ಏಪ್ರಿಲ್ 5 ರಂದು ಋತುಮಾನದಲ್ಲಿ ಪ್ರಕಟವಾದ ತೇಜಲ್ ಕನಿಟ್ಕರ್ ಲೇಖನಕ್ಕೆ ಹರೀಶ ಹಾಗಲವಾಡಿ ಪ್ರತಿಕ್ರಿಯಿಸಿದ್ದರು . ಹರೀಶ್ ಮಾತುಗಳಿಗೆ ಸುಬ್ರಮಣ್ಯ ಹೆಗಡೆ ನೀಡಿರುವ ಉತ್ತರ ಇಲ್ಲಿದೆ.
ಮೂಲ ಲೇಖನ : https://ruthumana.com/2020/04/05/science-justice-tejal-kanitkar/
ಹರೀಶ ಹಾಗಲವಾಡಿ ಪ್ರತಿಕ್ರಿಯೆ : https://ruthumana.com/2020/04/07/repose-to-tejal-kanitkar-artcile-1/
ತೇಜಲ್ ಕನಿಟ್ಕರ್ ಅವರಿಗೆ ಬರೆದ ಉತ್ತರದಲ್ಲಿ ಲೇಖಕರು ಬೇರೆ ಪದಗಳು ಹಾಗೂ ಬೇರೆ ಸ್ತರದಲ್ಲಿ ವ್ಯಾಖ್ಯಾನ ಮಾಡಿರುವುದರಿಂದ ಮೊದಲಿಗೆ ಕನಿಟ್ಕರ್ ಅವರ ಭಾಷಣ ಹಾಗೂ ಸಂದರ್ಶನದಲ್ಲಿ ಹೇಳಿದ್ದೇನು ಮತ್ತೆ ಇದರಲ್ಲಿ ಯಾವುದನ್ನು ಲೇಖಕರು ಎದುರಿಸಿದ್ದಾರೆ ಅಥವಾ ಬೇರೆ ದಿಕ್ಕಿನಲ್ಲಿ ಕೊಂಡೊಯ್ದಿದ್ದಾರೆಂದು ನೋಡುವ.
ಜವಾಬ್ದಾರಿಯುತ ಸ್ಥಾನಗಳಲ್ಲಿರುವ ವ್ಯಕ್ತಿಗಳು ಅವೈಜ್ಞಾನಿಕ ಹೇಳಿಕೆಗಳನ್ನು ನೀಡುವುದರಲ್ಲಿ ಸಮಸ್ಯೆ ಇದೆ. ಏಕೆಂದರೆ ಇದು ಅವರ ನಿರ್ಧಾರಗಳನ್ನು ಹಾಗೂ ಕೃತಿಯನ್ನು ನಿಯಂತ್ರಿಸುತ್ತದೆ. ಬ್ರಾಹ್ಮಣರು ಶ್ರೇಷ್ಠ ಎಂದು ನಂಬಿದ ಒಂದು ಕಂಪನಿಯ ಮಾಲಿಕರು ತಮ್ಮ ಹುದ್ದೆಗಳ ನೇಮಕಾತಿಯಲ್ಲಿ ಜಾತಿ ತಾರತಮ್ಯ ನಡೆಸಬಹುದು. ಗೋವುಗಳಿಗೆ ಚಮತ್ಕಾರಿ ಗುಣಗಳಿವೆ ಎಂದು ನಂಬಿದ ಒಬ್ಬರು ಪ್ರಧಾನ ಮಂತ್ರಿ ಬಹಳಷ್ಟು ಹಣವನ್ನು ಗೋವಿನ ಕುರಿತ ಸಂಶೋಧನೆಗೆ ಮೀಸಲಿಡಬಹುದು. ಇಂತಹ ನಿರ್ದಿಷ್ಟ ವಿಷಯಗಳಲ್ಲಿ ಒಂದು ವ್ಯಕ್ತಿಯ ನಿಲುವು ಕೇವಲ ಅವರು ನಂಬಿದ ಸತ್ಯಗಳಷ್ಟೇ ಅಲ್ಲದೆ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳಿದ್ದರೂ, ವೈಜ್ಞಾನಿಕ ಸತ್ಯಗಳ ಅನುಪಸ್ಥಿತಿಯಲ್ಲಿ ಪ್ರಾಬಲ್ಯ ಹೊಂದಿರುವ ವ್ಯವಸ್ಥೆ ತಮಗೆ ಅನುಕೂಲದ ನಿಲುವನ್ನೇ ಸತ್ಯ ಎನ್ನಬಹುದು. ಸತ್ಯ ವ್ಯಕ್ತಿಪ್ರಧಾನವಾದ್ದಾಗ ಅದನ್ನು ಪ್ರಾಬಲ್ಯದ ವರ್ಗಗಳ ಅನುಕೂಲದಿಂದಲೇ ನಿರ್ಧರಿಸುವುದು ಇನ್ನಷ್ಟು ಸುಲಭ.
ಹಾಗೆಂದು ವಿಜ್ಞಾನ ತನ್ನಿಂದ ತಾನೇ ಸಂಪೂರ್ಣ ವಸ್ತುನಿಷ್ಠವಾಗಿರುವುದಿಲ್ಲ. ವಿಜ್ಞಾನಿಗೆ ಒಂದು ಪ್ರಶ್ನೆ ಬಂದಿರುವುದಾದರೆ ಅದು ಪ್ರಾಬಲ್ಯದ ಸ್ಥಾನಗಳಲ್ಲಿರುವವರಿಗೆ ಮುಖ್ಯವಾದ ಪ್ರಶ್ನೆ ಆಗಿರಬಹುದು. ಆ ಪ್ರಶ್ನೆಗೆ ಉತ್ತರ ಹುಡುಕುವ ಬಗೆ ಪ್ರಾಬಲ್ಯದ ಸ್ಥಾನದಿಂದ ಬಂದಿರಬಹುದು. ಹೀಗಾಗಿಯೇ ನಾವು ಆಗಾಗ “ಗಂಡು ಮೆದುಳು – ಹೆಣ್ಣು ಮೆದುಳು” ಅಂತಹ ಪೂರ್ವಾಗ್ರಹಗಳ ಮೇಲೆ ಆಧರಿಸಿರುವ ಸಂಶೋಧನಾ ವರದಿಗಳನ್ನೂ ನೋಡುತ್ತೇವೆ (ಹೇಗೆ ಸಾಮಾಜಿಕ ಪೂರ್ವಗ್ರಹಗಳು ಮೆದುಳು ಲಿಂಗಾಧಾರಿತ ಎಂಬ ತಪ್ಪುಕಲ್ಪನೆಯನ್ನು ವಿಜ್ಞಾನ ಕ್ಷೇತ್ರಕ್ಕೂ ಹರಡಿದೆ ಹಾಗೂ ಇದರಿಂದ ಹೇಗೆ ಮಹಿಳೆಯರ ಆರೋಗ್ಯಕ್ಕೆ ಪರಿಣಾಮ ಉಂಟುಮಾಡಿದೆ ಎನ್ನುವುದನ್ನು ವಿವರವಾಗಿ ಕೋರ್ಡೀಲಿಯಾ ಫೈನ್ ಅವರ Delusions of Gender ಪುಸ್ತಕದಲ್ಲಿ ನೋಡಬಹುದು). ವಿಜ್ಞಾನದ ಒಂದು ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆ? ಅದೇ ಪ್ರಶ್ನೆಯನ್ನು ಯಾಕೆ ಕೇಳುತ್ತಿದ್ದಾರೆ? ಆ ಪ್ರಶ್ನೆಯನ್ನು ಕೇಳುವುದರಿಂದ ಯಾರಿಗೆ ಲಾಭ ಇದೆ? ಆ ಪ್ರಶ್ನೆಗೆ ಒಂದೋ ಅಥವಾ ಇನ್ನೊಂದೋ ಉತ್ತರ ಬಯಸುತ್ತಿರುವವರು ಯಾರು? ಇವೆಲ್ಲ ಪ್ರಶ್ನೆಗಳು ಸಾಮಾಜಿಕ ರಚನೆಗಳಿಂದ ನಿರ್ಧರಿಸಲ್ಪಡುತ್ತದೆ ಹಾಗೂ ಇದಕ್ಕಾಗಿಯೇ ವಿಜ್ಞಾನ ಸಂಪೂರ್ಣವಾಗಿ ವಸ್ತುನಿಷ್ಠ ಆಗಲಾರದು.
ಇಷ್ಟು ಮಿತಿಗಳ ನಡುವೆಯೂ ವಸ್ತುನಿಷ್ಠ ಸತ್ಯಗಳನ್ನು ತಿಳಿಯಲು ವಿಜ್ಞಾನ ನಮಗೆ ತಿಳಿದಿರುವ ಅತ್ಯುತ್ತಮ ಮಾರ್ಗವಾಗಿದೆ. ಆದರೆ ಈ ಮಿತಿಯನ್ನು ಸದಾ ಮನಸ್ಸಿನಲ್ಲಿಡಬೇಕಾದ ಅವಶ್ಯಕತೆ ಇದೆ. ಏಕೆಂದರೆ ಪ್ರಾಬಲ್ಯದ ವರ್ಗಗಳು ಯಾವ ಪ್ರಶ್ನೆಗಳಿಗೆ ಹಣ ನೀಡಲಾಗುತ್ತದೆ ಎನ್ನುವುದನ್ನು ನಿರ್ಧರಿಸುತ್ತವೆ. ಹೀಗಾಗಿ ಬರಿಯ ವಿಜ್ಞಾನ ತನ್ನಿಂದ ತಾನೇ ನಮ್ಮನ್ನು ವಿಮೋಚನೆಗೆ ತರುತ್ತದೆಂಬುದು ಸಂಕುಚಿತ ಆಲೋಚನೆ ಅಷ್ಟೇ ಅಲ್ಲ ಬದಲಾಗಿ ಈ ಪ್ರಾಬಲ್ಯದ ವರ್ಗಗಳನ್ನು ಓಲೈಸುವ ಮಾರ್ಗವೂ ಆಗಿದೆ. ಹೀಗಾಗಿಯೇ ವಿಜ್ಞಾನದ ವಸ್ತುನಿಷ್ಠತೆಯನ್ನು ಸಾಮಾಜಿಕ ಹೋರಾಟಗಳ ಮೂಲಕ ಗಳಿಸಬೇಕಿದೆ. ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿರುವ ವಿಜ್ಞಾನವನ್ನು ನಮ್ಮದಾಗಿಸಿಕೊಳ್ಳುವುದೇ ಈ ಹೋರಾಟವಾಗಿದೆ. ಸಾಮಾಜಿಕ ನ್ಯಾಯದ ಹೋರಾಟ ಇದಕ್ಕೆ ಸಮೀಪದಲ್ಲಿ ಸಂಬಂಧಿಸಿದೆ, ಇದೇ ವಸ್ತುನಿಷ್ಠತೆಯನ್ನು ಕಾಯುವ ಸಲುವಾಗಿ. ಈ ವಸ್ತುನಿಷ್ಠ ಸತ್ಯಗಳು ಸಾಮಾಜಿಕ ನ್ಯಾಯದ ಹೋರಾಟಕ್ಕೆ ಅವಶ್ಯಕವೂ ಆಗಿದೆ ಏಕೆಂದರೆ ವಸ್ತುನಿಷ್ಠ ಸತ್ಯಗಳು ಪ್ರಾಬಲ್ಯದ ವರ್ಗಗಳು ರೂಪಿಸಿದ ಸಾಮಾಜಿಕ ವಾಸ್ತವಕ್ಕೆ ಎದುರಾಗುವ ಶಕ್ತಿಯನ್ನು ನೀಡುತ್ತವೆ.
ವ್ಯಕ್ತಿಪ್ರಧಾನ ಸತ್ಯಗಳನ್ನುಪಯೋಗಿಸಿ ಪ್ರಾಬಲ್ಯದ ವರ್ಗಗಳು ರಚಿಸಿದ ಸಾಮಾಜಿಕ ವ್ಯವಸ್ಥೆ, ಸಾಂಸ್ಕೃತಿಕ ನಿರೂಪಣೆಗಳನ್ನು ಪ್ರಶ್ನಿಸಿ, ಸಂಸ್ಕೃತಿಯು ಒಟ್ಟು ಜನರ ಒಳಿತನ್ನು, ಮಿಡಿತಗಳನ್ನು ಒಳಗೊಳ್ಳುವಂತೆ ಮಾಡಲು ಈ ವಸ್ತುನಿಷ್ಠ ಸತ್ಯಗಳು ನೆರವಾಗಬಲ್ಲುವು. ಈ ಸಂಬಂಧ ಎರಡು ದಿಕ್ಕಿನದ್ದು. ಈ ಎರಡು ದಿಕ್ಕಿನ ಸಂಬಂಧದ ಕುರಿತು ತೇಜಲ್ ಕನಿಟ್ಕರ್ ತಮ್ಮ ಭಾಷಣ ಹಾಗೂ ಸಂದರ್ಶನಗಳಲ್ಲಿ ಹೇಳಿದ್ದಾರೆ. ಇದಕ್ಕೆ ಉತ್ತರವಾಗಿ ಬರೆದಿರುವ ಲೇಖನದಲ್ಲಿ ವಿಜ್ಞಾನ ಏನು ಎನ್ನುವ ಮೂಲಭೂತ ಅರಿವು, ವಿವರಣೆ ಕಾಣುವ ಬದಲಾಗಿ ವಿಜ್ಞಾನ ಹಾಗೂ ಸಾಮಾಜಿಕ ನ್ಯಾಯಕ್ಕೆ ಹೇಗ ಸಂಬಂಧವಿದ್ದೀತು ಎನ್ನುವ ಗೊಂದಲವನ್ನು ವ್ಯಕ್ತಪಡಿಸಿದ್ದಾರೆ ಎಂದಷ್ಟೇ ಅನ್ನಿಸುತ್ತದೆ (ವಿಜ್ಞಾನದ ವಸ್ತುನಿಷ್ಠತೆ ಹೇಗೆ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದೆ ಎನ್ನುವ ಸಂಕೀರ್ಣ ವಿಷಯವನ್ನು ಇನ್ನಷ್ಟು ಅರಿಯಲು ಸೋಫಿ ವಾಂಗ್ ಅವರ ಸರಣಿ ಕಾಮಿಕ್‍ಗಳನ್ನು ಓದಬಹುದೆಂದು ನನ್ನ ಸಲಹೆ).
ವೈಜ್ಞಾನಿಕ ಮನೋಧರ್ಮ ಎನ್ನುವುದು ವಿಜ್ಞಾನ ಎನ್ನುವ ಪದಕ್ಕಿಂತ ವಿಸ್ತಾರವಾದದ್ದು. ವಿಜ್ಞಾನವನ್ನು ಕೇವಲ ಒಂದು ವೃತ್ತಿಯಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಸಿ ಮುಗಿಸದೇ, ವಿಜ್ಞಾನ ಕಲಿಸುವ ಪ್ರಶ್ನಿಸುವ ರೀತಿಯಿಂದ ನಮ್ಮ ದಿನನಿತ್ಯದ ಜೀವನದಲ್ಲಿ ಕಾಣಸಿಗುವ ಪ್ರಕ್ರಿಯೆಗಳನ್ನು ವಿಶ್ಲೇಷಿಸುವುದನ್ನು ಹಾಗೂ ಅದರ ಅನುಸಾರವಾಗಿ ವರ್ತಿಸುವುದನ್ನು ವೈಜ್ಞಾನಿಕ ಮನೋಧರ್ಮ ಎನ್ನಲಾಗುತ್ತದೆ. ಹಾಗೆಂದು ಎಲ್ಲ ಪ್ರಶ್ನೆಗಳಿಗೂ ವಿಜ್ಞಾನದ ವಿಧಾನ ಉತ್ತರ ನೀಡಲಾಗದೆನ್ನುವ ಅರಿವು ವೈಜ್ಞಾನಿಕ ಮನೋಧರ್ಮದ ವಕ್ತಾರರಿಗಿದೆ ಹಾಗೂ ಈ ಅರಿವು ಕೂಡ ವೈಜ್ಞಾನಿಕ ಮನೋಧರ್ಮದ ಭಾಗವೇ ಆಗಿದೆ. ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಸತ್ಯಗಳನ್ನು ಕೊಡುವ ಮಾರ್ಗವಾಗಿರುವ ವಿಜ್ಞಾನ ಸಾಮಾಜಿಕ ಪ್ರಯತ್ನಗಳಿಲ್ಲದೇ ಜನರಿಗೆ ವಿಮೋಚನೆಯನ್ನು ನೀಡುವುದು ಸಾಧ್ಯವಿಲ್ಲ. ಏಕೆಂದರೆ ಇದು ವಿಜ್ಞಾನದ ವ್ಯಾಪ್ತಿಯೇ ಅಲ್ಲ.
ಆದರೆ ಸಾಮಾಜಿಕ ಪ್ರಯತ್ನಗಳಿಗೆ ಈ ಮೊದಲೇ ಹೇಳಿದಂತೆ ವಿಜ್ಞಾನದ ಸತ್ಯಗಳ ಅವಶ್ಯಕತೆ ಇದೆ, ಅಂತೆಯೇ ವೈಜ್ಞಾನಿಕ ಮನೋಧರ್ಮದ ಅವಶ್ಯಕತೆ ಇದೆ. ತೇಜಲ್ ಕನಿಟ್ಕರ್ ಅವರು ಹೇಳುವಂತೆ ಇಲ್ಲಿ ಗಮನಿಸಬೇಕಾದದ್ದು ವಿಜ್ಞಾನಿಗಳೆಲ್ಲ ವೈಜ್ಞಾನಿಕ ಮನೋಧರ್ಮ ಹೊಂದಿದವರಾಗಬೇಕಿಲ್ಲ. ಅವರು ಅದನ್ನು ಸಮಾಜದಲ್ಲಿ ಬಯಸಬೇಕೆಂದೇನೂ ಇಲ್ಲ. ಆದರೆ ಇಲ್ಲಿ ಮುಖ್ಯವಾದದ್ದೆಂದರೆ ಯಾವುದೋ ಪವಿತ್ರ ಗ್ರಂಥದ ಹಾಗೆ, ಶಾಸ್ತ್ರದ ಹಾಗೆ ವಿಜ್ಞಾನಿಗಳು ವಿಜ್ಞಾನದ ವಾರಸುದಾರರಲ್ಲ. ವಿಜ್ಞಾನಿಗಳೆಲ್ಲರು ಬಯಸದ ಮಾತ್ರಕ್ಕೆ ವಿಜ್ಞಾನದ ವಕ್ತಾರರ ಮಾತುಗಳ ‘ಪಾವಿತ್ರ್ಯತೆ’ ಕುಂದುವುದಿಲ್ಲ. ವಿಜ್ಞಾನಿಗಳ ಪರಿಣಿತಿ ಅವರ ಪರಿಣಿತಿಯಲ್ಲಿರುವ ಕ್ಷೇತ್ರಕ್ಕೆ ಸೀಮಿತವಾಗಿದ್ದು ಅವರನ್ನು ಆ ಕ್ಷೇತ್ರದ ಕುರಿತೂ ಪ್ರಶ್ನಿಸಿಬಹುದು ಹಾಗೂ ಅವರ ಸಾಮಾಜಿಕ ಬದ್ಧತೆಯನ್ನು ಕೂಡ ಪ್ರಶ್ನಿಸಬಹುದು. ಲೇಖಕರು ಸಮಾಜದಲ್ಲಿ ಅವರು ಶಿವ ಮತ್ತು ಸೌಂದರ್ಯ ಎಂದು ಕರೆಯುವ ವಿಷಯಗಳಲ್ಲಿ ವಿಜ್ಞಾನಿಗಳು ಒಳಗೊಳ್ಳಲಿಲ್ಲವೆಂದು ದೂರುತ್ತಾರೆ. ವಿಜ್ಞಾನಿಗಳು ಸಮಸಮಾಜದ ಸೃಷ್ಠಿಗೆ ಕಂಕಣ ತೊಟ್ಟು ನಿಲ್ಲಲಿಲ್ಲವೆಂದು ಹೇಳುತ್ತಾರೆ. ಅದೇ ಈ ಕೆಲಸಕ್ಕೆ ವಿಜ್ಞಾನವನ್ನು ಬಳಸುವ ವಿಜ್ಞಾನದ ವಕ್ತಾರರನ್ನು ಎರಡನೇಯ ದರ್ಜೆಯವರೆಂಬಂತೆ ವಿಜ್ಞಾನಿಗಳ ಮುಂದೆ ನಿಲ್ಲಿಸಿ ಕುಗ್ಗಿಸುತ್ತಾರೆ! ಲೇಖಕರಿಗೆ ಇನ್ನೊಮ್ಮೆ ವಿಜ್ಞಾನಿಗಳು ವಿಜ್ಞಾನದ ಪೂಜಾರಿಗಳಲ್ಲವೆಂದು, ವಿಜ್ಞಾನದ ಸತ್ಯಗಳನ್ನು ಎಲ್ಲರೂ ಸಮಾಜದಲ್ಲಿ ಪಸರಿಸಬಹುದೆಂಬುದನ್ನು ಹೇಳಲಿಚ್ಛಿಸುತ್ತೇನೆ. ಈ ಮೊದಲು ಹೇಳಿದ ವಿಜ್ಞಾನದ ವಸ್ತುನಿಷ್ಠತೆಯ ಕುರಿತಾದ ಕಳಕಳಿಯನ್ನೇ ನೋಡಿದರೆ ವಿಜ್ಞಾನದ ಸತ್ಯಗಳ ವಿಶ್ವಾಸಾರ್ಹತೆಗೆ ಸಮಸಮಾಜದ ಅಗತ್ಯವಿದೆ. ಇದನ್ನು ವಿಜ್ಞಾನಿಗಳು ಬಯಸುವುದಿಲ್ಲವಾದದ್ದಕ್ಕೆ ಸಾಮಜಿಕ-ಆರ್ಥಿಕ ಕಾರಣಗಳೂ ಇವೆ. ಈ ಕಳಕಳಿ ಉಳ್ಳ ವಿಜ್ಞಾನಿಗೆ ಬಹುರಾಷ್ಟ್ರೀಯ ಕಂಪನಿಯೊಂದು ಕೆಲಸ ಹಾಗೂ ಹಣ ನೀಡದಿರಬಹುದು. ಹೀಗಾಗಿಯೇ ವಿಜ್ಞಾನವನ್ನು ನಮ್ಮದಾಗಿಸಿಕೊಳ್ಳುವ ಅಗತ್ಯ ನಮಗೂ, ವಿಜ್ಞಾನಕ್ಕೂ ಇದೆ. ಹೀಗೆ ಕೇಳುವ ಅರ್ಥ, ಲೇಖಕರು ತಪ್ಪಾಗಿ ಗ್ರಹಿಸಿದಂತೆ ವಿಜ್ಞಾನಿಗಳು ಸೂಪರ್ ಹೀರೋಗಳು ಅಥವಾ ಸಂತರು ಎಂದೇನೋ ಆಗಿರದೇ ಬದಲಾಗಿ ವಿಜ್ಞಾನವನ್ನು ಸಮಸಮಾಜಕ್ಕೆ ದುಡಿಯುವ ವಸ್ತುನಿಷ್ಠ ಹಾದಿಯಲ್ಲಿ ನಡೆಸುವುದೇ ಆಗಿದೆ ಹಾಗೂ ಇದರಿಂದಾಗುವ ಸಾಮಾಜಿಕ ಲಾಭಗಳ ಮಾತಾಗಿದೆ. ಹೀಗಾಗಿಯೇ ತೇಜಲ್ ಕನಿಟ್ಕರ್ ಪುರುಷ ಪ್ರಧಾನತೆ ಮತ್ತು ಜಾತಿಪದ್ಧತಿಯ ವಿರುದ್ಧವಾಗಿ ಹೋರಾಡದೇ ಕೇವಲ ವೈಜ್ಞಾನಿಕತೆ ಎಂದು ನಡೆಸುವ ಹೋರಾಟವನ್ನು ತಿರಸ್ಕರಿಸುತ್ತಾರೆ.
ಇನ್ನು ವಿಜ್ಞಾನ ಒಂದು ಪರಿಪೂರ್ಣವಾದ ಜಗತ್ತಿನ ಅರ್ಥೈಸುವಿಕೆಯನ್ನು ಕೊಡಲಿಲ್ಲವೆಂದು ಲೇಖಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದು ಕೂಡ ವಿಜ್ಞಾನ ಏನು ಅನ್ನುವುದರ ಗೊಂದಲದಿಂದಲೇ ಹುಟ್ಟಿದ್ದಾಗಿದೆ. ಆಧುನಿಕ ವಿಜ್ಞಾನ ಮುನ್ನೂರು ನಾಲ್ನೂರು ವರ್ಷಗಳಷ್ಟೇ ಹಳೆಯದಾಗಿದ್ದು ಸಂಸ್ಕೃತಿಯಲ್ಲಿ ವಿಜ್ಞಾನ ಇಳಿಯಲು ಕಾಲವಿದೆ. ಈ ಕೆಲಸವನ್ನು ವಿಜ್ಞಾನವೇ ಮಾಡಬೇಕೆನ್ನುವುದು ಸೋಜಿಗದ ವಿಷಯ. ವಿಜ್ಞಾನ ಈ ಕೆಲಸಕ್ಕಾಗಿ ರಚಿಸಿದ್ದಲ್ಲ. ಎಲ್ಲ ಪ್ರಶ್ನೆಗಳೂ ವೈಜ್ಞಾನಿಕ ಪ್ರಶ್ನೆಗಳಲ್ಲ. ಮನುಷ್ಯ ಜೀವನಕ್ಕೆ ಹತ್ತಿರವಿರುವ ಹಲವು ಪ್ರಶ್ನೆಗಳಿಗೆ ವಿಜ್ಞಾನ ಉತ್ತರ ನೀಡಬಲ್ಲಬಹುದೇ ಹೊರತು ಎಲ್ಲವನ್ನೂ ವಿಜ್ಞಾನದಿಂದಲೇ ಸ್ಥಳಾಂತರಿಸಬಹುದೆನ್ನುವ ವಿಚಾರ ಯಾವ ವಿಜ್ಞಾನಿಯೂ, ವಿಜ್ಞಾನದ ವಕ್ತಾರರೂ ಹೇಳುವುದಿಲ್ಲ. ಈ ಸಂಸ್ಕೃತಿಯಲ್ಲಿ ವಿಜ್ಞಾನದ ಸೇರ್ಪಡೆ ಇನ್ನಷ್ಟಾಗಬೇಕೆನ್ನುವುದೇ ತೇಜಲ್ ಕನಿಟ್ಕರ್ ಅವರ ಮಾತುಗಳ ಮುಖ್ಯಾಂಶವಾಗಿದೆ. ಬಹುಶಃ ಗೊಂದಲಗೊಳಿಸಿರುವ ವಿಚಾರವೆಂದರೆ ಸಂಸ್ಕೃತಿಯ ಹೆಸರಿನಲ್ಲಿ ಅವೈಜ್ಞಾನಿಕ ಪದ್ಧತಿಗಳನ್ನು ಸಮರ್ಥಿಸುವುದನ್ನು ತೇಜಲ್ ಅವರು ವಿರೋಧಿಸಿದ್ದು ಹಾಗೂ ಸಂಸ್ಕೃತಿಯೇ ಮುಖ್ಯವೆಂದು ವಿಜ್ಞಾನವನ್ನು ತಿರಸ್ಕರಿಸುವುದನ್ನು ವಿರೋಧಿಸಿದ್ದು. ಆದರೆ ಲೇಖಕರು ಇದರರ್ಥ ವಿಜ್ಞಾನ ಎಲ್ಲವನ್ನು ಸ್ಥಳಾಂತರಿಸುತ್ತದೆಂಬ ತಪ್ಪುಕಲ್ಪನೆಗೆ ಬಂದಿರುತ್ತಾರೆ.
ನಿರ್ದಿಷ್ಟ ಕ್ರಿಯೆಗಳ ಬಗ್ಗೆ ಮಾತನಾಡುವಾಗ ಸಾಮಾನ್ಯೀಕರಿಸಿ ಬೌದ್ಧಿಕ ಎನಿಸಿಕೊಳ್ಳುವ ಸ್ತರಕ್ಕೆ ಕೊಂಡೊಯ್ಯುವುದು ಪ್ರಾಬಲ್ಯದ ವರ್ಗಗಳ ಪ್ರಮುಖ ಲಕ್ಷಣವಾಗಿದೆ. ಈ ಲೇಖನದಲ್ಲೂ ಅದೇ ಕಂಡು ಬರುತ್ತದೆ. ಒಂದು ಜಾತಿಯನ್ನು ಇನ್ನೊಂದು ಜಾತಿಯಿಂದ ಬೇರೆಯೆನ್ನುವ ಜನಿವಾರ ತೊಡುವುದು ಜಾತೀಯತೆಯ ಮನಸ್ಸುಗಳನ್ನು ಪೋಷಿಸುತ್ತದೆ. ಪುರುಷಪ್ರಧಾನವಾದ ಮದುವೆಯ ಸಂಪ್ರದಾಯಗಳನ್ನು ನಡೆಸುವುದು ಪುರುಷಪ್ರಧಾನತೆಯನ್ನು ಪೋಷಿಸುತ್ತದೆ. ಇವೆಲ್ಲವೂ ಸಾಂಸ್ಕೃತಿಕ ಅಗತ್ಯಗಳು ಎಂದು ಸಮರ್ಥಿಸಿಕೊಂಡರೆ ಸಮಸಮಾಜದ ಕನಸು ಕನಸಾಗಿಯೇ ಉಳಿಯುತ್ತದೆ, ವಿಜ್ಞಾನದ ವಸ್ತುನಿಷ್ಠತೆ ಕೂಡ. ಹಾಗೆಂದು ವಿಜ್ಞಾನದ ನಿರಾಕರಣೆಯೇ ಇದಕ್ಕೆ ಏಕೈಕ ಕಾರಣವೆಂದು ಲೇಖಕರು ಆರೋಪಿಸಿದಂತೆ ತೇಜಲ್ ಅವರು ಹೇಳುತ್ತಿಲ್ಲ. ನಮ್ಮ ಸಮಾಜದ ಅಸಮಾನತೆಗಳಿಗೆ ಕಾರಣಗಳನ್ನು ಸಾವಿತ್ರಿಬಾಯಿ ಫುಲೆ, ಡಾ. ಬಿ.ಆರ್. ಅಂಬೇಡ್ಕರ್ ಮುಂತಾದವರು ವಿಶ್ಲೇಷಿಸಿದ್ದಾರೆ. ತೇಜಲ್ ಅವರು ಇದೇ ಅಂಶಗಳ ಹಿನ್ನಲೆಯಲ್ಲಿ ವಿಜ್ಞಾನವನ್ನು ಮರೆಯುವುದು, ಭೌತವಾದವನ್ನು ಮರೆಯುವುದು ಅಸಮಾನತೆಗಳಿಗೆ ಎಡೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗೂ ಈ ಪ್ರೇರಣೆ ಅಂಬೇಡ್ಕರ್, ವೆಮುಲಾ, ಸಾವಿತ್ರಿಬಾಯಿ ಮುಂತಾದವರಿಂದಲೇ ಬಂದಿದೆ. ಇಷ್ಟಾಗಿ ಇನ್ನು ಬೌದ್ಧಿಕ ಎನಿಸಿಕೊಳ್ಳುವ ಸ್ತರಕ್ಕೆ ಹೋದರು ಲೇಖಕರು ಹೇಳುವ good and beauty ಕಲ್ಪನೆಗಳು ಪ್ರಾಬಲ್ಯದ ವರ್ಗಗಳ ಸಾಮಾಜಿಕ ಸೃಷ್ಟಿಯಿಂದಲೇ ಆಗಿವೆ. ವಿಜ್ಞಾನಕ್ಕಿಂತ ಮುಂಚೆ ದರ್ಶನಶಾಸ್ತ್ರ ಇದರ ಕೆಲಸ ಮಾಡುತ್ತಿತ್ತೆಂದು ಹೇಳುವ ಲೇಖಕರು ಅಸ್ಪೃಶ್ಯತೆ, ಸ್ತ್ರೀ ಅಸಮಾನತೆ, ಜಾತಿ ಪದ್ಧತಿಗಳನ್ನು ಹುಟ್ಟಿಸಿದ್ದು ಯಾವ ಕಲ್ಪನೆ ಅಥವಾ ಶಾಸ್ತ್ರಗಳು ಎಂದು ಹೇಳುವಲ್ಲಿ ವಿಫಲರಾಗುತ್ತಾರೆ. ಬದಲಾಗಿ ಇವು ಜನಕ್ಕೆ ಹೆಚ್ಚು ಹತ್ತಿರವಾದವು ಎಂದಷ್ಟೇ ಹೇಳುತ್ತಾರೆ. ಜನಕ್ಕೆ ಈಗಾಗಲೇ ಹತ್ತಿರವಾಗಿರುವ “ಒಳಿತು ಮತ್ತು ಸೌಂದರ್ಯ”ದ ಕಲ್ಪನೆಗಳು ಲೇಖಕರಿಗೆ ಮತ್ತು ಇನ್ನಿತರ ಶ್ರೇಣಿವ್ಯವಸ್ಥೆಯ ಉಳಿಸಬಯಸುವವರಿಗೆ ಮತ್ತು ಫಲಾನುಭಾವಿಗಳಿಗೆ ಅನುಕೂಲದ್ದಾಗಿರಬಹುದು. ಆದರೆ ವಿಜ್ಞಾನದ ಸತ್ಯಗಳು ಕೂಡ ಒಳಿತು ಮತ್ತು ಸೌಂದರ್ಯದ ಕಲ್ಪನೆಗಳಿಗೆ ಕೂಡಿಕೊಳ್ಳಬಲ್ಲವು. ಉದಾಹರಣೆಗೆ ಪೂರ್ಣಚಂದ್ರತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಇದನ್ನು ಪೂರ್ಣ ಸ್ವರೂಪದಲ್ಲಿ ಕಾಣಬಹುದು.
ಈ ತರಹದ ಒಳಿತು ಹಾಗು ಸೌಂದರ್ಯದ ಕಲ್ಪನೆಯನ್ನು ಸೃಷ್ಟಿಸಲು ಸಾಮಾಜಿಕ ಆಂದೋಲನದ ಅಗತ್ಯ ಇದೆ. ಇದನ್ನೇ ತೇಜಲ್ ಅವರು ಕೂಡ ಧ್ವನಿಸಿದ್ದಾರೆ. ಈ ಆಂದೋಲನ ನಿತ್ಯ ಜೀವನದ ಗೊಡ್ಡುತನ, ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ವ್ಯವಸ್ಥೆಯನ್ನು ಪೋಷಿಸುವ ಗೊಡ್ಡುತನ ಹೋಗುವುದರೊಂದಿಗೇ ಆರಂಭಗೊಳ್ಳಬೇಕಿದೆ. ಇದರಲ್ಲಿ ಲೇಖಕರು ಸಹೃದಯದಿಂದ ಪಾಲ್ಗೊಳ್ಳಲೆಂದು ಆಶಿಸುತ್ತೇನೆ. ಇನ್ನು ವಿಜ್ಞಾನ ಅಣುಬಾಂಬನ್ನು ಸೃಷ್ಟಿಸಿದ ವಿಚಾರಕ್ಕೆ ಬಂದರೆ, ಇದು ತೇಜಲ್ ಅವರ ಹಾಗೂ ನಾನು ಇಂದು ಹೇಳುತ್ತಿರುವ ವಿಚಾರಕ್ಕೆ ಹೊಂದಿಕೊಂಡೇ ಇದೆ. ವಿಜ್ಞಾನವನ್ನು ಅಣುಬಾಂಬ್ ರಚಿಸುವ ವಿಜ್ಞಾನಿಗಳ ಹಾಗೂ ಅವರನ್ನು ಪೋಷಿಸುವ ವ್ಯವಸ್ಥೆಯಿಂದ ಹೊರತಂದು ಜನಸಾಮನ್ಯರದ್ದಾಗಿಸಿಕೊಳ್ಳಬೇಕಾದ ಅಗತ್ಯ ಇದೆ. ಇದನ್ನು ಮಾಡಲು ನೀವೂ ಅಣಿಯಾಗಿ, ನಾನು ಸೇರುತ್ತೇನೆ ಎನ್ನುವುದು ವಿಜ್ಞಾನಿಯಾಗಿ ನನ್ನ ಬೇಡಿಕೆಯಾಗಿದೆ.
ಅಲಹಾಬಾದ್ನ ಹರೀಶ್-ಚಂದ್ರ ಸಂಶೋಧನಾ ಸಂಸ್ಥೆಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಡಾಕ್ಟರೇಟೋತ್ತರ ಸಂಶೋಧಕರು. ಅನುವಾದ ಹಾಗೂ ವಿಜ್ಞಾನ ಸಂವಹನದಲ್ಲಿ ಆಸಕ್ತಿ ಹೊಂದಿದ್ದಾರೆ.
I appreciate your efforts to explain the conflict sir and I’m happy to be a part of this. Though I didn’t find the same kind of clarity in the original write up on which all this discussion started. I think I should clarify few things here since I can’t write again on this now.
My argument originally was not to ignore or derogate the cultural symbolism working in different societies in the name of scientific temperament, for two reasons
1. Cultural symbolisms are not essentially created by upper castes only. Empirically we have the symbolisms and acharas of all the communities which are essential in giving an identity to these.
2. Scientific temperament is not the only answer to all the social problems like casteism, male chauvinism etc. There’s a greater chance of mobilising cultural symbolism for this cause. I would like to see Gandhi as epitome such an experiment. Though he appear to be against technological advancement and reliance on that for everyday life, he tried to a greater extent mobilising people towards common good through cultural and social symbolism.
My point is not at all against propagating scientific temperament in society but making it an ideological manifesto, motivated by one group. I want to remind, after all science is also a tool like religion or politics through which we can achieve greater good of the society. I’m against making a tool a manifesto. Because we should not forget the concerns of any specific group at a specific time, are not the concerns of all the humanity and any specific group is prone to selfish attainments when the circumstances allow.
And I stick to my comments on the people who make a beautiful academic descipline a manifesto.
Thank you
Hi,
Thanks for your comment.
I think I have addressed the other points already. Regarding what you say about making a manifesto of science, I see no problems with it. As I already explained in the article science when used for social movements can be very valuable. Therefore propagating science and wanting society to be more equal through this can only be problematic to someone who doesn’t want the societal change. Science is definitely not just a “beautiful academic discipline”. Scientific truth has a lot to guide us in our societal structure as many of them are based on socially constructed truths. Making science just a beautiful “academic” discipline and not more aligns perfectly with the interests of the privileged. You attribute the intentions laid out in Kanitkar’s article as interests of a specific group. If you can tell us which particular interest I would be thankful. Do you not want to see patriarchy go away? Do you not want to see the annihilation of caste? If not then I think you seeing this as the interest of only one group is only a cover up.
Thank you.
As a student of science and technology studies (STS), I think we need to think beyond the dichotomies of scientific and non- scientific, rationality and irrationality, and science and religion. STS have been at the forefront of not only critiquing the powerful institutions of science and religion but have also been at the forefront of moving us away from the totalizing language of “objective truth” and “objectivity. Recently published book called Holy Science: The Biopolitics of Hindu Nationalism (Feminist Technosciences) by STS scholar Professor Banu Subramaniam provides new insights to go beyond these dichotomies. I am attaching couple of quotes from her book. It may be useful.
“What a wonderful allegory this is for our times! We live in an era in
which the powerful make up stories at will, and their influential allies
repeat them, embellish them further, or just stay silent in their complicity.
As fictional worlds propagate, the real world seems atwitter! At the same
time, the powerful cry foul over news stories, decrying them as “fake
news.” Other powerful people are outraged, and they call for a regime of
truth, facts, and fact check. Yet others rejoice at the arrival of a purity
politics that promises to purge outsiders from their midst and their gates.
Through it all, the voices of the powerless are drowned out in a world
where increasingly the outrageous competes with the absurd. The point
of a public discourse of proliferating stories and fake news is, of course,
to obfuscate, to muddy the waters, to dissolve the boundaries between
falsity and truth. This is very familiar territory for those in the margins
of power—feminists, people of color, the colonized, those from the third
world, queer people, those with disabilities—all those “others” who inhabit
nonnormative spaces. Those in the margins have always only known a
world where their lives can never be acknowledged by power. It is a surreal
existence”
“A quick perusal of science will easily demonstrate how time and time again, and
seemingly magically, it is the powerless who are deemed biologically the
most deficient. It is the bodies of women that are endlessly policed—as
hyper fertile or barren, as surrogates, or as exploited bodies. Similarly, it
is the powerless who are relegated to the margins of religion. The impure
“untouchables,” menstruating bodies, and queer subjects are always left
outside the doors of worship. The “pure” are always the powerful, and
the “impure,” polluting bodies are simultaneously rejected by the two
powerful forces of science and religion as inferior and deficient”
“Archaic modernities invite new interventions in our theories and practices,
new alternatives that wrestle with oxymoronic imagery. The challenge
is in creating new frameworks in which to think about science and
religion. Most responses to these recent developments have tended to
glorify prescientific utopias and revive our dreams of a glorious history
and our nostalgia for the simple days of yesteryear, a world benefits of scientific
and technological innovations, where humanity and technology
don’t begin to fuse dangerously. Alternately, secular activists have invoked
a defense of science, scientific objectivity, and rationality. These critics
have historically fought and continue to fight religious nationalism with
the rhetoric of science and scientific nationalism. For them, science is our
only savior from the superstition and irrationality of religion. At the heart
of many of these critiques is the juxtaposing of science and religion as
oppositional and mutually exclusive practices.
In this archaic modernity we get to imagine only within the bounded
myth of a Hindu India, with a rewritten past, a constructed present, and
an impoverished vision of a future. However, for centuries India has been
a land with multiple religions and the birthplace of several new ones.
These centuries of diversity cannot be erased for a mythical version of
Hindu India. The project of decolonization in this age of globalization
means taking the project of rethinking “development” and its deployment
in the archaic and the modern, the religious and the scientific. We
can imagine India in all its rich traditions—Western science, alternate
sciences, many religious philosophies and traditions, and indigenous
knowledge systems—to re-envision the progressive possibilities of science
and religion. We can imagine a new future in an unbounded imagination
beyond the worlds of the archaic and the modern.”
You elucidated my problem exactly that the people who urge for a sympathetic study iof culture and society are not against science or science being used for social change. Or they’re neither against changing casteism or patriarchy. I gave this correction previously too. I think you missed it.
About science giving stronghold for social change, so far it gives so good. That doesn’t imply to demean the value of cultural aspects.
You spoke about generalisations before, but that’s what we see in Tejal’s article. Generalisation and dichotomisation. Before trying to change the society, one needs to understand it sympathetically, it’s lacking in the original article. And it’s evident though you tried to cover up. That’s what I stated above.
And about your opinions of making science a manifesto. After all it’s yours. Period.
Hi, firstly the science is not mine even though I am a scientist. Science is also yours. Secondly Tejal’s views are expressed in a speech among many others in a forum and another brief interview. it is hard to say if her views are fully expressed. I tried to explain using what I know of science why what she said makes science. Also while you clarified again that you are not against these social changes you still do not explain why her concerns or my concerns point to “making it an ideological manifesto, motivated by one group”. I would like to know where in my explanation or in her piece this one group and their concerns come up? Which claim or desire do you see as exclusionary?
Its about opinion sir, not science as yours. Ok I’ll try once again to clarify myself.
We all want social changes towards better humanity and society sir. I don’t have any doubt in that. In spite of that I criticised Ms. Tejal’s views. Because she only demeans the simplistic symbolic practices of communities. (May be it happened because the talk was randomly chosen as you said, I don’t know) And accepting or tolerating such practices, she calls as obscurantism, which should not be tolerated. As a person working in social and cultural sphere for more than 10 years my experience is we can teach the society through the same kind of symbols which are demeaned for the betterment also. Moreover my observation is you can’t teach a society by distancing ourselves from that or by just blaming. For that and for many more reasons at least we need to look at things in a sympathetic manner. I didn’t feel that in Tejal’s talk. You at least expressed your concerns in a better manner. I appreciate that. Yet I should say some of your observations are textual than empirical. Like by following or developing scientific temperament society eventually changes in a positive manner. Like materialism brings more good than symbolism, it may cultural or religious. We have the contrary situation. Yes it gave a great deal of rationality to ourselves. So far so good. That won’t make science as supreme or sole agency in bringing positive changes. I personally see more opportunity in cultural mobilisations done with genuine interests. (I suggest you to go through some writings of Ziauddin Sardar on this failure of modernism project)
Then, I have my reservations in proclaiming science as a tool to eradicate casteism or patriarchy or any such issue, in a distant manner also. As you only said science can bring the clarity and solid foundations for our cultural and social movements. But Don’t you think, Our understanding of casteism or patriarchy etc need not to confine to the understandings of Dr.Ambedkar’s time? Yes they did a great deal no doubt in that. Yet when we look from 21 century, after 70-80 years of messing around casteism, the foundations of many of our understandings need to be questioned. I strongly feel this. I feel the same with our understanding of Nationalism proclaimed by RSS and BJP also. These fields need lot of studies to happen which are free from western modernistic perspective or orientalism as we call it. So I can’t say yes if somebody says science should help in eradicating casteism. It’s much more complex sir. (I prefer you read S N Balagangadhara on these issues, there are some fundamental questions raised by many such scholars including Ashis Nandy)
And in bringing RSS as a villain in every discussion is biggest fanciful mistake the liberals are making from a long time. I’m sure that none of these people are closely acquainted with RSS & without knowing what’s the strategy of RSS and what not such comments are made everywhere. It’s again a complex issue. Don’t judge by stray statements of people identified with RSS as the agenda of RSS. You can understand neither RSS nor the strategy they play by that. That’s why they’re successful in propogating their interests. They know all the wrong opinions serve for their work. And my observation is they’re working sincerely at different levels of society. I personally know many good people there with genuine concerns for society. Their methods may be different but the goals are same. Don’t you think this made the original article one sided? Not all RSS people are devils sir, neither all are unscientific fools, it’s a stereotype.
If you are also sensitive in such issues I think there’s no point in arguing, bcs I know we’ll meet at some point for sure. Thank you for interacting sir. I think I answered your questions.
Hi. I should have mentioned this before. Firstly, you need not call me sir. I am quite young and I find such salutations quite feudalist. Secondly, thanks a lot for elucidating your points. I too do not think scientific temperament is the sole agent which will change the society. I have explained the context in my write up above and I hope you appreciate it. I think when something is lacking in a movement there will be people who need to stress the need for it. I feel that is what Dr. Tejal Kanitkar has been doing. At the same time, she is also calling for some radical changes. While I feel a dialogue is always necessary some radical changes are also needed to change the society. Otherwise people who are happy with status quo will not change. I will look at the references you suggested. Regarding RSS, I feel what one is speaking about is what the organisation does to change the structure of the society. Many fascist organisations have social work attached with them. If we are considering at individual level, people are very complex and can not be characterised by organisations they are part of. But RSS as an organisation has definitely contributed towards the problems in our modern society. Their aims are definitely not the same. There is a lot of social capital attached to the RSS and there is a lot of complexity in the way it works. But what is trying to achieve is quite clear. It is not true that many of us are not familiar with RSS. Many of us grew with RSS and moved away because of these issues. Many people who appreciate the status quo can wear RSS as a mask. RSS is the social body which enables VHP, Bhajrangdal etc to do the dirty work and gives a convenient make up for the socially privileged to look noble. This, I am convinced of after many years of association with RSS and their associates. We can of course discuss if and when we meet.