ಋತುಮಾನ ಪುಸ್ತಕ ೧೦ : “ಕಾಣದ ಲೋಕ : ವೈರಸ್‌ ವೃತ್ತಾಂತ”

ಋತುಮಾನ ಪುಸ್ತಕ ೧೦
ವಿಜ್ಞಾನ ವಿಷಯದಲ್ಲಿ ಪುಸ್ತಕ ಪ್ರಕಟಿಸಬೇಕೆಂಬ ನಮ್ಮ ಬಹುದಿನದ ಬಯಕೆ ಈಗ ನನಸಾಗುತ್ತಿದೆ. ಕಣ್ಣಿಗೆ ಕಾಣದ ಲೋಕದ ಅನಭಿಷಿಕ್ತ ದೊರೆಗಳ ಸ್ವಾರಸ್ಯಕರ ವೃತ್ತಾಂತವನ್ನು ಹೇಳುವ ಪುಸ್ತಕ ಈಗ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕೈಯಲ್ಲಿರಲಿದೆ.
ಸೂಕ್ಷ್ಮಾತಿಸೂಕ್ಷ್ಮ ಜೀವಿಗಳಿಂದ ಬೃಹತ್‌ ತಿಮಿಂಗಲವರೆಗೆ ಎಲ್ಲವನ್ನೂ ತಾಕುವ, ಅತ್ತ ಜೀವವೂ ಅಲ್ಲದ, ಇತ್ತ ನಿರ್ಜೀವವೂ ಅಲ್ಲದ ವೈರಸ್ಸುಗಳ ವೃತ್ತಾಂತ ಇದು. ಹೂವಿನ ಬಣ್ಣ, ಬೆಳೆಗಳ ರೋಗಗಳು, ನೆಗಡಿ, ಕ್ಯಾನ್ಸರುಗಳಲ್ಲದೆ ಗಂಗಾ ನದಿಯ ರೋಗ ನಿವಾರಕ ಗುಣಕ್ಕೂ ವೈರಸ್ಸುಗಳು ಕಾರಣ ಎಂಬುದು ಗೊತ್ತೇ? “ಕಾಣದ ಲೋಕ : ವೈರಸ್‌ ವೃತ್ತಾಂತ” ಇಂತಹ ಅತ್ಯಂತ ಸ್ವಾರಸ್ಯಕರ ಸಂಗತಿಗಳನ್ನು ನಮ್ಮೆದುರು ತೆರೆದಿಡುತ್ತಲೇ ಈ ವಿಚಿತ್ರ ಜೀವಿಗಳ ಬಗ್ಗೆ ನಡೆದ ಸಂಶೋಧನೆಗಳ ಚರಿತ್ರೆಯನ್ನೂ ಮನದಟ್ಟು ಮಾಡಿಕೊಡುತ್ತದೆ. ಇದು ವೃತ್ತಾಂತವಲ್ಲ, ವೈರಸ್ಸುಗಳ ಕಥೆ.
ಲೇಖಕರು : ಪ್ರಣಯ್ ಲಾಲ್
ಕನ್ನಡಕ್ಕೆ : ಕೊಳ್ಳೇಗಾಲ ಶರ್ಮ
9″x6″ ಗಾತ್ರದ , ಒಟ್ಟು 288 ಪುಟಗಳಲ್ಲಿ 70 ಕಲರ್ ಪುಟಗಳಿರವ ಈ ವಿಶೇಷ ಕೃತಿಯ ಪುಟವಿನ್ಯಾಸ ಮಹಾಂತೇಶ್ ದೊಡ್ಡಮನಿ ಮತ್ತು ಪ್ರೂಫ್ ಓದಿ ಕೊಟ್ಟ ದ್ವಾರಕಾನಾಥ್, ವಿಶೇಷ ಆಸ್ಥೆ ವಹಿಸಿ ಮುದ್ರಿಸಿಕೊಡುತ್ತಿರುವ ಪ್ರಿಂಟ್ ಕಾಫ್ಟ್ ನ ಜಗದೀಶ್ (POD) ಮತ್ತು ಕನ್ನಡದ್ದೇ ಅನ್ನುವಷ್ಟು ಸರಳವಾಗಿ ನಿರೂಪಣೆ ಮಾಡಿಕೊಟ್ಟ ಅನುವಾದಕ ಕೊಳ್ಳೇಗಾಲ ಅವರಿಗೆ ಋತುಮಾನ ಆಭಾರಿ.
ಕೃತಿಯು ಈಗ ವಿಶೇಷ ಬೆಲೆಯಲ್ಲಿ ಪ್ರೀ ಆರ್ಡರ್ ಗೆ ಲಭ್ಯವಿದೆ . ಜುಲೈ ಮೊದಲ ವಾರದಲ್ಲಿ ಎಲ್ಲ ಮಳಿಗೆಗಳಲ್ಲಿ ದೊರೆಯಲಿದೆ.
Paperback : MRP : 649/- / Pre Oder : 468 /- (25% off)
Hardcover : MRP : 799/- / Pre Oder : 599 /- (25% off)
Special Discount on RUTHUMANA App
May be a graphic of 2 people, map and text

ಪ್ರತಿಕ್ರಿಯಿಸಿ