ರಾಮು ಕವಿತೆಗಳು : ಚನ್ನಕೇಶವ

ರಾಮು ಕವಿತೆಗಳುಬಿಡುಗಡೆಯಾದ ಹದಿನೈದು ದಿನಕ್ಕೆ ಇನ್ನೂರು ಚಿಲ್ಲರೆ ಪ್ರತಿಗಳು ಮಾರಾಟವಾಗಿದೆ. ಕವನ ಸಂಕಲನಗಳನ್ನು ಕೊಳ್ಳುವವರಿಲ್ಲ ಎಂಬ ಕ್ಲಿಷೆಯ ನಡುವೆ ಈ ಕವನ ಸಂಕಲನಕ್ಕೆ ಸಿಕ್ಕ ಸ್ಪಂದನೆ ಸಮಾಧಾನ ತಂದಿದೆ. ನಮ್ಮಲ್ಲಿ ಪುಸ್ತಕ ಪ್ರಕಟಣೆಗೆ ಸಿಗುವಷ್ಟು ಪ್ರಾಧಾನ್ಯತೆ ಅದರ ಹಂಚಿಕೆಯಲ್ಲಿ ಸಿಗುವುದಿಲ್ಲ. ಇರುವ ಬೆರಳಣಿಕೆಯಷ್ಟು ಹಂಚಿಕೆದಾರರು ಕವನ ಸಂಕಲನವೆಂದರೆ ಮೂಗು ಮುರಿಯುತ್ತಾರೆ. ಇದರ ನಡುವೆಯೂ ಹಲವಾರು ಊರಿನ ಪುಸ್ತಕದ ಅಂಗಡಿಗಳಲ್ಲಿ ರಾಮು ಕವಿತೆಗಳು ಲಭ್ಯವಾಗಲಿದೆ. ಚನ್ನಕೇಶವ ಅವರು ಈ ಸಂಕಲನದ ಕವಿತೆಯೊಂದನ್ನು ಓದಿರುವುದು ಇಲ್ಲಿದೆ.. ನೋಡಿ.. ಕೇಳಿ ..ಹೇಗಿದೆ ಎಂದು ಹೇಳಿ…

ನೀವು ಪುಸ್ತಕವನ್ನು ಋತುಮಾನ ಅಂತರ್ಜಾಲ ಮಳಿಗೆಯ ಈ ಕೊಂಡಿಯಲ್ಲಿ ಖರೀದಿಸಬಹುದು.

http://store.ruthumana.com/product/ramu_kavitegalu/

ಕವಿತೆಯು ಭಾಷೆಯಲ್ಲಿಯೇ ಆಗಬೇಕು ಎಂಬುದನ್ನು ವ್ರತದಂತೆ ಪಾಲಿಸುವ ಇಲ್ಲಿನ ಕವಿತೆಗಳು ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯಕ್ಕೆ ಹೊಸ ದನಿಯನ್ನು ಸೇರಿಸುತ್ತಿವೆ. ಮನುಷ್ಯನ ಅಸಾಹಯಕತೆ, ಸಂಭ್ರಮ, ವಿರಾಹ, ವಿಷಾದ, ನೋವು, ಪ್ರತಿಭಟನೆ ಇತ್ಯಾದಿ ಭಾವಗಳನ್ನು ಅತಿ ಸರಳ ಭಾಷೆಯಲ್ಲಿ ಉಸುರುವ ಈ ಕವಿತೆಗಳು ಭಾಷಾಲೋಕದ ಬೆರಗನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕಾರಣದಿಂದಲೇ ತನ್ನದೇ ವಿಶಿಷ್ಠ ಭಾಷೆ ಮತ್ತು ನುಡಿಗಟ್ಟನ್ನು ಸೃಷ್ಟಿಸಿಕೊಂಡಿದೆ.

ರಾಮು ಕವಿತೆಗಳು : ಚನ್ನಕೇಶವ | Ramu Kavitegalu : Channakeshava

One Comment
  1. ಸುಂದರ ಕವಿತೆಗಳು. ಸುಲಭವಾಗಿಯೇ ಸುಲಭವಲ್ಲದ್ದನ್ನು ಹೊಳೆಯಿಸುವ ಬೆಳಕಿನ ಹಾಗೆ. ಗುಳ್ಳೆ ಬರೀ ಗುಳ್ಳೆಯಲ್ಲ, ನಮ್ಮೊಳಗಿನ ಅಸಂಖ್ಯ ಕನಸುಗಳು! ನಾವೇ ಹಿಡಿದೂಡೆದುಕೊಂಡ ಕನಸುಗಳು!

ಪ್ರತಿಕ್ರಿಯಿಸಿ