ಪ್ರಕೃತಿ ಪ್ರಕಾಶನದ ಬಗ್ಗೆ – ವಿಕ್ರಮ ಹತ್ವಾರ್

ಸೆಪ್ಟೆಂಬರ್ ೧೪ ರ ಬೆಳಿಗ್ಗೆ ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ಅನಾಮಧೇಯ ಕವಿಯೊಬ್ಬರ ಕವನ ಸಂಕಲನ ‘ರಾಮು ಕವಿತೆಗಳು‘ ಋತುಮಾನ ಅಂತರ್ಜಾಲ ತಾಣದಲ್ಲಿ ಬಿಡುಗಡೆಯಾಗಲಿದೆ. ಯಾಕೆ ಈ ಪುಸ್ತಕವನ್ನೆ ಮೊದಲ ಪ್ರಕಾಶನಕ್ಕೆ ಆಯ್ದುಕೊಳ್ಳಲಾಯಿತು ಎಂಬ ಬಗ್ಗೆ ವಿಕ್ರಮ್ ಹತ್ವಾರ್ ಇಲ್ಲಿ ಮಾತನಾಡಿದ್ದಾರೆ. ಇಂದಿನಿಂದಲೇ ನೀವು ಪುಸ್ತಕವನ್ನು ಋತುಮಾನ ಅಂತರ್ಜಾಲ ಮಳಿಗೆಯ ಈ ಕೊಂಡಿಯಲ್ಲಿ ಪ್ರೀ ಆರ್ಡರ್ ಮಾಡಬಹುದು.

http://store.ruthumana.com/product/ramu_kavitegalu/

ಕವಿತೆಯು ಭಾಷೆಯಲ್ಲಿಯೇ ಆಗಬೇಕು ಎಂಬುದನ್ನು ವ್ರತದಂತೆ ಪಾಲಿಸುವ ಇಲ್ಲಿನ ಕವಿತೆಗಳು ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯಕ್ಕೆ ಹೊಸ ದನಿಯನ್ನು ಸೇರಿಸುತ್ತಿವೆ. ಮನುಷ್ಯನ ಅಸಾಹಯಕತೆ, ಸಂಭ್ರಮ, ವಿರಾಹ, ವಿಷಾದ, ನೋವು, ಪ್ರತಿಭಟನೆ ಇತ್ಯಾದಿ ಭಾವಗಳನ್ನು ಅತಿ ಸರಳ ಭಾಷೆಯಲ್ಲಿ ಉಸುರುವ ಈ ಕವಿತೆಗಳು ಭಾಷಾಲೋಕದ ಬೆರಗನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕಾರಣದಿಂದಲೇ ತನ್ನದೇ ವಿಶಿಷ್ಠ ಭಾಷೆ ಮತ್ತು ನುಡಿಗಟ್ಟನ್ನು ಸೃಷ್ಟಿಸಿಕೊಂಡಿದೆ.

ಪ್ರತಿಕ್ರಿಯಿಸಿ