ಋತುಮಾನದಿಂದ ಹೊಸತೊಂದು ಬಾಬಾಸಾಹೇಬ್ ಅಂಬೇಡ್ಕರ್ ಬ್ಯಾಗ್

ದಪ್ಪಗಿನ ಹತ್ತಿ ಬಟ್ಟೆ ಬಳಸಿ ಮಾಡಿರುವ, ಹೆಚ್ಚು ಬಾಳಿಕೆ ಬರುವ ಈ ಕಪ್ಪು ಕೈ ಚೀಲದಲ್ಲಿ ಹಳದಿ ಗೆರೆಗಳ ಆಕರ್ಷಕವಾದ ಅಂಬೇಡ್ಕರ್ ಭಾವಚಿತ್ರವಿದೆ. ನಿಮ್ಮ ಅಗತ್ಯ ಗಳಿಗೆ ಬೇಕಾದಷ್ಟು ಜಾಗವೂ ಈ ಚೀಲದೊಳಗಿದೆ. ಅಂಬೇಡ್ಕರ್ ಅವರ ಸಹಿ ಜೊತೆಗೆ ಅವರ ಪ್ರಖರ ಹೇಳಿಕೆಯಾದ “Equality may be a fiction but nonetheless one must accept it as a governing principle / ಸಮಾನತೆ ಕಾಲ್ಪನಿಕವೇ ಆಗಿರಬಹುದು ಆದರೆ ಅದನ್ನು ಆಡಳಿತ ತತ್ವ ವೆಂದು ಒಪ್ಪಿಕೊಳ್ಳಲೇಬೇಕು.” ಮಾತನ್ನು ಬರೆಯಲಾಗಿದೆ. ನಿಮ್ಮ ಕೈ ಚೀಲದ ಸಂಗ್ರಹಗಳಿಗೆ ಇದೊಂದು ಅರ್ಥಪೂರ್ಣ ಸೇರ್ಪಡೆ . ನ್ಯಾಯ ಮತ್ತು ಸಮಾನತೆಯನ್ನು ಗೌರವಿಸುವ ಎಲ್ಲರೂ ಇಟ್ಟುಕೊಳ್ಳಬಹುದಾದ ಈ ಕೈ ಚೀಲ ಇಂಗ್ಲಿಷ್ ಮತ್ತು ಕನ್ನಡ ಎರಡೂ ಆಯ್ಕೆಗಳಲ್ಲಿ ಋತುಮಾನ ಸ್ಟೋರ್ ಮಿಂದಾಣದಲ್ಲಿ ಲಭ್ಯವಿದೆ. ಲಿಂಕ್ ಗಳು ಕಾಮೆಂಟ್ ನಲ್ಲಿವೆ.

ಅಳತೆ – ಎತ್ತರ 17 ಇಂಚು , ಅಗಲ 15 ಇಂಚು
ಬೆಲೆ – 200ರೂ ( ಪ್ಯಾಕಿಂಗ್ ಮತ್ತು ಕೊರಿಯರ್ ವೆಚ್ಚ ಸೇರಿ )

ಚಿತ್ರಕ್ಕಾಗಿ ಜಂಗಮ ಕಲೆಕ್ಟಿವ್ ನ ಗೆಳೆಯರಿಗೆ ಋತುಮಾನ ಆಭಾರಿ.

 

ಪ್ರತಿಕ್ರಿಯಿಸಿ