ಕಿಳಿಂಗಾರು ವೆಂಕಪ್ಪ ತಿರುಮಲೇಶ್ 82 ವರುಷದ ತುಂಬು ಜೀವನ ನಡೆಸಿ ಬದುಕಿನ ಪಯಣ ಮುಗಿಸಿದ್ದಾರೆ. ತಿರುಮಲೇಶ್ ಸಾಹಿತ್ಯದ ಬಹುಮುಖ ಪ್ರತಿಭೆ. ಇಷ್ಟೊಂದು ಪ್ರಕಾರ ಗಳಲ್ಲಿ ಬರೆದು ಸೈ ಎನಿಸಿಕೊಂಡ ಲೇಖಕರು ವಿರಳ. ಕಾವ್ಯಕ್ಕೆ ಅಕ್ಷಯ ಕಾವ್ಯ, ಕತೆಗಳಿಗೆ ಅಪರೂಪದ ಕತೆಗಳು, ಕಾದಂಬರಿಗೆ ಮುಸುಗು, ನಾಟಕಕ್ಕೆ ಕಲಿಗುಲ, ಮಕ್ಕಳ ಕತೆಗೆ ಬೇಲಿ ದೆವ್ವ, ವಿಮರ್ಶಕನಾಗಿ ಅಸ್ತಿತ್ವವಾದ, ಅನುವಾದಕನಾಗಿ ಜ್ಞಾನ ವಿಜ್ಞಾನ ತತ್ವಜ್ಞಾನ ಹೀಗೆ ತಿರುಮಲೇಶ್ ಪ್ರತಿಯೊಬ್ಬ ಸಾಹಿತ್ಯ ಆಸಕ್ತನು ಓದಬೇಕಾದ ಲೇಖಕ.
ಈ ಸಂದರ್ಶನವನ್ನು Dept of translation studies, English and Foreign Languages University, Hyderabad ನಲ್ಲಿ ಪ್ರೊಫೆಸರ್ ಆಗಿರುವ ವಿ. ಬಿ. ತಾರಕೇಶ್ವರ್ ಅವರು ನಡೆಸಿಕೊಟ್ಟಿದ್ದಾರೆ.
ನಾವು ಈ ಸಂದರ್ಶನವನ್ನು ಸೆಪ್ಟೆಂಬರ್ ೨೧ , ೨೦೧೯ರಂದು ಹೈದರಾಬಾದಿನ ಅವರ ಮನೆಯಲ್ಲಿ ರೆಕಾರ್ಡ್ ಮಾಡಿಕೊಂಡೆವು. ಸಂಗ್ರಹಿಸಿಟ್ಟ ಫೈಲುಗಳು ಹಾಳಾದ್ದರಿಂದ ಅವನ್ನು ಸಂಸ್ಕರಿಸಿ ಇಷ್ಟರಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯವಾಯಿತು. ಹಾಗಾಗಿ ಈ ಸಂದರ್ಶನ ಅಲ್ಲಲ್ಲಿ ಬಿಟ್ಟುಹೋದಹಾಗೆ ಅನ್ನಿಸಿದರೆ ಮನ್ನಿಸಿರಿ. ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಧ್ವನಿ, ದ್ರಶ್ಯ ಎರಡನ್ನು ಇಲ್ಲಿ ಪೋಣಿಸಿದ್ದೇವೆ.
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X
Download RUTHUMANA App here :
** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225