ನಿಮ್ಮ ಪುಸ್ತಕಗಳಿಗೆ ನೀವೇ ಸ್ವತಂತ್ರ ಪ್ರಕಾಶಕರಾಗಿ !
ಬೇಡಿಕೆಯಂತೆ ಅಗತ್ಯವಿದ್ದಷ್ಟು ಮಾತ್ರ ಪ್ರತಿಗಳನ್ನು ಮುದ್ರಿಸಿ !
ಒಂದೇ ವೆಚ್ಚದಲ್ಲಿ ಇ- ಪುಸ್ತಕವನ್ನೂ !
ನಿಮ್ಮ ಕೃತಿಗಳನ್ನು ನೀವೇ ಪ್ರಕಟಿಸಲು ಸಾಧ್ಯವೇ ?
ಹೌದು . ಯಾವುದೇ ಪ್ರಕಾಶಕರ ನೆರವಿಲ್ಲದೇ ನಿಮ್ಮ ಪುಸ್ತಕಗಳನ್ನು ನೀವೇ ಪ್ರಕಟಿಸಬಹುದು.
ಪುಸ್ತಕದ ವಿನ್ಯಾಸ ಯಾರು ಮಾಡುತ್ತಾರೆ ?
ನೀವು ASCII ( ಹೆಚ್ಚಾಗಿ ನುಡಿ , ಬರಹದಲ್ಲಿ ಬರೆದವು ) ಅಥವಾ ಯೂನಿಕೋಡ್ ನಲ್ಲಿ ಬರೆದ ನಿಮ್ಮ ಬರಹವನ್ನು ನಮಗೆ ಕಳಿಸಿ ಕೊಟ್ಟರೆ ಟೆಕ್ ಫಿಜ್ ಸಂಸ್ಥೆಯ ಇ ಪುಸ್ತಕ ಇಂಕ್ & ವೀವರ್ ಸೇವೆ ಪುಸ್ತಕದ ವಿನ್ಯಾಸ ಮಾಡಿ ಕೊಡುತ್ತದೆ .
ನೀವೇ ಪುಸ್ತಕದ ಕರಡು ತಿದ್ದಲು ಮತ್ತು ಪುಸ್ತಕದ ವಿನ್ಯಾಸ ಪರಾಮರ್ಶಿಸಿ ಬದಲಾಯಿಸಲು ಅನುವಾಗುವಂತೆ ನಿಮಗೆ Online Dashboard ಕೂಡ ನೀಡಲಾಗುವುದು. ನೀವು ಕೊನೆಯದಾಗಿ ಧೃಡೀಕರಿಸಿದ ಮೇಲೆಯೇ ಮುಂದಿನ ಹೆಜ್ಜೆ.
ಮುಖಪುಟ ಚಿತ್ರವನ್ನು ನೀವು ನಿಮ್ಮ ಆಯ್ಕೆಯ ಕಲಾವಿದರಿಂದ ಮಾಡಿಸಿ ನಮಗೆ ಕಳಿಸಿ ಕೊಡಬಹುದು ಇಲ್ಲವೇ ಅದನ್ನೂ ಕೂಡ ನಮ್ಮ ಆಯ್ಕೆಗೆ ಬಿಡಬಹುದು .
ನಿಮ್ಮ ಹಳೆಯ ಪುಸ್ತಕದ ಸಾಫ್ಟ್ ಕಾಪಿ ನಿಮ್ಮ ಬಳಿ ಇಲ್ಲ , ಕೇವಲ ಪುಸ್ತಕದ ಒಂದೆರಡು ಪ್ರತಿಗಳು ಮಾತ್ರ ಇವೆ ಎಂದಾದರೂ ನಾವು ಓಸಿಆರ್ ತಂತ್ರಜ್ಞಾನ ಬಳಸಿ ಪುಟಕದ ಹಾಳೆಗಳಲ್ಲಿರುವ ಅಕ್ಷರಗಳನ್ನು ಸಾಫ್ಟ್ ಕಾಪಿಯಾಗಿ ಪರಿವರ್ತಿಸಲು ಸಾಧ್ಯವಿದೆ.
ಪುಸ್ತಕದ ಮುದ್ರಣವನ್ನು ಯಾರು ಮಾಡುತ್ತಾರೆ ?
ಮುದ್ರಣಕ್ಕೆ ನಮ್ಮ ಸಹಾಯ ಬೇಕಿದ್ದರೆ ಅದಕ್ಕೂ ನಾವು ಸೈ ! . ನಾವು ವಿನ್ಯಾಸಗೊಳಿಸಿದ ಪ್ರಿಂಟ್ ಆನ್ ಡಿಮಾಂಡ್ ಫೈಲ್ ನ ಹಕ್ಕುದಾರರು ನೀವೇ. ಯಾವಾಗ ಬೇಕಾದರೂ ಎಷ್ಟು ಬೇಕಾದರೂ ಯಾವುದೇ ಡಿಜಿಟಲ್ ಪ್ರಿಂಟರ್ ಬಳಿ ನೀವು ಈ ಫೈಲನ್ನು ನೀಡಿ ನಿಮ್ಮ ಪುಸ್ತಕವನ್ನು ಮುದ್ರಿಸಬಹುದು. ಮುದ್ರಣವನ್ನು ನಮಗೆ ವಹಿಸಿದರೆ ಮುದ್ರಿಸಿದ ಪುಸ್ತಕಗಳನ್ನು ನಿಮ್ಮ ಆಯ್ಕೆಯ ವಿಳಾಸಕ್ಕೆ ತಲುಪಿಸಲಾಗುವುದು.
ಕನಿಷ್ಠ ಎಷ್ಟು ಪ್ರತಿಗಳನ್ನು ಮುದ್ರಿಸಬೇಕು ?
ಅಂತ ಯಾವುದೇ ಶರತ್ತುಗಳಿಲ್ಲ ! ನಿಮಗಿಷ್ಟ ಬಂದಷ್ಟು . ನೀವು ಮುಂಚಿತವಾಗಿ ಮುದ್ರಿಸುವುದೇ ಇಲ್ಲ , ಗ್ರಾಹಕರ ಆರ್ಡರ್ ಬಂದಂತೆ ಒಂದೊಂದೇ ಮುದ್ರಿಸಬೇಕೆಂದರೂ ಸರಿ . ಗ್ರಾಹಕರಿಗೆ ಆರ್ಡರ್ ಮಾಡಲು ಟೆಕ್ ಫಿಜ್ ನ ಮಿಂದಾಣ( ವೆಬ್ಸೈಟ್ ) ದಲ್ಲಿ ಸೌಕರ್ಯವನ್ನು ಒದಗಿಸಿಕೊಡಲಾಗುವುದು.
https://techfiz.com/shop ಗಮನಿಸಿ !
ಪುಸ್ತಕ ಪ್ರಕಟವಾದ ಮೇಲೆ ಅಂಗಡಿಗಳಿಗೆ ವಿತರಣೆಯನ್ನು ಯಾರು ಮಾಡುತ್ತಾರೆ ?
ಒಮ್ಮೆ ಪುಸ್ತಕ ಪ್ರಕಟವಾದ ಮೇಲೆ ನಾಡಿನ ಎಲ್ಲಾ ಪ್ರಮುಖ ಮಳಿಗೆಗಳಿಗೆ, ಮತ್ತು ಮಿಂದಾಣ ( ವೆಬ್ಸೈಟ್ ) ಗಳ ಮೂಲಕ ನೇರ ಗ್ರಾಹಕರಿಗೆ ಪುಸ್ತಕಗಳನ್ನು ತಲುಪಿಸುವ ಹೊಣೆಯನ್ನೂ ನೀವು ನಮಗೇ ವಹಿಸಬಹುದು. ಅಥವಾ ನಿಮ್ಮ ಆಯ್ಕೆಯ ವಿತರಕರಿದ್ದರೆ ಅವರಿಗೂ ತಲುಪಿಸುತ್ತೇವೆ . ಮುದ್ರಕರಿಂದ ನೀವು ನೇರವಾಗಿ ಅಂಗಡಿಗಳಿಗೆ ಅಥವಾ ನಿಮ್ಮಲ್ಲಿಗೆ ಕೂಡ ತರಿಸಿಕೊಳ್ಳಬಹುದು
ಪ್ರತಿಗಳು ಎಷ್ಟು ಮುದ್ರಿಸಲಾಗಿದೆ ಮತ್ತು ಎಷ್ಟು ಖರ್ಚಾದವೆಂದು ಲೆಕ್ಕವಿಡುವುದು ಹೇಗೆ ?
ನಾವು ನಿಮ್ಮ ಪುಸ್ತಕದ ಡಿಸೈನ್ ಮಾಡಿರುವ ಫೈಲ್ ಅನ್ನು ತಯಾರಿಸಿ ನಿಮ್ಮ ಕೈಗೇ ಕೊಡುತ್ತೇವೆ. ಪ್ರತಿಗಳು ಖಾಲಿಯಾದಂತೆ ಪುಸ್ತಕದ ಮುದ್ರಣಕ್ಕೆ ಆರ್ಡರ್ ಕೊಡುವವರು ನೀವೇ . ಹೀಗಾಗಿ ಮಾರಾಟವಾಗುವ ಪ್ರತಿಗಳ ಸಂಖ್ಯೆಯನ್ನು ನೀವು ಸುಲಭವಾಗಿ ಲೆಕ್ಕ ಹಾಕಬಹುದು.
ಇದು ನಿಮಗೆ ಹೇಗೆ ಲಾಭದಾಯಕವಾಗಲಿದೆ ?
ಸಾಮಾನ್ಯವಾಗಿ ಕನ್ನಡದಲ್ಲಿ ನಿಮ್ಮ ಪುಸ್ತಕ ಮಾರಾಟ ಮಾಡಲು ಪುಸ್ತಕದ ಮುಖಬೆಲೆಯ ೧/೩ ಭಾಗ ಅಥ್ವಾ ೪೦% ಹಣವನ್ನು ಮಾರಾಟದದ ಮಳಿಗೆಗಳಿಗೆ ನೀವು ನೀಡಬೇಕು . ಮಳಿಗೆಗಳಿಗೆ ಪುಸ್ತಕ ತಲುಪಿಸಲು ನೀವು ವಿತರಕರನ್ನು ಆಯ್ಕೆ ಮಾಡಿಕೊಂಡರೆ ಅವರಿಗೆ ೧೦% ಹಣವನ್ನು ನೀಡಬೇಕು . ಪುಸ್ತಕದ ಪ್ರತಿ ಮಾರಾಟಕ್ಕೆ ಮುದ್ರಣದ ವೆಚ್ಚ ಕಳೆದು ಉಳಿಯುವ ಸಂಪೂರ್ಣ ಹಣ ನಿಮ್ಮದ್ದೇ ಆಗುತ್ತದೆ.
ಪುಸ್ತಕದ ವಿನ್ಯಾಸಕ್ಕೆ ಎಷ್ಟು ವೆಚ್ಚ ತಗುಲುತ್ತದೆ ?
ಲೇಔಟ್ ಡಿಸೈನ್, ಮುಖಪುಟ ಚಿತ್ರ ಮತ್ತು ಪ್ರೂಫ್ ರೀಡಿಂಗ್ ಎಲ್ಲಾ ಸೇರಿ ಈಗ ಸಾಂಪ್ರದಾಯಿಕ ಮಾದರಿ(ಸದ್ಯಕ್ಕೆ ಆಫ್ ಸೆಟ್ ತಂತ್ರಜ್ಜಾನದಲ್ಲಿ) ಯಲ್ಲಿಎಷ್ಟು ಖರ್ಚಾಗುತ್ತಿದೆಯೋ ಅಷ್ಟೇ ವೆಚ್ಚದಲ್ಲಿ ನೀವು ಪ್ರಿಂಟ್ ಆನ್ ಡಿಮಾಂಡ್ ಫೈಲ್ ಮತ್ತು ಇ ಪುಸ್ತಕವನ್ನೂ ಪಡೆಯಬಹುದು. ಕೆಲವೊಮ್ಮೆ ಪುಸ್ತಕದ ವಿನ್ಯಾಸದಲ್ಲಿರುವ ಸಂಕೀರ್ಣತೆಗೆ ಅನುಗುಣವಾಗಿ ದರದಲ್ಲಿ ಅಲ್ಪಮಟ್ಟಿನ ಏರಿತವಾಗಬಹುದು.
ಇನ್ಯಾಕೆ ತಡ ! ನಿಮ್ಮದೇ ಪುಸ್ತಕ ನೀವೇ ಪ್ರಕಟಿಸುವ ಮನಸ್ಸಾಯಿತೇ ? . ವಿವರಗಳನ್ನು ಕೆಳಗಿನ ಫಾರ್ಮ್ ನಲ್ಲಿ ತುಂಬಿ ಅಥವಾ [email protected] ಮಿಂಚಂಚೆ ( ಇ ಮೇಲ್ ) ಕಳುಹಿಸಿ . ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.