ಸಾಹಿತ್ಯ ಚಿಂತನೆ, ಕ್ಲಾಸಿಕಲ್ ಸಾಹಿತ್ಯ, ಜಾನಪದ, ಅನುವಾದ , ಸಂಸ್ಕ್ರತಿ ವಿಚಾರ , ತೌಲನಿಕ ಅಧ್ಯಯನ ಹೀಗೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಎ. ಕೆ ರಾಮಾನುಜನ್ ನಮ್ಮನ್ನು ಆಗಲಿ ಈ ವರ್ಷಕ್ಕೆ ೨೫ ವರ್ಷಗಳು ಸಂದವು . ಇಂದವರ ಜನ್ಮ ದಿನ . ನವ್ಯ ಸಾಹಿತ್ಯದ ಪ್ರವರ್ಧಮಾನದ ದಿನಗಳಲ್ಲೇ ಬರೆದರೂ ಅಡಿಗರ ಲಯ ಮತ್ತು ಚಂದ್ರಶೇಖರ ಪಾಟೀಲರ ವ್ಯಂಗ್ಯ ಎರಡಕ್ಕೂ ಭಿನ್ನವಾಗಿ ಬರೆದ ರಾಮಾನುಜನ್ , ಬಹುಸಂಸ್ಕೃತಿಯ ಪ್ರಬಲ ಪ್ರತಿಪಾದಕರಾಗಿ ದಕ್ಷಿಣ ಏಷ್ಯಾದ ಭಾಷೆ ಮತ್ತು ಸಂಸ್ಕೃತಿಗಳ ಅಧ್ಯಯನದಲ್ಲೂ ಅನನ್ಯ ಕೊಡುಗೆ ನೀಡಿದವರು . ಎಲ್ಲಾ ಕಾಲಕ್ಕೆ ಸಲ್ಲುವ ವಿಚಾರಗಳನ್ನು ಬರೆದ , ಹೊಸ ವಿಚಾರಗಳನ್ನು ಬರೆವ , ಬಗೆವ ಕ್ರಮಗಳನ್ನು ತೋರಿಸಿಕೊಟ್ಟ ರಾಮಾನುಜನ್ ರನ್ನು ನೆನೆಯುವುದು ಋತುಮಾನಕ್ಕೂ ಸಂತಸದ ಸಂಗತಿ. ಮುಂದಿನ ಒಂದು ವಾರ ರಾಮಾನುಜನ್ ರೊಡನೆ ಕಳೆಯೋಣ..
ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ (RRC) ಪೋರ್ಡ ಫೌಂಡೇಶನ್ ನೆರವಿನಿಂದ ೧೯೮೯-೯೦ ರ ಕಾಲಾವಧಿಯಲ್ಲಿ ಕರ್ನಾಟಕದ ಮತ್ತು ಆಂಧ್ರದ ಯುವ ವಿದ್ವಾಂಸರಿಗಾಗಿ ಅಂತರರಾಷ್ಟ್ರೀಯ ಜಾನಪದ ಅಧ್ಯಯನದ ಬಗ್ಗೆ ತಲಾ ೨೦ ದಿನಗಳ ನಾಲ್ಕು ಕಮ್ಮಟಗಳನ್ನು ಉಡುಪಿ,ಮೈಸೂರು,ಧಾರವಾಡ ಮತ್ತು ಹೈದರಾಬಾದ್ ಹೀಗೆ ನಾಲ್ಕು ಕಡೆಗಳಲ್ಲಿ ಏರ್ಪಡಿಸಲಾಗಿತ್ತು, ಇದರಲ್ಲಿ ಭಾರತದ ಮತ್ತು ಅಮೆರಿಕಾದ ಪ್ರಮುಖ ಜಾನಪದ ವಿದ್ವಾಂಸರು ಉಪನ್ಯಾಸಗಳನ್ನು ನೀಡಿದರು. ಮೈಸೂರಿನಲ್ಲಿ ನಡೆದ ಎರಡನೆಯ ಕಮ್ಮಟದಲ್ಲಿ ಪ್ರೊ.ಎ, ರಾಮಾನುಜನ್ ಜನಪದ ಕಥೆಗಳ ಬಗ್ಗೆ ಕೆಲವು ಉಪನ್ಯಾಸಗಳನ್ನು ನೀಡಿದರು.
8/07/1988 ರಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾದ ಕಾರ್ಯಾಗಾರದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಅವರು ಮಾಡಿದ ಭಾಷಣ ಇದು.
© Director RRC, Udupi