ಭಾರತೀಯವೆಂಬ ‘ಒಂದು’ ಚಿಂತನಕ್ರಮ ಇದೆಯೇ ?

ಎ. ಕೆ. ರಾಮಾನುಜನ್ನರ ಪ್ರಸಿದ್ಧ ಪ್ರಬಂಧ “ಭಾರತೀಯವೆಂಬ ‘ಒಂದು’ ಚಿಂತನಕ್ರಮ ಇದೆಯೇ ?” ( “Is There An Indian Way Of Thinking ?”) ಕುರಿತಾದ ಓ.ಎಲ್. ನಾಗಭೂಷಣ ಸ್ವಾಮಿಯವರ ಮಾತಿನೊಂದಿಗೆ ನಾವು ಈ ವಿಶೇಷ ಸರಣಿಯನ್ನು ಮುಗಿಸುತ್ತಿದ್ದೇವೆ.

ಒಂದು ತಿಂಗಳಲ್ಲಿ ನಾವು ಇಷ್ಟು ವಿಷಯಗಳನ್ನು ನಿಮ್ಮ ಮುಂದಿಡಲು ಸಾಧ್ಯವಾಗುತ್ತದೆಂದು ನಾವೇ ಕಲ್ಪಿಸಿಕೊಂಡಿರಲ್ಲ. ಅದನ್ನು ಸಾಧ್ಯವಾಗಿಸಿದ್ದು ನಮ್ಮ ತಂಡದ ಕೋರಿಕೆ ಮನ್ನಿಸಿ ತಕ್ಷಣದಲ್ಲಿ ನಮಗೆ ನೆರವಾದ ಮದನ್ ಸಿ.ಪಿ. , ಕಬೀರ್ ಮಾನವ , ಗೌರೀಶ್ ಕಪನಿ, ಪ್ರತಿಭಾ ನಂದಕುಮಾರ್ , ಕರೀಗೌಡ ಬೀಚನಹಳ್ಳಿ, ವೆಂಕಟೇಶ್ ಇಂದ್ವಾಡಿ ,ರಾಘವೇಂದ್ರ ಪಾಟೀಲ,ಪುರುಷೋತ್ತಮ ಬಿಳಿಮಲೆ, ಮನೋಹರ ಗ್ರಂಥಮಾಲೆಯ ಸಮೀರ್ ಜೋಶಿ , ಕೇಂದ್ರ ಸಾಹಿತ್ಯ ಅಕಾಡೆಮಿಯ ಮಹಾಲಿಂಗೇಶ್ವರ್, ಆರ್.ಆರ್.ಸಿ. ಉಡುಪಿ ಹೀಗೆ ಹಲವು ಜನ ಮತ್ತು ಬಿಟ್ಟು ಹೋದ ಇನ್ನಷ್ಟು ಹೆಸರುಗಳು. ಎಲ್ಲರಿಗೂ ಋತುಮಾನದ ಕೃತಜ್ಞತೆಗಳು. ಲೇಖನ ಬರೆದುಕೊಟ್ಟ ಎಲ್ಲ ಬರಹಗಾರರಿಗೂ, ಅನುವಾದಕರಿಗೂ ನಾವು ಆಭಾರಿ.

ನಾವು ಪ್ಲಾನ್ ಮಾಡಿಕೊಂಡ ಇನ್ನೂ 3-4 ಬರಹಗಳನ್ನು ಈ ಕ್ಷಣದಲ್ಲಿ ನಿಮ್ಮ ಮುಂದಿಡಲಾಗುತ್ತಿಲ್ಲ. “ಕನ್ನಡಿಯ ಪಾದರಸದಾಚೆ ನಕ್ಕ ಮುಖ” ಲೇಖನದ ಇನ್ನೂ 3 ಭಾಗಗಳು , ಕಳೆದ ವರ್ಷ ರಾಮಾನುಜನ್ ಮೇಲೆ ಬಂದ ವಿಶೇಷ ಕೃತಿ “When Mirrors Are Windows – A view of A.K. Ramanujan’s poetics” ಬರೆದ ಗುಲ್ಮೆನ್ರೋ ರೊಡ್ರಿಗಸ್ ಅವರ ಸಂದರ್ಶನ ಮತ್ತು ರಾಮಾನುಜನ್ ತಮಿಳು ಮತ್ತು ತೆಲುಗು ಅನುವಾದಗಳ ಕುರಿತಾದ ಎರಡು ಲೇಖನವನ್ನು ಎರಡು ವಾರ ಕಳೆದು ಒಂದು ದಿನ ಪ್ರಕಟಿಸುತ್ತೇವೆ. ಕಳೆದೊಂದು ವಾರದಿಂದ ಮೇಲಿಂದ ಮೇಲೆ ಹಲವಾರು ಲೇಖನಗಳನ್ನು ಪ್ರಕಟಿಸಿರುವುದರಿಂದ ನಮ್ಮ ಓದುಗರೂ ಅವನ್ನೆಲ್ಲ ಓದಲು ಸಮಯ ಬೇಡಿರುವುದರಿಂದ ಋತುಮಾನಕ್ಕೆ ಒಂದು ವಾರದ ಬಿಡುವು. ಬರುವ ವಾರ ಮತ್ತದೇ ಹುರುಪಿನೊಂದಿಗೆ ನಿಮ್ಮ ಮುಂದೆ ಬರುತ್ತೇವೆ. ನಮಸ್ಕಾರ.

ಪ್ರತಿಕ್ರಿಯಿಸಿ