ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆ

ಪರ್ಷಿಯನ್ ಮತ್ತು ದಖನಿ ಉರ್ದುವಿನಲ್ಲಿರುವ ಆದಿಲಶಾಹಿ ಕಾಲದ ಸಾಹಿತ್ಯವನ್ನು ಕನ್ನಡ , ಇಂಗ್ಲೀಷ್ , ಉರ್ದುವಿಗೆ ಅನುವಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರ ಆಸ್ಥೆಯಿಂದ ಕೈಗೆತ್ತಿಕೊಂಡು ಕನ್ನಡಲ್ಲಿ 18 , ಇಂಗ್ಲೀಷಿನಲ್ಲಿ 2 ಮತ್ತು ಉರ್ದುವಿನಲ್ಲಿ 1 ಸಂಪುಟವನ್ನು ಈಗಾಗಲೇ ಹೊರತಂದಿದೆ. ಕರ್ನಾಟಕದ ಸರ್ಕಾರದ ನೆರವಿನೊಂದಿಗೆ ಹೈದರಾಬಾದ್ , ಪುಣೆ ಮತ್ತು ಇತರೆಡೆ ಇದ್ದ ಆರ್ಕೈವ್ ನಿಂದ ಪ್ರತಿಗಳನ್ನು ಸಂಗ್ರಹಿಸಿ ಅಚ್ಚುಕಟ್ಟಾಗಿ ಅನುವಾದವನ್ನು ಮಾಡಿರುವ ಈ ಯೋಜನೆ ಕರ್ನಾಟಕದ ಇತಿಹಾಸ ಅರಿಯಲು ಸಹಾಯಕಾರಿ. ಎರಡನೇ ಇಬ್ರಾಮ್ ಆದಿಲ್ ಶಾಹಿ ಬರೆದ ಕಿತಾಬೆ ನವರಸ್, ಫರಿಶ್ತಾ ಬರೆದ ತಾರೀಖ- ಎ- ಫ಼ರಿಶ್ತಾ ಮೊದಲಾದ ಇತಿಹಾಸದ ಕೃತಿಗಳು , ಈಶ್ವರ ಸಾಗರನ ಫುತುಹತೆ-ಈ-ಅಲಂಗಿರ್ ಮೊದಲಾದ ಹಲವು ಅಪೂರ್ವ ಕೃತಿಗಳನ್ನು ಈ ಸಂಪುಟ ಒಳಗೊಂಡಿವೆ. ಪರ್ಸಿಯನ್ ಮತ್ತು ದಖನಿಯಿಂದ ನೇರವಾಗಿ ಅನುವಾದ ಆಗಿರುವುದು ಇದರ ಇನ್ನೊಂದು ವಿಶೇಷತೆ . ಋತುಮಾನಕ್ಕಾಗಿ ಈ ಯೋಜನೆಯ ಸ್ಥೂಲ ಪರಿಚಯವನ್ನು ಬಸವ ಬಿರಾದಾರ್ ಮಾಡಿದ್ದಾರೆ. ಈ ಸಂಪುಟಗಳನ್ನು ಋತುಮಾನ ಸ್ಟೋರ್ ನ ಈ ಕೆಳಗಿನ ಕೊಂಡಿಯಲ್ಲಿ ನೀವು ಕೊಳ್ಳಬಹುದು. https://bit.ly/3f3qn4i


One comment to “ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆ”

ಪ್ರತಿಕ್ರಿಯಿಸಿ