ದೇವರ ದೇವ ಶಿಖಾಮಣಿ ಬಂದಾನೋ- ಕೊನೆಯ ಭಾಗ

 ಋತುಮಾನ ಆಂಡ್ರಾಯ್ಡ್ ಆ್ಯಪ್‌ ಈಗ ಲಭ್ಯ.  ಈ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ
3
“ಆ ಪರಿಸ್ಥಿತಿನೇ evolution ಕಡೆ ಇಡೋ ಮೊದಲ ಹೆಜ್ಜೆ Impersonality! God is impersonal. ಮನುಷ್ಯನ evolution ನಿಲ್ಲದೇ ಸಾಗ್ಬೇಕು ಅಂದ್ರೆ ಹೀಗೆ ನಮ್ಮಂತವರು rebel ಆಗ್ಬೇಕು. You know my first rebellion against my life had propelled me here… into this big desolated row … ಇದಾಗಿದ್ದು ಉಕ್ರೇನಲ್ಲಿ, ನಲವತ್ತು ವರುಶಗಳ ಹಿಂದೆ. ಆವಾಗ ನಾನು ಇಂಟೆಲಿಜೆನ್ಸ್ ಬ್ಯೂರೋದಲ್ಲೇ ಇದ್ದೆ; ನನ್ನ ಮಿಶನ್ ಇದ್ದಿದ್ದು ಉಕ್ರೇನಲ್ಲಿ. ಇಲ್ಲಿಂದ ಒಂದು ಟೀಮ್ ಮಾಡಿ ನಮ್ಮನೆಲ್ಲಾ ಅಲ್ಲಿಗೆ ಕಳಿಸಿದ್ರು, ಒಂದು ತಿಂಗ್ಳು ಅಲ್ಲೇ ಟೂರಿಸ್ಟ್ ಹಾಗೆ ಆಕ್ಟ್ ಮಾಡ್ಬೇಕಿತ್ತು, ಆಮೇಲೆ ನಮ್ಗೆ ಎಲ್ಲಾ ವಿಷಯ ಕ್ಲಿಯರ್ ಆಗಿ we were all set to attack ಒಂದು ಬೆಳಿಗ್ಗೆ we got the permission to strike. Even meeting point location ಸಹಾ ಗೊತ್ತಾಯಿತು. ಯಾವುದೋ ಒಂದು ನದಿಯ ದಂಡೆಯ ಹತ್ತಿರ ಆ ಸ್ಪಾಟ್ ಇತ್ತು. ನಾನು ರಾತ್ರಿ ಕಾಯ್ತಾ ಇದ್ದೆ. ನನ್ನ ಜತೆ ಇನ್ನಿಬ್ರಿದ್ರು. ಆದ್ರೆ ಪರಸ್ಪರ ನಾವ್ ಮಾತ್ ಆಡ್ತಾ ಇರ‍್ಲಿಲ್ಲ, ಒಬ್ರಿಗೆ ಒಬ್ರು ಗೊತ್ತಿದ್ರೆ ತಾನೇ ಮಾತಾಡೋದು. ನಮಗೆ ನಾವೇ ಅಪರಿಚಿತರು! ಅಲ್ಲೊಂದು cheap hotel ಇತ್ತು. ಅಲ್ಲಿಗೆ ಕರೆಕ್ಟ್ ರಾತ್ರಿ ಹನ್ನೊಂದಕ್ಕೆ ಒಬ್ಬ rebel in chief, -indeed he was our mission- ಬರ‍್ತಾ ಇದ್ದ, ನ್ಯೂಕ್ಲಿಯರ್ ಇಶ್ಯೂಸಲ್ಲಿ ಅವನ್ಗೂ ಅವ್ನ government ತಕರಾರಿತ್ತು… you know he had access to some sat light cryptograms which could prove fatal to nuclear protocol or at least his government belived so! ಈ ಕಡೆಯಿಂದ ಚೈನಾದಿಂದನೂ pressure ಇತ್ತು ಅವ್ನ exterminate ಮಾಡಕ್ಕೆ. You can call this as a ರಿoiಟಿಣ operation with mutual concerns and benefits. ಇರ‍್ಲಿ, ಅವ್ನ ಹೊಡೆದು ನಮ್ಮ ನಮ್ಮ ಗೂಡಿಗೆ ಮರಳೋದು ನಮ್ಮ plan ಹತ್ತೂವರೆಗೆಲ್ಲ ಒಳಗೆ ನುಗ್ಗಿದ್ದ್ವಿ… ಅಲ್ಲಿ ಒಬ್ಬ ಕಪ್ಪಗೆ ಇರೋ ವ್ಯಕ್ತಿ ಕೂತಿದ್ದ. ಮುಖವೆಲ್ಲಾ ಗಾಯದ ಗುರುತು. ಡುಮ್ಮ್ ಡುಮ್ಮ್‌ಕ್ಕಿದ್ದ ಇಬ್ರು middle aged waitress ಅಂಡ್ ಬಡಿತಾ ‘ಹ್ಹೆ, ಹ್ಹೆ, ಹ್ಹೆ’ಅಂತ ನಗ್ತಿದ್ದ. ಆ ಇಬ್ರು ಹೆಂಗಸ್ರು ಹಳದಿ ಹಲ್ಲುಗಳಲ್ಲಿ ಕಿಸೀತಾ ಇದ್ರು. ಆಚೆ ಅರ್ಧ ಚಂದ್ರ ಆದ್ರೂ ನದಿಯೆಲ್ಲ್ಲ ಬೆಳ್ಳಿ ಬಣ್ಣದಲ್ಲಿ ಹೊಳಿತಾ ಇತ್ತು. ದೊಡ, ದೊಡ್ಡ ಮರ ಅದ್ರ ನೆರಳು ಕಿಟಕಿಯಿಂದ ತೂರಿ ಬೀಳ್ತಾ ಇತ್ತು. ಹತ್ತೂ ಮುಕ್ಕಾಲಾಯಿತು. ಆ rebel in chief ಇನ್ನೇನು ಬರೋ ಸಮಯ. ‘ಅಗರ್ ಸಾಲಾ ಜಲ್ದೀ ಆ ಗಯಾ ತೋ’ಎಂದ ನನ್ನ ಸೋ ಕಾಲ್ಡ್ ಪಾರ‍್ಟನರ್. ನನ್ನ ಗಮನವೆಲ್ಲಾ ಆ ಕರಿಯನ ಮೇಲಿತ್ತು. ವೈನ್ ಕುಡಿತಾ ಇದ್ದ, ಗಲೀಜಾಗಿ ಬಾಳೆಹಣ್ಣು ತಿನ್ತಾ ಇದ್ದ. ಕಿತ್ತಳೆ ಬೆಳಕು ಆ ಕೊಳಕಾದ ಬಾರಲ್ಲಿ… ಆಗೊಬ್ಬ ಸ್ಪಾನಿಶ್ ಹೆಂಗ್ಸು ಬಂದು, ಅವ್ನ ಮುಂದೆ ಕೂತ್ಲು. ಅವಳು ವಿಚಿತ್ರ ಪುಕ್ಕಗಳಿದ್ದ ಟೋಪಿ ಹಾಕಿದ್ಲು. ಅವಳ್ನ ನೋಡಿ ಇದ್ದಕ್ಕಿದ್ದಂತೆ ಸೀರಿಯಸ್ ಆದ ಈ ಹೇಸರಗತ್ತೆ, ಎದ್ದೇಳೋಕೆ ನೋಡ್ದ. ಆಗ ಅಕ್ಕ-ಪಕ್ಕ ಇದ್ದ ಆ ಡುಮ್ಮಿಗಳು ಬಲವಂತವಾಗಿ ಅವ್ನ ಕುರಿಸಿದ್ರು. ಹನ್ನೊಂದು ಆಗ್ತಾ ಬಂತು. ಆ ಹೋಟೇಲ್ ಮೇಲಿಂದ ಎಂತಹದೋ ನಿಶಾಚರಿ ವಿಕಾರವಾಗಿ ಅರಚ್ತಿತ್ತು. ಆ ಶಬ್ದ ಕೇಳ್ತಾ, ಕೇಳ್ತಾ ನನ್ನ ಮಯ್ ಮೇಲಿನ ರೋಮ ಎಲ್ಲಾ ನೆಟ್ಟಗಾಯ್ತು. ಆಗ ವಾಶ್ ರೂಂನಲ್ಲಿ ಫ್ಲಶ್ ಶಬ್ದ ಆಯಿತು. ಅಷ್ಟೊತ್ತು ಅಲ್ಲಿ ಯಾರೋ ಇದ್ರು. ಆ ಇಂಡೋನಿಶೆಯನ್ ಅಲ್ಲೇನಾದ್ರೂ ಬಂದು ಅವಿತು ಕೂತಿದ್ನ?! ನಾವ್ ಬಂದಿರೊದು ಆಗ್ಲೆ ಅವನಿಗೆ ಗೊತ್ತಾಗಿ ನಮ್ನೇ ಟರ‍್ಮಿನೇಟ್ ಮಾಡಕ್ಕೆ ಕಾಯ್ತಾ ಇದ್ದ್ನಾ?! ಏನೂ ಕ್ಲಿಯರ್ ಆಗ್ಲಿಲ್ಲ ನನ್ಗೆ. ಗನ್‌ಮೇಲೆ ಕೈ ಇಟ್ಟು ತಕ್ಷಣ ಫೈರ್ ಮಾಡಕ್ಕೆ ರೆಡಿ ಇದ್ವಿ. ಆಶ್ಚರ್ಯ ಅಂದ್ರೆ ಆಚೆ ಬಂದಿದ್ದು, ಕುಡಿದು ನಿಲ್ಲಕ್ಕೂ ಆಗ್ದೇ ತೂರಾಡ್ತಾ ಇದ್ದ ಹೆಣ್ಣು! ತೂರಾಡಿ, ತೂರಾಡಿ ಈ ಕರಿಯನ ತೊಡೆ ಮೇಲೆ ಬಿದ್ಲು; ಏನೇನೋ ಕನವರಿಸ್ತಾ ನಕ್ತಾ ಇದ್ಲು. ಆಗ ಸಡನ್ ಆಗಿ ಕಿಟಕೀಲಿ ಎಲ್ಲನೂ ನೋಡ್ತಾ ನಿಂತಿದ್ದ ಆ ಇಂಡೋನೇಶಿಯನ್ ಕಾಣಿಸ್ದ! ಹೆಣದ ತರ ಇತ್ತು ಅವ್ನ ಮುಖ. ನಾನ್ ಅವ್ರಿಬ್ನೂ ಎಚ್ಚರಿಸದೆ, ಬಟ್ ಅವರ‍್ಯಾರು ಅವ್ನು ಅಲ್ಲಿ ಇಲ್ಲ್ವೇ ಇಲ್ಲ ಅನ್ನೋ ಹಾಗಿದ್ರು. ನನಗೆ ಮೊದಲು ಏನೂ ಅರ್ಥ ಆಗ್ಲಿಲ್ಲ. But I got in the next instant, our operation was aborted! ಆ ಇಂಡೋನೇಶಿಯನ್ ಯಾವುದೋ incredible offers ಕೊಟ್ಟಿದ್ದ ಅನ್ಸುತ್ತೆ china govt as well as ನಮ್ಮ ಕಮಿಟೀಗೆ, ಸೋ ನಾನ್ ನೋಡ್ತಾ ಇದ್ದ ಹಾಗೆ ನನ್ನ partners ಎಲ್ಲಾ ಆ ಜಾಗಕ್ಕೂ ಅವರ‍್ಗೂ ಲಿಂಕೇ ಇಲ್ಲ ಅನ್ನೋ ಹಾಗೆ ಪೇಡ್ ಆಗ್ತಾ ಇದ್ರು. ಸೋ ಮುಂಚೆನೆ ಅವ್ರ‍್ಗೆಲ್ಲಾ ಈ ಮ್ಯಾಟರ್ ಗೊತ್ತಿತ್ತು, they just wanted to make sure that he would come… but why I was not informed! may be they treid to but I was kind of immersed into this operation from the past month… working like a nocturnal creature piling up all the clues, making a route that would lead me to this man… I was obsessed … now they called it off! ಆದ್ರೆ ಇಂಡೋನೇಶಿಯನ್ ಇಷ್ಟೆಲ್ಲಾ ಆಗಿದ್ರೂ ಅಲ್ಲೇ ಇದ್ದ. ಆ ಕರಿಯನ ತೊಡೆ ಮೇಲೆ ಒದ್ದಾಡುತ್ತಿದ್ದ ಆ ಕುಡಿದ ಹೆಣ್ಣನ್ನ ನೋಡ್ತಾ ಇದ್ದ. ಕಾಡು ಬೆಕ್ಕು ಮತ್ತೆ ಸೀಳು ನಾಯಿ ಹಟಕ್ಕೆ ಬಿದ್ದ ಹಾಗೆ ಕೂಗ್ತಾ ಇದ್ವು. ಡುಮ್ಮಿಗಳಿಬ್ರೂ ತಮ್ಮ ಮಂಕಾಗಿದ್ದ ಬಟ್ಟೆನಾ ಸರಿಮಾಡ್ಕೊಳ್ತಾ ತಮಾಷೆ ನೋಡ್ತಾ ಇದ್ರು. ಆ ಪುಕ್ಕದ ಟೋಪಿಯಲ್ಲಿದ್ದ ಹೆಣ್ಣು ಈ ಹೇಸರಗತ್ತೆ ಮೂತಿ ಕರಿಯನ ಹತ್ತಿರ ಬಂದಳು. ಆಗ ಇನ್ನೊಬ್ಬರು ಕೂರಕ್ಕೂ ಆಗ್ದೇ ತಲೆ ಸುತ್ತು ಬಂದವರ ಹಾಗೇ, ಆ ಟೇಬಲಲ್ಲಿದ್ದ ಬಟ್ಟೆನೇ ಎಳಕೊಂಡು ಕೆಳಗಡೆ ಬಿದ್ದಳು. ಅದೇ ಅನ್ನಿಸುತ್ತೆ ಆ ಸಿಗ್ನಲ್; ಇಂಡೋನೇಶಿಯನ್ ಗನ್ ತೆಗೀತಾ ಇದ್ದ. ಆಗ ನಾನು ಮೊದ್ಲು ಗನ್ ಎಳ್ದು ಇಂಡೋನೇಶಿಯನ್‌ನ ಒಂದೇ ಬುಲೆಟ್‌ನಲ್ಲಿ ಮುಗಿಸ್ದೆ! ಮತ್ತೆ ಆ ಇಬ್ಬರನ್ನ… ಆ ಕರಿಯ ತಕ್ಶಣ ಹೊರಗೆ ಓಡ್ದ ಬಹುಶಹ್, ಅವನನ್ನ ತೆಗೆಯಕ್ಕೆ ಆ ಇಂಡೋನೇಶಿಯನ್ ಬಂದಿದ್ದಾ ಅನ್ಸುತ್ತೆ. ಅವ್ನ ಬೆನ್ನಿಗೆ ಶೂಟ್ ಮಾಡ್ದೆ, ‘ಡಿಶ್ಕ’ ಅಂತ! ಕೆಳಗಡೆ ಬಿದ್ದ. ಅವನ ಹಿಂದೆ ಹೋಗಿ ಅವನ ಮುಖ ನೋಡ್ದೆ. ಸಾವಿಗೆ ಮೋಸ ಮಾಡಿ ತಪ್ಪಿಸಿಕೊಂಡಿದ್ದ ಖುಶಿ ಮೂಡ್ತಾ ಇತ್ತು. ಅದು ಅವನಲ್ಲಿ ಅರಗಕ್ಕೂ ಮುಂಚೆನೇ ನಾನು ಬೀಳಿಸಿದ್ದೆ, ಅವನನ್ನ. ಆ ಇಂಡೋನೇಶಿಯನ್ ಪಕ್ಕ ಒಂದು ಬ್ರೀಪ್‌ಕೇಸ್ ಇತ್ತು. ಅದನ್ನು ಎತ್ತಿಕೊಂಡು ನನ್ನ ಹಿಂದೆಯಿದ್ದ ಗನಮರದಿಂದ ಬಿದ್ದು, ಜೋತಾಡ್ತ, ನೇತಾಡ್ತಾ ಇದ್ದ ಬಳ್ಳಿಗಳ ಸರಿಸಿ ಜಾರಿ ಮಾಯ ಆದೆ.
ಆದ್ರೆ ಯಾಕೆ ಆ ಇಂಡೋನೇಶಿಯನ್ ಹೊಡಿ ಬಾರ‍್ದು ಅಂತ ಆರ‍್ಡರ್ ಬಂದಿತ್ತು ನಮ್ಗೆ? ಇನ್ನೂ ನನಗೆ ಸರಿಯಾದ ರೀಸನ್ ಸಿಕ್ಕಿಲ್ಲ. ಕೊನೇ ಕ್ಷಣದಲ್ಲಿ ಇಂಡೋನೇಶಿಯನ್ ಗವರ‍್ನಮೆಂಟೇ ಅವ್ನ ಕೈಗೆ ಸಿಗೋ ಹಾಗೆ ಆಯ್ತೋ ಏನೋ! ಅದೇ ನಮ್ಮವರ‍್ಗೂ ಬೇಕಿತ್ತು ಅನ್ಸುತ್ತೆ. ಆ ಕ್ಷಣ ನನ್ನಲ್ಲಿ ಹಾಗೇ seize ಆಗಿದೆ. Operation Sundown ನನ್ನ underಅಲ್ಲೇ ನಡೀಬೇಕಿತ್ತು; ಅದನ್ನು last movementಲ್ಲಿ deactivate ಮಾಡಿದ್ರು. ಅದಕ್ಕೆ ಈ ಸಲ ಈ mission ನನ್ನ ಕೈಯಿಂದ ಕಿತ್ಕೋಳುವಷ್ಟರಲ್ಲಿ ನಾನು full control ತಕ್ಕೊಂಡು complete ಮಾಡ್ದೆ, ಅವತ್ತಿಂದ ಮೂಲೆಯಲ್ಲಿ ನನ್ನ ಬೇರೇ ಬೇರೇ ಭೂಗತ ದೊಂಬರಾಟನ ನೋಡ್ತಾ ಧೂಳು ತಿನ್ತಾ ಬಿದ್ದಿದ್ದ ಆ ಬ್ರೀಪ್‌ಕೇಸ್‌ನ ಮೊನ್ನೆಯಶ್ಟೇ ಓಪನ್ ಮಾಡ್ದೆ…” ಎಂದು ಆಳವಾಗಿ ಹೆದರಿದ ನಾಗ ಶ್ವಾಸ ಎಳೆದುಕೊಳ್ಳುವಂತೆ ಉಸಿರಾಡಿದ ದೇವರಾಯ. ಸನಿಹವಾಗುತ್ತಿದ್ದ ಮುಸ್ಸಂಜೆಯ ಕೆಂಪು, ಆ ಕಪ್ಪು ಮೋಡಗಳಿಗೆ ಡಿಕ್ಕಿ ಹೊಡೆದು, ಕಿಟಕಿಯಿಂದ ತೂರಿ ಒಳಗೆ ಬರುತಿತ್ತು. ಮನಸ್ಸಿಗೆ ಹುಚ್ಚು ಹಿಡಿಸುವಷ್ಟು ತಂಪಾಗಿ ಗಾಳಿ ಬೀಸುತ್ತಿತ್ತು. ಆದರೆ ಸುಮಾರು ಹೊತ್ತಿನಿಂದ ಜೋರಾಗಿ ಸುರಿಯುವ ಕುರುಹು ಕೊಡುತ್ತಿದ್ದ ಆ ಜಡಿ ಮಳೆ ಕೊನೆಗೂ ಬರಲೇ ಇಲ್ಲ. 

ನಾಗೇಂದ್ರ ಕಲ್ಲಾಗಿದ್ದ, ಇದುವರೆಗೂ ದೇವರಾಯನೊಳಗೆ ಪರಕಾಯ ಪ್ರವೇಶಿಸಿದವನಂತೆ ಹೊಕ್ಕು, ಅವನ ಮಾತಲ್ಲಿ ಬಂದ ಸ್ಥಳ, ವ್ಯಕ್ತಿಗಳನ್ನೆಲ್ಲಾ ಮುಟ್ಟಿ ಬಂದಿದ್ದ. ವಿಗ್ರಹದ ಹಾಗೆ ಒಂದೇ ಭಂಗಿಯಲ್ಲಿ ಕೂತಿದ್ದವನು, ಒಮ್ಮೆಲೇ ಅವನ ಸಾತಿ ಮೌನಿಯಾಗಿದ್ದನ್ನು ಗಮನಿಸಿ, “ಮತ್ತೆ…” ಎಂದ, ಕಟ್ಟಿದ ಗಂಟಲಲ್ಲಿ. ಅವನಿಗೆ ನೀರು ಕುಡಿಯುವಂತೆ ಸೂಚಿಸಿದ, ದೇವರಾಯ ಇನ್ನೊಂದು ಹೊಸದಾದ ಹೆರಾಯಿನ್ ಪ್ಯಾಕೇಟ್‌ನ್ನು ಹಲ್ಲಲ್ಲಿ ಕಚ್ಚಿ, ಮೇಜಿನಲ್ಲಿ ಸುರಿದು ಧಾರಾಳವಾಗಿ ಮೂಸಿ, “ಹಾ…ಹಾ…” ಎಂದು ಘರ್ಜಿಸಿದ. ಮರು ಮಾತಿಲ್ಲದೆ ಆ ಮೇಜಿನಡಿ ತಡಕಾಡಿ, ಆ ಬ್ರೀಪ್‌ಕೇಸ್‌ನ್ನು ತೆಗೆದು ಉದಾಸೀನದಲ್ಲಿ ಇವನಾಚೆ ತಳ್ಳಿದ. ನಾಗೇಂದ್ರ ನಿಧಾನಕ್ಕೆ ಈ ಲೋಕವನ್ನು ಕದ್ದು ಇಣುಕಿ ನೋಡುತ್ತಿದ್ದ, ಆ ಬ್ರೀಪ್‌ಕೇಸ್‌ನ ಚೂರು ತೆಗೆದಿದ್ದ ಕಿಂಡಿಯೊಳಗೆ ಬೆರಳಿಟ್ಟ.

ಕಣ್ಣು ಉರಿಯುತ್ತಿತ್ತು. ಬಾಯಿ ಒಣಗಿತ್ತು. ಸದ್ದಿಲ್ಲದೆ ಸೂಕ್ಷ್ಮ ರಂಧ್ರಗಳಿಂದ ಬೆವರು ಟಿಸಿಲೊಡೆಯುತ್ತಿತ್ತು. ಕೈಯನ್ನು ಎತ್ತಲು ಬಹಳ ಪ್ರಯಾಸಪಟ್ಟ ನಾಗೇಂದ್ರ. ಚಪ್ಪಡಿ ಕಲ್ಲಿನಷ್ಟೇ ಭಾರವಿತ್ತು, ಅವನ ತೋಳುಗಳಲ್ಲಿ. ಅತಿ ನಾಜೂಕಿನಲ್ಲಿ, ಯಾವುದೋ ಕರಕುಶಲ ಕೆಲಸಗಾರನಂತೆ, ಆ ಬ್ರೀಪ್‌ಕೇಸ್‌ನ ಬಾಯಿಯನ್ನು ಎಷ್ಟು ನಿಧಾನಕ್ಕೆ ಆಗುತ್ತದೋ ಅಷ್ಟು ನಿಧಾನದಲ್ಲಿ ಎತ್ತಿದ. ಒಳಗೆ ಮಲಗಿದ್ದ, ಹಳೆಯದಾಗಿ ಬಣ್ಣ ಕಳೆದು ಕೊಂಡರೂ ಕಾಲದ ಜತೆ ಪ್ರಖರವಾಗಿದ್ದ, ಕಂತೆ-ಕಂತೆ ಪಚ್ಚೆ ನೂರು ಡಾಲರ್ ಬಿಲ್ಲುಗಳು ಹಸಿರು ಕಲ್ಲುಗಳಂತೆ ಪಳಾರನೆ ಬೆಳಗಿದವು. ಏನು ಹೇಳಲಿಕ್ಕೂ ನಾಲಗೆ ತಿರುಗಲಿಲ್ಲ. ಬತ್ತಿದ ಬೆರಳುಗಳನ್ನು ಹಾಗೇ ಅದರ ಮೇಲೆ ಹರಿಯ ಬಿಟ್ಟ. ತನ್ನ ಅಂತರಂಗದಲ್ಲಿದ್ದ ಅನೂಹ್ಯ ವೇದನೆಯೊಂದು ಆ ಸ್ಪರ್ಶದ ಜತೆ-ಜತೆಗೆ ಪರ‍್ಯಾವಸನಗೊಳ್ಳುತ್ತಿತ್ತು. ಸ್ವಲ್ಪ ಕಾಲ ಆ ನೋಟನ್ನು ಹಾಗೇ ಹಿಂಡಿ-ಹಿಂಡಿ ಅಲ್ಲೇ ಕಳೆದು ಹೋಗಿದ್ದ ನಂತರ ಒಮ್ಮೆಲೆ ಮೆದುವಾದ ಶಬ್ದ ಕೇಳಿ, ಮತ್ತೆ ಅದರ ಹೆಡೆಯನ್ನು ಮುಚ್ಚಿ, ದೇವರಾಯನತ್ತ ನೋಡಿದ. ಅವನ ಕಣ್ಣನ್ನು ಮಂಜು ಮಾಡಿದ್ದು ಕಪ್ಪನೆಯ ಮ್ಯಾಗ್ನಮ್.೪೪. ದೇವರಾಯ ಅದರ ತುದಿಯನ್ನು ತನ್ನ ಹಣೆಗೆ ಒತ್ತಿಸಿ ಏನೇನೋ ಗುನುಗುನುಗುತ್ತಿದ್ದ, ಅದರ ಸೇಪ್ಟಿ ಲಾಕ್ ಕಳಚಿತ್ತು.
“Did you really get this…? ಅವತ್ತು, ನಿಜಕ್ಕೂ ಆ ಇಂಡೋನೇಶಿಯನ್ ಹತ್ರ ಇಷ್ಟು ಹಣ ಇತ್ತ…” ಎಂದ ನಾಗೇಂದ್ರ, ಅವನ ಕೈಲ್ಲಿ ತುಪಾಕಿಯಿರುವ ಸತ್ಯವನ್ನು ಆದಷ್ಟು ನಿರ್ಲಕ್ಷಿಸಿ.

“Accept that you are afraid of this little man… ನಾಗೇಂದ್ರ!” ಎಂದು ತನ್ನ ಗನ್ನನ್ನು ಅಲ್ಲಾಡಿಸಿದ ದೇವರಾಯ ವಿಲಕ್ಷಣವಾಗಿ ನಕ್ಕು, “ನೀನೊಬ್ಬ local Product… lower middle class ideals ನಿನ್ನ ಬಿಟ್ಟ್ ಹೋಗಿಲ್ಲ. ನೀವೆಲ್ಲಾ ನಿಮ್ಮ disordersಗಳನ್ನೇ ಚಪ್ಪರಿಸಿ, ಅದನ್ನೇ ಮಹಾ ವೇದಂತ ಅನ್ನೋ ಹಾಗೇ ಬಿಂಬಿಸ್ತೀರ. Inferiority ಜಾಸ್ತಿ ಆದಾಗ ನೀವೇ God ಅನ್ನೋ ಹಾಗೆ ಯೋಚನೆ ಮಾಡ್ತಾ ಬಾರಿ-ಬಾರಿ justification ಕೊಟ್ಟು ಈ ಜಗತ್ತು ಹುಟ್ಟಿರೋದೇ ನಿಮ್ಮನ್ನ ಪರೀಕ್ಷಿಸೋಕ್ಕೆ ಅಂತಾ ನಂಬ್ತೀರಾ! Ultimately you expect God to show up and say , ‘ look son I was waiting for you to accomplish all the tasks assigned to you… and you did it as I assumed now I declare that you have won… and its all just a game!’ ಸತ್ಯಹರಿಶ್ಚಂದ್ರ ಪಿಕ್ಚರಲ್ಲಿ ಲಾಸ್ಟಲ್ಲಿ ಮೇಲಿಂದ ಶಿವ ಪ್ರತ್ಯಕ್ಶ ಆಗಿ justification ಕೊಡ್ತಾನಲ್ಲ ಹಾಗೇ. ಇಂತಾ ತುಂಬಾ refined ವಿಚಾರಗಳು ನಿನ್ನಂತವರ‍್ದು, ಆದ್ರೂ ನಿಮ್ಗೆಲ್ಲಾ ಇರೋದು ಮಾಮೂಲು ಆಸೆಗಳು. ಅದನ್ನೂ ಪೂರೈಯ್ಸಿಕ್ಕೊಳ್ಳೊ ತಾಕತ್ತೂ ಇಲ್ದೇ ನೀನೇ ಒಬ್ಬ ಅವತಾರ ಪುರುಷ ಅನ್ನೋ ಭ್ರಮೆಗೆ ಬಿದ್ದೀದಿಯಾ…! ಏನೇ ಅನ್ನು, it is fairly easier to be a Messiah! Anyone can be one, as long as one has an irrational imaginative mind…”ಎಂದು ತೂರಾಡುತ್ತ ಎದ್ದ.

ಶರವೇಗದಲ್ಲಿ ಬದಲಾಗುತ್ತಿದ್ದ ಪರಿಸ್ಥಿತಿಗೆ ನಾಗೇಂದ್ರ ಹೊಂದಿಕೊಂಡಿರಲಿಲ್ಲ. ಅದಕ್ಕೆ ತಕ್ಕಂತೆ ಗಾಂಜಾದ ಅಮಲು ಅವನನ್ನು ಕವಿದಿತ್ತು. ಇದೆಲ್ಲಾ ತುಂಬಾ ತಮಾಶೆ ಎನಿಸಿತು. ಏತಕ್ಕೋ ಜೋರಾಗಿ ನಗಬೇಕೆನಿಸಿತು. ಹಿಂದು ಮುಂದು ನೋಡದೆ ಪಕ-ಪಕನೆ ಬಿದ್ದು ಬಿದ್ದು ನಕ್ಕ. ಆಗಷ್ಟೇ ಬಚ್ಚಲು ಮನೆಗೆ ನುಗ್ಗಿದ್ದ ದೇವರಾಯ, “ಏನಪ್ಪಾ, ನಗ್ತಾ ಇದ್ದೀಯಾ! ಇನ್ನೂ ಆ ಇಂಡೊನೇಶಿಯನ್ ಬಗ್ಗೆ ಯೋಚ್ನೆನಾ ಅಥವಾ ನನ್ನ ಮಹಾ ಕಾವ್ಯದ ಸ್ಯಾಂಪಲ್ ಕೇಳಿನ…” ಎಂದು ಕೂಗಿದ.
ಆಗ ನಾಗೇಂದ್ರ ನಗುವಿನ ನಡುವೆ ತುಂಬಾ ಶ್ರಮ ಹಾಕಿ, ಪದಗಳನ್ನು ನೇಯ್ದು, “ಅಲ್ಲಾ mostly ನೀವ್ ಕೊಲ್ಬೇಕು ಅಂತ ಅಂದ್‌ಕೊಂಡಿದ್ದ ಇಂಡೋನೇಶಿಯನ್ ಅವ್ನು ಅಲ್ಲೇ ಅಲ್ಲ, ಆ nigga ಜತೆ ಡೀಲ್ ಮಾಡಿ ತನ್ನ ಹೆಂಡ್ತೀನ ವಾಪಾಸ್ಸು ಪಡೆಯೊಕ್ಕೆ ಬಂದಿದ್ದ cuckold hubby…ಯಾರೋ ಪಾಪ ಉಕ್ರೇನಲ್ಲಿ ಜೀವ್ನ ಕಟ್ಟಿದ್ದ ಒಬ್ಬ ಶ್ರೀಮಂತ ಚಯ್ನಾ ಆಸಾಮಿ ಇರ‍್ಬೇಕು, ಅವ್ನ ಕೊಂದು ನೀನು ದೊಡ್ಡ ರೆಬೇಲಿಯನ್ ಮಾಡ್ದೆ ಅಂತೀದ್ದೀಯಾ!” ಎಂದ ನಾಗೇಂದ್ರ, ನಗುತ್ತಲೇ ಇದ್ದ. ಅಷ್ಟೊತ್ತಿಗೆ ಹೊರಗೆ ಬಂದ ದೇವರಾಯ ಮತ್ತೆ ಗನ್‌ನ್ನು ಎತ್ತಿ, ಮೂಸಿ ಪಕ್ಕಕ್ಕಿಟ್ಟ, ಅವನ ‘ಮಹಾ ಕಾವ್ಯದ’ ಹಸ್ತಪ್ರತಿಯ ಪುಟಗಳು ಹಾರದಿರಲಿ ಎಂಬಂತೆ, ಆದರೂ ಒಂದು ಹಾಳೆ ಹಾರಿ ಬಂದು ನಾಗೇಂದ್ರನನ್ನು ಮುಟ್ಟಿತು. ನಗುತ್ತಲೇ ಅದರತ್ತ ಕಣ್ಣಾಯಿಸಿದ ನಾಗೇಂದ್ರ. ಒಮ್ಮೆಲೇ ಗಂಭೀರನಾದ. ಅದೊಂದು ಆತ್ಮಹತ್ಯೆ ನಿವೇದನೆಯ ಟಿಪ್ಪಣಿಯಾಗಿತ್ತು:
‘ಎಲ್ಲಾ ತರ ಬದುಕಿಯಾಗಿದೆ. ಜಾಸ್ತಿಯೇ ಬದುಕಿದ್ದೇನೆ. ಈಗ ಈ ಜಾಸ್ತಿ ಬದುಕನ್ನು ತಡೆಯಲು ಆಗುತ್ತಿಲ್ಲ. ಅದಕ್ಕೆ ಸಾಯುತ್ತಿದ್ದೇನೆ…’ ಒಂದು ಕ್ಷಣ ನಾಗೇಂದ್ರ ಸ್ಥಗಿತನಾದ. ದೇವರಾಯ ಬಿಡದೆ, ಒಂದೇ ಸಮನೆ ನಾಗೇಂದ್ರನನ್ನು ದಿಟ್ಟಿಸುತ್ತಿದ್ದ, ಹಿಡಿಯಲಾಗದ ಕೂತೂಹಲದಲ್ಲಿ, ನಾಗೇಂದ್ರ ಪಿಸ್ತೂಲನ್ನು ಎತ್ತಿ, ತನ್ನ ಕೈಯಲ್ಲಿ ಹಿಡಿದು ಆ ಹಸ್ತಪ್ರತಿಯನ್ನು ಬಿಡಿಸಿದ. ಒತ್ತೊತ್ತಾಗಿ ಪೇರಿಸಿ ಇಟ್ಟಿದ್ದ ಒಳಗಿನ ಎಲ್ಲಾ ಹಾಳೆಗಳೂ ಸುಂಯ್ಯನೆ ಹಾರಿದವು, ಅವೆಲ್ಲವೂ ಕಾಲಿ ಹಾಳೆಗಳು. ನಿಜಕ್ಕೂ ಅದೊಂದು ಪುಸ್ತಕದಂತೆ ಕಾಣುತ್ತಿದ್ದ ಚಿತ್ತಾರಮಯವಾಗಿದ್ದ ಪಯ್ಲ್. ಆತಂಕದಲ್ಲಿ, ಅವನನ್ನೇ ನೋಡುತ್ತಾ ಕುರ್ಚಿಯಲ್ಲಿ ಕುಕ್ಕರಿಸಿದ ನಾಗೇಂದ್ರ.
“ಇಲ್ಲೊಂದು ಮಂಡಲದ ಹಾವಿತ್ತು, ಹೋದ ತಿಂಗಳು ತೋಟದಲ್ಲಿ ನೋಡಿದ್ದೆ, ನಿಧಾನಕ್ಕೆ ಅದರ ಕುತ್ತಿಗೆ ಹಿಡಿದು ಮನೇಲಿ ತಂದು ಬಿಟ್ಟಿದ್ದೆ, ಕುರೂಹೆ ಇಲ್ಲದೆ ಅದು ಕಚ್ಚುತ್ತಾ ನೋಡಣಾ ಅಂತಾ; ಬಡ್ಡಿ ಮಗ ಕಚ್ಲೇಇಲ್ಲ! ನನಗೆ ಅತಿಯಾಗಿ ಖುಶಿ ಕೊಡೋ ಆಟ ಅದು. ಅದ್ ಬಿಟ್ರೆ ಹೀಗೆ ಆತ್ಮಹತ್ಯೆ ನೋಟ್ ಬರೆದು ಸಾಯದೇ ಬದುಕಿರೋದು, ಇವೆರಡೇ ಸದ್ಯಕ್ಕೆ ನನ್ನ tremendously excite ಮಾಡೋದು ಮಿಕ್ಕೆಲ್ಲ routine ಬರೀ ಸಪ್ಪೆ. ಮುಂಚೆ, ಅಂದ್ರೆ ಆ ಉಕ್ರೇನ್ ಕತೆ ಆದ್ಮೇಲೆ ಬ್ಯೂರೋ ಜನರಿಂದ ತಪ್ಪಿಸ್ಕೊಂಡು ಒಂದು ಜಾಗದಿಂದ ಇನ್ನೊಂದು ಜಾಗಕ್ಕೇ ಲಂಗರು ಹಾರ‍್ತಾ ನನ್ನ identity ಮುಚ್ಚಿಟ್ಟು ಜೀವಂತವಾಗಿರೋದ್ರಲ್ಲೇ ಮಜ ನೋಡಿದ್ದೆ. ಆಮೇಲೇ ಯಾಕೋ ಯಾರೂ ನನ್ನ ಚೇಸ್ ಮಾಡ್ತಾ ಇಲ್ಲ ಅನ್ಸಿ, ಆ ಬದುಕು ಬೋರ್ ಆಗೋಯ್ತು. ಆಗಾಗ ಈ ಯೋಚ್ನೆ ಬರುತ್ತೆ ನೀನ್ ಹೇಳಿದ್ ಹಾಗೇ ನನ್ನ mission abort ಮಾಡಿ ಯಾರನ್ನೋ ಕೊಂದ್ನಲ್ಲ, ಅವ್ನು ನಿಜಕ್ಕೂ ನಾನಂದು ಕೊಂಡ ದೊಡ್ಡ ಮನುಷ್ಯ ಆಗ್ದೇ ಇದ್ರೆ… ಬರೀ ಒಬ್ಬ ಆರ‍್ಡಿನರಿ ಡ್ರಗ್ ಡೀಲರ್ ಅತವಾ ತಲೆ ಕೆಡುಕನೋ ಆಗಿದ್ರೆ ಅಂತ. ಬಹುಶಃ ಅದಕ್ಕೆ ನನ್ನ ‘ಅರೆಸ್ಟ್’ ಮಾಡಕ್ಕೆ ಯಾರೂ central committee ಇಂದ ಬರ‍್ಲೇ ಇಲ್ಲ. Because, may be I killed nobody or let us say nobody killed anybody, but against their orders if I had shot the right man, ಇಷ್ಟೊತ್ತಿಗೆ ಅವ್ರು ನನ್ನ ಮುಗ್ಸಿ ಆಗ್ಬೇಕಾಗಿತ್ತು, ಇಲ್ಲಾ…”
“Don’t trouble yourself may be you are too smart to catch ಅಷ್ಟೇ..” ಎಂದ ನಾಗೇಂದ್ರ ಸಮಾಧಾನ ಮಾಡುವಂತೆ ತನ್ನ ಕಯ್ಯಲ್ಲಿ ಇರುವ ಗನ್‌ನ್ನು ತಿರುಗಿಸಿ, ಅದರ ತೂಕ ನೋಡುತ್ತಾ.
“ಹ್ಹ, ಹ, ಬಾರೀ naive ಯಾಕ್ ಮಾತ್ ಆಡ್ತೀಯಾ! now why don’t you get out I need to do something really kinky … ಬೇಕ್-ಬೇಕಾದಾಗೆಲ್ಲಾ ಹುಡ್ಗೀರ್ ಸಿಕ್ಕಿ, internet cyber chat ಮಾಡ್ತಾ ಜಟ್ಕಾ ಹೊಡೆಯೋ ಮಜಾನಾ ನಾನು ಮೊನ್ನೆಮೊನ್ನೆಯವರ‍್ಗೂ ಅನುಭವಿಸಿರ‍್ಲಿಲ್ಲ so…” ಎಂದು ಉದಾಸೀನದಲ್ಲಿ ಮುಸಿ-ಮುಸಿ ನಕ್ಕ. ಈಗವನು ಇನ್ನೊಂದು ಅವತಾರ ತೆಗೆಯಲು ತಯ್ಯಾರಾಗಿದ್ದ.
ಆಗ ನಾಗೇಂದ್ರ, “What…! What…!” ಎಂದು ನಶೆಯಲ್ಲಿ ತಡವರಿಸಿದ, ಮರೆತಿದ್ದ ಆ ನಗು ಜ್ವರದಂತೆ ಮರುಕಳಿಸಿತು. ಮತ್ತೆ ನಕ್ಕ, ಬಿದ್ದು, ಬಿದ್ದು ನಕ್ಕ ಗನ್ನಿನ ಹಿಂಬದಿಯನ್ನು ಹಣೆಗೆ ತಿಕ್ಕುತ್ತಾ ನಕ್ಕ; ಆತ ನಕ್ಕೂ ನಕ್ಕೂ ದೇವರಾಯನತ್ತ ಕೂತಲ್ಲಿಂದಲ್ಲೇ ಬಗ್ಗಿದ, ತುಟಿಗೆ ತುಟಿ ಒತ್ತುವಶ್ಟು ಹತ್ತಿರ ಬಗ್ಗಿದ. ದೇವರಾಯನಿಗೆ ರೇಗಿತು, ಸಿಡಿಮಿಡಿಯಲ್ಲಿ.
“ಇಲ್ಲಿಂದ ತೊಲಗು, ನೀನೂ ಬೋರ್ ಆದೆ ನನ್ಗೆ ಅಂತ ಹೇಳಿದ್ದು ಅರ್ಥ ಆಗಲ್ವಿಲ್ಲಾ… ಏನಕ್ಕೆ ಈ ನಗು ಹ್ನಾ…” ಎನ್ನುವಾಗಲೇ, ಯಾವ ಮುನ್ಸೂಚನೆಯನ್ನೂ ನೀಡದೆ ನಾಗೇಂದ್ರನ ಜಂಗಮ ವಾಣಿ, ‘ರಪರಪ್ಪಾರಪ ರಪರಪ್ಪ್‌ಪಾ…’ ಎಂದು ಗುಡುಗಿತು. ಅದೇ ಹಳೆ ಹಾಡು… ಅಂದು ಸಿಟ್ಟಿನಲ್ಲಿ ಅನಾಮಿಕಳ ಮಯ್ ಮರಿಸಿದ್ದ, ನರನಾಡಿಗಳನ್ನೆಲ್ಲ ಕೆರಳಿಸಿ ಜುಮ್ಮೆನಿಸುವ ಆ “World on Fire” ಹಾಡು. ಈಗ ಪಳೀರನೇ ಅಪ್ಪಳಿಸಿದ್ದರಿಂದ ಆ ಕ್ಷಣವನ್ನೇ ಗ್ರಹಿಸದೇ ಕೈಯಲ್ಲಿ ಹಿಡಿದಿದ್ದ ಗನ್ನಿನ ಟ್ರಿಗರ್ ಎಳೆದೇ ಬಿಟ್ಟ, ನಾಗೇಂದ್ರ, ಆಕಾಶದಿಂದ ಮಿಂಚೊಂದು ತನ್ನ ಕಿವಿಯಲ್ಲಿ ಮಾತ್ರ ರಹಸ್ಯ ಪ್ರತಿಧ್ವನಿಯನ್ನು ಪಿಸುಗುಟ್ಟಿತೆಂಬಂತೆ. ಆಗ ಪೂತ್ಕರಿಸಿದ ಆ ಮ್ಯಾಗ್ನಮ್.೪೪. ಕಣ್ಣು ಮಿಟಿಕಿಸುವಶ್ಟರಲ್ಲಿ ಎದುರಿದ್ದ ದೇವರಾಯನ ಮುಖ ಚಿಂದಿಯಾಗಿಸಿತ್ತು. ಆ ತಳಮಳ, ಸಿಡಿ-ಮಿಡಿ, ಕಾತರ, ಪುಟಿಯುವ ಕಾಮ, ಜೀವದಾಸೆ ತುಂಬಿಕೊಂಡು ಈಗ ಕೇವಲ ಒಂದು ನಿಮಿಶದ ಹಿಂದೆಯಶ್ಟೇ ಇವನನ್ನು ನೋಡಿ ನಕ್ಕಿದ್ದ ದೇವರಾಯ, ಈಗ ಅಲ್ಲಿ ನಿಸ್ತೇಜವಾಗಿ, ಬಿರಿದ ಹಣೆಯಿಂದ ಉಕ್ಕುತ್ತಿದ್ದ ಮಾಂಸದ ಮುದ್ದೆ ಮತ್ತು ಚಿದ್ರ ರಕ್ತ ಮೂಳೆಗಳ ವಿಕಾರ ವಸ್ತುವಾಗಿದ್ದ. ಜೀವ, ನಿರ‍್ಜೀವಗಳ ಭವಾಂತರವು ಬರೀ ಅರ್ಧ ಕ್ಷಣದಲ್ಲಿ ದಾಖಲಾಗಿತ್ತು. ಆಗ ಪಕ್ಕದಲ್ಲೇ ಯಾರೋ ಕೂಗಿದಂತೆ ಒಂದು ಬಸ್ಸು ಹಾದು ಹೋಯಿತು, ಬಹುಶಃ ದಿನಕ್ಕೆ ಒಂದೋ ಎರಡೋ ಸಲ ಆ ಕಡೆ ಬರುವ ಬಸ್ಸಿರಬೇಕು. ಮಳೆ ಬರಲೇ ಇಲ್ಲ, ಆದರೆ ಮುಸ್ಸಂಜೆಯ ಮುನ್ನ ಉದ್ಬವಿಸುವ ಬಿಸಿಲು ಇನ್ನೂ ತೀಕ್ಶ್ಣವಾದಂತಿತ್ತು. ಮಾವಿನ ಕಾಯಿಯ ದಟ್ಟವಾದ ಹಿತವಾದ ಪರಿಮಳ ನಾಗೇಂದ್ರನ ಮೂಗಿಗೆ ಈಗ ತಟ್ಟಿತು. ಆಗ ತನ್ನ ಆತ್ಮವೇ ಸ್ಖಲಿಸಿದಂತೆ ನಾಗೇಂದ್ರ ಪೂರ್ಣವಾಗಿ ಬೆವೆತ. ತಾನೇ ಅನುಭವಿಸುವಷ್ಟು ಹಗುರನಾದ, ಗಾಳಿಯಲ್ಲಿ ತೇಲಿದಂತೆ ಕಯ್ಗಳನ್ನು ಅತ್ತ ಇತ್ತ ಚಾಚಿದ.
ಎಲ್ಲವೂ ಹಾಗೇ ಇತ್ತು, ಅದೇ ಬೋದಿಸತ್ವ, ಅದೇ ಗಾಂಜಾದ ವಾಸನೆ, ಅದೇ ಹಕ್ಕಿಗಳ ಕಿಚಿಪಿಚಿ, ಅದೇ “ಜೊಯ್ಯ್” ಸದ್ದು, ಅದೇ ಹಳೇ ಹೆರಾಯಿನ್ ಪ್ಯಾಕೇಟ್‌ಗಳು, ಅದೇ ಅಟ್ಟಿ ಅಟ್ಟಿ ಕೂಡಿಟ್ಟ ಗಾಂಜಾ ಜಾಯಿಂಟ್‌ಗಳು, ಮತ್ತೆಅದೇ ದೇವರಾಯನ ಖಾಲೀ ಹಾಳೆಗಳ ಜತೆಗೆ ಅವಿತಿದ್ದ ಆ ಅಪರಿಚಿತ ನಿವೇದನೆಯ ಟಿಪ್ಪಣಿ. ದೇವರಾಯ ಇದ್ದಾಗ ಇದ್ದ ಪ್ರಕೃತಿಯ ಆ ದಿವ್ಯನಿರ್ಲಕ್ಷ್ಯ ಈಗಲೂ ಅಷ್ಟೇ ತಣ್ಣಗೆ ಬೀಸುತಿತ್ತು. ಅರ್ಧ ಗಂಟೆ ತಪಸ್ಸಿಗೆ ಕೂತ ಮುನಿಯಂತೆ ನಿಷ್ಕ್ರಿಯವಾಗಿ ಕೂತಿದ್ದ ನಾಗೇಂದ್ರ ಚಂಗನೇ ಎದ್ದ; ಹಟಾತ್ತಾಗಿ ತನ್ನ ಮೊಬಯ್ಲ್ ನೋಡಿದ, ಈಗ ಆ ಕರೆಯ ನೆನೆಪಾಗಿ. NAKBA company A.E.ನದ್ದೇ ಎರಡು ಮಿಸ್ಡ್ ಕಾಲುಗಳು, ಅದೇ ಹಳೆಯ ಕಂಪೆನಿ ಪಾಲಿಸಿ ಚಾಳಿ… ಚೂರೂ ನಡುಗದೆ ಇದಕ್ಕೇ ಸಜ್ಜಾಗಿದ್ದಂತೆ, ಪೋನನ್ನು ಕಿಸೆಗೆ ತುರುಕಿಸಿ ಮೇಜಿನಲ್ಲಿದ್ದ ಆ ಕಪ್ಪುಬ್ರೀಪ್‌ಕೇಸನ್ನು ಎತ್ತಿ, ಕೋಣೆಯಿಂದ ಎದ್ದು ಮೆಟ್ಟಿಲಿಳಿದ. ಭಗ್ನವಾಗಿದ್ದ ದೇವರಾಯನಿದ್ದ ಕುರ್ಚಿಯ ಕೆಳಗೆ ಆ ತುಪಾಕಿಯನ್ನು ಎಸೆದ.
ಅವನ ಬಾಯಲ್ಲಿ ಬರೀ ಹೊಗೆಯ ರುಚಿ. ಹಜಾರ ದಾಟಿ ಹೊರ ಬರುತಿದ್ದ ಹಾಗೇ ಕೇವಲ ಸ್ತಿತಿಯಂತಿದ್ದ ಅವನ ಆತ್ಮಕ್ಕೆ ಈಗ ಯಾರೋ ಕಣ್ಣು, ಮೂಗು, ಬಾಯಿ ಬರೆದಂತೆ, ತನ್ನ ಪರಿಸರದಲ್ಲಿ ಘಟಿಸುತ್ತಿದ್ದ ಕ್ರಿಯೆಗಳಲ್ಲಾ ಅವನಿಗೆ ಅರಿವಾಗುತಿತ್ತು. ಸೂರ‍್ಯ ಕಿರಣಗಳು ಕಣ್ಣು ಕುಕ್ಕಿದ್ದು, ಧೂಳು ಧೂಳುಗಾಳಿ ರಾಚಿದ್ದು, ಮಾವು ಮತ್ತು ಸೀಬೆಯ ಕಂಪು, ಹಸಿಹಸಿ ಕಳೆಗಿಡಗಳ ಹಸಿರು ವಾಸನೆ… ಎಲ್ಲವೂ ಅವನಿಗೆ ದಕ್ಕಿ ಜೋರಾಗಿ ಉಸಿರಾಡಿದ; ಸೀನಿದ ಒಂದು ಎರಡು, ಮೂರು ಸಲ. ಆಕಾಶವೀಗ ಬೆಳ್ಳಿ, ಕೇಸರಿ ರೂಪ ತಾಳಿ ಸೋಮಾರಿಯಾಗಿ ತೇಲುತ್ತಿತ್ತು. ಏರು ತಗ್ಗು ಇದ್ದ ಆ ರಸ್ತೆಯನ್ನು ಉಬ್ಬಸ ಬಿಡುತ್ತಾ ಕಷ್ಟದಲ್ಲಿ ಹತ್ತುತ್ತಲೇ ದೂರದಲ್ಲಿ ಇಟ್ಟಿದ್ದ ಕಾರಿನ ಕೀ ಕಿಸೆಯಲ್ಲೇ ಇದೆಯೇ ಎಂದು ಪರೀಕ್ಷಿಸಿಕೊಂಡ. ನಿರ್ಜನವಾಗಿದ್ದ ಜಾಗವದು. ಇವನ ಪಕ್ಕದಲ್ಲೇ ತೋಟದಲ್ಲಿ ಆರೋಗ್ಯವಾಗಿ ಬಿಟ್ಟಿದ್ದ ಸಪೋಟ, ಪರಂಗಿ, ಮಾವಿನ ತೋಪುಗಳು ಹಾಗೇ ಹಾದು ಹೋದ ತಂಪಾದ ಗಾಳಿಯ ಜತೆ ತೂಗಿದವು. ಇದ್ದಕ್ಕಿದ್ದಂತೆಯೆ ಸ್ತಬ್ದವಾದರೂ ಎದೆಯನ್ನು ಬೆಚ್ಚಗಾಗಿಸುವ ತರಂಗವೊಂದು ಅವುಗಳಿಂದ ಉದ್ಬವಿಸಿತು. ಒಮ್ಮೆ ನಿಂತ ನಾಗೇಂದ್ರ, ಕಿವಿ ಕೊಟ್ಟು ಕೇಳಿದ. ಹೌದು… ಅದೇ ಸದ್ದು…! ಘನವಾಗಿರುವ ಕಲ್ಪನೆಯ ಸದ್ದು, ಜೀವವೃಕ್ಷವು ಮಾತನಾಡಿ ಸುಮ್ಮನಾದಂತಹ ಸದ್ದು… ಈ ಮನುಷ್ಯರೇ ಇಲ್ಲದ ಭೂಮಿಯನ್ನು ಕತ್ತಲ ನೆರಳು ಇಲ್ಲವಾಗಿಸುವ ಮುನ್ನ ಸಂಚರಿಸುವ ನಿಗೂಢ ಸಂದೇಶದಂತಹ ಸದ್ದದು. ವ್ಯಕ್ತಿಗಳು ಕಟ್ಟಿದ ಅಚ್ಚಿನೊಳಗೆ ನುಗ್ಗಿದರೂ ಬೆರೆಯದಿದ್ದ ಈ ಲೋಕದ ನುಡಿಯದು. ಆ ತರಂಗದತ್ತ ಕೈ ಚಾಚಿದ ನಾಗೇಂದ್ರ, ಆ ಜೀವಿಗಳ ಸಖನಾಗುವ ಆತುರದಲ್ಲಿ, ಅದರ ಭಾಷೆ ತಿಳಿದವನಂತೆ. ಆದರೆ ಯಾವ ಪ್ರತ್ಯುತ್ತರವಿಲ್ಲ, ಬರೀ ಮೌನ, ಮತ್ತೆ ಮೌನ. ಒತ್ತಾದ ಚಿನ್ನದ ಬೆಳಕು, ಪಚ್ಚೆ ಬಂಗಾರದ ಹೊಳಪಿನ ಹಿಂದೆ ಮುಗುಳ್ನಗುತಿತ್ತು, ಹಾಗೇ ನೀಳವಾದ ಬಾಣದಂತೆ ಇರುಳಿನ ವಿಂಚುಕೋಲು ನೇರಳೆ ಬಣ್ಣದಲ್ಲಿ ಬೀಳುತ್ತಿರುವಾಗ, ದೂರದಲ್ಲಿಚಾಚುತ್ತಿದ್ದ ಕತ್ತಲೆಯು ಇವನನ್ನು ಚರರ್ಮಕ್ಕಂಟುವಷ್ಟು ನೀರವವಾಗಿ ಆವರಿಸುತಿತ್ತು. ಸರ‍್ವಸ್ವವ ತನ್ನ ನೆರಳಲ್ಲಿ ತಬ್ಬಿದ್ದ ಕತ್ತಲು ನಾಗೇಂದ್ರನನ್ನೂ ತನ್ನ ಬಳಗಕ್ಕೆ ಇನ್ನೇನು ಸೇರಿಸಿಯೇಕೊಂಡಿತೆನ್ನುವಶ್ಟರಲ್ಲಿ ಆ ಮುಸುಕನ್ನು ಸರಿಸಿ ಬರ‍್ರನೇ ಬಿಳಿಯ ಗೂಬೆಯೊಂದು ಹಾರಿ ಹೋಯಿತು.
(ಮುಗಿಯಿತು)
ಕತೆಯ ಮೊದಲ ಭಾಗ ಇಲ್ಲಿದೆ 
ಕತೆಯ ಎರಡನೆಯ ಭಾಗ ಇಲ್ಲಿದೆ 
5 comments to “ದೇವರ ದೇವ ಶಿಖಾಮಣಿ ಬಂದಾನೋ- ಕೊನೆಯ ಭಾಗ”
  1. You never know what is divine in life….This kind of stigmatisation rebels our off desperations…. It feels obnoxious….Your story leads no where to anywhere or is it anywhere to no where….I am happy….Nagendra atleast gets emancipated…. Atleast out of his miserable deeds…. Thanks for your wonderful story…..

    • U said it right nowhere to anywhere and I am happy that you saw the future of Nagendra … u saw that he is emancipated…as a writer I thought he would suffer tereibly, at least psychologically, for what he did… but you think he has a chance to live his life as he wished without any remorse without any regrtes….

ಪ್ರತಿಕ್ರಿಯಿಸಿ