ಮುಸ್ಲಿಂ ಓಲೈಕೆ ಎಂಬ ಮಿಥ್ಯೆ

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಸ್ತಿತ್ವ ಮತ್ತು ಚರಿತ್ರೆ, ಭಿನ್ನ ಅಭಿಪ್ರಾಯ ಗಳನ್ನು ಹೊಂದಿರುವವರ ಮೇಲೆ ಭಾರತ ಸರ್ಕಾರ ದ ನಿಗ್ರಹ, ಅಲ್ಪಸಂಖ್ಯಾತ ರಿಗೆ ಕೊಡಲಾಗುತ್ತಿರುವ ಕಿರುಕುಳ, ಸಾಂವಿಧಾನಿಕ ಸ್ವಾತಂತ್ರ್ಯ ದ ಮೇಲಿನ ನಿರ್ಬಂಧ ಇವೆಲ್ಲ ವಿಚಾರ ಗಳನ್ನು ಪರೀಕ್ಷಿಸುವ ಮೂಲಕ ಭಾರತ ಹೇಗೆ ಮೆಜರಾಟೆರಿಯನ್ ದೇಶ ವಾಗಿ ಮಾರ್ಪಡುತ್ತಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಲು ಆಕಾರ್ ಪಟೇಲ್ ರ ಈ ಹೊಸ ಹೊತ್ತಿಗೆ “Our Hindu Rashtra” ಪ್ರಯತ್ನಿಸುತ್ತದೆ. ಮುಸಲ್ಮಾನರು ಭಾರತದಲ್ಲಿ ಎಷ್ಟರ ಮಟ್ಟಿಗೆ ಒಲೈಸಿಕೊಂಡವರಾಗಿದ್ದಾರೆ ಎಂಬುದನ್ನು ಪರೀಕ್ಷಿಸುವ ಆಯ್ದ ಪುಸ್ತಕದ ಭಾಗ ಇಲ್ಲಿದೆ.

ಸ್ವಾತಂತ್ಯಕ್ಕೆ ಹಿಂದಿನಿಂದಲೂ “ಮುಸಲ್ಮಾನರನ್ನು ಒಲಿಸಿಕೊಳ್ಳಲಾಗುತ್ತಿದೆ” ಎಂಬುದು ಹಿಂದುತ್ವದ ದೂರು.

ಜನಸಂಘದ 1951ರ ಮೊದಲ ಘೋಷಣಾ ಪತ್ರದಲ್ಲಿ, ” ಹಾಲಿಯಲ್ಲಿ ಈ ದೇಶದಲ್ಲಿ ಜಾತ್ಯಾತೀತವಾದವನ್ನು ಹೇಗೆ ಅರ್ಥೈಸಿದ್ದಾರೆಂದರೆ ಅದು ಮುಸಲ್ಮಾನರನ್ನು ಒಲಿಸಿಕೊಳ್ಳುವ ಕಾರ್ಯನೀತಿಗೆ ಒಂದು ಸಮಾನಾರ್ಥ ಪದವಾಗಿದೆ” ಎಂದಿತ್ತು.
. ದಶಕಗಳಿಂದ ಇದು ಆ ಪಕ್ಷದ ಪ್ರಲಾಪವಾಗಿದೆ ಹಾಗೂ ಅದು ಎಲ್ಲಾ ಬಿಜೆಪಿ ಘೋಷಣಾಪತ್ರಗಳಲ್ಲಿಯೂ ತೋರಿಬರುತ್ತದೆ. 2019ರಲ್ಲಿ ತಾನು ಅಧಿಕಾರದಲ್ಲಿದ್ದು ವರ್ಷಗಳಾದ ನಂತರವೂ ಆ ಪಕ್ಷವು ,” ಈಗ ನಡೆಯುತ್ತಿರುವುದು ಏನೆಂದರೆ, ಒಬ್ಬರಿಗೆ ಹಾನಿ ಮಾಡುತ್ತಾ ಇನ್ನೊಬ್ಬರನ್ನು ಒಲಿಸಿಕೊಳ್ಳುವುದು” ಎಂದು ಹೇಳುತ್ತಿತ್ತು.

2016ರಲ್ಲಿ ಮೋದಿಯವರು ತಮ್ಮ ಪಕ್ಷದ ಹಿಂದಿನ ಒಬ್ಬ ನಾಯಕರ ಒಂದು ಅದ್ಭುತ ಹೇಳಿಕೆಯನ್ನು ಹೀಗೆಂದು ಮರು ಉಚ್ಚರಿಸಿದರು.” 50 ವರ್ಷಗಳ ಹಿಂದೆ ಪಂಡಿತ್ ಉಪಾಧ್ಯಾಯ ಹೇಳಿದ್ದರು, ‘ಮುಸಲ್ಮಾನರನ್ನು ಒಲಿಸಿಕೊಳ್ಳ ಬೇಡಿ, ಅವರನ್ನು ಕಡೆಗಣಿಸಬೇಡಿ . ಬದಲಾಗಿ ಅವರನ್ನು ಶುದ್ಧೀಕರಿಸಿರಿ.’ ಈ ಹೇಳಿಕೆಯಲ್ಲಿ “ಶುದ್ಧೀಕರಿಸಿ’ ಎನ್ನುವ ಪದಕ್ಕೆ ಜಾಗತಿಕವಾಗಿಯೂ ಸಹ ಎಷ್ಟೊಂದು ತಲೆಬರಹಗಳು ದೊರೆತು ಬಿಟ್ಟವು ಎಂದರೆ, ‘ಒಲಿಸಿಕೊಳ್ಳುವುದು’ ಎಂಬ ಪದದ ಮೇಲೆ ಯಾವುದೇ ಟಿಪ್ಪಣಿ ಆಗಲೇಇಲ್ಲ. ಆ ಪದವನ್ನು ಎಷ್ಟರ ಮಟ್ಟಿಗೆ ಹಿಂದುತ್ವವು ತನ್ನ ಎಲ್ಲಾ ವೇದಿಕೆಗಳಿಂದಲೂ ಪದೇಪದೇ ಉಪಯೋಗಿಸುತ್ತದೆ ಎಂದರೆ ಆ ಪದವು ಸಾಧಾರಣವಾಗಿಬಿಟ್ಟಿದೆ. ಆರೆಸೆಸ್‍ನ ವೆಬ್‍ಪೇಜಿನಲ್ಲೂ ” ಮುಸಲ್ಮಾನರನ್ನು ಒಲಿಸಿಕೊಳ್ಳುವ ಕಾಂಗ್ರೆಸ್ ನಾಯಕರ ಕಾರ್ಯನೀತಿಯ ಬಗ್ಗೆ” ಬರೆಯಲಾಗಿದೆ. ಆರೆಸೆಸ್‍ಆಗಲೀ ಬಿಜೆಪಿ ಆಗಲೀ ಅಥವಾ ಪ್ರಧಾನ ಮಂತ್ರಿಗಳಾಗಲೀ, ಮುಸಲ್ಮಾನರನ್ನು ಒಲಿಸಿಕೊಳ್ಳಲಾಗುತ್ತಿದೆಯೇ , ಹಾಗಿದ್ದರೆ ಹೇಗೆ ಎಂಬುದರ ಬಗ್ಗೆ ಯಾವುದೇ ಆಧಾರಗಳನ್ನಾಗಲೀ, ಡೇಟಾವನ್ನಾಗಲೀ ಅಥವಾ ಸಾಕ್ಶಿಯನ್ನಾಗಲೀ ಕೊಡುವುದಿಲ್ಲ.

“ಎಲ್ಲಾ ಮಂತ್ರಗಳಂತೆಯೇ ಇದನ್ನೂ ಗುಣುಗುಣಿಸುತ್ತಾ ಕಲ್ಪಿಸಿಕೊಂಡು ಬಿಡುತ್ತಾರೆ. “

ಶಬ್ದಭಂಡಾರದ ಪ್ರಕಾರ ಒಲಿಸಿಕೊಳ್ಳುವುದು (ಅಪೀಸ್‍ಮೆಂಟ್) ಎಂದರೆ ಯಾರನ್ನಾದರೂ, ಅವರಿಗೆ ಬೇಕಾದುದನ್ನು ಕೊಟ್ಟುಬಿಟ್ಟು ಸಮಾಧಾನ ಪಡಿಸಿ ಸಂತೈಸುವುದು. ಮುಸಲ್ಮಾನರು ಭಾರತದಲ್ಲಿ ಎಷ್ಟರ ಮಟ್ಟಿಗೆ ಒಲೈಸಿಕೊಂಡವರಾಗಿದ್ದಾರೆ ಎಂಬುದನ್ನು ಪರೀಕ್ಷಿಸೋಣ.

ಕಾನೂನಿನ ಪ್ರಕಾರ ಯಾವುದೇ ಒಬ್ಬ ಹಿಂದು ಪಾಕೀಸ್ತಾನದಲ್ಲಿ ಪ್ರಧಾನ ಮಂತ್ರಿಯಾಗಲೀ ಅಧ್ಯಕ್ಷರಾಗಲೀ ಆಗುವ ಹಾಗಿಲ್ಲ. ಭಾರತದಲ್ಲಿ ಆ ರೀತಿಯ ಧರ್ಮಕ್ಕೆ ಅಂಟಿದ ಕಾನೂನಿನ ಪ್ರತಿಬಂಧ ಇಲ್ಲವಾದರೂ ಆ ಪದವಿಗೆ ಹತ್ತಿರ ಹೋಗುವ ಆಸೆ ಹೊಂದಲು ಯಾವ ಮುಸಲ್ಮಾನರಿಗೂ ಇದುವರೆಗೂ ಸಾಧ್ಯವಾಗಿಲ್ಲ. ಕಾನೂನು ಮಾಡಲಾಗದ ಕಟ್ಟುಪಾಡನ್ನು ಬಹುಮತ ಮಾಡುತ್ತದೆ. ಸಿದ್ಧಾಂತಗಳಲ್ಲಿ ಸಾಧ್ಯವಾಗುವುದು ವಾಸ್ತವದಲ್ಲಿ ಅಸಾಧ್ಯವಾಗುತ್ತದೆ. ಭಾರತದಲ್ಲಿ ಒಬ್ಬ ಮುಸಲ್ಮಾನ ಪ್ರಧಾನ ಮಂತ್ರಿಯನ್ನು ಊಹಿಸಿಕೊಳ್ಳುವುದೇ ಬಹು ಜನರಿಗೆ ಹಾಸ್ಯಾಸ್ಪದವಾಗಿ ಕಾಣುತ್ತದೆ.

ಓಲೈಸುವಿಕೆಗೆ ಉದಾಹರಣೆಯಾಗಿ ಉಲ್ಲೇಖಿಸುವುದು ಇಫ್ತಾರ್ ಔತಣವನ್ನು(ರಾಜಕೀಯ ಮುಖಂಡರು ಯೋಜಿಸುವ ರಂಜಾನ್ ಉಪವಾಸವನ್ನು ಮುಗಿಸುವ ಸಂಜೆಯ ಔತಣಕೂಟ), 1959 ರ ಹಜ್ ಸಮಿತಿಯ ಕಾಯಿದೆ( ಯಾತ್ರಿಗಳಿಗೆ ಸೌದಿ ಅರೇಬಿಯಾ, ಇರಾಕ್ ಇರಾನ್, ಸಿರಿಯ ಮತ್ತು ಜೋರ್ಡಾನ್‍ಗಳಿಗೆ ಹೋಗಲು ಕೊಡುವ ಸವಲತ್ತುಗಳು), ಮತ್ತು ಮುಸಲ್ಮಾನ ಮಹಿಳೆಯರ ವಿಚ್ಚೇದನ ಸವಲತ್ತಿನ ತೀರ್ಪನ್ನು ಹಿಂದುಮುಂದಾಗಿ ತಿರುಗಿಸಿದ್ದು(ಶಾಹ್ ಬನೋ ಕೇಸ್). ಹಜ್ ಸಹಾಯಧನವನ್ನು ಸರಕಾರದಿಂದ ಏರ್ ಇಂಡಿಯಾಗೆ ಹಣ ಸಹಾಯದಂತೆ ತರಲಾಗಿತ್ತು. ಏರ್ ಇಂಡಿಯಾ ಜೆದ್ದಾ ಪ್ರಾಯಾಣದ ಬೆಲೆಯನ್ನು ಏರಿಸಿತ್ತು. ಈ ಸವಲತ್ತನ್ನು 2018 ರಲ್ಲಿ ಹಿಂತೆಗೆದುಕೊಳ್ಳಲಾಯಿತು. ( ಔಟ್‍ಲುಕ್ ಜನವರಿ 2017 -ಹಜ್ ಸಹಾಯಧನ ಏರ್ ಇಂಡಿಯಾವನ್ನು ಮುಳುಗದಂತೆ ಉಳಿಸುವ ಉಪಾಯವೇ?) ಸಾಧಾರಣವಾಗಿ ಜನರ ನಂಬಿಕೆ ಏನಿದೆಯೆಂದರೆ ಸರಕಾರದ ಹಣದಲ್ಲಿ ತೀರ್ಥಯಾತ್ರೆ ನಡೆಸುವವರು ಮುಸಲ್ಮಾನರು ಮಾತ್ರಾ ಎಂದು. ಇದು ನಿಜವಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ತಮ್ಮ ಅಧಿಕಾರವನ್ನು ವಹಿಸಿಕೊಂಡ ನಂತರದ ಮೊದಲ ಭಾಷಣದಲ್ಲಿ ಹಿಂದೂಗಳಿಗೆ ತಾವು ತೀರ್ಥಯಾತ್ರೆ ಮಾಡಲು ಸಹಾಯಧನ ನೀಡುವುದಾಗಿ ಘೋಷಿಸಿದರು. (ಕೈಲಾಶ್ ಮಾನಸ ಸರೋವರ ಯಾತ್ರಿಗಳಿಗೆ ಒಂದು ಲಕ್ಷ ಸಹಾಯಧನ : ಹಿಂದೂಸ್ತಾನ್ ಟೈಂಸ್ ಮಾರ್ಚ್ 25, 2017) ಮೋದಿ ಸರಕಾರದ ” ಪಿಲಿಗ್ರಿಮೇಜ್ ರೆಜುವಿನೇಶನ್ ಅಂಡ್ ಸ್ಪಿರಿಚುಯಾಲಿಟಿ ಡ್ರೈವ್ ಅಂದರೆ ತೀರ್ಥಯಾತ್ರೆ ಮತ್ತು ಧಾರ್ಮಿಕ ನವೀಕರಣ ಯೋಜನೆಯಡಿಯಲ್ಲಿ ಕಾಶಿ ಮಥುರಾ ಮತ್ತು ಅಯೋಧ್ಯೆಗೆ ಹೋಗುವವರಿಗಾಗಿ ಮಾತ್ರವೇ 800 ಕೋಟಿ ಬಜೆಟ್ ಇದೆ. ( ಹಜ್ ಸಹಾಯಧನವನ್ನು ನಿಲ್ಲಿಸಿರುವುದು ಒಳ್ಳೆಯ ಹೆಜ್ಜೆ, ಈಗ ಸರಕಾರವು ಎಲ್ಲಾ ಧರ್ಮಗಳ ಮೇಲೆ ಮಾಡುವ ಖರ್ಚನ್ನೂ ನಿಲ್ಲಿಸಬೇಕು. ವೈರ್. 17 ಜನವರಿ 2018).ಮಧ್ಯಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು, ಬಿಹಾರ್ ಮತ್ತು ರಾಜಾಸ್ಥಾನಗಳಲ್ಲಿ ತೀರ್ಥಯಾತ್ರಿಗಳಿಗಾಗಿ ರಾಜ್ಯಸರಕಾರಗಳು ಖರ್ಚು ಮಾಡುತ್ತವೆ. ಅಲ್ಲದೆ ಈ ಸರಕಾರಗಳು ದೇವಸ್ಥಾನಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ಮತ್ತು ಮೂಲಸೌಕರ್ಯಗಳಿಗಾಗಿ ಬೆಂಬಲ ನೀಡುತ್ತವೆ. ಮುಸಲ್ಮಾನರನ್ನು ಒಲೈಸಿಕೊಳ್ಳುವ ಆಪಾದನೆಯಲ್ಲಿ ಅತಿ ಹೆಚ್ಚಾಗಿ ಕೇಳಿ ಬರುವ ಉದಾಹರಣೆ ಎಂದರೆ ಅದು ಮುಸ್ಲಿಮ್ ಪರ್ಸನಲ್ ಕಾಯಿದೆಯಡಿ ಇರುವ ಬಹು ಪತ್ನೀ ಸವಲತ್ತು. 1961 ರಲ್ಲಿ ನಡೆದ ಕಳೆದ ಜನಸಂಖ್ಯಾ ಗಣತಿಯ ಬಹುಪತ್ನಿತ್ವ ಗಣತಿಯಲ್ಲಿ ಮುಸಲ್ಮಾನರ ಬಹುಪತ್ನಿತ್ವ (5.7%) ಹಿಂದೂಗಳ(5.8%) ಜೈನರ(6.7%),ಬೌದ್ಧರ(7.8%) ಮತ್ತು ಆದಿವಾಸಿಗಳ (15.25%) ಬಹುಪತ್ನಿತ್ವಕ್ಕಿಂತ ಕಡಿಮೆ ಎಂದು ಸಾಬೀತಾಯಿತು. 1974ರಲ್ಲಿ ನಡೆದ ಸರ್ವೇ ಒಂದರಲ್ಲಿ ಮುಸಲ್ಮಾನರ ಬಹುಪತ್ನಿತ್ವವನ್ನು 5.6% ಎಂದೂ ಹಿಂದೂಗಳ ಬಹುಪತ್ನಿತ್ವವನ್ನು 5.8% ಎಂದೂ ತೋರಿಸಿತು.( ಮುಸಲ್ಮಾನ ಹೆಂಗಸರು ಮತ್ತು ಬಹುಪತ್ನಿತ್ವದ ಬಗೆಗಿನ ಆಶ್ಚರ್ಯಕರ ಸಂಗತಿಗಳು : ಸ್ರೋಲ್ ಜುಲೈ 2014) ಇತ್ತೀಚಿನ ದಿನಗಳಲ್ಲಿ ಬಹುಪತ್ನಿತ್ವಕ್ಕೆ ಅತ್ಯಂತ ಪ್ರಬಲವಾದ ವಿರೋಧ ಬಂದಿರುವುದು ಮುಸಲ್ಮಾನ ಮಹಿಳೆಯರ ಸಂಘಟಿತ ಗುಂಪುಗಳಿಂದ. ಈ ಬಹುಪತ್ನಿತ್ವದ ಹೆದರಿಕೆಯಿಂದ ಹುಟ್ಟಿದ, ಮುಸಲ್ಮಾನರು ಹಿಂದೂಗಳ ಸಂಖ್ಯೆಯನ್ನು ಮೀರಿ ಹೆಚ್ಚಿಬಿಡುತ್ತಾರೆ ಎಂಬ ಶಂಕೆಯು ಉತ್ಪ್ರೇಕ್ಷಿಸಿದ ಮತ್ತು ಅಸಂಗತ ಆತಂಕವಾಗಿದೆ. ಭಾರತದಲ್ಲಿ ಎಲ್ಲಾ ಸಮುದಾಯಗಳಲ್ಲೂ ಸಂತಾನ ಶಕ್ತಿ ಕ್ಷೀಣಿಸುತ್ತಿದೆ ಹಾಗೂ “ಜನಸಂಖ್ಯಾ ಸ್ಫೋಟ” ಎನ್ನುವುದು ಈಗೇನೂ ಗಂಭೀರವಾದ ಆತಂಕವಲ್ಲ.

ತನ್ನ ಜಾತ್ಯೀಯತೆಯ ಮುಖವಾಡವನ್ನು ಉಳಿಸಿಕೊಳ್ಳುವುದಕ್ಕಾಗಿ ಭಾರತವು ಮುಸಲ್ಮಾನರಿಗೆ, ಔಪಚಾರಿಕ ಹುದ್ದೆಗಳಾದ ರಾಷ್ಟ್ರಾಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಲು ಅವಕಾಶಕೊಡುತ್ತದೆ. ಆದರೆ ಅವರಿಗೆ ನಿಜವಾದ ಅಧಿಕಾರವನ್ನು ಹೊಂದಿರುವ ಹುದ್ದೆಗಳಿಗೆ ಅವಕಾಶವಿಲ್ಲ. ಒಂದು ವೇಳೆ ಪಾಕೀಸ್ತಾನದ ರಾಷ್ಟ್ರಾಧ್ಯಕ್ಷರಿಗಿದ್ದಂತೆ ಭಾರತದ ರಾಷ್ಟ್ರಾಧ್ಯಕ್ಷರಿಗೂ ಸಂಸತ್ತನ್ನು ವಜಾಗೊಳಿಸುವ ಅಧಿಕಾರವಿದ್ದಿದ್ದರೆ ಆಗ ಭಾರತದಲ್ಲಿ ಆ ಸ್ಥಾನವು ಮುಸಲ್ಮಾನರಿಗೆ ದೊರಕುವ ಸಾಧ್ಯತೆಯೇ ಇರುತ್ತಿರಲಿಲ್ಲ.

2020ರಲ್ಲಿ ಭಾರತದಲ್ಲಿ ಒಬ್ಬರೇ ಒಬ್ಬರಾದರೂ ಮುಸಲ್ಮಾನ ಮುಖ್ಯಮಂತ್ರಿಯಿರಲಿಲ್ಲ. ಕಡೆಯ ಅಂತಹ ಮುಖ್ಯಮಂತ್ರಿ ಜಮ್ಮು ಮತ್ತು ಕಾಶ್ಮೀರದ ಸರಕಾರವನ್ನು ವಜಾ ಮಾಡಿದಾಗ ಅಧಿಕಾರ ಕಳೆದುಕೊಂಡರು. ನಂತರ ಆ ರಾಜ್ಯವನ್ನು ವಿಭಜಿಸಿ ಅದರ ಸ್ಥಾನವನ್ನು ಕೆಳಗಿಳಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಬದಲಾಯಿಸಲಾಯಿತು. ಭಾರತದ ಮುಂದಿನ ಮುಸಲ್ಮಾನ ಮುಖ್ಯಮಂತ್ರಿ ಎಲ್ಲಿ ಮತ್ತು ಯಾವಾಗ ಕಾಣಬಹುದೆಂದು ಹೇಳುವುದು ಕಷ್ಟ. ಮುಖ್ಯಮಂತ್ರಿಗಳಾಗಿದ್ದ ಮುಸಲ್ಮಾನ ವ್ಯಕ್ತಿಗಳ ಪಟ್ಟಿ ನಿರಾಶಾಜನಕವಾಗಿದೆ ಅಲ್ಲದೆ ಅವರ ಅಧಿಕಾರಾವಧಿಯೇ ಸ್ವತಃ ಸ್ಥಿತಿಯನ್ನು ವಿವರಿಸುತ್ತದೆ.

ಸ್ವಾತಂತ್ರ್ಯ ಗಳಿಸಿದ ಕಾಲದಿಂದ ಕಾಶ್ಮೀರವನ್ನು ಹೊರತು ಪಡಿಸಿ ಇನ್ಯಾವ ರಾಜ್ಯದ ಮುಸಲ್ಮಾನ ಮುಖ್ಯಮಂತ್ರಿಯೂ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ಭಾರತದ 200 ಮಿಲ್ಲಿಯನ್ ಮುಸಲ್ಮಾನರನ್ನು ರಾಜಕೀಯವಾಗಿ ಹೊರ ಅಂಚಿನಲ್ಲಿರಿಸಲಾಗಿದೆ.

ಮುಸಲ್ಮಾನ ಮುಖ್ಯಮಂತ್ರಿಗಳಲ್ಲಿ ಅತ್ಯಂತ ಪ್ರಸಿದ್ಧ ಉದಾಹರಣೆ ಎಂದರೆ ಮಹಾರಾಷ್ಟ್ರಾದ ಎ.ಆರ್.ಅಂತುಲೇ ಅವರದು. ಅವರು ಎರಡೆ ವರ್ಷ ಅಧಿಕಾರದಲ್ಲಿದ್ದು ನಂತರ ಭ್ರಷ್ಟ್ರಾಚಾರದ ಗುಲ್ಲಿನ ನಡುವೆ ರಾಜೀನಾಮೆ ನೀಡಿದರು. ಎಲ್ಲರಿಗಿಂತಾ ಯಶಸ್ವಿಯಾದವರೆಂದರೆ ಒಂದು ರಾಜ್ಯವನ್ನಲ್ಲ ಬದಲಾಗಿ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡಿದ್ದ ಎಮ್.ಒ.ಎಚ್. ¥sóÀರೂಕ್ ಅವರು. ಅವರು ಪಾಂಡಿಚೆರಿಯಲ್ಲಿ ಮೂರು ಬಾರಿ ಅಧಿಕಾರದಲ್ಲಿದ್ದರು. (ಏಪ್ರಿಲ್ 1967ರಿಂದ ಮಾರ್ಚ್ 1968, ಮಾರ್ಚ್ 1969ರಿಂದ ಜನವರಿ 1974 ಮತ್ತು 1985 ರಿಂದ 1990.)

ಜನವರಿ 2 , 2020ರಲ್ಲಿ ಪ್ರಕಟಿತವಾದ ದ ಪ್ರಿಂಟ್ ಪತ್ರಿಕೆಯು ತನ್ನ ತಲೆಬರಹದಲ್ಲಿ ಹೀಗೆ ಬರೆದಿತ್ತು, “ಭಾರತದ 28 ರಾಜ್ಯಗಳಲ್ಲಿ 15ರಲ್ಲಿ ಮುಸಲ್ಮಾನ ಮಂತ್ರಿಗಳಿಲ್ಲ.” ಮಿಕ್ಕ ಹದಿಮೂರರಲ್ಲಿ ಹತ್ತು ಮಂತ್ರಿಮಂಡಲಗಳಲ್ಲಿ ತಲಾ ಒಬ್ಬೊಬ್ಬ ಮುಸಲ್ಮಾನ ಮಂತ್ರಿಯಿದ್ದರು. ಇದು ತಮ್ಮನ್ನು ಜಾತ್ಯಾತೀತ ಎಂದು ಕರೆದುಕೊಳ್ಳುವ ಪಕ್ಷಗಳು ಅಧಿಕಾರದಲ್ಲಿದ್ದಾಗ್ಯೂ ಸಹ ಕಾಣಬರುತ್ತಿದ್ದ ಸಾಮಾನ್ಯ ಸ್ಥಿತಿ. ಸಂಪೂರ್ಣ ಪಕ್ಷಪಾತ ಎಂಬ ಅಪವಾದದಿಂದ ತಪ್ಪಿಸಿಕೊಳ್ಳಲು ಅಲ್ಲಿಯೂ ಕೂಡ ಅಗತ್ಯವಿದ್ದಷ್ಟು ಮಾತ್ರಾ ಕನಿಷ್ಟ ಸಂಖ್ಯೆಯಲ್ಲಿ ಮುಸಲ್ಮಾನರನ್ನು ಸೇರಿಸಿಕೊಳ್ಳಲಾಗುತ್ತಿತ್ತು.

ಭಾರತದಲ್ಲಿ ಮುಸಲ್ಮಾನರು ಮಾತ್ರಾ ಅಲಕ್ಶ್ಯಿಸಲ್ಪಟ್ಟ ಸಮುದಾಯವಾಗಲೀ ಅಥವಾ ಪಕ್ಷಪಾತಕ್ಕೊಳಪಟ್ಟ ಸಮುದಾಯವಾಗಲೀ ಅಲ್ಲ. ಇದು ಸತ್ಯ. ಆದರೆ ಇತರ ಸಮುದಾಯಗಳಿಗೆ ರಾಜಕೀಯ ಪ್ರವೇಶ ನೀಡಲ್ಪಟ್ಟಿದೆ. ಅದನ್ನು ಪೂರ್ವಾಗ್ರಹಗಳ ಬಗ್ಗೆ ಇರುವ ಅಭಿಪ್ರಾಯವನ್ನು ಮುಖ್ಯವಾಗಿ ಮೀಸಲಾತಿ ಮೂಲಕ ತಲೆಕೆಳಗು ಮಾಡಲು ,ಉಪಯೋಗಿಸಲಾಯಿತು. ಭಾರತದಲ್ಲಿ ಪರಿಶಿಷ್ಟ ಜಾತಿಯ ಜನರು ಜನಸಂಖ್ಯೆಯ ಸುಮಾರು 16% ಇದ್ದಾರೆ. ಅವರಿಗೆ ಲೋಕಸಭೆಯಲ್ಲಿ 84 ಸ್ಥಳಗಳನ್ನು ಕಾದಿರಿಸಲಾಗಿದೆ. ಪರಿಶಿಷ್ಟ ಪಂಗಡದವರು 8% ಇದ್ದಾರೆ ಹಾಗೂ ಅವರಿಗಾಗಿ 47 ಸ್ಥಳಗಳನ್ನು ಕಾದಿರಿಸಲಾಗಿದೆ. ಮುಸಲ್ಮಾನರಿಗೆ ಯಾವುದೇ ಮೀಸಲಾತಿ ಇಲ್ಲ. ಸಂಸತ್ತಿನಲ್ಲಿ ಅವರು ಅತ್ಯಂತ ಕನಿಷ್ಠ ಸಂಖ್ಯೆಯಲ್ಲಿ ಪ್ರತಿನಿಧಿಸಲ್ಪಟ್ಟ ವರ್ಗದವರಾಗಿದ್ದಾರೆ. 2019ರಲ್ಲಿ 27 ಮುಸಲ್ಮಾನರು ಲೋಕಸಭೆಗೆ ಚುನಾಯಿತರಾಗಿದ್ದರು. ಮೀಸಲಾತಿ ನೀಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ಆದ ತಾರತಮ್ಯವನ್ನು ಭಾರತ ಒಪ್ಪಿಕೊಂಡಿದೆಯಾದರೂ ಮುಸಲ್ಮಾನರ ಬಗ್ಗೆ ಅದನ್ನು ಒಪ್ಪಿಕೊಂಡಿಲ್ಲ.

ಅವರ ಜನಸಂಖ್ಯೆಯ ಪಾಲಿನ ಪ್ರಕಾರ ಮುಸಲ್ಮಾನರಿಗೆ ಲೋಕಸಭೆಯಲ್ಲಿ 74 ಸ್ಥಳಗಳಿರಬೇಕಾಗಿತ್ತು. ಅವರಿಗೆ ಎಂದೂ 49ಕ್ಕಿಂತ(1980) ಹೆಚ್ಚು ಸಿಕ್ಕಿಲ್ಲ. ಅವರಿಗೆ ಸಿಕ್ಕಿದ ಸ್ಥಳಗಳ ಸರಾಸರಿ ಸಂಖ್ಯೆ 28, ಅಂದರೆ ಅವರಿಗೆ ಸಿಗಬೇಕಾದ್ದಕ್ಕೆ ಮೂರನೇ ಒಂದರಷ್ಟು. ಹೆಚ್ಚು ಪಕ್ಷಗಳು ಮುಸಲ್ಮಾನರಿಗೆ ಒಂದು ನೆಪ ಮಾತ್ರದ ಚಿನ್ಹೆಯಂತೆ ಟಿಕೆಟ್ಟುಗಳನ್ನು ಕೊಡುತ್ತಾರೆ. ಅದರಲ್ಲೂ ಯಾವ್ಯಾವ ಕ್ಷೇತ್ರದಲ್ಲಿ ಮುಸಲ್ಮಾನರು ಬಹುಸಂಖ್ಯೆಯಲ್ಲಿದ್ದಾರೋ ಅಥವಾ ಅದಕ್ಕೆ ಹತ್ತ್ತಿರದ ಸಂಖ್ಯೆಯಲ್ಲಿದ್ದಾರೋ ಅಂಥಹ ಕಡೆಗಳಲ್ಲಿ ಮಾತ್ರಾ. ಹಿಂದೂಗಳಿಗೆ ಟಿಕೆಟ್‍ಗಳನ್ನು ಹಂಚುವುದು ಹೀಗಲ್ಲ. ಏಕೆಂದರೆ ಯಾವುದೇ ಒಂದು ಜಾತಿಯವರು ಒಂದು ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿರುವುದು ಸಾಧ್ಯವಿಲ್ಲ. ಅವರ ಜಾತಿಯಿಂದಾಗಿ ಆರಿಸಲ್ಪಟ್ಟ ಒಂದು ಜಾತಿಯ ಅಭ್ಯರ್ಥಿಯು ಇತರ ಜಾತಿಯ ಜನರಿಗೂ ಮನವಿ ಮಾಡಿಕೊಳ್ಳಬೇಕೆಂದು ಆಶಿಸಲಾಗುತ್ತದೆ. ಆದರೆ ಮುಸಲ್ಮಾನರನ್ನು ಮಾತ್ರಾ ಬೇರೆಯಾಗಿ ನಡೆಸಿಕೊಳ್ಳಲಾಗುತ್ತದೆ ಹಾಗೂ ಅವರು ಪೂರ್ವಾಗ್ರಹವನ್ನು ಎದುರಿಸುತ್ತಾರೆ. ಟಿಕೆಟ್‍ಗಳನ್ನು ಹಂಚುವುದರಲ್ಲಿ, ಮಂತ್ರಿಮಂಡಲಗಳಲ್ಲಿ ಮತ್ತು ಅಧಿಕಾರದ ಹಂಚುವಿಕೆಯಲ್ಲಿ ಎಲ್ಲಾ ಪಕ್ಷಗಳಲ್ಲೂ ಜಾತ್ಯಾತೀಯತೆ ಎನ್ನುವುದು ಒಂದು ತೋರಿಕೆಯಷ್ಟೆ. ಇದನ್ನು ನಿದರ್ಶನದ ಮೂಲಕ ತೋರಿಸಿ ಕೊಡಬಹುದು ಅಲ್ಲದೆ ಸರಕಾರಕ್ಕೂ ಇದರ ಬಗ್ಗೆ ತಿಳುವಳಿಕೆಯಿದೆ.

2000ರಲ್ಲಿ ಅತಲ್ ಬಿಹಾರೀ ವಾಕಪೇಯಿಯವರ ಸರಕಾರವು ಸಂವಿಧಾನದ ಕಾರ್ಯಗಳನ್ನು ಪರಿಶೀಲಿಸಲು ಒಂದು ರಾಷ್ಟ್ರೀಯ ಸಮಿತಿಯನ್ನು ರಚಿಸಿತು. ಹನ್ನೊಂದು ಸದಸ್ಯರ ಆ ಸಮಿತಿಗೆ ಅತ್ಯುಚ್ಚ ನ್ಯಾಯಾಲಯದ ಹಿಂದಿನ ಮುಖ್ಯನ್ಯಾಯಾಧೀಶರಾಗಿದ್ದ ಶ್ರಿ. ವೆಂಕಟಾಚಲಯ್ಯನವರು ಮುಖ್ಯಸ್ಥರಾಗಿದ್ದರು. ಅದು ಮಾರ್ಚ್ 2002ರಲ್ಲಿ ಅಂದರೆ ಎರಡು ವರ್ಷಗಳ ನಂತರ ತನ್ನ ವರದಿಯನ್ನು ಸಲ್ಲಿಸಿತು. ಆ ವರದಿಯಲ್ಲಿನ ಸಾಮಾಜಿಕ-ಆರ್ಥಿಕ ಬದಲಾವಣೆ ಮತ್ತು ಅಭಿವೃದ್ಧಿಗಳ ವೇಗದ ಬಗ್ಗೆ ಇರುವ ಅಧ್ಯಾಯದಲ್ಲಿ ಹೀಗೆ ಹೇಳಲಾಗಿದೆ, ” ಸಧ್ಯದಲ್ಲಿ ಸಂಸತ್ತುಗಳಲ್ಲಿನ ಅಲ್ಪಸಂಖ್ಯಾತರ, ಅದರಲ್ಲೂ ಮುಸಲ್ಮಾನರ, ಪ್ರತಿನಿಧಿತ್ವ ದೇಶದ ಜನಸಂಖ್ಯೆಯಲ್ಲಿನ ಅವರ ಪ್ರಮಾಣಕ್ಕಿಂತ ಬಹಳ ಕೆಳಮಟ್ಟದಲ್ಲಿದೆ. ಇದರಿಂದ ಅವರಿಗೆ ಪರಕೀಯತೆಯ ಭಾವನೆ ಹೆಚ್ಚಾಗುವ ಸಾಧ್ಯತೆಯಿದೆ. ನಾಯಕತ್ವದ ಸಾಮಥ್ರ್ಯವನ್ನು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬೆಳೆಸುವುದು ಎಲ್ಲಾ ಪಕ್ಷಗಳ ಹೊಣೆಗಾರಿಕೆಯೂ ಆಗಿದೆ. ಭಾರತದ ರಾಜಕೀಯದಲ್ಲಿ ಬಹುತ್ವವನ್ನು ಪ್ರಬಲಗೊಳಿಸುವುದರಲ್ಲಿ ಸರಕಾರದ ಪಾತ್ರವನ್ನು ಇಲ್ಲಿ ಮುಖ್ಯ ಎಂದು ಒತ್ತಿ ಹೇಳಬೇಕು.

ಆ ಸಮಿತಿಯ ಸಲಹೆಗಳನ್ನು ಕೈಗೊಳ್ಳಲಿಲ್ಲ.ಈಗಂತೂ ಬಿಜೆಪಿ ಮುಸಲ್ಮಾನರು ಬೇಕು ಎಂದಾಗಲೀ ಅವರನ್ನು ಸೇರಿಸಿಕೊಳ್ಳಬೇಕೆಂದಾಗಲೀ ತೋರಿಕೆಗೆ ಕೂಡಾ ಹೇಳುವುದಿಲ್ಲ. ನಾವು ಮುಂಚೆಯೇ ಹೇಳಿದಂತೆ 303 ಸಂಸತ್ತಿನ ಲೋಕಸಭೆಯ ಸದಸ್ಯರಲ್ಲಿ ಒಬ್ಬರೂ ಕೂಡಾ ಮುಸಲ್ಮಾನರಿಲ್ಲ. ಅಂತೆಯೇ ಈ ಹಿಂದಿನ ಲೋಕಸಭೆಯಲ್ಲಿನ 282 ಸಂಸತ್ ಸಧಸ್ಯರಲ್ಲೂ ಸಹ ಒಬ್ಬರೂ ಮುಸಲ್ಮಾನರಿರಲಿಲ್ಲ. ಮುಸಲ್ಮಾನರಿಗೆ ಸ್ಥಳಾವಕಾಶವಿರುವ ಕೇಂದ್ರ ಮಂತ್ರಿಮಂಡಲದಲ್ಲೂ ಸಹ ಅದು ಅಲ್ಪಸಂಖ್ಯಾತರ ವ್ಯವಹಾರಗಳ ಮಂತ್ರಿಯಾಗಿ ಮಾತ್ರಾ. ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಮತ್ತು ವಕ್ಫ್‍ಗಳಿಗೆ ಕೂಡಾ ಒಬ್ಬ ಹಿಂದು ಸಚಿವಖಾತೆಯನ್ನು ಹೊಂದಿದ್ದಾರೆ. ಅಲ್ಲದೆ ಅವರು ಮುಸಲ್ಮಾನ ಧಾರ್ಮಿಕ ದತ್ತಿಗಳ ಮೇಲ್ವಿಚಾರಣೆಯನ್ನೂ ನಡೆಸುತ್ತಾರೆ ಹಾಗೂ ಅವರ ಸಹಾಯಕ ಸಚಿವರಾಗಿ ಒಬ್ಬ ಮುಸಲ್ಮಾನರಿದ್ದಾರೆ.

ಡಿಸೆಂಬರ್ 14, 2014 ರಂದು ದ ಹಿಂದು ಪತ್ರಿಕೆಯು ಒಂದು ತಲೆಬರಹವನ್ನು ಪ್ರಕಟಿಸಿತು. “ಬಿಜೆಪಿಗೆ ಬರಿಯ ನಾಲ್ಕನೇ ಮುಸಲ್ಮಾನ ಎಮೆಲ್‍ಎ”. ಆ ವರದಿಯ ಪ್ರಕಾರ ದೇಶದಾದ್ಯಂತದ 1016 ವಿಧಾನಸಭಾ ಸದಸ್ಯರುಗಳಲ್ಲಿ ನಾಲ್ಕು ಮಂದಿ ಮುಸಲ್ಮಾನರಿದ್ದಾರೆ. ಅವರಲ್ಲಿ ಇಬ್ಬರು ರಾಜಾಸ್ಥಾನದಲ್ಲಿ, ಒಬ್ಬರು ಬಿಹಾರದಲ್ಲಿ ಮತ್ತು ಇನ್ನೊಬ್ಬರು ಜಮ್ಮುವಿನಲ್ಲಿ ಇದ್ದಾರೆ. ಅಸ್ಸಮಿನಲ್ಲಿ 2016 ರ ಚುನಾವಣೆಯ ನಂತರ ಒಬ್ಬರು ಮುಸಲ್ಮಾನ ವಿಧಾನಸಭಾಸದಸ್ಯರಿದ್ದರು ಅವರನ್ನು ಸಭಾಧ್ಯಕ್ಷರನ್ನಾಗಿ ಮಾಡಿದರು, ಅಂದರೆ ನಿಜವಾದ ಅಧಿಕಾರವಿಲ್ಲದ ಸ್ಥಾನವನ್ನು ಕೊಡಲಾಯಿತು.

ಈ ವರದಿ ಬಂದ ನಂತರ, ಈ ಅಂಕೆಗಳ ದೃಷ್ಟಿಯಲ್ಲಿ ಪರಿಸ್ಥಿತಿ ಮತ್ತೂ ಹದಗೆಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ. ಬಿಹಾರದಲ್ಲಿ ಅದರ ಮುಂದಿನ ವರ್ಷದಲ್ಲಿ ಚುನಾವಣೆ ಬಂತು ಹಾಗೂ ಮುಸಲ್ಮಾನ ಸದಸ್ಯರ ಸಂಖ್ಯೆ ಸೊನ್ನೆಗೆ ಇಳಿಯಿತು. 2018ರಲ್ಲಿ ರಾಜಾಸ್ಥಾನದಲ್ಲಿ ವಿಧಾನಸಭೆಯ ಚುನಾವಣೆ ನಡೆಯಿತು ಹಾಗೂ ಅಲ್ಲಿಯೂ ಸಹ ಮುಸಲ್ಮಾನ ಸದಸ್ಯರ ಸಂಖ್ಯೆ ಸೊನ್ನೆಗೆ ಇಳಿಯಿತು. 2017ರಲ್ಲಿ ಚುನಾವಣೆ ನಡೆದ ಉತ್ತರ ಪ್ರದೇಶದ 307 ವಿಧಾನಸಭಾ ಸದಸ್ಯರಲ್ಲಿ ಒಬ್ಬರೂ ಮುಸಲ್ಮಾನರಿಲ್ಲ. ಉತ್ತರ ಪ್ರದೇಶದಲ್ಲಿ ಸುಮಾರು 40 ಮಿಲ್ಲಿಯನ್ ಮುಸಲ್ಮಾನರಿದ್ದಾರೆ. ಅಂದರೆ ಅವರು ಪ್ರಜಾಪ್ರಭುತ್ವದ ಜಗತ್ತಿನಲ್ಲೆಲ್ಲಾ ಅತಿ ದೊಡ್ಡ ಪ್ರತಿನಿಧಿತ್ವವಿಲ್ಲದಿರುವ ಗುಂಪು.

2017ರ ಮಾರ್ಚ್ ಒಂದರಂದು ಟೈಮ್ಸ್ ಆ¥sóï ಇಂಡಿಯಾ ಒಂದು ತಲೆಬರಹವನ್ನು ಪ್ರಕಟಿಸಿತು. ” ಉತ್ತರಪ್ರದೇಶದ ಚುನಾವಣೆಯಲ್ಲಿ ಮುಸಲ್ಮಾನರಿಗೆ ಟಿಕೆಟ್ ಇಲ್ಲ.” ಅದು ಕೆಲವು ಪಕ್ಷದ ಸದಸ್ಯರ ಮಾತುಗಳನ್ನು ಉಲ್ಲೇಖಿಸುತು. ಅವರುಗಳು ಮುಸಲ್ಮಾನರಿಗೆ ಟಿಕೆಟ್ ಕೊಟ್ಟಿದ್ದರೆ ಉಚಿತವಾಗುತ್ತಿತ್ತು ಎಂದು ಒಪ್ಪಿಕೊಂಡರಾದರೂ , ಯಾಕೆ ಕೊಡಲಿಲ್ಲವೆಂಬುದಕ್ಕೆ ಅವರ ಬಳಿ ಯಾವ ವಿವರಣೆಯೂ ಇರಲಿಲ್ಲ. ವಿಷಯ ಏನೆಂದರೆ ಬಿಜೆಪಿಗೆ ಮುಸಲ್ಮಾನರು ಬೇಕಾಗಿಲ್ಲ, ಅಷ್ಟೇ ಅಲ್ಲ, ಹಾಗೂ ಮುಸಲ್ಮಾನರಿಗೆ ಅದು ಗೊತ್ತಾಗಬೇಕು.

1995ರಿಂದ ಆ ಪಕ್ಷವು ಅಧಿಕಾರ ನಡೆಸುತ್ತಿರುವ ಗುಜರಾತಿನಲ್ಲಿ 22 ವರ್ಷಗಳಿಂದ ಯಾವುದೇ ಒಬ್ಬ ಮುಸಲ್ಮಾನ ಬಿಜೆಪಿ ಎಮೆಲ್‍ಏ ಇಲ್ಲ. 1985ರಿಂದ ಲೋಕಸಭೆಗೆ ಗುಜರಾತಿನಿಂದ ಯಾವುದೇ ಪಕ್ಷದ ಮುಸಲ್ಮಾನ ಪ್ರತಿನಿಧಿಯಿಲ್ಲ. ಸಂಪೂರ್ಣ ಹಿಂದಿ ಪ್ರಾಂತ್ಯಗಳಿಂದ 2020ರಲ್ಲಿ ಬಿಜೆಪಿಗೆ ಸೇರಿದ ಮುಸಲ್ಮಾನ ಎಮೆಲ್‍ಏ ಇಲ್ಲ.

ಪಾಕೀಸ್ತಾನದಲ್ಲಿ ಕಾಣಬರುವ ಉಚ್ಚಮಟ್ಟದ ಅಧಿಕಾರಗಳಲ್ಲಿ ಮತ್ತು ಪ್ರಬಲ ಸ್ಥಾನಗಳಲ್ಲಿನ ಮುಚ್ಚುಮರೆಯಿಲ್ಲದ ಬಹಿಷ್ಕಾರಕ್ಕೂ ಭಾರತದಲ್ಲಿರುವ ತೆರೆಮರೆಯ ಬಹಿಷ್ಕಾರಕ್ಕೂ ವಾಸ್ತವದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಎರಡೂ ಸಂದರ್ಭಗಳಲ್ಲೂ ಬಹಿಷ್ಕಾರವಿರುವುದು ವಾಸ್ತವ. ಆದರೂ ಮುಸಲ್ಮಾನರನ್ನು “ಓಲೈಸುವಿಕೆಯನ್ನು” ಅನುಭವಿಸಿಕೊಂಡಿದ್ದಾರೆ ಎಂಬ ಅಪವಾದಕ್ಕೀಡು ಮಾಡಲಾಗುತ್ತದೆ. ಆ ಓಲೈಸುವಿಕೆ ರಾಜಕೀಯದಲ್ಲಾಗಲೀ ಅಧಿಕಾರಗಳನ್ನು ಹಂಚಿಕೊಳ್ಳುವುದರಲ್ಲಾಗಲೀ, ಮೇಲೆ ಸ್ಪಷ್ಟವಾಗಿ ತೋರಿಸಿಕೊಟ್ಟಂತೆ ಕಾಣಸಿಗುವುದಿಲ್ಲವಾದರೆ, ಈ ಒಲೈಸುವಿಕೆ ಇನ್ನೆಲ್ಲಿ ಕಾಣಸಿಗುತ್ತದೆ? ಮತ್ತು ಆ ಒಲೈಸುವಿಕೆ ಮುಸಲ್ಮಾನರ ಬದುಕಿನಲ್ಲಿ ಹೇಗೆ ಪ್ರತಿಫಲಿಸುತ್ತದೆ? ಈ ವಿಷಯದಲ್ಲಿ ಡೇಟಾವನ್ನು ಪರಿಶೀಲಿಸುವುದು ಬಹಳ ಮುಖ್ಯ. ಹಾಗೂ ಮುಸಲ್ಮಾನರನ್ನು ಭಾರತದಲ್ಲಿ ಹೇಗೆ ಒಲೈಸಿಕೊಳ್ಳಲಾಗುತ್ತಿದೆ ಎಂದು ಅರಿಯಬೇಕಾಗಿದೆ.

ಮುಸಲ್ಮಾನರ ಸ್ಥಾನದ ಬಗೆಗಿನ ಸರಕಾರದ ಮೊದಲ ಸಮಗ್ರ ಹಾಗೂ ಏಕೈಕ ವರದಿಯ ಪತ್ರವನ್ನು 2006ರಲ್ಲಿ ಪ್ರಕಟಿಸಲಾಯಿತು. ಅದನ್ನು ಪ್ರಧಾನ ಮಂತ್ರಿಯವರ , ‘ಭಾರತದಲ್ಲಿನ ಮುಸಲ್ಮಾನರ ಸಾಮಾಜಿಕ, ಆರ್ಥಿಕ ಮತ್ತು ವಿದ್ಯಾಭ್ಯಾಸದ ಸ್ಥಿತಿಗತಿಗಳ ಉನ್ನತ ಮಟ್ಟದ ಸಮಿತಿ’ಯು ತಯಾರಿಸಿತ್ತು. ಮನಮೋಹನ್ ಸಿಂಗ್ ಅವರಿಂದ ನಿಯೋಜಿಸಲಾದ 2005 ರ ಈ ವರದಿಯನ್ನು ಒಂದೇ ವರ್ಷದಲ್ಲಿ ತಯಾರಿಸಲಾಯಿತು. ಅದು ಸಾಧಾರಣವಾಗಿ ಭಾರತದಲ್ಲಿ ಅಷ್ಟು ಬೇಗ ನಡೆಯುವುದಿಲ್ಲ. ಅದರಲ್ಲೂ ಉನ್ನತ ಮಟ್ಟದ ಸಮಿತಿಗಳು ಅಧಿಕಾರಿಗಳಿಗೆ ಲಾಭಪ್ರದವಾಗಿರುತ್ತವೆ. ಅವರು ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದೇ ಬಹಳ ಅಪರೂಪ.ಅಲ್ಲದೆ ಸಾಧಾರಣವಾಗಿ ಅಂತಹ ಕೆಲಸಕ್ಕೆ ಅವಧಿಯ ವಿಸ್ತರಣೆ ಎಂಬ ಪದ ಅಂಟಿಕೊಂಡಿರುತ್ತದೆ. ಈ ವರದಿಯನ್ನು ಮುಗಿಸಿದ ತುರ್ತಿನಿಂದ ವಿಷಯ ಗಂಭೀರತೆಯ ಅರಿವಾಗುತ್ತದೆ.

ಈ ವರದಿಯನ್ನು ಏಳು ಮಂದಿ, ಎಲ್ಲಾರೂ ಗಂಡಸರೇ, ತಯಾರಿಸಿದ್ದಾರೆ. ಅವರಲ್ಲಿ ಲಾನ್ಕು ಮಂದಿಗೆ ಡಾಕ್ಟರೇಟ್ ಪದವಿಯಿತ್ತು. ರಾಜೇಂದ್ರ ಸಾಚರ್ ಎಂಬು ನಿವೃತ್ತ ನ್ಯಾಯಾಧೀಶರು ಇದರ ಮುಖ್ಯಸ್ಥರಾಗಿದ್ದರು. ಹಾಗೂ ಈ ವರದಿಯನ್ನು ಸಾಚರ್ ಸಮಿತಿಯ ವರದಿ ಎಂದು ಕರೆಯಲಾಗುತ್ತದೆ. 2006ರ ನವೆಂಬರ್ನಲ್ಲಿ ಸಿಂಗ್ ಅವರು ಮಾಡಿದ ಪ್ರಸಿದ್ಧ ಹೇಳಿಕೆಯ ಹಿಂದುಗಡೆ ಈ ವರದಿಯಿತ್ತು. ” ಅಲ್ಪಸಂಖ್ಯಾತರುಗಳು, ಅದರಲ್ಲೂ ಮುಸಲ್ಮಾನ ಸಮುದಾಯದವರು ಸಬಲರಾಗಿ ಅಭಿವೃದ್ಧಿಯ ಸಮಾನ ಫಲಾನುಭವಿಗಳಾಗಬೇಕಾದರೆ ನಾವು ನವೀನ ಯೋಜನೆಗಳನ್ನು ಹೊರತರಬೇಕು. ಅವರಿಗೆ ಸಪನ್ಮೂಲಗಳ ಮೆಲೆ ಮೊದಲ ಹಕ್ಕಿರಬೇಕು. ಕೇಂದ್ರಕ್ಕೆ ಬಹುತೇಕ ಇತರ ಜವಾಬುದಾರಿಗಳಿವೆ. ಒಟ್ಟಿನಲ್ಲಿ ಸಂಪನ್ಮೂಲಗಳ ಲಭ್ಯತೆಯೊಂದಿಗೆ ಅವುಗಳನ್ನು ಜೋಡಿಸಬೇಕು.

ಈ ಸುದ್ದಿಯನ್ನು ಮೊದಲಿಗೆ ಪಿಟಿಐ ಈ ತಲೆಬರಹದೊಂದಿಗೆ ಹೀಗೆ ವರದಿ ಮಾಡಿತು, ” ಅಲ್ಪಸಂಖ್ಯಾತರಿಗೆ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿರಬೇಕು -ಪ್ರಧಾನಿ “. ಇದನ್ನು ದೇಶದಾದ್ಯಂತ ಪ್ರಕಟಿಸಿ ಪ್ರಸಾರ ಮಾಡಿತು. ಅದರಿಂದ ಬಹಳ ಹೆಚ್ಚಾದ ರೋಚ್ಚಿಗೆದ್ದ ಪ್ರತಿಕ್ರಿಯೆಗಳು ಬಂದವು. ಆರೆಸ್ಸೆಸ್ ಅದನ್ನು ಕೂಡಲೇ ಓಲೈಸಿಕೊಳ್ಳುವ ಒಂದು ನಿದರ್ಶನ ಎಂದು ಗುರುತು ಮಾಡಿಟ್ಟುಕೊಂಡಿತು. ಯಾರಿಗಾದರೂ ಭಾರತದ 200 ಮಿಲ್ಲಿಯನ್ ಮುಸಲ್ಮಾನರ ಪರಿಸ್ಥಿತಿಯ ಬಗ್ಗೆ ಇರುವ ಡೇಟಾದ ಬಗ್ಗೆ ತಿಳಿಯದೇ ಇದ್ದರೆ ಅಥವಾ ಅದರ ಬಗೆಗಿನ ಕಥಾನಕಗಳ ಪುರಾವೆಗಳ ಬಗ್ಗೆ ಯಾರು ಅಪರಿಚಿತರಾಗಿರುತ್ತಾರೋ ಅಂಥಹವರಿಗೆ ಮಾತ್ರಾ
ಈ ಮಾತು ನಾಚಿಕೆಗೇಡಿನ ಮಾತಾಗಿ ತೋರುತ್ತದೆ. ಅದಕ್ಕಿಂತ ಹೆಚ್ಚು ಮುಖ್ಯವಾಗಿ ಯಾರಿಗಾದರೂ ಆ ಉನ್ನತ ಮಟ್ಟದ ಸಮಿತಿಯ ವರದಿಯ ಬಗ್ಗೆ ತಿಳಿಯದೇ ಇದ್ದಲ್ಲಿ ಅಂಥಹವರಿಗೆ ಈ ಮಾತು ಅಪಮಾನಕಾರಿಯಾಗಿ ತೋರಬಹುದು.

ಆ ವರದಿಯು ಭಾರತಕ್ಕೆ ಅಪರೂಪವಾದ ಸಂಕ್ಷಿಪ್ತ ಮತ್ತು ನೇರವಾದ ಕರಾರುಗಳಿಂದ ನಿಯೋಜಿಸಲ್ಪಟ್ಟಿತ್ತು ಹಾಗೂ ಅದನ್ನು ಸುಸಂಸ್ಕೃತವಾದ ಸರಳವಾದ ಪಠ್ಯದಲ್ಲಿ ಬರೆಯಲಾಗಿತ್ತು. ಅದರ ವಿಚಾರಣಾ ನಿಬಂದನೆಗಳ ಪ್ರಕಾರ ಆ ಸಮಿತಿಯು ಭಾರತದ ಯಾವಯಾವ ಭಾಗಗಳಲ್ಲಿ ಬಹುತೇಕ ಮುಸಲ್ಮಾನರು ಜೀವಿಸುತ್ತಿದ್ದಾರೆ, ಅವರ ಆರ್ಥಿಕ ಚಟುವಟಿಕೆಗಳ ಭೌಗೋಳಿಕ ವಿನ್ಯಾಸವೇನು , ಅವರ ಆಸ್ತಿಪಾಸ್ತಿಗಳ ಆಧಾರ, ಸಂಪಾದನೆಯ ಮಟ್ಟ, ಅವರ ವಿದ್ಯಾಭ್ಯಾಸ, ಸರಕಾರೀ ಮತ್ತು ಖಾಸಗೀ ಕ್ಷೇತ್ರಗಳಲ್ಲಿ ಅವರ ಉದ್ಯೋಗದ ಪಾಲು, ಅವರ ನಡುವಿನ ಇತರ ಹಿಂದುಳಿದ ವರ್ಗದವರ ಪ್ರಮಾಣ ಮತ್ತು ಆರೋಗ್ಯ ಮತ್ತಿತರ ಸೇವೆಸೌಲಭ್ಯಗಳಿಗೆ ಅವರಿಗಿರುವ ಅವಕಾಶ ಇವುಗಳನ್ನು ಕಂಡು ಹಿಡಿದು ವರದಿ ಮಾಡಬೇಕಿತ್ತು.

ಆ ಸಮಿತಿಯ ತಂಡವು ಲಭ್ಯವಿರುವ ಸರಕಾರೀ ಡೇಟಾಗಳನ್ನು ಅವಲೋಕಿಸಿದರು. ಅಲ್ಲದೆ ಅವರು ಶೈಕ್ಷಣಿಕ ಕ್ಷೇತ್ರದಲ್ಲಿರುವವರು, ಸಮುದಾಯದ ಮತ್ತು ಸರಕಾರೇತರ ಸಂಘಗಳ ವ್ಯಕ್ತಿಗಳು ಮತ್ತು ಗುಂಪುಗಳು, ಅಲ್ಲದೆ ಕೆಲವು ವಿದೇಶೀ ಸರಕಾರಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಸಂಘಗಳು ( ಸಮಿತಿಯು ಇವರಿಗೆಲ್ಲಾ ಧನ್ಯವಾದ ಸಲ್ಲಿಸಿದೆ :- ಯೂನಿಸೆ¥sóï, ಡಿ.ಎ¥sóï.ಐ.ಡಿ. ವಲ್ರ್ಡ್ ಬ್ಯಾಂಕ್, ಕಾಪಾರ್ಟ್, ಆಘಾ ಖಾನ್ ¥sóËಂಡೆಶನ್, ಆಕ್ಸ್ಫ್ಯಾಮ್, ಕೇರ್ ಇಂಡಿಯ, ¥sóÉೂೀರ್ಡ್ ¥sóËಂಡೇಶನ್, ಸಿಎಸ್ಡಿಎಸ್, ಕ್ರೈ, ಇಂಡಿಯನ್ ಸೋಶಿಯಲ್ ಇಂಸ್ಟಿಟ್ಯೂಟ್, ಆಕ್ಶನ್ ಏಡ್, ಪ್ರಥಮ್, ಸೆವಾ ಮತ್ತು ಯುಎನ್ಡಿಪಿ)ಮತ್ತು ಬಹುಮುಖದ ಸಂಸ್ಥೆಗಳನ್ನು ಸಂಪರ್ಕಿಸಿದ್ದರು. ಇದೇನೂ ಅನೌಪಚಾರಿಕವಾಗಿ ಒಟ್ಟು ಮಾಡಿಟ್ಟಂಥ ವರದಿಯಲ್ಲ. ಇದರಲ್ಲಿ ಕಂಡ ಮಾಹಿತಿಗಳು ಸಿಂಗ್ ಅವರಿಗೆ ಅವರು ಅಲ್ಪಸಂಖ್ಯಾತರಿಗೆ ಸಪನ್ಮೂಲಗಳ ಮೇಲೆ ಇರಬೇಕಾದ ಹಕ್ಕಿನ ಆದ್ಯತೆಯ ಬಗ್ಗೆ ಹೇಳಿದ್ದನ್ನು ಹೇಳುವಂತೆ ಮಾಡುವಷ್ಟು ಬೆಚ್ಚಿಬೀಳಿಸುವಂಥಾದ್ದಾಗಿದ್ದವು.

ಸಾಂಸ್ಥಿಕ ಮಟ್ಟದಲ್ಲಿ ಭಾರತೀಯ ಮುಸಲ್ಮಾನರ ವಿರುದ್ಧ ಜರುಗುವ ತಾರತಮ್ಯವನ್ನು ಈ ವರದಿಯು ಗುರುತಿಸಿತ್ತು. ಉದಾಹರಣೆಗೆ, “ಕೆಲವು ಬ್ಯಾಂಕುಗಳು ಮುಸಲ್ಮಾನ ಕೇಂದ್ರಿತ ಪ್ರದೇಶಗಳನ್ನು ‘ನಕಾರಾತ್ಮಕ ಭೌಗೋಳಿಕ ಪ್ರದೇಶಗಳು’ ಎಂದು ಗುರುತಿಸುತ್ತವೆ ಮತ್ತು ಅಂಥಹ ಸ್ಥಳಗಳಲ್ಲಿ ಬ್ಯಾಂಕಿನ ಕ್ರೆಡಿಟ್ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದಿಲ್ಲ. ಡೇಟಾ ಈ ಮಾಹಿತಿಯನ್ನು ಒದಗಿಸಿತು. ಮುಸಲ್ಮಾನರಿಗೆ ಅವರಿಗೆ ಸಿಗಬೇಕಾದ್ದಕ್ಕಿಂತ ಮೂರನೇ ಒಂದು ಭಾಗದಷ್ಟು ಮಾತ್ರಾ ಮುಮ್ಮೊಬಲಗು ಸಿಗುತ್ತದೆ ಅದೂ ಆದ್ಯತೆಯಿರುವ ವಿಭಾಗಗಳೂ ಸೇರಿದಂತೆ. ಮುಸಲ್ಮಾನರು ಜನಸಂಖ್ಯೆಯ 40% ಅಥವಾ ಅದಕ್ಕಿಂತ ಹೆಚ್ಚಿರುವ ಭಾರತದ ಹಳ್ಳಿಗಳಲ್ಲಿ 50% ರಷ್ಟಕ್ಕೆ ರಸ್ತೆಯ ಸೌಲಭ್ಯ ಸಿಗುವ ಸಾಧ್ಯತೆ ಕಡಿಮೆ. ಅಂಥಹ ಸ್ಥಳಗಳಲ್ಲಿ ಬಸ್ ನಿಲ್ದಾಣಗಳೂ, ಆರೋಗ್ಯ ಸೌಲಭ್ಯಗಳೂ, ಶೈಕ್ಷಣಿಕ ಸಂಸ್ಥೆಗಳೂ ಮತ್ತು ಅಂಚೆ ಮತ್ತು ತಂತಿ ಸೌಲಭ್ಯಗಳೂ ಇರುವ ಸಾಧ್ಯತೆಯೂ ಕಡಿಮೆ. ಎಲ್ಲೆಲ್ಲಿ ಮುಸಲ್ಮಾನರು ಬಹುಸಂಖ್ಯೆಯಲ್ಲಿದ್ದಾರೋ ಅಲ್ಲೆಲ್ಲಾ ನಮ್ಮ ಸರಕಾರವು ಕರ್ತವ್ಯಭ್ರಷ್ಟವಾಗಬಹುದು ಮತ್ತು ಸೌಲಭ್ಯಗಳನ್ನು ಒದಗಿಸದೇ ಇರಬಹುದು.

ಉತ್ತರ ಭಾರತದ ಮುಸಲ್ಮಾನ ಮಕ್ಕಳಿಗೆ ಮಾತ್ರವೇ, ಅವರು ತಮ್ಮ ತಾಯಿನುಡಿಯನ್ನು ಬಿಟ್ಟುಕೊಡದಿದ್ದರೆ ನರ್ಸರಿ ಸೌಲಭ್ಯವಿರುವುದಿಲ್ಲ. ಅಂದರೆ ಉರ್ದು ಮಾಧ್ಯಮದ ಅಂಗನವಾಡಿಗಳಿಲ್ಲ. ವಿಧಿ 29ರ ಪ್ರಕಾರ ಎಲ್ಲಾ ಭಾರತೀಯರಿಗೂ , ” ಅವರ ನಿರ್ದಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿ…..ಅವನ್ನು ಉಳಿಸಿಕೊಳ್ಳುವ ಹಕ್ಕು ಇದೆ “. ಬಹಳಷ್ಟು ಬಾರಿ ಉರ್ದು ಶಾಲೆಯ ಶಿಕ್ಷಕರಿಗೆ ಉರ್ದು ತಿಳಿದಿರುವುದಿಲ್ಲ. ಆ ಸ್ಥಾನಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಮೀಸಲಾತಿಯ ಸ್ಥಾನಗಳಾಗಿರುವುದರಿಂದ ಈ ಪರಿಸ್ಥಿತಿ ಇನ್ನೂ ಸಂಕೀರ್ಣವಾಗುತ್ತದೆ. ಅಲ್ಲದೆ ಅಂಥಹ ಅಭ್ಯರ್ಥಿಗಳು ಲಭ್ಯವಿರುವುದಿಲ್ಲ. ಮುಸಲ್ಮಾನರಲ್ಲಿನ ಪರಿಶಿಷ್ಟ ಜಾತಿಯವರಿಗೆ ಈ ಸ್ಥಾನಗಳಿಗೆ ಅವಕಾಶವಿಲ್ಲ.

ಇದು ಮುಸಲ್ಮಾನರನ್ನು ಹೊರಗಿರಿಸುವ ಮತ್ತೊಂದು ಗಂಭೀರ ಸಮಸ್ಯೆ ಎಂದು ಆ ಸಮಿತಿ ಹೊರಗೆಡವಿತು. 1955ರಲ್ಲಿ ಮೊದಲನೆಯ ಹಿಂದುಳಿದ ವರ್ಗದವರ ಸಮಿತಿಯು ತನ್ನ ವರದಿಯನ್ನು ಹೊರತಂದಿತು. ಅದು 2399 ಹಿಂದುಳಿದ ಜಾತಿಗಳನ್ನೂ ಸಮುದಾಯಗಳನ್ನೂ ಗುರುತಿಸಿತು.ಅವುಗಳಲ್ಲಿ 837 ಅತ್ಯಂತ ಹಿಂದುಳಿದ ವರ್ಗಗಳು ಎಂದು ಪರಿಗಣಿಸಲ್ಪಟ್ಟವು. ಅವುಗಳಿಗೆ ವಿಶೇಷವಾದ ಕೇಂದೀಕೃತ ಕಾಳಜಿಯ ಅವಶ್ಯಕತೆಯಿದೆ ಎಂದು ಗುರುತಿಸಲಾಯಿತು. ಆ ಪಟ್ಟಿಯಲ್ಲಿ ಹಿಂದು ಹಾಗೂ ಮುಸಲ್ಮಾನ ಗುಂಪುಗಳಿದ್ದವು. ಹಾಗಿದ್ದಾಗ್ಯೂ ಸಾಚರ್ ವರದಿ ಹೇಳುವಂತೆ , ” ಇದು ಆ ಸಮಿತಿಯ ಮುಖ್ಯಸ್ಥರ ಒಪ್ಪಿಗೆಯನ್ನು ಪಡೆಯಲಿಲ್ಲ. ಅದಕ್ಕೆ ಕೊಟ್ಟ ಕಾರಣಗಳಲ್ಲಿ ಒಂದು ಯಾವುದೆಂದರೆ ಅದು ಮುಸಲ್ಮಾನರು ಮತ್ತು ಕಿರಿಸ್ತಾನರಲ್ಲಿ ಜಾತಿಗಳಿಲ್ಲ.”

ಪರಿಶಿಷ್ಟ ಜಾತಿಯನ್ನು ಮುಸಲ್ಮಾನರಲ್ಲಿ ಬಿಟ್ಟುಬಿಡುವುದು 1936ರಷ್ಟು ಹಿಂದೆಯೇ ನಡೆದಿತ್ತು. ಆಗ ಇಂಪಿರಿಯಲ್ ( ಪರಿಶಿಷ್ಟ ಜಾತಿ) ಆರ್ಡರ್ ಹೀಗೆ ಹೇಳಿತ್ತು, “ಯಾವುದೇ ಭಾರತೀಯ ಕಿರಿಸ್ತಾನ ವ್ಯಕ್ತಿಯನ್ನೂ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗುವುದಿಲ್ಲ.”ಇದರಲ್ಲಿ ಬೌದ್ಧರನ್ನೂ ಸಹ ಹೊರಗಿಡಲಾಗಿತ್ತು. ಮುಸಲ್ಮಾನ ಪಂಗಡಗಳನ್ನು ಇದರಲ್ಲಿ ಸೇರಿಸಲಾಗಿತ್ತು. ಏಕೆಂದರೆ ಅವರನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು. ಆದರೆ ಸೌಲಭ್ಯಗಳನ್ನು ಪಡೆಯದಿರಲು ಅವರನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಅವರನ್ನು ಒಳಗೊಂಡಿರುವುದಕ್ಕೆ ಅರ್ಥವೇ ಇರಲಿಲ್ಲ.

ಈ ಸಾರ್ವಭೌಮತ್ವದ ಕಾನೂನಿನ ಆಧಾರದ ಮೇಲೆಯೇ ಸ್ವತಂತ್ರ ಭಾರತವೂ ಕೂಡ ಮುಸಲ್ಮಾನರನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಲು ತಡೆ ಹಾಕುತ್ತಿದೆ. ಆದರೆ ಆನಂತರ ಬೌದ್ಧರನ್ನು ಅದರಲ್ಲಿ ಸೇರಿಸಿಕೊಳ್ಳಲಾಯಿತು.

ಮುಸಲ್ಮಾನರು ಮತ್ತು ಕಿರಿಸ್ತಾನರಿಗೆ ಮೀಸಲಾತಿಯ ಅಗತ್ಯವಿಲ್ಲ ಏಕೆಂದರೆ ಆ ಧರ್ಮಗಳಲ್ಲಿ ಜಾತಿ ಪಂಗಡಗಳಿಲ್ಲ ಎನ್ನುವ ಸಾಧಾರಣ ನಂಬಿಕೆ ಎರಡು ರೀತಿಯಿಂದ ಸರಿಯಲ್ಲ. ಮೊದಲನೆಯದಾಗಿ ಹಿಂದೂಗಳಲ್ಲಿ ಕೂಡ ಜಾತಿ ಪದ್ಧತಿಯನ್ನು ಸಂವಿಧಾನದಲ್ಲಿ ನಿರಾಕರಿಸಲಾಗಿದೆ ಹಾಗೂ ಅಸ್ಪೃಶ್ಯತೆಯನ್ನು ಯಾರೂ ನಡೆಸದಂತೆ ನಿರ್ಬಂಧಿಸಲಾಗಿದೆ. ಅದು ಒಂದು ಭಾಗದ ಸಮಾಜದಲ್ಲಿ ಇದ್ದೇ ಇರುತ್ತದೆ ಎಂದು ನಾವು ಒಪ್ಪುವುದಾದರೆ ಅದು ಸಮಾಜದ ಮತ್ತೊಂದು ಭಾಗದಲ್ಲಿಯೂ ಇರುತ್ತದೆ ಎಂದು ನಾವು ಒಪ್ಪಬೇಕಾಗುತ್ತದೆ. ಅಂದರೆ ಜಾತಿ ಎನ್ನುವುದು ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿ, ಆದರೆ ಅದು ಕಾನೂನು ನೀಡುವ ಸ್ಥಾನವಲ್ಲ. ಎರಡನೆಯದಾಗಿ ಮುಸಲ್ಮಾನರ ಜಾತಿಗುಂಪುಗಳ ಅನಾನುಕೂಲಕರ ಸ್ಥಿತಿಗತಿಗಳ ಬಗ್ಗೆಯೂ ಮತ್ತು ಅವರು ಸಮಾಜದ ಅಂಚಿಗೊತ್ತಿಸಿಕೊಂಡಿರುವ ಬಗ್ಗೆಯೂ ಈಗಗಲೇ ಸಾಕಷ್ಟು ದಾಖಲೆಗಳಿವೆ. ಅವುಗಳ ಅಸ್ಥಿತ್ವವನ್ನು ಅಲ್ಲಗೆಳೆಯಲಾಗುವುದಿಲ್ಲ.

ಅಜರ್ûಲ್ ಮುಸಲ್ಮಾನರು ಹಲಾಲ್ಖೋರ್, ಭಾಂಗಿ, ಲಾಲ್ಬೆಗಿ, ಬೆಡಿಯಾ, ಹಜಾಮ್(ನಾಯಿಂದರು), ಚಿಕ್ ( ಕಟುಕರು),¥sóÀಕಿರ್ ಮತ್ತು ಧೋಬಿ ಮುಂತಾದ ಸಮುದಾಯಗಳ ದಲಿತರೇ ಆಗಿದ್ದಾರೆ. ಧರ್ಮವನ್ನು ಬದಲಾಯಿಸಿದಾಗ ಅವರ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಅವರ ಕಸುಬುಗಳಿಗೆ ಅಂಟಿಕೊಂಡಿರುವ ಕಳಂಕದಿಂದಾಗಿ, ಆ ಕಸುಬುಗಳಿಗನ್ನು ನಡೆಸುವ ಹಿಂದೂಗಳಂತೆಯೇ ಅವರೂ ಸಹ ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಾರೆ.

ಅಜ್ಲ¥sóï ಮುಸಲ್ಮಾನರು ಅಂದರೆ, ಜುಲಾಹ ( ನೇಯ್ಗೆಯವರು), ಇದ್ರಿಸ್ ಅಥವಾ ದರ್ಜಿ, ರಯೀಮ್ ಅಥವಾ ಕುಂಜಾರ(ತರಕಾರಿ ಮಾರುವವರು)ಮುಂತಾದವರು ಓಬಿಸಿ ಸಮುದಾಯಗಳಿಂದ ಮತಾಂತರ ಹೊಂದಿದವರಾಗಿದ್ದು ಅವರನ್ನು ” ಶುದ್ಧ’ ಕಸುಬಿನವರು ಎಂದು ಪರಿಗಣಿಸಲಾಗುತ್ತದೆ. 1950ಯ ಸಾಂವಿಧಾನಿಕ (ಪರಿಶಿಷ್ಟ ಜಾತಿ) ಕ್ರಮದಲ್ಲಿ ‘ಅಶುದ್ಧ ಕಸುಬು’ಗಳಿರುವ ಹಿಂದೂ ಪಂಗಡಗಳಿಗೆ ಮಾತ್ರಾ ಪರಿಶಿಷ್ಟ ಜಾತಿಯ ಸ್ಥಾನ ಕೊಡಲಾಗಿದೆಯೆಂದು ಸಾಚರ್ ವರದಿಯಲ್ಲಿ ಹೇಳಿದೆ. ದಲಿತರಾದ ಮುಸಲ್ಮಾನರನ್ನು ಇತರ ಹಿಂದುಳಿದ ವರ್ಗಗಳಲ್ಲಿ ಸೇರಿಸಿದೆ. ಆದ್ದರಿಂದ ದಲಿತ ಮುಸಲ್ಮಾನರೂ ಹಿಂದುಳಿದ ವರ್ಗದ ಮುಸಲ್ಮಾನರೂ ಒಂದೂ ಮೀಸಲಾತಿ ಗುಂಪಿನಲ್ಲಿ ಸೇರಿಸಲಾಗಿದೆ. ಹಾಗಾಗಿ ದಲಿತ ಮುಸಲ್ಮಾನರು ಉದ್ಯೋಗಕ್ಕಾಗಲೀ ವಿದ್ಯಾಭ್ಯಾಸಕ್ಕಾಗಲೀ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಪಡೆದುಕೊಳ್ಳುವಂತಿಲ್ಲ. 1950 ರ ಶಾಸನವನ್ನು ಎರಡೆರಡು ಬಾರಿ ಬದಲಾಯಿಸಲಾಗಿದೆ. 1956ರಲ್ಲಿ ದಲಿತ ಸಿಕ್ಕರನ್ನು ಸೇರಿಸಲಾಯಿತು ಮತ್ತು 1990 ಯಲ್ಲಿ ದಲಿತ ಬೌದ್ಧರನ್ನು ಸೇರಿಸಲಾಯಿತು. ಅಂದರೆ ದಲಿತ ಮುಸಲ್ಮಾನರನ್ನು ಮತ್ತು ದಲಿತ ಕಿರಿಸ್ತಾನರನ್ನು ಮಾತ್ರಾ ಈ ಮೀಸಲಾತಿಯಿಂದ ಹೊರಗಿಡಲಾಯಿತು. ಇದರಲ್ಲಿ ಗೊಂದಲದ ಸಂಗತಿಯೆಂದರೆ ಸಿಕ್ಕರು ಮತ್ತು ಬೌದ್ಧರನ್ನು ಧಾರ್ಮಿಕ ಅಲ್ಪಸಂಖ್ಯಾತರು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಸಮಿತಿಯು ನಮೂದಿಸಿದೆ. ಆದರೆ ಅವರ ಜೊತೆಗೆ ಮುಸಲ್ಮಾನರು, ಕಿರಿಸ್ತಾನರು, ಪಾರ್ಸೀಗಳು ಮತ್ತು ಜೈನರನ್ನೂ ಸೇರಿಸಿದೆ. ಆದ್ದರಿಂದ ದಲಿತ ಮುಸಲ್ಮಾನರಿಗೆ ಮತ್ತು ದಲಿತ ಕಿರಿಸ್ತಾನರಿಗೆ ಅವರ ಹಕ್ಕುಗಳನ್ನು ನೀಡದಿರುವುದಕ್ಕೆ ಅವರು ಧಾರ್ಮಿಕ ಅಲ್ಪಸಂಖ್ಯಾತರೆನ್ನುವ ಅಧಿಕೃತ ಸ್ಥಾನವೇನೂ ಕಾರಣವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಹೀಗೆಯೇ ಮುಸಲ್ಮಾನ ಪರಿಶಿಷ್ಟ ವರ್ಗದವರಿಗೂ ಪರಿಶಿಷ್ಟ ವರ್ಗದವರಿಗಿರುವ ಮೀಸಲಾತಿ ದಕ್ಕುವುದಿಲ್ಲ. ಇದು ಹೇಗೇ ಏನೋ ನ್ಯಾಯಾಂಗದ ಕಣ್ಣಿಗೆ ಬಿದ್ದಿದೆ. ( ಮುಸಲ್ಮಾನ ಮತ್ತು ಕಿರಿಸ್ತಾನರನ್ನು ಮೀಸಲಾತಿಯಿಂದ ಹೊರಗಿಟ್ಟಿರುವುದನ್ನು ಪುನರ್ಪರಿಶೀಲಿಸಬೇಕು. ಸಿಜೆಐ. – ಹಿಂದೂಸ್ತಾನ್ ಟೈಂಸ್. 9 ಜನವರಿ 2020) ಆದರೆ ಅದರ ಬಗ್ಗೆ ಇದುವರೆಗೂ ಏನನ್ನೂ ಮಾಡಿಲ್ಲ.ಸಾಚರ್ ವರದಿಯು ಉತ್ತರಪ್ರದೇಶದ ಬಂಜಾರಾ ಆದಿವಾಸಿಗಳ ಬಗ್ಗೆ ಬರೆಯುತ್ತಾ ಆ ಪಂಗಡದ ಹಿಂದೂಗಳನ್ನು ಪರಿಶಿಷ್ಟ ವರ್ಗದ ಮೀಸಲಾತಿಗೆ ಒಳಪಡಿಸಿದ್ದು ಆ ಪಂಗಡದ ಮುಸಲ್ಮಾನರನ್ನು ಹೊರಗಿಟ್ಟಿದ್ದನ್ನು ಉಲ್ಲೇಖಿಸುತ್ತದೆ. ಅರ್ಜಲ್ ಮತ್ತು ಅಜû್ಲ¥sóïಗಳನ್ನು ಮಂಡಲ್ ಸಮಿತಿಯು ಒಂದು ಮಾಡಿ, ಸರ್ವವೂ ಒಟ್ಟುಗೂಡಿದ ಓಬಿಸಿ ವರ್ಗದಲ್ಲಿ ಸೇರಿಸಿತು. ” ಅವುಗಳು ಎದುರಿಸುವ ಬೇರೆಬೇರೆ ವಿಧದ ಕಷ್ಟಕರ ಅನುಭವಗಳನ್ನು ಪರಿಗಣಿಸಲಿಲ್ಲ’. ಸಾಚರ್ ವರದಿಯ ಪ್ರಕಾರ, ” ಸಮಾಜದ ಶ್ರೇಣಿಯಲ್ಲಿ ಅತ್ಯಂತ ಕೆಳಗಿರುವ ಅರ್ಜಲ್ ಅತ್ಯಂತ ಹೀನ ಸ್ಥಿತಿಯಲ್ಲಿದ್ದಾರೆ. ಅವರನ್ನು ಬೇರೆಯಾಗಿ ಪರಿಗಣಿಸಬೇಕು. ಅವರನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಿಬಿಡುವುದು ಅತ್ಯಂತ ಸೂಕ್ತ.”

ಸುಮಾರು ಎರಡು ಮಿಲ್ಲಿಯನ್ ಮುಸಲ್ಮಾನರು ಪರಿಶಿಷ್ಟ ಜಾತಿ ಮತ್ತು ವರ್ಗಗಳಂತೆ ಗುರುತಿಸಿಕೊಂಡರೂ ಸಹ ಅವರುಗಳಿಗೆ ಪರಿಶಿಷ್ಟ ಜಾತಿಯವರಿಗಿದ್ದಂತೆ ಮೀಸಲಾತಿಯ ಹಕ್ಕಿಲ್ಲ. ಮುಸಲ್ಮಾನರನ್ನು ಹೊರಗಿರಿಸುವ ಸಮಸ್ಯೆ ಓಬಿಸಿ ಮುಸಲ್ಮಾನರವರೆಗೂ ಹೋಗುತ್ತದೆ. ಬಹಳಷ್ಟು ರಾಜ್ಯಗಳು ತಯಾರಿಸಿದ ಓಬಿಸಿ ಪಟ್ಟಿಯಲ್ಲಿ ಬಹುತೇಕ ಕಡಿಮೆ ಸವಲತ್ತುಗಳುಳ್ಳ ಜಾತಿಗಳು ಮತ್ತು ಸಮುದಾಯಗಳನ್ನು ಬಿಟ್ಟುಬಿಡಲಾಗಿದೆ ಎಂದು ಆ ವರದಿಯು ತೋರಿಸಿತು. ಮತ್ತಿತರ ಗುಂಪುಗಳು ಕೇಂದ್ರದ ಪಟ್ಟಿಯಲ್ಲಿ ಮಾತ್ರಾ ಗುರುತಿಸಲ್ಪಟ್ಟಿದ್ದವು ಆದರೆ ರಾಜ್ಯಗಳ ಪಟ್ಟಿಗಳಲ್ಲಿರಲಿಲ್ಲ. ಅಥವಾ ಇದರ ಅದಲುಬದಲಾಗಿ ಹೋಗಿತ್ತು. ಉದಾಹರಣೆಗೆ ಬಿಹಾರದಲ್ಲಿ ಕಲ್ವಾರ್, ರಾಜಾಸ್ಥಾನದಲ್ಲಿ ಮನ್ಸೂರಿ, ಉತ್ತರಪ್ರದೇಶದಲ್ಲಿ ಆತಿಶ್ಬಾeóï ಮತ್ತು ಪಷ್ಚಿಮ ಬಂಗಾಲದಲ್ಲಿ ಚುರಿಹಾರರು.

ಗುಜರಾತಿನಲ್ಲಿ ಮಾನವಶಾಸ್ತ್ರಜ್ಞ ಸರ್ವೆಯವರು ಒಟ್ಟು ಎಂಭತ್ತೈದು ಮುಸಲ್ಮಾನ ಸಮುದಾಯಗಳನ್ನು ಗುರುತಿಸಿದ್ದರು. ಅವರಲ್ಲಿ ಎಪ್ಪತ್ತಾರು ಸಮುದಾಯಗಳು ಅಶ್ರ¥sóï ಆಗಿರಲಿಲ್ಲ. ( ಮೇಲ್ವರ್ಗದವರಾಗಿರಲಿಲ್ಲ.) ಅಂದರೆ ಅವರು ಓಬಿಸಿಯವರೋ ಅಥವಾ ಪರಿಶಿಷ್ಟ ಜಾತಿಯವರೋ ಆಗಿದ್ದರು. ಆದರೆ ಅವರಲ್ಲಿ 22 ಸಮುದಾಯದವರು ಮಾತ್ರಾ ಕೇಂದ್ರದ ಓಬಿಸಿ ಪಟ್ಟಿಯಲ್ಲಿದ್ದರು ಹಾಗೂ ಇಪ್ಪತ್ತೇಳು ಸಮುದಾಯದವರು ರಾಜ್ಯದ ಪಟ್ಟಿಯಲ್ಲಿದ್ದರು. ಉತ್ತರಪ್ರದೇಶದಲ್ಲಿ ಅರವತ್ತೇಳರಲ್ಲಿ ಅರವತ್ತೊಂದು ಸಮುದಾಯದವರು ಔದ್ಯೋಗಿಕ ಜಾತಿಗಳಿಂದ ಬಂದವರಾಗಿದ್ದರು. ಆದರೆ ಕೇಂದ್ರ ಮತ್ತು ರಾಜ್ಯದ ಪಟ್ಟಿಗಳಲ್ಲಿ ಮೂವತ್ತೆರಡು ಸಮುದಾಯಗಳು ಮಾತ್ರಾ ಇದ್ದವು. ಮಧ್ಯ ಪ್ರದೇಶವು ಮೂವತ್ತೇಳು ಸಮುದಾಯಗಳನ್ನು ಗುರುತಿಸಿತು. ಆದರೆ ಕೇಂದ್ರದ ಪಟ್ಟಿಯಲ್ಲಿ ಇಪ್ಪತ್ತೇಳು ಮಾತ್ರಾ ಇವೆ. ಇದಕ್ಕಿಂತ ಹೆಚ್ಚಿನ ಸಮಸ್ಯೆ ಏನೆಂದರೆ ಬಹಳ ಬಾರಿ ಅಧಿಕಾರಿಗಳು ಮುಸಲ್ಮಾನರಿಗೆ ಅಗತ್ಯವಿರುವ ಜಾತಿಯ ಸರ್ಟಿಫಿûಕೇಟುಗಳನ್ನು ನೀಡುವುದಿಲ್ಲ ಎಂದು ಸಾಚರ್ ವರದಿ ಹೇಳುತ್ತದೆ.

ಜಾತಿಯ ಮತ್ತು ಮತಾಂತರಗಳ ಚರಿತ್ರೆಯ ರೂಪರೇಶೆಗಳಿಂದಾಗಿ ಭಾರತ ಉಪಖಂಡದ ಮುಕ್ಕಾಲು ವಾಸಿ ಮುಸಲ್ಮಾನರು ಬಡ ಹಿಂದುಳಿದ ಸಮುದಾಯಗಳಿಂದ ಬಂದವರಾಗಿದ್ದು ಕಾರಣಾಂತರಗಳಿಂದ ಒಂದು ಗುಂಪಿನೊಡನೆ ಮತಾಂತರಗೊಳ್ಳಲು ಬಯಸಿದವರಾಗಿರುತ್ತಾರೆ. 1911 ರ ಜನಗಣತಿಯಲ್ಲಿ 102 ಮುಸಲ್ಮಾನ ಜಾತಿ ಪಂಗಡಗಳನ್ನು ಗುರುತಿಸಲಾಯಿತು. ಅವುಗಳಲ್ಲಿ 97 ಅಶ್ರ¥sóï ಆಗಿರಲಿಲ್ಲ. ಅವುಗಳಲ್ಲಿ ಕುಂಹರ್, ಮಾಲಿ, ಮೋಚಿ,ರಾಜಪುತ್,ಕಾಯಸ್ಥ ಮತ್ತುಕೋಲಿಗಳೂ ಸೇರಿದಂತೆ ಬಹುತೇಕ ಗುಂಪುಗಳು ಹಿಂದೂಗಳಲ್ಲೂ ಮುಸಲ್ಮಾನರಲ್ಲೂ ಇದ್ದವು.

ಕೆಲವೇ ಕೆಲವು ರಾಜ್ಯಗಳು ಮಾತ್ರಾ ಈ ಬಹಿಷ್ಕಾರವನ್ನು ಸರಿಪಡಿಸುವುದಕ್ಕೋಸ್ಕರ ಕ್ರಿಯಾಶೀಲವಾಗಿದ್ದವು. ಹಿಂದುಳಿದ ವರ್ಗಗಳಿಗಾಗಿ ಇರುವ 40% ಮೀಸಲಾತಿಯಲ್ಲಿ 12 % ಮುಸಲ್ಮಾನರಿಗಾಗಿದ್ದವು. 4% ಲ್ಯಾಟಿನ್ ಕಿರಿಸ್ತಾನರಿಗಿದ್ದು 1% ಕ್ರಿಸ್ಚಿಯನ್ ಆಗಿ ಮತಾಂತರ ಹೊಂದಿದ ಪರಿಶಿಷ್ಟ ಜಾತಿಯವರಿಗಾಗಿ ಇದ್ದವು. ಕರ್ನಾಟಕದಲ್ಲಿ ಬಡ ಮುಸಲ್ಮಾನರಿಗಾಗಿ 4% ಮೀಸಲಾತಿಯಿತ್ತು. ತನ್ನ ಹಿಂದುಳಿದ ವರ್ಗದವರ ಪಟ್ಟಿಯಲ್ಲಿ ಲಬ್ಬೈಗಳು ಮತ್ತು ಡೆಕ್ಕನಿಗಳನ್ನು ತಮಿಳುನಾಡು ಸೇರಿಸಿದೆ. ಒಟ್ಟಿನಲ್ಲಿ 18% ಮೀಸಲಾತಿಯಿರುವ ತನ್ನ ಅತ್ಯಂತ ಹಿಂದುಳಿದ ವರ್ಗದಲ್ಲಿ ಬೀಹಾರ್ ಕೆಲವು ಮುಸಲ್ಮಾನ ಗುಂಪುಗಳನ್ನು ಸೇರಿಸಿದೆ. ¥sóÉಬ್ರುವರಿ 20202ರಲ್ಲಿ ಮಹಾರಾಷ್ಟ್ರ ಒಕ್ಕೂಟದ ಮೈತ್ರಿ ಸರಕಾರದ ಒಬ್ಬ ಮಂತ್ರಿ 5% ಮೀಸಲಾತಿಯನ್ನು ಮುಸಲ್ಮಾನರಿಗೆ ನೀಡಲಾಗುವುದೆಂದು ಘೋಷಿಸಿದರು. ಆದಾಗ್ಯೂ ಇದುವರೆಗೆ ಇದರ ಬೆಳವಣಿಗೆಯೇನೂ ಕಂಡುಬಂದಿಲ್ಲ.

ಅಂದರೆ, ಬಹಿಷ್ಕಾರವನ್ನು ರಾಜ್ಯವು ಗುರುತಿಸಿ ಒಪ್ಪಿಕೊಂಡಿದೆ ಎಂದರ್ಥ. ಹಿಂದೆ ಉಲ್ಲೇಖಿಸಿದ 2002ರ ವೆಂಕಟಾಚಲಯ್ಯ ವರದಿಯಲ್ಲಿ ಮುಸಲ್ಮಾನರ ರಾಜಕೀಯ ಪ್ರತಿನಿಧಿತ್ವದ ಬಗ್ಗೆ ವಾಜಪೇಯಿ ಸರಕಾರಕ್ಕೆ ಹೀಗೆ ಹೇಳಿದೆ; “ಹಿಂದುಳಿದ ವರ್ಗಗಳನ್ನು ಅಭಿವೃದ್ಧಿಗೊಳಿಸುವ ಪ್ರಯತ್ನಗಳಲ್ಲಿ, ಹಿಂದುಳಿದ ವರ್ಗದವರ ಪಟ್ಟಿಯಲ್ಲಿ ಗುರುತಿಸಿಕೊಂಡು ಸೇರಿಸಲ್ಪಟ್ಟಿರುವ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಸೇರಿದ, ಹಾಗೂ ವಾಸ್ತವದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗದವರನ್ನು ಅತ್ಯಂತ ಕಾಳಜಿಯಿಂದ, ಹಿಂದುಗಳಲ್ಲಿರುವ ಅವರದೇ ಪ್ರತಿರೂಪಗಳೊಟ್ಟಿಗೇ ಪರಿಗಣಿಸಬೇಕು”. ಇದನ್ನು ವಾಜಪೇಯಿ ಸರಕಾರ ಕಡೆಗಣಿಸಿತು.

ಸಾಚರ್ ಸಮಿತಿಯು ಮುಸಲ್ಮಾನರ ಸರಕಾರೀ ಉದ್ಯೋಗಗಳ ಬಗ್ಗೆಯೂ ಡೇಟಾಗಳನ್ನು ಅವಲೋಕಿಸಿತು. ಹಾಗೂ ಸರಕಾರೀ ಉದ್ಯೋಗಗಳಲ್ಲಿ ಅವರ ಪ್ರತಿನಿಧಿತ್ವ ಜನಸಂಖ್ಯೆಯಲ್ಲಿನ ಅವರ ಭಾಗದ ಮೂರನೇ ಒಂದರಷ್ಟಿದೆ ಎಂದೂ ಅದು ಮುಖ್ಯವಾಗಿ ಕೆಳಮಟ್ಟದ ಉದ್ಯೋಗಗಳಲ್ಲಿ ಇದೆಯೆಂದೂ ಎಂದು ಕಂಡುಕೊಂಡಿತು. ವಿವಿಧ ಇಲಾಖೆಗಳಿಂದ ತಂದೊಪ್ಪಿಸಿದ ಡೇಟಾಗಳ ಪ್ರಕಾರ, 88 ಲಕ್ಷ ರಾಜ್ಯ ಹಾಗೂ ಕೇಂದ್ರ ಸರಕಾರದ ಉದ್ಯೋಗಿಗಳಲ್ಲಿ ಬರೇ 4.9% ಮುಸಲ್ಮಾನರಿದ್ದಾರೆ.

ರೈಲ್ವೇ ಇಲಾಖೆಯಲ್ಲಿ 4.9% ಇದ್ದರು ಮತ್ತು ಸ್ಟೇಟ್ ಬ್ಯಾಂಕ್ ಮತ್ತು ರೆಸರ್ವ್ ಬ್ಯಾಂಕುಗಳಲ್ಲಿ 2.2 % ಇದ್ದರು. ಸೆಂಟ್ರಲ್ ಪಬ್ಲಿಕ್ ಸೆಕ್ಟರಿನಲ್ಲಿ 3.3.% ಮುಸಲ್ಮಾನರಿದ್ದರು. ರಾಜ್ಯ ಫಿಎಸ್ಯೂನಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿತ್ತು. ಅವರು ಇಲ್ಲಿ 10.8% ಇದ್ದರು.

ಅವರ ಸಂಖ್ಯೆ ಪೂರ್ಣ ಸತ್ಯವನ್ನು ನುಡಿಯುತ್ತಿರಲಿಲ್ಲ. ರೈಲ್ವೇಯಲ್ಲಿ 98.7% ಮುಸಲ್ಮಾನರು ಕೆಳಮಟ್ಟದ ಉದ್ಯೋಗಗಳಲ್ಲಿದ್ದರು. ಬರಿಯ 1.8% ಉದ್ಯೋಗಿಗಳು ಗ್ರೂಪ್ ಎ ಅಥವಾ ಗ್ರೂಪ್ ಬಿ ಉದ್ಯೋಗಿಗಳಾಗಿದ್ದರು. ಇದಕ್ಕೆ ಇವುದ್ರ್ಧವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ಯೋಗಿಗಳು ಈ ಗುಂಪಿನಲ್ಲಿ 18% ಇದ್ದರು.

ಸರಕಾರೀ ಉದ್ಯೋಗ ಎರಡು ಕಾರಣಗಳಿಗಾಗಿ ಅಪೇಕ್ಷಣೀಯವಾಗಿದೆ. ಮೊದಲನೆಯದಾಗಿ ಭಾರತದ ಸಾಂಸ್ಥಿಕ ವಿಭಾಗದಲ್ಲಿ ಭಾರತ ಸರಕಾರವು ಅತ್ಯಂತ ದೊಡ್ಡ ಉದ್ಯೋಗದಾತವಾಗಿದೆ. ಡೇಟಾವನ್ನು ಆ ಸಮಿತಿಯು ಸಂಗ್ರಹಿಸಿದಾಗ 2004ರಲ್ಲಿ, ಸಾಂಸ್ಥಿಕ ವಿಭಾಗದ ಎಲ್ಲಾ ಉದ್ಯೋಗಗಳಲ್ಲಿ 70% ಸರಕಾರೀ ಉದ್ಯೋಗಗಳಾಗಿದ್ದವು ಮತ್ತು 30% ಮಾತ್ರಾ ಖಾಸಗಿ ಉದ್ಯೋಗಗಳಾಗಿದ್ದವು. ಆದ್ದರಿಂದ ಮುಸಲ್ಮಾನರೂ ಮತ್ತಿತರ ಅಂಚಿಗೆ ಸರಿಸಲ್ಪಟ್ಟ ಜನರಿಗೆ ಇಲ್ಲಿ ಉದ್ಯೋಗ ದೊರಕುವುದು ಅತ್ಯಂತ ಮಹತ್ವದ ವಿಷಯವಾಗಿದೆ.

ಎರಡನೆಯದಾಗಿ ಸರಕಾರೀ ಉದ್ಯೋಗ ದೊರಕುವುದರಿಂದ ಜನರಿಗೆ ಬೇರೆಯವರಿಂದ ಹೊರಿಸಲ್ಪಟ್ಟ ಅಥವಾ ತಮಗೆ ತಾವೇ ಊಹಿಸಿಕೊಂಡಂತ ಒಂದು ಪ್ರಾಮುಖ್ಯತೆ, ಸ್ಥಾನಮಾನಗಳು ದೊರಕುತ್ತವೆ. ಇದರಿಂದಾಗಿ ಅವರಿಗೆ ಸರಕಾರದ ಪ್ರತಿನಿಧಿಗಳೆಂಬ ಸ್ಥಾನ ಗೌರವ ಮತ್ತು ಸ್ಥಾನಕ್ಕೆ ತಕ್ಕ ಸವಲತ್ತುಗಳೂ ದೊರೆಯುತ್ತವೆ. ಆ ವರದಿಯು , ಒಂದು ಬಹುತ್ವವಿರುವ ಸಮಾಜದಲ್ಲಿ ಸಮವಾದ ಭಾಗವಹಿಸುವಿಕೆಯಿರುವ ಆಡಳಿತವನ್ನು ನಡೆಸಲು ಒಂದು ಸಮಂಜಸವಾದ ಪ್ರತಿನಿಧಿತ್ವದ ಅವಶ್ಯಕತೆಯಿದೆ.

ಭಾರತೀಯ ಆಡಳಿತ ಸೇವೆಯಲ್ಲಿರುವ, ಭಾರತೀಯ ಪೋಲೀಸು ಸೇವೆಯಲ್ಲಿರುವ ಮತ್ತು ಭಾರತೀಯ ವಿದೇಶೀ ಸೇವೆಯಲ್ಲಿರುವ ಉನ್ನತಮಟ್ಟದ ಅಧಿಕಾರಿಗಳಲ್ಲಿ 3.2 % ಮಾತ್ರಾ ಮುಸಲ್ಮಾನರಾಗಿದ್ದರು. ಈ ಸಂದರ್ಭದಲ್ಲಿ ಪರೀಕ್ಷೆಯನ್ನು ಎದುರಿಸಿದ ಮುಸಲ್ಮಾನರ ಸಂಖ್ಯೆಯೇ ಕಡಿಮೆಯಿತ್ತೆಂಬುದನ್ನು ಸಮಿತಿಯು ಒಪ್ಪಿಕೊಂಡಿತು.(4.9%) ಅವರ ಯಷಸ್ಸಿನ ಪ್ರಮಾಣವೂ ಸಹ ಸಾಚರ್ ಸಮಿತಿಯು ಮುಸಲ್ಮಾನರ ಸರಕಾರೀ ಉದ್ಯೋಗಗಳ ಬಗ್ಗೆಯೂ ಡೇಟಾಗಳನ್ನು ಅವಲೋಕಿಸಿತು. ಹಾಗೂ ಸರಕಾರೀ ಉದ್ಯೋಗಗಳಲ್ಲಿ ಅವರ ಪ್ರತಿನಿಧಿತ್ವ ಜನಸಂಖ್ಯೆಯಲ್ಲಿನ ಅವರ ಭಾಗದ ಮೂರನೇ ಒಂದರಷ್ಟಿದೆ ಎಂದೂ ಅದು ಮುಖ್ಯವಾಗಿ ಕೆಳಮಟ್ಟದ ಉದ್ಯೋಗಗಳಲ್ಲಿ ಇದೆಯೆಂದೂ ಎಂದು ಕಂಡುಕೊಂಡಿತು. ವಿವಿಧ ಇಲಾಖೆಗಳಿಂದ ತಂದೊಪ್ಪಿಸಿದ ಡೇಟಾಗಳ ಪ್ರಕಾರ, 88 ಲಕ್ಷ ರಾಜ್ಯ ಹಾಗೂ ಕೇಂದ್ರ ಸರಕಾರದ ಉದ್ಯೋಗಿಗಳಲ್ಲಿ ಬರೇ 4.9% ಮುಸಲ್ಮಾನರಿದ್ದಾರೆ.

ರೈಲ್ವೇ ಇಲಾಖೆಯಲ್ಲಿ 4.9% ಇದ್ದರು ಮತ್ತು ಸ್ಟೇಟ್ ಬ್ಯಾಂಕ್ ಮತ್ತು ರೆಸರ್ವ್ ಬ್ಯಾಂಕುಗಳಲ್ಲಿ 2.2 % ಇದ್ದರು. ಸೆಂಟ್ರಲ್ ಪಬ್ಲಿಕ್ ಸೆಕ್ಟರಿನಲ್ಲಿ 3.3.% ಮುಸಲ್ಮಾನರಿದ್ದರು. ರಾಜ್ಯ ಫಿಎಸ್ಯೂನಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿತ್ತು. ಅವರು ಇಲ್ಲಿ 10.8% ಇದ್ದರು.

ಅವರ ಸಂಖ್ಯೆ ಪೂರ್ಣ ಸತ್ಯವನ್ನು ನುಡಿಯುತ್ತಿರಲಿಲ್ಲ. ರೈಲ್ವೇಯಲ್ಲಿ 98.7% ಮುಸಲ್ಮಾನರು ಕೆಳಮಟ್ಟದ ಉದ್ಯೋಗಗಳಲ್ಲಿದ್ದರು. ಬರಿಯ 1.8% ಉದ್ಯೋಗಿಗಳು ಗ್ರೂಪ್ ಎ ಅಥವಾ ಗ್ರೂಪ್ ಬಿ ಉದ್ಯೋಗಿಗಳಾಗಿದ್ದರು. ಇದಕ್ಕೆ ಇವುದ್ರ್ಧವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ಯೋಗಿಗಳು ಈ ಗುಂಪಿನಲ್ಲಿ 18% ಇದ್ದರು.

ಸರಕಾರೀ ಉದ್ಯೋಗ ಎರಡು ಕಾರಣಗಳಿಗಾಗಿ ಅಪೇಕ್ಷಣೀಯವಾಗಿದೆ. ಮೊದಲನೆಯದಾಗಿ ಭಾರತದ ಸಾಂಸ್ಥಿಕ ವಿಭಾಗದಲ್ಲಿ ಭಾರತ ಸರಕಾರವು ಅತ್ಯಂತ ದೊಡ್ಡ ಉದ್ಯೋಗದಾತವಾಗಿದೆ. ಡೇಟಾವನ್ನು ಆ ಸಮಿತಿಯು ಸಂಗ್ರಹಿಸಿದಾಗ 2004ರಲ್ಲಿ, ಸಾಂಸ್ಥಿಕ ವಿಭಾಗದ ಎಲ್ಲಾ ಉದ್ಯೋಗಗಳಲ್ಲಿ 70% ಸರಕಾರೀ ಉದ್ಯೋಗಗಳಾಗಿದ್ದವು ಮತ್ತು 30% ಮಾತ್ರಾ ಖಾಸಗಿ ಉದ್ಯೋಗಗಳಾಗಿದ್ದವು. ಆದ್ದರಿಂದ ಮುಸಲ್ಮಾನರೂ ಮತ್ತಿತರ ಅಂಚಿಗೆ ಸರಿಸಲ್ಪಟ್ಟ ಜನರಿಗೆ ಇಲ್ಲಿ ಉದ್ಯೋಗ ದೊರಕುವುದು ಅತ್ಯಂತ ಮಹತ್ವದ ವಿಷಯವಾಗಿದೆ.

ಎರಡನೆಯದಾಗಿ ಸರಕಾರೀ ಉದ್ಯೋಗ ದೊರಕುವುದರಿಂದ ಜನರಿಗೆ ಬೇರೆಯವರಿಂದ ಹೊರಿಸಲ್ಪಟ್ಟ ಅಥವಾ ತಮಗೆ ತಾವೇ ಊಹಿಸಿಕೊಂಡಂತ ಒಂದು ಪ್ರಾಮುಖ್ಯತೆ, ಸ್ಥಾನಮಾನಗಳು ದೊರಕುತ್ತವೆ. ಇದರಿಂದಾಗಿ ಅವರಿಗೆ ಸರಕಾರದ ಪ್ರತಿನಿಧಿಗಳೆಂಬ ಸ್ಥಾನ ಗೌರವ ಮತ್ತು ಸ್ಥಾನಕ್ಕೆ ತಕ್ಕ ಸವಲತ್ತುಗಳೂ ದೊರೆಯುತ್ತವೆ. ಆ ವರದಿಯು , ಒಂದು ಬಹುತ್ವವಿರುವ ಸಮಾಜದಲ್ಲಿ ಸಮವಾದ ಭಾಗವಹಿಸುವಿಕೆಯಿರುವ ಆಡಳಿತವನ್ನು ನಡೆಸಲು ಒಂದು ಸಮಂಜಸವಾದ ಪ್ರತಿನಿಧಿತ್ವದ ಅವಶ್ಯಕತೆಯಿದೆ.

ಭಾರತೀಯ ಆಡಳಿತ ಸೇವೆಯಲ್ಲಿರುವ, ಭಾರತೀಯ ಪೋಲೀಸು ಸೇವೆಯಲ್ಲಿರುವ ಮತ್ತು ಭಾರತೀಯ ವಿದೇಶೀ ಸೇವೆಯಲ್ಲಿರುವ ಉನ್ನತಮಟ್ಟದ ಅಧಿಕಾರಿಗಳಲ್ಲಿ 3.2 % ಮಾತ್ರಾ ಮುಸಲ್ಮಾನರಾಗಿದ್ದರು. ಈ ಸಂದರ್ಭದಲ್ಲಿ ಪರೀಕ್ಷೆಯನ್ನು ಎದುರಿಸಿದ ಮುಸಲ್ಮಾನರ ಸಂಖ್ಯೆಯೇ ಕಡಿಮೆಯಿತ್ತೆಂಬುದನ್ನು ಸಮಿತಿಯು ಒಪ್ಪಿಕೊಂಡಿತು.(4.9%) ಪರೀಕ್ಷೆಯಲ್ಲಿ ಅವರ ಯಶಸ್ಸಿನ ಪ್ರಮಾಣವೂ ಸಹ ಮತ್ತೆಲ್ಲಾ ಅಂಕಿಅಂಶಗಳೊಡನೆ ಹೊಂದಿಕೊಳ್ಳುತ್ತಿತ್ತು. ನ್ಯಾಯಾಂಗದಲ್ಲಿ ಓಬೀಸಿಗಳು 23% ಮತ್ತು ಎಸ್ಸಿ/ಎಸ್ಟಿಗಳು 20% ಇದ್ದರೆ ಮುಸಲ್ಮಾನರು 7.8% ಇದ್ದಾರೆ.

ಭದ್ರತಾ ಪಡೆಗಳಲ್ಲಿ ಮುಸಲ್ಮಾನರ ವಿರುದ್ಧ ತಾರತಮ್ಯವಿರುವುದು ನೇರವಾಗೇ ಕಾಣುತ್ತದೆ. ಅವರು ಹುಟ್ಟಿನಿಂದಲೇ ದೇಶದ್ರೋಹಿಗಳೆಂದು ಪರಿಗಣಿಸಲಾಗುತ್ತದೆ, ಹಾಗಾಗಿ ಅವರನ್ನು ಭದ್ರತಾ ಪಡೆಗಳಿಗೆ ಸೇರಿಸುವುದಿಲ್ಲ. ಒಂದು ಲಿಖಿತವಲ್ಲದ ನಿಯಮದಂತೆ, ವಿದೇಶೀ ಪತ್ತೇದಾರಿಕೆಯಲ್ಲಿ ವ್ಯವಹರಿಸುವ ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ (ಆರೇಡಬಲ್ಯೂ) ಮುಸಲ್ಮಾನರನ್ನು ಸೇರಿಸಿಕೊಳ್ಳುವುದಿಲ್ಲ. 13 ನವೆಂಬರ್ 2006ರ ಸಂಚಿಕೆಯಲ್ಲಿ ಔಟ್ಲುಕ್ ಪತ್ರಿಕೆ ಇದರ ಬಗ್ಗೆ ಬರಹವನ್ನು ಪ್ರಕಟಿಸಿತ್ತು.

ಮುಸಲ್ಮಾನರು ಮತ್ತು ಸಿಕ್ಕರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿಲ್ಲ ಎಂಬ ಬರಹದಲ್ಲಿ ಈ ಕತೆಯಿತ್ತು: ಆಗ 2000ರ ಕಾಲ. ಕಾರ್ಗಿಲ್ ಯುದ್ಧದ ನಂತರ ಭಾರತದ ಭದ್ರತಾ ಸಲಕರಣೆಯನ್ನು ಎನ್ಡಿಏ ಸರಕಾರವು ಪುನರ್ರಚಿಸುತ್ತಿತ್ತು. ಆರೇಡಬಲ್ಯೂಒ ದ ವಾಯುವಿಭಾಗದ , ಅಂದರೆ ಏವಿಯೇಶನ್ ರಿಸರ್ಚ್ ಸೆಂಟರ್ (ಎಆರ್ಸಿ)ಯ ಪರೀಕ್ಷೆಯನ್ನು ಕಬೀರನ ಮೊಮ್ಮೊಗನು ಪಾಸು ಮಾಡಿದ್ದ. ಅಗತ್ಯವಿದ್ದ ಎಲ್ಲಾ ಮಾನದಂಡಗಳನ್ನೂ ಅವನು ದಾಟಿ ಬಂದಿದ್ದ .ಅವನನ್ನು ಆ ಉದ್ಯೋಗಕ್ಕೆ ಯೋಗ್ಯನೆಂದು ಪರಿಗಣಿಸಲಾಗಿತ್ತು. ಅವನನ್ನು ಸಂದರ್ಶಿಸಿದ ಸಂದರ್ಶಕರುಗಳು ಅವನನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು. ಅವರಿಗೆ ತಮಗೆ ಬೇಕಾದ ಯುವಕ ಸಿಕ್ಕಿದ್ದಾನೆಂಬುದರಲ್ಲಿ ಸಂಶಯವಿರಲಿಲ್ಲ.

ಆದರೆ ಕೆಲವೇ ಗಂಟೆಗಳ ತರುವಾಯ ಆ ನಿರ್ಧಾರವನ್ನು ಬದಲಿಸಲಾಯಿತು. ಆಯ್ಕೆ ಸಮಿತಿಯ ಸದಸ್ಯರುಗಳು ಆ ಉದ್ಯೋಗಕ್ಕಾಗಿ ಆ ಯುವಕನ ಕ್ಷಮತೆಯ ಬಗ್ಗೆ ಒಂದು ಪ್ರಶ್ನಾರ್ಥಕ ಚಿನ್ಹೆಯನ್ನು ಎತ್ತಿದರು. ಅವನು ಮುಸಲ್ಮಾನನಾಗಿದ್ದ. ಆ ಸಂಸ್ಥೆಯಲ್ಲಿ ಮುಸಲ್ಮಾನರನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದೆಂಬ ಒಂದು ಅಲಿಖಿತ ನಿಯಮವಿತ್ತು. ಮುಸಲ್ಮಾನರಿಗೆ ಸಂಬಂಧಪಟ್ಟಂತೆ ಆ ನಿಯಮವನ್ನು ಇನ್ನೂ ಪಾಲಿಸಲಾಗುತ್ತದೆ. ರಾ ದ ಹಾಲಿಯ ನೌಕರರ ಸಂಖ್ಯೆ ಸುಮಾರು 10,000. 1969ರಿಂದ ಇಲ್ಲಯವರೆಗೆ ಯಾವುದೇ ಮುಸಲ್ಮಾನ ಆಫಿûೀಸರನ್ನು ಭರ್ತಿ ಮಾಡಿಕೊಂಡಿಲ್ಲ. ವಿದೇಶದಲ್ಲಿ ಅತ್ತೇದಾರಿತನ ನಡೆಸುವ ಮುಖ್ಯ ಅಂಗವಾದ ನಾಶನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ (ಎನ್ಟಿಆರೇ) ನಲ್ಲೂ ಇದೇ ಅಲಿಖಿತ ನಿಯಮವಿದೆ.

ಭದ್ರತಾ ಪಡೆಯ ಒಳಗಿನಿಂದಲೇ ಇದಕ್ಕೆ ವಿರೋಧವಿದ್ದರೂ ಕೂಡ ಈ ತಾರತಮ್ಯ ನಡೆಯುತ್ತಲೇ ಇತ್ತು. ರಾ ದ ಹಿಂದಿನ ಮುಖ್ಯಸ್ಥರಾದ ಎ.ಎಸ್.ದುಲತ್ ರವರು ಮುಸಲ್ಮಾನರರನ್ನು ಭರ್ತಿ ಮಾಡಿಕೊಳ್ಳುವುದು ಅಗತ್ಯವಷ್ಟೇ ಅಲ್ಲ, ಅತಿ ಮುಖ್ಯ ಕೂಡಾ ಎಂದು ಹೇಳಿರುವುದನ್ನು ಈ ವರದಿಯು ಉಲ್ಲೇಖಿಸಿತ್ತು. ಅವರು ಹೀಗೆ ಹೇಳಿದ್ದರು, ” ಮುಸಲ್ಮಾನರ ಮನಃಸ್ಥಿತಿಯು ಮುಸಲ್ಮಾನರಲ್ಲದವರನ್ನು ಗೊಂದಲಕ್ಕೀಡು ಮಾಡುತ್ತದೆ. ಎಷ್ಟೇ ಅದನ್ನು ಒಂದು ಸಮುದಾಯದ ಭಾವನೆಗಳು ಎಂದು ಭಾವಿಸಿ ಯಾರಾದರೂ ಒಬ್ಬ ವ್ಯಕ್ತಿ ಅದಕ್ಕೆ ಹೊಂದಿಕೊಳ್ಳಲು ಬಯಸಿದರೂ ಆ ಎಲ್ಲಾ ಸೂಕ್ಷ್ಮಗಳನ್ನೂ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಅದೇ ಒಬ್ಬ ಮುಸಲ್ಮಾನರಾದರೆ ಅವರಿಗೆ ಭಾಷೆಯ ಸಂಸ್ಕೃತಿಯ ಮತ್ತು ಹೋಲಿಕೆಗಳ ಸೂಕ್ಷ್ಮ ಸಂವೇದನೆಯಿರುತ್ತದೆ. ಅಲಿಗರ್ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಾಗಲೀ ಅಥವಾ ಭಾರತೀಯ ಮುಸಲ್ಮಾನ ವಿದ್ಯಾರ್ಥಿಗಳ ಸಂಘದಲ್ಲಾಗಲೀ ಏನು ನಡೆಯುತ್ತಿದೆಯೆಂದು ತಿಳಿಕೊಳ್ಳಲು ಒಬ್ಬ ಮುಸಲ್ಮಾನರಿಗೆ ಅರಿವಿರುತ್ತದೆ. ಅಲ್ಲದೆ ಆ ಸಮುದಾಯವು ಭಾವಿಸುವ ನೋವು, ತಾರತಮ್ಯ ಮತ್ತು ಹೀಯಾಳಿಕೆಗಳನ್ನು ಅಲ್ಲಗಳೆದುಬಿಡಲು ಸಾಧ್ಯವಿಲ್ಲ. ಅದನ್ನೂ ಒಬ್ಬ ಮುಸಲ್ಮಾನರು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಎನ್ಡಿಏ ಸರಕಾರಕ್ಕೆ ಒಂದು ಟಾಸ್ಕ್ ¥sóÉೂೀರ್ಸ್ ತನ್ನ ವರದಿಯನ್ನು ಸಲ್ಲಿಸಿಯಾದಮೇಲೆ, ಅದು ತನ್ನ ಬೇಹುಗಾರಿಕೆಯ ಪಡೆಗಳನ್ನು ಪುನರ್ನಿರ್ಮಾಣಗೊಳಿಸಲಾರಂಭಿಸಿತು.’ ಹೊಸ ಸಂಸ್ಥೆಗಳನ್ನು ಕಟ್ಟುತ್ತಿದ್ದಂತೆಯೇ, ಒಬ್ಬ ಉನ್ನತ ಅಧಿಕಾರಿಯು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು -ಬ್ರಜೇಶ್ ಮಿಶ್ರಾರನ್ನು(ಎನೆಸೆ) ಸಂಪರ್ಕಿಸಿ ಸಲಹೆಗಾಗಿ ಕೇಳಿಕೊಂಡರು.” ಮುಸಲ್ಮಾನರನ್ನು ಈ ಕಟ್ಟಲಾಗುತ್ತಿರುವ ಸಂಸ್ಥೆಗೆ ಸೇರಿಸಿಕೊಳ್ಳಬಹುದೇ ಎಂದು ನಾನು ಅವರನ್ನು ಕೇಳಿದೆ. ಅದರ ಬಗ್ಗೆ ಯೋಚಿಸುವುದಾಗಿ ಅವರು ಮಾತುಕೊಟ್ಟರು. ಆಮೇಲೆ ಅವರಿಂದ ಏನೂ ಉತ್ತರ ಬರಲಿಲ್ಲ.” ಹೀಗೆಂದು ಆ ಅಧಿಕಾರಿ ತಿಳಿಸಿದರು.

ಮಾನಮೋಹನ ಸಿಂಗರು ಪ್ರಧಾನಿಗಳಾಗಿದ್ದಾಗ,ಯುಪಿಏ ಸರಕಾರದಲ್ಲಿ ಎನೆಸೇದ ಮುಖ್ಯಸ್ಥರಾಗಿದ್ದ ಈ ವಿಷಯವನ್ನು ಮತ್ತೆ ಜಿ.ಎನ್.ದೀಕ್ಷಿತರಲ್ಲಿ ಪ್ರಸ್ಥಾಪ ಮಾಡಲಾಯಿತು. ಅವರದಿಯು ಒಬ್ಬ ಅಧಿಕಾರಿ ದೀಕ್ಷಿತ್ ಅವರು ಹೀಗೆ ಹೇಳಿದರೆಂದು ಉಲ್ಲೇಖಿಸಿದರು, “ಅವರು ನಮ್ಮ ಮಾತುಗಳನ್ನು ಆಲಿಸಿ, ದಕ್ಷ ಅಧಿಕಾರಿಗನ್ನು ಭರ್ತಿ ಮಾಡಿಕೊಳ್ಳುವಾಗ ಧಾರ್ಮಿಕ ತಾರತಮ್ಯವಿರಕೂಡದೆಂದರು. ಅದರ ಕೆಲವೇ ದಿನಗಳ ನಂತರ ಅವರು ತೀರಿಕೊಂಡರು. ಅವರ ಆದೇಶಗಳನ್ನು ದಾಖಲಿಸಲಾಗಲಿಲ್ಲ. ಆದ್ದರಿಂದ ಅವು ಅಧಿಕೃತ ನಿಯಮಗಳಾಗಲಿಲ್ಲ. ಹಾಗಾಗಿ ಮುಂಚೆ ಹೇಗಿತ್ತೋ ಪರಿಸ್ಥಿತಿ ಹಾಗೇ ನಡೆಯುತ್ತಿದೆ.”

ರಾಷ್ಟ್ರದ ಆಂತರಿಕ ಬೇಹುಗಾರಿಕೆಯ ಜವಾಬುದಾರಿ ಹೊತ್ತಿರುವ ಇಂಟೆಲಿಜೆಂಸ್ ಬ್ಯುರೋದಲ್ಲಿ ಮುಸಲ್ಮಾನರನ್ನು ನರಸಿಂಹರಾವ್ ಸರಕಾರದಲ್ಲಿ ಸೇರಿಸಿಕೊಳ್ಳಲು ಆರಂಭಿಸಲಾಯಿತು. ಆ ವರದಿಯ ಪ್ರಕಾರ ಮೊದಮೊದಲು ಭರ್ತಿ ಮಾಡಿಕೊಂಡ ಕೆಲವೇ ಕೆಲವು ಅಧಿಕಾರಿಗಳು ಕಾಶ್ಮೀರದಲ್ಲಿನ ದಂಗೆಗಳ ವಿರುದ್ಧದ ಕಾರ್ಯಕ್ರಮದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದರು.” ಅವರಿಗೆ ಕಾಶ್ಮೀರಿಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿತ್ತು. ಅವರ ಸೂಕ್ಷ್ಮ ಸಂವೇದನೆಯಿಂದ ಮಿಲಿಟರೀ ತನ್ನ ಅತ್ಯಂತ ಚಟುವಟಿಕೆಯಲ್ಲಿ ತೊಡಗಿದ್ದ ಕಾಲವಾದ 1994-95ರಲ್ಲಿ ಉತ್ತಮ ಫಲಿತಾಂಶ ದೊರೆಯಿತು.”ವಾಸ್ತವವಾಗಿ ಈ ಅಧಿಕಾರಿಗಳು ಪಾಕೀಸ್ತಾನಿಯರ ಪ್ರಚಾರವನ್ನು ಕಾಶ್ಮೀರದಲ್ಲಿ ದಂಗೆಯು ಹೆಚ್ಚಾಗಿದ್ದ ಕಾಲದಲ್ಲಿ ಎದುರಿಸುವಲ್ಲಿ ನಮಗೆ ಬಹಳ ಸಹಾಯ ಮಾಡಿದರು. ಹಾಗಿದ್ದರೂ ಈ ಪಾಲಿಸಿಯನ್ನು ಅನುಸರಿಸಲಿಲ್ಲ. ನಾನು ಸರಕಾರದಲ್ಲಿ 2020ರಲ್ಲಿ ವಿಚಾರಿಸಿದೆ. ರಾ, ಐಬಿ,ಎನ್‍ಟಿಆರೋ ಮತ್ತ್ಯ್ ಮಿಲಿಟರೀ ಇಂಟೆಲಿಜೆಂಸ್ ಈ ಎಲ್ಲಾ ಸಂಸ್ಥೆಗಳಲ್ಲಿ ಒಬ್ಬರೇ ಒಬ್ಬ ಮುಸಲ್ಮಾನ ಅಧಿಕಾರಿಯಿದ್ದರು. ಹಲವಾರು ವರ್ಷಗಳಿಂದ ಪರಿಸ್ಥಿತಿ ಹೀಗೇ ಇತ್ತು ಎಂದೂ ನನಗೆ ತಿಳಿಸಲಾಯಿತು.

ಭದ್ರತಾ ಪಡೆಯ ಇತರೆಡೆಗಳಲ್ಲಿ ಸಾಚರ್ ವರದಿಯು ಇರುವ 19 ಲಕ್ಷ ಮಂದಿ ಉದ್ಯೋಗಿಗಳಲ್ಲಿ 5 ಲಕ್ಷದ ವಿಷಯವನ್ನು ಸಂಗ್ರಹಿಸಿತು. ಸರಹದ್ದು ಭದ್ರತಾ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಸಶಸ್ತ್ರ ಸೀಮಾ ದಳ ಮತ್ತು ಕೇಂದ್ರ ರಿಸರ್ವ್ ಪೋಲೀಸ್ ಪಡೆಗಳಲ್ಲಿರುವ ಉದ್ಯೋಗಿಗಳಲ್ಲಿ ಉನ್ನತ ಹುದ್ದೆಗಳಲ್ಲಿ 3.6% ಇದ್ದಾರೆ ಹಾಗೂ 4.2% ಇತರ ಹುದ್ದೆಗಳಲ್ಲಿ ಇದ್ದಾರೆ. ಇರುವ ಎಲ್ಲಾ ಮುಸಲ್ಮಾನರೂ (ಒಟ್ಟು ಸಂಖ್ಯೆಯ96%) ಕೆಳ ಮಟ್ಟದ ಹುದ್ದೆಗಳಲ್ಲಿದ್ದಾರೆ. 2% ಮಾತ್ರಾ ಗ್ರೂಪ್ ಏ ಅಥವಾ ಗ್ರೂಪ್ ಬಿ ಅಧಿಕಾರಿಗಳಾಗಿದ್ದಾರೆ. ಮಿಲಿಟರೀಯಿಂದ ಸಾಚರ್ ಸಮಿತಿಗೆ ಯಾವುದೋ ಕಾರಣಕ್ಕೆ ಡೇಟಾವನ್ನು ಒದಗಿಸಲಿಲ್ಲ. ಆದರೆ 1999ರಲ್ಲಿ ಹಿಂದಿನ ರಕ್ಷಣಾ ಮಂತ್ರಿಗಳಾದ ಮುಲಾಯಮ್ ಸಿಂಗ್ ಯಾದವ್ ಅವರು ಹೀಗೆ ಹೇಳಿದ್ದರು, ” ಭಾರತದ ಸೇನೆಯಲ್ಲಿರುವ ಒಂದು ಮಿಲಿಯನ್ ಉದ್ಯೋಗಿಗಳಲ್ಲಿ 1% ಮಾತ್ರಾ ಮುಸಲ್ಮಾನರಾಗಿದ್ದಾರೆ.’

ಇಲ್ಲಿ ತೋರಿಸಿರುವ ಅಂಶಗಳು ಮುಖ್ಯ ಏಕೆಂದರೆ ಅವುಗಳ ಆಧಾರದ ಮೇಲೆ ಕಾರ್ಯಕ್ರಮ ಜರುಗಬಹುದಿತ್ತು. ” ಸ್ಥಾನಗಳಿಗಾಗಿ ಉದ್ಯೋಗ ನೀಡುವಲ್ಲಿ, ರಾಷ್ಟ್ರದ ಸೇವೆಯಲ್ಲಿ ಯಾರಿಗೆ ಸಾಕಷ್ಟು ಪ್ರತಿನಿಧಿತ್ವ ದೊರಕಿಲ್ಲವೆಂದು ಸರಕಾರ ಭಾವಿಸುತ್ತದೆಯೋ ಅಂಥಹ ಹಿಂದುಳಿದ ವರ್ಗದ ಪ್ರಜೆಗಳಿಗಾಗಿ ಮೀಸಲಾತಿಯನ್ನು ಜಾರಿಗೊಳಿಸಲು ಸಂವಿಧಾನದ ವಿಧಿ 16(4) ಸರಕಾರಕ್ಕೆ ಅಧಿಕಾರ ನೀಡುತ್ತದೆ.”

ವಾಜಪೇಯಿ ಸರಕಾರಕ್ಕೆ ವೆಂಕಟಾಚಲಯ್ಯ ಸಮಿತಿಯು ಹೀಗೆ ಹೇಳಿತ್ತು. ” ರಾಜ್ಯಗಳ ಪೋಲೀಸ್ ಪಡೆಗಳಲ್ಲಿ, ಪ್ಯಾರಾ ಮಿಲಿಟರೀ ದಳದಲ್ಲಿ ಮತ್ತು ಮಿಲಿಟರಿಯಲ್ಲಿ ಕಡಿಮೆ ಪ್ರತಿನಿಧಿತ್ವ ಪಡೆದಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರನ್ನು ವಿಶೇಷವಾದ ಉದ್ಯೋಗ ಭರ್ತಿ ಕಾರ್ಯಕ್ರಮಗಳಿಂದ ಸೇರಿಸಿಕೊಳ್ಳಲು ಹೆಚ್ಚು ಪ್ರಯತ್ನ ನಡೆಯಬೇಕು.” ವಾಜಪೇಯಿ ಸರಕಾರದಿಂದಲಾಗಲೀ ಆಮೇಲಿನ ಸರಕಾರಗಳಿಂದಾಗಲೀ ಈ ವಿಷಯದಲ್ಲಿ ಹೆಚ್ಚೇನೂ ನಡೆಯಲಿಲ್ಲ.
ಮನಮೋಹನ ಸಿಂಗ್ ರವರು ಮುಸಲ್ಮಾನರ ವಿರುದ್ಧ ನಡೆದಿರುವ ಸರಕಾರದಿಂದ ಆಗುವ ತಾರತಮ್ಯವನ್ನು ಸರಿಪಡಿಸುತ್ತೇವೆಂದು ಬರಿದೇ ಹೇಳುತ್ತಿದ್ದರೆಂದು ಅವರನ್ನು ದೋಷಿಸಲಾಗುತ್ತಿತ್ತು.

ಟಾಟಾ ಟ್ರಸ್ಟಿನ ವತಿಯಿಂದ ಹೊರಬಂದ 2019ರ ಇಂಡಿಯಾ ಜಸ್ಟಿಸ್ ರಿಪೋರ್ಟ್ ಹೀಗೆ ಹೇಳಿತು, “1999 ರಿಂದ 2013ರ ವರೆಗೆ 15 ವರ್ಷಗಳು ಭಾರತದ ಪೋಲೀಸ್ ಪಡೆಯಲ್ಲಿ ಮುಸಲ್ಮಾನರ ಪ್ರತಿನಿಧಿತ್ವ ಕೆಳ ಮಟ್ಟದಲ್ಲೇ ಇದೆ ಅದು ಕಾಶ್ಮೀರವನ್ನು ಬಿಟ್ಟು ಬೇರೆಡೆಗಳಲ್ಲಿ 3 -4% ಇದೆ. ಕಾಶ್ಮೀರವನ್ನೂ ಸೇರಿಸಿದರೆ ರಾಷ್ಟಿಯ ಸರಾಸರಿ 8% ಮುಟ್ಟುತ್ತದೆ.ಅಂದರೆ ಒಂದು ಕೋಟಿ ಜನಸಂಖ್ಯೆಯಿರುವ ಕಾಶ್ಮೀರದಲ್ಲಿ 130 ಕೋಟಿ ಜನಸಂಖ್ಯೆಯಿರುವ ಮಿಕ್ಕ ಭಾರತದ ಭಾಗಗಳಿಗಿಂತಾ ಹೆಚ್ಚು ಮುಸಲ್ಮಾನ ಪೋಲೀಸರಿದ್ದಾರೆ. ಕೇರಳ, ಪಶ್ಚಿಮ ಬಂಗಾಲ, ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ‘ಇತರ ಹಿಂದುಳಿದ ವರ್ಗಗಳ” ಅಡಿಯಲ್ಲಿ ಮುಸಲ್ಮಾನರಿಗೆ ಮೀಸಲಾತಿಯಿದೆ. ಈ ವರದಿಯ ಪ್ರಕಾರ 2013ರಲ್ಲಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿಯ ವಾರ್ಷಿಕ ವರದಿಯಲ್ಲಿ ಪೋಲೀಸ್ ಪಡೆಯಲ್ಲಿ ಮುಸಲ್ಮಾನರ ಪ್ರತಿನಿಧಿತ್ವವನ್ನು ವರದಿ ಮಾಡುವುದನ್ನು ನಿಲ್ಲಿಸಿದೆ.

ಅಂಚೆ ಮತ್ತು ತಂತಿ ಇಲಾಖೆಯಲ್ಲಿ 2.7 ಲಕ್ಷ ಉದ್ಯೋಗಿಗಳಿದ್ದು ಅವರಲ್ಲಿ 5% ಮುಸಲ್ಮಾನರಿದ್ದಾರೆ ಅದೂ ಹೆಚ್ಚಾಗಿ ಗ್ರೂಪ್ ಡಿ ಯಲ್ಲಿ. ವಿಶ್ವವಿದ್ಯಾಲಯಗಳಲ್ಲಿ 3.7% ಮುಸಲ್ಮಾನ ಪ್ರಾಧ್ಯಾಪಕರಿದ್ದಾರೆ, ಅವರ ಸಂಖ್ಯೆ ಎಸ್ಸಿ/ಎಸ್ಸ್ಟಿ ಗಳ ಸಂಖ್ಯೆಯಲ್ಲಿ (7.4%) ಅರ್ಧದಷ್ಟಿದೆ.

ಸರಕಾರದಿಂದ ಬಹಿಷ್ಕಾರ ಮತ್ತು ತಾರತಮ್ಯಗಳನ್ನೂ ಸಮಾಜದ ದೊಡ್ಡ ಭಾಗಗಳಿಂದ ತಾರತಮ್ಯವನ್ನೂ ಅನುಭವಿಸುವ ದೇಶದ ಮುಸಲ್ಮಾನ ಸಮುದಾಯದಲ್ಲಿ ರಾಷ್ಟ್ರದಲ್ಲೇ ಅತಿ ಹೆಚ್ಚಿನ ಸ್ವಯಮ್-ಉದ್ಯೋಗ ನಡೆಸುವವರಿದ್ದಾರೆ.(39.4%) ಈ ಸಂಖ್ಯೆ ಹಿಂದೂಸ್ವ-ಉದ್ಯೋಗಿಗಳಿಗಿಂತಾ (29.6%) ಮತ್ತು ಎಸ್ಸಿ/ಎಸ್ಟಿಗಳಿಗಿಂತಾ(22.9%) ಹೆಚ್ಚು. ಮುಸಲ್ಮಾನ ಮಹಿಳೆಯರು (29.1%) ಹಿಂದು ಮಹಿಳೆಯರಿಗಿಂತಾ(14.9%) ಎರಡರಷ್ಟು ಮನೆಯಲ್ಲೇ ಸ್ವ-ಉದ್ಯೋಗ ನಡೆಸುವವರಿದ್ದಾರೆ. ನಗರದ ಅನೌಪಚಾರಿಕ ವಿಭಾಗಗಳಲ್ಲಿ ಕೆಲಸ ಮಾಡುವ ಮುಸಲ್ಮಾನರು 92.1% ಇದ್ದಾರೆ. ಅದೇ ವರ್ಗದಲ್ಲಿನ ಹಿಂದೂಗಳು 76.9% ಇದ್ದಾರೆ. ಒಂದು ನಿರ್ದಿಷ್ಟ ಕೆಲಸದ ಸ್ಥಳವಿಲ್ಲದವರು ಮತ್ತು ಮನೆಯಿಂದಲೇ ಕೆಲಸ ಮಾಡುವ ಮುಸಲ್ಮಾನರು 45.3 % ಇದ್ದಾರೆ. ಅದೇ ರೀತಿಯ ಹಿಂದೂಗಳು 38.1% ಇದ್ದಾರೆ. ಸರಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಕೂಡ ಮುಸಲ್ಮಾನ ಪ್ರಜೆಗಳು ಇದೇ ರೀತಿಯ ಬಹಿಷ್ಕಾರ ಮತ್ತು ತಾರತಮ್ಯವನ್ನು ಎದುರಿಸುತ್ತಾರೆ ಎಂದು ಸಾಚರ್ ಸಮಿತಿಯು ಕಂಡುಕೊಂಡಿತು. ಕೇರಳದಲ್ಲಿ ಬಡತನದ ರೇಖೆಯಿಂದ ಕೆಳಗಿರುವವರೆಂದು ಗುರುತಿಸಿದವರಲ್ಲಿ ಮುಸಲ್ಮಾನರು 30% ಇದ್ದಾರೆ. ಅವರಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದ ಸೌಲಭ್ಯ (28%),ಸಹಕಾರ ಕ್ರೆಡಿತ್ ಸೌಲಭ್ಯ (25%) ಮತ್ತು ಕುರುಡುತನದ ಸೌಲಭ್ಯ (21%) ಇವುಗಳನ್ನು ಹೊರತು ಪಡಿಸಿದರೆ ಮತ್ತಿನ್ನಿತರ ಸರಕಾರೀ ಸೌಲಭ್ಯವಾದ ಬಿಪಿಎಲ್ ಯೋಜನೆಗೆ 5 ರಿಂದ 18 % ಮಾತ್ರಾ ಫಲಾನುಭವಿಗಳಾಗಿದ್ದಾರೆ. ಉತ್ತರಪ್ರದೇಶದಲ್ಲಿ ಬಡವರಲ್ಲಿ 23% ರಷ್ಟು ಮುಸಲ್ಮಾನರಿದ್ದಾರೆ. ಅದಾರೆ ಅವರಲ್ಲಿ ಎರಡು ಯೋಜನೆಗಳನ್ನು ಬಿಟ್ಟು ಬೇರೆ ಸೌಲಭ್ಯದ ಯೋಜನೆಯ ಫಲಾನುಭವಿಗಳು 3 ರಿಂದ 14% ಮಾತ್ರಾ ಇದ್ದಾರೆ.

ತುಲನಾತ್ಮಕವಾಗಿ ಇವುಗಳಿಗಿಂತ ಉತ್ತಮ ಎನ್ನಿಸಿಕೊಳ್ಳುವ ರಾಜ್ಯಗಳಲ್ಲೂ ಸಹ ಅವರ ಜನಸಂಖ್ಯೆಗೆ ಹೋಲಿಸಿದರೆ ಸರಾಕಾರೀ ಯೋಜನೆಗಳ ಮುಸಲ್ಮಾನ ಫಲಾನುಭವಿಗಳ ಸಂಖ್ಯೆ ಕಡಿಮೆಯೇ ಇದೆ. ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಡೇಟಾದ ಪ್ರಕಾರ ಮುಸಲ್ಮಾನರಿಗೆ ಅತ್ಯಂತ ಕಡಿಮೆ ಆರೋಗ್ಯ ಸೇವೆಗಳು ಲಭಿಸುತ್ತಿವೆ. ಆಸ್ಪತ್ರೆಯಲ್ಲಿ ನಡೆಯುವ ಹೆರಿಗೆಗಳಲ್ಲಿ ಅವರಿಗೆ ಅತ್ಯಂತ ಕಡಿಮೆ ನಗರಗಳ ಸಾರ್ವಜನಿಕ ಆಸ್ಪತ್ರೆ ಸೌಲಭ್ಯ ಸಿಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಎಸಿ/ಎಸ್ಟಿಗಳ ನಂತರದ ಅತ್ಯಂತ ಕಡಿಮೆ ಮಟ್ಟದ ಪ್ರವೇಶ ಸಿಕ್ಕಿರುವ ಮಾಹಿತಿಯಿದೆ. ಭಾರತದ ಹಳ್ಳಿಪ್ರದೇಶದಲ್ಲಿ ಮುಸಲ್ಮಾನರಲ್ಲಿ ಅತ್ಯಂತ ಹೆಚ್ಚು ತರಬೇತಿಯಿಲ್ಲದ ಸಹಾಯಕಿಯರಿಂದ ಜರುಗಿದ ಹೆರಿಗೆಗಳಾಗುತ್ತವೆ.
ಸಂಯೋಜಿತ ಶಿಶು ಅಭಿವೃದ್ಧಿ ಯೋಜನೆಗಳು 7.6%ರಷ್ಟು 0-6 ವರ್ಷದ ಮುಸಲ್ಮಾನ ಮಕ್ಕಳನ್ನು ಮಾತ್ರಾ ತಲುಪುತ್ತವೆ. ಅದೇ 10.2%ಎಸ್ಸಿ/ಎಸ್ಟಿ ಮಕ್ಕಳನ್ನೂ ಹಾಗೂ 12.5% ಓಬಿಸಿ ಮಕ್ಕಳನ್ನೂ ತಲುಪುತ್ತವೆ.

22.8% ಮುಸಲ್ಮಾನ ಮಕ್ಕಳು ರಾಷ್ಟ್ರದಲ್ಲಿನ ಮಧ್ಯಾನ್ಹದ ಊಟದ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅದೇ ಯೋಜನೆಯು 28.1% ಎಲ್ಲಾ ಹಿಂದೂ ಮಕ್ಕಳನ್ನೂ ಮತ್ತು 34.7% ಎಸ್ಸಿ/ಎಸ್ಟಿ ಮಕ್ಕಳನ್ನೂ ತಲುಪುತ್ತದೆ. ಈ ಯೋಜನೆಯನ್ನು ಅನುಭವಿಸುವ ಸಾಮಾನ್ಯ ವರ್ಗದ ಮಕ್ಕಳ ಸಂಖ್ಯೆ ಮಾತ್ರಾ ಮುಸಲ್ಮಾನ ಮಕ್ಕಳದ್ದಕ್ಕಿಂತ ಕಡಿಮೆಯಿದೆ. (19.1%) ಬಹುಶಃ ಈ ಮಕ್ಕಳನ್ನು ಇಂತಹ ಮದ್ಯಾನ್ಹದ ಊಟವನ್ನು ನೀಡದಿರುವ ಶಾಲೆಗಳಿಗೆ ಕಳುಹಿಸಲಾಗುತ್ತದೆ.

ಸಾಚರ್ ವರದಿ ಹೀಗೆ ಹೇಳುತ್ತದೆ, ” ಮುಸಲ್ಮಾನರಿಗೆ ಅದರಲ್ಲೂ ಮುಸಲ್ಮಾನ ಮಹಿಳೆಯರಿಗೆ ಸರಕಾರದ ಅಭಿವೃದ್ಧಿ ಯೋಜನೆಗಳು ತಲುಪುವುದಿಲ್ಲ. ಬಡತನದ ರೇಖೆಯ ಕೆಳಗಿರುವವರು ಫಲಾನುಭವಿಗಳಾಗುವ ಜವಾಹರ್ ರೋeóÁ್ಗರ್ ಯೋಜನಾ, ಮನೆಸಾಲ ಪಡೆಯುವಿಕೆ ಅಥವಾ ವಿಧವೆಯರ ಪಿಂಛಣಿಗನ್ನು ದೊರಕಿಸಿಕೊಳ್ಳುವಲ್ಲಿಯೂ ಸಹ ಮುಸಲ್ಮಾನರು ತಾರತಮ್ಯವನ್ನು ಎದುರಿಸುತ್ತಾರೆ.

ಈ ಯೋಜನೆಗಳ ಲಾಭಗಳ ವ್ಯಾಪ್ತಿಯಿಂದ ಮುಸಲ್ಮಾನರು ದೂರಕ್ಕೆ ಸರಿಸಲ್ಪಟ್ಟವರಾಗಿರುವುದಕ್ಕೆ ಕಾರಣಗಳನ್ನು ಹುಡುಕುವುದು ಬಹಳ ಕಷ್ಟವಾದರೂ, ಆ ಕಾರಣಗಳಲ್ಲಿ ಒಂದು ಮುಸಲ್ಮಾನರು ರಾಜಕೀಯ ಕಾರ್ಯವಿಧಾನಗಳಲ್ಲಿ ಮತ್ತು ಆಡಳಿತದಲ್ಲಿ
ಭಾಗವಹಿಸದೇ ಇರುವುದು ಅದರಲ್ಲೂ ಸ್ಥಳೀಯ ರಾಜಕಾರಣ ಮತ್ತು ಆಡಲಿತಗಳಲ್ಲಿ ಭಾಗವಹಿಸದೇ ಇರುವುದು ಕಾರಣ ಈ ವರದಿ
ಎನ್ನುತ್ತದೆ. ರಾಜಕಾರಣದಲ್ಲಿ ಪಕ್ಷಗಳು ಮತ್ತು ಶಾಸನಗಳನ್ನು ಮಾಡುವಲ್ಲಿ ಸರಕಾರವೂ ಇದನ್ನು ಹೆಚ್ಚಿಸಬೇಕು.

ಅನಾನುಕೂಲಗಳ ಒತ್ತಡವಿದ್ದರೂ ಬೇಕಾದಷ್ಟು ಸಾಮಾಜಿಕ ವಿಷಯಗಳಲ್ಲಿ ಮುಸಲ್ಮಾನರು ಹಿಂದೂಗಳಿಗಿಂತ ಮುಂದಿದ್ದಾರೆ. ಅವರ ಲಿಂಗ ಪ್ರಮಾಣ 986 ದೇಶದ ಲಿಂಗ ಪ್ರಮಾಣಕ್ಕಿಂತ ಉತ್ತಮವಾಗಿದೆ.(ಗುಜರಾತಿನಲ್ಲಿ ಇದು ಕೇವಲ 890). ಅವರ ಅವರ ಐದು ವರ್ಷದ ಮಕ್ಕಳ ಮತ್ತು ಶಿಶು ಮರಣ ಪ್ರಮಾಣ ದೇಶದ ಅಂಕಿಅಂಶಗಳಿಗಿಂತ ಉತ್ತಮವಾಗಿದೆ.

ಹಾಗಿದ್ದರೂ ಮುಸಲ್ಮಾನರನ್ನು ಸುಲಭವಾಗಿ ಕಳಂಕಕ್ಕೀಡು ಮಾಡಲಾಗುತ್ತದೆ. ಆ ವರದಿಯನ್ನು ಹೀಗೆ ಮುಗಿಸಲಾಯಿತು, “ಮುಸಲ್ಮಾನರು, ಪ್ರತಿಯೊಬ್ಬ ಗಡ್ಡ ಬಿಟ್ಟ ಮುಸಲ್ಮಾನರನ್ನೂ ಐಎಸೈ ಏಜೆಂಟರೆಂದು ಪರಿಗಣಿಸಲಾಗುತ್ತದೆ ಎಂಬ ಕೀಳರಿಮೆಯಿಂದ ಜೀವಿಸುತ್ತಾರೆ.”

ಇದೊಂದು ಅದ್ಭುತವಾದ ಮತ್ತು ಪರಿಪೂರ್ಣ ದಾಖಲೆಯಾದರೂ, ಈಗ ಕಾಂಗ್ರೆಸ್ ಪಕ್ಷವು ಸಾಚರ್ ಸಮಿತಿಯ ಬಗ್ಗೆ ಮಾತನ್ನು ಕೂಡಾ ಆಡುವುದಿಲ್ಲ. ಎಲ್ಲಿ ತಮ್ಮನ್ನು ಹಿಂದು-ವಿರೋಧಿ ಅಥವಾ ಮುಸಲ್ಮಾನರ ಪಕ್ಷವೆಂದು ಪರಿಗಣಿಸಿಬಿಡಲಾಗುವುದೋ ಎಂಬ ಭಯದಲ್ಲಿ ಹೆದರಿ ಕಾಂಗ್ರೆಸ್ ಪಕ್ಷವು ಈಗೀಗ ಮುಸಲ್ಮಾನರ ಸ್ಥಿತಿಯ ಬಗ್ಗೆ ಚಕಾರವೆತ್ತುವುದಿಲ್ಲ. ಮೋದಿ ಸರಕಾರವು ಸಂಸದ್ದಿಗೆ ಸಾಚರ್ ಸಮಿತಿಯ ವರದಿಯನ್ನು ಆಧರಿಸಿ ಕೈಗೊಂಡ ಕಾರ್ಯಾಚರಣೆಯ ಬಗೆಗೂ ಮತ್ತು ಭಾರತದಲ್ಲಿನ ಮುಸಲ್ಮಾನರ ವಿರುದ್ಧದ ತಾರತಮ್ಯವನ್ನೂ ಅವರನ್ನು ಹೊರಗಿರಿಸಿ ಅವರ ಸ್ಥಿತಿಯಲ್ಲಿರುವ ಅಂತರದ ಬಗ್ಗೆಯೂ ತಾವು ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಸಂಸದ್ದಿಗೆ ವರದಿ ಮಾಡುತ್ತಿರುತ್ತದೆ. ಮಾರ್ಚ್ 31, 2019ರಲ್ಲಿ ಅಂತಹ ಒಂದು ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿ ಸರಕಾರವು ಇತರ ಚತ್ರಚಾಮರ ಯೋಜನೆಗಳಲ್ಲಿ ತಾನು ಮಾಡುತ್ತಿರುವುದನ್ನು( ಸ್ವಚ್ಚ ಭಾರತ್ ಮತ್ತು ಉಜ್ವಲ, ಉದಾಹರಣೆಗಳು) ಉಬ್ಬಿಸಿ ಹೇಳುತ್ತದೆಯೇನೋ ಸರಿ, ಆದರೆ ಅದು ಮುಸಲ್ಮಾನರ ಸ್ಥಿತಿಯನ್ನು ಉತ್ತಮ/ಸಮಗೊಳಿಸುವ ಪ್ರಯತ್ನಕ್ಕೆಂದೇ ಗುರಿಯಿಟ್ಟಿರುವಂಥಾ ಯೋಜನೆಗಳ ಬಗೆಗೇನೂ ಹೇಳುವುದಿಲ್ಲ. ಆದರೂ ಸರಕಾರದ ಈ ವರದಿಗಳು ನಮ್ಮ ದೇಶದ ಅಲ್ಪಸಂಖ್ಯಾತರು ಮಿಕ್ಕ ಜನರಿಗಿಂತ ಕೆಳಮಟ್ಟದ ಸ್ಥಿತಿಯಲ್ಲಿದ್ದಾರೆ ಎಂಬ ವಿಷಯದ ಆಧಾರದಿಂದಲೇ ಹೊರಬಂದಿವೆ.

2014ರ ಚುನಾವಣೆಗಳಿಗೆ ಮೊದಲು, ಸಾಚರ್ ಸಮಿತಿಯು ತನ್ನ ವರದಿಗೆ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳಲು ಬಂದಾಗ ಶ್ರೀ.ನರೇಂದ್ರ ಮೋದಿಯವರನ್ನು ಒಂದು ಸಂದರ್ಶನದಲ್ಲಿ,” ನೀವು ಮುಸಲ್ಮಾನರಿಗಾಗಿ ಏನು ಮಾಡಿದ್ದೀರಿ?” ಎಂದು ಕೇಳಿದ್ದರು. ಆಗ ಅವರು ತಾನು ಗುಜರಾತಿನ ಮುಸಲ್ಮಾನರಿಗಾಗಿ ಏನೂ ಮಾಡಿಲ್ಲವೆಂದು ಹೇಳಿದ್ದರು, ಹಾಗೂ ಅವರು ಗುಜರಾತಿನ ಮುಸಲ್ಮಾನರಿಗಾಗಿ ಏನೂ ಮಾಡುವುದೂ ಇಲ್ಲವೆಂದೂ, ತಾನು ಹಿಂದೂಗಳಿಗಾಗಿಯೂ ಏನೂ ಮಾಡಿಲ್ಲವೆಂದೂ ಹೇಳಿದರು.”

ಇದು ಮೋದಿಯವರಿಂದ ನಿರೀಕ್ಷೆ ಮಾಡಬಹುದಾದ ಜಾಣತನದ ಉತ್ತರ. ಆದರೆ ಅದು ಪ್ರಶ್ನೆಯಲ್ಲಿ ಅಲಕ್ಶಿಸಿತು ಮತ್ತು ವಾಸ್ಥವದಲ್ಲಿನ ನೈಜಸಂಗತಿಯನ್ನು ನಿರ್ಲಕ್ಷಿಸಿತು.
ಸರಕಾರವು ಸಾಚರ್ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿರುವುದರಿಂದ ಅದನ್ನು ಕಾರ್ಯರೂಪಕ್ಕೆ ತರುಲೂ ಮತ್ತು ಭಾರತೀಯ ಸಮಾಜದ ತಾರತಮ್ಯಗಳನ್ನೂ ಸ್ಥಿತ್ಯಂತರಗಳನ್ನೂ ಕಡಿಮೆ ಮಾಡಲೂ ಸರಕಾರ ಬದ್ಧವಾಗಿರುತ್ತದೆ.

ಅದರ ಬದಲಾಗಿ ಮೋದಿಯವರು ಮತ್ತವರ ಪಕ್ಷವು, ಎರಡು ಚುನಾವಣೆಗಳಲ್ಲಿ ಗೆದ್ದು ಆಡಲಿತದಲ್ಲಿದ್ದ ಬಳಿಕವೂ, ನಿದರ್ಶಿಸಿ ತೋರಿಸಬಲ್ಲ ಸುಳ್ಳಾದ “ಭಾರತದ ಮುಸಲ್ಮಾನರನ್ನು ಒಲೈಸಿಕೊಳ್ಳಲಾಗುತ್ತಿದೆ” ಎಂಬುದನ್ನು ಮುಂದುವರೆಸುತ್ತಿವೆ.


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

One comment to “ಮುಸ್ಲಿಂ ಓಲೈಕೆ ಎಂಬ ಮಿಥ್ಯೆ”

ಪ್ರತಿಕ್ರಿಯಿಸಿ