ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ತುಳುನಾಡಿಗೆ ಬಂದ ಬಾಸೆಲ್ ಮಿಷನ್ ನಿಂದ ಪ್ರಾರಂಭಗೊಂಡು ಇಲ್ಲಿಯ ತನಕ ಭೂತಾರಾಧನೆಯ ದಾಖಲೀಕರಣದಲ್ಲಿ ಸಾಕಷ್ಟು ಕೆಲಸವಾಗಿದೆ. ಹೆಚ್ಚಿನವು ಬರಹ ರೂಪದಲ್ಲಿದೆ . ಆಡಿಯೋ ಮತ್ತು ವಿಡಿಯೋ ರೂಪದಲ್ಲಿಯೂ ದಾಖಲಾತಿಗಳು ನಡೆದಿವೆ . ಆದರೆ ಪುಸ್ತಕಗಳು ಮತ್ತು ಒಂದಷ್ಟು ಬ್ಲಾಗ್ ಗಳಲ್ಲಿರುವ ಮಾಹಿತಿಗಳು ಬಿಟ್ಟರೆ ಹೆಚ್ಚಿನವು ಜನರಿಗೆ ಮುಕ್ತವಾಗಿ ಲಭ್ಯವಿಲ್ಲ . ಸ್ವತಃ ನಾವೇ ಭೂತಾರಾಧನೆಯ ಕುರಿತಾದ ಅಧ್ಯಯನದಲ್ಲಿ ತೊಡಗಿಕೊಂಡಾಗ ಮಾಹಿತಿಗಳ ಸಂಗ್ರಹ ಸುಲಭವಾಗಿರಲಿಲ್ಲ . ಆಧುನಿಕ ಯುಗದಲ್ಲಿ ತಂತ್ರಜಾನವು ಮಾಹಿತಿಗಳ ಕ್ರೋಢೀಕರಣ ಮತ್ತು ಪ್ರಸರಣದಲ್ಲಿ ತನ್ನ ಪ್ರಭಾವನ್ನು ಬೀರುತ್ತಿರುವಂತೆ ಮಾಹಿತಿಯು ಮುಕ್ತವಾಗಿ ದೊರೆಯಬೇಕೆನ್ನುವುದು ಋತುಮಾನದ ಪ್ರಮುಖ ಆಶಯಗಳಲ್ಲೊಂದು .
2016 ನೇ ಇಸವಿಯ ಮಧ್ಯಭಾಗದಿಂದ ಈ ನಿಟ್ಟಿನಲ್ಲಿ ದುಡಿದಿದ್ದೇವೆ . ಮುಖ್ಯವಾಗಿ ದೃಶ್ಯ ಮಾಧ್ಯಮಕ್ಕೆ ಒತ್ತು ಕೊಟ್ಟು ವಿದ್ವಾಂಸರ ಸಂದರ್ಶಗಳನ್ನು , ಒಂದೊಂದು ಭೂತದ ಆರಾಧನಾ ಪದ್ದತಿಯನ್ನು ದಾಖಲಿಸಿ ಅಂತರ್ಜಾಲದಲ್ಲಿ ಮುಕ್ತವಾಗಿ ಬಿಡುಗಡೆ ಮಾಡುವುದಾಗಿ ನಿರ್ಣಯಿಸಿದ್ದೇವೆ .ವಿಡಿಯೋಗಳ ಜೊತೆ ಜೊತೆಗೆ , ಪಾಡ್ದನಗಳ ಆಡಿಯೋ ಮತ್ತು ಬರಹ ರೂಪ , ಆರಾಧನಾ ಪರಂಪರೆಗೆ ಸಂಬಂಧಪಟ್ಟ ಪೂರಕ ಮಾಹಿತಿಯುಳ್ಳ ಲೇಖನಗಳನ್ನು ಇಲ್ಲಿ ಪ್ರಕಟವಾಗುತ್ತವೆ . ಇಡೀ ಮಿಂದಾಣವು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುತ್ತದೆ . ಈ ದಾಖಲೀಕರಣ ಯೋಜನೆಯು ಅಂತರ್ಜಾಲದಲ್ಲಿ ಈ ಕೆಳಕಂಡ ವಿಳಾಸಗಳಲ್ಲಿ ಲಭ್ಯವಿರುತ್ತದೆ .
http://bhootaradhane.ruthumana.com
http://bhutaworship.ruthumana.com
http://bhootaradhane.ruthumana.com
Bhūtārādhane (Anglicized: ‘Bhootaradhane’ ) has been documented extensively starting from mid-19th century. The Basel mission that was setup in Mangalore was a pioneer in this work. Although multimedia documentation of Bhūtārādhane is available, much information about this tradition is textual. Barring a few books and blogs, a large part of this documentation is not openly available to general public. It was indeed a challenge for us to compile all the information during our research and study.
In this age where technology is playing a significant role in storing and broadcasting facts and figures, Ruthumana is committed to one of its prime objectives – that of easy and open access to information. In keeping with this objective, we have decided to present the information regarding Bhūtārādhane, openly on the internet.
Ruthumana has been working extensively since mid-2016 to document Bhūtārādhane, mainly in the visual format. In an ongoing endeavour, we are documenting the practices surrounding the worship of each Bhūta, interviewing experts, recording videos and audio clips of Pāḍdana’s. We are also working towards having a good collection of written articles about this tradition. The entire website will be in Kannada and English languages. Videos will have subtitles . The website will be available at following addresses.
http://bhootaradhane.ruthumana.com
http://bhutaworship.ruthumana.com
http://bhootaradhane.ruthumana.com