ಆಡಿಯೋ : ಟಿಪ್ಪು ಸುಲ್ತಾನ್ ಲಾವಣಿ (Recorded 1930s)

ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ ಕಟ್ಟಿಕೊಂಡು ಹಾಡುವವರು ಅನಕ್ಷರಸ್ಥ ತಳಸಮುದಾಯಗಳು. ಬಹುಶ ಟಿಪ್ಪುವಿನ ಮೇಲೆ ಕಟ್ಟಿರುವಷ್ಟು ಲಾವಣಿಗಳು ಇನ್ಯಾವ ರಾಜ , ಜನನಾಯಕನ ಮೇಲೆ ನಮಗೆ ಸಿಕ್ಕಿಲ್ಲ. ಕೋಮುವಾದಿ ಚರಿತ್ರೆ ಬಿಂಬಿಸಲು ಪ್ರಯತ್ನಿಸುವಂತೆ ಜನಪದರ ಕಣ್ಣಿಗೆ ಟಿಪ್ಪು ಕಂಡಿಲ್ಲ ಎನ್ನುವುದಕ್ಕೆ ಈ ಲಾವಣಿಗಳೇ ಸಾಕ್ಷಿ. ಅನೇಕ ಲಾವಣಿಗಳು ಟಿಪ್ಪುವಿನ ಮರಣಾನಂತರ (1799) ಮೈಸೂರು ಸೀಮೆಯಲ್ಲಿ ಹುಟ್ಟಿಕೊಂಡವು ಎಂದು ಜನಪದ ವಿದ್ವಾಂಸರು, ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಅಲ್ಲಿಂದ ಮುಂದೆ ಲಾವಣಿಗಳು ಕರ್ನಾಟಕದ ತುಂಬೆಲ್ಲಾ ಹುಟ್ಟಿಕೊಂಡವು. ಇವುಗಳಲ್ಲಿ “ಭೇಷಕ್ ತಮಾಶಾ ಟೈಗರ್ ನಿಶಾನಾ ಟಿಪ್ಪು ಸುಲ್ತಾನನ ಹೆಸರಾಯ್ತು, ಮಸಲತ್ ಮಾಡಿದ ಮೀರ್ ಸಾದಿಕನಿಗೆ ದೇಶದ್ರೋಹಿ ಎಂಬೆಸರಾಯ್ತು” ಎಂದು ಶುರುವಾಗುವ ಲಾವಣಿ ಬಹಳ ಪ್ರಸಿದ್ಧವಾದದ್ದು. ಇಲ್ಲಿರುವ ಲಾವಣಿಯು ಟಿಪ್ಪುವಿನ ಆಳ್ವಿಕೆ, ಕೊನೆಯ ಮೈಸೂರು ಯುದ್ಧವನ್ನು ಮೆಲುಕು ಹಾಕುತ್ತಾ ಟಿಪ್ಪುವಿನ ಸಾಹಸಗಾಥೆಯನ್ನು ಹೇಳುತ್ತದೆ.

ಹಾಡಿದವರು : ಗುಳೇಶ | ಕೃಪೆ : ಬ್ರಿಟೀಷ್ ಲೈಬ್ರೆರಿ

 


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

 

ಪ್ರತಿಕ್ರಿಯಿಸಿ