ಋತುಮಾನ ಆ್ಯಪ್ : ಹೆಚ್. ಎಸ್. ಶ್ರೀಮತಿ ಅವರ ಕೃತಿಗಳು ಈ ಬುಕ್ ರೂಪದಲ್ಲಿ !

ಸ್ತ್ರೀವಾದವನ್ನು ಕುರಿತು ಎರಡು ಬಲವಾದ ಅಪಕಲ್ಪನೆಗಳಿವೆ.ಒಂದು: ಇದು ಹೆಂಗಸರ ಪರವಾಗಿ ನಡೆಸುವ ವಕೀಲಿ ಚಿಂತನೆ ಎಂಬುದು. ಎರಡು: ಇದು ಗಂಡಸರನ್ನು ಮಟ್ಟಹಾಕಿ ಮೂಲೆಗೆ ತಳ್ಳಿಬಿಡುವ ಹುನ್ನಾರ ಎಂಬುದು. ಹಾಗಾಗಿಯೇ, ಸ್ತ್ರೀವಾದವನ್ನು ಕುರಿತ ಯಾವುದೇ ಬಗೆಯ ಮಾತುಕತೆ,ಚರ್ಚೆ ಬಂದರೂ ಅಲ್ಲಿ ಎರಡು ಬಣಗಳು ಒಡೆದು ನಿಲ್ಲುತ್ತವೆ. ಸ್ತ್ರೀವಾದ ಎಂಬ ಚಿಂತನೆಯು ಏನು ಹೇಳುತ್ತಿದೆ ಎಂಬುದನ್ನು ಸರಿಯಾಗಿ ಪರಿಚಯಿಸುವ ಹಂತವನ್ನು ತಲುಪುವುದೇ ಕಷ್ಟ ಎಂಬ ರೀತಿಯಲ್ಲಿ ಮಾತುಕತೆಗಳು ದಿಕ್ಕುತಪ್ತಿರುತ್ತವೆ. ನಿಜದಲ್ಲಿ ಸ್ತ್ರೀವಾದ ಬಯಸುವುದು ಗಂಡುಹೆಣ್ಣುಗಳಿಬ್ಬರ ಸಂಬಂಧಗಳು ಸುಸಂಗತವಾಗಿ, ಆರೋಗ್ಯಕರವಾಗಿ ಇರಬೇಕು ಎಂಬುದೇ. ಸ್ತ್ರೀವಾದದ ಇತಿಹಾಸ , ಪರಿಕಲ್ಪನೆ ಮತ್ತು ಪ್ರಸ್ತುತತೆಯನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಎಚ್. ಎಸ್ . ಶ್ರೀಮತಿ ಯವರು ವಿಸ್ತಾರವಾಗಿ ತಮ್ಮ ಕೃತಿಗಳಲ್ಲಿ ಬರೆದಿದ್ದಾರೆ . ಹಲವು ಪಾಶ್ವಾತ್ಯ ಸ್ತ್ರೀವಾದಿ ಚಿಂತಕರ ಬರಹಗಳನ್ನು ಕನ್ನಡಕ್ಕೆ ತಂದಿದ್ದಾರೆ . ಈಗ ಎಚ್. ಎಸ್ . ಶ್ರೀಮತಿಯವರ ಕೃತಿಗಳು ಋತುಮಾನ ಆ್ಯಪ್ ನಲ್ಲಿ ಇ ಬುಕ್ / ಆಡಿಯೋ ಬುಕ್ ರೂಪದಲ್ಲಿ ಲಭ್ಯವಾಗಲಿದೆ . ಮೊದಲಿಗೆ ಎರಡು ಕೃತಿಗಳು – ಬೆಲ್ ಹುಕ್ಸ್ ಅವರ ‘ಫೆಮಿನಿಸಂ ಇಸ್ ಫಾರ್ ಎವೆರಿಬಡಿ ” ಕೃತಿಯ ಕನ್ನಡ ಅನುವಾದ “ಎಲ್ಲರಿಗಾಗಿ ಸ್ತ್ರೀವಾದ ” ಮತ್ತು ಜಿಮಮಾನ್ಡ ನೋಬಿ ಅಡಿಚಿ ಅವರ “ವಿ ಶುಡ್ ಆಲ್ ಬಿ ಫೆಮಿನಿಸ್ಟ್ಸ್” ಕೃತಿಯ ಕನ್ನಡ ಅನುವಾದ “ನಾವೆಲ್ಲರೂ ಸ್ತ್ರೀವಾದಿಗಳಾಗಬೇಕು” ಇ ಬುಕ್ ರೂಪದಲ್ಲಿ ಲಭ್ಯವಿದೆ . ವರ್ತಮಾನಕ್ಕೆ ತಕ್ಕಂತೆ ಸ್ತ್ರೀನೋಟಗಳನ್ನು ತಾತ್ವಿಕ ಚೌಕಟ್ಟಿನಲ್ಲಿ ಗ್ರಹಿಸುವ ಕ್ರಮ ಹೊಸ ಹೊಸತಲೆಮಾರಿಗೆ ಈ ಮೂಲಕ ದಕ್ಕಲಿ ಎಂದು ಋತುಮಾನ ಆಶಿಸುತ್ತದೆ

estore.ruthumana.com


Download RUTHUMANA App here :

** Android *** : https://play.google.com/store/apps/details?id=ruthumana.app

** iphone ** : https://apps.apple.com/in/app/ruthumana/id1493346225

ಈ ಕೆಳಗಿನ ಕೂಪನ್ ಬಳಸಿ . ವಿಶೇಷ ರಿಯಾಯಿತಿ ಪಡೆಯಿರಿ.

MEAFL20 – 20% off on ebooks and audio books

MBEAFL15 – 15% off on Books . Min order ₹ 200

ಪ್ರತಿಕ್ರಿಯಿಸಿ