ಸಿನಿಮಾಟೋಗ್ರಾಫ್ ಕಾಯ್ದೆ ತಿದ್ದುಪಡಿಯ ಕರಡಿನ ವಿಶ್ಲೇಷಣೆ : ಅಶ್ವಿನಿ ಓಬಳೇಶ್ Author Ruthumana Date July 30, 2021 Comments: Leave a comment ಒಕ್ಕೂಟ ಸರಕಾರ 1952ರಲ್ಲಿಯೇ ತಂದಿದ್ದ ಸಿನಿಮಾಟೋಗ್ರಾಫ್ ಆಕ್ಟ್ ಗೆ ತಿದ್ದುಪಡಿ ತರಲು ಹೊರಟಿದೆ . ’ಸಿನಿಮಾಟೋಗ್ರಾಫ್ ಆಕ್ಟ್ 2021’ ನ ಹೆಸರಿನ ತಿದ್ದುಪಡಿಯ ಈ ಕರಡಿಗೆ ಸಾರ್ವಜನಿಕರಿಗಿದ್ದ ಆಕ್ಷೇಪಣೆ ಸಲ್ಲಿಸಬಹುದಾದ ಅವಧಿ ಮುಗಿದಿದೆ . ಪ್ರಸ್ತುತ ಅಧಿವೇಶನದಲ್ಲಿ ಒಕ್ಕೂಟ ಸರ್ಕಾರ ಈ ಬಿಲ್ ಮಂಡಿಸಬಹುದು. ಈಗಾಗಲೇ ಬಿಡುಗಡೆಯಾಗಿರುವ ಚಲನಚಿತ್ರಗಳು ಮತ್ತು ಸೆನ್ಸಾರ್ ಬೋರ್ಡ್‌ನಿಂದ ಪ್ರಮಾಣಪತ್ರವನ್ನು ಪಡೆದಿರುವ ಚಿತ್ರಗಳನ್ನು ಮತ್ತೆ ಸೆನ್ಸಾರ್‌ಗೆ ಒಳಪಡಿಸುವ ಅವಕಾಶವನ್ನು ಹೊಸ ಕಾನೂನಿನಲ್ಲಿ ನೀಡಿರುವುದು ಚಿತ್ರರಂಗದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಚಿತ್ರರಂಗದ ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ತಯಾರಕರ ಮೇಲೆ ಬರಬಹುದಾದ ಹೊಸ ತೂಗುಗತ್ತಿಯಂತೆ ಅನ್ನಿಸುತ್ತಿರುವ, ಅದರಲ್ಲೂ ಮುಖ್ಯವಾಗಿ ಸ್ವತಂತ್ರ ಚಿತ್ರ ತಯಾರಿಕರಿಗೆ ಮಾರಕವಾಗಲಿದೆ ಎಂದು ಅನೇಕರು ಸಂಶಯಿಸುತ್ತಿರುವ ಈ ಬಿಲ್ಲನ್ನು ಹೈಕೋರ್ಟ್ ನ್ಯಾಯವಾದಿಗಳಾದ ಅಶ್ವಿನಿ ಓಬಳೇಶ್ ಅವರು ನಮ್ಮ ಸಂವಿಧಾನದ ಆರ್ಟಿಕಲ್ ೧೯[೨] (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ) ಮತ್ತು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ಪ್ರಕರಣಗಳಾದ K. A. Abbas vs The Union Of India, S. Rangarajan Etc vs P. Jagjivan Ram ಮತ್ತು Gajanan Visheshwanr vs Union Of India ಜೊತೆಯಲ್ಲಿಟ್ಟು ವಿಶ್ಲೇಷಿದ್ದಾರೆ. 2013 ರಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದಿಂದ ಪದವಿ ಪಡೆದ ಅಶ್ವಿನಿ ಒಬುಲೇಶ್ ಅವರು ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸುವ ಮೊದಲು ಕೆಲವು ವರ್ಷಗಳ ಕಾಲ ಕಾರ್ಪೊರೇಟ್ ಕಾನೂನಿನಲ್ಲಿ ಕೆಲಸ ಮಾಡಿದರು. ಅಂಚಿನಲ್ಲಿರುವ ಮತ್ತು ದುರ್ಬಲ ಗುಂಪುಗಳಲ್ಲಿನ ಜನರಿಗೆ ಕಾನೂನು ನೆರವು ನೀಡಲು ಎರಡು ವರ್ಷಗಳ ಹಿಂದೆ ಧ್ವನಿ ಲೀಗಲ್ ಟ್ರಸ್ಟ್ ರಚಿಸಿದರು. ಮಹಿಳೆಯರು, ಮಕ್ಕಳು, ವಿಕಲಚೇತನರು, ಸಾಮಾಜಿಕ ದಬ್ಬಾಳಿಕೆಯ ಬಲಿಪಶುಗಳು ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಟ್ರಸ್ಟ್ ಸಹಾಯ ಮಾಡುತ್ತದೆ. ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X Like this:Like Loading...