ಫ್ರ್ಯಾನ್ಝ್ ಕಾಫ್ಕ ನ ಪ್ರಸಿದ್ಧ ಕೃತಿ ‘ಮೆಟಮಾರ್ಫಾಸಿಸ್’ ನ ಅನುವಾದ ‘ರೂಪಾಂತರ’ ಈ ಬುಕ್ ಈಗ ಋತುಮಾನದ ಮೊಬೈಲ್ ಆ್ಯಪ್ ನಲ್ಲಿ ಲಭ್ಯವಿದೆ. “ಗತಿಸ್ಥಿತಿ” ಕಾದಂಬರಿಯನ್ನು ಬರೆದ “ಗಿರಿ” ಯವರು ಇದನ್ನು ಕನ್ನಡಕ್ಕೆ ೧೯೭೭ ರಲ್ಲಿ ಅನುವಾದಿಸಿದ್ದರು.
ಒಂದು ದೈತ್ಯ ಕೀಟವಾಗಿಹೋದ ಮನುಷ್ಯ. ಆ ಸ್ಥಿತಿಯನ್ನು ಸ್ವೀಕರಿಸುವ ಅನಿವಾರ್ಯತೆ. ಅದರ ವಿರುದ್ಧ ಸೆಣೆಸುವ ಅನಿವಾರ್ಯತೆ.
ಹುಳುವಾಗಿ ಹೋದರೂ, ಆ ಅಸಹಾಯಕತೆಯಲ್ಲಿಯೇ ಪ್ರೀತಿಸುವುದನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವವನ ಕಥೆ. ಬಾಗಿಲಿನ ಹಿಂದೆ ಭಯದಲ್ಲಿ, ತಬ್ಬಲಿಯಾಗಿ, ತ್ಯಕ್ತನಾದವನ ಕಥೆ: ಮೆಟಮಾರ್ಫಸಿಸ್. ನಬಕೋಫ್, ಮಾರ್ಕ್ವೆಝ್ ರಿಂದ “೨೦ನೇ ಶತಮಾನದ ಮಹಾನ್ ಬರಹಗಾರ” ಎಂದು ಕರೆಸಿಕೊಂಡ, ಸಣ್ಣವಯಸ್ಸಿನಲ್ಲಿಯೇ ತೀರಿಹೋದ ಫ್ರಾಂಜ್ ಕಾಫ್ಕಾನ ಮೊದಲ ಮಹತ್ವದ ಕೃತಿ ಕನ್ನಡದಲ್ಲಿ.
ಋತುಮಾನ ಆ್ಯಪ್ ನಲ್ಲಿ ‘E Book’ ವಿಭಾಗದಲ್ಲಿ ನೀವಿದನ್ನು ಕೊಳ್ಳಬಹುದು.
ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.