ಕವನ ಚಿತ್ತಾರ : ಆರೀಫ್ ರಾಜ ಅವರ “ಹೊಲಿಗೆ ಯಂತ್ರದ ಅಮ್ಮಿ”

`ಋತುಮಾನ’ಕ್ಕಾಗಿ ‘ಲೋಕಚರಿತ’ ನಿರ್ಮಿಸಿರುವ “ಕವನ ಚಿತ್ತಾರ” ಸರಣಿಯ ಈ ಚಿತ್ರ ಕವನ — ನಮ್ಮ ನಡುವಿನ ಯುವ ಕವಿ ಆರೀಫ್ ರಾಜಾ ಅವರ ‘ಹೊಲಿಗೆ ಯಂತ್ರದ ಅಮ್ಮಿ’ ಎನ್ನುವ ಕವಿತೆ `ತಾಯಿ’ಯನ್ನು ಪ್ರತಿಮೆಯನ್ನಾಗಿಸಿಕೊಂಡ ಅನೇಕ ಕವಿತೆಗಳು ಕನ್ನಡ ಕಾವ್ಯಲೋಕದಲ್ಲಿ ಓದಸಿಗುತ್ತವೆ. ಆರೀಫರ ಈ `ಹೊಲಿಗೆ ಯಂತ್ರದ ಅಮ್ಮಿ’ ಕವಿತೆ, ಕನ್ನಡ ಸಾಹಿತ್ಯದ ಅವ್ವನ ಕುರಿತಾದ ಕವಿತೆಗಳ ಸರಕ್ಕೆ ಮತ್ತೊಂದು ಮುತ್ತು. ಸಾಹಿತ್ಯಲೋಕದ ಸಾಮರಸ್ಯಕ್ಕೆ ಅಗತ್ಯದೊಂದು `ನಿಜಹರಳು’. ಸಾಧ್ಯವಾದಷ್ಟು ವಾಚ್ಯವಾಗಿಸದೇ, ಆ ಕವಿತೆಯ ಅನುಭವವನ್ನು ಕಟ್ಟಿಕೊಡಲು ಇಲ್ಲಿ ಪ್ರಯತ್ನಿಸಿದ್ದೇವೆ. ಅನುಭವ ನಿಮ್ಮದೇ.

ಇಂತಹ ಒಂದು ಕವನ ಚಿತ್ತಾರದ ವಿಡಿಯೋ ಪ್ರಸ್ತುತಿಗೆ ಕನಿಷ್ಠವೆಂದರೂ 5 ಸಾವಿರ ರೂಪಾಯಿಗಳಷ್ಟು ವೆಚ್ಚ ತಗಲುತ್ತದೆ. ಇಂತಹ ಪ್ರಯೋಗಗಳು ನಿಮಗಿಷ್ಟವಾದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು ಆರ್ಥಿಕ ನೆರವನ್ನು ಋತುಮಾನ ಅಪೇಕ್ಷಿಸುತ್ತದೆ. ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9XOne comment to “ಕವನ ಚಿತ್ತಾರ : ಆರೀಫ್ ರಾಜ ಅವರ “ಹೊಲಿಗೆ ಯಂತ್ರದ ಅಮ್ಮಿ””
  1. ಉತ್ತಮ ಪ್ರಯೋಗ , ಇನ್ನೂ ಚೆನ್ನಾಗಿ ಓದಬಹುದಿತ್ತು.

ಪ್ರತಿಕ್ರಿಯಿಸಿ