ಬೇಂದ್ರೆ ಧ್ವನಿಯಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವಿತೆ

‘ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಬೇಂದ್ರೆಯವರ ಸುಪ್ರಸಿದ್ಧ ಕವನ. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲ್ಲಿ ಬೇಂದ್ರೆಯವರು ಈ ಪದ್ಯವನ್ನು ಓದಿದರು. ಆಗವರು ಧಾರವಾಡ ಸೀಮೆಯ ರೈತರು ತೊಡುವ ರುಮಾಲು ಸುತ್ತಿದ್ದರು. ತಮ್ಮ ವಿಶಿಷ್ಟವಾದ ಹಾವಭಾವ, ಕೈಯ ಮಾಟದಿಂದ ಬೇಂದ್ರೆ ಕಾವ್ಯವಾಚನ ಮಾಡಿದ್ದರು, ಸಹಸ್ರಾರು ಪ್ರೇಕ್ಷರನ್ನು ಮಂತ್ರಮುಗ್ಧಗೊಳಿಸಿದ್ದರಂತೆ. ಆನಂತರ ೧೯೩೨ರಲ್ಲಿ ಪ್ರಕಟವಾದ ಅವರ ಪ್ರಥಮ ಕವನ ಸಂಕಲನ ’ಗರಿ’ಯಲ್ಲಿ ಈ ಕವನ ಸೇರ್ಪಡೆಯಾಯಿತು. ಬೇಂದ್ರೆಯವರು ಈ ಕವಿತೆಯಲ್ಲಿ ಒಂದು ಚಲನಶೀಲ ಕಾಲವನ್ನು ನಮ್ಮ ಕಣ್ಣೆದುರಿಗೆ ಮೂಡಿಸುತ್ತಾರೆ .

 


ಧ್ವನಿ ಸಂಸ್ಕರಣೆ ಮತ್ತು ಪೋಸ್ಟರ್ ವಿನ್ಯಾಸ : ಗೌರೀಶ್ ಕಪನಿ

ಪ್ರತಿಕ್ರಿಯಿಸಿ