ನಟರಾಜ ಬೂದಾಳು ಅವರ ನಾಗಾರ್ಜುನನ ನುಡಿಕತೆಗಳು ಇ ಪುಸ್ತಕ ಈಗ ಋತುಮಾನ ಆ್ಯಪ್ ನಲ್ಲಿ ಲಭ್ಯ !

ಬೌದ್ಧ ದರ್ಶನದ ಇತಿಹಾಸದಲ್ಲಿ ನಾಗಾರ್ಜುನನಿಗೆ ಎರಡನೆಯ ಬುದ್ಧನೆಂಬ ವಿಶೇಷಣವಿದೆ. ನಾಗಾರ್ಜುನನನ್ನು ಬೌದ್ಧ ಮಹಾಯಾನದ ಪ್ರಧಾನ ಆಚಾರ್ಯನೆಂದು ಗುರುತಿಸುತ್ತಾರೆ. ಅವನ ಬಗೆಗಿನ ಚಾರಿತ್ರಿಕ ವಿವರಗಳು ಮಸುಕು ಮಸುಕಾಗಿ ದೊರೆಯುತ್ತವೆ. ಅವನು ಕರ್ನಾಟಕದವನೆಂಬುದಂತೂ ನಿಜ. ನಾಗಾರ್ಜುನನ ಬಗೆಗೆ ಹುಟ್ಟಿಕೊಂಡಿರುವ ಮಿಥ್‌ಗಳ ನಡುವಿನಿಂದ ಅವನ ವ್ಯಕ್ತಿತ್ವವನ್ನು ಕಡೆದು ತೆಗೆಯುವುದು ಕಷ್ಟ ಸಾಧ್ಯ. ಅವನ ಕೃತಿಗಳೇ ಅವನ ವ್ಯಕ್ತಿತ್ವದ ಎತ್ತರಕ್ಕೆ ಸೂಚಿಗಳು. ತಾತ್ವಿಕವಾಗಿ ಇಂದಿಗೂ ಅವನು ವಿಶ್ವಮಟ್ಟದ ದಾರ್ಶನಿಕ. ಅಸಾಧಾರಣ ಪ್ರತಿಭಾಶಾಲಿಯಾಗಿದ್ದ ನಾಗಾರ್ಜುನ ಬೌದ್ಧ ಧರ್ಮದ ಕೇಂದ್ರ ತಾತ್ವಿಕತೆಯಾದ ಮಾಧ್ಯಮಿಕ ತತ್ವವನ್ನು ಒಂದು ಚಿಂತನಾ ಪ್ರಸ್ಥಾನವನ್ನಾಗಿ ಬೆಳೆಸಿ ಅದಕ್ಕೊಂದು ಪೂರ್ಣ ಪ್ರಮಾಣದ ತಾತ್ವಿಕತೆಯ ಸ್ಥಾನವನ್ನು ದೊರಕಿಸಿಕೊಟ್ಟನು. ವಿದ್ವತ್ ಚರ್ಚೆ ಸಾಮಾನ್ಯ ಜನರಿಗೆ ಅರ್ಥವಾಗದು ಎಂದು ಅರಿತಿದ್ದ ನಾಗಾರ್ಜುನ ನಿತ್ಯದ ಜೀವನಕ್ಕೆ ಜನರು ಬೌದ್ಧ ತತ್ವಗಳನ್ನ ಅನುಸರಿಸಿ ಬಾಳಲು ಸಾಧ್ಯವಾಗುವಂತೆ ಬೌದ್ಧ ತಾತ್ವಿಕತೆಯನ್ನು ಕತೆಗಳು ಹಾಗೂ ನುಡಿಗಟ್ಟುಗಳ ಮೂಲಕ ರಚಿಸಿದ. ಅವುಗಳನ್ನು ನಮ್ಮ ಜನ ಸುಲಭವಾಗಿ ಅರ್ಥೈಸುವಂತೆ ನಟರಾಜ ಬೂದಾಳು ಕನ್ನಡದ ತಂದಿದ್ದಾರೆ.

Download RUTHUMANA App here :

** Android *** : https://play.google.com/store/apps/details?id=ruthumana.app

** iphone ** : https://apps.apple.com/in/app/ruthumana/id1493346225

********************************************

ಪ್ರತಿಕ್ರಿಯಿಸಿ