2020ರ ವಿಶ್ವರಂಗಭೂಮಿ ದಿನಾಚರಣೆಯ ರಂಗ ಸಂದೇಶ – ಶಾಹೀದ್ ನದೀಂ

ಪ್ರತಿವರ್ಷ ಶಾಂಘೈನಲ್ಲಿರುವ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ಐಟಿಐ) ವಿಶ್ವ ರಂಗದಿನದ ಅಂಗವಾಗಿ ವಿಶ್ವಮಟ್ಟದ ಹೆಸರಾಂತ ರಂಗಭೂಮಿ ಕಲಾವಿದರನ್ನು ಸಂದೇಶವನ್ನು ನೀಡಲು ಆಹ್ವಾನಿಸುತ್ತದೆ. ಈ ವರ್ಷದ ಸಂದೇಶವನ್ನು ಪಾಕಿಸ್ತಾನಿ ನಾಟಕಕಾರ ಶಾಹಿದ್ ನದೀಮ್ ಬರೆದಿದ್ದಾರೆ.

ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾದ ಸಮಯದಲ್ಲಿ, ಶಾಹಿದ್ ನದೀಮ್ ಅವರ ಈ ಸಂದೇಶವು ರಂಗಭೂಮಿ ಮಾಡಬಹುದಾದ ಮತ್ತು ನಿರ್ವಹಿಸಬೇಕಾದ ಪವಿತ್ರ ಮಾನವೀಯ ಪಾತ್ರವನ್ನು ನಮಗೆ ನೆನಪಿಸುತ್ತದೆ. ಈ ಸಂದೇಶವು ಧರ್ಮ , ಗಡಿ ರೇಖೆಗಳ ಕಟ್ಟಳೆ ಮೀರಿ ಸಾಂಸ್ಕ್ಕ್ರತಿಕ ಚಟುವಟಿಕೆಗಳಲ್ಲಿ ನಿರತರಾಗಿರುವವರಿಗೆ ಸ್ಪೂರ್ತಿಯಾಗಲಿದೆ ಎಂದು ನಾವು ಭಾವಿಸುತ್ತೇವೆ.

2020ರ ವಿಶ್ವರಂಗಭೂಮಿ ಸಂದೇಶ ನೀಡಲು ಆಯ್ಕೆಯಾದ ರಂಗಕರ್ಮಿ, ನಾಟಕಕಾರ, ಪತ್ರಕರ್ತ, ಶಾಹಿದ್‌ನಾದೀಂ ತಮ್ಮ ಅಜೋಕಾ ರಂಗಸಂಸ್ಥಯ ಮೂಲಕ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ರಂಗ ಪ್ರದರ್ಶನ ನೀಡಿದ್ದಾರೆ.

1947 ಜನವರಿ 1 ರಂದು ಕಾಶ್ಮೀರದಲ್ಲಿ ಜನಿಸಿದ ಶಾಹಿದ್‌ ನಾದೀಂ ವಿಭಜನೆಯ ಕಾರಣಗಳಿಂದ ಒಂದು ವರ್ಷ ಪ್ರಾಯದ ಮಗುವಾಗಿದ್ದಾಗಲೇ ಪಾಕಿಸ್ತಾನದ ಲಾಹೋರ್‌ಗೆ ತೆರಳಿ ಅಲ್ಲಿಯೇ ಶಿಕ್ಷಣ ಪಡೆದು ರಂಗಭೂಮಿಯ ಪ್ರಮುಖ ಕಾರ್ಯಕರ್ತರಾಗುತ್ತಾರೆ.

ಸದಾ ಸಮಕಾಲೀನ ವಸ್ತುವುಳ್ಳ ನಾಟಕವನ್ನೇ ಪ್ರಯೋಗಿಸುವ ತಮ್ಮ ಅಜೋಕಾ ರಂಗಸಂಸ್ಥೆ ಆಯ್ದುಕೊಳ್ಳುವ ವಿಚಾರಗಳು ಯಾವತ್ತೂ ಧರ್ಮ ಸಹಿಷುತೆ. ಶಾಂತಿ, ಮಾನವ ಹಕ್ಕು ಹಾಗೂ ಲಿಂಗ ಸಮಾನತೆಯ ಕುರಿತೇ ಆಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶಾಹಿದ್‌ ನಾದೀಂ ತಮಗೆ ಪ್ರಾಪ್ತವಾಗಿರುವ ಈ ಸಂದೇಶದ ಗೌರವವನ್ನು ಅಜೋಕಾ ಸಂಸ್ಥೆಯ ಕರ್ತ ಶಕ್ತಿಯಾಗಿದ್ದ ತಮ್ಮ ಮಡದಿ ಮದೀಹಾ ಶಾಹರ್‌ರವರಿಗೆ ಹಾಗೂ ತನ್ನ ದೇಶ ಪಾಕಿಸ್ತಾನದ ಎಲ್ಲ ರಂಗ ಕರ್ಮಿಗಳಿಗೆ ಗೌರವದಿಂದ ಅರ್ಪಿಸುತ್ತಾರೆ.

ರಂಗಭೂಮಿ ದೇಗುಲವಾಗಿ ..

ವಿಶ್ವ ರಂಗದಿನ ೨೦೨೦ರ ಸಂದೇಶವ ನೀಡುವ ಅವಕಾಶ ನನಗೆ ದೊರೆತಿರುವ ಬಹು ದೊಡ್ಡ ಗೌರವ. ಇದು ನನ್ನನ್ನು ವಿನಮ್ರನನ್ನಾಗಿ ಮಾಡಿದೆ ಎಂಬುದು ಒಂದೆಡೆಯಾದರೆ, ಐಟಿಐ (ಇಂಟರ್‌ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್) ಸಂಸ್ಥೆಯು ಪಾಕಿಸ್ತಾನದ ರಂಗಚಳವಳಿಗೆ ಮತ್ತು ಪಾಕಿಸ್ತಾನದಂತಹ ದೇಶಕ್ಕೆ ಈ ಅವಕಾಶ ಒದಗಿಸಿರುವುದು ಬಹುದೊಡ್ಡ ಸಂಭ್ರಮದ ವಿಷಯವೂ ಹೌದು. ಇದು ‘ಅಜೋಕ ಥಿಯೇಟರ್’ ಸ್ಥಾಪಕರಾದ ಮತ್ತು ನಮ್ಮ ರಂಗಭೂಮಿಯ ಬಹುದೊಡ್ಡ ಮಾದರಿಗಳಲ್ಲಿ ಒಬ್ಬರಾದ, ನನ್ನ ಜೀವನದ ಜೊತೆಗಾತಿಯಾಗಿದ್ದ, ಎರಡು ವರ್ಷಗಳ ಹಿಂದೆ ನಮ್ಮನ್ನಗಲಿದ ಮದೀಹ ಗೌಹರ್ ಅವರ ಕೆಲಸಗಳಿಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಇಂದು ರಂಗಚಳವಳಿಯನ್ನು ಉಳಿಸಿ ಬೆಳೆಸುವುದು ಯಾವುದೇ ರಂಗತಂಡಕ್ಕೆ ಎಂದಿಗೂ ಸುಗಮವಾದ ಕೆಲಸವಲ್ಲ. ಅದೊಂದು ಹೋರಾಟ.

ನಾನು ಮೂಲತಃ ಹಲವಾರು ಮಿಲಿಟರಿ ಸರ್ವಾಧಿಕಾರಿಗಳ ಆಡಳಿತಕ್ಕೆ ಸಾಕ್ಷಿಯಾದವನು. ಭಯಾನಕವಾದ ಧಾರ್ಮಿಕ ಮೂಲಭೂತವಾದದಿಂದ ತತ್ತರಿಸುತ್ತಿರುವ. ಭೀಭತ್ಸ ಉಗ್ರಗಾಮಿ ಪ್ರತಿಪಾದಕರಿರುವ, ಧಾರ್ಮಿಕ ಕಟ್ಟುಪಾಡುಗಳುಳ್ಳ ಮುಸ್ಲಿಂ ರಾಷ್ಟ್ರದ ಪ್ರಜೆ” ನಾನು. ಯಾವ ದೇಶದೊಂದಿಗೆ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆಯನ್ನು ಹಂಚಿಕೊಂಡಿದ್ದೇವೆಯೋ ಅಂತಹ ಭಾರತವೆಂಬ ನೆರೆಯ ರಾಷ್ಟ್ರದೊಂದಿಗೆ ಮೂರು ಬಾರಿ ಭಾರೀ ಯುದ್ಧ ನಡೆದಾಗ ಅದರ ಕಷ್ಟ ದುಃಖಗಳನ್ನು ಸಮೀಪದಿಂದ ಕಂಡವರು ನಾವು ಇವತ್ತಿಗೂ ಕೂಡಾ ನಾವು ನಮ್ಮ ಅವಳಿ ಸೋದರ ರಾಷ್ಟ್ರವಾಗಿರುವ ನೆರೆದೇಶದೊಂದಿಗೆ ಸದಾ ಯುದ್ಧವೆಂಬ ಉನ್ಮಾದದ ಕರಿನೆರಳಲ್ಲಿ ಅದರಲ್ಲೂ ಪರಮಾಣು ಅಸ್ತ್ರಗಳನ್ನು ಸಂಗ್ರಹಿಸಿ ಆತಂಕದಲ್ಲಿ ಮುಳುಗಿದ್ದೇವೆ. ಹಾಗಿದ್ದರೂ ನಾವು ತಮಾಷೆಗಾಗಿ ಹೇಳುವುದುಂಟು. ಎಲ್ಲರಿಗೆ ಕಷ್ಟಕಾಲ ಬಂದಾಗ ಅದು ರಂಗಭೂಮಿಯವರಿಗೆ” ಒಳ್ಳೆಯ ಕಾಲ ಎಂಬುದಾಗಿ ಅದಕ್ಕಾಗಿಯೇ ಆಡು ಮಾತು ಬಂದಿರಬೇಕು. ಸಂಕಷ್ಟದ ಸಮಯವನ್ನುವುದು ರಂಗಭೂಮಿ ಚಟುವಟಿಕೆಗಳಿಗೆ ಸುಸಂದರ್ಭದ ಅವಕಾಶ ಕಾಲ ಎಂದು ಇಂತಹ ಸಂದರ್ಭಗಳಲ್ಲಿ ಸವಾಲುಗಳನ್ನು ಎದುರಿಸುವಲ್ಲಿ ಯಾವುದೇ ಹಿ೦ಜರಿಕೆಗಳಿರುವುದಿಲ್ಲ. ಪ್ರಸ್ತುತಿಯಲ್ಲಿ ಯಾವುದೇ ಸಂದಿಗ್ದತೆಗಳಿರುವುದಿಲ್ಲ.

ಇಂತಹ ಸವಾಲುಗಳನ್ನು ಎದುರಿಸಲು, ಶಾಂತಿಯನ್ನು ಸಂರಕ್ಷಿಸಲು, ನಾನು ಮತ್ತು ನನ್ನ ರಂಗ ತಂಡ ಅಜೋಕಾದ ನಾವು ಕಳೆದ 36 ವರ್ಷಗಳಿಂದಲೂ ಹೆಚ್ಚು ಕಾಲ ತೂಗಾಡುವ ಹಗ್ಗದ ಮೇಲೆ ನಡೆಯುವ ರ೦ಗ ಸಾಹಸ ಮಾಡುತ್ತಿದ್ದೇವೆ. ಮನೋರಂಜನೆ ಮತ್ತು ಶಿಕ್ಷಣದ ಮಹತ್ವವನ್ನು ಜೊತೆ ಜೊತೆಯಾಗಿ ತಿಳಿಸುವುದರ ಮೂಲಕ ಶಾಂತಿ ಸಂರಕ್ಷಣೆಯ ಕೆಲಸವನ್ನು ಮಾಡುತ್ತಿದ್ದೇವೆ. ಭೂತಕಾಲದ ಹುಡುಕಾಟ ಮತ್ತು ಕಲಿಕೆ ಆ ಮೂಲಕ ಭವಿತವ್ಯಕ್ಕೆ ತಯಾರಿ, ಸೃಜನ ಶೀಲತೆ ಸಹಿತ ಅಭಿವ್ಯಕ್ತಿ ಹಾಗೂ ಪ್ರಭುತ್ವದ ಜೊತೆಗಿನ ಸಾಹಸಮಯವಗುವಿಕೆ, ಸಾಮಾಜಿಕವಾಗಿ ಸಂಕಷ್ಟದ ಹಾಗೂ ಆರ್ಥಿಕವಾಗಿ ಕುಸಿದು ಹೋದ ರಂಗಭೂಮಿ ಇವುಗಳೆಲ್ಲರ ನಡುವೆ ಸಮಕಾಲೀನ ಸಮತೋಲನವನ್ನು ನಿರ್ವಹಿಸಬೇಕಾದ ಅಗತ್ಯ ಇದೆ ಎನ್ನುವುದನ್ನು ತಿಳಿದಿದ್ದೇವೆ.

1980ರ ದಶಕದ ಪಾಕಿಸ್ತಾನದ ಮಿಲಿಟರಿ ಆಡಳಿತಾವಧಿಯಲ್ಲಿ ಆ ಸರ್ವಾಧಿಕಾರದ ಎರುದ್ಧ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ನಿರ್ಭಿಡೆಯ ರಂಗಮಾಧ್ಯಮದ ಮೂಲಕ ಸಿಡಿದೆದ್ದ ಯುವ ಕಲಾವಿದರು ಸೃಜಿಸಿದ ರಂಗ ತ೦ಂಡ ಅಜೋಕಾ.

ಅವರು ಅವರದ್ದೇ ಆದ ಭಾವನೆಗಳು, ಹತಾಶೆ, ಉದ್ಯೋಗ ಇತ್ಯಾದಿಗಳನ್ನು ಅವರೇ ಬೆರಗಾಗುವ ರೀತಿಯಲ್ಲಿ ಮುನ್ನೂರು ವರುಷಗಳ ಹಿಂದೆಯೇ ಸಶಕ್ತವಾಗಿ ಅಭಿವ್ಯಕ್ತಿಸಿದ ಸೂಫಿಸಂತನೊಬ್ಬ ಹಾಡುಗಳ ಮೂಲಕ ಕಂಡುಕೊಳ್ಳುತ್ತಾರೆ. ಅವನೇ ಪ್ರಸಿದ್ಧ ಸೂಫಿ ಕವಿ ಬುಲ್ಲೇಹ್‌ -ಶಾ ಈತನ ಜೀವನ ಹಾಗೂ ಅಭಿವ್ಯಕ್ತಿಯ ಮೂಲಕವಾಗಿ ಅಜೋಕಾವು ಒಂದು ರಾಜಕೀಯಾತ್ಮಕವಾದ ಸ್ಫೋಟಕ ಬದಲಾವಣೆ ತರಬಲ್ಲ ನಿರೀಕ್ಷೆಯನ್ನು ಕಾಣುತ್ತಾರೆ. ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಸೆಟೆದು ನಿಲ್ಲಬಲ್ಲ ಹಾಗೂ ಮತಾ೦ಧವಾದ, ಧಾರ್ಮಿಕ ಸ್ಥಿತಿಸ್ಥಾಪಕತೆಗೆ ಸವಾಲಾಗಿ ನಿಲ್ಲಬಲ್ಲ. ಸನ್ನಿವೇಶವನ್ನು ಅಜೋಕಾ ಕಂಡುಕೊಳ್ಳುತ್ತದೆ. ಅಧಿಕಾರಶಾಹಿ ಬಲವು. ನಮ್ಮ ಚಟುವಟಿಕೆಗಳನ್ನು ನಿಯಂತ್ರಿಸಬಹುದಾಗಿತ್ತು. ಆದರೆ, ಬಹಳಷ್ಟು ಗೌರವಾದರಗಳಿಗೆ ಪಾತ್ರವಾಗಿದ್ದ ಬುಲ್ಲೇಹ್‌-ಶಾ ನಂತಹ ಸೂಫಿಸಂತನ ವಿಚಾರಧಾರೆಗಳನ್ನು ಅಲ್ಲಗಳೆಯುವುದು, ನಿಷೇಧಿಸುವುದು. ಸುಲಭದ ಮಾತಾಗಿರಲಿಲ್ಲ. ಆತನ ಬದುಕು ಎಷ್ಟು ನಾಟಕೀಯವಾಗಿತ್ತೋ, ಆತನ ಹಾಡುಗಳೂ ಅಷ್ಟೇ ಮೊನಚಾಗಿದ್ದವು. ಆ ಹಾಡುಗಳ ಕಾರಣದಿಂದಾಗಿ ಆತನನು ಫತ್ವಾ ಪಡೆದುಕೊಳ್ಳುವಷ್ಟು ಪ್ರಭಾವಶಾಲಿಯಾಗಿದ್ದನು.

ನಾನೊಬ್ಬ ಜಾತ್ಕಾತೀತ ವ್ಯಕ್ತಿಯಾಗಿ ಸೂಫಿ ಪಂಥದ ಬಗ್ಗೆ ನನಗಿರುವ ಆಸಕ್ತಿ ಸಾಂಸ್ಕೃತಿಕವಾಗಿ ಮಾತ್ರ ಪಂಜಾಬಿ ಸೂಫಿ ಕವಿಗಳ ಹಾಡುಗಳ ಕಲಾತ್ಮಕ ಬಹುರೂಪಿ ಅ೦ಶಗಳ ಬಗ್ಗೆ ನನಗೆ ವಿಪರೀತ ಕುತೂಹಲವಿದೆ. ಆದರೆ ನನ್ನ ನಾಟಕದ ಪ್ರೇಕ್ಷಕರು ತೀವ್ರವಾದ ಮತಶ್ರದ್ಧಯುಳ್ಳವರು ಆಗಿರದಿದ್ದರೂ ಶ್ರದ್ಧಾಪೂರ್ವಕವಾದ ಧಾರ್ಮಿಕ ನಂಬಿಕೆಯುಳ್ಳವರಂತೂ ಆಗಿದ್ದರು.

ಬುಲ್ಲೇಹ್‌ – ಶಾ ಅಥವಾ ಇನ್ನಾವುದೇ ಸಾಂಸ್ಕೃತಿಕ ಮಜಲಿನ ಕಥೆಗಳ ಹುಡುಕಾಟವು ನಮ್ಮ ಹಾಗೂ ರಂಗ ನಿರ್ಮಾಪಕರ ಮತ್ತು ಪ್ರೇಕ್ಷಕರ ನಡುವೆ ಒಂದು ಬಾ೦ಧವ್ಯವನ್ನೇ ಏರ್ಪಡಿಸಿದ್ದವು. ಜೊತೆಯಾಗಿ ನಾವು ರಂಗಭೂಮಿಯ ಆಧ್ಯಾತ್ಮಿಕ ಆಯಾಮದ ಹುಡುಕಾಟ ನಡೆಸುತ್ತಾ ಭೂತ- ವರ್ತಮಾನಗಳ ನಡುವೆ ಸಂಪರ್ಕ ಸೇತುವೆಯನ್ನು ಕಟ್ಟಿ ಜನಸಮುದಾಯವನ್ನು ಆಸ್ತಿಕತೆ, ನಾಸ್ತಿಕತೆ ಕಲಾವಿದರು – ವೃದ್ಧರು ಹಾಗೂ ಅವರ ಮೊಮ್ಮಕ್ಕಳು ಹೀಗೊಂದು ಭಾವೈಕ್ಯದ ಭಾಂಧ್ಯವದ ಪ್ರಪಂಚವನ್ನು ಸೃಷ್ಟಿಸುತ್ತಾ ಭವಿಷ್ಯತ್ತಿನ ಗುರಿಯೆಡೆಗೆ ಸಾಗುವ ಆಶಯ ನಮ್ಮದು.

ಬುಲ್ಹಾ ಜೊತೆಗಿನ ನಮ್ಮ 18 ವರ್ಷಗಳ ರಂಗ ಸಂಚಾರದಲ್ಲಿ ನಾವು ಗಮನಿಸಿಕೊ೦ಡ ಬಹುಮುಖ್ಯ ಅಂಶವೆಂದರೆ ನಾಟಕವು ಕೇವಲ ಮನರಂಜನೆ ಅಲ್ಲ. ಬೌದ್ಧಿಕ ಪಲ್ಲಟಗಳ ಅನುಭವಗಳನ್ನು ನೀಡಿದ್ದಷ್ಟಲ್ಲದೆ. ಅದು ಬಹು ಮುಖ್ಯವಾಗಿ ಜನರ ಆತ್ಮಮಂಥನದ ಆಧ್ಯಾತ್ಮಿಕ ಅನುಸ೦ಧಾನವೂ ಆಗಿಹೋಗಿತ್ತು ಅದರಲ್ಲೂ ಬುಲ್ಲೇಹ್‌ – ಶಾನ ಪಾತ್ರಧಾರಿಯಂತೂ ಪಾತ್ರ ಪರಕಾಯದ ಪರಾಕಾಷ್ಟೆಗೆ ತಲುಪಿ ಬುಲ್ಲೇಹ್‌-ಶಾ ಆತನ ಮೇಲೆ ಇನ್ನಿಲ್ಲದಂತೆ ಪ್ರಭಾವ ಬೀರಿದ್ದರು. ಮುಂದೆ ಅವನೇ ಒಬ್ಬ ಸೂಫಿ ಕವಿಯಾಗಿ ಎರಡು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾನೆ. ನಮ್ಮ ರಂಗತಂಡದ ಕಲಾವಿದರೆಲ್ಲರೂ ತಮ್ಮ ನಾಟಕ ಪ್ರದರ್ಶನ ಆರಂಭಗೊಂಡಾಗ ಬುಲ್ಲೇಹ್‌ ಶಾನ ದಿವ್ಯಾತ್ಮದ ಅನುಭೂತಿಯನ್ನು ತಾವೆಲ್ಲರೂ ಪಡೆದುಕೊಳ್ಳುತ್ತಿದ್ದೆವು ಎಂಬುದಾಗಿ ತಮ್ಮ ರಂಗಾನುಭವಗಳನ್ನು ಹಂಚಿಕೊಳ್ಳುತ್ತಾನೆ. ಭಾರತೀಯ ವಿದ್ವಾಂಸರೊಬ್ಬರು ಈ ನಾಟಕದ ಬಗ್ಗೆ ಲೇಖನ ಬರೆದಾಗ ರಂಗಭೂಮಿಯು ರಂಗದೇಗುಲವಾದಾಗ ಎ೦ಬ ತಲೆಬರಹವನ್ನು ಆ ಲೇಖನಕ್ಕೆ ನೀಡಿದ್ದರು.

ಆ ಬಳಿಕ ನಾನು ಬುಲ್ಲೇಹ್‌-ಶಾ ನ ಜೀವನದ ಕುರಿತಾಗಿ ಬುಲ್‌-ಹಾ ಎನ್ನುವ ನಾಟಕವನ್ನಬರೆದೆ, ನಂತರದ ದಿನಗಳಲ್ಲಿ ದಕ್ಷಿಣ ಏಷ್ಯಾದ್ಕಂತ ಬುಲ್‌-ಹಾ ಎನ್ನುವ ಹೆಸರು ದಿಟ್ಟವಾಗಿ ನಿರಂಕುಶ ಪ್ರಭುತ್ಚವನ್ನು ವಿರೋಧಿಸಿ ನಿಲ್ಲುವ ಬರಹಗಾರರನ್ನು ಜನಸಮೂಹ ಪ್ರೀತಿಯಿ೦ದ ಬರಮಾಡಿಕೊಳ್ಳುವಷ್ಟು ಆಪ್ತವಾಯಿತು. ಆ ಪಂಜಾಬಿನ ಸೂಫಿ ಸ೦ತ ಜನರಿಗೆ ಆಪ್ತವಾಗುವ, ಸರಳವಾದ ಜನ. ಸಮುದಾಯದ ಭಾಷೆಯಲ್ಲಿ ಬರೆಯಿತ್ತಿದ್ದರು. ಯಾವುದೇ ಶೋಷಕ ಮಧ್ಯವರ್ತಿಯ ನೆರವಿಲ್ಲದೆ ದೇವರು ಮತ್ತು ಮನುಷ್ಯನ ನಡುವೆ. ಸಂಸರ್ಗವನ್ನು ಏರ್ಪಡಿಸಬಲ್ಲ ಮಾಧ್ಯಮವನ್ನಾಗಿ ಅವರು ನೃತ್ಯ ಮತ್ತು ಸಂಗೀತವನ್ನು
ಕಂಡುಕೊಂಡಿದ್ದರು.

ಲಿಂಗಭೇದ ಹಾಗೂ ವರ್ಣಬೇಧವನ್ನು ಸಮಾಜವನ್ನು ಒಡೆದುದರ ಬಗ್ಗೆ ಅವರಲ್ಲಿ ಆಕ್ರೋಶವಿತ್ತು ಆದರೆ. ಲಾಹೋರ್‌ನ ಸಾಂಸ್ಕೃತಿಕ ಸಮಿತಿಯು ಈ ಕೃತಿಯನ್ನು ನಾಟಕವೆಂದು ಪರಿಗಣಿಸಲು ಒಪ್ಪಿಗೆ ನೀಡಲಿಲ್ಲ. ಇದು ಕೇವಲ ಜೀವನ ಚರಿತ್ರೆ ಎಂಬುದಾಗಿ ಷರಾ ಬರೆದು ನಿರಾಕರಿಸಿ ಬಿಟ್ಟಿತು. ಆದರೆ ಈ ನಾಟಕವು ಜಾಗತಿಕವಾಗಿ ಪ್ರಖ್ಯಾತಿ ಹೊಂದಿದ “ಗೋತೆ” ಸಂಸ್ಥೆಯ ಆವರಣದಲ್ಲಿ ಪ್ರದರ್ಶನಗೊಂಡಾಗ ಅದನ್ನು ವೀಕ್ಷಿಸಿದ ಜನರು ಜನಸಾಮಾನ್ಯರಿಗೆ ಹತ್ತಿರವಾದ ಕವಿಯ ಜೀವನವನ್ನು ಸಾಕ್ಷಾತ್ಮರಿಸಿದ ಸಂಕೇತಗಳನ್ನು ಅರ್ಥೈಸಿಕೊ೦ಡರು. ಮತ್ತು ಬಹುವಾಗಿ ಮೆಚ್ಚಿಕೊ೦ಡರು. ಬುಲ್ಬೇಹ್‌-ಶಾನ ಜೀವಿತಾವಧಿಯ ಸನ್ನಿವೇಶಗಳನ್ನು ವರ್ತಮಾನದ ಸನ್ನಿವೇಶಗಳಿಗೆ ಹೋಲಿಕೆ ಮಾಡಿ ಅರ್ಥೈಸಿಕೊ೦ಡಿದ್ದರು.

2001ರ ವೇಳೆಗೆ ಹೊಸದೊ೦ದು ಮಾದರಿಯ ರಂಗಭೂಮಿಯ ಸೃಷ್ಟಿಯಾಗಿತ್ತು. ಭಕ್ತಿಪ್ರಧಾನವಾದ ಕವ್ವಾಲಿ ಹಾಡುಗಳು, ಸೂಫಿ ಪರಂಪರೆಯ ಕುಣಿತದ ಹಾಡುಗಳು, ಸ್ಪೂರ್ತಿದಾಯಕ ಹಾಡುಗಳ ನವೀನ ಮಾದರಿಯ ಪ್ರಸ್ತುತಿ ಆಧ್ಯಾತ್ಮಿಕ ರಸಾನುಭವದ ಹಾಡುಗಳು ನಾಟಕದ ಭಾಗಗಳಾಗಿ ಬಿಟ್ಟವು. ನಾಟಕದ ಕೊನೆಗೆ ಪ್ರೇಕ್ಷಕರಾಗಿ ಬರುತ್ತಿದ್ದ ಸಿಖ್‌ ಸಮುದಾಯದ ಜನರು ರಂಗವೇದಿಕೆಗೆ ಧಾವಿಸಿ ಬಂದು ನಟರನ್ನು ಅಪ್ಪಿಕೊಂಡು ತಮ್ಮ ಸ೦ತಸ, ಸಹಾನುಭೂತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಅಳುತ್ತಿದ್ದರು.

1947ರ ಭಾರತ ಹಾಗೂ ಪಾಕಿಸ್ತಾನ ರಾಷ್ಟಗಳ ವಿಭಜನಾ ನಂತರ ಪಂಜಾಬಿನ ಮುಸ್ಲಿಮರ ಜೊತೆ ರಂಗಭೂಮಿಯನ್ನು ಹಂಚಿಕೊಂಡು ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದರು. ಏಕೆಂದರೆ ಇವರು. ಬುಲ್ಲೇಹ್‌- ಶಾ ನಷ್ಟೇ ಆಪ್ತರಾಗಿ ಹೋಗಿದ್ದರು.

“ಬುಲ್‌-ಹಾ’ ನಾಟಕ ಭಾರತದೊಳಗೂ ರಂಗವೇದಿಕೆಗಳಲ್ಲಿ ಪ್ರದರ್ಶನಗೊಂಡುದುದು ನನ್ನ ಅವಿಸ್ಮರಣೀಯ ಕ್ಷಣಗಳಲ್ಲಿ ಒ೦ದು ಅಸಹನೆಯು ಕುದಿಯುತ್ತಿರುವ ಎರಡೂ ದೇಶಗಳ ನಡುವೆ ಅದೇ ಸಂದರ್ಭದಲ್ಲಿ ಮತ್ತು ಭಾರತದಲ್ಲಿನ ಬಹುಪಾಲು ಪ್ರೇಕ್ಷಕರು ನಾಟಕದ ಒಂದೇ ಒಂದು ಪಂಜಾಬೀ ಪದವನ್ನು ಅರ್ಥೈಸಿಕೊಳ್ಳದವರಾಗಿದ್ದರೂ ಅವರು ನಾಟಕದ ಪ್ರತಿಯೊಂದು ಸೂಕ್ಷ ಚಲನೆ, ಕ್ಷಣ ಎಲ್ಲವನ್ನೂ ಬಹುವಾಗಿ ಮೆಚ್ಚಿಕೊ೦ಡವರಾಗಿದ್ದಾರೆ. ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆಗಳಿಗಾಗಿ ಬಾಗಿಲುಗಳು ಮುಚ್ಚಲ್ಪಟ್ಟಿದ್ದರೂ ರಂಗಭೂಮಿಯ ಮೂಲಕ ಎರಡೂ ದೇಶಗಳ ಜನರ ಹೃದಯಗಳನ್ನು
ಬೆಸೆಯಬಲ್ಲ, ಸ್ಪ೦ದಿಸಬಲ್ಲ ಅವಕಾಶದ ಬಾಗಿಲುಗಳು ವಿಶಾಲವಾಗಿ ತೆರೆದು ನಿಂತಿದ್ದವು.

2004ರಲ್ಲಿ ಒಮ್ಮೆ ಅಜೋಕಾ ರಂಗತಂ೦ಡವು, ಸಾವಿರಾರು ಜನರು ನೆರೆದಿದ್ದ ಗ್ರಾಮೂಣ ಭಾಗದ ಪ್ರದೇಶ ಒಂದರಲ್ಲಿ ನಾಟಕ ಪ್ರದರ್ಶನ ನೀಡುತ್ತಿದ್ದಾಗ ಸೂಫಿ ಸ೦ತರ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದನ ಬಳಿಗೆ ಒಬ್ಬರು ವೃದ್ಧ ಮಹನೀಯರು ಆಗಮಿಸುತ್ತಾರೆ. ಅವರ ಜೊತೆ ಒಬ್ಬ ತರುಣ ಯುವಕನಿರುತ್ತಾನೆ.

ಹಾಗೆ ಬ೦ದ ಅವರು ನಮ್ಮ ನಾಟಕ ತಂಡದ ಸೂಫಿ ಸ೦ತರ ಪಾತ್ರಧಾರಿಯ ಬಳಿ “ನನ್ನ ಮೊಮ್ಮಗ ತೀರಾ ಅನಾರೋಗ್ಯ ಪೀಡಿತನಾಗಿದ್ದಾನೆ. ತಾವು ದಯಮಾಡಿ ನನ್ನ ಮೊಮ್ಮಗನ ಉತ್ತಮ ಆರೋಗ್ಯಕ್ಕಾಗಿ ಆತನನ್ನ ಆಶೀರ್ವದಿಸಿ” ಎಂದು ಕೇಳಿಕೊಳ್ಳುತ್ತಾರೆ. ನಮ್ಮ ನಾಟಕ ತಂಡದ ಕಲಾವಿದ ತೀರಾ ವಿಚಲಿತಗೊಂಡು “ ನಾನು. ನಾನು ಬುಲ್ಲೆಹ್‌-ಶಾ ಅಲ್ಲ. ಆ ಪಾತ್ರ ಪಾತ್ರಧಾರಿ ಮಾತ್ರ” ಎನ್ನುತ್ತಾನೆ. ಆದರೆ ಆ ವೃದ್ಧರು ಅದನ್ನು ಒಪ್ಪದೆ ಅಳುತ್ತಾ” ದಯವಿಟ್ಟು ನನ್ನ ಮೊಮ್ಮಗನನ್ನು ಆಶೀರ್ವದಿಸಿ. ನಿಮ್ಮ ಆಶೀರ್ವಾದದಿಂದ ಆತ ಬೇಗನೆ ಗುಣಮುಖನಾಗುತ್ತಾನೆ.” ಎಂದು ಕೇಳಿಕೊಳ್ಳುತ್ತಾರೆ. ಆಗ ಆ ಕಲಾವಿದನಿಗೆ ಆ ವೃದ್ಧರ ಆಸೆಯನ್ನು ನೆರವೇರಿಸುವಂತೆ ಸೂಚಿಸಿದೆವು ಆತನೂ ಹಾಗೆಯೇ ಮಾಡಿದ. ಆ ಸಂದರ್ಭದಲ್ಲಿ ಸಂತಸಗೊಂಡ ಆ
ಹಿರಿಯರು ಕಲಾವಿದನನ್ನು ಉದ್ದೇಶಿಸಿ ಮಗೂ ನೀನು ಕೇವಲ ಕಲಾವಿದ ಮಾತ್ರವಲ್ಲ. ನೀನು ಬುಲ್ಲೇಹ್‌- ಶಾನ ಅವತಾರ ಕೂಡಾ” ಎಂದು ಹೇಳಿದಾಗ ನನಗೆ ಮತ್ತು ನಮ್ಮ ತಂಡದ ಎಲ್ಲ ಸದಸ್ಯರಿಗೆ ರಂಗಭೂಮಿಯಲ್ಲಿ ಪಾತ್ರ ನಿರ್ವಹಿಸುವುದು ಕೇವಲ ಅಭಿನಯ ಮಾತ್ರವಾಗಿರದೆ ಅದು ಒಂದು ಪಾತ್ರದ ಪುನರ್‌ ಸೃಷ್ಠಿ ಅಥವಾ “ಅವತಾರ’ ಆಗಬಲ್ಲುದು ಎಂಬುದರ ಸಾಕ್ಷಾತ್ಕಾರವಾಯಿತು.

ಪವಿತ್ರ ಹಾಗೂ ಅಪವಿತ್ರಗಳೆಂಬ ಕಲ್ಪನೆಯ ಸ್ಪಷ್ಟ ವಿಂಗಡನೆಯನ್ನು ನಾವು ಪಾಕಿಸ್ತಾನದ ಪ್ರಸ್ತುತಿಯಲ್ಲಿ ಕಾಣಬಹುದು. ಅಪವಿತ್ರಾತ್ಮನಿಗೆ ಒಂದು ಧಾರ್ಮಿಕ ಜಿಜ್ಞಾಸೆಗೆ ಇಲ್ಲಿ ಅವಕಾಶವಿಲ್ಲ. ಅಂತೆಯೇ ಪವಿತ್ರಾತ್ಮನಿಗೆ ಮುಕ್ತ ಚರ್ಚೆ ಹಾಗೂ ಯೋಜನೆಗಳ ಅವಕಾಶವೇ ಇಲ್ಲ. ಸಾಂಪ್ರದಾಯಿಕತೆಯ ಸ್ಥಾಪಿತ ನೆಲೆಗಟ್ಟುಗಳು, ಪಾವಿತ್ರತೆಯ ಕರ್ಮಠತನದಿಂದಾಗಿ ಕಲೆ ಮತ್ತು ಸಂಸ್ಕೃತಿಯನ್ನು ಹೊರತು ಪಡಿಸಿಯೇ ಪರಿಗಣಿಸುತ್ತದೆ. ಹಾಗಾಗಿ ಒಬ್ಬರು ಕಲಾವಿದರಿಗೆ ಅವರ ನಿರ್ವಹಣಾ ಕ್ಷೇತ್ರವು ಅಡೆತಡೆಗಳ ಪಯಣವೇ ಆಗಿರುತ್ತದೆ. ಅವರು ಮೊದಲಿಗೆ ತಾವು ನಿಷ್ಠೆಯ ಮುಸಲ್ಮಾನರು ಎಂಬುದಾಗಿ ದೃಢೀಕರಿಸಿ, ಇಸ್ಲಾಂನಲ್ಲಿ ನೃತ್ಯ, ಸಂಗೀತ, ರಂಗಭೂಮಿಗಳಿಗೆ ಅವಕಾಶವಿದೆ ಎಂಬುದನ್ನು ಸಾಬೀತು ಪಡಿಸಬೇಕಾಗುತ್ತದೆ. ಹಾಗಾಗಿ ಬಹು ದೊಡ್ಡ ಪ್ರಮಾಣದ ಮುಸಲ್ಮಾನ ಅನುಯಾಯಿಗಳು ತಮ್ಮ ನಿತ್ಯ ಜೀವನದಲ್ಲಿ ನೃತ್ಯ, ಸಂಗೀತ ಹಾಗೂ ರಂಗಭೂಮಿ ಮುಖೇನವಾದ ಕಲೆಯನ್ನು ಅಳವಡಿಸಿಕೊಳ್ಳುವಲ್ಲಿ ಹಿ೦ದೇಟು ಹಾಕಿದ್ದಾರೆ ಮತ್ತು ನಾವುಗಳು ಪವಿತ್ರ-ಅಪವಿತ್ರತೆಗಳನ್ನು ಒಂದೇ ರಂಗದ ಮೇಲೆ ಪಸ್ತುತಗೊಳಿಸಬಲ್ಲ ಧಾರಣಾ ಶಕ್ತಿ ಹೊಂದಿರುವ ಸಂಸ್ಕೃತಿಯನ್ನು ಸೃಜಿಸುವಲ್ಲಿ ಎಡವಿದ್ದೇವೆ.

ಬುಲ್ಲೇಹ್‌-ಶಾ ರವರ ಕಥೆ ಮತ್ತು ಸೂಫಿ ರಂಗಭೂಮಿಯ ಮೂಲಕ ನಮ್ಮದೇ ಆದ ಹುಡುಕಾಟಗಳನ್ನು ನಾನು ಯಾಕೆ ಇಲ್ಲಿ ಪಸ್ತಾಪಿಸಿದ್ದೇನೆ೦ಂದರೆ ನಮ್ಮ ರಂಗಭೂಮಿ ಚಟುವಟಿಕೆಗಳ ಕೆಲವೊ೦ದು ಸಂದರ್ಭಗಳಲ್ಲಿ ನಾವು ರಂಗಭೂಮಿಯ ತತ್ವಗಳಿಂದ ಸ್ವಲ್ಪ ದೂರ ಸರಿದುದೂ ಉಂಟು. ಯಾವುದೋ ಒಪ್ಪಿತ ಸಾಮಾಜಿಕ ಬದಲಾವಣೆಯ ಹರಿಕಾರರ ರೀತಿಯಲ್ಲಿ ನಮ್ಮ ಚಿಂತನೆಗಳು ಪಸ್ತುತಗೊಳ್ಳುತ್ತಿದ್ದಾಗ ಅದನ್ನು ಒಪ್ಪುತ್ತಿದ್ದ ಒ೦ದು ದೊಡ್ಡ ಪ್ರೇಕ್ಷಕ, ಸಮುದಾಯ ನಮ್ಮ ಜೊತೆಯಾಗುತ್ತಿತ್ತು ವರ್ತಮಾನದ ನಮ್ಮ ಸವಾಲುಗಳ ಜೊತೆಗಿನ ನಮ್ಮ ಸಂಬಂಧಗಳಲ್ಲಿ ರಂಗಭೂಮಿಯು ಒದಗಿಸಬಲ್ಲ ದಿವ್ಯವಾದ ಆಧ್ಯಾತ್ಮಿಕ ಅನುಭೂತಿಗಳಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವು.

ಇವತ್ತಿನ ಪ್ರಪಂಚವು ದ್ವೇಷ, ಹತಾಶೆ, ಹಿಂಸೆ, ಒಡಕುಗಳಿ೦ದಲೇ ತುಂಬಿಕೊಳ್ಳುತ್ತಿರುವಾಗ, ತಮ್ಮ ಧಾರ್ಮಿಕ ನಂಬಿಕೆಗಳೇ ಶ್ರೇಷ್ಠವೆ೦ಬ ವ್ಯಸನಗಳ ಕಾದಾಟದಲ್ಲಿರುವಾಗ ಒ೦ದು ಸಮುದಾಯವು ಇನ್ನೊಂದರ ಮೇಲೇರಿ ಹೋಗುತ್ತಿರುವಾಗ ಮತ್ತು ಈ ಮಧ್ಯೆ ಅಪೌಷ್ಠಿಕತೆಯಿ೦ದ ನರಳಿಗತಿಸುತ್ತಿರುವ ಮಕ್ಕಳು, ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ದೊರಕದೆ ಸಂಭವಿಸುತ್ತಿರುವ ಬಾಣಂತಿ ಸಾವು ಹಾಗೂ ಇವುಗಳೆಲ್ಲದರ ನಡುವೆಯೇ ದ್ವೇಷವೇ ಜೀವನ ತತ್ಪವಾಗಿ ವಿಜೃಂಭಿಸುತ್ತಿರುವ. ದುರಂತಮಯ ಸನ್ನಿವೇಶದಲ್ಲಿ ಜೀವನ್ಮುವಿಯಾದ ರಂಗಭೂಮಿಯ ತಂಗಾಳಿಯ ಸ್ಪರ್ಶವಾಗಬೇಕಾಗಿದೆ. ನಮ್ಮ ಈ ಭೂಗ್ರಹವು ಹವಾಮಾನ ವೈಪರೀತ್ಯವೆ೦ಂಬ ಅಪಾಯದ ಕೂಪದಾಳಕ್ಕೆ ಸರಿದು ಹೋಗುತ್ತಿರುವುದರ ಜೊತೆಗೆ ಮಾನವ ಬದುಕಿನ ಅರಿ ಚತುರ್ವರ್ಗಗಳ ಖುರಪಟದ ಸಪ್ಪಳ ಕಿವಿಗೆ ಹತ್ತಿರವಾಗುತ್ತಿದೆ. ಹೀಗಿರುವಾಗ ನಾವು ನಮ್ಮ ಆಧ್ಯಾತ್ಮಿಕ ಅನುಭೂತಿಯನ್ನು ಪುನರ್‌ ಸಂಚಯಿಸಿಕೊಳ್ಳಬೇಕಾದ ಅವಶ್ಯಕತೆಯಲ್ಲಿದ್ದೇವೆ. ಹಿಂಸೆ, ಆಲಸ್ಯ, ದುರಾಸೆ ಇತ್ಯಾದಿಗಳ ಎರುದ್ಧ ಸಮರ ಸಾರಬೇಕಾದ ಅನಿವಾರ್ಯತೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ ಜನರನ್ನು ಹುರಿದುಂಬಿಸಬೇಕಾದ, ಕ್ರಮಿಸಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ ನೀಡಬೇಕದ ಜರೂರತ್ತು ನಮ್ಮ ರಂಗಭೂಮಿಯ ಮುಂದಿದೆ… ಮಾನವೀಯತೆಯನ್ನು ವಿಶ್ಚವು ಆವಾಹಿಸಿಕೊಳ್ಳಬೇಕಾಗಿದೆ.  ಆಗ ರಂಗಭೂಮಿಯೂ ಎತ್ತರಕ್ಕೆ ಏರಲ್ಪಡುತ್ತದೆ. ಪವಿತ್ರತೆಯೆಡೆಗೆ ಸಾಗುತ್ತದೆ. ದಕ್ಷಿಣ ಏಷ್ಯಾ ಭಾಗದಲ್ಲಿನ ಯಾವುದೇ ಕಲಾವಿದರು ವೇದಿಕೆ ಪ್ರವೇಶಿಸುವ ಮುನ್ನ ನೆಲವನ್ನು ಅ೦ದರೆ ರಂಗಭೂಮಿಯನ್ನು ಹಣೆಗೆ ತಟ್ಟಿಕೊಳ್ಳುವುದು ಒ೦ದು ಸಾಂಪ್ರದಾಯಿಕವಾದ ಪ್ರಾಚೀನ ಪದ್ಧತಿ. ಈಗ ಮತ್ತೆ ಕಲಾವಿದರು ಮತ್ತು ಪ್ರೇಕ್ಷಕರು ಭೂತ ಮತ್ತು ಭವಿಷ್ಯತ್ತಿನ ಸಂಬಂಧಗಳಿಗೆ ಸಹ್ಯದತೆಯಿಂದ ಮುಖಾಮುಖಿಯಾಗಬೇಕಾಗಿದೆ.

ಸಾಮಾಜಿಕವಾಗಿ ವಿಮರ್ಶೆಗೆ ಒಳಪಡುವ, ಆರ್ಥಿಕ ಹೊಂದಾಣಿಕೆಗೆ ಸದಾ ಹೊಸದಾರಿ ಹುಡುಕುತ್ತಿರುವ ನಮಗೆ, ಜನಸಮೂಹವನ್ನು ತಲುಪುವುದಕ್ಕೆ ಪ್ರತಿಭಡನಾ ರಂಗಭೂಮಿಯ ಅಗತ್ಯ ಇದೆ. ಅ೦ತಹ ಕೆಲಸಗಾರರನ್ನು ರಂಗಮಾಂತ್ರಿಕ, ರಂಗಗಾರುಡಿಗ, ರಂಗಯಕ್ತಿಣೆಗಾರರೆಂದು ಸಂಭೋಧಿಸೋಣ.

ರಂಗಭೂಮಿಯ ನಿರ್ಮಾಣವು ಒಂದು ಪವಿತ್ರ ಕಾರ್ಯ ಮತ್ತು ಇಲ್ಲಿ ಕಲಾವಿದರು ತಮ್ಮ ನಿರ್ವಹಣೆಯ ಪಾತ್ರದ ಇನ್ನೊಂದು ಅವತಾರ, ಹೀಗಾಗಿ ರಂಗಭೂಮಿಯ ಅಭಿವ್ಯಕ್ತಿಯು ಕಲೆಯನ್ನು ಆಧ್ಯಾತ್ಮಿಕವಾದ ಜೌನ್ನತ್ಯಕ್ಕೆ ಎತ್ತರಿಸುತ್ತದೆ. ಸಂತರು, ಸೂಫಿಗಳು ಆಗಿಹೋದ ಈ ನಾಡಿನ ಆಧ್ಯಾತ್ಮಿಕ ಸೌಂದರ್ಯ ಶಕ್ತಿಯನ್ನು ರಂಗಭೂಮಿ ತೆರೆದು ತೋರಿಸಬೇಕಾಗಿದೆ… ಹಾಗಾಗಿ ರಂಗಭೂಮಿಯ ಕೆಲಸ ನಡೆಯುವ ಎಲ್ಲ ಸ್ಥಳಗಳನ್ನು ರಂಗದೇಗುಲಗಳೆಂದು ಗೌರವಿಸಬೇಕಾಗಿದೆ. ಆ ಗೌರವಕ್ಕೆ ಪಾತ್ರವಾಗುವ ಎಲ್ಲ ಶಕ್ತಿಯನ್ನು ರಂಗ ಭೂಮಿ ನಿಜವಾಗಿಯೂ ಹೊಂದಿದೆ.

2020ರ ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಶಾಹೀದ್‌ ನಾದೀ೦ ಅವರು ನೀಡಿದ ಸಂದೇಶದ (ಕನ್ನಡಾನುವಾದ-ಪ್ರಶಾ೦ಂತ ಅನಂತಾಡಿ) ಕನ್ನಡಾನುವಾದವನ್ನು ನಿರತನಿರಂತ ರಂಗ ತಂಡ, ಪುತ್ತೂರು ರಂಗಚಟುವಟಿಕೆಯಾಗಿ ಪ್ರಕಟಿಸುತ್ತಿದೆ.

ಪ್ರತಿಕ್ರಿಯಿಸಿ