ಕೆರೆಮನೆ ಶಿವರಾಮ ಹೆಗಡೆ ‘ನೆನಪಿನ ರಂಗಸ್ಥಳ’

ಯಕ್ಷಗಾನ ಲೋಕದಲ್ಲಿ ಕೆರೆಮನೆ ಶಿವರಾಮ ಹೆಗಡೆಯವರಿಗೆ ಅತಿ ಎತ್ತರದ ಸ್ಥಾನವಿದೆ. 1921 ರಿಂದ 1983 ರ ಕೊನೆಯ ವೇಷದ ವರೆಗೆ 6 ದಶಕಗಳ ಕಾಲ ವಿಶಿಷ್ಟ ಪಾತ್ರಾಭಿನಯ, ಸಂಘಟನೆ, ಚಿಂತನೆ ಗಳ ಮೂಲಕ ಯಕ್ಷಗಾನದ ಬೆಳವಣಿಗೆ ಗೆ ಚೈತನ್ಯ ನೀಡಿದರು. ಅವರ ಆತ್ಮಕಥನ ನೆನಪಿನ ರಂಗಸ್ಥಳ ಕನ್ನಡದ ಅಪೂರ್ವ ಕೃತಿಗಳಲ್ಲೊಂದು. ಅವರನ್ನು ಹತ್ತಿರದಿಂದ ನೋಡಿದ ಹಲವು ಜನ ಶಿವರಾಮ ಹೆಗಡೆಯವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟ ಸಾಕ್ಷಚಿತ್ರ ಇಲ್ಲಿದೆ . ಒಂದು ಗಂಟೆಯಷ್ಟು ದೀರ್ಘ ಅವಧಿಯ ಈ ಚಿತ್ರವನ್ನು ನಿರ್ಮಿಸುವಲ್ಲಿ ಋತುಮಾನಕ್ಕೆ ನೆರವಾದ ಎಲ್ಲರಿಗೂ ಕೃತಜ್ಞತೆಗಳು.

ಪ್ರತಿಕ್ರಿಯಿಸಿ