ಋತುಮಾನದ ನಾಲ್ಕನೇ ಪುಸ್ತಕವಾಗಿ ಜಪಾನ್‌ನ ಪ್ರಸಿದ್ದ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಸಣ್ಣ ಕತೆಗಳ ಸಂಕಲನ ನಿಮ್ಮ ಮುಂದಿಡುತ್ತಿದ್ದೇವೆ. ಮುರಕಮಿಯ ಕಥಾ ಶೈಲಿ ಮತ್ತು ಓಘವನ್ನು ಅಷ್ಟೇ ಆಪ್ತವೆನ್ನುಸುವಂತೆ ಮಂಜುನಾಥ ಚಾರ್ವಾಕ ಕನ್ನಡಕ್ಕೆ ಅನುವಾದಿಸಿದ್ದಾರೆ.
ಹರುಕಿ ಮುರಕಮಿ ಎರಡನೆಯ ವಿಶ್ವಯುದ್ದದ ನಂತರ ಕ್ಷಿಪ್ರಗತಿಯಲ್ಲಿ ಕೈಗಾರೀಕರಣಗೊಂಡ ಜಪಾನ್‌ನ ಆರ್ಥಿಕ ಬೆಳವಣಿಗೆಯು ನಗರಗಳ ಜನಜೀವನದ ಸಂರಚನೆಯಲ್ಲಿ ಮಾಡಿರುವ ಪರಿಣಾಮವನ್ನು ಅದ್ಭುತವಾಗಿ ಚಿತ್ರಿಸುತ್ತಾರೆ. ಮುಖ್ಯವಾಗಿ ಮುರಕಮಿಯ ಬರವಣಿಗೆಯು ಜಪಾನಿನ ಸಮುದಾಯ ಸಂಸ್ಕೃತಿಯಿಂದ ತಪ್ಪಿಸಿಕೊಂಡು ಹೆಚ್ಚು ನಗರ ಜೀವನವನ್ನು ವೈಯಕ್ತಿಕ ನೆಲೆಯಲ್ಲಿ ಶೋಧಿಸುತ್ತದೆ. ಮುರಕಮಿ ಹೇಳುವ , ಸಣ್ಣ ಹಳ್ಳಿಗಳಿಂದ ಟೋಕಿಯೋದಂತ ಸಿಟಿಗಳಿಗೆ ಬಂದವರ ಅನ್ಯ ಮನಸ್ಕತೆ ಮತ್ತು ಒಬ್ಬಂಟಿತದ ಕತೆ ಕರ್ನಾಟಕದ ಯಾವುದೋ ಮೂಲೆಯಿಂದ ಬೆಂಗಳೂರಿನಂತ ಮಹಾನಗರಿಗೆ ಬಂದು ಬದುಕು ಕಟ್ಟಿಕೊಂಡಿರುವ ಈ ತಲೆಮಾರಿನ ಅಸಂಖ್ಯ ಜನರ ಕತೆಯೂ ಹೌದು.
ಕೃತಿಯು ಆರೇಳು ದಿನ ಕಳೆದು ಕರ್ನಾಟಕದ ಎಲ್ಲೆಡೆ ಮಳಿಗೆಗಳಲ್ಲಿ ಸಿಗಲಿದೆ. ೨೪೮ ಪುಟಗಳ ಕೃತಿಯ ಬೆಲೆ ರೂ. ೧೭೫/- . ಪ್ರೀ ಆರ್ಡರ್ ವಿಶೇಷ ದರ ರೂ ೧೫೦/- . ಅಂಚೆ ವೆಚ್ಚ ಪ್ರತ್ಯೆಕ. ಕೊಳ್ಳಲು ಲಿಂಕ್ https://store.ruthumana.com/product/kino-mattu-itara-kategalu/. ಋತುಮಾನ ಆಪ್ ನಲ್ಲಿಯೂ ಆರ್ಡರ್ ಮಾಡಬಹುದು. ಫೋನ್ ಕರೆ ಅಥವಾ ಸಂದೇಶದ ಮೂಲಕ ಆರ್ಡರ್ ಮಾಡಲಿಚ್ಛಿಸುವರಿಗೆ ಸಂಪರ್ಕ ಸಂಖ್ಯೆ – +91 94800 35877
ಈ ಕೃತಿಯನ್ನು ಹೊರತರಲು ನಮಗೆ ಹೊರತರಲು ನಮಗೆ ನೆರವಾದ ಹಲವರಿದ್ದಾರೆ. ಅವರೆಲ್ಲರಿಗೂ ಋತುಮಾನ ಕೃತಜ್ಞ. ಮುರಕಮಿಯ ರಾತ್ರಿಯ ಟೋಕಿಯೊವನ್ನು ಮತ್ತು ಅವನ ಕತೆಗಳಲ್ಲಿ ಪುನರಾವರ್ತಿತ ಇಮೇಜ್ ಆಗಿ ಕಾಣಸಿಗುವ ಬೆಕ್ಕನ್ನು ಮುಖಪುಟದಲ್ಲಿ ಕೂರಿಸಿ ಮಾಡಿದ ಆಕರ್ಷಕ ಮುಖಪುಟ ವಿನ್ಯಾಸ ಶ್ವೇತಾ ಆಡುಕಳ ಅವರದ್ದು.