ಯುಕ್ರೇನ್ ಯುದ್ಧವು ಎಲ್ಲವನ್ನೂ ಬದಲಾಯಿಸಬಹುದು : ಯೂವಲ್ ನೋವಾ ಹರಾರಿ

ಯುಕ್ರೇನಿನಲ್ಲಿ ನಡಿಯುತ್ತಿರುವ ಯುದ್ಧ ನಿಮ್ಮಲ್ಲೂ ತಲ್ಲಣಗಳನ್ನು ಉಂಟುಮಾಡಿರಬಹುದು. ಅದು ಸಹಜ ಕೂಡ . ಹಾಗಾದರೆ ಈ ಯುದ್ಧದ ಪರಿಣಾಮಗಳೇನು ಎಂಬುದರ ಕುರಿತು ೨೧ನೇ ಶತಮಾನದ ಪ್ರಮುಖ ಚಿಂತಕರಲ್ಲೊಬ್ಬರಾಗಿ ಗುರುತಿಸಲ್ಪಡುವ ಇಸ್ರೇಲಿನ ಲೇಖಕ ಮತ್ತು ಇತಿಹಾಸಕಾರ ಯುವಲ್ ನೋವಾ ಹರಾರಿ ಈ ಸಂದರ್ಶನದಲ್ಲಿ ಮಾತಾಡಿದ್ದಾರೆ. ಯುಕ್ರೇನ್‌ನ ಸುದೀರ್ಘ ಪ್ರತಿರೋಧದ ಇತಿಹಾಸ, ಪರಮಾಣು ಯುದ್ಧದ ಭೀತಿ ಮತ್ತು ಪುಟಿನ್ ಎಲ್ಲಾ ಮಿಲಿಟರಿ ಯುದ್ಧಗಳನ್ನು ಗೆದ್ದರೂ ಸಹ, ಅವರು ಈಗಾಗಲೇ ಯುದ್ಧವನ್ನು ಏಕೆ ಕಳೆದುಕೊಂಡಿದ್ದಾರೆ ಎಂಬುದರ ಕುರಿತು ಹರಾರಿಇಲ್ಲಿ ವಿವರಿಸಿದ್ದಾರೆ.

ಯುಕ್ರೇನಿನಿಂದಲೇ ಪ್ರಾರಂಭಿಸೋಣ, ಅಂದರೆ ಯುಕ್ರೇನಿನ ೪೨ ಮಿಲ್ಲಿಯನ್ ಪ್ರಜೆಗಳು ಮತ್ತು ಪೂರ್ವ ಮತ್ತು ಪಶ್ಚಿಮಗಳ ನಡುವಿನ ಅದರ ವಿಶೇಷ ನೆಲೆಯ ಬಗ್ಗೆ. ಈ ಯುದ್ಧದ ಬಗ್ಗೆ ನಾವು ಅರ್ಥ ಮಾಡಿಕೊಳ್ಳುವುದಕ್ಕಾಗಿ ನಮಗೆ ಯುಕ್ರೇನಿನ ಬಗ್ಗೆ ಏನನ್ನು ತಿಳಿದುಕೊಳ್ಳಬೇಕು? ಹಾಗೂ ಈ ಯುದ್ಧದದಿಂದಾಗಿ ಏನೆಲ್ಲಾ ಪರಿಣಾಮಗಳಾಗಬಹುದು?

ಎಲ್ಲದಕ್ಕಿಂತ ಮುಖ್ಯವಾಗಿ ನಾವು ತಿಳಿದುಕೊಳ್ಳ ಬೇಕಾದದ್ದು ಏನೆಂದರೆ ಯುಕ್ರೇನಿನ ಜನರು ರಶ್ಯನ್ ಜನರಲ್ಲ. ಹಾಗೂ ಯುಕ್ರೇನ್ ಎನ್ನುವುದು ಒಂದು ಪ್ರಾಚೀನ ಸ್ವತಂತ್ರ ರಾಷ್ಟ್ರವಾಗಿದೆ. ಅದಕ್ಕೆ ಒಂದು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ.ಮಾಸ್ಕೋ ಒಂದು ಹಳ್ಳಿಯೂ ಆಗಿರದಿದ್ದ ಕಾಲದಲ್ಲೇ ಕೀವ್ ಒಂದು ಪ್ರಮುಖ ಮೆಟ್ರಾಪಾಲಿಟನ್ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು.  ಈ ಹಿಂದಿನ ಸಾವಿರ ವರ್ಷಗಳಲ್ಲಿ ಬಹಳಷ್ಟು ಕಾಲ ಕೀವ್ ನಗರವನ್ನು ಮಾಸ್ಕೋ ಆಳಿರಲಿಲ್ಲ.   ಕೀವ್ ಮತ್ತು ಮಾಸ್ಕೋ ಒಂದೇ ರಾಜಕೀಯ ಘಟಕದ ಭಾಗಗಳಾಗಿರಲಿಲ್ಲ. ಶತಮಾನಗಳವರೆಗೆ ಕೀವ್ ಪಶ್ಚಿಮದೆಡೆಗೆ ಮುಖಮಾಡಿಕೊಂಡಿತ್ತು ಅಲ್ಲದೆ ಅದು ಲಿಥುವೇನಿಯ ಮತ್ತು ಪೋಲ್ಯಾಂಡ್‌ಗಳೊಂದಿಗಿನ ಒಕ್ಕೂಟದ ಭಾಗವಾಗಿತ್ತು. ಮುಂದೆ ಅದನ್ನು ರಶ್ಯಾದ ಜಾÁರ್ ರಾಜಾಧಿಪತ್ಯವು ಗೆದ್ದು ತನ್ನೊಳಗೆ ಸೇರಿಸಿಕೊಳ್ಳುವ ತನಕ ಅದು ಸ್ವತಂತ್ರವಾಗಿಯೇ ಇತ್ತು. ಹಾಗಾದ ಬಳಿಕವೂ ಕೂಡ ಯುಕ್ರೇನಿನ ಜನರು ಹೆಚ್ಚೂಕಡಿಮೆ ರಶ್ಯಾದ ಜನರಿಗಿಂತ ಬೇರೆಯಾಗಿಯೇ ಇದ್ದರು.ಈ ವಿಷಯವನ್ನು ಅರಿತುಕೊಳ್ಳುವುದು ಬಹು ಮುಖ್ಯ. ಏಕೆಂದರೆ ಈ ಯುದ್ಧದಲ್ಲಿ ಪಣಕ್ಕಿರುವುದು ಈ ಅಂಶವೇ. ಈ ಯುದ್ಧದ ಅತಿ ಮಹತ್ವದ, ಅದರಲ್ಲೂ ಅಧ್ಯಕ್ಷ ಪುಟಿನ್ ಅವರಿಗೆ ಮುಖ್ಯವಾದ ಪ್ರಶ್ನೆ ಎಂದರೆ ಉಕ್ರೇನ್ ಒಂದು ಸ್ವತಂತ್ರ ರಾಷ್ಟ್ರçವೇ ಅಥವಾ ಅದು ಒಂದು ರಾಷ್ಟ್ರ ಕೂಡಾ ಅಹುದೇ ಅಲ್ಲವೇ ಎಂಬುದು. ಏಕೆಂದರೆ ಅವರು, ಉಕ್ರೇನ್ ರಶ್ಯಾದ ಒಂದು ಭಾವಷ್ಟೇ ಎಂದೂ ಮತ್ತು ಉಕ್ರೇನಿನ ಜನರೆಲ್ಲಾ ರಶ್ಯನ್ನರೇ ಎಂಬ ಒಂದು ಅತಿರೇಕದ ಕಲ್ಪನೆಯಲ್ಲಿದ್ದಾರೆ.

ಅವರ ಈ ಅತಿರೇಕದ ಕಲ್ಪನೆಯ ಪ್ರಕಾರ ಯುಕ್ರೇನಿನ ಜನರೆಲ್ಲಾ ಮೂಲತಃ ರಶ್ಯನ್ನರೇ ಮತ್ತು ಅವರು ತಮ್ಮ ತಾಯಿನಾಡಾದ ರಶ್ಯಾದ ತೆಕ್ಕೆಯೊಳಗೆ ವಾಪಸಾಗಲು ಕಾತುರರಾಗಿದ್ದಾರೆ ಹಾಗೂ ಅವರನ್ನು ತಡೆಹಿಡಿದಿರುವುದು ಎಲ್ಲೋ ಒಂದು ಚಿಕ್ಕ ಉನ್ನತ ಮಟ್ಟದ ಅಧಿಕಾರವಿರುವ ಗುಂಪು ಎಂದು ಅವರು ನಂಬಿದ್ದಾರೆ. ಹಾಗೂ ಆ ಗುಂಪನ್ನು ಅವರು ನಾಜಿûÃಗಳು ಎಂದು ಕರೆದಿದ್ದಾರೆ. ಅಲ್ಲಿಯ ಅಧ್ಯಕ್ಷರು ಒಬ್ಬ ಜ್ಯೂ, ಆದರೇನು , ಅವರು ಒಬ್ಬ ನಾಜಿû ಜ್ಯೂ !

ಪುಟಿನ್ನರ ನಂಬಿಕೆ ಏನೆಂದರೆ ಅವರು ಯುಕ್ರೇನನ್ನು ಆಕ್ರಮಿಸಿ ಬಿಟ್ಟರೆ ಸಾಕು, ಜೆಲೆನ್ಸ್ಕಿ ಓಡಿ ಹೋಗಿ ಬಿಡುತ್ತಾರೆ, ಆಡಳಿತ ಕುಸಿಯುತ್ತದೆ, ಸೈನ್ಯವು ತನ್ನ ಶಸ್ತ್ರ್ತಾಸ್ತ್ರ ಗಳನ್ನು ಕೆಳಗೆ ಹಾಕುತ್ತದೆ ಹಾಗೂ ಯುಕ್ರೇನಿನ ಜನ ತಮ್ಮನ್ನು ಬಿಡುಗಡೆಗೊಳಿಸಲು ಬರುವ ರಶ್ಯಾದ ಸೈನಿಕರನ್ನು ಹೂಗಳನ್ನು ಎಸೆಯುತ್ತಾ ಸ್ವಾಗತಿಸುತ್ತಾರೆ. ಅವರ ಈ ಕಲ್ಪನೆಯು ಈಗಾಗಲೇ ಛಿದ್ರವಾಗಿದೆ. ಜೆಲೆನ್ಸ್ಕಿ ಓಡಿ ಹೋಗಿಲ್ಲ, ಯುಕ್ರೇನಿನ ಸೈನ್ಯ ಕಾದಾಡುತ್ತಿದೆ ಮತ್ತು ಯುಕ್ರೇನಿನ ಜನ ರಶ್ಯಾದ ಟ್ಯಾಂಕುಗಳ ಮೇಲೆ ಹೂವನ್ನೇನೂ ಎಸೆಯುತ್ತಿಲ್ಲ. ಬದಲಾಗಿ ಮೊಲೊಟೋವ್ ಕಾಕ್ಟೆöÊಲುಗಳನ್ನು ಎಸೆಯಲಾಗುತ್ತಿದೆ.

ನಾವು ಒಂದೊಂದಾಗಿ ಅಂಶಗಳನ್ನು ತೆಗೆದುಕೊಳ್ಳೋಣ. ಯುಕ್ರೇನಿಗೆ ತಾನು ಬೇರೆಯವರಿಂದ ಆಕ್ರಮಿಸಿಕೊಂಡು ಅವರ ಪ್ರಾಬಲ್ಯದಡಿಯಲ್ಲಿರುವ ಒಂದು ಲಂಬವಾದ ಇತಿಹಾಸವಿದೆ. ನೀವು ಜಾರ್ ಬಗ್ಗೆ ಹೇಳಿದಿರಿ ಹಾಗೇ ಸೋವಿಯತ್ ಒಕ್ಕೂಟ ಮತ್ತು ಹಿಟ್ಲರನ ಸೈನ್ಯಗಳಿಂದಲೂ ಇದು ಆಕ್ರಮಿಸಲ್ಪಟ್ಟಿತ್ತು. ಯುಕ್ರೇನಿಗೆ ಅಧಿಕಾರದ ಬಗ್ಗೆ ಅಪನಂಬಿಕೆಯ ಮತ್ತು ಪ್ರತಿಭಟಿಸುವ ಇತಿಹಾಸವೂ ಇದೆ. ಹಾಲಿಯಲ್ಲಿ ರಶ್ಯಾದ ಸೈನ್ಯವು ಎದುರಿಸುತ್ತಿರುವ ಪ್ರತಿಭಟನೆಗೆ ಇದೇ ಕಾರಣ. ಆನ್ ಆಪ್ಪಲ್ಬಾಮ್ ಎಂಬ ಪತ್ರಕರ್ತೆ ತಿಳಿಸುವಂತೆ ಈ ಅಪನಂಬಿಕೆ ಮತ್ತು ಈ ಅಧಿಕಾರದ ವಿರುದ್ಧದ ಪ್ರತಿಭಟನೆ ಇವು ಉಕ್ರೇನ್ ಎಂಬ ಭಾವದ ಒಳ ತಿರುಳು. ನೀವು ಇದನ್ನು ಒಪ್ಪುತ್ತೀರಾ?

ಯುವಾ: ನಾವು ಹಿಂದಿನ ೩೦ ವರ್ಷದಲ್ಲಿ ಯುಕ್ರೇನಿನ ಜನರು ಎರಡು ಬಾರಿ ಪ್ರತಿಭಟಿಸಿ ತಿರುಗಿ ಬಿದ್ದಿರುವುದನ್ನು ನೋಡಿದ್ದೇವೆ. ಒಂದು ಸರ್ವಾಧಿಕಾರೀ ಆಡಳಿತವು ತಮ್ಮ ಮೇಲೆ ಹೇರಲ್ಪಡಬಹುದು ಎಂಬ ಸಂದರ್ಭದಲ್ಲಿ ಒಮ್ಮೆ ೨೦೦೪ ರಲ್ಲಿ, ಮತ್ತೊಮ್ಮೆ ೨೦೧೩ ರಲ್ಲಿ ಅವರು ಪ್ರತಿಭಟಿಸಿದ್ದಾರೆ. ನಾನು ಕೆಲವು ವರ್ಷಗಳ ಹಿಂದೆ ಕೀವ್‌ಗೆ ಭೇಟಿ ನೀಡಿದಾಗ ಅಲ್ಲಿ ನನಗೆ ಅತ್ಯಂತ ಪ್ರಬಲವಾಗಿ ಮನದಟ್ಟಾಗಿದ್ದೇನೆಂದರೆ ಅದು ಅಲ್ಲಿಯ ಜನರಿಗೆ ಇರುವ ಸ್ವಾತಂತ್ರದ ಮತ್ತು ಪ್ರಜಾಸತ್ತೆಯ ಹಂಬಲ. ನನಗೆ ನಾನು ಅಲ್ಲಿ ಒಂದು ೨೦೧೩-೧೪ರ ಪ್ರತಿಭಟನೆಯ ವಸ್ತುಸಂಗ್ರಹಾಲಯದಲ್ಲಿ ಒಮ್ಮೆ ನಡೆದಾಡುತ್ತಿದ್ದದ್ದು ನೆನಪಿದೆ. ಅಲ್ಲಿ ಇಬ್ಬರು ವಯಸ್ಸಾದ ಮಹಿಳೆಯರು ಪ್ರತಿಭಟಿಸುತ್ತಿದ್ದ ಜನರಿಗೆ ಸ್ಯಾಂಡ್‌ವಿಚ್ಚುಗಳನ್ನು ತಂದು ಕೊಡುತ್ತಿದುದನ್ನು ನೋಡಿದೆ. ಈ ಚಿತ್ರ ನನ್ನ ಮನಸ್ಸಿನಲ್ಲಿದೆ. ಆ ಮಹಿಳೆಯರಿಗೆ ಕಲ್ಲು ಎಸೆಯುವುದಾಗಲೀ ಅಥವಾ ಇನ್ಯಾವುದೇ ಬಗೆಯಲ್ಲಿ ಪ್ರತಿಭಟಿಸಲು ಸಾಧ್ಯವಿರಲಿಲ್ಲ. ಹಾಗಾಗಿ ಅವರು ಸ್ಯಾಂಡ್‌ವಿಚ್ಚುಗಳನ್ನು ಮಾಡಿದರು. ಅವರು ಒಂದು ಅತಿ ದೊಡ್ಡ ತಟ್ಟೆಯ ತುಂಬಾ ಸ್ಯಾಂಡ್‌ವಿಚ್ಚುಗಳನ್ನು ಪ್ರತಿಭಟಿಸುವವರಿಗಾಗಿ ತಂದರು. ಇದು ಒಂದು ಬಗೆಯ ಜನಚೈತನ್ಯ. ಇಂಥ ಚೈತನ್ಯ ಬರಿಯ ಯುಕ್ರೇನಿನ ಜನರನ್ನಷ್ಟೇ ಅಲ್ಲ, ಅಲ್ಲಿ ನಡೆಯುವುದನ್ನು ನೋಡುತ್ತಿರುವವರೆಲ್ಲರನ್ನೂ ಹುರಿದುಂಬಿಸುತ್ತದೆ.

ಅಲ್ಲಿರುವ ಅಪಾಯದ ಗುಣಲಕ್ಷಣವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಹಾಯ ಮಾಡಿ. ಅಂದರೆ ರಶ್ಯಾ ಯುಕ್ರೇನಿನ ಒಳಗೆ ನುಗ್ಗುವುದರ ಅಪಾಯ. ನೀವು ನಿಮ್ಮ ಹಿಂದಿನ ಪುಸ್ತಕದಲ್ಲಿ ರಶ್ಯಾದ ಬಗ್ಗೆ ಬರೆಯುವಾಗ ನೀವು ರಶ್ಯಾದ ಮಾದರಿಯನ್ನು ” ಅಸಂಬದ್ಧ ರಾಜಕೀಯ ಸಿದ್ಧಾಂತ ಎಂದೂ ಅದೊಂದು ಉಚ್ಚ ಮಟ್ಟದ ಸಣ್ಣ ಗುಂಪೊಂದು ಅಧಿಕಾರವನ್ನು ಮತ್ತು ಸಂಪತ್ತನ್ನು ಏಕಸ್ವಾಮ್ಯಗೊಳಿಸುವ ಪದ್ಧತಿ” ಎಂದೂ ಕರೆದಿದ್ದೀರಿ. ಆದರೆ ಯುಕ್ರೇನಿನ ವಿರುದ್ಧದ ಹಿಂದಿನ ಕೆಲವು ವಾರಗಳ ತನ್ನ ಕಾರ್ಯಕ್ರಮದಿಂದ ಪುಟಿನ್ ಒಂದು ಸಿದ್ಧಾಂತದಿಂದ ಪ್ರೇರಿತನಾದಂತೆಯೇ ಕಾಣುತ್ತಾನೆ. ಆ ಸಿದ್ಧಾಂತ ಎಂದರೆ ಅದು ಸಾಮ್ರಾಜ್ಯಶಾಹೀ ಸಿದ್ಧಾಂತ; ಮತ್ತು ನೀವು ಹೇಳಿದಂತೆ ಯುಕ್ರೇನಿನ ಅಸ್ತಿತ್ವದ ಹಕ್ಕನ್ನು ಕಸಿದುಕೊಳ್ಳುವ ಸಿದ್ಧಾಂತ. ನೀವು ನಿಮ್ಮ ಪುಸ್ತಕವನ್ನು ಬರೆದ ಹಿಂದಿನ ನಾಲ್ಕು ವರ್ಷಗಳಲ್ಲಿ ಏನು ಬದಲಾಗಿದೆ?

ಯುವಾ: ಸಾಮ್ರಾಜ್ಯಶಾಹೀ ಕನಸು ಯಾವಾಗಲೂ ಇದ್ದೇ ಇತ್ತು. ಆದರೆ ನಿಮಗೆ ತಿಳಿದಿರುವಂತೆ ಯಾವಾಗಲೂ ಸಾಮ್ರಾಜ್ಯಗಳನ್ನು ಸೃಷ್ಟಿಸುವುದು ಉಚ್ಚ ಮಟ್ಟದಲ್ಲಿರುವ ಕೆಲವೇ ಕೆಲವು ಮಂದಿಯ ಒಂದು ಗುಂಪಾಗಿರುತ್ತದೆ. ರಶ್ಯಾದ ಪ್ರಜೆಗಳಿಗೇನೂ ಈ ಯುದ್ದದಲ್ಲಿ ಆಸಕ್ತಿಯಿದೆ ಎಂದು ನನಗೆ ಅನ್ನಿಸುವುದಿಲ್ಲ. ರಶ್ಯಾದ ಜನರಿಗೇನೂ ಯುಕ್ರೇನನ್ನು ಆಕ್ರಮಿಸಿ ಕೀವ್‌ನಲ್ಲಿರುವ ಜನರ ಮಾರಣಹತ್ಯೆ ಮಾಡಬೇಕೆಂದು ಅನ್ನಿಸುತ್ತಿಲ್ಲ ಎಂದು ನನ್ನ ಅನಿಸಿಕೆ. ಈ ಎಲ್ಲಾ ನಿರ್ಧಾರಗಳೂ ಉಚ್ಚಮಟ್ಟದಿಂದ ಮಾತ್ರಾ ಬರುತ್ತಿವೆ. ಹಾಗಾಗಿ ಅಲ್ಲಿ ಏನೂ ಬದಲಾಗಿಲ್ಲ. ಅಂದರೆ, ಸೋವಿಯತ್ ಒಕ್ಕೂಟವನ್ನು ಅವಲೋಕಿಸಿದರೆ, ಅಲ್ಲಿ ಒಂದು ಸಮೂಹ ಸಿದ್ಧಾಂತವಿತ್ತು. ಆ ಸಿದ್ಧಾಂತವನ್ನು ಆಗ ಜನತೆಯ ಒಂದು ದೊಡ್ಡ ಭಾಗ, ದೊಡ್ಡದಲ್ಲದಿದ್ದರೂ ಹೋಗಲಿ, ಒಂದು ಭಾಗವಾದರೂ ಆ ಸಿದ್ಧಾಂತವನ್ನು ಬೆಂಬಲಿಸುತ್ತಿತ್ತು. ಈಗ ಅದು ಕಾಣಸಿಗುವುದಿಲ್ಲ. ರಶ್ಯಾ ದೇಶವು ಸಂಪನ್ಮೂಲಭರಿತವಾದ ಒಂದು ಸಂಪದ್ಭರಿತ ದೇಶ. ಆದರೆ ಅಲ್ಲಿನ ಹೆಚ್ಚಾದ ಜನರು ಅತಿ ಬಡವರು. ಅವರ ಜೀವನದ ಮಟ್ಟ ಅತ್ಯಂತ ನೀಚ ದರ್ಜೆಯದು. ಏಕೆಂದರೆ ಆ ಎಲ್ಲಾ ಸಂಪತ್ತನ್ನೂ ಉಚ್ಚ ಮಟ್ಟದಲ್ಲಿರುವ ಕೆಲವೇ ಮಂದಿ ಹೀರಿ ಮೇಲೆ ಎಳೆದುಕೊಂಡು ಬಿಟ್ಟಿದ್ದಾರೆ. ಜನಸಾಮಾನ್ಯರಿಗೆ ಉಳಿದಿರುವುದು ಅತ್ಯಲ್ಪ ಮಾತ್ರಾ.  ಆದ್ದರಿಂದ ಜನಸಮೂಹ ಅಥವಾ ಅಲ್ಲಿನ ಜನಸಾಮಾನ್ಯರು ಈ ರೀತಿಯ ಸಿದ್ಧಾಂತದ ಯೋಜನೆಯ ಭಾಗವಾಗಿಯೇ ಇಲ್ಲ ಎಂದು ನನಗನ್ನಿಸುತ್ತದೆ. ಅವರನ್ನು ಮೇಲಿನಿಂದ ಆಳಲಾಗುತ್ತಿದೆ. ಇಲ್ಲಿ ಒಂದು ಮಾದರಿ ಸಾಮ್ರಾಜ್ಯಶಾಹೀ ಸ್ಥಿತಿಯಿದೆ. ಜಗತ್ತಿನಲ್ಲೇ ಅತಿ ದೊಡ್ಡ ದೇಶವನ್ನು ಆಳುವ ಸಾರ್ವಭೌಮನು ” ಇದಿಷ್ಟು ನನಗೆ ಸಾಲದು” ಎಂದಂತಿದೆ. ” ನನಗೆ ಮತ್ತಷ್ಟು ಬೇಕು.” ಹಾಗಾಗಿ ಅವನು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ತನ್ನ ಸೈನ್ಯವನ್ನು ಕಳುಹಿಸುತ್ತಾನೆ.

ಮುಂದೇನಾಗಬಹುದು ಎಂದು ಊಹಿಸುವುದು ಕಷ್ಟ ಎಂದು ನಾನು ಪ್ರಾರಂಭದಲ್ಲಿ ಹೇಳಿದ್ದೆ.  ಆದರೂ ನೀವು ಗಾರ್ಡಿಯನ್ನಿನಲ್ಲಿ, ” ಪುಟಿನ್ ಈಗಾಗಲೇ ಈ ಯುದ್ಧದಲ್ಲಿ ಏಕೆ ಸೋತು ಹೋಗಿದ್ದಾನೆ” ಎಂಬ ತಲೆಬರಹದ ಒಂದು ಬರಹವನ್ನು ಪ್ರಕಟಿಸಿದ್ದೀರಿ. ದಯವಿಟ್ಟು ಅದನ್ನು ವಿವರಿಸಿ.

ಒಂದು ವಿಷಯ ಸ್ಪಷ್ಟವಾಗಲೇ ಬೇಕು. ನಾನು ಪುಟಿನ್ ತಕ್ಷಣದಲ್ಲೇ ತನ್ನ ಸೈನ್ಯದ ಸೋಲನ್ನು ಅನುಭವಿಸುತ್ತಾನೆ ಎಂಬುದು ನನ್ನ ಅರ್ಥವಲ್ಲ. ಅವನ ಬಳಿ ಕೀವ್ ಅನ್ನು ಗೆದ್ದು ಬಿಡುವಷ್ಟು ಸೈನ್ಯಶಕ್ತಿ ಖಂಡಿತವಾಗಿಯೂ ಇದೆ. ಅವನು ಯುಕ್ರೇನನ್ನು ಸಂಪೂರ್ಣವಾಗಿ ಗೆದ್ದು ಬಿಡಲೂ ಬಹುದು. ದುಃಖಕರ ವಿಷಯವೆಂದರೆ ನಾವು ಸದ್ಯದಲ್ಲೇ ಇದನ್ನು ನೋಡಲೂ ಬಹುದು. ಆದರೆ ಅವನು ಭವಿಶ್ಯದ ಗುರಿ ಅಂದರೆ, ಈ ಯುದ್ಧಕ್ಕೆ ಮೂಲ ಕಾರಣ ಎಂದರೆ ಯುಕ್ರೇನ್ ಎಂಬ ರಾಷ್ಟ್ರçದ ಅಸ್ತಿತ್ವವನ್ನು ಅಲ್ಲಗಳೆಯುವುದು ಮತ್ತು ಅದನ್ನು ರಶ್ಯಾದೊಂದಿಗೆ ವಿಲೀನಗೊಳಿಸಿಬಿಡುವುದು. ಹಾಗೆ ಮಾಡಬೇಕಾದರೆ ಬರಿದೇ ಯುಕ್ರೇನನ್ನು ಗೆದ್ದು ಬಿಟ್ಟರೆ ಸಾಲುವುದಿಲ್ಲ. ಅದನ್ನು ಉಳಿಸಿಕೊಳ್ಳಬೇಕಾಗುತ್ತದೆ. ಮತ್ತು ಇವೆಲ್ಲಾ, ಯುಕ್ರೇನಿನ ಅತಿ ಹೆಚ್ಚು ಜನರಿಗೆ ಇದು ಒಪ್ಪಿಗೆಯಾಗುತ್ತದೆ ಎಂಬ ಒಂದು ಅತಿರೇಕದ ಕಲ್ಪನೆಯ ಮತ್ತು ಒಂದು ದಾವೆಯ ಮೇಲೆ ನಿಂತಿದೆ. ಯುಕ್ರೇನಿನ ಜನರು ಇದನ್ನು ಸ್ವಾಗತಿಸುತ್ತಾರೆ ಎಂಬ ಕಲ್ಪನೆಯಿದೆ. ಇದು ನಿಜವಲ್ಲ ಎಂಬುದು ನಮಗೆ ಈಗಾಗಲೇ ಗೊತ್ತಿದೆ. ಯುಕ್ರೇನ್ ಒಂದು ನಿಜವಾದ ದೇಶ. ಅಲ್ಲಿನ ಜನರು ತೀವ್ರ ಸ್ವತಂತ್ರವಾದಿಗಳು. ಅವರಿಗೆ ರಶ್ಯಾದ ಭಾಗವಾಗಿ ಬಿಡಲು ಒಪ್ಪಿಗೆಯಿಲ್ಲ. ಅವರು ಉಗ್ರವಾಗಿ ಕಾದಾಡುತ್ತಾರೆ. ಒಂದು ಲಂಬವಾದ ಕಾಲಾವಧಿಯ ಭವಿಶ್ಯವನ್ನು ನೋಡಿದರೆ, ನೀವು ಒಂದು ರಾಷ್ಟ್ರçವನ್ನು ಗೆದ್ದೇನೋ ಬಿಡಬಹುದು. ಆದರೆ ಅಫಘಾನಿಸ್ತಾನದಲ್ಲಿ ರಶ್ಯಾದವರು ಕಂಡುಕೊಂಡಂತೆ, ಅ¥ಪಘಾನಿಸ್ತಾನ ಮತ್ತು ಇರಾಕಿನಲ್ಲಿ ಅಮೆರಿಕನ್ನರು ಕಲಿತು ಕೊಂಡಂತೆ ಬೇರೊಂದು ಗೆದ್ದ ದೇಶವನ್ನು ಉಳಿಸಿಕೊಳ್ಳುವುದು ಅತ್ಯಂತ ಕಷ್ಟ. ಮತ್ತೂ ನೋಡಿದರೆ ಈ ಯುದ್ಧದ ಮುಂಚಿನ ಅತಿ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಇದಾಗಿತ್ತು. ಯುದ್ಧವು ಪ್ರಾರಂಭವಾಗುವ ಮೊದಲೇ ಅನೇಕ ವಿಷಯಗಳ ಬಗ್ಗೆ ಅರಿವಿತ್ತು. ರಶ್ಯಾದ ಸೈನ್ಯ ಯುಕ್ರೇನಿನ ಸೈನ್ಯಕ್ಕಿಂತ ಬಹಳ ದೊಡ್ಡದೆಂದು ಎಲ್ಲಾರಿಗೂ ತಿಳಿದಿತ್ತು. ನೇಟೋ ತನ್ನ ಸೈನ್ಯವನ್ನು ಯುಕ್ರೇನಿನ ಒಳಗೆ ಕಳುಹಿಸುವುದಿಲ್ಲವೆಂಬುದು ಎಲ್ಲರಿಗೂ ತಿಳಿದಿತ್ತು. ಪಾಶ್ಚಿಮಾತ್ಯ ದೇಶಗಳು ಮತ್ತು ಯೂರೋಪ್ ಅತಿ ತೀವ್ರವಾದ ನಿರ್ಬಂಧನೆಗಳನ್ನು ಹೇರಲು ಹಿಂಜರಿಯುವುದೆಂದೂ ಎಲ್ಲರಿಗೂ ತಿಳಿದಿತ್ತು. ಏಕೆಂದರೆ ಅದರಿಂದ ಅವುಗಳಿಗೇ ಹಾನಿಯಾಗುವ ಸಾಧ್ಯತೆಯಿರುತ್ತದೆ. ಪುಟಿನ್ನನ ಯುದ್ಧದ ಯೋಜನೆಗೆ ಇವುಗಳೇ ತಳಹದಿಯಾಗಿಯೂ ಇದ್ದವು. ಆದರೆ ಇಲ್ಲಿ ಒಂದು ದೊಡ್ಡ ಯಾರಿಗೂ ಗೊತ್ತಿಲ್ಲದ ಅಂಶವಿತ್ತು. ಅದೇನೆಂದರೆ ಯಾರಿಗೂ ಯುಕ್ರೇನಿನ ಜನರು ಹೇಗೆ ಪ್ರತಿಕ್ರಿಯಿಸಬಹುದು ಎಂಬುದು ತಿಳಿದಿರಲಿಲ್ಲ. ಒಂದು ಸಾಧ್ಯತೆಯಂತೂ ಯಾವಾಗಲೂ ಇದ್ದೇ ಇತ್ತು. ಪುಟಿನ್ನನ ಅತಿರೇಕದ ಕಲ್ಪನೆ ನಿಜವಾಗಿಯೂಬಿಡಬಹುದಿತ್ತು. ರಶ್ಯಾದ ಸೈನ್ಯ ಒಳಬರುತ್ತದೆ; ಜೆಲೆನ್ಸ್ಕಿ ಓಡಿಹೋಗಿಬಿಡುತ್ತಾನೆ; ಯುಕ್ರೇನಿನ ಸೈನ್ಯ ಶರಣಾಗಿ ಬಿಡಬಹುದು ಹಾಗೂ ಅಲ್ಲಿನ ಜನರು ಏನನ್ನೂ ಮಾಡದೇ ಇರಬಹುದು. ಈ ಸಾಧ್ಯತೆ ಇದ್ದೇ ಇತ್ತು. ಆದರೆ ಇದೊಂದು ಬರಿಯ ಕಲ್ಪನೆಯೆಂದು ನಮಗೆ ಈಗ ಗೊತ್ತಾಗಿದೆ. ಯುಕ್ರೇನಿನ ಜನ ಕಾದಾಡುತ್ತಾರೆ ಎಂದು ನಮಗೆ ತಿಳಿದಿದೆ, ಅವರು ಕಾದಾಡುತ್ತಲೇ ಇದ್ದಾರೆ. ಇದು ಪುಟಿನ್ನನ ಯುದ್ಧದ ತಾರ್ಕಿಕ ಆಧಾರವನ್ನೇ ಬುಡಮೇಲು ಮಾಡಿದೆ. ಏಕೆಂದರೆ ನೀವು ಮತ್ತೊಂದು ದೇಶವನ್ನು ಗೆದ್ದು ಬಿಡಬಹುದು.  ಆದರೆ ಯುಕ್ರೇನನ್ನು ರಶ್ಯಾದ ಒಳಗೆ ಸೇರಿಸ್ಕೊಂಡು ಬಿಡುವುದು ಅಸಾಧ್ಯ. ಅವನು ಸಾಧಿಸುತ್ತಿರುವ ಒಂದೇ ಒಂದು ಮಹತ್ಕಾರ್ಯವೆಂದರೆ, ಅವನು ಪ್ರತಿಯೊಬ್ಬ ಯುಕ್ರೇನಿನ ಪ್ರಜೆಯ ಹೃದಯದಲ್ಲಿ ದ್ವೇಶದ ಬೀಜಗಳನು ಬಿತ್ತುತ್ತಿದ್ದಾನೆ. ಪ್ರತಿಯೊಬ್ಬ ಯುಕ್ರೇನಿನ ಪ್ರಜೆ ಮಡಿದಾಗಲೂ, ಯುದ್ಧ ಮುಂದುವರೆಯುವ ಪ್ರತಿಯೊಂದು ದಿನದಲ್ಲೂ ಇನ್ನೂ ಹೆಚ್ಚು ಹೆಚ್ಚು ದ್ವೇಷದ ಬೀಜಗಳನ್ನು ಬಿತ್ತಲಾಗುತ್ತದೆ. ಈ ದ್ವೇಷ ಮುಂದಿನ ಹಲವಾರು ತಲೆ ಮಾರುಗಳವರೆಗೆ ಮುಂದುವರೆಯುತ್ತದೆ.

ಪ್ಯುಟಿನ್ನಿನ ಕಾಲಕ್ಕೂ ಮುಂಚೆ ಯುಕ್ರೇನಿನ ಜನರು ಮತ್ತು ರಶ್ಯನ್ನರೂ ಒಬ್ಬರನ್ನೊಬ್ಬರು ದ್ವೇಷಿಸುತ್ತಿರಲಿಲ್ಲ. ಅವರು ಸಹೋದರರಂತಿದ್ದರು. ಈಗ ಅವನು ಅವರನ್ನು ವೈರಿಗಳನ್ನಾಗಿ ಮಾಡುತ್ತಿದ್ದಾನೆ. ಇದು ಮುಂದುವರೆದರೆ ಇದೇ ಅವನು ಸಂಪಾದಿಸುವ ಮತ್ತು ಅವನು ತನ್ನ ಜೀವನದಲ್ಲಿ ಗಳಿಸಿ ಬಿಟ್ಟು ಹೋಗುವ ಸ್ವತ್ತಾಗುತ್ತದೆ.

ಇದರ ಬಗ್ಗೆ ಮುಂದೆ ಮಾತನಾಡೋಣ. ಪ್ಯುಟಿನ್ನಿಗೆ ವಿಜಯದ ಅಗತ್ಯವಿದೆಯಲ್ಲವೇ? ಇನ್ನೂ ಒಂದು ವಾರ ಮಾತ್ರಾ ನಡೆದಿರುವ ಈ ಯುದ್ಧದ ಮಾನವ, ರಾಜಕೀಯ ಮತ್ತು ಆರ್ಥಿಕ ವೆಚ್ಚ ಅಂತರಿಕ್ಷ ಮುಟ್ಟುತ್ತಿದೆ. ಈ ವೆಚ್ಚವನ್ನು ಸರಿ ಎಂದು ಸಾಧಿಸಿಕೊಳ್ಳಬೇಕಾದರೆ, ಮತ್ತು ರಶ್ಯಾದ ಅಧ್ಯಕ್ಷನಾಗಿ ಉಳಿಯ ಬೇಕಾದರೆ ಪ್ಯುಟಿನ್ ಜಯ ಗಳಿಸಬೇಕು, ಅಷ್ಟೇ ಅಲ್ಲ ಅದು ಸಮರ್ಥಿಸಿಕೊಳ್ಳುವಂಥಹ ಗೆಲವು ಕೂಡಾ ಆಗಿರಬೇಕು. ಹಾಗಾಗಿ ಇದನ್ನೆಲ್ಲಾ ಹೊಂದಿಸುವುದು ಹೇಗೆ?

ಯುವಾ: ನನಗೆ ತಿಳಿಯದು. ನಿಮಗೆ ಜಯ ಗಳಿಸುವ ಅಗತ್ಯವಿದೆ ಎಂದ ಮಾತ್ರಕ್ಕೆ ನೀವು ಗೆದ್ದೇ ಬಿಡುವಿರಿ ಎಂದರ್ಥವಲ್ಲ. ಬೇಕಾದಷ್ಟು ರಾಜಕೀಯ ಮುಖಂಡರುಗಳಿಗೆ ಗೆಲ್ಲುವ ಅಗತ್ಯವಿರುತ್ತದೆ, ಆದರೆ ಕೆಲವು ಬಾರಿ ಅವರು ಸೋಲುತ್ತಾರೆ.

ಅವನು ಈ ಯುದ್ಧವನ್ನು ನಿಲ್ಲಿಸಿ ತಾನೇ ಗೆದ್ದೆ ಎಂದು ಘೋಷಿಸಿಕೊಂಡು ಬಿಡಬಹುದು. ಮತ್ತು ಲೊಹಾನ್ಸ್ ಮತ್ತು ದೊನೇಸ್ಕ್ರನ್ನು ರಶ್ಯಾ ಗುರುತಿಸಿ ಒಪ್ಪಿಕೊಳ್ಳುತ್ತದೆ ಎನ್ನಬಹುದು. ಇದೇ ಅವನಿಗೆ ಬೇಕಾದ್ದದ್ದು ಮತ್ತು ಇದನ್ನು ಅವನು ಸಾಧಿಸಿ ಬಿಟ್ಟನೆನ್ನಬಹುದು. ಅವರು ಈ ಒಪ್ಪಂದವನ್ನು ಮಾಡಿಕೊಳ್ಳಬಹುದು. ನನಗೆ ಗೊತ್ತಿಲ್ಲ. ಇದು ರಾಜಕೀಯ ವ್ಯಕ್ತಿಗಳ ಕೆಲಸ. ನಾನು ರಾಜಕೀಯ ವ್ಯಕ್ತಿಯಲ್ಲ.

ಆದರೆ ಎಲ್ಲಾರ ಒಳಿತಿಗಾಗಿ ನಾನು ಹೀಗೆ ಹೇಳಬಲ್ಲೆ. ಎಲ್ಲರ ಅಂದರೆ ಯುಕ್ರೇನ್ ಜನರ, ರಶ್ಯನ್ನರ ಮತ್ತು ಎಲ್ಲಾ ಮಾನವರ ಒಳಿತಿಗಾಗಿ ಈ ಯುದ್ಧ ತಕ್ಷಣವೇ ನಿಲ್ಲಬೇಕು. ಹಾಗಾಗದಿದ್ದರೆ ಇದರಲ್ಲಿ ಯಾತನೆಗೊಳಗಾಗುವವರು ಯುಕ್ರೇನ್ ಮತ್ತು ರಶ್ಯಾದ ಜನರು ಮಾತ್ರವೇ ಅಲ್ಲ. ಈ ಯುದ್ಧ ಮುಂದುವರೆದರೆ ಪ್ರತಿಯೊಬ್ಬ ಮಾನವರೂ ಅತ್ಯಂತ ಕಷ್ಟಗಳನ್ನು ಅನುಭವಿಸುತ್ತಾರೆ.

ಅದು ಹೇಗೆಂದು ವಿವರಿಸಿ.

ಏಕೆಂದರೆ ಇದರಿಂದ ಇಡೀ ಜಗತ್ತನ್ನು ಅಸ್ಥಿರಗೊಳಿಸುವಂಥಾ ಆಘಾತದ ಅಲೆಗಳು ಹುಟ್ಟಿ ಹರಡುತ್ತವೆ. ನಾವು ತಳಮಟ್ಟದಿಂದ ಪ್ರಾರಂಭಿಸೋಣ. ಬಜೆಟ್‌ಗಳು…ಈ ಹಿಂದಿನ ಹಲವು ದಶಕಗಳಿಂದ ನಾವು ಒಂದು ಆಶ್ಚರ್ಯಕರ ಶಾಂತಿಯುತ ಕಾಲದಲ್ಲಿ ಜೀವಿಸುತ್ತಿದ್ದೇವೆ. ಇದೊಂದು ಬಗೆಯ ಹಿಪ್ಪೀ ಮನೋಭಾವದ ಕಾಲ್ಪನಿಕ ಸ್ಠಿತಿಯೇನೂ ಆಗಿರಲಿಲ್ಲ. ಈ ಶಾಂತಿಯ ಸ್ಥಿತಿಯನ್ನು ನೀವು ತಳಮಟ್ಟದಲ್ಲಿ ಅಂದರೆ ಬಜೆಟ್‌ಗಳಲ್ಲಿ ಕಂಡಿರಿ. ಯೂರೋಪಿನಲ್ಲಿ, ಯೂರೋಪಿಯನ್ ಯೂನಿಯನ್ನಿನಲ್ಲಿ, ಯೂರೋಪಿಯನ್ ಯೂನಿಯನ್ನಿನ ಸದಸ್ಯ ರಾಷ್ಟçಗಳ ಸರಾಸರಿ ಮಿಲಿಟರಿ ಬಜೆಟ್‌ಗಳು ಅವರವರ ಸರಕಾರದ ಬಜೆಟ್ಟುಗಳ ಸುಮಾರು ಪ್ರತಿಶತ ಮೂರಷ್ಟಿತ್ತು. ಇದೊಂದು ಐತಿಹಾಸಿಕ ಪವಾಡವೇನೋ ಎನ್ನಿಸುವಂತಿತ್ತು. ಹೆಚ್ಚಾಗಿ ಚರಿತ್ರೆಯ ಎಲ್ಲಾ ಕಾಲದಲ್ಲೂ ಸುಲ್ತಾನರ, ರಾಜರುಗಳ ಮತ್ತು ಸಾರ್ವಭೌಮರ ಬಜೆಟ್ಟಿನ ೫೦% ಅಥವಾ ೮೦% ಅಷ್ಟು ಭಾಗ ಯುದ್ಧಗಳಿಗೆ ಅಥವಾ ಸೈನ್ಯಕ್ಕೆ ಸಲ್ಲುತ್ತಿತ್ತು.

ಯೂರೋಪಿನಲ್ಲಿ ಇದು ಇತ್ತೀಚೆಗೆ ಶೇಕಡಾ ಮೂರರಷ್ಟಿತ್ತು, ಅದೇ ಜಗತ್ತಿನ ಇತರ ರಾಷ್ಟçಗಳಲ್ಲಿ ಅದು ಸುಮಾರು ಶೇಕಡಾ ಆರರಷ್ಟಿತ್ತು ಎನ್ನಿಸುತ್ತದೆ, ನನಗೆ ಸರಿಯಾಗಿ ಗೊತ್ತಿಲ್ಲ, ಈ ಸಂಖ್ಯೆಯನ್ನೊಮ್ಮೆ ಪರಿಶೀಲಿಸಿ. ಈ ಕೆಲವೇ ದಿನಗಳಲ್ಲಿ ನಾವು ಕಂಡಿರುವುದೇನೆಂದರೆ ಜರ್ಮನಿಯು ಒಂದೇ ದಿನದಲ್ಲಿ ತನ್ನ ಸೈನ್ಯದ ಬಜೆಟ್ಟನ್ನು ಎರಡರಷ್ಟು ಹೆಚ್ಚಿಸಿತು. ನಾನು ಅದನ್ನು ವಿರೋಧಿಸುತ್ತಿಲ್ಲ. ಅವರು ಈಗ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಇದು ನ್ಯಾಯಯುತವಾಗಿದೆ. ಜರ್ಮನರು, ಪೋಲ್ಯಾಂಡಿನ ಸರಕಾರ ಎಲ್ಲಾರೂ ಅವರವರ ಸೈನ್ಯದ ಬಜೆಟ್ಟನ್ನು ಎರಡರಷ್ಟು ಏರಿಸುವುದು ಸಕಾರಣವಾಗಿದೆ. ಜಗತ್ತಿನ ಮತ್ತೆಲ್ಲಾ ರಾಷ್ಟçಗಳೂ ಹೀಗೆ ಮಾಡುವುದನ್ನು ನೀವು ಕಾಣುತ್ತೀರಿ. ಆದರೆ ಇದು ಪಾತಾಳಕ್ಕೆ ಬಿದ್ದು ಬಿಡಲು ಓಡುವ ಪಂದ್ಯದಂತಿದೆ. ರಾಷ್ಟ್ರçಗಳು ತಮ್ಮತಮ್ಮ ಸೈನ್ಯದ ಬಜೆಟ್ಟನ್ನು ಎರಡರಷ್ಟು ಏರಿಸಿದರೆ ಅದನ್ನು ನೋಡಿ ಮತ್ತಿತರ ರಾಷ್ಟçಗಳೂ ತಮ್ಮತಮ್ಮ ಬಜೆಟ್ಟನ್ನು ಏರಿಸುತ್ತವೆ. ಈ ಅಸುರಕ್ಷತೆಯ ಭಾವನೆಯಿಂದ ಮತ್ತೆ ಮತ್ತೆ ಎರಡರಷ್ಟು ಮೂರರಷ್ಟು ಏರಿಸ ತೊಡಗುತ್ತಾರೆ. ಹಾಗಾಗಿ ಆರೋಗ್ಯಕ್ಕೆ, ವಿದ್ಯಾಭ್ಯಾಸಕ್ಕೆ ಮತ್ತು ಹವಾಮಾನದ ಏರುಪೇರಿಗೆ ಬಳಸ ಬೇಕಾಗಿದ್ದ ಹಣ ಈಗ ಯುದ್ಧಗಳಿಗೆ, ಕ್ಷಿಪಣಿಗಳಿಗೆ ಟ್ಯಾಂಕುಗಳಿಗಾಗಿ ಬಳಸಲಾಗುತ್ತದೆ. ಹಾಗಾಗಿ ಎಲ್ಲರಿಗೂ ಕಡಿಮೆ ಆರೋಗ್ಯ ಸೇವೆಗಳು ಲಭ್ಯವಿರುತ್ತವೆ.

ಹಾಗೂ ಪ್ರಾಯಶಃ ಹವಾಮಾನ ವ್ಯತಿರಿಕ್ತಗಳಿಗೆ ಪರಿಹಾರಗಳೇ ಇಲ್ಲವೇನೊ, ಏಕೆಂದರೆ ಅದಕ್ಕಾಗಿ ಸಲ್ಲ ಬೇಕಾಗಿದ್ದ ಹಣವೆಲ್ಲಾ ಟ್ಯಾಂಕುಗಳಿಗಾಗಿ ಖರ್ಚಾಗುತ್ತದೆ. ಹೀಗಾಗಿ ನೀವು ಆಸ್ಟ್ರೇಲಿಯಾದಲ್ಲಿರಬಹುದು, ಬ್ರೆಜಿûಲ್ಲಿನಲ್ಲಿರಬಹುದು ಈ ಯುದ್ಧದ ಪರಿಣಾಮಗಳನ್ನು ನೀವು ಇಳಿಮುಖವಾಗುವ ಆರೋಗ್ಯ ಸೇವೆಗಳು, ಪ್ರಾಕೃತಿಕ ಬಿಕ್ಕಟ್ಟುಗಳ ಹಾಳಾಗುವಿಕೆ ಮುಂತಾದವುಗಳಲ್ಲಿ ಅನುಭವಿಸುತ್ತೀರಿ. ಮತ್ತೊಂದು ಅತಿ ಮುಖ್ಯ ಅಂಶವೆಂದರೆ ಅದು ತಂತ್ರಜ್ಞಾನ. ನಾವು ಒಂದು ಹೊಸ ತಾಂತ್ರಿಕತೆಯ ಅಂಚಿನಲ್ಲಿದ್ದೇವೆ, ಅಂಚೇಕೆ ಅದರ ನಡುವಿನಲ್ಲಿದ್ದೇವೆ. ಅದು ಒಂದು ನವೀನ ತಾಂತ್ರಿಕ ಶಸ್ತ್ರಾಸ್ತ್ರç ಪಂದ್ಯ. ಇದು ಕೃತಕ ಬುದ್ಧಿಮತ್ತೆಯಂಥಾ ಕ್ಷೇತ್ರಗಳಲ್ಲಿದೆ. ನಾವು ಒಂದು ಅತಿಹೀನವಾದ ಪರಿಸ್ಥಿತಿಯನ್ನು ತಡೆ ಹಿಡಿಯಬೇಕಾದರೆ ನಾವು ಹೇಗೆ ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸಬೇಕು ಎಂಬುದರ ಬಗ್ಗೆ ನಮಗೆ ಒಂದು ಜಾಗತಿಕ ಒಪ್ಪಂದದ ಅಗತ್ಯವಿದೆ. ಒಂದು ಹೊಸ ಶೀತಲ ಸಮರವನ್ನು ಎದುರಿಸುತ್ತಿರುವಾಗ ನಾವು ಕೃತಕ ಬುದ್ಧಿಮತ್ತೆಯ ಬಗ್ಗೆ ಹೇಗೆ ಒಂದು ಜಾಗತಿಕ ಒಪ್ಪಂದಕ್ಕೆ ಬರಲು ಸಾಧ್ಯ? ಇದೊಂದು ಹೊಸ ಶೀತಲ ಸಮರವೋ ಅಥವಾ ಸುಡು ಸಮರವೋ ಯಾವುದಾದರೂ ಒಂದು. ಈ ಯುದ್ಧ ಮುಂದುವರೆದರೆ ಕೃತಕ ಬುದ್ಧಿಮತ್ತೆಯ ಶಸ್ತ್ರಾಸ್ತ್ರç ಪಂದ್ಯವನ್ನು ತಡೆಯಲು ನಡೆಸುವ ಎಲ್ಲಾ ಪ್ರಯತ್ನಗಳೂ ಧೂಳೀಪಟವಾಗುತ್ತವೆ.

ಹಾಗಾಗಿ ಪ್ರಪಂಚದ ಎಲ್ಲಾ ಜನರೂ ಎಲ್ಲೆಡೆಯಲ್ಲೂ ಎಲ್ಲಾ ಬಗೆಯಲ್ಲೂ ಇದರ ಪರಿಣಾಮವನ್ನು ಹೆಚ್ಚುಹೆಚ್ಚಾಗಿ ಅನುಭವಿಸುತ್ತಾರೆ. ಇದು ಮತ್ತೊಂದು ಸಾಮಾನ್ಯ ಪ್ರಾದೇಶಿಕ ಸಂಘರ್ಷಕ್ಕಿಂತ ಅತಿ ದೊಡ್ಡದು.

ಇದು ಜಾಗತಿಕ ಉದಾರವಾದಿ ಕ್ರಮದ ಅಟ್ಲಾಂಟಿಕ್ ಮಹಾಸಾಗರದ ಆಚೀಚಿನ ಶಾಂತಿಯನ್ನು ಬಲಹೀನಗೊಳಿಸುವ ಮತ್ತು ಯೂರೋಪನ್ನು ವಿಭಜಿಸುವ ಪ್ಯುಟಿನ್ನಿನ ಒಂದು ಪ್ರಯತ್ನವಾಗಿದ್ದರೆ ಅವನು ಆಕಸ್ಮಿಕವಾಗಿ ಅವುಗಳನ್ನೆಲ್ಲಾ ಮತ್ತೆ ಪುನರ್ಜೀವಗೊಳಿಸಿ ಬಿಟ್ಟಿದ್ದಾನೆ ಎನ್ನಿಸುತ್ತದೆ. ಅಮೆರಿಕಾ ಮತ್ತು ಯೂರೋಪಿನ ಸಂಬಂಧಗಳು ಹಲವು ವರ್ಷಗಳಿಂದ ಇಲ್ಲದಷ್ಟು ಹತ್ತಿರವಾಗಿವೆ. ಇದನ್ನು ನೀವು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ?

ಯುವಾ: ಮತ್ತೆ ಹೇಳುತ್ತೇನೆ, ಈ ದೃಷ್ಟಿಯಿಂದ ಅವನು ಈ ಯುದ್ಧದಲ್ಲಿ ಈಗಾಗಲೇ ಸೋತಿದ್ದಾನೆ. ಅವನ ಗುರಿ ಯೂರೋಪನ್ನು ವಿಭಜಿಸುವುದಾಗಲೀ ನೇಟೋವನ್ನು ಒಡೆಯುವುದಾಗಲೀ ಆಗಿದ್ದಲ್ಲಿ, ಅದರ ತದ್ವಿರುದ್ಧವಾದದ್ದನ್ನು ಸಾಧಿಸಿದ್ದಾನೆ. ಯೂರೋಪಿನ ಪ್ರತಿಕ್ರಿಯೆ ಎಷ್ಟು ತ್ವರಿತವಾಗಿತ್ತು, ಎಷ್ಟು ಬಲವಾಗಿತ್ತು ಮತ್ತು ಎಷ್ಟು ಏಕಮತೀಯವಾಗಿತ್ತು ಎಂದು ನನಗೆ ಆಶ್ಚರ್ಯವಾಗಿದೆ. ಯೂರೋಪಿಗೇ ಅದು ಅಷ್ಟು ಅಚ್ಚರಿಯುತವಾಗಿದೆ. ನೀವು ಫಿûನ್‌ಲ್ಯಾಂಡ್ ಮತ್ತು ಸ್ವೀಡನ್ನಿನಂಥಾ ದೇಶಗಳು ತಮ್ಮ ವಾಯುಪ್ರದೇಶಗಳನ್ನು ಮುಚ್ಚಿ ಯುಕ್ರೇನಿಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ಕಾಣುತ್ತೀರಿ. ಇದನ್ನು ಅವರು ಶೀತಲ ಸಮರದ ಸಮಯದಲ್ಲಿ ಸಹಾ ಮಾಡಿರಲಿಲ್ಲ. ಇದೊಂದು ಅದ್ಭುತವಾದ ವಿಷಯ. ಮತ್ತೊಂದು ಅತಿ ಪ್ರಮುಖ ವಿಷಯವೆಂದರೆ ಅದು ಪಶ್ಚಿಮವನ್ನು ಹಿಂದಿನ ಹಲವಾರು ವರ್ಷಗಳಲ್ಲಿ ಯಾವುದು ವಿಭಜಿಸುತ್ತಿದೆಯೋ ಅದು. ಅಂದರೆ ಜನರು ಹೆಸರಿಸುವಂತೆ ಅದೊಂದು “ಸಾಂಸ್ಕೃತಿಕ ಸಮರ”. ಎಡ ಮತ್ತು ಬಲಗಳ ನಡುವಿನ, ಸಂಪ್ರದಾಯವಾದಿಗಳು ಮತ್ತು ಉದಾರವಾದಿಗಳ ನಡುವಿನ ಸಾಂಸ್ಕೃತಿಕ ಸಮರ. ಈ ಯುದ್ಧದಿಂದ ಪಶ್ಚಿಮದ ಈ ಬಗೆಯ ಸಾಂಸ್ಕೃÈತಿಕ ಸಮರಗಳಿಗೆ ಅಂತ್ಯವಾಗಬಹುದು. ಸಾಂಸ್ಕೃತಿಕ ಸಮರಗಳಲ್ಲಿ ಶಾಂತಿ ಬರಬಹುದು. ಏಕೆಂದರೆ ಇದ್ದಕ್ಕಿದ್ದಂತೆ ಎಲ್ಲರಿಗೂ ನಾವೆಲ್ಲರೂ ಇದರಲ್ಲಿದ್ದೇವೆ ಎಂಬ ಭಾವನೆ ಬರಬಹುದು. ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿ ಎಡ ಬಲದ ವಾಗ್ಯುದ್ಧಗಳಿಗಿಂತಾ ದೊಡ್ಡದಾದ ಬೇಕಾದಷ್ಟು ಸಮಸ್ಯೆಗಳಿವೆ. ನಾವು ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳನ್ನು ಕಾಪಾಡಲು ಒಟ್ಟಾಗಿ ನಿಲ್ಲಬೇಕೆಂಬುದಕ್ಕೆ ಇದೊಂದು ಎಚ್ಚರಿಸುವ ಗಂಟೆಯಾಗಿದೆ.

ಆದರೆ ಇದು ಅದಕ್ಕೂ ಹೆಚ್ಚು ಆಳವಾಗಿದೆ. ಎಡ ಬಲದ ನಡುವಿನ ಬಹಳಷ್ಟು ವೈರುಧ್ಯಗಳು ಉದಾರವಾದಿತ್ವದ ಮತ್ತು ರಾಷ್ತ್ರೀಯತೆಯ ನಡುವಿನ ವ್ಯತ್ಯಾಸಗಳಿಂದಲೇ ಉದ್ಭವಿಸಿದವುಗಳೆನ್ನಿಸುತ್ತದೆ. ಅಂದರೆ ನೀವು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಎಡದವರು ಉದಾರವಾದಿತ್ವದತ್ತ ಮತ್ತು ಬಲದವರು ರಾಷ್ಟ್ರೀಯತೆಯತ್ತ ಹೊರಳುತ್ತಾರೆ. ಆದರೆ ಹಾಗಲ್ಲ, ಅವೆರಡೂ ಒಟ್ಟೊಟ್ಟಿಗೆ ಸಾಗುತ್ತವೆ ಎಂಬುದಕ್ಕೆ ಯುಕ್ರೇನ್ ಒಂದು ಉದಾಹರಣೆ. ಐತಿಹಾಸಿಕವಾಗಿ ನೋಡಿದರೆ ರಾಷ್ಟ್ರೀಯತೆಯೂ ಉದಾರವಾದಿತ್ವವೂ ಬೇರೆಬೇರೆಯಲ್ಲ, ವಿರುದ್ಧವಲ್ಲ ಅವು ವೈರಿಗಳಲ್ಲ. ಅವು ಮಿತ್ರರಂತೆ ಒಟ್ಟೊಟ್ಟಿಗೆ ಸಾಗುತ್ತವೆ. ಅವು ಕೇಂದ್ರ ಮೌಲ್ಯಗಳಾದ ಸ್ವಾತಂತ್ರ್ಯ ಮತ್ತು ಸ್ವ-ಇಚ್ಚೆಗಳಲ್ಲಿ ಪರಸ್ಪರ ಸಂಧಿಸುತ್ತವೆ. ಒಂದು ರಾಷ್ಟ್ರ ತನ್ನ ಅಸ್ತಿತ್ವಕ್ಕಾಗಿ ಮತ್ತು ತನ್ನ ಸ್ವಾತಂತ್ರಕ್ಕಾಗಿ ಹೋರಾಡುವುದನ್ನು ¥ಎÁಕ್ಸ್ ನ್ಯೂಸಿನಲ್ಲೋ ಸಿಎನೆನ್ನಿನಲ್ಲೋ ಕಂಡಾಗ , ನಿಜ ಅವರು ಅದನ್ನು ಕೊಂಚ ವ್ಯತ್ಯಾಸವಾಗಿ ವರದಿ ಮಾಡುತ್ತಿರಬಹುದು, ಆದರೂ ಅವರು ಇದ್ದಕ್ಕಿದ್ದಂತೆ ಅದರ ನೈಜ ಸ್ವರೂಪವನ್ನು ಹೇಳಿಯೇ ಬಿಡುತ್ತಾರೆ. ಅಲ್ಲಿ ಅವರಿಗೊಂದು ಸಾಮಾನ್ಯ ನೆಲೆಯೂ ಕಂಡುಬಿಡುತ್ತದೆ. ಅಂದರೆ ಅವರಿಗೆ ಒಮ್ಮೆಗೇ ರಾಷ್ಟ್ರೀಯವಾದವೆಂದರೆ ಅಲ್ಪಸಂಖ್ಯಾತರನ್ನು ದ್ವೇಶಿಸುವುದೋ ಅಥವಾ ವಿದೇಶೀಯರನ್ನು ದ್ವೇಶಿಸುವುದೋ ಅಲ್ಲವೇ ಅಲ್ಲ, ಬದಲಾಗಿ ತಮ್ಮತಮ್ಮ ಸ್ವರಾಷ್ಟ್ರçದ ಜನರನ್ನು ಪ್ರೇಮಿಸುವುದೇ ಆಗಿದೆ ಎಂಬ ಅರಿವುಂಟಾಗಿ ಬಿಡುತ್ತದೆ ಮತ್ತು ರಾಷ್ಟ್ರೀÃಯವಾದವೆಂದರೆ ನಮ್ಮ ನಮ್ಮ ರಾಷ್ಟ್ರçಗಳನ್ನು ಒಟ್ಟಾಗಿ ಶಾಂತಿಯುತವಾಗಿ ಹೇಗೆ ನಡೆಸಬಹುದೆಂಬುದರ ಬಗ್ಗೆ ಒಮ್ಮತಕ್ಕೆ ಬರುವುದೇ ಎಂಬುದು ಅರ್ಥವಾಗುತ್ತದೆ.

ಈಗ ನಡೆಯುತ್ತಿರುವುದನ್ನು ನೋಡಿ ಪಶ್ಚಿಮದಲ್ಲಿ ಈಗ ನಡೆಯುತ್ತಿರುವ ಸಾಂಸ್ಕೃತಿಕ ಯುದ್ಧದ ಅಂತ್ಯವಾಗುತ್ತದೆ ಎಂದು ನಾನು ಆಶಿಸುತ್ತೇನೆ. ಹೀಗಾಗಿ ಬಿಟ್ಟರೆ ನಾವು ಮತ್ತಿನ್ಯಾವುದಕ್ಕೂ ಚಿಂತಿಸಬೇಕಾಗಿಲ್ಲ. ನೋಡಿ, ನೀವು ನಿಜವಾದ ಪ್ರಾಬಲ್ಯದ ತುಲನೆ ಮಾಡಿದರೆ , ಅಂದರೆ ಯೂರೋಪಿಯನ್ನರು ಮತ್ತು ಅಮೆರಿಕನ್ನರು ಒಗ್ಗಟ್ಟಾಗಿ ನಿಂತರೆ ಮತ್ತು ಈ ಸಾಂಸ್ಕೃÈತಿಕ ಯುದ್ಧವನ್ನು ನಿಲ್ಲಿಸಿದರೆ, ತಮ್ಮನ್ನು ತಾವೇ ಸೀಳಿಕೊಳ್ಳುವುದನ್ನು ನಿಲ್ಲಿಸಿದರೆ ಅವರಿಗೆ ರಶ್ಯನ್ನರ ಬಗ್ಗೆಯಾಗಲೀ ಮತ್ಯಾರೊಬ್ಬರ ಬಗ್ಗೆಯಾಗಲೀ ಭಯ ಪಡಬೇಕಾಗಿಯೇ ಇಲ್ಲ.

ಪಶ್ಚಿಮವು ತನ್ನ ಬಗ್ಗೆ ತಾನೇ ಹೇಳಿಕೊಳ್ಳುವ ಕತೆಗಳ ಬಗ್ಗೆ ನಿಮಗೆ ನಾನು ಆಮೇಲೆ ಕೇಳುತ್ತೇನೆ.  ನಾನು ಇಲ್ಲಿಂದ ಹೊರಕ್ಕೆ ಜûಂಪ್ ಮಾಡಿ ಒಂದು ಹೆಚ್ಚು ವಿಶಾಲವಾದ ನೋಟದ ಬಗ್ಗೆ ಕೇಳುತ್ತೇನೆ. ಹೋದವಾರ ಎಕಾನಮಿಸ್ಟ್ನಲ್ಲಿ ನೀವು ಒಂದು ಬರಹವನ್ನು ಬರೆದಿರಿ. ನೀವು ಯುಕ್ರೇನಿನಲ್ಲಿ ದಾವೆಯಲ್ಲಿರುವುದೇನು ಎಂಬುದರ ಬಗ್ಗೆ ಹೀಗೆ ಬರೆದಿರಿ. “ಮಾನವ ಇತಿಹಾಸದ ದಿಕ್ಕು”. ಎಂದು ಬರೆದಿರಿ. ನೀವು ಹೆಸರಿಸಿದಂತೆ ಮಾನವ ಇತಿಹಾಸದ ಮತ್ತು ಆಧುನಿಕ ನಾಗರೀಕತೆಯ ಅತ್ಯಂತ ಮಹತ್ವದ ಸಾಧನೆಗಳೆಂದು ನೀವು ಕರೆದ ‘ಸಮರಗಳ ಇಳಿಮುಖ’ವು ಅಪಾಯದಲ್ಲಿದೆ. ಈಗ ನಾವು ಯುದ್ಧಕ್ಕೆ ಮರಳಿದ್ದೇವೆ. ಇದಾದ ನಂತರ ನಾವು ಮತ್ತೆ ಹೊಸ ಬಗೆಯ ಶೀತಲ ಸಮರಕ್ಕೋ ಸುಡು ಸಮರಕ್ಕೋ ಮತ್ತೆ ತಿರುಗಬಹುದು…ಹಾಗಾಗುವುದಿಲ್ಲವೆಂದು ಆಶಿಸೋಣ. ನೀವು ಬರೆದ ಆ ಪ್ರಬಂಧದ ಬಗ್ಗೆ ಹೆಚ್ಚು ವಿವರಿಸಿ.

ಯುವಾ: ಕೆಲವು ಜನರು ಈ ಯುದ್ಧಗಳ ಇಳಿಮುಖದ ಮಾತುಗಳೆಲ್ಲಾ ಒಂದು ಆಶಾಭಾವದ ಕಲ್ಪನೆಯೆಂದುಕೊಳ್ಳುತ್ತಾರೆ. ಆದರೆ ನೀವು ಅಂಕೆಸಂಖ್ಯೆಗಳನ್ನು ಗಮನಿಸಿ. ೧೯೪೫ ರಿಂದ ಈಚೆಗೆ ಮಹಾಪ್ರಬಲ ರಾಷ್ಟçಗಳ ನಡುವೆ ಒಂದೇ ಒಂದು ಸಂಘರ್ಷವಾಗಿಲ್ಲ. ಇದರ ಹಿಂದಿನ ಚರಿತ್ರೆಯನ್ನು ಗಮನಿಸಿದರೆ ಇದೇ ಚರಿತ್ರೆಯ ಮೂಲವಸ್ತುವಾಗಿತ್ತು. ೧೯೪೫ ರಿಂದ ಈಚೆಗೆ ಯಾವುದೇ ಒಂದು ಮಾನ್ಯ ಮಾಡಲ್ಪಟ್ಟ ರಾಷ್ಟ್ರವು ಹೊರಗಿನ ಆಕ್ರಮಣದಿಂದ ನಕ್ಷೆಯಿಂದಲೇ ಉಚ್ಚಾಟನೆಯಾದ ಪ್ರಸಂಗವಿಲ್ಲ. ಇದು ಚರಿತ್ರೆಯಲ್ಲಿ ಸಾಮಾನ್ಯ ಸಂಗತಿಯಾಗಿತ್ತು. ೧೯೪೫ ರ ವರೆಗೆ ಅದು ಸಾಮಾನ್ಯವಾಗಿತ್ತು. ಅದು ಅಲ್ಲಿಗೆ ನಿಂತಿತ್ತು. ಇದೊಂದು ಅತ್ಯಂತ ಅದ್ಭುತವಾದ ಸಾಧನೆಯಾಗಿದೆ. ನಾವು ಗಳಿಸಿರುವ ಎಲ್ಲದಕ್ಕೂ ಅಂದರೆ ನಮ್ಮ ಆರೋಗ್ಯ ಸೇವಾ ವ್ಯವಸ್ಥೆಗಳಿಗೂ ವಿದ್ಯಾಭ್ಯಾಸ ಕ್ರಮಗಳಿಗೂ ಇದೇ ಅಡಿಪಾಯವಾಗಿದೆ. ಆದರಿದೀಗ ಡೋಲಾಯಮಾನವಾಗಿದೆ. ಏಕೆಂದರೆ ಈ ಶಾಂತಿಯುತ ಕಾಲಾವಧಿಯೊಂದು ಪವಾಡದಿಂದಾದುದೇನೂ ಅಲ್ಲ. ಇದು ಪ್ರಾಕೃತಿಕ ನಿಯಮಗಳ ಬದಲಾವಣೆಯ ಪರಿಣಾಮವೇನೂ ಅಲ್ಲ. ಇದು ಮಾನವರೇ ಹೆಚ್ಚು ಉತ್ತಮ ನಿರ್ಧಾರಗಳನ್ನು ಕೈಗೊಂಡು ಹೆಚ್ಚು ಉತ್ತಮ ಸಂಸ್ಥೆಗಳನ್ನು ಕಟ್ಟಿ ಬೆಳಸಿದುದರ ಪರಿಣಾಮ.

ಅಂದರೆ ಮುಂದಿನ ಭವಿಷ್ಯಕ್ಕೆ ಯಾವುದೇ ಗ್ಯಾರಂಟಿಯಿಲ್ಲ ಎಂದರ್ಥ. ಕೆಲವು ಮನುಷ್ಯರು ಕೀಳು ನಿರ್ಧಾರಗಳನ್ನು ಮಾಡ ತೊಡಗಿದರೆ ಮತ್ತು ಶಾಂತಿಯನ್ನು ಸ್ಥಾಪಿಸಿದ ಸಂಸ್ಥೆಗಳನ್ನು ಹಾಳು ಮಾಡಲು ತೊಡಗಿದರೆ,  ನಾವು ಮತ್ತೆ ಯುದ್ಧಕಾಲಕ್ಕೆ ಮರಳುತ್ತೇವೆ. ಹಾಗೂ ರಾಷ್ಟ್ರಗಳ ಸೈನ್ಯದ ಬಜೆಟ್ ಶೇಕಡಾ ೨೦, ೩೦ ೪೦ ರವರೆಗೂ ಹೋಗಬಹುದು. ಅದು ನಮ್ಮ ಕೈಯಲ್ಲೇ ಇದೆ. ನಾನು ಮತ್ತೊಂದು ವಿಷಯ ತಿಳಿಸುತ್ತೇನೆ. ನಾನೊಬ್ಬನೇ ಅಲ್ಲ, ಸ್ಟೀವನ್ ಪಿಂರ‍್ನಂಥಾ ಇತರ ವಿದ್ವಾಂಸರೂ ಹೀಗೆಯೇ ಹೇಳುತ್ತಾರೆ. ಅವರೂ ಸಹ ಶಾಂತಿಯುತ ಯುಗದ ಬಗ್ಗೆ ಮಾತನಾಡಿದ್ದಾರೆ. ಕೆಲವು ಮಂದಿ ಇದೊಂದು ಅಲಕ್ಷ್ಯ ವನ್ನು ಸೋಮಾರಿತನವನ್ನು ಪ್ರೋತ್ಸಾಹಿಸುವಂಥಹದ್ದು ಎಂದು ಅರ್ಥ ಮಾಡಿಕೊಂಡರು. ನಾವು ಯಾವುದೇ ಆತಂಕವನ್ನು ಪಡಬೇಕಾಗಿಲ್ಲ ಎಂದವರು ನುಡಿದರು. ಅದು ಹಾಗಲ್ಲ. ಬರುತ್ತಿದ್ದ ಸೂಚನೆಗಳು ಅದಕ್ಕೆ ವಿರುದ್ಧವಾಗಿದ್ದವು. ಒಂದು ಜವಾಬ್ದಾರಿಯಿಂದಿರಬೇಕೆಂಬ ಸಂದೇಶ ಬರುತ್ತಿತ್ತು. ಚರಿತ್ರೆಯಲ್ಲಿ ಒಂದು ಶಾಂತಿಯುತ ಯುಗವೇ ಇರಲಿಲ್ಲ ಎಂದು ನೀವು ನಂಬುವಿರಾದರೆ, ಯಾವಾಗಲೂ ಸಮರ ಸ್ಥಿತಿಯಿರುತ್ತದೆ ಇದೊಂದು ಕಿತ್ತಾಡುವ ಕಾಡಾಗಿರುತ್ತದೆ ಎನ್ನುವುದಾದರೆ, ಪ್ರಕೃತಿಯಲ್ಲಿ ಒಂದು ನಿರಂತರ ಹಿಂಸೆಯ ಮಟ್ಟವಿರುತ್ತದೆ ಎಂದಾದರೆ ಶಾಂತಿಗಾಗಿ ಕಷ್ಟಪಟ್ಟು ಪ್ರಯತ್ನಿಸುವುದಕ್ಕೆ ಅರ್ಥವೇ ಇರುವುದಿಲ್ಲ. ಹಾಗಾದರೆ ಪ್ಯುಟಿನ್ನಿನಂಥಾ ಮುಖಂಡರುಗಳ ಮೇಲೆ ಜವಾಬ್ದಾರಿ ಹೊರಿಸುವುದಕ್ಕೇ ಆಗುವುದಿಲ್ಲ. ಏಕೆಂದರೆ ಯುದ್ಧಕ್ಕೆ ಅವನು ಕಾರಣನೇ ಅಲ್ಲ, ಯುದ್ಧ ಪ್ರಕೃತಿಯ ನಿಯಮವಷ್ಟೇ ಎಂದಂತಾಗುತ್ತದೆ. ಹಾಗಲ್ಲದೆ ಇಲ್ಲ, ಮಾನವರು ಹಿಂಸೆಯ ಮಟ್ಟವನ್ನು ಕೆಳಗಿಳಿಸುವುದಕ್ಕೆ ಸಮರ್ಥರು ಎಂದಾದರೆ ಅದು ನಮ್ಮನ್ನು ಹೆಚ್ಚುಹೆಚ್ಚು ಜವಾಬ್ದಾರಿಯುಳ್ಳವರಾಗಿ ಮಾಡಬೇಕು. ಹಾಗೂ ಈಗ ಯುಕ್ರೇನಿನಲ್ಲಿ ನಡೆಯುತ್ತಿರುವ ಯುದ್ಧ ಒಂದು ಪ್ರಾಕೃತಿಕ ದುರ್ಘಟನೆಯೇನೂ ಅಲ್ಲ. ಅದೊಂದು ಮಾನವ ನಿರ್ಮಿತ ವಿನಾಶ ಮತ್ತು ಅದರಲ್ಲೂ ಒಬ್ಬನೇ ಮನುಷ್ಯನ ವಿನಾಶ ಕಾರ್ಯವದು. ರಶ್ಯನ್ ಜನರಿಗೆ ಈ ಯುದ್ಧ ಬೇಕಿಲ್ಲ. ನಿಜವಾಗಿ ಇದು ಬೇಕಿರುವುದು ಒಬ್ಬನೇ ವ್ಯಕ್ತಿಗೆ ಮಾತ್ರ. ಅವನು ತನ್ನದೇ ಆದ ನಿರ್ಧಾರದಿಂದ ಈ ವಿನಾಶಕ್ಕೆ ಕಾರಣನಾಗಿದ್ದಾನೆ.

ನಾವು ಹಿಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಮತ್ತೆ ಯೋಚಿಸುತ್ತಿರುವ ಸಂಗತಿಯೆಂದರೆ ಅದು ಪರಮಾಣು ಯುದ್ಧದ ಭೀತಿ. ಆ ಭೀತಿಯು ಮತ್ತೆ ರಾಜಕೀಯ ಮತ್ತು ಮುಖ್ಯವಾದ ಇತರ ಮಾತುಕತೆಗಳ ಕೇಂದ್ರವಾಗಿದೆ. ಪ್ಯುಟಿನ್ ಅದರ ಬಗ್ಗೆ ಬಹಳ ಬಾರಿ ಮಾತನಾಡಿದ್ದಾನೆ. ಕೆಲವು ದಿನಗಳ ಹಿಂದೆ ಅವನು ರಶ್ಯಾದ ಪರಮಾಣು ಶಸ್ತ್ರಾಸ್ತ್ರç ಪಡೆಯನ್ನು ಉನ್ನತ ಮಟ್ಟದ ಸಿದ್ಧತೆಯಲ್ಲಿರಲು ಕರೆಮಾಡಿದ್ದ.  ಮ್ಯುನಿಕ್ ಸಭೆಯಲ್ಲಿ ಅಧ್ಯಕ್ಷ  ಜೆಲೆನ್ಸ್ಕಿ ಯುಕ್ರೇನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಕೈ ಬಿಟ್ಟು ತಪ್ಪು ಮಾಡಿತ್ತೆಂದು ಹೇಳಿಕೆ ನೀಡಿದ್ದ. ಆ ಪರಮಾಣು ಅಸ್ತ್ರçಗಳನ್ನು ಸೋವಿಯತ್ ಒಕ್ಕೂಟದ ಬಳಿಕೆ ಯುಕ್ರೇನ್ ಬಳುವಳಿಯಾಗಿ ಪಡೆದುಕೊಂಡಿತ್ತು. ಆ ಹೇಳಿಕೆಯ ಬಗ್ಗೆ ಖಂಡಿತವಾಗಿ ಹಲವಾರು ದೇಶಗಳು ಆಲೋಚಿಸುತ್ತಿರುತ್ತವೆ.ಪರಮಾಣು ಭೀತಿ ಮರುಕಳಿಸುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಯುವಾ: ಅದು ತುಂಬಾ ಗಾಬರಿ ಹುಟ್ಟಿಸುತ್ತದೆ. ಅದು ಒಂದು ಥರದಲ್ಲಿ ಸರಯ್‌ಡಿಯನ್… ನಿಗ್ರಹಿಸಿದ್ದದ್ದು ಮರುಕಳಿಸುವುದು. ನಾವು ಪರಮಾಣು ಶಸ್ತ್ರಾಸ್ತ್ರçಗಳ ಬಗ್ಗೆ ಅದು ಯಾವಾಗಲೋ ೬೦ ರ ದಶಕದಲ್ಲಿ ನಡೆದಿದ್ದ ಮಸಕು ಮಸಕಾದ ವಿಚಾರದಂತೆ ಪರಿಗಣಿಸುತ್ತಿದ್ದೆವು….ಕ್ಯೂಬಾದ ಕ್ಷಿಪಣಿ ಘಟನೆ ಮತ್ತು ಡಾಕ್ಟರ್ ಸ್ಟ್ರೇಂಜ್ ಲವ್. ಆದರೆ ಈಗ ಅದು ಹಾಗಲ್ಲ…ಅದಿಲ್ಲೇ ಇದೆ. ಕೆಲವೇ ಕೆಲವು ದಿನಗಳ ರಣರಂಗದ ಕಷ್ಟಗಳ ನಂತರ ಇದ್ದಕ್ಕಿದ್ದಂತೆ….. ಅಂದರೆ ನೋಡಿ, ನಾನು ಟೆಲಿವಿಶನ್ನಿನಲ್ಲಿ ಸಮಾಚಾರವನ್ನು ವೀಕ್ಷಿಸುತ್ತಿದ್ದೆ… ಅದರಲ್ಲಿ ಸುದ್ದಿ ಓದುಗರು ಜನರಿಗೆ ಯಾವಯಾವ ರೀತಿಯ ಪರಮಾಣು ಶಸ್ತ್ರಾಸ್ತ್ರçಗಳು ಯಾವ ಯಾವ ನಗರ ಮತ್ತು ದೇಶಗಳಿಗೆ ಎಂಥಹ ಹಾನಿ ಮಾಡಬಲ್ಲವು ಎಂದು ತಿಳಿಸುತ್ತಿದ್ದರು. ಆ ಭೀತಿ ಹಿಂದಿರುಗಿ ಓಡಿ ಒಳಬಂದಿತು. ಪರಮಾಣು ಶಸ್ತ್ರಾಸ್ತ್ರಗಳು ಇಲ್ಲಿಯವರೆಗೆ ಜಗತ್ತಿನಲ್ಲಿ ಶಾಂತಿ ಕಾಪಾಡಿದ್ದವು. ಪರಮಾಣು ಶಸ್ತ್ರಾಸ್ತ್ರಗಳು ಇರದಿದ್ದರೆ ಸೋವಿಯತ್ ಯೂನಿಯನ್ ಮತ್ತು ಅಮೆರಿಕಾ ನೇಟೋಗಳ ನಡುವೆ ೧೯೫೦-೬೦ ರಲ್ಲಿಯೇ ಮೂರನೆಯ ಮಹಾಯುದ್ಧ ಜರುಗುತ್ತಿತ್ತು ಎಂದು ನಂಬುವ ಗುಂಪಿಗೆ ನಾನು ಸೇರುತ್ತೇನೆ. ಇಲ್ಲಿಯವರೆಗೂ ಪರಮಾಣು ಶಸ್ತ್ರಾಸ್ತ್ರçಗಳು ಒಂದು ಒಳ್ಳೆಯ ಕೆಲಸಕ್ಕೆ ಒದಗಿದ್ದವು.  ಪರಮಾಣು ಅಸ್ತ್ರಗಳಿಲ್ಲದಿದ್ದರೆ ಮಹಾಪ್ರಬಲ ರಾಷ್ಟ್ರçಗಳ ನಡುವೆ ಘರ್ಷಣೆಯಾಗುತ್ತಿತ್ತು. ಅವು ಸರ್ವರ ಒಳಿತಿಗಾಗಿ ಯುದ್ಧವನ್ನು ತಡೆಹಿಡಿದಿದ್ದವು. ಈ ಲೆಕ್ಕ ಹಾಕುವುದರಲ್ಲಿ ಯಾರಾದರೂ ಸ್ವಲ್ಪ ತಪ್ಪಿದರೂ ಸಾಕು ಪರಿಣಾಮ ಭೂಮಿಯ ಅಸ್ತಿತ್ವಕ್ಕೇ ಧಕ್ಕೆ ತರುವಷ್ಟು ಮಾರಕವಾಗುತ್ತದೆ.

ಕ್ಯೂಬಾ ಮತ್ತು ಬರ್ಲಿನ್‌ಗಳ ನಂತರ ೧೯೭೦ ರ ದಶಕದಲ್ಲಿ, ೬೦ ಕಳೆದ ಮೇಲೆ ನಾವು ಅಂತರಾಷ್ಟ್ರೀçÃಯ ಸಂಸ್ಥೆಗಳನ್ನು ವಿನ್ಯಾಸಗೊಳಿಸತೊಡಗಿದೆವು. ಅವು ಯುದ್ಧಗಳ ಮತ್ತು ಪರಮಾಣು ಶಸ್ತ್ರçಗಳ ಬಳಕೆಯನ್ನು ನಿಗ್ರಹಿಸಲು ಸಹಾಯ ಮಾಡಿದವು. ನಾವು ಶಸ್ತಾಸ್ತ್ರç ನಿಗ್ರಹಕ್ಕಾಗಿ ಯೋಜನೆಗಳನ್ನು ಹಾಕಿದೆವು, ದೇಶಗಳ ಮಧ್ಯೆ ಪರಸ್ಪರ ನಂಬಿಕೆ ಬರಲು ಕಾರ್ಯಗಳನ್ನು ಕೈಗೊಂಡೆವು, ಮತ್ತು ನೇರವಾಗಿ ಸಂಪರ್ಕಿಸಿ ಮನವೊಲಿಸಿದೆವು…ಹೀಗೇ ಹಲವಾರು ಮಾದರಿಗಳು. ಹಿಂದಿನ ಒಂದು ದಶಕದಲ್ಲಿ ಅವುಗಳನ್ನು ನಿಧಾನವಾಗಿ ನಾಶ ಮಾಡಲಾಗುತ್ತಿದೆ. ಹಾಗಾಗಿ ನಾವು ಈಗ ಹಿಂದಿನ ಶತಮಾನದ ಕೊನೆಯಲ್ಲಿದ್ದುದ್ದಕ್ಕಿಂತ ಹೆಚ್ಚು ಅಪಾಯಕರ ಸನ್ನಿವೇಶದಲ್ಲಿದ್ದೇವೆ.

ಯುವಾ: ಸಂಪೂರ್ಣವಾಗಿ. ನಾವು ಈಗ ನಾವೇ ಬಿತ್ತಿದ ಕೊಳೆತ ಬೀಜಗಳಾದ ಹಲವು ವರ್ಷಗಳಿಂದ ತೋರಿದ ಅಲಕ್ಶ್ಯ ದ ಫಲವನ್ನು ಉಣ್ಣುತ್ತಿದ್ದೇವೆ. ಅದು ಪರಮಾಣು ಅಸ್ತ್ರಗಳಿಗೆ ಮಾತ್ರ ಸಂಬಂಧ ಪಟ್ಟಿಲ್ಲ, ಸಾಮಾನ್ಯವಾಗಿ ಎಲ್ಲಾ ವಿಚಾರದಲ್ಲೂ ಅಷ್ಟೇ. ಅಂದರೆ ಅಂತರ ರಾಷ್ಟ್ರೀಯ ಸಂಸ್ಥೆಗಳು ಮತ್ತು ಜಾಗತಿಕ ಸಹಕಾರಗಳ ಬಗ್ಗೆ. ನಾವು ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಮಾನವತೆಗಾಗಿ ಒಂದು ನಿವಾಸವನ್ನು ಕಟ್ಟಿದ್ದೆವು. ಸಹಕಾರ , ಸಹಭಾಗಿತ್ವ ಮತ್ತು ಮುಂದಿನ ನಮ್ಮ ಭವಿಶ್ಯ ನಮ್ಮ ಸಹಕಾರದ ಸಾಮರ್ಥ್ಯದ ಮೇಲೆ ನಿಂತಿದೆ ಎಂಬ ಅರಿವು, ಇವೆಲ್ಲವುಗಳನ್ನು ಅದು ಆಧರಿಸಿತ್ತು. ಇವೆಲ್ಲಾ ಇಲ್ಲವಾದರೆ ನಮ್ಮ ಮಾನವಕುಲದ ನಾಶ ಖಚಿತ ಎಂದು ನಾವು ಅರಿತಿದ್ದೆವು. ನಾವೆಲ್ಲಾರೂ ಹಾಗೆ ನಾವೇ ಕಟ್ಟಿಕೊಂಡ ಮನೆಯಲ್ಲಿ ಜೀವಿಸುತ್ತಿದ್ದೇವೆ ಆದರೆ ಕಳೆದ ಕೆಲವು ದಶಕಗಳಿಂದ ಆ ಮನೆಯನ್ನು ನಾವು ನಿರ್ಲಕ್ಷಿಸಿದೆವು ಮತ್ತು ಅದರ ರಿಪೇರಿಯನ್ನು ನಡೆಸಲಿಲ್ಲ. ಅದು ಹೆಚ್ಚು ಹೆಚ್ಚಾಗಿ ಹಾಳುಬೀಳಲು ನಾವು ಬಿಟ್ಟುಬಿಟ್ಟೆವು. ಅದೀಗ ಮುರಿದು ಬೀಳುತ್ತಿದೆ. ತುಂಬಾ ತಡವಾಗುವ ಮೊದಲೇ ಜನರು ಎಚ್ಚೆತ್ತುಕೊಳ್ಳುತ್ತಾರೆಂದು ನಾನು ಆಶಿಸುತ್ತೇನೆ. ಈ ಕೆಟ್ಟ ಯುದ್ಧವನ್ನು ನಿಲ್ಲಿಸಿದರಷ್ಟೇ ಸಾಲದು ನಾವು ನಮ್ಮ ಸಂಸ್ಥೆಗಳ ಮರುನಿರ್ಮಾಣ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ಜೀವಿಸುವ ಈ ಜಾಗತಿಕ ಮನೆಯನ್ನು ನಾವು ರಿಪೇರಿ ಮಾಡಿ ಸ್ವಸ್ಥ ಗೊಳಿಸಬೇಕು. ಅದು ಮುರಿದು ಬಿದ್ದರೆ ನಾವೆಲ್ಲರೂ ಸಾಯುತ್ತೇವೆ.

ಕೇಳುಗರ ನಡುವೆ ರೋಲಾ ಇದ್ದಾಳೆ. ಅವಳು ಎಲ್ಲಿಂದ ಬಂದಳೋ ಗೊತ್ತಿಲ್ಲ ಆದರೆ ಅವಳು ಲೆಬನಾನ್ ದೇಶದಲ್ಲಿ ಬೆಳೆದಳು. ಅವಳು ಹೇಳುತ್ತಾಳೆ, ” ನಾನು ಯುದ್ಧದಲ್ಲಿ ಬದುಕಿದೆ. ನೆಲದ ಮೇಲೆ ಮಲಗಿದೆ, ಭಯವನ್ನೇ ಉಸಿರಾಡಿದೆ. ನನಗೆ ವಿವರಿಸಿದ ಕಾರಣಗಳ ಪ್ರಕಾರ ಮಿಕ್ಕಿದ ಒಂದೇ ಒಂದು ವಿಷಯ ಕಲಿತೆ. ಯುದ್ಧವೆಂಬುದು ನಿರರ್ಥಕ. ನಾವು ಸಮರ ಯೋಜನೆಗಳು, ಪ್ರಾಬಲ್ಯ, ಬಜೆಟ್ಟುಗಳು, ಅವಕಾಶಗಳು, ತಾಂತ್ರಿಕತೆ ಇವೆಲ್ಲವುಗಳ ಬಗ್ಗೆ ಮಾತನಾಡುತ್ತೇವೆ. ಮಾನವ ಕಾರ್ಪಣ್ಯಗಳ ಮತ್ತು ಮನಸ್ಸಿನ ಯಾತನೆಗಳ ಬಗ್ಗೆ ಮಾತನಾಡುವವರು ಯಾರು?”

ನಾನು ಅರ್ಥ ಮಾಡಿಕೊಂಡಂತೆ ಅವಳು ಯುದ್ಧದ ಕಡೆಯಲ್ಲಿ ಉಳಿದವರ ಮನಸ್ಸಿನ ಕಾರ್ಪಣ್ಯಗಳ ಬಗ್ಗೆ ಕೇಳುತ್ತಿದ್ದಾಳೆ.

ಇವುಗಳೇ ಮುಂದಿನ ದ್ವೇಶದ, ಯಾತನೆಯ , ಅಸುರಕ್ಷತೆಯ ಬೀಜಗಳು. ಈಗ ಈ ಕ್ಷಣದಲ್ಲಿ ಅವುಗಳನ್ನು ನೂರಾರು ಮಿಲ್ಲಿಯನ್ ಜನರ ಮನಸ್ಸಿನಲ್ಲಿ ಮತ್ತು ದೇಹದಲ್ಲಿ ಬಿತ್ತಲಾಗುತ್ತಿದೆ. ಏಕೆಂದರೆ ಇದು ಯುಕ್ರೇನಿನಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲಾ ದೇಶಗಳಲ್ಲಿ ಮಾಡಲಾಗುತ್ತಿದೆ. ಈ ಬೀಜಗಳು ಮುಂಬರುವ ದಶಕಗಳಲ್ಲಿ ಅತ್ಯಂತ ಹೀನವಾದ ಫಲವನ್ನು ಕೊಡುತ್ತವೆ. ಆದ್ದರಿಂದಲೇ ಇದನ್ನು ಈಗಲೇ ನಿಲ್ಲಿಸುವುದು ಅತಿ ಮುಖ್ಯ. ಇದು ಮುಂದುವರೆಯುವ ಪ್ರತಿ ದಿನವೂ ಹೆಚ್ಚುಹೆಚ್ಚು ಇಂಥಹ ಬೀಜಗಳನ್ನು ಬಿತ್ತಲಾಗುತ್ತದೆ. ಈ ಯುದ್ಧದಂತೆಯೇ ದಶಕಗಳ, ಶತಮಾನಗಳ ಹಿಂದೆ ಬಿತ್ತಿದ ಬೀಜಗಳೇ ಈಗಲೂ ರಶ್ಯಾದ ಭಯವನ್ನೂ ಪ್ಯುಟಿನ್‌ನನ್ನೂ ಪ್ರೋತ್ಸಾಹಿಸುತ್ತಿವೆ. ಅವನ ಸುತ್ತಮುತ್ತಲಿನಲ್ಲಿ ಇರುವವರನ್ನೂ ಸಹ ರಶ್ಯಾದ ಮೇಲೆ ನಡೆದ ಹಿಂದಿನ ದಾಳಿಗಳ ನೆನಪೇ ಉತ್ತೇಜಿಸುತ್ತಿವೆ. ಮುಖ್ಯವಾಗಿ ಎರಡನೇ ಮಹಾ ಯುದ್ಧದಲ್ಲಿ. ಆ ನೆನಪಿನ ಆಧಾರದಮೇಲೆ ಅವರು ಈಗ ಒಂದು ಅತಿ ದೊಡ್ಡ ತಪ್ಪು ಮಾಡುತ್ತಿದ್ದಾರೆ. ಅವರು ಹಿಂದೆ ಅನುಭವಿಸಿದ ತಪ್ಪುಗಳನ್ನೇ ಅವರು ಪುನಃ ಮಾಡುತ್ತಿದ್ದಾರೆ. ಹೌದು, ಇವು ೧೯೪೦ ರಲ್ಲಿ ಬಿತ್ತಿದ ಕೆಟ್ಟ ಬೀಜಗಳ ಫಲಗಳೇ.

ನಿಮ್ಮ ಅದೇ ಬರಹದಲ್ಲಿ ನೀವು ರಾಷ್ಟ್ರಗಳು ಕತೆಗಳ ಮೇಲೆ ಕಟ್ಟಲ್ಪಡುತ್ತವೆ, ಎನ್ನುತ್ತೀರಿ. ಅಂದರೆ ಈ ಬೀಜಗಳು ನಾವು ಈಗ ಶುರು ಮಾಡುತ್ತಿರುವ ಕತೆಗಳು. ಯುಕ್ರೇನಿನ ಈಗಿನ ಯುದ್ಧ ಕೆಟ್ಟ ಬೀಜ ಬಿತ್ತಿದಂತೆ ಮುಂದೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನೀವು ಹೇಳುತ್ತೀರಿ.

ಯುವಾ: ಈಗ ನಡೆಯುತ್ತಿರುವ ಯುದ್ಧದ ಕೆಲವು ಬೀಜಗಳನ್ನು ಹಿಂದಿನ ಲೆನಿನ್‌ಗ್ರಾಡ್ ಮೇಲಿನ ಆಕ್ರಮಣದ ಕಾಲದಲ್ಲಿ ಬಿತ್ತಲಾಗಿತ್ತು. ಅವು ಈಗ ಕೀವ್ ನಗರದ ಮೇಲಿನ ಆಕ್ರಮಣದಲ್ಲಿ ಫಲ ನೀಡುತ್ತಿವೆ. ಇದು ಮುಂದೆ ೪೦-೫೦ ವರ್ಷಗಳ ನಂತರ ಇನ್ನೂ ಹೆಚ್ಚು ಕೇಡಿನ ಫಲ ನೀಡಬಹುದು. ನಾವು ಇದನ್ನು ನಿಲ್ಲಿಸಿ ಈ ಮುಂದುವರಿಕೆಯನ್ನು ಕತ್ತರಿಸಬೇಕು.  ಒಬ್ಬ ಚರಿತ್ರಕಾರನಾಗಿ ನನಗೆ ನಾಚಿಕೆಯಾಗುತ್ತದೆ. ನಾನು ಇದರ ಹೊಣೆಯನ್ನು ಅನುಭವಿಸುತ್ತೇನೆ. ಅಂದರೆ ಇತಿಹಾಸದ ಬಗ್ಗೆ ತಿಳಿವು ಜನರಿಗೆ ಹೇಗೆ ಪ್ರಭಾವ ಬೀರುತ್ತದೆ ಎಂದು. ಈ ಹಿಂದಿನ ಕೆಲವು ವಾರಗಳಲ್ಲಿ ಪ್ರಪಂಚದ ನಾಯಕರುಗಳು ಪ್ಯುಟಿನ್ ಜೊತೆಗೆ ಮಾತುಕತೆ ನಡೆಸುವುದನ್ನು ನಾನು ಕಾಣುತ್ತಿದ್ದೇನೆ. ಬಹಳಷ್ಟು ಬಾರಿ ಅವನು ಅವರಿಗೆಲ್ಲಾ ಚರಿತ್ರೆಯ ಪಾಠ ಹೇಳುತ್ತಿದ್ದ. ಅವನೊಂದಿಗೆ ೫ ಗಂಟೆಗಳ ಕಾಲ ಮಾತುಕತೆ ನಡೆಸಿದ ಮ್ಯಾಕ್ರೋನ್, “ಅವನು ಅದರಲ್ಲಿ ಹೆಚ್ಚು ಕಾಲ ನನಗೆ ಚರಿತ್ರೆಯ ಬಗ್ಗೆ ಭಾಷಣ ನೀಡುತ್ತಿದ್ದ,” ಎಂದನು. ಒಬ್ಬ ಇತಿಹಾಸಕಾರನಾಗಿ ನಾನು ನಾಚಿಕೆ ಪಡುತ್ತೇನೆ. ನನ್ನ ವಿಷಯವು ಈ ಕೆಲಸ ಮಾಡುತ್ತಿದೆ ಎಂದು. ನನಗೆ ನನ್ನ ದೇಶದ ಬಗ್ಗೆಯೂ ಗೊತ್ತು. ನಾವು ಇಸ್ರೇಲಿನಲ್ಲಿ ಕೂಡಾ ಅತಿಯಾದ ಚರಿತ್ರೆಯಿಂದ ಬಳಲುತ್ತೇವೆ. ಜನರು ತಮ್ಮ ಭೂತಕಾಲದಿಂದ ಬಿಡುಗಡೆ ಹೊಂದಬೇಕು. ಅದನ್ನು ಪದೇಪದೇ ನಿರಂತರವಾಗಿ ಪುನರುಚ್ಚಿರಸಬಾರದು. ಪ್ರತಿಯೊಬ್ಬರೂ, ಎರಡನೇ ಮಹಾಯುದ್ಧದ ನೆನಪಿನಿಂದ  ತಮ್ಮನ್ನು ತಾವೇ ಬಿಡುಗಡೆ ಮಾಡಿಕೊಳ್ಳಬೇಕು. ಅದು ರಶ್ಯನ್ನರೂ ಮಾಡಬೇಕಾದದ್ದು, ಜರ್ಮನ್ನರೂ ಮಾಡಬೇಕಾದದ್ದು. ನಾನು ಈಗ ಜರ್ಮನಿಯನ್ನು ಕಾಣುತ್ತೇನೆ. ಜರ್ಮನರು ಇದನ್ನು ನೋಡುತ್ತಿದ್ದರೆ, ಅವರಿಗೆ ನಾನು ಹೇಳಬಯಸುವುದೇನೆಂದರೆ , ” ಇಲ್ಲಿ ಕೇಳಿ, ನಮಗೆ ನೀವು ನಾಜಿûÃಗಳಲ್ಲ ಎಂದು ಗೊತ್ತಿದೆ. ನೀವು ಮತ್ತೆ ಮತ್ತೆ ಅದನ್ನು ಸಾಧಿಸಿ ತೋರಿಸ ಬೇಕಾಗಿಲ್ಲ. ಈಗ ನಮಗೆಲ್ಲಾ ಬೇಕಾಗಿರುವುದೇನೆಂದರೆ ಜರ್ಮನಿಯು ಎದ್ದು ನಿಂತು ನಾಯಕತ್ವ ವಹಿಸಬೇಕು. ಸ್ವಾತಂತ್ರ್ಯಕ್ಕಾಗಿ ನಡೆಯುವ ಹೋರಾಟದ ಮುಂದಾಳತ್ವ ವಹಿಸಬೇಕು. ಜರ್ಮನ್ನರಿಗೆ ಅವರು ಎಂದಾದರೂ ಜೋರಾಗಿ ಮಾತನಾಡಿದರೆ, ಬಂದೂಕನ್ನು ಎತ್ತಿ ಕೊಂಡರೆ ಜನರು ಅವರನ್ನು ಮತ್ತೆ ನಾಜಿûÃಗಳೆಂದು ಕರೆಯುತ್ತಾರೇನೋ ಎಂಬ ಹೆದರಿಕೆಯಿದೆ.  ಇಲ್ಲಾ, ನಾವು ಹಾಗೆ ಭಾವಿಸುವುದಿಲ್ಲ.

ಅದು ಈಗ ನಡೆಯುತ್ತಿದೆ. ಹತ್ತೇ ದಿನಗಳ ಹಿಂದೆ ಕೆಲವು ವಿಷಯಗಳನ್ನು ಯೋಚಿಸಲೂ ಆಗುತ್ತಿರಲಿಲ್ಲ. ಅಂತಹ ಒಂದು ಬದಲಾವಣೆ ನನ್ನ ಮಟ್ಟಿಗೆ ಯಾವುದೆಂದರೆ ಜರ್ಮನಿಯ ಪರಿವರ್ತನೆ ಮತ್ತು ಅವರ ಪ್ರತಿಕ್ರಿಯೆ. ಓಲಾ¥s಼ï ಶೋಲ್ಜ್, ಜರ್ಮನಿಯ ಹೊಸ ಚಾಂಸಲರ್ ಮೊನ್ನೆ ಹೀಗೆ ಹೇಳಿದ. ಜರ್ಮನಿಯು ಯುಕ್ರೇನಿಗೆ ಶಸ್ತ್ರಾಸ್ತ್ರçಗಳನ್ನು ಕಳುಹಿಸುತ್ತದೆ ಎಂದು ಹೇಳಿದ. ಹಾಗೂ ತಮ್ಮ ಸೈನ್ಯವನ್ನು ಬೆಳೆಸಲು ಒಂದು ಬಿಲ್ಲಿಯನ್ ಮೊತ್ತವನ್ನು ವೆಚ್ಚ ಮಾಡುವುದಾಗಿಯೂ ಹೇಳಿದ. ಅದು ಜರ್ಮನಿಯ ವಿದೇಶಾಂಗ ನೀತಿಗಳನ್ನು ದಶಕಗಳವರೆಗೆ ರೂಪಿಸಿದ ಸಿದ್ಧಾಂತಗಳನ್ನು ಮತ್ತು ರಕ್ಷಣಾ ನೀತಿಗಳನ್ನು ಸಂಪೂರ್ಣವಾಗಿ ಹಿಂದುಮುಂದೆ ಮಾಡುತ್ತದೆ.  ಆ ಬದಲಾವಣೆ ಈಗ ಅತ್ಯಂತ ವೇಗವಾಗಿ ಜರುಗುತ್ತಿದೆ.

ಯುವಾ: ಹೌದು. ಅದು ಒಳ್ಳೆಯದು ಎಂದು ನನಗೆ ಅನ್ನಿಸುತ್ತದೆ. ಈಗ ಜರ್ಮನ್ನರು ಯೂರೋಪಿನ ಮುಂದಾಳುಗಳು. ಅದರಲ್ಲೂ ಬ್ರಿಟನ್ ಬ್ರೆಕ್ಸಿಟ್‌ನಲ್ಲಿ ಹೊರ ಬಂದಾಗ ಜರ್ಮನಿಯೇ ಮುಂದಾಳುವಾಯಿತು. ಅವರು ಭೂತಕಾಲವನ್ನು ಬಿಟ್ಟು ಕೊಟ್ಟು ವರ್ತಮಾನದಲ್ಲಿರ ಬೇಕಾದ ಅಗತ್ಯ ನಮಗೂ ಇದೆ. ಜಗತ್ತಿನಲ್ಲಿ ನಾಜಿûÃವಾದದ ತಪ್ಪುಗಳನ್ನು ಮುಂದೆಂದೂ ಮಾಡುವುದಿಲ್ಲ ಎಂಬ ನಂಬಿಕೆ ಒಬ್ಬ ಜ್ಯೂ ಆಗಿ, ಒಬ್ಬ ಇಸ್ರೇಲಿನವನಾಗಿ ಮತ್ತು ಒಬ್ಬ ಇತಿಹಾಸಕಾರನಾಗಿ ಯಾವುದಾದರೂ ದೇಶದ ಮೇಲೆ ನನಗೆ ಇದ್ದರೆ ಅದು ಜರ್ಮನಿಯ ಮೇಲೆ ಮಾತ್ರಾ.

ಯುವಾ ನಾನು ಮೂರು ಅಂಶಗಳ ಮೇಲೆ ತ್ವರಿತವಾಗಿ ಪ್ರಶ್ನೆ ಕೇಳುತ್ತೇನೆ. ಈ ಯುದ್ಧ ಒಂದು ಬಗೆಯಲ್ಲಿ ನಿಜವಾಗಿಯೂ ವಿವಿಧ ಬಗೆಯಲ್ಲಿ ಅಂತರ್ಸಂಪರ್ಕಿತ ಯುದ್ಧವೆನ್ನಬಹುದು.

ಮೊದಲನೆಯದಾಗಿ ಪ್ರಮುಖವಾಗಿ ಇದರಲ್ಲಿ ಒಂದೆಡೆಯಲ್ಲಿ ಒಂದು ಅತ್ಯಂತ ಹಳೆಯ ಯುದ್ಧವಿದೆ. ಅಲ್ಲಿ ಟ್ಯಾಂಕುಗಳಿವೆ, ಕಂದಕಗಳೂ ಬಾಂಬ್ ಮಾಡಲ್ಪಟ್ಟ ಕಟ್ಟಡಗಳೂ ಇವೆ. ಇನ್ನೊಂದೆಡೆಯಲ್ಲಿ ಸೆಲ್ ಫೊನುಗಳಲ್ಲಿ, ಟಿಕ್ಟಾಕುಗಳಲ್ಲಿ ಟ್ವಿಟರುಗಳಲ್ಲಿ ನಡೆಯುತ್ತಿರುವಾಗಲೇ ಎಲ್ಲಾರಿಗೂ ಆ ಕ್ಷಣಕ್ಕೇ ಕಾಣಸಿಗುವ ದೃಶ್ಯಗಳಿವೆ. ನೀವು ಈ ಪುರಾತನ ಮಾದರಿಗಳು ಮತ್ತು ಹೊಸ ತಾಂತ್ರಿಕತೆಯ ಮಧ್ಯದ ತಿಕ್ಕಾಟದ ಬಗ್ಗೆ ಬರೆದಿದ್ದೀರಿ. ಇದರ ಪರಿಣಾಮವೇನು?

ಯುವಾ: ನಿಜದಲ್ಲಿ ಏನು ನಡೆಯುತ್ತಿದೆಯೆಂದು ನಮಗೆ ಗೊತ್ತಿಲ್ಲ. ಇಷ್ಟೊಂದು ಫೋನು ಟಿಕ್ಟಾಕುಗಳ ನಡುವೆಯೂ ಅಲ್ಲಿನ ನೈಜ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿಲ್ಲ. ಯುದ್ಧದ ಮಸಕು ವಾತಾವರಣ ಇದೆ. ಬೇಕಾದಷ್ಟು ಮಾಹಿತಿಯಿದೆ ಆದರೆ ಎಲ್ಲಾ ಮಾಹಿತಿಗಳೂ ಸತ್ಯವಲ್ಲ. ಬಹಳಷ್ಟು ಮಾಹಿತಿಗಳು ಸುಳ್ಳು ಸುದ್ದಿಗಳಷ್ಟೇ. ಯಾವಾಗಲೂ ಹೀಗೆಯೇ ಆಗುವುದು, ಹೊಸತು ಮತ್ತು ಹಳೆಯದು ಎರಡೂ ಒಂದಾಗುತ್ತವೆ. ಎಲ್ಲಾ ಅಂತರ್ಸಂಪರ್ಕ, ಸೈಬರ್ ವಲಯದಲ್ಲಿ ಬದುಕುವುದು ಇವುಗಳ ಮಾತುಕತೆಗಳೊಂದಿಗೆ ಈ ಯುದ್ಧದ ಮಾತ್ರವೇ ಅಲ್ಲ, ಹಿಂದಿನ ಕೆಲವು ದಶಕಗಳ ಯುದ್ಧಗಳ ಅತಿ ಮುಖ್ಯ ತಾಂತ್ರಿಕತೆಯೆಂದರೆ ಕಲ್ಲಿನ ಗೋಡೆಗಳೇ ಆಗಿವೆ. ಅದು ಶಿಲಾಯುಗದ್ದು. ಈಗ ಎಲ್ಲಾ ಕಟ್ಟಡಗಳಿಗೂ ಫೇಸ್ಬುಕ್ ಗೂಗಲ್ ಯುಗದಲ್ಲೂ ಕಲ್ಲಿನ ಗೋಡೆಗಳನ್ನು ಕಟ್ಟುತ್ತಿದ್ದಾರೆ. ಹೊಸತು ಮತ್ತು ಹಳೆಯದು ಒಟ್ಟಿಗೆ ಸಾಗುತ್ತವೆ. ಇದೊಂದು ಹೊಸ ರೀತಿಯ ಯುದ್ಧವೂ ಅಹುದು. ಏಕೆಂದರೆ ಕ್ಯಾಲಿಪೋರ್ನಿಯಾ ಅಥವಾ ಆಸ್ಟ್ರೇÃಲಿಯಾದಲ್ಲಿ ಕುಳಿತು ಜನರು ಈ ಯುದ್ಧದಲ್ಲಿ ಭಾಗವಹಿಸುತ್ತಿದ್ದಾರೆ. ಅದು ಬರಿಯ ಟ್ವೀಟ್‌ಗಳನ್ನು ಕಳುಹಿಸುವುದರಲ್ಲಿ ಅಲ್ಲ. ಅವರು ವೆಬ್‌ಸೈಟುಗಳ ಮೇಲೆ ಆಕ್ರಮಣ ಮಾಡುತ್ತಾ ವೆಬ್‌ಸೈಟುಗಳನ್ನು ರಕ್ಷಿಸುತ್ತಾ ಯುದ್ಧ ಮಾಡುತ್ತಿದ್ದಾರೆ. ಸ್ಪೆöÊನ್‌ನಲ್ಲಿ ದಬ್ಬಾಳಿಕೆಯ ವಿರುದ್ಧದ ಯುದ್ಧಕ್ಕೆ ಸಹಾಯ ಮಾಡಬೇಕಾದಾಗ ನೀವು ಸ್ಪೆöÊನಿಗೇ ಹೋಗಿ ಅಲ್ಲಿನ ಅಂತರರಾಷ್ಟಿಯ ಸೈನ್ಯವನ್ನು ಸೇರಿಕೊಳ್ಳಬೇಕಾಗಿತ್ತು. ಈಗ ಅದೇ ಅಂತರರಾಷ್ಟಿçÃಯ ಸೈನ್ಯವು ಸ್ಯಾನ್‌¥ಫಾರನ್‌ಸಿಸ್ಕೋದಲ್ಲಿ ಕುಳಿತಿದೆ. ಹಾಗೊ ಒಂದು ಬಗೆಯಲ್ಲಿ ಆ ಯುದ್ಧದಲ್ಲಿ ಭಾಗವಹಿಸುತ್ತಿದೆ. ಇದು ನಿಜವಾಗಿ ಹೊಸತು.

ಎರಡು ದಿನಗಳ ಕೆಳಗೆ ಯುಕ್ರೇನಿನ ಉಪಪ್ರಧಾನಿ ¥ಫೊದೊರೋವ್ ಟೆಲಿಗ್ರಾಮ್‌ನಲ್ಲಿ   ತಾನೊಂದು ಸೈಬರ್ ಸ್ವಯಮ್‌ಸೇವಾ ಸೈನ್ಯವನ್ನು ಯೋಜಿಸಬೇಕೆಂದು ಸಾರಿದರು. ಸ್ವಯಮ್ ಪ್ರೇರಿತ ಸೈಬರ್ ಸೈನ್ಯ. ಅವರು ಸಾ¥ಫ್ಟವೇರ್ ಪ್ರೋಗ್ರಾಮರುಗಳನ್ನೂ, ಹ್ಯಾಕರುಗಳನ್ನೂ ಸ್ವಾಗತಿಸಿದರು. ಮಾಹಿತಿ ತಂತ್ರಜ್ಞಾನ ಕೋವಿದರನ್ನು ಅವರು ಸೈಬರ್ ಯುದ್ಧಕ್ಕೆ ಬೆಂಬಲಿಸಲು ಕೇಳಿಕೊಂಡರು. ವೈರ್ಡ್ ಪತ್ರಿಕೆಯ ಪ್ರಕಾರ ಎರಡೇ ದಿನದಲ್ಲಿ ೧೭೫೦೦೦ ಮಂದಿ ನೋಂದಾಯಿಸಿಕೊಂಡರು. ಇಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವ ದೇಶ ರಾತ್ರೋರಾತ್ರಿ  ಸ್ವಯಮ್‌ಪ್ರೇರಿತ ಜನರನ್ನು ಯುದ್ಧಕ್ಕಾಗಿ ನೋಂದಾಯಿಸಿಕೊಳ್ಳಲು ಸಾಧ್ಯವಾಗಿದೆ. ಇದು ಬಹಳ ಹೊಸ ರೀತಿಯ ಯುದ್ಧ.

ಯುವಾ: ಎಲ್ಲಾ ಯುದ್ಧಗಳೂ ಕೆಲವು ಆಶ್ಚರ್ಯಕರವಾದುದನ್ನು ಹೊರತರುತ್ತವೆ. ಕೆಲವು ಬಾರಿ ಅದು ಹೊಸದಾಗಿರುತ್ತದೆ. ಆದರೆ ಕೆಲವು ಬಾರಿ ಎಲ್ಲವೂ ಹಳೆಯದೇ ಆಗಿರುತ್ತದೆ.

ಚಾಟ್‌ನಲ್ಲಿ ಮತ್ತು ಪ್ರಶ್ನೋತ್ತರದಲ್ಲಿ ಕೆಲವರು ಚೈನಾವನ್ನು ಉಲ್ಲೇಖಿಸಿದ್ದಾರೆ. ಚೈನಾ ಈಗ ಬರಿಯ ವೀಕ್ಷಕನಂತೆ ಕಾಣುತ್ತಿದೆಯಾದರೂ ಅದಕ್ಕೆ ಒಂದು ಪ್ರಮುಖ ಪಾತ್ರವಿದೆ. ಚೈನಾದಲ್ಲಿ ಯಾವುದೇ ಕ್ಷೇತ್ರೀಯ ಸರಹದ್ದನ್ನು ಮೀರುವ ಕ್ರಿಯೆಗೆ ವಿರೋಧವನ್ನು ತೋರಿಸುವ ಸಿದ್ಧಾಂತವಿದೆ. ಹಾಗಾಗಿ ಯುಕ್ರೇನಿನ ಒಳಹೊಗುವುದು ಕ್ಷೇತ್ರೀಯ ಮಿತಿಯನ್ನು ಮೀರಿದಂತಾಗುತ್ತದೆ. ಚೈನಾಗೆ ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ವ್ಯವಸ್ಥೆಯ ಬಗ್ಗೆ ಕಾಳಜಿಯಿದೆ. ಇದನ್ನು ಇತ್ತೀಚಿಗಿನ ರಶ್ಯಾ ಮತ್ತು ಚೈನಾದ ಮೈತ್ರಿಗೆ ಹೋಲಿಸಿದರೆ— ಒಲಿಂಪಿಕ್ ಕ್ರೀಡೆಗಳ ಮೊದಲು ಪ್ಯುಟಿನ್ ಮತ್ತು ಕ್ಸಿ ಜಿನ್ಪಿನ್ಗ್ ಭೇಟಿ ಮಾಡಿದ್ದರು—ಅಂದರೆ ಅವರು ವಿಶ್ವಕ್ಕೆ ತಮ್ಮ ಸ್ನೇಹದ ಬಗ್ಗೆ ಸಂದೇಶವನ್ನು ಕಳಿಸಿದ್ದರು.

ಚೈನಾದ ಪಾತ್ರವನ್ನು ಈ ಘರ್ಷಣೆಯಲ್ಲಿ ಹೇಗೆ ಕಾಣುತ್ತೀರಿ?

ಯುವಾ: ನನಗೆ ಗೊತ್ತಿಲ್ಲ. ನಾನು ಚೈನಾದ ಬಗೆಗಿನ ವಿದ್ವಾಂಸನಲ್ಲ. ಬರಿಯ ಮಾಧ್ಯಮಗಳ ಸಮಾಚಾರಗಳನ್ನು ಆಧರಿಸಿ ಚೈನಾದ ಮುಖಂಡತ್ವದ ಅಭಿಪ್ರಾಯಗಳು ಮತ್ತು ವಸ್ತುಸ್ಥಿತಿಯನ್ನು ತಿಳಿಯಲಾಗುವುದಿಲ್ಲ.  ಅವರು ಒಂದು ಜವಾಬ್ದಾರಿಯುತ ನಿಲುವನ್ನು ತೆಗೆದುಕೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಅವರು ರಶ್ಯಾಕ್ಕೂ ಯುಕ್ರೇನಿಗೂ ನಿಕಟ ಸಂಬಂಧ ಹೊಂದಿದ್ದಾರೆ. ಅವರಿಗೆ ರಶ್ಯಾದೊಂದಿಗೆ ನಿಕಟ ಸಂಬಂಧವಿರುವುದರಿಂದ ಅವರಿಗೆ ರಶ್ಯಾದ ಮೇಲೆ ಪ್ರಭಾವ ಬೀರುವುದಕ್ಕೆ ಸಾಧ್ಯವಿದೆ. ಅವರು ಜವಾಬ್ದಾರಿಯುತ ವಯಸ್ಕರಂತೆ ನಡೆದುಕೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಅದರಿಂದಾಗಿ ಈ ಯುದ್ಧದ ರಣಜ್ವಾಲೆಗಳು ನಂದಬಹುದೆಂಬ ಆಶೆಯಿದೆ. ಜಾಗತಿಕ ವ್ಯವಸ್ಥೆಯು ಕುಸಿದು ಬಿಟ್ಟರೆ ಅವರು ಬಹಳಷ್ಟನ್ನು ಕಳೆದುಕೊಳ್ಳುತ್ತಾರೆ. ಶಾಂತಿಯನ್ನು ಸ್ಥಾಪಿಸಲು ಅವರು ನೆರವಾದರೆ ಅದರಿಂದ ಅವರು ಆರ್ಥಿಕವಾಗಿ ಅಷ್ಟೇ ಅಲ್ಲ ಅಂತರರಾಷ್ಟಿçÃಯ ಸಮುದಾಯವು ತಮಗೆ ಆಭಾರಿಯಾಗುವುದರಿಂದಲೂ ಲಾಭ ಪಡೆಯುತ್ತಾರೆ. ಅವರು ಹಾಗೆ ಮಾಡುತ್ತಾರೋ ಇಲ್ಲವೋ ಅವರಿಗೆ ಬಿಟ್ಟದ್ದು, ನನಗೆ ಗೊತ್ತಿಲ್ಲ. ನಾನು ಹಾಗಾಗಲೆಂದು ಆಶಿಸುತ್ತೇನೆ.

ಹಲವಾರು ಪಾಶ್ಚಿಮಾತ್ಯ ಮುಖಂಡರುಗಳು ಈ ಯುದ್ಧಕ್ಕೆ ಮೊದಲು ಮಾಸ್ಕೋಗೆ ಹೋಗಿದ್ದರ ಬಗ್ಗೆ ನೀವು ಬರೆದಿದ್ದೀರಿ. ಚಾಟ್‌ನಲ್ಲಿ ವರುಣ್ ಕೇಳುತ್ತಾರೆ, ” ಯುಕ್ರೇನಿನ ಯುದ್ಧ ರಾಜನೀತಿಯ ಸೋಲೇ?”  ಬೇರೇನನ್ನಾದರೂ ಮಾಡಬಹುದಾಗಿತ್ತೇ?

ಯುವಾ: ಈ ಪ್ರಶ್ನೆಯನ್ನು ಎರಡು ಬಗೆಯಲ್ಲಿ ಅರ್ಥೈಸಿಕೊಳ್ಳಬಹುದು.

ರಾಜನೀತಿಯು ಯುದ್ಧವನ್ನು ನಿಲ್ಲಿಸುವುದರಲ್ಲಿ ಸೋಲು ಕಂಡಿತೇ? ಖಂಡಿತವಾಗಿ. ಇದು ಎಲ್ಲರಿಗೂ ತಿಳಿದಿದೆ.

ಅಥವಾ, ಇದು ಈ ಬಗೆಯ ರಾಜನೀತಿಯನ್ನು ಬಳಸಿದ್ದುದರಿಂದ ಕಂಡ ಸೋಲೇ? ಮತ್ತೊಂದು ರೀತಿಯಲ್ಲಿ ಇದನ್ನು ನಿಭಾಯಿಸಿದ್ದರೆ ಆಗ ರಾಜನೀತಿ ಗೆಲ್ಲುತ್ತಿತ್ತೇ? ಅದು ನನಗೆ ಗೊತ್ತಿಲ್ಲ. ನೋಡಿದರೆ ಅದು ಸಾಧ್ಯವಾಗಬಹುದಿತ್ತು ಎಂದೇನೂ ನನಗೆ ಅನ್ನಿಸುವುದಿಲ್ಲ. ಹಿಂದಿನ ಕೆಲವು ವಾರಗಳ ಘಟನೆಗಳನ್ನು ಗಮನಿಸಿದರೆ, ಪ್ಯುಟಿನ್ನಿಗೆ ನಿಜವಾಗಲೂ ರಾಜನೀತಿಯ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಸಕ್ತಿಯೇ ಇರಲಿಲ್ಲ. ಅವನಿಗೆ ಯುದ್ಧ ಮಾಡಲು ನಿಜವಾಗಿಯೂ ಆಸಕ್ತಿಯಿತ್ತೆನ್ನಿಸುತ್ತದೆ. ಅದು ಮತ್ತೆ ಅವನಲ್ಲಿರುವ ಮೂಲಭೂತವಾದ ಅತಿರೇಕದ ಕಲ್ಪನೆಯತ್ತ ಹೋಗುತ್ತದೆ. ಅವನಿಗೆ ನಿಜಕ್ಕೂ ರಶ್ಯಾದ ಸುರಕ್ಷತೆಯ ಬಗ್ಗೆ ಕಾಳಜಿಯಿದ್ದಿದ್ದರೆ, ಯುಕ್ರೇನಿನ ಮೇಲೆ ಸದ್ಯಕ್ಕೆ ದಾಳಿ ಮಾಡುವ ಅಗತ್ಯವಿರಲಿಲ್ಲ. ರಶ್ಯಾಗೆ ತಕ್ಷಣಕ್ಕೇನೂ ಅಪಾಯವಿರಲಿಲ್ಲ. ಈಗ ಸದ್ಯಕ್ಕೇನೂ ಯುಕ್ರೇನ್ ನೇಟೋವನ್ನು ಸೇರಿಕೊಂಡು ಬಿಡುವ ಮಾತುಕತೆಯಿರಲಿಲ್ಲ. ಬಾಲ್ಟಿಕ್ ದೇಶಗಳಲ್ಲಾಗಲೀ ಪೋಲ್ಯಾಂಡಿನಲ್ಲಾಗಲೀ ಸೈನ್ಯಗಳು ಕಲೆಗೂಡುತ್ತಿರುವ ಚಿನ್ಹೆಯೇನೂ ಇರಲಿಲ್ಲ. ಪ್ಯುಟಿನ್ ತಾನೇ ಸ್ವತಃ ಈ ಸಮರ ಕಾಲವನ್ನು ನಿರ್ಣಯಿಸಿದ. ಆದ್ದರಿಂದ ಇದು ಸುರಕ್ಷತೆಯ ಬಗೆಗಿನ ಕಾಳಜಿಯಂತೆ ಕಾಣುವುದೇ ಇಲ್ಲ. ಇದು ಅವನಲ್ಲಿ ಆಳವಾಗಿ ಬೇರೂರಿರುವ ಒಂದು ಅತಿರೇಕದ ಕಲ್ಪನೆಯ ಕಾರಣದಿಂದಾಗಿ ಎಂದು ತೋರುತ್ತದೆ. ರಶ್ಯಾ ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸುವುದು, ಮತ್ತು ಯುಕ್ರೇನಿನ ಅಸ್ತಿತ್ವವನ್ನೇ ಅಲ್ಲಗೆಳೆಯುವುದು.

ನೀವು ಮಧ್ಯಪ್ರಾಚ್ಯದಲ್ಲಿದ್ದೀರಿ. ಚಾಟ್‌ನಲ್ಲಿರುವ ಮತ್ತೊಬ್ಬರು ಹೀಗೆ ಪ್ರಶ್ನೆ ಮಾಡಿದ್ದಾರೆ. ” ಈ ಪರಿಸ್ಥಿತಿಯನ್ನು ಬೇರೆ ಕಡೆಗಳಲ್ಲಿ ಚಾಲ್ತಿಯಲ್ಲಿರುವ ಇತರ ಯುದ್ಧಗಳಿಗೆ ಹೋಲಿಸಿದರೆ ಇಷ್ಟು ವಿಶಿಷ್ಠವಾಗಿಸುವ ಅಂಶ ಯಾವುದು?”

ರಶ್ಯಾದಿಂದ ಬರುತ್ತಿರುವ ಪರಮಾಣು ಬೆದರಿಕೆಯನ್ನು ಹೊರತು ಪಡಿಸಿದರೆ ಈ ಯುದ್ಧದ ವೈಶಿಷ್ಟ್ಯವೇನು?

ಯುವಾ: ಹಲವಾರು ಅಂಶಗಳಿವೆ.

ಮೊದಲನೆಯದಾಗಿ ಈ ಪರಿಸ್ಥಿತಿಯನ್ನು ನಾವು ೧೯೪೫ ರಿಂದೀಚೆಗೆ ಕಂಡಿಲ್ಲ. ಅಂದರೆ ಒಂದು ಬಲಾಢ್ಯ ದೇಶವು ಮತ್ತೊಂದು ಸ್ವತಂತ್ರ ದೇಶವನ್ನು ಆಕ್ರಮಿಸಿ ಅದನ್ನು ಇಲ್ಲವಾಗಿಸಿಬಿಡುವಂಥಾ ಪರಿಸ್ಥಿತಿಯನ್ನು ನಾವು ಕಂಡಿಲ್ಲ. ಅಮೆರಿಕವು ಇರಾಕಿನ ಮೇಲೆ ಮತ್ತು ಅಪಘಾನಿಸ್ತಾನದ ಮೇಲೆ ದಾಳಿ ನಡೆಸಿದಾಗ ಆದರ ಬಗ್ಗೆ ನೀವು ಬೇಕಾದಷ್ಟು ಟೀಕೆ ಮಾಡಬಹುದು. ಆದರೆ ಆಗ ಅಮೆರಿಕವು ಇರಾಕನ್ನು ಆಕ್ರಮಿಸಿಕೊಳ್ಳುವ ಅಥವಾ ಅದನ್ನು ತನ್ನ ೫೧ ನೇ ರಾಜ್ಯವನ್ನಾಗಿ ಮಾಡಿಕೊಂಡು ಬಿಡುವಂಥ ಪ್ರಶ್ನೆಯೇ ಇರಲಿಲ್ಲ. ಆದರೆ ಯುಕ್ರೇನಿನಲ್ಲಿ ಆಗುತ್ತಿರುವುದು ಇದೇ. ಇಲ್ಲಿರುವುದು ಯುಕ್ರೇನನ್ನು ತಮ್ಮ ದೇಶದೊಳಗೆ ಸೇರಿಸಿಕೊಂಡು ಬಿಡುವ ಆಲೋಚನೆ. ಇದರಲ್ಲಿ ರಶ್ಯಾ ಗೆಲುವು ಸಾಧಿಸಿದರೆ ನಾವು ಮತ್ತೆ ಯುದ್ಧಗಳ ಯುಗಕ್ಕೆ ಹಿಂದಿರುಗುತ್ತೇವೆ. ಈ ಯುದ್ಧ ಸ್ಪೋಟವಾದಾಗ ವಿಶ್ವಸಂಸ್ಥೆಯ ಸುರಕ್ಷಾ ನಿಗಮದ ಕೆನ್ಯಾದ ಸದಸ್ಯರು ಹೇಳಿದ ಮಾತು ನನ್ನ ಮನಮುಟ್ಟಿತ್ತು. ಅವರು ಕೆನ್ಯಾದ ಪರವಾಗಿ ಮತ್ತಿತರ ಆಫ್ರಿಕಾದ ರಾಷ್ಟ್ರçಗಳ ಪರವಾಗಿ ಮಾತನಾಡುತ್ತಿದ್ದರು. ಅವರು ರಶ್ಯನ್ನರಿಗೆ ಹೀಗೆ ಹೇಳಿದರು. ಇಲ್ಲಿ ನೋಡಿ, ನಾವೂ ಸಹ ಸಾರ್ವಭೌಮತ್ವದ ನಂತರದ ವ್ಯವಸ್ಥೆಯ ನಂತರದ ಸರಕುಗಳು.  ಸೋವಿಯತ್ ಒಕ್ಕೂಟವು ಒಡೆದು ಹೋದ ನಂತರ ರಶ್ಯಾ ದೇಶದಂತೆ ಬೇರೆಬೇರೆ ದೇಶಗಳು ರೂಪಗೊಂಡಂತೆ, ವಸಾಹತುಶಾಯಿಗಳಾದ ಯೂರೋಪಿನ ಒಕ್ಕೂಟವು ಛಿದ್ರವಾದಾಗ ಆಫ್ರಿಕಾದಲ್ಲೂ ಸಹ ವಿವಿಧ ರಾಷ್ಟ್ರçಗಳಾದವು.  ಆಗಿನಿಂದ ಆಫ್ರಿಕಾ ದೇಶಗಳ ಮೂಲಭೂತ ರಾಜಕೀಯ ಸಿದ್ಧಾಂತವೇನೆಂದರೆ ನಿಮಗೆ ನೀವು ಗಳಿಸಿದ ಗಡಿಗಳ ಬಗ್ಗೆ ಎಷ್ಟೇ ಆಕ್ಷೇಪಣೆಗಳಿದ್ದರೂ ಸರಿ,  ಆ ಗಡಿಗಳನ್ನು ಕಾಪಾಡಿಕೊಳ್ಳಿ. ಗಡಿಗಳು ಪವಿತ್ರವಾದವು. ಏಕೆಂದರೆ ಒಂದು ಬಾರಿ ನಾವು ಬೇರೆಯವರ ಗಡಿಯೊಳಗೆ ನುಗ್ಗಿ , ” ಏಯ್ ಇದು ನಮ್ಮ ದೇಶದ ಭಾಗ, ಇಲ್ಲಿಯವರು ನಮ್ಮ ಜನರು” ಎಂದು ಹೇಳಲು ಆರಂಭಿಸಿದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಇದು ಇಲ್ಲಿ ಯುಕ್ರೇನಿನ ವಿಷಯದಲ್ಲಿ ನಡೆದು ಬಿಟ್ಟರೆ ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಇದೇ ನೀಲಿನಕ್ಷೆಯಂತೆ ಇದನ್ನೇ ಅನುಕರಿಸುವ ಇತರ ದೇಶಗಳೂ ಹಾಗೆಯೇ ಮಾಡುತ್ತಾರೆ.

ಮತ್ತೊಂದುವಿಷಯವೆಂದರೆ ಇಲ್ಲಿ ನಾವು ಮಹಾಪ್ರಬಲ ರಾಷ್ಟ್ರçಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಇಸ್ರೇಲ್ ಮತ್ತು ಹಿಬಲ್ಲಾಗಳ ನಡುವಿನ ಯುದ್ಧದಂತಲ್ಲ. ಇದು ರಶ್ಯಾ ಮತ್ತು ನೇಟೋಗಳ ನಡುವಿನ ಯುದ್ಧ. ಪರಮಾಣು ಶಸ್ತ್ರçಗಳನ್ನು ಬದಿಗಿಟ್ಟರೂ ಸಹ ಇದು ವಿಶ್ವಶಾಂತಿಯ ಸಮತೋಲನವನ್ನು ಸಂಪೂರ್ಣವಾಗಿ ತಪ್ಪಿಸುವ ಯುದ್ಧ.

ನಾನು ಮತ್ತೆ ಮತ್ತೆ ಬಜೆಟ್ಟುಗಳ ಬಗ್ಗೆ ಮಾತನಾಡುತ್ತೇನೆ. ಪೋಲ್ಯಾಂಡ್ ಮತ್ತು ಜರ್ಮನಿಗಳು ತಮ್ಮತಮ್ಮ ಸೈನ್ಯದ ಬಜೆಟ್ಟನ್ನು ಎರಡು ಪಟ್ಟು ಮಾಡಿದರೆ ಇದು ಪ್ರಪಂಚದ ಇನ್ನಿತರ ರಾಷ್ಟ್ರçಗಳಿಗೂ ಹರಡುತ್ತದೆ. ಇದು ಅತ್ಯಂತ ದುಃಖಕರ ವಿಚಾರ.

ಯುವಾ ನಾನು ವಿಷಯದಿಂದ ವಿಷಯಕ್ಕೆ ಹಾರುತ್ತಿದ್ದೇನೆ. ವೀಕ್ಷಕರಿಂದ ಕೆಲವು ಪ್ರಶ್ನೆಗಳಿವೆ.

ಹಲವರು ಹೀಗೆ ಕೇಳುತ್ತಿದ್ದಾರೆ.  ಈ ಯುದ್ಧಕ್ಕೂ ಹವಾಮಾನ ಬಿಕ್ಕಟ್ಟಿಗೂ ಅದರಲ್ಲೂ ವಿಶೇಷವಾಗಿ ಶಕ್ತಿಯ ಹರಿವಿಗೂ ಇರುವ ಸಂಬಂಧಗಳ ಬಗ್ಗೆ ಅವರ ಪ್ರಶ್ನೆಗಳಿವೆ. ಯೂರೋಪಿನ ಹಲವು ಭಾಗಗಳು ರಶ್ಯಾದ ತೈಲ ಮತ್ತು ಅನಿಲ ಶಕ್ತಿಯ ಮೇಲೆ ನಿರ್ಭರವಾಗಿವೆ. ನಮಗೆ ತಿಳಿದಿರುವಂತೆ ಅವುಗಳು ಇಂದಿನವರೆಗೂ ತಡೆಯಿಲ್ಲದಂತೆ ಹರಿಯುತ್ತಿವೆ. ಈ ಯುದ್ಧದ ಪರಿಸ್ಥಿತಿಯು ಸ್ವಲ್ಪ ಮಟ್ಟಿಗೆ ಮಹಾಸೋಂಕಿನಂತೆ ಹವಾಮಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದೇ? ಅಂದರೆ ನವೀಕರಿಸಬಹುದಾದ ಶಕ್ತಿ ಮೂಲಗಳ ಬಗೆಗಿನ ಕಾರ್ಯಕ್ರಮಗಳು ತ್ವರಿತಗೊಳ್ಳಬಹುದೇ?

ಯುವಾ: ಇದೊಂದು ಸದ್ಯದ ಆಶಾವಾದ. ಯೂರೋಪ್ ಈಗ ಈ ಅಪಾಯವನ್ನು ಅರ್ಥ ಮಾಡಿಕೊಂಡು ಒಂದು ಹಸಿರು ಮನ್‌ಹಟ್ಟನ್ ಯೋಜನೆಯನ್ನು ಆರಂಭಿಸಬಹುದೇ? ಈಗಾಗಲೇ ಈ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲಸಗಳು ಇದರಿಂದಾಗಿ ತ್ವರಿತಗೊಳ್ಳಬಹುದು. ಉತ್ತಮ ಶಕ್ತಿ ಮೂಲಗಳ ಅಭಿವೃದ್ಧಿ ಕಾರ್ಯಗಳು, ಉತ್ತಮ ಶಕ್ತಿಗಳ ಮೂಲಭೂತ ಸೌಕರ್ಯಗಳು ಇವುಗಳಿಂದಾಗಿ ತೈಲ ಮತ್ತು ಅನಿಲಗಳ ಮೇಲಿನ ಯೂರೋಪಿನ ಅವಲಂಬನೆಯಿಂದ ಯೂರೋಪನ್ನು ಬಿಡುಗಡೆಗೊಳಿಸಬಹುದು. ಇದರಿಂದ ತೈಲ ಮತ್ತು ಅನಿಲಗಳ ಮೇಲಿನ ಇಡೀ ಜಗತ್ತಿನ ಅವಲಂಬನೆಯನ್ನು ಕಡಿತಗೊಳಿಸಬಹುದು.ಇದು ಪ್ಯುಟಿನ್ ಆಡಳಿತವನ್ನು ಮತ್ತು ಪ್ಯುಟಿನ್ ಸಮರ ತಂತ್ರವನ್ನು ಕಡೆಗಾಣಿಸುವ ಅತ್ಯುತ್ತಮ ವಿಧಾನವಾಗಿದೆ. ಏಕೆಂದರೆ ರಶ್ಯಾದ ಬಳಿ ಇರುವುದು ಇವಷ್ಟೇ. ತೈಲ ಮತ್ತು ಅನಿಲ. ನೀವು ಕಡೆಯ ಬಾರಿ ರಶ್ಯಾದಲ್ಲಿ ತಯಾರಾದ ವಸ್ತುವನ್ನು ಕೊಂಡಿದ್ದು ಯಾವಾಗ? ಅವರ ಬಳಿ ತೈಲ ಮತ್ತು ಅನಿಲವಿದೆ.  ನಿಮಗೆ ತೈಲದ ಶಾಪದ ಬಗ್ಗೆ ಗೊತ್ತಿದೆ. ತೈಲವು ಸಂಪತ್ತಿನ ಮೂಲವಾಗಿದೆ ಆದರೆ, ತೈಲವು ಹೆಚ್ಚಾಗಿ ಸರ್ವಾಧಿಕಾರಿಗಳ ಆಧಾರವೂ ಆಗಿದೆ. ಏಕೆಂದರೆ ತೈಲದ ಲಾಭವನ್ನು ಅನುಭವಿಸಲು ನೀವು ಅದನ್ನು ನಿಮ್ಮ ಪ್ರಜೆಗಳೊಂದಿಗೆ ಹಂಚಿಕೊಳ್ಳಬೇಕೆಂದೇನೂ ಇಲ್ಲ. ನಿಮಗೆ ಒಂದು ಮುಕ್ತ ಸಮಾಜದ ಅವಶ್ಯಕತೆಯಿಲ್ಲ, ವಿದ್ಯಾಭ್ಯಾಸದ ಅವಶ್ಯಕತೆಯಿಲ್ಲ, ನೀವು ಬರಿದೇ ನೆಲವನ್ನು ಕೊರೆದು ತೈಲವನ್ನು ತೆಗೆಯಬೇಕು. ಅದರಿಂದಾಗಿ ನಮಗೆ ಹಲವೆಡೆಗಳಲ್ಲಿ ತೈಲ ಮತ್ತು ಅನಿಲಗಳು ಸಾರ್ವಭೌಮತ್ವದ ಆಧಾರಗಳಾಗಿ ಕಂಡುಬರುತ್ತವೆ. ತೈಲ ಮತ್ತು ಅನಿಲಗಳ ಬೆಲೆ ಇಳಿದು ಹೋಗಿ ಅವುಗಳ ಅಪ್ರಸ್ತುತವಾಗಿ ಬಿಟ್ಟರೆ, ಅದು ರಶ್ಯಾದ ಸೈನ್ಯವನ್ನು ದುರ್ಬಲವಾಗಿಸುವುದಷ್ಟೇ ಅಲ್ಲ ಅದು ರಶ್ಯನ್ನರಿಗೆ ಪ್ಯುಟಿನ್‌ಗೆ ತಮ್ಮ ರಾಜ್ಯಾಡಳಿತವನ್ನು ಬದಲಾಯಿಸುವಂತೆ ಒತ್ತಾಯಿಸುತ್ತದೆ.

ಈ ಚಾಟ್ ರೂಮಿನಲ್ಲಿ ಎಲ್ಲಾರೂ ತುಂಬಾ ವೀರನೆಂದು ಪರಿಗಣಿಸುವ ವ್ಯಕ್ತಿತ್ವದ ಬಗ್ಗೆ ಮಾತನಾಡೋಣ.  ಅದು ಯುಕ್ರೇನಿನ ಅಧ್ಯಕ್ಷರು. ಯುಕ್ರೇನಿನಲ್ಲಿ ಒಬ್ಬ ಹಾಸ್ಯಗಾರರು ಅಕಸ್ಮಾತ್ ಎಂಬಂತೆ ಅಧ್ಯಕ್ಷರಾದ ಕತೆಯಿದೆ. ಅವರು ಈಗ ಯುದ್ಧಕಾಲದ ಅಧ್ಯಕ್ಷರಾಗಿ ಹಿಂದಿನ ಕೆಲವು ವಾರಗಳಲ್ಲಿ ಮೆಚ್ಚುಗೆ ಪಡೆಯುವ ಹಾಗೆ ನಡೆದುಕೊಂಡಿದ್ದಾರೆ. ಅಮೆರಿಕವು ಅವರನ್ನು ಅಲ್ಲಿಂದ ರಕ್ಷಿಸಿ ಅವರು ಹೊರಗಡೆಯಿಂದಲೇ ತಮ್ಮ ಸರಕಾರದ ಮುಖಂಡರಾಗಿ ಆಡಳಿತ ನಡೆಸ ಬಹುದಾದ ಸಾಧ್ಯತೆಯನ್ನು ಅವರ ಮುಂದಿಟ್ಟಿತ್ತು. ಅದಕ್ಕೆ ಉತ್ತರವಾಗಿ ಅವರು ತಮಗೆ ಶಸ್ತ್ರಾಸ್ತ್ರ ಬೇಕೆಂದೂ ತಮಗೆ ಅಲ್ಲಿಂದ ಹೊರಹೋಗಲು ಗಾಡಿ ವ್ಯವಸ್ಥೆಯೇನೂ ಬೇಡವೆಂದೂ ಹೇಳಿದರು.

ನೀವು ಅಧ್ಯಕ್ಷರಾದ ಜೆಲೆನ್ಸಿಕರನ್ನು ಹೇಗೆ ನೋಡುತ್ತೀರಿ?

ಯುವಾ: ಅವರ ನಡವಳಿಕೆ ಪ್ರಶಂಸೆಗೆ ಯೋಗ್ಯವಾಗಿದೆ. ಅವರು ಯುಕ್ರೇನಿನ ಜನರಿಗಷ್ಟೇ ಅಲ್ಲ, ಇಡೀ ಜಗತ್ತಿನ ಜನರಿಗೆಲ್ಲಾ ಧೈರ್ಯ ಮತ್ತು ಉತ್ತೇಜನವನ್ನು ನೀಡುತ್ತಾರೆ. ಯೂರೋಪಿನಿಂದ ತ್ವರಿತವಾಗಿ ಬಂದ ಪ್ರತಿಕ್ರಿಯೆಗಳಿಗೂ ಅಂದರೆ ರಶ್ಯಾದ ವಿರುದ್ಧದ ನಿರ್ಬಂಧನೆಗಳು, ಮತ್ತು ಸಿಕ್ಕ ಶಸ್ತ್ರಾಸ್ತ್ರçಗಳು ಇವೆಲ್ಲಕ್ಕೂ ಜೆಲೆನ್ಸ್ಕಿ ಅವರಿಗೇ ಪ್ರಶಂಸೆ ಸಲ್ಲಬೇಕು. ರಾಜಕೀಯ ವ್ಯಕ್ತಿಗಳೂ ಸಹ ಮಾನವರೇ. ಅವರು ಅವನನ್ನು ಬಹಳ ಬಾರಿ ಭೇಟಿಯಾಗಿ ನೇರವಾಗಿ ಮಾತನಾಡಿದರು. ಈಗ ಅವನಷ್ಟೇ ಅಲ್ಲ ಅವನ ಕುಟುಂಬವೂ ಅಪಾಯದಲ್ಲಿದೆ. ಅವರು ಅವನ ಜೊತೆಗೆ ಮಾತನಾಡುವಾಗ ಅವರಿಗೆ ಇದು ಅವನ ಜೊತೆಗೆ ಮಾತನಾಡುವ ಕಡೆಯ ಬಾರಿ ಆಗಿ ಬಿಡಬಹುದು ಎಂಬ ಅನುಮಾನವಿರುತ್ತದೆ. ಮುಂದಿನ ಒಂದು ಗಂಟೆ , ಒಂದು ದಿನದಲ್ಲಿ ಅವನ ಕೊಲೆಯಾಗಬಹುದು, ಅವನ ಮೇಲೆ ಬಾಂಬ್ ದಾಳಿಯಾಗಬಹುದು ಅವನು ಮರಣಿಸಬಹುದು. ಇದು ಮಾನವರೊಳಗೆ ಒಂದು ಬದಲಾವಣೆಯನ್ನು ತರುತ್ತದೆ. ಹೀಗೆ ಅವನ ವೈಯಕ್ತಿಕವಾದ ಕೊಡುಗೆ ಯುಕ್ರೇನಿಗಷ್ಟೇ ಅಲ್ಲ ಇಡೀ ಜಗತ್ತಿಗೇ ಬಹಳ ದೊಡ್ಡದು.

ಕೇಳುಗರಲ್ಲಿ ಒಬ್ಬರಾದ ಸ್ಯಾಮ್ ಕೇಳುತ್ತಾರೆ, ” ಇದಕ್ಕೆ ನೀವು ಒಂದು ಚಾರಿತ್ರಿಕ ಸಂದರ್ಭ ನೀಡಬಲ್ಲಿರಾ? ಅಂದರೆ ಆರ್ಥಿಕ ಮತ್ತು ವ್ಯಾಪಾರದ ನಿರ್ಭಂದನೆಗಳ ಅರ್ಥ ಮತ್ತು ಶಕ್ತಿಗಳ ಬಗ್ಗೆ ಹೇಳಬಲ್ಲಿರಾ?”

ಈಗ ಹಾಕಿರುವ ನಿರ್ಭಂದನೆಗಳ ಮಟ್ಟದಲ್ಲಿ ಈ ಹಿಂದಿನ ಸರ್ವಾಧಿಕಾರಿಗಳಿಗೆ, ಸರ್ವಾಧಿಕಾರಿಗಳಾಗಬಯಸುವವರಿಗೆ ಮತ್ತು ಆಕ್ರಮಣಕಾರಿಗಳಿಗೆ ಈ ರೀತಿಯ ನಿರ್ಭಂದನೆಗಳಿಂದ ಅವರನ್ನು ತಡೆಹಿಡಿಯಲಾಯಿತು?  ಹೇಗೆ ಬಹಿಷ್ಕಾರ ಮತ್ತು ನಿರ್ಭಂದನೆಗಳಿಂದ ಅವರು ತಡೆಯಲ್ಪಟ್ಟರು?

ಯುವಾ: ನಾವು ಪ್ಯುಟಿನ್ನಿನ ರಶ್ಯಾದ ಬಗ್ಗೆ ತಿಳಿದುಕೊಳ್ಳ ಬೇಕಾದ್ದದ್ದು ಏನೆಂದರೆ ಅದು ಸೋವಿಯತ್ ರಶ್ಯಾ ಅಲ್ಲ. ಅದು ಸೋವಿಯತ್ ಒಕ್ಕೂಟಕ್ಕಿಂತ ಹೆಚ್ಚು ಚಿಕ್ಕದಾದ ದುರ್ಬಲವಾದ ದೇಶ. ೧೯೬೦ ರಲ್ಲಿ ಸೋವಿಯತ್ ಒಕ್ಕೂಟದ ಜೊತೆಗೆ ಅದರ ಸುತ್ತಾ ಸೋವಿಯತ್ ಘಟಕಗಳಾದ ದೇಶಗಳಿದ್ದವು. ಹಾಗಾಗಿ ರಶ್ಯಾವನ್ನು ಬೇರ್ಪಡಿಸಲು ಸುಲಭವಾಗುತ್ತದೆ. ಅದು ಹೆಚ್ಚುಹೆಚ್ಚು ದುರ್ಬಲವಾಗಿದೆ. ಅಂದರೆ ನಿರ್ಬಂಧನೆಗಳು ಪವಾಡವನ್ನು ನಡೆಸಿ ಬಿಟ್ಟು ಟ್ಯಾಂಕುಗಳನ್ನು ತಡೆದು ಬಿಡುತ್ತದೆಯೇ? ಇಲ್ಲ. ಅದಕ್ಕೆ ಸಮಯ ಬೇಕು. ಆದರೆ ಸೋವಿಯತ್ ಒಕೂಟಕ್ಕಿತ ಹೆಚ್ಚಾಗಿ ನಿರ್ಬಂಧನೆಗಳನ್ನು ಹೇರಿ ರಶ್ಯಾದ ಮೇಲೆ ಪ್ರಭಾವ ಬೀರುವುದಕ್ಕೆ ಪಶ್ಚಿಮಕ್ಕೆ ಸಾಧ್ಯ ಎಂದು ನನಗೆ ಅನ್ನಿಸುತ್ತದೆ. ಹಾಗೊ ರಶ್ಯನ್ ಜನರು ಹಿಂದಿನಂತಲ್ಲ. ಅವರು ಬೇರೆಯಾಗಿದ್ದಾರೆ. ಅವರಿಗೆ ಯುದ್ಧ ಬೇಕಿಲ್ಲ. ಪ್ಯುಟಿನ್ನಿನ ಸುತ್ತಮುತ್ತಾ ಇರುವ ಅವನ ಖಾಸಗೀ ಜನರ ಬಗ್ಗೆ ನನಗೆ ವೈಯಕ್ತಿಕವಾಗಿ ಗೊತ್ತಿಲ್ಲ ಆದರೂ ಅವರಿಗೆ ಜೀವನಪ್ರೀತಿಯಿದ್ದಂತೆ ತೋರುತ್ತದೆ. ಅವರ ಬಳಿ ಐಷಾರಾಮೀ ಹಡಗುಗಳಿವೆ, ಸ್ವಂತ ವಿಮಾನಗಳಿವೆ, ಲಂಡನ್ನಿನಲ್ಲಿ ಮನೆಗಳಿವೆ ಮತ್ತು ¥ಫರಂಸ್ ನಲ್ಲಿ ಬಂಗಲೆಗಳಿವೆ. ಅವರಿಗೆ ಮೋಜಿನ ಬದುಕಿನ ಆಸೆಯಿದೆ. ಅವರಿಗೆ ಆ ಜೀವನವನ್ನು ಮುಂದುವರೆಸುವ ಆಸೆಯಿದೆ. ಹಾಗಾಗಿ ನಿರ್ಬಂಧನೆಗಳು ಕೆಲಸ ಮಾಡುತ್ತವೆ ಎಂದು ನನಗೆ ಅನ್ನಿಸುತ್ತದೆ. ಅದರ ಕಾಲಾವಧಿ? ಅದು ಅಂತ್ಯದಲ್ಲಿ ಪ್ಯುಟಿನ್ನಿನ ಕೈಯಲ್ಲಿದೆ.

ಗಾಬ್ರಿಯೆಲ್ಲಾ ಹೇಳುತ್ತಾರೆ, ” ನನಗೆ ಹಿಂದಿನ ಯುಗೋಸ್ಲೋವಿಯಾದ ಯುದ್ಧದ ನೆನಪಿದೆ. ಅಲ್ಲಿನ ಕರಾಳ ಕೃತ್ಯಗಳ ನೆನಪಿದೆ. ಈ ಯುದ್ಧವು ಅಂತಹ ಪರಿಸ್ಥಿತಿಯನ್ನು ತಲುಪುವ ಸಾಧ್ಯತೆಗಳೇನಾದರೂ ಇವೆಯೇ?

ಇದನ್ನು ಮುಂದುವರೆಸಿ ಕೇಳುವುದಾದರೆ ಈ ಯುದ್ಧವು ಹರಡಬಹುದೇ? ಉದಾಹರಣೆಗೆ ಬಾಲ್ಕನ್‌ನಲ್ಲಿ ಆದಂತೆ. ಅಥವಾ ಹಿಂದೆ ಮಧ್ಯ ಏಶಿಯಾದ ರಿಪಬ್ಲಿಕ್ಕಿನಲ್ಲಿ ನಡೆದಂತೆ.

ಯುವಾ: ದುರದೃಷ್ಟವಶಾತ್, ಇದು ಆ ಮಟ್ಟಕ್ಕೆ ಮತ್ತು ಇನ್ನೂ ಅಧ್ವಾನಕ್ಕೂ ತಲುಪಬಹುದಾದ ಸಾಧ್ಯತೆಗಳಿವೆ. ನಿಮಗೆ ಹೋಲಿಕೆ ಬೇಕಿದ್ದರೆ ಸಿರಿಯಾಗೆ ಹೋಗಿ. ಅಲ್ಲಿ ಹೋಮ್ಸ್ನಲ್ಲಿ ಏನಾಯಿತು, ಅಲ್ಲೆಪ್ಪೋದಲ್ಲಿ ಏನಾಯಿತು ಎಂದು ನೋಡಿ.  ಅದನ್ನು ನಡೆಸಿದ್ದು ಪ್ಯುಟಿನ್ ಮತ್ತು ಅವನ ವಿಮಾನಗಳು, ಮತ್ತು  ಅವನ ಅಲ್ಲಿನ ಅನುಯಾಯಿಗಳು. ಇದೇ ವ್ಯಕ್ತಿ ಅದನ್ನು ಮಾಡಿದ್ದು. ಇಲ್ಲ ಇಲ್ಲ, ಅದು ನಡೆದದ್ದು ಮಧ್ಯಪ್ರಾಚ್ಯದಲ್ಲಿ.  ಇದು ಯೂರೋಪ್, ಇಲ್ಲಿ ಹಾಗಾಗುವುದಿಲ್ಲ ಅನ್ನಬೇಡಿ. ಹೋಮ್ಸ್ ನಲ್ಲಿ ನಡೆದದ್ದು ಕೀವ್‌ನಲ್ಲಿ ನಡೆಯಬಹುದು. ಅದು ಅತ್ಯಂತ ವಿನಾಶಕಾರೀ ದುರಂತ. ಮತ್ತೆ ಅದು ದಶಕಗಳವರೆಗೆ ದ್ವೇಶದ ಬೀಜವನ್ನು ಬಿತ್ತಿಬಿಡಬಹುದು. ಯುಕ್ರೇನಿನ ನೂರಾರು ಪ್ರಜೆಗಳು ಸಾಯುವುದನ್ನು ಈಗಾಗಲೇ ಕಂಡಿದ್ದೇವೆ. ಅದು ಹತ್ತಾರು ಸಾವಿರವಾಗಬಹುದು, ನೂರಾರು ಸಾವಿರವಾಗಬಹುದು. ಅದರ ಬಗ್ಗೆ ಯೋಚಿಸುವುದು ಕೂಡಾ ಅತ್ಯಂತ ದುಃಖಕರವಾದದ್ದು. ಆದುದರಿಂದಲೇ ನಾವು ವಿಶ್ವದ ನಾಯಕರುಗಳನ್ನು ಈ ಯುದ್ಧವನ್ನು ನಿಲ್ಲಿಸಿ ಎಂದು ಮತ್ತೆ ಮತ್ತೆ ಒತ್ತಾಯಿಸಬೇಕು. ಮತ್ತು ಪ್ಯುಟಿನ್ನಿಗೆ ಮತ್ತೆ ಮತ್ತೆ , “ನೀನು ಯುಕ್ರೇನನ್ನು ರಶ್ಯಾದ ಒಳಗೆ ಸೇರಿಸಿಕೊಂಡು ಬಿಡಲು ಸಾಧ್ಯವಿಲ್ಲ” ಎಂದು ಹೇಳಬೇಕು. ಅವರಿಗೆ ನೀನು ಬೇಡ. ಈ ಯುದ್ಧ ಬೇಡ. ನೀನು ಹೀಗೆಯೇ ಮುಂದುವರೆದರೆ ಮುಂದಿನ ಹಲವಾರು ತಲೆಮಾರುಗಳವರ್ಗೆ ಯುಕ್ರೇನ್ ಮತ್ತು ರಶ್ಯಾದ ಜನರ ನಡುವೆ ದ್ವೇಶವನ್ನು ಬಿತ್ತಿ ಬಿಟ್ಟ ಹಾಗಾಗುತ್ತದೆ. ಅದು ಹಾಗಾಗ ಬೇಕಿಲ್ಲ.

ಯುವಾ ನಿನ್ನ ರಾಷ್ಟ್ರದ ಬಗ್ಗೆ ಒಂದು ಪ್ರಶ್ನೆಯೊಂದಿಗೆ ಇದನ್ನು ಮುಗಿಸುತ್ತೇನೆ.

ನೀನು ಇಸ್ರೇಲಿನಲ್ಲಿ ಇದ್ದೀಯ.ಇಸ್ರೇಲಿನಲ್ಲಿ ಯುಕ್ರೇನಿನಲ್ಲಿ ಹುಟ್ಟಿದ ಮತ್ತು ರಶ್ಯಾದಲ್ಲಿ ಹುಟ್ಟಿದ ಜ್ಯೂಗಳಿದ್ದಾರೆ. ಇಸ್ರೇಲಿಗೆ ರಶ್ಯಾ ಮತ್ತು ಯುಕ್ರೇನ್ ಎರಡರ ಜೊತೆಗೂ ನಿಕಟ ಸಂಬಂಧವಿದೆ. ಈ ಸಂಘರ್ಶಕ್ಕೆ ಅಲ್ಲಿ ಎಂತಹ ಪ್ರತಿಕ್ರಿಯೆಯಿದೆ? ಸರಕಾರದ್ದು ಹಾಗೂ ಸಾಮಾನ್ಯ ಜನರದ್ದು.

ಯುವಾ: ನಿಜ ಹೇಳಬೇಕೆಂದರೆ ನಾನು ಇದಕ್ಕೆ ಉತ್ತರ ಹೇಳಲು ತಕ್ಕವನಲ್ಲ. ನಾನು ವಿಶ್ವದ ಎಲ್ಲೆಡೆಯಲ್ಲಿ ಆಗುತಿರುವುದನ್ನು ಎಷ್ಟು ಚೆನ್ನಾಗಿ ಗಮನಿಸುತ್ತಿದ್ದೇನೆ ಎಂದರೆ ಇಲ್ಲಿ ನಡೆಯುವುದರತ್ತ ನಾನು ಗಮನವಿತ್ತಿಲ್ಲ. ನಾನು ಇಲ್ಲಿ ಜೀವಿಸುತ್ತಿದ್ದರೂ ನಾನು ಇಸ್ರೇಲಿ ರಾಜಕೀಯ ಮತ್ತು ಇಸ್ರೇಲಿ ಸಮಾಜದ ಬಗ್ಗೆ ತಜ್ಞನಲ್ಲ. ರಸ್ತೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಭಾವನೆಗಳು ಖಂಡಿತವಾಗಿ ಯುಕ್ರೇನಿನ ಬೆಂಬಲಕ್ಕಿದೆ. ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಅವರವರ ಹಾಳೆಗಳಲ್ಲಿ ಯುಕ್ರೇನಿನ ಧ್ವಜಗಳನ್ನು ಹಾಕಿಕೊಂಡಿರುತ್ತಾರೆ. ಅಲ್ಲದೆ ಬಹಳಷ್ಟು ಇಸ್ರೇಲಿನ ಜ್ಯೂಗಳು ಹಿಂದಿನ ಸೋವಿಯತ್ ಒಕ್ಕೂಟದಿಂದ ಬಂದವರು. ಇಲ್ಲಿಯವರೆಗೆ ಎಲ್ಲಾರನ್ನು ಸಾಮಾನ್ಯವಾಗಿ ರಶ್ಯನ್ನರು ಎಂದು ಕರೆಯುತ್ತಿದ್ದರು. ನೀವು ಅಜûರ್ಬೈಜಾನಿನಿಂದ ಬಂದಿರಬಹುದಾಗಿತ್ತು ಅಥವಾ ಬುಖಾರಾದಿಂದ ಬಂದಿರಬಹುದಿತ್ತು. ಆದರೂ ನಿಮ್ಮನ್ನು ರಶ್ಯನ್ ಎಂದೇ ಕರೆಯುತ್ತಿದ್ದರು. ಈಗ ಇದ್ದಕ್ಕಿದ್ದಂತೆ, ಇಲ್ಲ ಇಲ್ಲ ಇಲ್ಲ, ನಾನು ಯುಕ್ರೇನಿಯನ್ ಎನ್ನುತ್ತಾರೆ. ಇವೇ ಪ್ಯುಟಿನ್ ಬಿತ್ತುತ್ತಿರುವ ದ್ವೇಶದ ಬೀಜಗಳು. ಅವು ಇಲ್ಲಿಗೂ ತಲುಪುತ್ತಿವೆ. ಇತ್ತೀಚಿನವರೆಗೆ ರಶ್ಯನ್ ಯುಕ್ರೇನಿಯನ್ ಎಲ್ಲಾರೂ ಒಂದಾಗಿದ್ದರು. ಆ ಆಘಾತದ ಅಲೆಗಳು ಹರಡುತ್ತಿವೆ.

ಯುವಾ ನಿಮ್ಮ ಸಮಯವನ್ನು ನಮ್ಮೊಂದಿಗೆ ಮಾತನಾಡುವುದಕ್ಕಾಗಿ ವಿನಿಯೋಗಿಸಿದ್ದಕ್ಕೆ ಮತ್ತು ನಿಮ್ಮ ಅಭಿಪ್ರಯಗಳನ್ನು ಮತ್ತು ಜ್ಞಾನವನ್ನು ಹಂಚಿಕೊಂಡಿದ್ದಕ್ಕೆ  ನಿಮಗೆ ಧನ್ಯವಾದಗಳು.

ಕೃಪೆ : TED


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

2 comments to “ಯುಕ್ರೇನ್ ಯುದ್ಧವು ಎಲ್ಲವನ್ನೂ ಬದಲಾಯಿಸಬಹುದು : ಯೂವಲ್ ನೋವಾ ಹರಾರಿ”
  1. ಈ ಬರೆಹ ಸಕಾಲಿಕವಾಗಿದೆ. ಈ ಲೇಖನವನ್ನು ಡಾಬಸ್ ಪೇಟೆ ವಾಯ್ಸ್ ಕನ್ನಡ ಮಾಸಿಕದಲ್ಲಿ ಪ್ರಕಟಿಸಲು ಅನುಮತಿ ನೀಡಬೇಕೆಂದು ವಿನಂತಿ.

ಪ್ರತಿಕ್ರಿಯಿಸಿ