ಕಣ್ಣಿನಲ್ಲಿ ನಿಂತ ಗಾಳಿ – ಪ್ರಕೃತಿ ಪ್ರಕಾಶನದ ಹೊಸ ಪುಸ್ತಕ


ಪ್ರಕೃತಿ ಪ್ರಕಾಶನ ಪ್ರಕಟಿಸುತ್ತಿರುವ ಐದನೆಯ ಪುಸ್ತಕ ರಾಜು ಹೆಗಡೆಯವರ ಸಂಕಲನ ‘ ಕಣ್ಣಿನಲಿ ನಿಂತ ಗಾಳಿ’ ಇಂದು ಋತುಮಾನದ ಮೂಲಕ ಅಂತರ್ಜಾಲದಲ್ಲಿ ಬಿಡುಗಡೆಯಾಗುತ್ತಿದೆ. ಐದು ವರ್ಷದ ಹಿಂದೆ ಆನ್‌ಲೈನ್ ಮೂಲಕ ಪುಸ್ತಕ ಬಿಡುಗಡೆಗೆ ಚಾಲನೆ ಕೊಟ್ಟಿದ್ದು ಪ್ರಕೃತಿ ಪ್ರಕಾಶನ. ಈಗ ಅದು ಸಾಮಾನ್ಯ ಎಲ್ಲರೂ ಅನುಸರಿಸುತ್ತಿರುವ ಕ್ರಮವೇ ಆಗಿಬಿಟ್ಟಿದೆ.

ವಿಶಿಷ್ಟ, ಪ್ರತಿಭಾನ್ವಿತ, ಪ್ರಮುಖ ಕವಿಗಳೇ ತುಂಬಿರುವ ಈ ಜಗತ್ತಿನಲ್ಲಿ ರಾಜು ಹೆಗಡೆ ಸಾಧಾರಣ ಕವಿ. ಅವರ ಕವಿತೆಗಳಲ್ಲಿ ದಾರ್ಶನಿಕತೆಯ ಸೋಗಿಲ್ಲ. ದಿವ್ಯದ ಅನುಭೂತಿಯನ್ನು ದಾಟಿಸುವ ಕ್ರಮವಿದೆಯೇ ಹೊರತು, ಕವಿ ತಾನೇ ದಿವ್ಯವಾಗುವ ಹವಣಿಕೆ ಇಲ್ಲ. ಅವರ ಕವಿತೆಗಳ ಸಿಂಪ್ಲಿಸಿಟಿ ಹೇಗಿರುತ್ತವೆ ಎಂದರೆ – ವಾಕಿಂಗ್ ಹೋಗುವವರು ಕೈಬೀಸಿಕೊಂಡು ಹೋಗುವಂತೆ ಬದುಕಿನ ಹಗಲು ರಾತ್ರಿಗಳು ಉರುಳುತ್ತಿರುತ್ತವೆ, ದುಃಖದ ಸ್ಮಶಾನದಲ್ಲಿ ಇರುವಾಗಲೂ ಇರುವೆ ಕಚ್ಚುತ್ತದೆ, ಮತ್ತು ಮೈ ತುಂಬ ಹೊಳೆಯುವ ಉದ್ದನೆಯ ಜುಬ್ಬಕ್ಕೆ ತನ್ನೊಳಗಿರುವವನಿಗೆ ಜೀವ ಇದೆಯೊ ಇಲ್ಲವೋ ಎನ್ನುವುದು ಗೊತ್ತಿದ್ದಂತಿಲ್ಲ.

ರಾಮು ಕವಿತೆಗಳು, ನಕ್ಷತ್ರ ಕವಿತೆಗಳು, ನಕ್ಷತ್ರ ದೇವತೆ ಕವನ ಸಂಕಲನಗಳಿಗೆ ಪ್ರೀತಿಯಿಂದ ಸ್ಪಂದಿಸಿದ ಓದುಗರು, ದೈನಂದಿನದ ಒಳಗೆ ದಿವ್ಯವನ್ನು ಆವಾಹಿಸುವ ರಾಜು ಹೆಗಡೆಯವರ ಕವಿತೆಗಳನ್ನು ಸ್ವೀಕರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ…

ಈ ಕೆಳಗಿನ ಲಿಂಕ್ ಬಳಸಿ ಪುಸ್ತಕ ಖರೀದಿಸಬಹುದು. ಡಿಸೆಂಬರ್ 30 ರಿಂದ ಪುಸ್ತಕವನ್ನು ಪೋಸ್ಟ್ ಮಾಡಲಾಗುವುದು.

https://store.ruthumana.com/product/kanninalli/

– ವಿಕ್ರಮ ಹತ್ವಾರ್,
ಪ್ರಕೃತಿ ಪ್ರಕಾಶನದ ಪರವಾಗಿ.

 

One comment to “ಕಣ್ಣಿನಲ್ಲಿ ನಿಂತ ಗಾಳಿ – ಪ್ರಕೃತಿ ಪ್ರಕಾಶನದ ಹೊಸ ಪುಸ್ತಕ”
  1. ಶ್ರೀ ರಾಜು ಹೆಗ್ಡೆಯವರ “ಕಣ್ಣಿನಲ್ಲಿ ನಿಂತ ಗಾಳಿ”- ಪುಸ್ತಕಕ್ಕಾಗಿ ರೂ ೧೭೦, ನ್ನು ತಮಗೆ ಕಳುಹಿಸಿ ದಿನಗಳು೧೫ ಸಂದವು. ಇನ್ನೂ ಪುಸ್ತಕ ಬಂದಿಲ್ಲ.ದಯವಿಟ್ಟು ಉತ್ತರಿಸಿ.

Leave a Reply to Padyana Govinda Bhat. Cancel reply