೆಫೆ ಯಲ್ಲಿದ್ದ ಇಬ್ಬರೂ ವೈಟರ್ ಗಳಿಗೆ ಮುದುಕ ಚನ್ನಾಗಿ ಕುಡಿದಿದ್ದಾನೆ ಅನ್ನುವುದು ತಿಳಿದಿತ್ತು , ಹಾಗೆಯೇ ಅವನು ಒಳ್ಳೆಯ ಗ್ರಾಹಕನೇ ಆದರೂ ಹೆಚ್ಚು ಕುಡಿದಾಗ ಹಣ ಪಾವತಿ ಮಾಡುವುದು ಮರೆತು ಹೊರಟುಹೋಗುತ್ತಾನೆ ಎನ್ನುವ ಕಾರಣಕ್ಕೆ ಅವನ ಮೇಲೆ ಕಣ್ಣಿಟ್ಟಿದ್ದರು.

ಕಳೆದ ವಾರ ಆತ ಆತ್ಮಹತ್ಯೆಗೆ ಪಯತ್ನಿಸಿದ ” ಎಂದ ಒಬ್ಬ ವೈಟರ್.

ಯಾಕೆ?”

ಜೀವನದ ಬಗ್ಗೆ ಜಿಗುಪ್ಸೆ”

ಯಾವ ಕಾರಣಕ್ಕೆ?”

“ಕಾರಣ ಏನಿಲ್ಲ “

ನಿನಗೆ ಹೇಗೆ ಗೊತ್ತು ಏನೂ ಕಾರಣ ಇಲ್ಲ ಅಂತ?”

ಅವನ ಬಳಿ ಸಾಕಷ್ಟು ಹಣ ಇದೆ “

ತೆರೆದ ಮಹಡಿಯ ಕೆಫೆಯಲ್ಲಿ ಉಳಿದೆಲ್ಲ ಮೇಜುಗಳು ಖಾಲಿಯಾಗಿದ್ದರೂ ಮುದುಕ ಮಾತ್ರ  ತಣ್ಣನೆಯ ಗಾಳಿಗೆ ತುಸುವೇ ಅಲ್ಲಾಡುತ್ತಿದ್ದ ಮರದ ಎಲೆಗಳ ನೆರಳಿನಲ್ಲಿ ಕೂತು ಆಲ್ಕೋಹಾಲ್ ಸೇವಿಸುತ್ತಿದ್ದನ್ನು, ಅವರಿಬ್ಬರೂ ಬಾಗಿಲ ಬಳಿ ಗೋಡೆಗೆ ಸೇರಿದ ಹಾಗಿದ್ದ ಮೇಜಿನ ಬಳಿ ಸ್ಟೂಲ್ ಮೇಲೆ ಕೂತು ನೋಡುತ್ತಿದ್ದರು.  ಒಂದು ಹುಡುಗಿ ಸೈನಿಕನೊಬ್ಬನ ಜತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದಳು . ಆ ಬೀದಿದೀಪದ ಬೆಳಕು ಅವನ  ಲೋಹದಿಂದ ಮಾಡಿದ ನಾಮಫಲಕದ ಮೇಲೆ ಬಿದ್ದು ಹೊಳೆಯುತ್ತಿತ್ತು . ಅವನ ಪಕ್ಕ ಓಡುವ ಹಾಗೆ ನಡೆಯುತಿದ್ದ ಹುಡುಗಿ ತನ್ನ ಮುಖವನ್ನು ವೇಲ್ ನಿಂದ  ಮುಚ್ಚಿರಲಿಲ್ಲ.

ರಾತ್ರಿಪಾಳಿಯ ಕಾವಲುಗಾರರು ಅವರಿಬ್ಬರನ್ನು ಸೆರೆ ಹಿಡಿಯುತ್ತಾರೆ ” ಎಂದ ಒಬ್ಬ ವೈಟರ್

ಅವನಿಗೆ ಇಷ್ಟವಾಗಿದ್ದು ಪಡೆಯಲು ಪ್ರಯತ್ನಪಟ್ಟರೆ ಅವರಿಗೇನು ?”

ಅವರಿಬ್ಬರೂ ಸಾಧ್ಯವಾದಷ್ಟು ಬೇಗ ಮನೆ ತಲುಪಿದರೆ ಒಳ್ಳೆಯದು , ಇಲ್ಲ ಅಂದ್ರೆ ಆ ಕಾವಲುಗಾರ ಕೈಗೆ ಸಿಕ್ಕಿ ಬೀಳುತ್ತಾರೆ. . ಕಾವಲುಗಾರರು ಐದು ನಿಮಿಷಗಳ ಹಿಂದಷ್ಟೇ ಹೋದರು “

ಮರದ ನೆರಳಿನಲ್ಲಿ ಕುಳಿತಿದ್ದ ಮುದುಕ ತನ್ನ ಮುಂದಿದ್ದ ಸಾಸರ್ ಅನ್ನು ತನ್ನ ಕೈಲಿದ್ದ ಗ್ಲಾಸ್ ನಿಂದ ತಟ್ಟಿ ಸದ್ದು ಮಾಡಿದ . ಆ ಚಿಕ್ಕವಯಸ್ಸಿನ ವೈಟರ್ ಅವನ ಬಳಿ ಹೋದ . 

ಏನು ಬೇಕು ?”

ಆ ಮುದುಕ ಅವನ ಕಡೆ ಕತ್ತೆತ್ತಿ ನೋಡಿ “ಇನ್ನೊಂದು ಬ್ರಾಂದಿ ” ಎಂದ 

ನಿನಗೆ ಈಗಲೇ ಕುಡಿದು ಮತ್ತೇರಿದೆ ” ಎಂದ ವೈಟರ್. ಆ ಮುದುಕ ಅವನತ್ತ ಸುಮ್ಮನೆ ನೋಡಿದ . ಆ ವೈಟರ್ ಸದ್ದಿಲ್ಲದೇ ವಾಪಸ್ ತೆರಳಿದ 

ಇವನು ಇಡೀ ರಾತ್ರಿ ಇಲ್ಲೇ ಕಳೆಯುವ ಹಾಗೆ ಕಾಣಿಸ್ತಿದೆ “ಎಂದು ತನ್ನ ಸಹೋದ್ಯೋಗಿಗೆ ಹೇಳಿದ . ” ನನಗೆ ನಿದ್ರೆ ಬರುತ್ತಿದೆ . ರಾತ್ರಿ ಮೂರು ಘಂಟೆಗೆ ಮೊದಲು ಯಾವತ್ತು ಮಲಗಲಾಗುತ್ತಿಲ್ಲ. ಕಳೆದ ವಾರ ಇವನು ಸತ್ತಿದ್ರೆ ಒಳ್ಳೆಯದಾಗುತ್ತಿತ್ತು . ” 

ಆ ವೈಟರ್ ಬಾರ್  ಕೌಂಟರಿನಿಂದ ಮತ್ತೊಂದು ಬ್ರಾಂದಿ ಬಾಟಲಿ  ಹಾಗೂ ಸಾಸರ್ ತೆಗೆದುಕೊಂಡು ಆ ಮುದುಕ ಕೂತ ಮೇಜಿನ ಬಳಿ ಹೋದ . ಆ ಸಾಸೆರ್  ಮೇಜಿನ ಮೇಲಿಟ್ಟು , ಗ್ಲಾಸ್ ತುಂಬ ಬ್ರಾಂದಿ ಸುರಿದ . 

ನೀನು ಕಳೆದ ವಾರ ಸತ್ತಿದ್ರೆ ಚನ್ನಾಗಿತ್ತು ” ಎಂದ ಆ ಕಿವುಡು ಮುದುಕನಿಗೆ. ಆ ಮುದುಕ ತನ್ನ ಕೈ ಸನ್ನೆಯಿಂದ “ಇನ್ನೊಂದು ಚೂರು ” ಎಂದ . ಆ ವೈಟರ್ ಇನ್ನೊಂದಷ್ಟು ಬ್ರಾಂದಿಯನ್ನು ಗ್ಲಾಸ್ ತುಂಬಿ ಸುರಿಯುವ ಹಾಗೆ ಸುರಿದ , ಗ್ಲಾಸ್ಸಿನಿಂದ ಹೊರಬಂದ ಬ್ರಾಂಡಿ ಹರಿದು ಅಲ್ಲಿ ಒಂದರ ಮೇಲೊಂದು ಜೋಡಿಸಿದ್ದ ಸಾಸರ್ ಬುಡ ಸೇರಿತು . “ಥ್ಯಾಂಕ್ಸ್ ” ಎಂದ ಮುದುಕ . ಆ ವೈಟರ್ ಬಾಟಲಿ ತೆಗೆದುಕೊಂಡು ಕೆಫೆ ಒಳಗೆ ಹೋಗಿ ತನ್ನ ಸಹೋದ್ಯೋಗಿಯೊಂದಿಗೆ ಮತ್ತೆ ಸ್ಟೂಲ್ ಮೇಲೆ ಕುಳಿತ.

ಸರಿಯಾಗಿ ಕುಡಿದಿದ್ದಾನೆ “ಎಂದ 

ಅವನು ಪ್ರತೀ ದಿನ ಕುಡಿದು ಚಿತ್ತಾಗ್ತಾನೆ. ಅವನ್ಯಾಕೆ ಸಾಯಲು ಪ್ರಯತ್ನಿಸಿದ್ದು ?”

ನಂಗೆ ಹೇಗೆ ಗೊತ್ತಿರುತ್ತೆ “

ಹೇಗೆ ಸಾಯಲು ಪ್ರಯತ್ನ ಪಟ್ಟ ?”

ನೇಣು ಹಾಕಿಕೊಳ್ಳಲು ಯತ್ನಿಸಿದ “

ಯಾರು ಹಗ್ಗ ಕತ್ತರಿಸಿ ಕೆಳಗಿಳಿಸಿದ್ದು ?”

ಅವನ ಸೋದರ ಸೊಸೆ “

ಯಾಕೆ ಕಾಪಾಡಿದರು ?”

ಅವನ ಆತ್ಮದ ಬಗ್ಗೆ ಹೆದರಿದರು ಅನ್ಸುತ್ತೆ “

ಎಷ್ಟು ಹಣ ಇದೆ ಅವನ ಬಳಿ ?”

ಸಾಕಷ್ಟಿದೆ “

ಬಹುಶ ೮೦ ವಯಸ್ಸಿನವನಿರಬಹುದು “

ನೋಡಕ್ಕಂತೂ ೮೦ರ ವಯಸ್ಸಿನವನ  ಹಾಗೆ ಕಾಣಿಸುತ್ತಾನೆ ” 

ಅವನು ಮನೆಗೆ ಹೋದರೆ ಸಾಕಾಗಿದೆ . ಯಾವತ್ತೂ ನಾನು ಮೂರು ಘಂಟೆಗೆ ಮೊದಲು ಮಲಗಲಾಗುತ್ತಿಲ್ಲ. ಅದೂ ಒಂದು ಮಲಗುವ ಸಮಯವಾ 

ಅವನಿಗೆ ಎಚ್ಚರವಾಗಿರುವುದು ಇಷ್ಟ ಅನ್ಸುತ್ತೆ , ಅದಕ್ಕೆ ಎದ್ದಿರ್ತಾನೆ “

ಅವನು ಒಬ್ಬಂಟಿ . ನಾನು ಒಬ್ಬಂಟಿ ಅಲ್ವಲ್ಲ . ನನ್ನ ಹೆಂಡತಿ ಹಾಸಿಗೆಯಲ್ಲಿ ಕಾಯ್ತಿರ್ತಾಳೆ “

ಅವನಿಗೂ ಒಂದು ಕಾಲದಲ್ಲಿ ಹೆಂಡತಿಯಿದ್ದಳು “

ಅವನಿಗೆ ಹೆಂಡತಿಯಾದವಳ ಪಾಡು ಯಾರಿಗೂ ಬೇಡ “

ಹಾಗೆ ಹೇಳಬೇಡ . ಅವನ ಹೆಂಡತಿ ಜತೆಯಿದ್ದಾಗ ಚೆನ್ನಾಗೆ ಇದ್ದನೇನೋ. ಅವನ ಸೋದರ ಸೊಸೆ ನೋಡ್ಕೋತಾ ಇದಾಳೆ . ಅವಳೇ ಹಗ್ಗ ಕತ್ತರಿಸಿದ್ದು ಅಂದೇ ಅಲ್ಲ್ವಾ  “

ಹ್ಞೂ , ಅಷ್ಟು ವಯಸ್ಸಾಗುವ ವರೆಗೆ ನನಗೆ ಬದುಕಲು ಇಷ್ಟ ಇಲ್ಲ . ವಯಸ್ಸಾದ ಮುದುಕ ಯಾವತ್ತೂ ಕಿರಿಕಿರಿಯೇ “

ಎಲ್ಲರೂ ಹಾಗೆಯೇ ಇರಲ್ಲ . ಈ ಮುದುಕ ಶಿಸ್ತಾಗಿದ್ದಾನೆ . ಒಂದು ಚೂರು ಚೆಲ್ಲದ ಹಾಗೆ ಕುಡಿಯುತ್ತಾನೆ . ಇಷ್ಟು ಕುಡಿದಿದ್ದರೂ ನೋಡು , ಹೇಗೆ ಶಿಸ್ತಾಗಿದ್ದಾನೆ ” 

ನಾನು ನೋಡೋದಿಲ್ಲ ಅವನನ್ನ . ಮನೆಗೆ ಹೋದರೆ ಸಾಕಾಗಿದೆ ಅವನು . ಅವನಿಗೆ ನಾವು ಕೆಲಸ ಮಾಡುವವರ ಬಗ್ಗೆ ಸ್ವಲ್ಪವೂ ಚಿಂತೆಯಿಲ್ಲ “

ಆ ಮುದುಕ ತನ್ನ ಕನ್ನಡಕದ ಮೂಲಕ ದೂರದಲ್ಲಿದ್ದ ರಸ್ತೆಯ ವೃತ್ತವನ್ನು ನೋಡಿದ , ನಂತರ ವೈಟರ್ ಗಳ ಕಡೆಗೆ ತಿರುಗಿ ಇನ್ನೊಂದು ಬ್ರ್ಯಾಂಡಿ” ಎಂದ , ತನ್ನ ಗ್ಲಾಸ್ ತೋರಿಸುತ್ತಾ . 

ಅವಸರದಲ್ಲಿದ್ದ ವೈಟರ್ ಅವನ ಬಳಿ ಹೋಗಿಖಾಲಿ ” ಎಂದ , ಸಾಧಾರಣವಾಗಿ ಕುಡುಕರ ಬಳಿ ಅಥವಾ ಯಾವುದೋ ಭಾಷೆ ಬಾರದ ವಿದೇಶಿಗರ ಬಳಿ ಮಾತನಾಡುವಾಗ , ಮುಟ್ಟಾಳರು ಬಳಸುವ ಅಂಗಿಕ ಭಾಷೆ ಬಳಸಿ ಹೇಳುತ್ತಿದ್ದ ” ಇವತ್ತಿಗೆ ಮುಗೀತು . ಖಾಲಿ “

ಇನ್ನೊಂದು ” ಎಂದ ಮುದುಕ 

ಇಲ್ಲ , ಖಾಲಿ ” ಆ ವೈಟರ್ ಮೇಜನ್ನು ತನ್ನ ಬಳಿ ಇದ್ದ ಕರವಸ್ತ್ರ ದಿಂದ  ಸ್ವಚ್ಛ ಮಾಡಿ , ಮುದುಕನ ಕಡೆ ನೋಡಿ ತಲೆ ಅಲ್ಲಾಡಿಸಿದ.

ಆ  ಮುದುಕ ಎದ್ದು ನಿಂತು , ನಿಧಾನವಾಗಿ ಮೇಜಿನ ಮೇಲಿದ್ದ ಸಾಸರ್ ಗಳನ್ನು ಎಣಿಸಿ, ತನ್ನ ಚರ್ಮದ ಪರ್ಸ್ ಅನ್ನು ಜೇಬಿನಿಂದ  ಹೊರತೆಗೆದು ಅವನ ಡ್ರಿಂಕ್ಸ್ ಗೆ ಮತ್ತು ಟಿಪ್ಸ್ ಗೆ ಒಂದಷ್ಟು ಹಣ ಮೇಜಿನ ಮೇಲೆ ಇಟ್ಟ .  ವೈಟರ್ ಅವನು ರಸ್ತೆಯಲ್ಲಿ ನಡೆದು ಹೋಗುತ್ತಿರುವುದನ್ನು ನೋಡುತ್ತಾ ನಿಂತ : ಮುದುಕ ಕುಡಿದು ಓಲಾಡುತ್ತಾ ಆದರೆ ಗೌರವಯುತವಾಗಿ ನಡೆಯುತ್ತಿದ್ದ

ನೀನ್ಯಾಕೆ ಅವನ ಪಾಡಿಗೆ ನೆಮ್ಮದಿಯಾಗಿ ಕುಳಿತು ಕುಡಿಯುವುದಕ್ಕೆ ಬಿಡಲಿಲ್ಲ?” ಎಂದ ಸಮಾಧಾನದಿಂದ್ದ ವೈಟರ್. ಅವರಿಬ್ಬರೂ ಕೆಫೆಯ ಶಟರ್ ಹಾಕುತ್ತಿದ್ದರು . 

ನಾನು ಮನೆಗೆ ಹೋಗಬೇಕು “

ಒಂದು ಘಂಟೆ ತಡವಾದ್ರೆ ಏನಾಗುತ್ತೆ ?”

ಅವನಿಗೇನಿಲ್ಲ, ನಂಗೆ ಆ ಒಂದು ಘಂಟೆ ಮುಖ್ಯ ” 

ಒಂದು ಘಂಟೆ ತಡವಾದ್ರೆ ಏನ್ ಆಗಲ್ಲ “

ನೀನು ಒಳ್ಳೆ ಮುದುಕನ ಹಾಗೆ ಮಾತಾಡ್ತೀಯಾ. ಅವನು ಒಂದು ಬಾಟಲಿ ತಗೊಂಡು ಮನೇಲೆ ಕುಡೀಬಹುದು “

ಎರಡೂ ಒಂದೇ ಅಲ್ಲ “

ಹೌದು , ಎರಡೂ ಒಂದೇ ಅಲ್ಲ ” ಎಂದು ಒಪ್ಪಿದ ಹೆಂಡತಿಯಿರುವ ವೈಟರ್ . ಅವನು ಅವಸರದಲ್ಲಿದ್ದ ಅಷ್ಟೇ ಹೊರತು ಅನ್ಯಾಯದ ಮಾತಾಡುವ ಮನುಷ್ಯನಲ್ಲ . 

ನಿನ್ನ ಕಥೆ ಏನು? ನಿನಗೆ ನಿನ್ನ ಕೆಲಸದ ಸಮಯಕ್ಕೂ ಮೊದಲು ಮನೆ ಸೇರ ಬೇಕು ಎನ್ನುವ ಭಯ ಅಲ್ಲವ ?”

ನನಗೆ ಅವಮಾನ ಮಾಡಬೇಕು ಅಂತ ಕೇಳ್ತಾ ಇದ್ದೀಯ?”

ಇಲ್ಲ ಕಣಪ್ಪ ದೊಡ್ಡ ಮನುಷ್ಯ, ಸುಮ್ನೆ ಕಾಲ ಎಳೀತಿದೀನಿ ಅಷ್ಟೇ “

ಇಲ್ಲ ” ಎಂದ ಅವಸರದಲ್ಲಿದ್ದ ವೈಟರ್.  ಶಟರ್ ಪೂರ್ಣ ಕೆಳಗೆಳೆದು ಎದ್ದು ನಿಲ್ಲುತ್ತಾ “ನನಗೆ ಆತ್ಮ ವಿಶ್ವಾಸ ವಿದೆ .  ನನ್ನ ಇನ್ನೊಂದು ಹೆಸರು ಆತ್ಮವಿಶ್ವಾಸ”

ನಿನ್ನ ಬಳಿ ವಯಸ್ಸಿದೆ , ಆತ್ಮ ವಿಶ್ವಾಸ ಇದೆ , ಮತ್ತು ಕೆಲಸವಿದೆ ” ಎಂದ ವಯಸ್ಸಾದ ವೈಟರ್ “ನಿನ್ನ ಬಳಿ ಈಗ ಎಲ್ಲಾ ಇದೆ “

ನಿನಗೇನೂ ಕಡಿಮೆ ?”

ಕೆಲಸ ಬಿಟ್ಟು ಇನ್ನೆಲ್ಲ “

ನನ್ನ ಬಳಿ ಇರುವ ಎಲ್ಲ ನಿನ್ನ ಬಳಿಯೂ ಇದೆ “

ಇಲ್ಲ . ನನಗೆ ಆತ್ಮ ವಿಶ್ವಾಸ ಎಂದೂ ಇರಲಿಲ್ಲ ಮತ್ತು ನಾನು ಯುವುಕನೆೇನಲ್ಲ “

ಸಾಕು ಸುಮ್ನಿರು, ಏನೇನೋ ಮಾತಾಡುವುದರ ಬದಲು ಬಾಗಿಲ ಬೀಗ ಹಾಕು “

ನಾನು ಕೆಫೆ ಯಲ್ಲಿ ಸಾಧ್ಯವಾದಷ್ಟು ತಡವಾಗಿ ಇರಲು ಬಯಸ್ಸುವವರಲ್ಲೊಬ್ಬ. ರಾತ್ರಿ ನಿದ್ರೆ ಮಾಡಲು ಇಷ್ಟವಿಲ್ಲದವರಲ್ಲೊಬ್ಬ . ರಾತ್ರಿಯಿಡೀ ಬೆಳಕು ಬೇಕಾಗಿರುವವರಲ್ಲೊಬ್ಬ “

ನಾನು ಸಾಧ್ಯವಾದಷ್ಟು  ಬೇಗ ಹೋಗಿ ಮಲಗಬೇಕು “

ನಾವಿಬ್ಬರೂ ವಿಭಿನ್ನ ವ್ಯಕ್ತಿತ್ವದವರು ” ಎಂದ ವಯಸ್ಸಾದ ವೈಟರ್. ಮನೆಗೆ ಹೋಗಲು ಇಬ್ಬರೂ ತಮ್ಮ ಸಮವಸ್ತ್ರ ತೆಗೆದು ತಮ್ಮ ತಮ್ಮ ಬಟ್ಟೆ ಧರಿಸಿ ಸಿದ್ಧವಾಗಿದ್ದರು “ಇದು ಬರೀ ವಯಸ್ಸಿನ  ಅಥವಾ ಆತ್ಮ ವಿಶ್ವಾಸದ ಪ್ರಶ್ನೆ ಅಷ್ಟೇ ಅಲ್ಲ ಅನ್ನಿಸುತ್ತೆ ನನಗೆ . ಪ್ರತೀ ರಾತ್ರಿ ನಾನು ಕೆಫೆ ಮುಚ್ಚುವುದಕ್ಕೆ ಹಿಂಜರಿಯಲು ಕಾರಣ , ಬಹುಶ ಯಾರೋ ಒಬ್ಬನಿಗೆ  ಈ ಕೆಫೆ ಯ ಅವಶ್ಯಕತೆ ಇದೆಯೇನೋ ಅನ್ನಿಸುತ್ತಿರುತ್ತೆ ನನಗೆ “

ಈ ಊರಲ್ಲಿ ರಾತ್ರಿ ಇಡೀ ತೆರೆದಿರುವ ಸಾಕಷ್ಟು ಬಾರ್ ಗಳಿವೆ “

ನಿನಗೆ ಅರ್ಥವಾಗುತ್ತಿಲ್ಲ.  ಇದು ಸ್ವಚ್ಛವಾಗಿರುವ ಆಹ್ಲಾದಕರ ಕೆಫೆ . ಸಾಕಷ್ಟು  ಬೆಳಕಿದೆ . ಈ ಬೆಳಕೂ ಕೂಡ ಬಹಳ ಅಪ್ಯಾಯಮಾನವಾಗಿದೆ ಜತೆಗೆ ಆ ಮರದ ಎಲೆಗಳ ನೆರಳಿದೆ “

ಶುಭರಾತ್ರಿ “ಎಂದ ಸಣ್ಣ ವಯಸ್ಸಿನ ವೈಟರ್

ಶುಭರಾತ್ರಿ ” ಎಂದ ವಯಸ್ಸಾದ ವೈಟರ್ ಕೆಫೆಯ ವಿದ್ಯುತ್ ದೀಪಗಳನ್ನು ಆರಿಸುತ್ತ ತನ್ನ ಪಾಡಿಗೆ ಮಾತು ಮುಂದುವರೆಸಿದ , ಒಳ್ಳೆಯ ಬೆಳಕು ಬಹಳ ಮುಖ್ಯ , ಜತೆಗೆ ಆ ಜಾಗ ಕೂಡ ಸ್ವಚ್ಛವಾಗಿ , ಅಪ್ಯಾಯಮಾನವಾಗಿರಬೇಕು . ಸಂಗೀತ ಇರಬಾರದು . ಖಂಡಿತಾ  ಸಂಗೀತವಂತೂ ಇರಬಾರದು . ಬಾರ್ ಒಂದರಲ್ಲಿ ಗೌರವಯುತವಾಗಿ ಇರಲಾಗುವುದಿಲ್ಲ , ಆದರೆ ಈ ಹೊತ್ತಿನಲ್ಲಿ ಸಿಗುವುದು ಬಾರ್ ಒಂದೇ . ಅವನು ಏತಕ್ಕೆ ಹೆದರುತ್ತಿದ್ದ ? ಅದು ಭಯವಾಗಲೀ ಅಥವಾ ಆತಂಕವಾಗಲಿ ಅಲ್ಲ . ಅವನಿಗೂ ಅದೇನು ಎನ್ನುವುದರ ಬಗ್ಗೆ ಅಷ್ಟೇನೂ ಸ್ಪಷ್ಟತೆ ಇರಲಿಲ್ಲ . ಇದೆಲ್ಲವೂ ಶೂನ್ಯ ಮತ್ತು ಒಬ್ಬ  ವ್ಯಕ್ತಿ ಕೂಡ ಶೂನ್ಯ . ಒಂದಷ್ಟು ಒಳ್ಳೆ ಬೆಳಕು ,ಸಾಕಷ್ಟು  ಸ್ವಚ್ಛತೆ ಮತ್ತು ರೀತಿ-ರಿವಾಜು , ಇಷ್ಟೇ ಬೇಕಾಗಿದ್ದುದು . ಕೆಲವರ ಬದುಕಲ್ಲಿ ಅದೆಲ್ಲ ಇರುತ್ತಿತ್ತು ಆದರೆ ಅದು ಅವರ ಅರಿವಾಗುತಿತಿರಲಿಲ್ಲ.. ಆದರೆ ಅವನಿಗೆ ಇದೆಲ್ಲ ಶೂನ್ಯ ಎಂದು ಗೊತ್ತಿತು . ಎಲವೂ ಶೂನ್ಯ , ಈ ಶೂನ್ಯ ಎನ್ನುವುದೂ ಶೂನ್ಯ . ಕಲೆಯೂ ಶೂನ್ಯ , ಶೂನ್ಯವೇ ನಿನ್ನ ಹೆಸರಾಗಲಿ ಶೂನ್ಯದ ಸಾಮ್ರಾಜ್ಯವೇ , ನೀನು ಕೂಡ ಕೊನೆಗೆ ಶೂನ್ಯದ ಹಾಗೆ ಶೂನ್ಯವೇ . ಈ ಶೂನ್ಯವನ್ನೇ ನಮಗೆ ಕೊಡು , ನಮ್ಮ ಒಳಗಿರುವ  ಶೂನ್ಯವನ್ನು ಶೂನ್ಯವಾಗಿಸು . ನಾವು ಶೂನ್ಯವಾದ ಹಾಗೆ ನಮ್ಮ ಶೂನ್ಯ ನಿಜವಾಗಿಯೂ ಶೂನ್ಯದೆಡೆಗೆ ಕೊಂಡೊಯ್ದು  ನಮ್ಮನ್ನು ಈ ಶೂನ್ಯದಿಂದ ಕಾಪಾಡುತ್ತದೆ . ಎಲ್ಲವೂ ಶೂನ್ಯ. ಶೂನ್ಯವನ್ನು ಸಂಭ್ರಮಿಸು . ಅವನು ಕೊನೆಗೆ ಒಂದು ಕಾಫಿ ಮಷೀನ್ ಇದ್ದ ಬಾರಿನ ಮುಂದೆ ನಗುತ್ತ ನಿಂತುಕೊಂಡ

ನಿನಗೇನು ಬೇಕು? ” ಎಂದ ಬಾರ್ ನಲ್ಲಿದ್ದವನು  

ಶೂನ್ಯ “

ಇನ್ನೊಬ್ಬ ಹುಚ್ಚ ಬಂದ ” ಎಂದು ಆ ವ್ಯಕ್ತಿ ಮುಖ ತಿರುಗಿಸಿದ 

ಒಂದು ಸಣ್ಣ ಕಪ್ ” ಎಂದ ವಯಸ್ಸಾದ ವೈಟರ್

ಆ ಬಾರ್ ನವನು ಕಪ್ಪ್ ಗೆ ಸುರಿದು ಕೊಟ್ಟ.

ಸಾಕಷ್ಟು ಪ್ರಕಾಶಮಾನವಾಗಿ, ಅಪ್ಯಾಯಮಾನವಾಗಿ ಬೆಳಕಿದೆ ಆದರೆ ಈ ಬಾರ್ ಸ್ವಲ್ಪವೂ ಅಚ್ಚುಕಟ್ಟಾಗಿಲ್ಲ “

ಆ ಬಾರಿನವನು ಅವನನ್ನೊಮ್ಮೆ  ನೋಡಿ, ಮಾತನಾಡದೆ ನಿಂತ . ಅದು  ಮಾತಿಗಿಳಿಯುವ ಸಮಯವಾಗಿರಲಿಲ್ಲ.

ನಿನಗೆ ಇನ್ನೊಂದು ಕಪ್ ಬೇಕಾ?” ಎಂದು ಬಾರಿನವನು  ಕೇಳಿದ 

ಬೇಡ, ಸಾಕು ” ಎಂದು ಹೊರಗೆ ಹೋದ. ಅವನಿಗೆ ಬಾರ್ ಗಳೆಂದರೆ ಆಗುತ್ತಿರಲಿಲ್ಲ . ಒಂದು ಸ್ವಚ್ಛ ಬೆಳಕಿನ ಕೆಫೆ ಬೇರೆಯದೇ ಒಂದು ಲೋಕ . ಈಗ, ಹೆಚ್ಚು ಯೋಚಿಸದೆ ಅವನು ತನ್ನ ವಾಸಿಸುವ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿ , ಹಗಲು ಬೆಳಕಿನಲ್ಲಿ , ನಿದ್ರೆಗೆ ಜಾರಬೇಕು  . ಕೊನೆಗೂ , ನನಗಿರುವುದು ನಿದ್ರಾಹೀನತೆಯೇ ಇರಬಹುದು , ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡು , ನನ್ನ ಹಾಗೆ ಸಾಕಷ್ಟು ಜನರಿಗೂ ಇದೆ ಸ್ಥಿತಿ  ಇರಬಹುದು ಎಂದುಕೊಂಡ.

ಕನ್ನಡಕ್ಕೆ: ಮಂಜುನಾಥ್‌ ಚಾರ್ವಾಕ

ಸಾಫ್ಟ್‌ವೇರ್‌ ಇಂಜಿನಿಯರ್‌, ಫೋಟೊಗ್ರಫಿ ಅವರ ಹವ್ಯಾಸ

ಪ್ರತಿಕ್ರಿಯಿಸಿ