ನಾಳೆ ವಿಶ್ವ ಪುಸ್ತಕ ದಿನವನ್ನು ನೀವು ಋತುಮಾನದೊಂದಿಗೆ ಆಚರಿಸಿ

ನಾಳೆ ಏಪ್ರಿಲ್ 23, ವಿಶ್ವ ಪುಸ್ತಕ ದಿನದ ಅಂಗವಾಗಿ ಋತುಮಾನ ತಮ್ಮಿಂದ ಒಂದು ಸಣ್ಣ ಸಹಾಯ ಬೇಡುತ್ತಿದೆ.

1 . ತಾವು ತಮಗೆ ಮುಖ್ಯವೆನಿಸುವ ಒಂದು “ವಿಚಾರ ಸಾಹಿತ್ಯ” ದ ಒಂದು ಪ್ರಬಂಧವನ್ನು ಅಥವಾ ಒಂದಷ್ಟು ಸಾಲುಗಳನ್ನು ಓದಿ ವಿಡಿಯೋ ರೆಕಾರ್ಡ್ ಮಾಡುವುದು . ನೀವು ಓದುವುದು ಕಡ್ಡಾಯವಾಗಿ ವಿಚಾರ ಸಾಹಿತ್ಯವೇ ಆಗಿರಬೇಕು . ಕಥೆ , ಕಾದಂಬರಿ, ಕವನ , ಲಲಿತ ಪ್ರಬಂಧಗಳು ಬೇಡ.

2. ಋತುಮಾನದ ಮೊಬೈಲ್ ಆ್ಯಪ್ ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ನೀವು ನಿಮ್ಮ ವೀಕ್ಷಕರಿಗೆ ವಿಡಿಯೋದ ಕೊನೆಯಲ್ಲಿ “RUTHUMANA” ಅಪ್ ಫೋನಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಮನವಿ ಮಾಡಿ. ನಿಮ್ಮ ಈ ಸಣ್ಣ ಮನವಿ ನಮ್ಮ ಋತುಮಾನದ ಸಂಗ್ರಹ ಇನ್ನಷ್ಟು ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ .

3. ಈ ವಿಡಿಯೋವನ್ನು ನೀವು ನಿಮ್ಮ ಫ಼ೇಸ್ ಬುಕ್ ವಾಲಿನಲ್ಲಿ ಹಾಕಿ . ಹಾಗೆ ಹಾಕುವಾಗ ಈ ಕೆಳಗಿನ ವಾಕ್ಯವನ್ನೂ ನಿಮ್ಮ ಮಾತುಗಳೊಂದಿಗೆ ಸೇರಿಸಿ. ಮರೆಯದೆ ಹ್ಯಾಷ್ ಟ್ಯಾಗ್ ಕೂಡ ಬಳಸಿ

“ಋತುಮಾನ ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.”
#RUTHUMANA #ಋತುಮಾನ

ಪ್ರತಿಕ್ರಿಯಿಸಿ