ವಿಶ್ವ ಪುಸ್ತಕ ದಿನ ವಿಶೇಷ : ಹಾವಿನಹಾಳ ಕಲ್ಲಯ್ಯನ ವಚನ

ಎಲ್ಲರಿಗೂ ಪುಸ್ತಕದಿನದ ಶುಭಾಶಯಗಳು. ಕನ್ನಡ ನಾಡಿನಲ್ಲಿ ವೈಚಾರಿಕತೆಯನ್ನು ಪ್ರಚುರಪಡಿಸುವಲ್ಲಿ ವಚನ ಕ್ರಾಂತಿಗೆ ಮಹತ್ವದ ಸ್ಥಾನವಿದೆ . ಅದರ ನೆಪದಲ್ಲಿ ಮೂಡಿಬಂದದ್ದು ಇದು .

ಹಾವಿನಹಾಳ ಕಲ್ಲಯ್ಯನ ಈ ವಚನವನ್ನು ಎಂ. ಡಿ. ಪಲ್ಲವಿಯವರು ಋತುಮಾನಕ್ಕಾಗಿ ಸಂಗೀತ ಸಂಯೋಜಿಸಿ ಹಾಡಿದ್ದಾರೆ.

ಬಾಲಕ ಹಾಲ ಸವಿದಂತೆ,
ಮರುಳಿನ ಮನದ ನೆನಹಿನಂತೆ,
ಮೂಗನು ಕಂಡ ಕನಸಿನಂತೆ,
ಮೈಯರಿಯದ ನೆಳಲಿನಂತೆ,
ಬಂಜೆಯ ಮನದ ನೇಹದಂತೆ,
ಮಹಾಲಿಂಗ ಕಲ್ಲೇಶ್ವರನಲ್ಲಿ ಎನಗೆ ಲಿಂಗೈಕ್ಯವು
– ಹಾವಿನಹಾಳ ಕಲ್ಲಯ್ಯ

Like a lad savoring the milk,
Like a passionate mind ruminating memories,
Like a dream occurred to a dumb,
Like a shadow unaware of the body,
Like the affection of an infertile woman –
I coalesce with Mahalinga Kalleshwara.
– Havinahala Kallayya

ಪುಸ್ತಕ ದಿನದ ಗುರುತಾಗಿ ನಾವು ನಿಮ್ಮಲ್ಲಿ ಇಂದು ವಿಚಾರ ಸಾಹಿತ್ಯದ ಪುಟಗಳನ್ನು ಓದಿ ವಿಡಿಯೋ ಹಾಕಿ #RUTHUMANA ಎಂದು ಟ್ಯಾಗ್ ಮಾಡಿ ಎಂಬ ಮನವಿ ಮಾಡಿಕೊಂಡಿದ್ದೆವು . ಈಗಾಗಲೇ ಕೆಲವರು ಮಾಡಿದ್ದಾರೆ. ನೀವೂ ಮಾಡಿ , ಗೆಳೆಯರಿಗೂ ಹೇಳಿ. ಎಲ್ಲರಿಗೂ ಕೃತಜ್ಞತೆಗಳು.

ಋತುಮಾನ ಆ್ಯಪ್ ಡೌನ್ ಲೋಡ್ ಮಾಡಲು ನಿಮ್ಮ ಗೂಗಲ್ ಪ್ಲೇಸ್ಟೋರ್/ ಆ್ಯಪಲ್ ಆ್ಯಪ್ ಸ್ಟೋರಿನಲ್ಲಿ ruthumana ಎಂದು ಹುಡುಕಿ.


One comment to “ವಿಶ್ವ ಪುಸ್ತಕ ದಿನ ವಿಶೇಷ : ಹಾವಿನಹಾಳ ಕಲ್ಲಯ್ಯನ ವಚನ”
  1. ಎಂ.ಡಿ.ಪಲ್ಲವಿ ಮೇಡಂ ರವರ ಅದ್ಭುತವಾದ ಗಾಯನ..

ಪ್ರತಿಕ್ರಿಯಿಸಿ