ಭಾರತದಂತ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಜಾತ್ಯಾತೀತತೆ ಬಹುಮುಖ್ಯ ಅಗತ್ಯತೆಗಳಲ್ಲೊಂದು . ಯಾರೂ ಭಾರತವನ್ನು ಒಂದು ಧರ್ಮದ ರಾಷ್ಟ್ರವನ್ನಾಗಿ ಮಾಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ . ಭಾರತದಲ್ಲಿ ಪ್ರತಿಯೊಬ್ಬರೂ , ಅವರವರರ ಪಂಗಡಗಳಿಗೆ ಸಂಬಂಧಪಟ್ಟ ಆಚಾರ , ವ್ಯವಹಾರ ಮತ್ತು ಆರಾಧನಾ ಕ್ರಮಗಳಿಗೆ ತಕ್ಕುದಾಗಿ ಬದುಕುತ್ತಾರೆ . ಸಹಿಷ್ಣುತೆ ಎಂಬ ಪದವೇ ಭಾರತಕ್ಕೆ ಅನ್ವಯಿಸುವುದಿಲ್ಲ . ಏಕೆಂದರೆ ಅದನ್ನು ಬಿಟ್ಟು ಭಾರತಕ್ಕೆ ಇನ್ಯಾವ ಪರ್ಯಾಯವೂ ಇಲ್ಲ . ಇಲ್ಲಿ ಎಲ್ಲರೂ ಅವರವರ ಆಧ್ಯಾತ್ಮಿಕ ಅಗತ್ಯಕ್ಕೆ ತಕ್ಕಂತೆ ಬದುಕುತ್ತಾರೆ . ಧಾರ್ಮಿಕ ಅಲ್ಪಸಂಖ್ಯಾತರಿಗೂ ಅವರವರ ಅಗತ್ಯತೆಗಳನ್ನು ಪೂರೈಸಬೇಕು . ಧಾರ್ಮಿಕತೆಗೆ ಸಂಬಂಧಪಟ್ಟಂತೆ ಎಲ್ಲರೂ ಅಲ್ಪಸಂಖ್ಯಾತರೇ . ಹಾಗಾಗಿ ಭಾರತದಲ್ಲಿ ಜಾತ್ಯಾತೀತತೆ ಬಹುಮುಖ್ಯ . ಕೃಷ್ಣ ಹೇಳುತ್ತಾನೆ – ವಿವಿಧ ಆರಾಧನಾ ಕ್ರಮಗಳಿಗೆ ಯಾವತ್ತಿಗೂ ತೊಂದರೆ ಕೊಡಬಾರದು . ಸಾಧ್ಯವಾದರೆ ಅದಕ್ಕೆ ಸಹಕರಿಸಿ . ಅದರಲ್ಲಿ ಸೇರಬೇಕೆಂದೇನೂ ಇಲ್ಲ . ಆದರೆ ಅದಕ್ಕೆ ಸಹಕರಿಸುವುದು ಮುಖ್ಯ ಎಂದು. ಹಾಗಾಗಿ ಕೃಷ್ಣನೂ ಜಾತ್ಯತೀತ. ಆರಾಧನೆಗೆ ಸಂಬಂಧ ಪಟ್ಟಂತೆ ಎಲ್ಲಾ ಜನರೂ , ಎಲ್ಲಾ ಪಟ್ಟಣವೂ , ಎಲ್ಲಾ ಪಂಗಡಗಳೂ ಅಲ್ಪಸಂಖ್ಯಾತರೇ .
ಕೃಪೆ : ಜಿ . ಎಸ್ . ಕುಮಾರ್
ಚಿತ್ರ : ಎ .ಎನ್. ಮುಕುಂದ್
ಪೋಸ್ಟರ್ ವಿನ್ಯಾಸ : ಗೌರೀಶ್ ಕಪನಿ