ಬೇಂದ್ರೆ ಧ್ವನಿಯಲ್ಲಿ ‘ಹೃದಯ ಸಮುದ್ರ’ ಕವಿತೆ

ಬೇಂದ್ರೆ ಹುಟ್ಟುಹಬ್ಬದ ಖುಷಿಗೆ ಅವರ ಪದ್ಯವನ್ನು ಅವರೇ ಓದುವುದನ್ನು ಕೇಳಿಸಿಕೊಳ್ಳುವುದಕ್ಕಿಂತ ಖುಷಿ ಬೇರೇನಿದೆ ?.
ಬೇಂದ್ರೆ ತಾವೇ ಓದಿರುವ ‘ಹೃದಯ ಸಮುದ್ರ’ ಕವಿತೆಯನ್ನು ಕೇಳೋಣ . ಇದು ಹೃದಯ ಸಮುದ್ರ (೧೯೫೬) ಕವನ ಸಂಕಲನದಲ್ಲಿದೆ . 1971 ರಲ್ಲಿ ಬೇಂದ್ರೆಯವರನ್ನು ಕು ಶಿ ಹರಿದಾಸ ಭಟ್ಟರು ಉಡುಪಿಗೆ ಕರೆಸಿಕೊಂಡಿದ್ದರು . ಆಗ ಉಡುಪಿಯ ಸುತ್ತ ಮುತ್ತ ಬೇಂದ್ರೆಯವರ ಉಪನ್ಯಾಸ ಸರಣಿ ನಡೆದಿತ್ತು . ಅದನ್ನು ಹರಿದಾಸ ಭಟ್ಟರು ‘ಮಾತೆಲ್ಲ ಜ್ಯೋತಿ’ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ . ಬೇಂದ್ರೆಯವರು ಈ ಕವಿತೆಯುನ್ನು ಓದಿರುವ ಸಂದರ್ಭ ಕೂಡ ಅದೇ .

 

ಪ್ರತಿಕ್ರಿಯಿಸಿ