ಈ ಹೊತ್ತಿಗೆ ಕಥಾ ಪ್ರಶಸ್ತಿಗೆ ಕತೆಗಳ ಆಹ್ವಾನ

ಬೆಂಗಳೂರಿನಲ್ಲಿ ಸಾಹಿತ್ಯದ ವಿವಿಧ ಪ್ರಕಾರದ ಪುಸ್ತಕಗಳ ಕುರಿತು ಸಂವಾದ, ಕಮ್ಮಟಗಳು ಹಾಗೂ ಇನ್ನಿತರ ಸಾಹಿತ್ಯ ಚಟುವಟಿಕೆಗಳನ್ನು೨೦೧೩ರಿಂದ ನಡೆಸಿಕೊಂಡು ಬರುತ್ತಿರುವ `ಈ ಹೊತ್ತಿಗೆ’ ಸಂಸ್ಥೆಯು

 1. ಈ ವರ್ಷದ   ಹೊತ್ತಿಗೆ ಕಥಾ ಪ್ರಶಸ್ತಿ’ಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಆಹ್ವಾನಿಸುತ್ತಿದೆ ಮತ್ತು

      2. ೨೬ ವರ್ಷದೊಳಗಿನವರಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ.

 


 • ಅಪ್ರಕಟಿತ ಕಥಾ ಸಂಕಲನಕ್ಕಾಗಿ 10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಮಾಣಪತ್ರ.

ನಿಯಮಗಳು :

 1. ಅಪ್ರಕಟಿತ ಸಂಕಲನದಲ್ಲಿರುವ ಕಥೆಗಳು ಸ್ವತಂತ್ರವಾಗಿರಬೇಕು. ಸಂಕಲನದಲ್ಲಿ ಕಡ್ಡಾಯವಾಗಿ ಅನುವಾದಿತ ಕಥೆಗಳಿರಕೂಡದು.
 2. ಸಂಕಲನವು 8ರಿಂದ 10 ಕಥೆಗಳನ್ನು ಒಳಗೊಂಡಿರಬೇಕು.
 3. ಡಿಟಿಪಿ ಮಾಡಿಸಿ, ಬೈಂಡ್ ಮಾಡಿಸಿದ ಅಪ್ರಕಟಿತ ಸಂಕಲನದ ಮೂರು ಪ್ರತಿಗಳನ್ನು ಈ ಹೊತ್ತಿಗೆಯ ಅಂಚೆ ವಿಳಾಸಕ್ಕೆ ಕಳುಹಿಸಿಕೊಡಬೇಕು.
 4. ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದಿರಬೇಕು. ಯಾವುದೇ ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು.
 5. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಪ್ರಶಸ್ತಿ ಪಡೆದ ಸಂಕಲನವು ಮುದ್ರಣಗೊಳ್ಳಬೇಕು. ಕೃತಿ ಮುದ್ರಣಗೊಂಡರೆ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗು ಪ್ರಶಸ್ತಿ ಫಲಕವು ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ಸಲ್ಲುತ್ತದೆ.
 6. ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗು ಪುಸ್ತಕದ ಒಳ ಪುಟದಲ್ಲಿ ‘ಈ ಹೊತ್ತಿಗೆ ಕಥಾ ಪ್ರಶಸ್ತಿ ವಿಜೇತ ಕೃತಿ’ ಎಂದು ಕಡ್ಡಾಯವಾಗಿ ಮುದ್ರಿಸಿರಬೇಕು.
 7. ಕಥಾ ಸಂಕಲನಗಳನ್ನು ಇ ಮೇಲ್ ಮೂಲಕ ಸ್ವೀಕಸಲಾಗುವುದಿಲ್ಲ.

 • ೨೬ ವರ್ಷದೊಳಗಿನವರಿಗಾಗಿ ಕಥಾ ಸ್ಪರ್ಧೆ
  1. ಮೊದಲನೆಯ ಬಹುಮಾನ : ₹ 5000 ನಗದು ಹಾಗು ಪ್ರಮಾಣಪತ್ರ
  2. ಎರಡನೆಯ ಬಹುಮಾನ  : ₹ 3000 ನಗದು ಹಾಗು ಪ್ರಮಾಣಪತ್ರ
  3. ಮೂರನೆಯ ಬಹುಮಾನ : ₹ 2000 ನಗದು ಹಾಗು ಪ್ರಮಾಣಪತ್ರ

ನಿಯಮಗಳು :
1. ಸ್ವತಂತ್ರವಾಗಿದ್ದು ಅಪ್ರಕಟಿತ ಕಥೆಯಾಗಿರಬೇಕು. ( ಬ್ಲಾಗ್/ವೆಬ್ ಸೈಟ್/ ಫೇಸ್ ಬುಕ್ ಮುಂತಾದ ಯಾವುದೇ ತಾಣಗಳಲ್ಲಿಯೂ ಪ್ರಕಟವಾಗಿರಬಾರದು)
2. ಪದಮಿತಿ ಗರಿಷ್ಠ 2000 ಪದಗಳು ಮಾತ್ರ.
3. ಇ-ಮೇಲ್ ಮುಖಾಂತರ ಕಳುಹಿಸುವವರು ಯೂನಿಕೋಡ್ ತಂತ್ರಾಂಶವನ್ನು ಬಳಸಬೇಕು. ಮೇಲ್ ವಿಳಾಸ[email protected]
4. ಹಸ್ತಪ್ರತಿ ಕಳುಹಿಸುವವರು ಪುಟದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ , ಚಿತ್ತುಗಳಿಲ್ಲದಂತೆ ಬರೆದು ಕಳುಹಿಸಬೇಕು.
5. ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಪೂರ್ಣ ವಿಳಾಸ, ಸಂಪರ್ಕ ಸಂಖ್ಯೆಯನ್ನು ಬರೆದಿರಬೇಕು.    6. ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು.
7. ವಯಸ್ಸಿನ ದೃಢೀಕರಣ ಪತ್ರವನ್ನು ಕಥೆಯೊಂದಿಗೆ ಕಳುಹಿಸುವುದು ಕಡ್ಡಾಯ.

ನಿಮ್ಮ  ಅಪ್ರಕಟಿತ ಕಥಾ ಸಂಕಲನ ಹಾಗು ಕಥೆ ನಮಗೆ ತಲುಪಲು ಕೊನೆಯ ದಿನಾಂಕ :20 ಡಿಸೆಂಬರ್ 2019

ಕಥಾ ಸಂಕಲನಗಳನ್ನಾಗಲಿ, ಕಥೆಗಳನ್ನಾಗಲಿ ಹಿಂದಿರುಗಿಸಲಾಗುವುದಿಲ್ಲ.
ಹೊತ್ತಿಗೆಯ ತೀರ್ಮಾನವೇ ಅಂತಿಮ.

2020ರ ಫೆಬ್ರವರಿಯಲ್ಲಿ ನಡೆಯುವ ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ, ಬಹುಮಾನಗಳನ್ನು ನೀಡಲಾಗುವುದು.

ಹಸ್ತಪ್ರತಿ ಕಳುಹಿಸುವವರಿಗಾಗಿ ವಿಳಾಸ :
ಈ ಹೊತ್ತಿಗೆ, #65 , ಮುಗುಳ್ನಗೆ, 3ನೇಯ ಅಡ್ಡರಸ್ತೆ,
ಪಿ.ಎನ್.ಬಿ. ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ,
ಬೆಂಗಳೂರು – 560062

ಪ್ರತಿಕ್ರಿಯಿಸಿ