ಅಲ್ಬರ್ಟ್ ಕಮೂವಿನ ‘ದಿ ಪ್ಲೇಗ್’ : ಅತಂತ್ರ ಮನುಷ್ಯ ಮತ್ತು ಅಗೋಚರ ಸೋಂಕು

“ಈಗ ಆತ್ಮಹತ್ಯೆ ಮಾಡಿಕೊಳ್ಳುವುದೋ ಅಥವಾ ಒಂದೊಳ್ಳೆ ಕಾಫಿ ಕುಡಿಯುವುದೋ?” ಎಂದು ಬರೆದ ಆಲ್ಬೆರ್ ಕಮು ಬದುಕಿದ ಕಾಲವೂ ಹಾಗೆಯೇ ಇತ್ತು. ಮೊದಲ ಮಹಾಯುದ್ಧ ಆರಂಭವಾಗುವುದಕ್ಕೆ ಒಂದು ವರ್ಷ ಮುಂಚೆ ಹುಟ್ಟಿದ ಕಮೂ ಯವ್ವನವನ್ನು ಎರಡನೇ ಮಹಾಯುದ್ಧಕ್ಕೆ ಜಗತ್ತು ಅಣಿಯಾಗುತ್ತ ಇರುವ ಸಂಧಿಕಾಲದಲ್ಲಿ ಕಳೆದ. ಈ ಎರಡೂ ಮಹಾ ಜಗತ್ ನಾಟಕಗಳು ಕಳೆದು ಹೋದ ಎರಡು ವರ್ಷಗಳ ಬಳಿಕ ಅವನ ಪ್ರಸಿದ್ಧ ತತ್ವಶಾಸ್ತ್ರೀಯ ಕಾದಂಬರಿ “ದ ಪ್ಲೇಗ್” ಪ್ರಕಟವಾಯಿತು. ಇಂಥಾ ಆತ್ಮಹತ್ಯಾಕಾರಕ ಕಾಲದ ನಡುವೆ ಬದುಕಿಯೂ, ಮನುಷ್ಯನ ತಿಕ್ಕಲು ಅತಿರೇಕಗಳನ್ನು ಕಂಡೂ ಸಹ, ಜನ-ಜಗತ್ತನ್ನು ಗುಣಮಾಡುವ ಆಶಯದತ್ತಲೇ ಪ್ಲೇಗ್ ಕಾದಂಬರಿಯ ಧ್ವನಿ ಇದೆ. ಅವನ ಸ್ನೇಹಿತನಾಗಿದ್ದ ಝಾಂ ಪೌಲ್ ಸಾರ್ತ್ರ್ ಬಗ್ಗೆ ಕೆಲ ವಿಮರ್ಷಕರು “ಜರ್ಮನಿ ಫ್ರಾನ್ಸ್ ಅನ್ನು ಅತಿಕ್ರಮಿಸಿದಾಗ ಸಾರ್ತ್ರ್ ಧ್ವನಿ ಎತ್ತಲಿಲ್ಲ” ಎಂದಾಗ, ಸಾರ್ತ್ರ್ ನಿಗಿಂತ ಹೆಚ್ಚು ರಾಜಕೀಯ ಜೀವಿಯಾಗಿದ್ದ ಆಲ್ಬೆರ್ ಕಮು “ಸಾರ್ತ್ರ್ ನ ಬರವಣಿಗೆಯಲ್ಲಿಯೇ ಪ್ರತಿಭಟನೆಯಿದೆ. ಆದರೆ ಆತ ಒಬ್ಬ ಪ್ರತಿಭಟನೆಯ ಬರಹಗಾರನಲ್ಲ” ಎಂದ. ಈ ಇಬ್ಬರು ಸಮಕಾಲೀನರ ಎರಡು ಮುಖ್ಯ ಕೃತಿಗಳಾದ ಕಮೂನ ಬಹಿರ್ಮುಖಿ ಕಾದಂಬರಿ “ದ ಪ್ಲೇಗ್” ೧೯೫೧ ರಲ್ಲಿ ಪ್ರಕಟವಾದರೆ, ೧೯೫೩ರಲ್ಲಿ ಸಾರ್ತ್ರ್ ನ ಒಳಮುಖಿಯಾದ ನಾಟಕ “ಕೀನ್” ಪ್ರಕಟವಾಯಿತು.

ಕಮೂನ ಪ್ಲೇಗ್ ಕಾದಂಬರಿಯಂತೂ ಕಾಲಜ್ಞಾನದಂತಿದೆ. ನೀವೀಗೇನಾದರೂ ಪ್ಲೇಗ್ ಕಾದಂಬರಿಯನ್ನು ಓದಲು ಆರಂಭಿಸಿದರೆ, ಆ ಕಾದಂಬರಿಯ ವೈದ್ಯ ಡಾ. ಬೆರ್ನಾರ್ ರಿಯೂ ನ ಮುಖದ ಜಾಗದಲ್ಲಿ- ಕೊರೋನಾ ವೈರಸ್ಸಿನ ಬಗ್ಗೆ ಮೊದಲು ಎಚ್ಚರಿಸಿದ ಚೀನಾದ ವೈದ್ಯ- ಕ್ಸಿ ವೆನ್-ಲಿಯಾಂಗ್ ನ ಮುಖವೇ ಕುಣಿಯತೊಡಗುತ್ತದೇನೋ. ಇಲ್ಲಿ ಕೇಶವ ಮಳಗಿಯವರು ದ ಪ್ಲೇಗ್ ನ ಕುರಿತು ಮಾತನಾಡಿದ್ದಾರೆ. ಕೇಳಿ.

ಪ್ರತಿಕ್ರಿಯಿಸಿ