ಋತುಮಾನ ಹಾವೇರಿ ಸಮ್ಮೇಳನ ದಲ್ಲಿ ಪುಸ್ತಕ ಮಳಿಗೆಯನ್ನು ತೆರೆಯುವುದಿಲ್ಲ

ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲು ಮತ್ತೊಂದು ಸಂಸ್ಥೆಯ ಸಹಯೋಗದೊಂದಿಗೆ ಋತುಮಾನ ಮಳಿಗೆಯನ್ನು ಕಾದಿರಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಸಮಾಜದ ಎಲ್ಲ ವರ್ಗಗಳಿಗೆ ಸಮ್ಮೇಳನ ದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿಲ್ಲವೆಂದು ಪ್ರತಿರೋಧ ವ್ಯಕ್ತವಾಯಿತು. ತನ್ನ ತಪ್ಪನ್ನು ಪರಿಷತ್ತು ಸರಿ ಪಡಿಸಿಕೊಳ್ಳುತ್ತದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಬದಲಿಗೆ ಇದರ ಅಧ್ಯಕ್ಷರು ಉಡಾಪೆಯ ಮಾತುಗಳನ್ನಾಡುತ್ತಿದ್ದಾರೆ. ಹೀಗಾಗಿ ಋತುಮಾನ ಹಾವೇರಿ ಸಮ್ಮೇಳನ ದಲ್ಲಿ ಪುಸ್ತಕ ಮಳಿಗೆಯನ್ನು ತೆರೆಯುವುದಿಲ್ಲ. ಎಲ್ಲರನ್ನೂ ಒಳಗೊಳ್ಳದ ಸಾಹಿತ್ಯ ಪರಿಷತ್ತಿನ ಬೇಜವಾಬ್ದಾರಿತನಕ್ಕೆ ಇದು ನಮ್ಮ ಪ್ರತಿರೋಧವೇ ಹೊರತು ಅಸಹನೆಯಲ್ಲ.

2 comments to “ಋತುಮಾನ ಹಾವೇರಿ ಸಮ್ಮೇಳನ ದಲ್ಲಿ ಪುಸ್ತಕ ಮಳಿಗೆಯನ್ನು ತೆರೆಯುವುದಿಲ್ಲ”

ಪ್ರತಿಕ್ರಿಯಿಸಿ