ಮರುಭೂಮಿಯ ಚಳಿಗೆ ಮಹೇಶ ನಡುಗಲು ಶುರುವಾಗಿ ಇಂದಿಗೆ ಏಳು ವರ್ಷ ಮೂರು ತಿಂಗಳು; ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದು ಗೊತ್ತಾಗದ ಸ್ಥಿತಿಯಲ್ಲಿ ಮಲಗಿದ್ದಾನೆ ಈಗವನು. ಸಮರಾತ್ರಿಯ ಸಮ ಹೊತ್ತು. ನಿದ್ದೆಯಿಂದ ಏಳುವವನಂತೆ ಅರ್ಧ ಕಣ್ಣ ತೆರೆದ. ಎಲ್ಲವೂ ಗೋಜಲುಗೋಜಲಾಗಿ ಕಂಡವು! ತಾ ಇದುವರೆವಿಗೂ ಕಂಡ ಚಿತ್ರಗಳಿಗೂ ತನ್ನ ನೆನಪುಗಳಿಗೂ ಸಂಬಂಧ ಇರುವಂತೆಯೂ ಇರದಂತೆಯೂ ಕಾಣುತ್ತಿದೆ. ಮಿದುಳು ಜುಮ್ಮೆನ್ನುತ್ತಿದೆ! ಎದೆ ಜೋರಾಗಿ ಬಡಿದುಕೊಳ್ಳಲಾರಂಭಿಸಿರುವುದು ಕಿವಿಗೆ ಮೆಲ್ಲಗೆ ಕೇಳಿಸುತ್ತಿದೆ. ಕಣ್ಣ ಮುಚ್ಚಿ ಮಿದುಳಿನ ಸಹಾಯದಿಂದ ಮನಸ್ಸನ್ನು ಹಿಂದಕ್ಕೆ ಎಳೆದ.
***
ಮಹೇಶ ಥಟ್ಟನೆ ಎದ್ದು ಕೂತ. ಅದು ಕನಸೆಂಬುದು ಅರ್ಥವಾಗಲು ತುಸು ಸಮಯ ಬೇಕಾಯಿತು ಅವನಿಗೆ. ಅತ್ತಿತ್ತ ತಿರುಗಿ ನೋಡಿದ. ಕತ್ತಲು, ತಲೆ ಮೇಲೆ ಸಣ್ಣಗೆ ಉರಿಯುತ್ತಿರುವ ಬಲ್ಬು. ದೂರದ ಮಜ಼್ರಾದಲ್ಲೆಲ್ಲೋ ನಾಯಿ ಬೊಗಳುತ್ತಿರುವುದು ಅಸ್ಪಷ್ಟವಾಗಿ ಕೇಳಿಸುತ್ತಿದೆ. “ಇಲ್ಲೆಲ್ಲಾ ನಾಯಿಗಳ ನೋಡಬೇಕೆಂದರೆ ನೀನು ಮರುಭೂಮಿಗಳಲ್ಲಿರೊ ಖರ್ಜೂರ ತೋಟಗಳಿಗೆ ಹೋಗಬೇಕು” ಎಂದಿದ್ದ ತನ್ನ ಮಾಲೀಕ ಮೈಖೇಲ್‍ನ ಮಾತುಗಳು ನೆನಪಾದವು. ತಕ್ಷಣವೇ ಅವನಿಗೆ ನೆನಪಾದದ್ದು ಆ ಕನಸು! ಅದೇ ಅವನನ್ನು ನಿದ್ದೆಯಿಂದ ಎಬ್ಬಿಸಿದ್ದು. ಅದೊಂದು ಕಪ್ಪು ಟಾರ್ ರಸ್ತೆ, ಇವನು ಓಡುತ್ತಿದ್ದಾನೆ, ನೂರಾರು ನಾಯಿಗಳು ಅವನನ್ನು ಅಟ್ಟಿಸಿಕೊಂಡು ಬರುತ್ತಿವೆ, ಕಾಲು ತಡವರಿಸಿ ಅವನು ಕೆಳಗೆ ಬಿದ್ದಾಗ, ಆ ನಾಯಿಗಳ ಹಿಂಡು ಅವನನ್ನು ಮುತ್ತಿಕೊಂಡು ಅವನ ಅಂಗಾಂಗಳ ಕಚ್ಚಿ ಎಳೆಯುತ್ತಿವೆ, ಕೆಲವಂತೂ ಅವನ ಮಾಂಸಗಳ ಕಿತ್ತು ಕಿತ್ತು ಉಗಿಯುತ್ತಿವೆ, ಹಿಂದೆ ನಿಂತಿರುವ ನಾಯಿಮರಿಗಳು ಆ ಮಾಂಸಗಳ ತಿನ್ನಲು ಪೈಪೋಟಿ ನಡೆಸುತ್ತಾ ಕಿತ್ತಾಡುತ್ತಿವೆ. ಮಹೇಶ ಕನ್ನಡಿಯಲ್ಲಿ ಮುಖವ ನೋಡಿಕೊಂಡ. ಸಣ್ಣ ನಗು ನಕ್ಕು ಎದ್ದು ಬಾತ್ ರೂಮಿಗೆ ಹೋದ. ಏಳುವಾಗ ಏನೊ ಒಂದು ಥರ ವಿಶಿಷ್ಟ ಅನುಭವವಾಯ್ತು. ಬಾತ್ ರೂಮಿನೊಳಗೆ ಹೋದವನೆ ಚಿಲಕ ಬಡಿದು ಲೈಟ್ ಹಚ್ಚಿ ಬರ್ಮಾಡವ ಬಿಚ್ಚಿ ಕೆಳಗೆ ತಳ್ಳಿ, ಬಲಗೈ ಬಳಸಿ ಅಂಡರ್‍ವೇರ್ ಒಳಗಿಂದ ಬುಲ್ಲಿಯ ಹೊರ ತೆಗೆದು ಸೂಸು ಮಾಡ ತೊಡಗಿದ. ಅದು ಸಮರಾತ್ರೆಯಾದ್ದರಿಂದ ಸೂಸು ಸದ್ದು ಅತ್ತ ರೂಮಿನಲ್ಲಿ ಆಗತಾನೆ ಕಣ್ಣ ಮುಚ್ಚಿದ್ದ ಮಹೇಶನ ಮಾಲೀಕ ಮೈಖೇಲ್‍ನನ್ನು ಚಣ ಎಚ್ಚರಗೊಳಿಸಿ ತನ್ನ ನಿರಂತರ ಸದ್ದಿನ ಮೂಲಕವೇ ಮತ್ತೆ ಮಲಗಿಸಿತು. ಇತ್ತ ಮಹೇಶನ ಕಣ್ಣುಗಳು ಆ ನಾಯಿಗಳ ಕನಸ್ಸಿನಲ್ಲೇ ಅಂಟಿಕೊಂಡಿದ್ದವು; ತುಟಿಯನ್ನು ಬಲಕ್ಕೆ ಎಳೆದು ಅವನನ್ನು ನಗಿಸಿತು. ಆಗ ಅವನಿಗೆ ಥಟ್ಟನೆ ಏನೊ ಹೊಳೆದು ಬಗ್ಗಿ ನೋಡಿದ, ಕೈಗಳನ್ನು ಬುಲ್ಲಿಯ ಕೆಳಗೆ ಇಟ್ಟು ತಡಕಿದ! ಭಯ ದುಪ್ಪಟ್ಟು ಹೆಚ್ಚಾಯಿತು! ಮತ್ತೊಮ್ಮೆ ಕೈಗಳ ಉಜ್ಜಿ ನೋಡಿದ, ಚರ್ಮವ ಎಳೆದು ನೋಡಿದ! ಇರಲಿಲ್ಲ!
ಅವನ ತರಡು ಬೀಜಗಳು ಕಾಣೆಯಾಗಿದ್ದವು!
ಇದೂ ಕನಸೇ ಎಂದು ಕುಣಿದು ನೋಡಿದ, ಗಾಬರಿ ಬಿದ್ದು ರೂಮಿಗೆ ಹೋಗಿ ಕನ್ನಡಿಯಲ್ಲಿ ನೋಡಿಕೊಂಡ!
ಬುಲ್ಲಿ ಮಾತ್ರ ಅನಾಥವಾಗಿ ನೇತಾಡುತ್ತಿತ್ತು!
ಎರಡು ಬೀಜಗಳು ಎಲ್ಲಿ ಹೋದವು!?
ಏನು ಮಾಡುವುದೆಂದು ತಿಳಿಯದೆ ತೊಳಲಾಡಿದ, ನೆಲದಲ್ಲಿ ಬಿದ್ದು ಒದ್ದಾಡಿದ. ಮತ್ತೆ ಮತ್ತೆ ನೋಡಿಕೊಂಡ, ಮರುಭೂಮಿಯ ಈ ಕೊರೆವ ಕೆಟ್ಟ ಚಳಿಗೆ ಮುರುಟಿಕೊಂಡು ದೇಹದ ಒಳಗೆ ಏನಾದರೂ ಹೋಗಿರಬೇಕೆಂದುಕೊಂಡು ಚರ್ಮವನ್ನು ಎಳೆದೂ ನೋಡಿದ.
ಏಳು ವರ್ಷಗಳ ನಂತರ ಇಂಡಿಯಾಕ್ಕೆ ಹೋಗುತ್ತಿರುವ ಈ ಸಂದರ್ಭದಲ್ಲಿ ಹೀಗೆ ಸಂಭವಿಸಬೇಕೆ? ತನ್ನ ತಂದೆ ಮಾಡಿದ ಸಾಲ, ತಾನು ಗಲ್ಫ್‍ಗೆ ಬರಲು ತಾಯಿ ಮಾಡಿದ್ದ ಸಾಲ, ಅಕ್ಕನ ಮದುವೆ, ಅವಳ ಮಕ್ಕಳ ನಾಮಕರಣ ಎಲ್ಲವನ್ನೂ ತೀರಿಸಿ ಮನೆ ಕಟ್ಟಲು ಮೊನ್ನೆ ತಾನೆ ಹೊಸ ಸಾಲ ಮಾಡಿ ನಿಟ್ಟುಸಿರಿಟ್ಟಿದ್ದ. 2020ರ ಆಗಸ್ಟ್ 14ರ ಮಧ್ಯರಾತ್ರಿ 11:45 ಕ್ಕೆ ಹೊರಡಲಿದ್ದ ಏರ್ ಇಂಡಿಯಾ ವಿಮಾನವು ಅವನ ಒರಟಾದ ಪಾದಸ್ಪರ್ಶಕ್ಕಾಗಿ ಕಾಯುತ್ತಿತ್ತೇನೊ! ಹೊರಡುವ ಒಂದು ದಿನ ಮುಂಚೆ ಅಂದರೆ ಆಗಸ್ಟ್ 13 ರ ರಾತ್ರಿ ಅವನ ಈ ಏಳು ವರ್ಷದ ಬೆವರು, ಅಳು, ಕನವರಿಕೆ, ಆಸೆಗಳನ್ನೆಲ್ಲ ಈ ಘಟನೆ ತಟಕ್ಕನೆ ಕಿತ್ತುಕೊಂಡು ಹಾರಿಹೋಯಿತು.
ಯಾರಿಗೆ ತಾನೆ ಹೇಳುವುದು ಇದನ್ನು!? ಹೇಳಿದರೂ ಯಾರು ತಾನೆ ನಂಬಿಯಾರು? ಕೇಳಿ ತಿಕ ಬಡಿದುಕೊಂಡು ನಗುತ್ತಾರೆ ಅಷ್ಟೆ. ಏನು ಮಾಡುವುದು? ಇಂಡಿಯಾಗೆ ಹೋಗುವುದಾದರೂ ಹೇಗೆ? ಅಳು ಉಮ್ಮಳಸಿ ಬಂತು. ಅತ್ತ.
ಬೀಜಗಳು ಕಾಣೆಯಾದ ನೋವಿನ ಜೊತೆ ಮತ್ತಷ್ಟು ಅಗೋಚರ ನೋವುಗಳು ಅವನ ಮನಸ್ಸನ್ನು ಅಪ್ಪಿಕೊಂಡು ನೀರಾಗಿ ಹೊರಬರುತ್ತಾ ಅವನ ನುಣುಪಾದ ಕೆನ್ನೆಗಳಲ್ಲಿ ತುರಿಕೆಯ ತಂದವು. ಕೆನ್ನೆಗಳ ಅದುಮಿ ಕೆರೆಯುತ್ತಾ ಅಳುವ ನಿಲ್ಲಿಸಿದ. ಎದ್ದ.
ಅರೆ!
ವಾಹ್!
ಬೀಜಗಳು ಇಲ್ಲದೆ ಇರುವುದು ಒಂದ್ ಥರ ಚೆನ್ನಾಗೇ ಇದೆ! ಕೂತಲ್ಲಿಂದ ಏಳುವಾಗ ಒಮ್ಮೊಮ್ಮೆ ತೊಡೆಗಳ ಸಂದಿಯಲ್ಲೊ, ಅಂಡರ್‍ವೇರ್‍ಗೊ ಅವುಗಳು ಸಿಕ್ಕಿ ಹಾಕಿಕೊಂಡು ಅನುಭವಿಸುತ್ತಿದ್ದ ನರಕ ವೇದನೆ ಈಗ ಇಲ್ಲ! ಇದೊಂದ್ ಥರ ಚೆನ್ನಾಗೇ ಇದೆ! ಸೂಪರ್ ಗುರು… ಆದರೆ ಒಂದ್ ಅನುಮಾನ… ಈ ಬೀಜಗಳು ಮನುಷ್ಯರ ಅಂಗಾಂಗಳಲ್ಲಿ ಅಷ್ಟು ಪ್ರಮುಖವಾದುದಲ್ಲವೆ!? ಬೀಜಗಳು ಇಲ್ಲದಿದ್ದರೂ ತಾನಿನ್ನೂ ಬದುಕಿದ್ದೇನಲ್ಲ. ಅವಳ್ಯಾರೊ ಗಂಡನ ಬುಲ್ಲಿಯನ್ನು ತುಂಡರಿಸಿ ಹಾಕಿದ್ದರೂ ಅವನು ಬದುಕಿದ್ದ ಅಂತ ಯಾರೋ ಮಾತಾಡಿಕೊಳ್ಳುತ್ತಿದ್ದ ನೆನಪು! ಯಾರು ಅದು ಹೇಳಿದ್ದು!? ಸರಿಯಾಗಿ ನೆನಪಿಲ್ಲ.
ಅಥವ… ಎರಡ್ಮೂರು ಗಂಟೆಗಳ ನಂತರ ತಾನು ಸತ್ತೋಗ್ತೀನಾ!?
ಭಯ ದುಪ್ಪಟ್ಟಾಗಿ ಸರ್ರನೆ ಅತ್ತ ರೂಮಿನಲ್ಲಿ ಮಲಗಿದ್ದ ತನ್ನ ಮಾಲೀಕ ಮೈಖೇಲ್‍ನತ್ತ ಹೋಗಿ ಬಾಗಿಲ ತಳ್ಳಿ ನಿಂತ. ಆತ ಈಗ ತಾನೆ ಗೊರಕೆ ಹೊಡೆಯಲು ಶುರು ಮಾಡಿದ್ದ ಅನ್ನಿಸುತ್ತದೆ, ಗೊರಕೆ ಸಣ್ಣ ದನಿಯಲ್ಲಿತ್ತು. ಭಯ, ನಾಚಿಕೆ, ಆತಂಕ ಎಲ್ಲವೂ ಅವನನ್ನು ಅಪ್ಪಿ ಕಚಗುಳಿ ಇಟ್ಟವು. ಚಳಿಗೆ ಅವನ ದೇಹ ಮೆಲ್ಲಗೆ ನಡುಗಲಾರಂಭಿಸಿತು. ವಾಪಸ್ ತಿರುಗಿದ, ಆದರೆ ಹೆಜ್ಜೆಯ ಮುಂದಿಡಲಾಗಲಿಲ್ಲ. ಅಣ್ಣ ಏನಾದ್ರೂ ದಾರಿ ಕಂಡುಹಿಡಿಯಬಹುದು, ತಡಮಾಡಿದರೆ ತಾನು ಸತ್ತೂ ಹೋಗಬಹುದು ಎಂದು ಗಟ್ಟಿಯಾಗಿ ಅನ್ನಿಸಿ ಮೈಖೇಲ್‍ನ ಕಾಲುಗಳ ಬಡಿದು ಎಬ್ಬಿಸಿದ.
ಆಗ ತಾನೇ ಕಣ್ಣ ಮುಚ್ಚಿದ್ದ ಮೈಖೇಲ್ ದಡಬಡಿಸಿ ಎದ್ದು “ಏನು ಏನಾಯ್ತು!? ಹಾಂ!?” ಎಂದು ಕೂಗಿಕೊಂಡ. ಎದುರಿಗೆ ಕೂತಿದ್ದ ಮಹೇಶನ ನೋಡಿ ಸಾವರಿಸಿಕೊಂಡು, ತುಟಿಯರಳಿಸಿ “ಯಾಕೊ… ಈ ವರ್ಷನೂ ವೆಕೆಷನ್ ಹೋಗಲ್ವಾ? ಮನೆ ಕೆಲಸ ಎಲ್ಲಾ ಮುಗಿದ ಮೇಲೇ ಹೋಗೋದಾ? ಟಿಕೆಟ್ ಕ್ಯಾನ್ಸಲ್ ಮಾಡಬೇಕಾ!?” ನಕ್ಕ. ತನ್ನ ಅಕ್ಕನ ಮದುವೆಗೂ ಇಂಡಿಯಾಕ್ಕೆ ಹೋಗದೆ ಹಣ ಕಳುಹಿಸಿ ವಾಟ್ಸಾಪ್‍ನಲ್ಲಿ ಫೊಟೊಗಳ ನೋಡುತ್ತಾ, ಇಮೊ ಇಂಟರ್‍ನೆಟ್ ವೀಡಿಯೊ ಕಾಲ್‍ನಲ್ಲಿ ಅಕ್ಕ-ಭಾವ ಇಬ್ಬರ ಜೊತೆ ಮಾತನಾಡಿ ಖುಷಿಯಿಂದ ಕುಣಿದಾಡುತ್ತಾ ಅಕ್ಕನ ಮಗನ ನಾಮಕರಣಕ್ಕೆ ಹೋಗುತ್ತೀನೆಂದುದು, ನಂತರ ಎರಡನೇ ಮಗುವಿನ ನಾಮಕರಣಕ್ಕೆ ಹೋಗುತ್ತೀನೆಂದು ಹೇಳುತ್ತಾ ರೂಮಿನೊಳಗೆ ಅಳುತ್ತಾ ಕೂತಿದ್ದವನನ್ನು ಸಮಾಧಾನಿಸಿ ಮುಂದಿನ ವರ್ಷ ಹೋಗುವಂತೆ ಎಂಬ ನಂಬುಗೆಯ ನೀಡಿದ್ದ ಮೈಖೇಲ್‍ನಿಗೆ ಮಹೇಶನ ಕಷ್ಟಗಳು ಗೊತ್ತಿವೆ.
ಮೈಖೇಲ್‍ನ ಆ ಪ್ರಶ್ನೆಯ ಕೇಳಿದ್ದೆ ಮಹೇಶನ ನೋವು ದುಪ್ಪಟ್ಟಾಗಿ ಅವನ ಮಿದುಳ ಸುರ್ರೆಂದು ಚುಚ್ಚಿ ಕಣ್ಣು ಮಂಜುಮಂಜಾದವು. ಓಓ ಎಂದು ಅಳತೊಡಗಿದ. ಗಲಿಬಿಲಿಗೊಂಡ ಮೈಖೇಲ್ ಮಹೇಶನ ಬೆನ್ನನ್ನು ಸವರುತ್ತಾ ವಿಷಯವ ಹೇಳುವಂತೆ ಎಷ್ಟು ಕೇಳಿದರೂ ಅಳುತ್ತಲೇ ಇರುವ ಇಪ್ಪತ್ತೈದು ವರ್ಷ ವಯಸ್ಸಿನ ಮಹೇಶನ ಅಳುವನ್ನು ತಡೆಯಲಾಗದೆ ನಿಸ್ಸಾಹಯಕನಾಗಿ ಸುಮ್ಮನೆ ಕೂತ. ಸುಮಾರು ನಿಮಿಷಗಳ ನಂತರ ಚೂರು ಸುಧಾರಿಸಿದ ಮಹೇಶನ ನೋಡಿ ಮೈಖೇಲ್ ಮೆಲ್ಲಗೆ
“ಸಮಾಧಾನ ಮಾಡ್ಕೊ… ವಿಷಯ ಹೇಳಿದ್ರೆ ತಾನೆ ನಂಗೆ ಏನು ಅಂತ ಗೊತ್ತಾಗೋದು… ನಿಮ್ಮಮ್ಮ ಏನಾದ್ರೂ…”
“ಇಲ್ಲಣ್ಣ…”
“ಮತ್ಯಾಕೊ ಹಿಂಗೆ ಅಳ್ತಾ ಇದೀಯ?”
ಸುಧಾರಿಸಿಕೊಂಡಿದ್ದ ಮಹೇಶ ತನ್ನ ಮಾಲೀಕನೂ ಒಡ ಹುಟ್ಟಿದ ಅಣ್ಣನಂತಿರುವ ಮೈಖೇಲ್‍ನ ಮುಖವನ್ನೇ ನೋಡಲು ಶುರು ಮಾಡಿದ. ಹೇಗೆ ಶುರು ಮಾಡುವುದೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ಅವನ ಮುಖವನ್ನೇ ನೋಡುತ್ತಿದ್ದ. ಮೈಖೇಲ್‍ನಿಗೆ ಸಿಟ್ಟು ಬರುತ್ತಿರುವುದ ಗಮನಿಸಿದ ಮಹೇಶ ತಟಕ್ಕನೆ “ ಅಣ್ಣ, ನನ್ ಬಾಲ್‍ಗಳು ಕಾಣಿಸ್ತಿಲ್ಲಣ್ಣ” ಮಾತುಗಳ ಉದುರಿಸಿ ತಲೆ ತಗ್ಗಿಸಿ ಕೂತ. ಮೈಖೇಲ್‍ನ ಮೈಯಲ್ಲಿ ಹರಿದಾಡಲು ಶುರುವಚ್ಚಿದ್ದ ಕೋಪ ಅವನ ನೆತ್ತಿಗೇರಿ ಹೆಡೆ ಬಿಚ್ಚಲು ತಯಾರಿಯಾಗಿದ್ದರೂ ಮಹೇಶನ ಈ ಮಾತುಗಳ ಕೇಳಿ ಪೊರೆಯ ಕಳಚಿ ಅವನಿಗೆ ನಗುವ ತರಿಸಿತು.
“ಏನು ಬಾಲ್ ಕಾಣಿಸ್ತಿಲ್ವಾ!? ನಿಮ್ಮಕ್ಕನ ಮಗುವಿಗೆ ತಗೊಂಡಿದ್ದಾ!? ಎಲ್ಲೊ ಇರಬೇಕು ಬೆಳಿಗ್ಗೆ ಹುಡುಕೋಣ ಹೋಗು…” ಎನ್ನುತ್ತಾ ಮಲಗಿ ತನ್ನೊಳಗೆ ಗೊಣಗಿಕೊಂಡ “ ನಿದ್ದೆ ಮಾಡೋ ಹೊತ್ತಲ್ಲಿ ಬಾಲ್ ಕಾಣಿಸ್ತಿಲ್ಲ, ತುಲ್ ಕಾಣಿಸ್ತಿಲ್ಲ ಅಂತ ಬಂದವ್ನೆ, ಬೋಳಿಮಗ.”
“ನಾ ಹೇಳ್ತಾ ಇರೋದು ಆಟದ್ ಬಾಲ್ ಅಲ್ಲಣ್ಣ…”
“ಮತ್ಯಾವ ಬಾಲೊ!?”
“ನನ್ ಬಾಲ್… ತರಡ್ ಬೀಜ”
ಕರೆಂಟ್ ಬಡಿದವನಂತೆ ಎದ್ದು ಕೂತ ಮೈಖೇಲ್ ಚಣ ಮಹೇಶನನ್ನೇ ನೋಡಿದ; ಅವನ ಹಾಲುಗೆನ್ನೆಗಳು ಊದಿಕೊಂಡಂತಿದ್ದವು. “ಏನ್ ಹೇಳ್ತಾ ಇದಿಯೊ…!? ತಲೆಬುಡ ಅರ್ಥ ಆಗ್ತಿಲ್ಲ!”
“ನಮ್ಮಮ್ಮನ್ ಸತ್ಯವಾಗ್ಲೂ ಹೇಳ್ತಿದ್ದೀನಿ ಅಣ್ಣ…”
ಏನು ಮಾತನಾಡುತ್ತಿದ್ದೇವೆ ಎಂಬುದು ತೋಚದೆ ಮೈಖೇಲ್ ಒಂದು ಚಣ ತಲೆ ಕೊಡವಿ “ಯಾವುದೊ ಕನಸು ಕಂಡಿದಿಯಾ, ಇಲ್ಲೇ ಮಲಗಿಕೊ … ಅಗೊ ಅಲ್ಲಿ ಚಾಪೆ ಹಾಸ್ಕೊಂಡು ಮೇಲೊಂದು ರಗ್ ಹಾಸ್ಕೊಂಡು ಮಲಗು” ಎಂದರೂ ಅವನೊಳಗೆ ಅವ್ಯಕ್ತ ಭಯವೊಂದು ಮೆಲ್ಲಗೆ ತೆವಳಿತು.
ಮಹೇಶನ ಮಿದುಳೊಳಗಿನ ನರಗಳು ಎಳೆದುಕೊಂಡು, ಅವನ ಕಣ್ಣುಗಳು ಜುಮ್ಮೆಂದು ಅವನ ಈ ಹೊತ್ತಿನ ಪ್ರಶ್ನೆಗೆ ಉತ್ತರವೊಂದನ್ನು ಗಾಳಿಯಲ್ಲಿ ಕಂಡು ಅದರ ಹಿಂದೆ ಅವನ ಮನಸ್ಸು ಓಡಿತು.
ತನ್ನ ಕನಸಲ್ಲಿ ಬಂದ ಆ ನಾಯಿಗಳು ಏನಾದರೂ ತನ್ನ ಬೀಜಗಳನ್ನು ಕಿತ್ತುಕೊಂಡು ಹೋದವೆ!? ಅಥವ ಕನಸು ಕಾಣುಕಾಣುತ್ತಾ ತಾನೇ ನಾಯಿಯಾಗಿ ಬದಲಾಗಿ ತನ್ನ ಬೀಜಗಳನ್ನು ನೆಕ್ಕಿಕೊಳ್ಳುತ್ತಾ ಕಿತ್ತು ನುಂಗಿಬಿಟ್ಟನೇ!? ಛಿ… ಎಂತೆಂತಹ ಕೆಟ್ಟ ಕಲ್ಪನೆಗಳು!
ಮೈಖೇಲ್‍ನತ್ತ ನೋಡಿದ, ಅವನು ಮುಖದವರೆವಿಗೂ ಬೆಡ್‍ಶಿಟ್ ಹೊದ್ದು ಮಲಗಿದ್ದ. ಮಹೇಶ ಟ್ಯೂಬ್‍ಲೈಟ್ ಸ್ವಿಚ್ ಹಾಕಿ ಪಟ್ಟನೆ ಬಟ್ಟೆಗಳ ಕಳಚಿ ನಿಂತು,
“ಅಣ್ಣ… ನೀನೇ ನೋಡಣ್ಣ” ಎನ್ನುತ್ತ ಎಡಗೈಯಲ್ಲಿ ಮುಟ್ಟಿ ನೋಡಿಕೊಂಡ, ಅಕಸ್ಮಾತ್ ಬೀಜಗಳು ವಾಪಸ್ ಬಂದುಬಿಟ್ಟವೇನೊ ಎಂದು.
ಮೈಖೇಲ್ ಬೆಡ್‍ಶೀಟ್ ಸರಿಸಿ ಅಂಜುತ್ತಾ ಮೆಲ್ಲಗೆ ಕಣ್ಣ ಅತ್ತ ಕಳುಹಿಸಿದ. ಅರೆ! ಏನಿದು!
ಎದ್ದು ಕೂತ ಮೈಖೇಲ್ ನಗುವ ತಡೆಯಲಾಗದೆ ಜೋರಾಗಿ ನಕ್ಕ, ನಗುತ್ತಲೇ ಇದ್ದ ಎರಡು ನಿಮಿಷ.
ನಗುವ ತಡೆದು ಮಹೇಶನ ಬಳಿ ಹೋಗಿ, ಕೂತು ತನ್ನ ಎಡಗೈಯಲ್ಲಿ ಅನಾಥವಾಗಿ ನೇತಾಡುತ್ತಿರುವ ಮಹೇಶನ ಸಾಮಾನಿನ ಕೆಳಗೆ ಮುಟ್ಟಿ ನೋಡಿದ. ತಣ್ಣಗೆ, ಮೃದುವಾದ ಚರ್ಮ… ಮೈಖೇಲ್‍ನ ಮೈ ಜುಮ್ಮೆಂದಿತು. ತಲೆ ಬಗ್ಗಿಸಿ ನೋಡಿದ. ಆಸುಪಾಸೆಲ್ಲ ಹುಡುಕಿ ನೋಡಿದ, ಎಲ್ಲೂ ಬೀಜಗಳು ಕಾಣಿಸಲಿಲ್ಲ. ನುಣುಪಾಗಿದ್ದ ಮಹೇಶನ ತೊಡೆಗಳು ಮೈಖೇಲ್‍ನಿಗೆ ತನ್ನ ಹೆಂಡತಿಯ ನೆನಪಿಸಿದವು. ಅವಳ ತೊಡೆಗಳ ಸ್ಪರ್ಶಿಸಿ ಮೂರು ವರ್ಷಗಳಿಗೂ ಮೇಲಾಗಿದ್ದವು. ಮೈ ಬಿಸಿಯಾಯ್ತು.
“ಹೌದು ಕಣ್ ಮಾಯಿ, ಎಲ್ಲೊದ್ವೊ ಬೀಜ…!? ಹುಡುಗಾಟಕ್ಕೆ ಹೇಳ್ತಾ ಇದೀಯೇನೊ ಅಂದ್ಕೊಂಡ್ನಲ್ಲೊ… ಥೂ…
ಅವನಮ್ಮನ್”
ಆದರೂ ನಗುವ ತಡೆಯಲಾಗದೆ ಹಾಗೆ ಅಂಗಾತ ಮಲಗಿ ಊರೇ ಕೇಳಿಸುವಷ್ಟು ನಗುತ್ತಿದ್ದ.
ವಿಕಾರವಾಗಿ ನಗುತ್ತಿದ್ದ ತನ್ನ ಮಾಲೀಕ ಮೈಖೇಲ್‍ನ ನೋಡಿ ಮಹೇಶನಿಗೆ ಅಗಾಧ ಸಿಟ್ಟು ಕೆನೆಯುತ್ತಿತ್ತು. ಈ ನನ್ಮಗಂದು ಹೋಗಬೇಕಿತ್ತು, ಈ ನನ್ಮಗನದು ಹೋಗಿದ್ದರೆ ಯಾರ್ ಅಳ್ತಿದ್ರು… ಅವು ಇದ್ದು ಇವ್ನು ಏನ್ ಮಾಡಬೇಕಿದೆ! ಮಕ್ಕಳು ಮದುವೆ ಆಗೊ ವಯಸ್ಸಿಗೆ ಬಂದಿದ್ದಾರೆ… ಅದೂ ಇಲ್ದೆ ಸುಕ್ಕಾಗಿ ಮುರುಟಿಕೊಂಡಿರಬೇಕು… ಥೂ… ಹಾಳಾದ್ದು ನಂದೇ ಹೋಗಬೇಕಾ! ಎಂದುಕೊಳ್ಳುತ್ತಾ ಅಂಡರ್‍ವೇರ್, ಬರ್ಮಾಡಗಳ ಎಳೆದುಕೊಂಡು ಗೋಡೆಗೆ ಆತು ಕೂತ ಮಹೇಶ.
ಎದ್ದು ಕೂತ ಮೈಖೇಲ್ ಮಹೇಶನ ನೋಡಿ “ಏನೂ ಆಗಲ್ಲ, ಧೈರ್ಯದಿಂದಿರು… ಹೇಗಿದ್ದರೂ ನಾಳೆ ಇಂಡಿಯಾಕ್ಕೆ ಹೋಗುತ್ತಿದ್ದಿ, ಹೋದ ತಕ್ಷಣ ಹಾಸ್ಪಿಟಲ್‍ಗೆ ಹೋಗಿ ತೋರಿಸ್ಕೊ… ಹೊಸದಾಗಿ ಬೀಜಗಳನ್ನು ಹಾಕ್ತಾರೆ” ಎನ್ನುತ್ತಲೇ ನಕ್ಕ.
“ಹೌದಣ್ಣಾ…?! ಹಂಗೆ ಮಾಡಬಹುದಾ!?” ಎನ್ನುವಾಗ ತನ್ನ ಬುಲ್ಲಿ ಮೊದಲ ಬಾರಿಗೆ ಜುಮ್ಮೆಂದೆದ್ದಿದ್ದನ್ನು ಅನುಭವಿಸಿದ ಮಹೇಶ ಮೈಖೇಲ್‍ನ ಉತ್ತರವ ಹಿಡಿಯಲು ಹವಣಿಸಿದ.
“ಮತ್ತೆ, ಏನಂದಕೊಂಡಿದಿಯಾ ಇವತ್ತು ಮೆಡಿಕಲ್ ಫೆಸಿಲಿಟಿಗಳನ್ನು… ಹೃದಯವನ್ನೇ ಚೇಂಜ್ ಮಾಡೋರು ಪುಟಗೋಸಿ ನಿನ್ ತರಡ್‍ಬೀಜ ಚೇಂಜ್ ಮಾಡಲ್ವೇನೊ…ನೀನಂತೂ…”
“ಹೃದಯಾನೇ ಚೇಂಜ್ ಮಾಡ್ತಾರಾ? ಹೆಂಗಣ್ಣ ಸಾಧ್ಯ?”
“ಲೇಯ್ ದಡ್ಡ… ಎಲ್ಲಿದಿಯಾ ನೀನು? ಇವತ್ತು ಏನ್ ಬೇಕಾದ್ರೆ ಚೇಂಜ್ ಮಾಡ್ತಾರೆ… ಮನುಷ್ಯರು ಸತ್ ಹೋಗಿ ಇಷ್ಟು ಗಂಟೆ ಅಂತ ಇರುತ್ತೆ, ಅದುವರ್ಗೂ ನಮ್ ಹಾರ್ಟ್ ಆಕ್ಟಿವ್ ಆಗೇ ಇರುತ್ತೆ, ಟೈಮ್ ಮುಗಿಯೊದ್ರೊಳಗೆ ಸರ್ಜರಿ ಮಾಡಿ ಹೃದಯವನ್ನು ತೆಗೆದು ಬಿಡ್ತಾರೆ. ಆಮೇಲೆ ಹಾರ್ಟ್ ವೀಕ್ ಆಗಿರೋರಿಗೆ ಅದನ್ನು ಫಿಕ್ಸ್ ಮಾಡ್ತಾರೆ, ಅಷ್ಟೆ. ಆಕ್ಸಿಡೆಂಟ್ ಆಗೊ ಕಾರ್‍ಗಳ ಎಂಜಿನ್ ತೆಗೆದು ಬೇರೆ ಕಾರ್‍ಗೆ ಹಾಕಲ್ವಾ ನಾವು ಹಂಗೆ!”
“ಹಂಗಂದ್ರೆ ನಂಗೆ ಸತ್ತಿರೋರ ಬೀಜ ಫಿಕ್ಸ್ ಮಾಡ್ತಾರಾ?”
ನಗು ತಡೆಯಲಾಗದೆ ಮೈಖೇಲ್ “ಡಾಕ್ಟರ್ ಹೇಳ್ತಾರೆ, ಏನ್ ಮಾಡಬೇಕು ಅಂತ… ಏನೂ ಆಗಲ್ಲ ಸುಮ್ನಿರು,” ಎನ್ನುತ್ತಾ ಎದ್ದು ಬಾತ್‍ರೂಮ್ ಕಡೆ ನಡೆದ. ಹೋಗುತ್ತಿರುವಾಗ ಮೈಖೇಲ್‍ನ ಕಣ್ಣುಗಳೊಳಗೆ ಮಹೇಶನ ತೊಡೆಗಳು, ಅವನ ಉದ್ದನೆಯ ಸಾಮಾನು ಎಲ್ಲವೂ ತೂರಾಡುತ್ತಿದ್ದವು. ತನ್ನ ಅಂಗೈಯನ್ನು ನೋಡಿದ, ಬಾತ್‍ರೂಮ್ ಬಾಗಿಲ ಮುಚ್ಚಿ ಚಿಲಕ ಬಡಿದು ಅಂಗೈಯನ್ನು ಮೂಸಿ ನೋಡಿದ. ಅವನ ಹೆಂಡತಿಯ ಗುಪ್ತಾಂಗದ ವಾಸನೆಯ ನೆನಪಿಸಿಕೊಂಡ, ಅವಳ ತೊಡೆಗಳು, ದುಂಡನೆಯ ಮೊಲೆಗಳು, ತೊಡೆ ಸಂಧಿಯ ರಂಧ್ರ, ತನ್ನ ಬೆರಳು-ನಾಲಗೆ… ಎಲ್ಲವನ್ನೂ ನೆನಪಿಸಿಕೊಳ್ಳುತ್ತಾ ಲುಂಗಿಯ ಕಿತ್ತೆಸೆದು ಚೆಡ್ಡಿಯನ್ನು ಕೆಳಗೆ ಎಳೆದು ಸಾಮಾನಿಗೆ ಕೈ ಹಾಕಿದ. ಅದು ತೆಪ್ಪಗೆ ಮಲಗಿತ್ತು. ಎರಡೂ ಕೈಗಳ ಬಳಸಿ ಎಬ್ಬಿಸಲು ಯತ್ನಿಸಿದ. ಎಷ್ಟು ಪ್ರಯತ್ನಿಸಿದರೂ ಅದು ಮಲಗೇ ಇತ್ತು. ಮೂರ್ನಾಲ್ಕು ವರ್ಷಗಳಿಂದ ಹೀಗೇ ಅದನ್ನು ಬಡಿದು ಎಬ್ಬಿಸಬೇಕಾಗಿದೆ ಅವನಿಗೆ… ಆ ಸಂದರ್ಭಗಳಲ್ಲಿ ಹೆಂಡತಿ ಮಾತ್ರವಲ್ಲದೆ ಯಾರ್ಯಾರನ್ನೊ ನೆನಪಿಸಿಕೊಂಡಿದ್ದಿದ್ದೂ ಇದೆ. ಮರುಭೂಮಿಯ ಪ್ರತಿ ಚಳಿಗಾಲವೂ ದಶಕಗಳಿಂದ ಅವನನ್ನು ಹೀಗೇ ಬೆಚ್ಚಗೆ ಮಲಗಿಸುತ್ತಿದ್ದವು. ಈ ಹದಿನೇಳು ವರ್ಷಗಳಲ್ಲಿ ಅವನು ನಾಲ್ಕು ಬಾರಿ ಇಂಡಿಯಾಕ್ಕೆ ಹೋಗಿ ಮಕ್ಕಳನ್ನುಟ್ಟಿಸಿ ಬರಲು ಅದನ್ನು ಬಳಸಿಕೊಂಡಿದ್ದರ ಹೊರತಾಗಿ ಬಹುತೇಖ ಸಮಯ ಅವನ ಕೈಗಳೇ ಅದನ್ನು ಸಮಾಧಾನಿಸಿವೆ. ಆದರೆ ಈ ಮೂರ್ನಾಲ್ಕು ವರ್ಷಗಳಿಂದ ಮನಸ್ಸಿನೊಳಗಿರುವ ಆಸೆಯ ತಣಿಸಲು ಅದನ್ನು ಬಡಿದೆಬ್ಬಿಸಲು ಹರಸಾಹಸ ಪಡಬೇಕಾಗಿದೆ. ತನ್ನೀ ಪ್ರಯತ್ನವನ್ನು ಮಹೇಶ ಹಾಲ್‍ನಲ್ಲಿ ಕೂತೇ ಕಲ್ಪಿಸಿಕೊಳ್ಳುತ್ತಿರಬಹುದೆ ಎಂಬ ಅನುಮಾನವೂ ಒಮ್ಮೊಮ್ಮೆ ಅವನನ್ನು ಕಾಡಿದೆ. ಈಗಲೂ ಹಾಗೇ ಯೋಚಿಸಿದ, ಬಹುಶಃ ಮಹೇಶನಿಗೆ ತನ್ನೀ ಕಷ್ಟ ಗೊತ್ತಾಗಿರಬಹುದೆ!? ಅರೆ, ಅವನಿಗೆ ಅದೇಗೆ ತರಡು ಬೀಜಗಳು ಮಾಯವಾದವು!? ತನ್ನ ಜೀವಿತದಲ್ಲೇ ಇಂತಹ ಘಟನೆಯನ್ನು ಕೇಳೇ ಇರಲಿಲ್ಲ!
ಮಹೇಶನನ್ನು ನೆನಪಿಸಿಕೊಂಡಿದ್ದಂತೆ ಮೈಖೇಲ್‍ನಿಗೆ ಭಯವಾಗಿ ಸಾಮಾನನ್ನು ಬಿಟ್ಟು ಕೆಳಗೆ ನೋಡಿಕೊಂಡ. ಭಯ ಒಮ್ಮೆಲೆ ಅವನ ಎದೆಗೆ ಅಪ್ಪಳಿಸಿತು!
ಚಂಗನೆ ಎಗರಿ ಮತ್ತೊಮ್ಮೆ ನೋಡಿಕೊಂಡ.
ಅವನ ಬೀಜಗಳೂ ಮಾಯವಾಗಿದ್ದವು!
ಈಗ ಕಿಲ ಕಿಲ ನಗುವಿನ ಸರದಿ ಮಹೇಶನದು!
ಒಬ್ಬರನ್ನೊಬ್ಬರು ನೋಡಿಕೊಂಡು ನಕ್ಕೂ ನಕ್ಕೂ ಸುಸ್ತಾಗಿ ‘ ಹೀಗೆ ಬೀಜಗಳು ಮಾಯವಾ ಗಿದ್ದು ಹೇಗೆ’ ಎಂದು ಯೋಚಿ-ಸತೊಡ ಗಿದರು. ಬೀಜಗಳು ಕಾಣೆ ಯಾದ ವಿಷಯವನ್ನು ಮಹೇಶ ಹೇಳಿದ್ದ ರಿಂದಲೇ ತನಗೂ ಅದು ಕಾಣೆ ಯಾ ಗಿವೆ ಎಂಬುದು ಮೈಖೇಲ್‍ನ ವಾದ. ಮಹೇಶ ನಿಗೂ ಅದು ಸರಿಯೆನ್ನಿ ಸಿದರೂ ತನಗೆ ಹೇಗೆ ಮಾಯವಾದವು ಎನ್ನುವುದು ತಿಳಿಯದೆ ತಲೆಕೆಡಿ ಸಿಕೊಂ ಡಿರುತ್ತಿರುವಾಗ ಪದೆಪದೆ ಆಕ್ಸಿಡೆಂಟ್ ನಲ್ಲಿ ನರಳುತ್ತಿರುವ ದೇಹವೊಂದರ ಚಿತ್ರ ಕಣ್ಮುಂದೆ ಬರುತ್ತಿದ್ದುದು ಅವನಿಗೆ ಆಶ್ಚರ್ಯ ತರುತ್ತಿತ್ತು.
ಆ ಚಿತ್ರ ಕನಸೋ ನಿಜವೋ ಗೊತ್ತಾಗದೆ ತಳಮಳಿಸುತ್ತಿರುವಾಗ ಮೈಖೇಲ್ “ ಮಹೇಶ, ಈ ವಿಷಯವನ್ನು ಯಾರಿಗೆ -ಹೇಳೋಣ? ಯೋಚನೆ ಮಾಡು… ಅವನಮ್ಮನ್ ಅವರ ತರಡು ಬೀಜಾನೂ ಮಾಯ ಆಗ್ಲಿ…” ಎನ್ನುತ್ತಾ ನಕ್ಕ.
ಮಹೇಶ ನಿಗೆ ಇದು ಮಜಾ ಅನ್ನಿಸಿತು. ಹೌದಲ್ವಾ! ನಮಗೆ ಯಾರ್ಯಾರೂ ತೊಂದರೆ ಕೊಡ್ತಾರೊ, ಅವರಿಗೆಲ್ಲಾ ಪೋೀನ್ -ಮಾಡಿ ವಿಷಯವ ಹೇಳುವ ಎಂದು ತೀರ್ಮಾ ನಿ ಸಿಕೊಂಡರು. ಯಾರ್ಯಾ ರಿಗೆ ಮೊದಲು ಪೋೀನ್ ಮಾಡಬೇಕು ಎನ್ನುವುದು -ಒಂದು ದೀರ್ಘ ಚರ್ಚೆ ನಡೆಸಿ ಕೊನೆಗೆ ಇವರ ಗ್ಯಾರೆಜನ್ನು, ಇವರ ಕೆಲ ಸವನ್ನು ತುಚ್ಛವಾಗಿ ಕಾಣುವ, ಹತ್ತಾರು ಜನ ರಿಗೆ -ತಮ್ಮ ಕೆಲ ಸದ ಬಗ್ಗೆ ಕೆಟ್ಟದಾಗಿ ಸುದ್ದಿ ಹಬ್ಬಿಸುತ್ತ ಲಿರುವ ಕಾಲೇಜ್ ಪ್ರೋಫೆಸರ್ ಪ್ರತೀಶ್ ನಿಗೆ ಕರೆ ಮಾಡುವುದು ಎಂದು ತೀರ್ಮಾ ನವಾಯಿತು. ವಿಷಯ ತಿಳಿದದ್ದೇ ಅವನು ಸುಮ್ಮನಿರುವು ದಿಲ್ಲ, ತಕ್ಷಣ ಹತ್ತಾರು ಮಂದಿಗೆ ಕರೆ ಮಾಡಿ ‘ ನೋಡಿ, ಆ ಕಳ್ ನನ್ಮಕ್ಳಿಗೆ ದೇವರು ಸರಿ ಯಾದ ಶಿಕ್ಷೆ ನೀಡಿದ್ದಾನೆ’ ಎಂದು ಖಂಡಿತ ಇತರರಿಗೆ ಹೇಳುತ್ತಾನೆ ಎನ್ನುವ ಅಗಾಧ ನಂಬಿಕೆ ಇಬ್ಬರಲ್ಲೂ ಮೂಡಿತು. ಏನೋ ಡಿಗ್ರಿ ಮಾಡಿದ ಕಾರ ಣಕ್ಕೆ ಅವನಿಗೆ ಲಕ್ಷಗಟ್ಟಲೆ ಸಂಬಳ ವಾದರೆ ಹಗಲಿರುಳು ಬೆವರು ಸುರಿಸಿ ಕೆಲಸ ಮಾಡುವ ತಮಗೆ ತಿಂಗ ಳಿಗೆ ಹತ್ತಿಪ್ಪತ್ತು ಸಾವಿರ ರೂಪಾಯಿ ದುಡಿಯುವುದೇ ಕಷ್ಟದ ಕೆಲಸ. ಮೈಖೇಲ್ -ಖುಷಿಗೊಂಡು ಪೋೀನ್ ಎತ್ತಿಕೊಂಡ. ಮಹೇಶನ ಮನಸ್ಸು ತೇವವಾಯ್ತು. ಹತ್ತಾರು ಜನರಿಗೆ ಪಾಠ ಹೇಳಿಕೊಡುವ ಆ ಮೇಷ್ಟ್ರಿಗೆ ತಾವು ಮಾಡಿದ ಮೋಸಕ್ಕೆ ದೇವರು ತಮಗೀ ಶಿಕ್ಷೆಯನ್ನು ನೀಡಿದ್ದಾ ನೆಯೇ? ಅನ್ನಿಸಿ ಅದನ್ನು ಮೈಖೇಲ್‍ನೊಂ-ದಿಗೆ ಹೇಳಿಯೂ ಕೊರ ಗಿದ. ಮೈಖೇಲ್ ನಕ್ಕು “ ಅಂತ ಯಾವ ಶ್ಯಾಟಾನೂ ಇಲ್ಲ. ಮುಚ್ಕೊಂಡು ಕುತ್ಕೊ. ಆ ದೇವರು -ಅನ್ನೋ ಸೂಳೆಮಗ ಇದ್ರಿದ್ರೆ ನಾವ್ಯಾಕೆ ಹೀಗೆ ದೇಶ ಬಿಟ್ಟು ದೇಶಕ್ಕೆ ಬಂದು ಕಷ್ಟ ಪಡ್ತಿದೀವಿ. ನಿನಗೆ ಎಷ್ಟು ಸರ್ತೀನೋ ಹೇಳೋದು, ಈ ಜಗತ್ತೆಲ್ಲ ಹಣ ವಂತರು ಆಡೋ ಆಟ ಅಂತ… ಅವರೆದುರು ನಮ್ ಆಟಗಳು ಸೋಲುತ್ತಲೇ ಇರುತ್ತವೆ. ಅವನಮ್ಮನ್, ಈ ಆಟದಲ್ಲಿ ನಾವು ಅವರನ್ನು ಸೋಲಿಸೋಣ…” ಎಂದು ನಗುತ್ತಾ ಪ್ರೊಫೆಸರ್‍ಗೆ ಪೋೀನ್ ಮಾಡಿದ.
ವಿಮಾನ ಹತ್ತಿ ಒಳಗೆ ಕೂತಾಗಲೂ ಮಹೇಶ ನಿಗೆ ಭಾರತಕ್ಕೆ ಹೋಗುವ ಖುಷಿ ಗಿಂತ ಆ ಪ್ರೊಫೆಸರ್‍ನ ಗೋಳಾ ಟವನ್ನು ನೆನಪಿಸಿಕೊಂಡು ಎದೆಯ ಒತ್ತೊತ್ತ ನಗುತ್ತಿದ್ದ. ಬೀಜ ಮಿಸ್ಸಿಂಗ್ ವಿಷಯವನ್ನು ಇಂಡಿಯಾಕ್ಕೆ ಹೋದದ್ದೇ ಯಾರ್ಯಾ ರಿಗೆ -ಹೇಳಬೇಕು ಎನ್ನುವುದನ್ನು ಈಗಾಗಲೇ ಲಿಸ್ಟ್ ಮಾಡಿಕೊಂ ಡಿದ್ದರೂ ತನಗೆ ಎದುರಾಗುವ ಪ್ರತಿಯೊಬ್ಬರನ್ನು ನೋಡಿ ಅವರಿಗೆ ಹೇಳಲಾ? ಇವರಿಗೆ ಹೇಳಲಾ ಅನ್ನಿಸುವುದು, ಹೇಳಿ ಹೇಳಿ ಈ ಜಗತ್ತಿನ ಎಲ್ಲಾ ಗಂಡ ಸರ ಬೀಜಗಳನ್ನು ಮಾಯ ಮಾಡಿ -ಬಿಡಲೇ! ಅನ್ನಿಸಿ ಕಿಸ ಕ್ಕನೆ ನಕ್ಕ. ತನ್ನ ಸೀಟ್‍ನ ಪಕ್ಕದ 46 ಬಿ ಯಲ್ಲಿ ಕೂತಿದ್ದ – ಹಿಂದಿಯವ ಒಬ್ಬ ಇವನನ್ನು ನೋಡಿ -ಕಣ್ಣ ಕಿರಿದಾ ಗಿ ಸಿದ. ಮೂಗ ಮುಚ್ಚಿಕೊಂಡು ತಾನೊಬ್ಬ ಅಸಹ್ಯದವನು ಎನ್ನುವಂತೆ ಮುಖವ ಅತ್ತ ತಿರುಗಿ ಸಿಕೊಂಡ.
ಮಹೇಶ ನಿಗೆ ಪಿತ್ತ ನೆತ್ತಿಗೇರಿ ಇರು ಮಗನೆ ಮಾಡ್ತೀನಿ ನಿಂಗೆ… ಅಂದ್ಕೊಂಡು ಆತನ ನೋಡಿ “ ಹಲೊ ಸರ್… ಕೈಸೆ ಹೆ? ಆಪ್ ಕಿದರ್ ಸೆ?” ಎನ್ನುತ್ತಾ ಮುಖದ ತುಂಬಾ ಜೇನು ಸುರಿ ಸಿದ. ಆತ ನಾಲಗೆಯ ಮೆಲ್ಲಗೆ ಚಾಚಿ ಆತನ ಮುಖವ ನೆಕ್ಕ ತೊಡಗಿದ. ಬಾ… ಬಾ… ಎನ್ನುತ್ತಾ ಮಹೇಶ ಸರಿ ಯಾದ ಸಮಯವ ನೋಡಿ ‘ ಸರ್ ಮೇರಾ ಬಾಲ್ಸ್ ಮಿಸ್ಸಿಂಗ್ ಹೋಗಯ ಸರ್… ಇಸ್ ಕೇಲಿಯೇ ಮೆ ಇಂಡಿಯಾ. ಜಾಥಾಹೂಂ ಸರ್’ ತನಗೆ ಗೊತ್ತಿರುವ ಹಿಂದಿಯಲ್ಲಿ ಹೇಳುತ್ತಾ ಆತನ ಕಣ್ಣುಗಳನ್ನೇ ನೋಡುತ್ತಿದ್ದ. ಆತ ‘ ಕ್ಯಾ?’ ಎಂದು ಬಿಳುಚಿಕೊಂ ಡಿದ್ದ ನೆನೆದು ನಕ್ಕು ನಕ್ಕು ಸುಸ್ತಾಗಿ ಇಮಿಗ್ರೇ ಷನ್ ಮುಗಿಸಿ ಲಗೇಜ್ ಎತ್ತಿಕೊಂಡು ಹೊರ ಬರುವಾಗ ಯಾರೋ ಕೂಗಿದರು.
ಮಹೇಶ ತಿರುಗಿ ನೋಡಿದ. “ ಅರೆ! ಆವೊ ಇದರ್! ಕಸ್ಟಮ್ಸ್ ಕ್ಲಿಯರ್ ಕರೊ… ಯೂ ಬ್ಲಡಿ ಬೆಗ್ಗರ್” ಎಂದು ಯಾರೋ ಆಫೀಸರ್ ಒಬ್ಬಾತ ಕೂಗಿದ. ಮಹೇಶ ನಿಗೆ ಏನೊಂದೂ ಅರ್ಥವಾಗ ಲಿಲ್ಲ. ಇದೇ ಮೊದಲ ಬಾರಿಗೆ ವಿದೇ ಶ ದಿಂದ ಭಾರತಕ್ಕೆ ಬರುತ್ತಿದ್ದಾನೆ. “ ಕ್ಯಾ ಸರ್?” ಕೇಳಿದ. ಅವರ ಉತ್ತರದಿಂದ ನೆನಪಾದದ್ದು ತನ್ನ ಮಾಲೀಕ ಮೈಖೇಲ್ ಹೇಳಿದ ವಿಚಾರ. ಇಮಿಗ್ರೇ ಷನ್ ಮುಗಿ ಸಿದ್ದೇ ಮುಗಿಯಿತು ಎಂದ್ಕೋಬೇಡ, ಲಗೇಜ್ ಎತ್ತಿಕೊಂಡು ಹೊರ ಹೋಗುವಾಗ ಕಸ್ಟಮ್ಸ್ ಕ್ಲಿಯರ್ ಮಾಡಬೇಕು, ಬಂಗಾರ ಗಿಂಗಾರ, ದುಡ್‍ಗಿಡ್ಡು ತಗೊಂಡ್ ಹೋಗ್ತಾ ಇದೀಯೇನೋ ಅನ್ನೋದನ್ನ ಹೇಳಬೇಕು. ನಮ್ ಬ್ಯಾಗ್‍ಗಳನ್ನು ಸ್ಕ್ಯಾನ್ ಮಾಡುತ್ತಾರೆ, ಎಂದಿದ್ದು ನೆನಪಾಯ್ತು. ತನ್ನ ಸೂಟ್‍ಕೇಸ್‍ನ ಜೊತೆ ಮಾಲೀಕ ಮೈಖೇಲ್ ಅವನ -ಮನೆಗೆ ತಲುಪಿಸುವಂತೆ ಹೇಳಿ ಕೊಟ್ಟಿದ್ದ – ಬಾಕ್ಸ್‍ಗಳ ಇಟ್ಟಿದ್ದ ಟ್ರಾಲಿಯ ನ್ನು ತಳ್ಳಿಕೊಂಡು ಅತ್ತ ಹೋದ. ಕಸ್ಟಮ್ಸ್ ಅಧಿಕಾ ರಿಗಳು ಏನೇನೋ ಇಂಗ್ಲಿಷ್ ನಲ್ಲಿ ಮಾತಾ ಡಿಕೊಳ್ಳುತ್ತಿರುವಾಗ ಮಹೇಶ ತನ್ನ ಬ್ಯಾಗೇಜ್‍ಗಳನ್ನು ಸ್ಕ್ಯಾನ್‍ಗೆ ಇಡುತ್ತಿದ್ದ. ಅವರುಗಳು ಇವನನ್ನೇ ನೋಡಿ ಮಾತ ನಾಡುತ್ತಿದ್ದುದು ಮಹೇಶನೊಳಗೆ ಸಣ್ಣ ಭಯವೊಂದನ್ನು ತರಿಸಿತು. ಅಲ್ಲಿದ್ದ -ಮೂವರು ವ್ಯಕ್ತಿಗಳಲ್ಲಿ ಒಬ್ಬ ಮಾತ್ರ ಏನೇನೋ ಮಾತ ನಾಡುತ್ತಾ ಬ್ಯಾಗೇಜ್‍ಗಳನ್ನು ಮತ್ತೊಮ್ಮೆ ಸ್ಕ್ಯಾನ್ ಮಾಡಬೇಕೆಂದು ಜೋರು ಮಾಡಿದ. ಮಹೇಶ ಮರು ಮಾತ ನಾಡದೆ ಅವುಗಳ ಮತ್ತೊಮ್ಮೆ ಸ್ಕ್ಯಾನರ್ ಒಳಗೆ ಇಟ್ಟ. ಆ ಮೂವರೂ -ಏನೇನೋ ಮಾತ ನಾ ಡಿಕೊಳ್ಳುತ್ತಿರುವುದು ಮಹೇ ಶನ ದೇಹವನ್ನೇ ಗಡಗಡ ನಡುಗಿಸಿತು. ತನ್ನ ಮಾಲೀಕ ಮೈಖೇಲ್ -ಏನಾದರೂ ಆ ಬಾಕ್ಸ್‍ಗಳಲ್ಲಿ ಇಟ್ಟಿದ್ದಾ ನೆಯೇ? ಬಂಗಾರದ ಬಿಸ್ಕತ್‍ಗಳು!? ಛೆ! ಸಾಧ್ಯವೇ ಇಲ್ಲ… ಹೋದ ತಿಂಗಳು ಮಗಳ ಸ್ಕೂಲ್ ಅಡ್ಮಿಶನ್ ಮಾಡಿಸಲು ಆಗದೆ ಗೋಳಾಡುತ್ತಿದ್ದ! ಯಾರ್ಯಾರ ಬಳಿಯೋ ಸಾಲ ಮಾಡಿ ಇಂಡಿಯಾಕ್ಕೆ ಹಣ ಕಳುಹಿ-ಸಿದ್ದ! ಏನೋ ಹೇಳಿದ್ದೆ ನಲ್ಲ… ಏನದು? ಒಂದ್ ಬಾಕ್ಸ್ ಅನ್ನು ಯಾರಿಗೋ ಕೊಡಲು ಹೇಳಿದ್ದ. ಆ ಬಾಕ್ಸ್ ಆತ ನದಲ್ಲ… ಆತ ನದೇ… ಹಾಗೇ ನಾಟಕ ಮಾಡಿದ… ಆ ಬಾಕ್ಸ್ ನಲ್ಲಿ ಏನಾದರೂ…? ವೀಸಾ ಸಿಕ್ಕು ಅವನೂ ತನ್ನ ಜೊತೆ ಬಂದಿದ್ದರೆ ಈ ರಗಳೆ ಇರುತ್ತಿರಲಿಲ್ಲ… ಅವನ ಕಫೀಲ್‍ನಿಂದಲೇ ಇದಾದದ್ದು. ಆ ಅರಬಿ ವೀಸಾ ಕೊಟ್ಟಿದ್ದಿದ್ದರೆ ಆತನೂ ಜೊತೆಗಿರುತ್ತಿದ್ದ. ಅವನು ಯಾವಾಗ ಇಂಡಿಯಾಕ್ಕೆ ಬರುವುದು, ಬೀಜಗಳನ್ನು ಯಾವಾಗ ವಾಪಸ್ ಬರುವುದು?! ದೇವ್ರೇ!
ಜೋರು ಮಾಡುತ್ತಿದ್ದ ಅಧಿಕಾರಿ ಕಂಪ್ಯೂಟರ್ ತೆರೆಯ ಮೇಲಿನ ಸ್ಕ್ಯಾನ್ ಪೋೀಟೋದಲ್ಲಿ ಏನೋ ತೋರಿಸಿ ಉಳಿದ ವ ರಿಗೆ ಹೇಳುತ್ತಿದ್ದ. ಅವರಲ್ಲೊಬ್ಬ ಬಂದು ಅದೇ ಬಾಕ್ಸ್ ಅನ್ನು ಓಪನ್ ಮಾಡುವಂತೆ ಹೇಳಿದ. ಮಹೇಶ ನಿಗೆ ಮೈಯೆಲ್ಲ ಬೆಂಕಿ ಹತ್ತಿಕೊಂಡಂತೆ ತೋಚಿ ಉರಿದು ಹೋದ. ನಡುಗುತ್ತಾ ಸೀಲ್ ಮಾಡಿದ್ದ ಆ ಬಾಕ್ಸನ್ನು ಅಧಿಕಾರಿಯ ಸಹಾಯದೊಂ ದಿಗೆ -ತೆರೆದ. ಇಬ್ಬರು ಅಧಿಕಾ ರಿಗಳು ಒಂದೊಂದಾಗಿ ಆ ಬಾಕ್ಸ್‍ನಿಂದ ಸಾಮಾನುಗಳ ತೆರೆದರು. ಪರೀಕ್ಷಿಸುತ್ತಾ ಕಟ್ಟುಗಳ ಬಿಚ್ಚಿ ನೋಡುತ್ತಿದ್ದರು. ಮಹೇಶನ ಎದೆ ಬಡಿದುಕೊಳ್ಳುತ್ತಿರುವುದು ಅವನ ಕಿವಿಗ ಳಿಗೆ ಸ್ಪಷ್ಟ ವಾಗಿ ಕೇಳಿಸುತ್ತಿತ್ತು. ಆ ಸುವರ್ ಕೆ ಬಚ್ಚಾ ಮೈಖೇಶ್ ಏನಿಟ್ಟಿದ್ದಾನೋ…
ರಟ್ಟಿನ ಬಾಕ್ಸ್ ನಲ್ಲಿದ್ದ ಎಲ್ಲಾ ಸಾಮಾನುಗಳನ್ನು ಬಿಡಿ ಬಿ ಡಿಸಿ ನೋಡಿದರೂ ಅವರುಗಳು ಬಯಸಿದ್ದು ಸಿಗ ಲಿಲ್ಲ.
“ ಮ್ ತಗೊಂಡು ಹೋಗು’ ಎಂದು ಆತ ಹಿಂದಿಯಲ್ಲಿ ಹೇಳಿದಾಗ ಮಹೇಶ ನಿಗೆ ಸಮಾಧಾನ ಕೋಪಗಳು ತೇಲುತ್ತಾ -ಅವನ ಗಂಟ ಲಿಗೆ ಬಂದವು. ನಿಟ್ಟುಸಿ ರಿಟ್ಟು ಚಣ ಆ ಅಧಿಕಾ ರಿಗಳನ್ನೇ ನೋಡಿದ. ಯಾರೂ ಇವನನ್ನು ಕ್ಯಾರೆ ಅನ್ನಲಿಲ್ಲ. ಚೆಲ್ಲಾಪಿಲ್ಲಿ ಯಾ ಗಿದ್ದ ಸಾಮಾನುಗಳನ್ನೆಲ್ಲ ಒಂದೊಂದಾಗಿ ಎತ್ತಿ ಹಾಕುತ್ತಾ ಈ ನನ್ಮಕ್ಳ ಬೀಜಗಳನ್ನು ಮಾಯ ಮಾಡಬೇ ಕಲ್ಲ… ಹೇಗೆ? ಹಾದಿಗಳು ಗೊತ್ತಾಗದೆ ತಳಮಳಗೊಳ್ಳುತ್ತಾ ಎರಡನೇ ಬಾಕ್ಸ್‍ನ್ನು ಪ್ಯಾಕ್ ಮಾಡುವಾಗ ಅವನ ಕಿವಿ ಚುರುಕುಗೊಂಡು ಮುಖವ ಬಲಕ್ಕೆ ಎಳೆದು ಹುಡುಕಿಸಿತು. ಯಾವುದೋ ಪರಿ ಚಿತ ದನಿ ಎಲ್ಲೋ ಕೇಳಿ ಸಿದಂತಾಗಿ ಹುಡುಕುವಾಗ ಅರೆ! ಪ್ರೊಫೆಸರ್ ಪ್ರತೀಶ್! ಅವರೂ ಇಂಡಿಯಾಕ್ಕೆ ಬಂದಿದ್ದಾರೆ! ಯಾಕೆ ಈಗ!? ವೆಕೆ ಷನ್?! ಚಣ ಕಳೆದು ನೆನ್ನೆಯ ರಾತ್ರಿಯ ಘಟ ನೆಗಳು ನೆನಪಾಗಿ ನಗು ಉಕ್ಕುಕ್ಕುತ್ತಾ ಮೇಲೆ ಬಂದು ಮಹೇಶನ ದೇಹವನ್ನೇ ಅಲುಗಾ ಡಿಸಿ ಭಯಂಕರ ನಗುವ ನಗಿಸಿತು. ಆ ವಿಕಾರ ನಗುವನ್ನು ಎಣಿಸಿರದ ಕಸ್ಟಮ್ಸ್ ಅಧಿಕಾ ರಿಗಳು ಮಹೇಶ ನತ್ತ ನೋಡಿದರು. -ಮಹೇಶ “ ಸ್ಸಾರಿ ಸ್ಸಾರಿ” ಎನ್ನುತ್ತಾ ಬಾಕ್ಸ್‍ಗಳನ್ನು ಎತ್ತಿ ಟ್ರಾಲಿ ಗೆ ಹಾಕಿದ. ಆ ನಾಲ್ವರು ಅಧಿಕಾ ರಿಗಳಲ್ಲಿ ಹುಚ್ಚ ನಂತೆ ಆಡುತ್ತಿದ್ದ ವ್ಯಕ್ತಿ ತನ್ನನ್ನೇ ದುರುಗುಟ್ಟಿ ನೋಡಿದ್ದು ಮಹೇಶ ನಿಗೆ ಅರಿವಾಯ್ತು.
ಪ್ರೊಫೆಸರ್ ಪ್ರತೀಶ್ ತನ್ನ ಸೂಟ್‍ಕೇಸ್‍ಗಳನ್ನು ಸ್ಕ್ಯಾನ್ ನಿಂದ ಹೊರ ತೆಗೆದು ಟ್ರಾಲಿ ಯಲ್ಲಿಟ್ಟು ಹೊರಡುತ್ತಿದ್ದ. ಅವನ -ಮುಖ ಸೊರಗಿ ಹೋಗಿದ್ದನ್ನು ಗುರುತಿ ಸಿದ ಮಹೇ ಶ ನಿಗೆ ನಗು ತಡೆಯಲಾಗ ಲಿಲ್ಲ. ಕಿಸ ಕ್ಕನೆ ನಗುತ್ತಾ ‘ ಗುಡ್ ಮಾರ್ನಿಂಗ್ -ಪ್ರೊಪೆಸರ್ ಸರ್’ ಎಂದ. ಬೆಚ್ಚಿ ಬಿದ್ದ ಪ್ರೊಫೆಸರ್ ಪ್ರತೀಶ್ ಇತ್ತ ತಿರುಗಿದ. ಮಹೇಶ ಕಾಲುಗಳ ಅಗಲಿಸಿ ನಿಂತು ‘ ಹೌ -ಆರ್ ಯೂ ಸರ್’ ಎಂದ. ಪ್ರೊಫೆಸರ್ ಮುಖ ಕಪ್ಪಿಟ್ಟು ಉಪ್ಪಿಟ್ಟಾದುದ ನೋಡಿ ಮಹೇಶ ಬಹು ಸಂತೋ ಷಗೊಂಡು ಮತ್ತಷ್ಟು ಕಾಲುಗಳ ಕೆಕ್ಕರಿಸಿ “ಏನಾದ್ವು ಸರ್ ನಿಮ್ ಬೀಜದ ಕಥೆ” ಎಂದು ಮನಸ್ಸಿನೊಳಗೆ ಕೇಳುತ್ತಾ ಸಮಾಧಾನವಾಗುವಷ್ಟು ನಕ್ಕ.
ಮಹೇಶನ ನಿಂತಿರುವ ಭಂಗಿಯನ್ನೇ ಚಣ ಎವೆಯಿಕ್ಕದೆ ನೋಡಿದ ಖಡಕ್ ಅಧಿಕಾರಿ ಅವನ ನ್ನು ಕರೆತರುವಂತೆ ಹೇಳಿದ.
ಸಂತೋ ಷ ದಿಂದ ಸಡಿ ಲಗೊಂ ಡಿದ್ದ ಮಹೇಶನ ಮಿದುಳ ನರಗಳೆಲ್ಲಾ ಒಮ್ಮೊಲೇ ಎಳೆದಂತಾಗಿ ಕೋಪ ನೆತ್ತಿಗೇರಿತು.
ಅವನನ್ನು ಕೋಣೆಯೊಂದರೊಳಗೆ ಕರೆದುಕೊಂಡು ಹೋದ ಅಧಿಕಾರಿ ಒಳ ಗಿದ್ದ ವರ ಜೊತೆ ಏನೋ ಮಾತ ನಾಡಿ ಹೊರಟು ಹೋದ.
ಅಲ್ಲಿದ್ದ ದಢೂತಿ ದೇಹದ, ಸಿಕ್ಸ್ ಪ್ಯಾಕ್ ಹೊಂದಿದ್ದಂತೆ ಕಾಣುತ್ತಿದ್ದ ಆ ಅಜಾನುಬಾಹು ವ್ಯಕ್ತಿ ಕೈಯಲ್ಲಿ ಹಿಡಿಯುವ -ಸ್ಕ್ಯಾನರ್ ಮೂಲಕ ಮಹೇಶನ ದೇಹವನ್ನು ಇಂಚಿಂಚಾಗಿ ಸ್ಕ್ಯಾನ್ ಮಾಡುತ್ತಾ ಬಂದ. ಮಹೇಶ ನಿಗೆ ಮತ್ತೊಮ್ಮೆ ಎದೆ ಬಡಿದುಕೊಳ್ಳಲಾರಂ ಭಿಸಿತು. ಪಾದಗ ಳಿಂದ ಶುರುವಾದ ಆ ಸ್ಕ್ಯಾನರ್ ಮೆಲ್ಲಗೆ ಏರುತ್ತಾ ತೊಡೆಗಳ ಬಳಿ ಬಂದದ್ದೇ ಮಹೇಶ ನಿಗೆ ಕಚಗುಳಿ ಇಟ್ಟಂತಾಯ್ತು. ಇನ್ನೇನು ಆ ಜಾಗ ವ ನ್ನು ಮುಟ್ಟಬೇಕು ಎನ್ನುವಾಗ ಆ ಸ್ಕ್ಯಾನರ್ ಹಿಂದಕ್ಕೆ ಹೋಯಿತು.
ಕಾಲುಗಳ ಅಗಲಿಸಿ ನಿಲ್ಲುವಂತೆ ಆತ ಹೇಳಿದ. ಮಹೇಶನಿಗೆ ಕೋಪ ಉಕ್ಕಿ ಬಂದರೂ ಕಾಲುಗಳ ಅಗಲಿಸಿ ನಿಂತ. ಆ -ಸ್ಕ್ಯಾನರ್ ಮಹೇ ಶನ ಮುಕುಳಿಗಳನ್ನು ತಡವಿ ನೋಡಿತು. ಮತ್ತಷ್ಟು ಕಾಲುಗಳ ಅಗಲಿಸುವಂತೆ ಆತ ಹೇಳಿದ್ದಕ್ಕೆ ‘ ಯಾಕೆ -ಸಾರ್?’ ಕೇಳಿದ. “ಅಗಲಿ ಸಲೇ…’ ಎಂದಿತು ಆ ದಢೂತಿ ಆಸಾಮಿಯ ದನಿ.
ಕಾಲುಗಳ ಮಧ್ಯೆ ಮುಕುಳಿಯ ಕೆಳಗೆ ಆ ಸ್ಕ್ಯಾನರ್ ಹೋಯಿತು. ಮಹೇಶ ನಿಗೆ ಸಹಿ ಸಲಾಗ ಲಿಲ್ಲ. ಆ ಸ್ಕ್ಯಾನರ್ ತನ್ನ ಬೀಜಗಳ ಜಾಗವನ್ನು ಸ್ಪರ್ಶಿಸಿದಾಗ ಜೀವವೇ ಸಿಡಿದು ಹೋಗುವಷ್ಟು ಭಯವಾಗಿ ಕಿರುಚಿಕೊಂಡ.
“ ಏನಕ್ಕೆ ಸರ್ ಹೀಗೆ ಮಾಡ್ತೀರಾ? ಥೂ ಅಸಹ್ಯ”
“ ಊಂ… ನಿಂಗೆ ಸಾಮಾನು ಇದೆಯಾ ಇಲ್ವಾ ಅಂತ ಚೆಕ್ ಮಾಡೋಕೆ… ಬೋಳಿ ಮಗನೆ, ನಾಟಕ ಆಡ್ತೀಯಾ… ತಿಕದೊಳಗೆ ಗೋಲ್ಡ್ ಬಿಸ್ಕಟ್ ಇಟ್ಕೊಂಡ್ ಬಂದಿ ದಿಯಾ!? ಹೇಳ್ ಬಿಡು, ಇಲ್ಲಾಂದ್ರೆ ಬಟ್ಟೆ ಎಲ್ಲಾ ಬಿಚ್ಚಿಸಿ ತೂತೊಳಗೆ -ಕಡ್ಡಿ ಇಟ್ಟು ಅಲ್ಲಾಡಿಸ್ತೀನಿ”
“ ಏನ್ ಸರ್… ಬಂಗಾರಾನಾ? ಹೋಗಿ ಹೋಗಿ ಸರ್… ಗ್ಯಾರೇಜ್ ಕೆಲ್ಸ ಮಾಡೋ ನತ್ರ ಗೋಲ್ಡ್ ಬಿಸ್ಕೆಟ್ ಹೆಂಗೆ ಬರುತ್ತೆ?!”
‘ ಲೇಯ್, ತಿಕ ಮುಚ್ಯೊ… ನಮಗೆಲ್ಲಾ ಗೊತ್ತು. ತಿಂಗ ಳಿಗೆ ಒಬ್ಬರಾದ್ರೂ ನಿಮ್ಮಂತೋರು ಸಿಕ್ಕಿ ಹಾಕಿಕೊಳ್ತಾರೆ. ಅದೆಂಗೊ ತಿಕದೊಳಗೆ ಆ ಬಿಸ್ಕಟ್‍ಗಳನ್ನ ತೂರಿಸ್ಕೋತೀರಾ… ಥೂ… 5- 10 ಸಾವಿರ ಕಮಿಷನ್ ಕೊಡ್ತಾರೆ ಅಂತ ಹೀಂಗ ಮಾಡೋದು. ಏನಾದ್ರೂ ಒಳಗೇ ಸಿಕ್ ಹಾಕ್ಕೊಂಡ್ರೆ ಏನೋ ಮಾಡ್ತೀರಾ? ಬಾಯಲ್ಲೇ ಕಕ್ಕಸ್ ಮಾಡಬೇಕಾಗುತ್ತೆ ನೋಡು.”
“ ಏನ್ಸಾರ್ ನೀವು, ಗೋಲ್ಡ್ ಬಿಸ್ಕೆಟ್‍ಗಳನ್ನು ತುರಿಕಿಕೊಂಡು ಬಂದಿದೀನಿ ಅನ್ನೋ ಥರ ಮಾತಾಡ್ತಿರಲ್ಲ. ನಮ್ಮಂತಹ ಬಡ-ವರನ್ನು ಮಾತ್ರ ಹಿಂಗೆ ಚೆಕ್ ಮಾಡಿ, ಸೂಟುಬೂಟು ಹಾಕ್ಕೊಂ ಡಿರೋ ಜನರನ್ನು ಮಾತಾ ಡಿಸೋದೂ ಇಲ್ಲ, ಹಂಗೆ ಕಳುಹಿಸಿ ಬಿಡ್ತೀರಿ… ಅಲ್ವಾ ಸರ್?” ಪ್ರೊಫೆಸರ್ ಪ್ರತೀಶ ಮಹೇಶನ ಸಿಟ್ಟನ್ನು ಕೆಣಕುತ್ತಿದ್ದ.
“ ಏಯ್, ಜಾಸ್ತಿ ನಿಗರಬೇಡಲೆ… ಬಿಚ್ಚೋ ಬಟ್ಟೇನಾ … ಬಿಚ್ಚೋ ಸುವರ್ ನನ್ಮಗ್ನೆ.”
ಮಹೇಶ ಆತ ನನ್ನೇ ನೋಡಿದ. ಕಿಬ್ಬೊಟ್ಟೆ ಯಿಂದ ಚಂಗನೆ ಎಗರಿದ ಐಡಿ ಯಾವೊಂದು ಅವನ ಮಿದುಳಿಗೆ ಕಾಂತಿಯ ನೀಡಿತು. ನಿನ್ನೆ ರಾತ್ರಿ ಯಿಂದ ಏನೊಂದೂ ತಿಂದಿರದ ಮಹೇಶ ಈಗ ಗೆಲುವಾದ. ಹೌದು… ವಿಮಾ ನದಲ್ಲಿ ಊಟ ಕೊಡ್ತಾರಲ್ಲ, ಯಾಕೆ ಕೊಡ ಲಿಲ್ಲ…? ತಾನು ನಿದ್ದೆ ಮಾಡಿದ್ದಾಗ ಊಟ ಕೊಟ್ಟಿರಬೇಕು. ಆ ಹಿಂದಿ ನನ್ಮಗ ನಿಗೆ ಹುಳ ಬಿಟ್ಟ ನೆಮ್ಮದಿಯಲಿ ನಿದ್ದೆ ಮಾಡಿ ಬಿಟ್ಟೆ.
“ ಲೇಯ್, ಏನ್ ಯೋಚನೆ ಮಾಡ್ಕೊಂಡು ನಿಂತಿದ್ದೀಯಲ್ಲ… ಬಿಚ್ಚೋ ಬಟ್ಟೇನಾ… ಒಂದ್ ಬಟ್ಟೆ ಮೈ ಮೇಲೆ ಇರಬಾರದು… ತಿಳೀತಾ?”
ಮಹೇಶ ಆತ ನನ್ನೇ ನೋಡಿದ. ಆತನ ಕಣ್ಣುಗಳು ಹಳದಿ ಬಣ್ಣವನ್ನು ಪೂಸಿಕೊಂಡು ಅತ್ತಿತ್ತ ಅಲೆದಾಡುತ್ತಿದ್ದವು. ಆತನ ದೇಹವನ್ನೆಲ್ಲ ಸ್ಕ್ಯಾನ್ ಮಾಡಿದ ಮಹೇಶ ‘ ಅಣ್ಣ, ನಿಮ್ ಸರ್‍ನ್ನು ಕರೀರಿ, ಹೇಳ್ ಬಿಡ್ತೀನಿ’ ಎಂದ.
ಆತ ‘ ನನಗೆ ಹೇಳೋ, ಏನದು?’ ತುಟಿ ಕಚ್ಚಿದ. ‘ ಇಲ್ಲಣ್ಣ ನಿಮ್ನಾ ನೋಡುದ್ರೆ ನನಗೆ ಭಯ ಆಗುತ್ತೆ… ಅವರನ್ನು ಕರೀರಿ. ಇಲ್ಲ ಅಂದ್ರೆ ಆಮೇಲೆ ಏನೇನೋ ನಿಮ್ ಮೇಲೆ ಬರೆದು ಇಲ್ಲೇ ಸೂಸೈಡ್ ಮಾಡ್ಕೋತೀನಿ…’ ಎಂದು ಆತ ನನ್ನೇ ನೋಡಿದ.
ಗಜಗಾತ್ರದ ಆ ವ್ಯಕ್ತಿ ನೆಲವನ್ನು ಚಣ ನೋಡಿ, ತಿರುಗಿ ಹೆಜ್ಜೆಗಳ ಊರುತ್ತಾ, ಬಾಗಿಲಲಿ ತೆವಳುತ್ತಾ ಹೋದ.
‘ಬಂದ್ರು ಹೇಳೋ’ ದಢೂತಿ ಸದ್ದು ಕಿರುಚಿಕೊಂಡಿತು.
ಆ ಅಧಿಕಾರಿ ಇವನ ಮುಂದೆ ನಿಂತ.
ಅಣ್ಣ ನಾ ಇವರತ್ರ ಪರ್ಸ ನಲ್ ಆಗಿ ಮಾತಾಡಬೇಕು. ಬಾಗಿಲಾ ಕಿಕೊಂಡು ನೀ ಹೊರಕ್ಕೆ ಹೋಗು’ ಎಂದ.
‘ಹೇಳಲೇಯ್, ಚರ್ಮ ಸುಲಿದ್ ಬಿಡ್ತೀನಿ… ಏನಂದುಕೊಂ ಡಿದಿಯ ನಮ್ಮನ್ನು?’ ದಢೂತಿ ಕೆರಳಿದ.
ಹಿಂದಿಯಲ್ಲಿ ಮಾತನಾಡಿದ ಆ ಆಫೀಸರ್ “ ಸುಮ್ನಿರು… ಹೋಗ್ ನೀನ್ ಹೊರಗೆ”.
ಬಾಗಿಲು ಕಿರ್ ಎಂದು ಸದ್ದು ಮಾಡುತ್ತಾ ಆ ದಢೂತಿ ದೇಹವನ್ನು ಹೊರಗೆ ಹಾಕಿತು.
ಅಧಿಕಾ ರಿಯನ್ನೇ ನೋಡುತ್ತಾ ಮಹೇಶ ತನ್ನ ಲಿಸ್ಟ್ ಒಮ್ಮೆ ನೆನಪಿಸಿಕೊಂಡ. ಈ ವಿಷಯವನ್ನು ಮೊದಲು ಹೇಳಬೇ ಕೆಂ-ದಿದ್ದು ತನ್ನ ತಂದೆಗೆ. ಏನ್ ಮಾಡೋದು, ಅನ್ ಲಕಿ ಫೆಲೊ ನಮ್ಮಪ್ಪ!
“ ಬೊಲೊ… ಎಷ್ಟು ಕೆಜಿ ಚಿನ್ನ? ಎಲ್ಲಿ ಇಟ್ಕೊಂಡು ಬಂದಿ ದಿಯಾ? ತೊಡೇಲಾ, ಅಥವ ಹಿಂದೆ ಬಟಕ್ಸ್‍ಲ್ಲಾ…? ಹೇಳ್ -ಬಿಡು ಇಲ್ಲಾಂದ್ರೆ 5 ವರ್ಷ ಜೈಲು ನಾವು ಹಿಡಿದ್ರೆ… ಅಥವ ಡ್ರಗ್ಸ್ ಗಿಗ್ಸ್ ಏನಾದ್ರೂ ನುಂಗ್ ಕೊಂಡ್ ಬಂದಿದಿಯಾ? ಬೊಗಳ್‍ಬಿಡು… ಅನಿಮಿಯಾ ಹಾಕಿ ಹಿಂದಿನಿಂದ ಎಳೆದ್‍ಬಿಡೋಣ”
‘ ಸರ್… ನನ್ಗೆ ಬಾಲ್ಸ್ ಇಲ್ಲ ಸರ್. ಒಂದ್ ದಿನ ಏನಾಯ್ತು ಗೊತ್ತಾ? ಇದ್ದಕ್ಕಿದ್ದ ಹಾಗೆ ನನ್ ಬಾಲ್ಸ್ ಮಾಯ ಆಗ್ ಬಿಡ್ತು. ಮೊದ ಲಿಗೆ ಭಯಂಕರ ಭಯ ಆಗಿತ್ತು. ಆದರೆ ನಾನೂ ನನ್ ಓನರ್ ಪ್ಲಾನ್ ಮಾಡಿ ಆ ಬಾಲ್ಸ್ ಇದ್ದ ಜಾಗದಲ್ಲಿ 20 -ಬಿಸ್ಕೆಟ್ ತುರಿಕಿಕೊಂಡು ಬಂದ್ವಿ ಸಾ.”
ಅಧಿಕಾರಿ ದಿಗಿಲು ಬಿದ್ದೋದ. ತನ್ನ ಸರ್ವೀಸ್ ನಲ್ಲೇ ಈ ತೆರನಾದ ಸ್ಮಗ್ಲಿಂಗ್‍ನ್ನು ಕೇಳಿಯೇ ಇರಲಿಲ್ಲ. ಸುಸ್ತಾದರೂ ಸುಧಾರಿ ಸಿಕೊಂಡು ಆ ದಢೂತಿ ಸ್ಕ್ಯಾನರ್ ವ್ಯಕ್ತಿಯ ಕರೆದ. ಆತನೂ ದಿಗಿಲ್ಗೊಂಡು ಮಹೇಶನ ಪ್ಯಾಂಟ್ ಬಿಚ್ಚಿಸಿ ಬಗ್ಗಿ ನೋಡಿ ಸ್ಕ್ಯಾನ್ ಮಾಡಿ ಮೂಕ ನಾಗಿ ನಿಂತ.
“ಸ್ಕ್ಯಾನರ್ ನಲ್ಲಿ ಏನೂ ತೋರಿಸ್ತಿಲ್ಲ ವಲ್ಲ ಸರ್… ಏನ್ಮಾಡೋದು…”
ಮಹೇಶ ನಿಟ್ಟುಸಿರಿಟ್ಟು “ಸರ್, ನಿಜ ಹೇಳ್ ಬಿಡ್ತೇನೆ… ಸತ್ಯ ವಾಗ್ಲೂ ನನ್ ಹತ್ರ ಯಾವ ಬಿಸ್ಕತ್ಕೂ ಇಲ್ಲ… ನನ್ ಬಾಲ್ಸ್ -ಮಾಯ ಆಗಿ ಹೋದುದ ನಿಮಗೆ ಹೇಗೆ ಹೇಳುವುದೂ ತಿಳಿಯದೆ ಹೀಗೆ ಮಾಡಿದೆ, ಅಷ್ಟೆ”.
“ ಮುಚ್ಚೋ ಬಾಯಿ. ಹೋಗಿ ಅಲ್‍ಕುತ್ಕೊ. ಡಾಕ್ಟರ್ ಬಂದು ಚೆಕ್ ಮಾಡ್ತಾರೆ.”
“ ಡಾಕ್ಟರೂ ಬರ್ತಾರಾ … ಬರ್ಲಿ ಬಿಡಿ… ಸರ್… ಒಂದ್ನಿಮಿಷ, ನಿಮ್ ಬಾಲ್ಸ್ ಇದೆಯಾ ಇಲ್ವಾ ಅಂತ ಒಸಿ ನೋಡ್ಕಳಿ…”
“ ಲೋಫರ್ ನನ್ಮಗ್ನೆ… ಯಾರನ್ನ ನೋಡಿ ಏನು ಕೇಳ್ತಿ ದಿಯಾ?” ಆ ದಢೂತಿ ಕಾಲುಗಳು ಮಹೇಶನನ್ನು ಜಾಡಿಸಿ ಹೊಡೆದವು.
ಹಾರುತ್ತಾ ಹೋಗಿ ಮತ್ತೊಂದು ಮಗ್ಗಲ ಗೋಡೆಗೆ ಬಡಿದು ದೊಪ್ಪನೆ ಕೆಳಗೆ ಬಿದ್ದ ಮಹೇಶ ನೋವ ನುಂಗಿಕೊಂಡು -ಹಾಗೆ ಅಂಗಾತ ಮಲ ಗಿಕೊಂಡು, ಕಾಲುಗಳ ಅಗಲಿಸಿ ಉಸಿರ ಒಮ್ಮೆ ಒಳ ಎಳೆದು “ ಸುಳ್ ಹೇಳ್ತಿಲ್ಲ ಸರ್ ನಾನು, ಈ -ವಿಷಯ ಕೇಳಿಸಿಕೊಂಡ ವ ರಿಗೂ ಬಾಲ್ಸ್ ಮಾಯ ಆಗುತ್ತೆ. ಬೇಕಾದ್ರೆ ಬಾತ್‍ರೂಮಿಗೆ ಹೋಗಿ ನೋಡ್ಕೊಂಡು ಬನ್ನಿ” ಎಂದು ತುಟಿಗಳ ಸಂಧಿಯಿಂದ ತೆಳ್ಳನೆಯ ಶಿಳ್ಳೆಯೊಂದನ್ನು ಹೊರಗೆ ತಳ್ಳುತ್ತ ಎಡಗಾಲನ್ನ ಎತ್ತಿ ಬಲಗಾ ಲಿನ ಮೇಲೆ ಹಾಕಿಕೊಂಡು ನಕ್ಕ.
ಅಧಿಕಾರಿಯನ್ನು ನೋಡಿ ನಾಚಿ ಕೆ ಯಾದಂತಾಗಿ ತಲೆ ಬಗ್ಗಿ ಸಿದ ಆ ದಢೂತಿ ವ್ಯಕ್ತಿಯನ್ನು ಮಹೇಶ ನೋಡಿ:
“ಸ್ಕ್ಯಾನರ್ ಅಣ್ಣ, ಎಷ್ಟು ಹೇಳಿದರೂ ನೀ ಕೇಳಲಿಲ್ಲ, ನೀನೇ ಬಂದ್ ಸಿಕ್ ಹಾಕ್ಕೊಂಡೆ… ನಿಂಗೂ ಮಾಯ ಆಗಿರುತ್ತೆ, ಅದಕ್ಕೆ ನಾ ಜವಾಬ್ಬಾರನಲ್ಲ, ಹೇಳ್‍ಬಿಟ್ಟೆ”
ದಢೂತಿ ವ್ಯಕ್ತಿ ಏನೋ ಒದರುತ್ತಾ ಎಗರುತ್ತಾ ಮಹೇಶನತ್ತ ಹೋಗುತ್ತಿದ್ದ. ಅಧಿಕಾರಿ ಅತ್ತ ತಿರುಗಿ ಬೆಲ್ಟ್ ಬಿಚ್ಚಿ -ಪ್ಯಾಂಟ್ ಜಿûಪ್‍ಗೆ ಕೈ ಹಾಕಿದ.
***
ಮಹೇಶ ಕಣ್ಣು ಮುಚ್ಚಿದ್ದ. ನಗು ಅವನ ತುಟಿಗಳಲ್ಲಿ ಅರಳಲು ತಿಣುಕಾಡುತ್ತಿತ್ತು. ಕಿವಿಗಳಲ್ಲಿ ಅಸ್ಪಷ್ಟ ವಾಗಿ ಶಬ್ದಗಳು ಕೇಳಿಸುತ್ತಿದ್ದವು. ಅರೆ ಅರೆಬಿಕ್! ತಾನೆಲ್ಲಿದ್ದೇನೆ! ಕಣ್ಣು ತೆರೆಯಲು ಪ್ರಯತ್ನಿ ಸಿದ. ಆಗುತ್ತಿಲ್ಲ, ತಿಣುಕಾ ಡಿದ. ಏನೋ ಒಂದು ಗುಂಯ್ ಅನ್ನೋ ಸದ್ದು ಜೋರಾಗಿ ಕೂಗತೊಡಗಿತು. ಯಾರೋ ಓಡಿ ಬರುತ್ತಿದ್ದಾರೆ. ಕಣ್ಣು ತೆರೆಯಲೇ ಆಗುತ್ತಿಲ್ಲ. ಎದೆ ಜೋರಾಗಿ ಬಡಿಯುತ್ತಾ ಮೆಲ್ಲಗೆ ಕಡಿಮೆಯಾಗುತ್ತಾ ಹೋಗುತ್ತಿರುವುದು ಕಿವಿಗೆ ಕೇಳಿಸುತ್ತಿದೆ. ರಸ್ತೆ, ಟ್ರಕ್… ತಾನಿದ್ದ ಕಾರು ಟ್ರಕ್‍ಗೆ ಬಡಿದು ಹಾರುತ್ತಿದೆ…
ನಾಳೆ ಇಂಡಿಯಾಕ್ಕೆ ಹೋಗಬೇ ಕಿತ್ತು… ಅಯ್ಯೋ… ಅಮ್ಮಾ…
ಓ! ಓ! ಅರೆ… ಏನಿದು?! ಎದೆ ಬಡಿತದ ಸದ್ದು ಈಗ ಇಲ್ಲ. ಏನೊಂದೂ ಸದ್ದೂ ಕೇಳಿಸುತ್ತಿಲ್ಲ. ದೇಹ –ತಣ್ಣಗಾಗುತ್ತಿದೆ… ಏನಾಗಿದೆ ತನಗೆ… ಏನಾಗಿದೆ.
ಎದೆ ಬಡಿತ ನಿಂತು ಹೋಗುತ್ತಿದೆ… ತನ್ನ ಮಿದುಳಿಗೆ ಅದು ಗೊತ್ತಾಗುತ್ತಿದೆ…
***
ಚಿತ್ರ : ಮಹಾಂತೇಶ ದೊಡ್ಡಮನಿ
ಕನಕರಾಜ್ ಆರನಕಟ್ಟೆ ಮೂಲತ: ಚಿತ್ರದುರ್ಗ ಜಿಲ್ಲೆಯವರು.
ಇವರ ಮೊದಲನೇ ಕಿರುಚಿತ್ರ “ಬರ್ಮಾ ಎಕ್ಸ್ ಪ್ರೆಸ್” ಹಲವು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಗೊಂಡು ನ್ಯೂಯಾರ್ಕ್ನ “ಸೌತ್ ಏಷಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಮತ್ತು “ರಾಜಸ್ತಾನ ಫಿಲಂ ಫೆಸ್ಟಿವಲ್” ಗಳಲ್ಲಿ ಉತ್ತಮ ಕಿರುಚಿತ್ರ ಎಂಬ ಗೌರವವನ್ನು ಪಡೆಯಿತು. ಭಾರತ, ಮಾಲ್ಡೀವ್ಸ್, ಲಿಬಿಯಾ ದೇಶಗಳಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ ಪ್ರಸ್ತುತ ಇವರು ಸೌದಿ ಅರೇಬಿಯಾದ ಪ್ರಿನ್ಸ್ ಸತ್ತಾಮ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಿಸುತ್ತಿದ್ದಾರೆ. ಸಿಲೋನ್ ಸೈಕಲ್ ಇವರ ಕಥಾ ಸಂಕಲನ . ರಾಜಪ್ಪ ದಳವಾಯಿಯವರ ಜತೆ ಸೇರಿ ಇಂದಿರಾ ಪಾರ್ಥಸಾರಥಿಯವರ ‘ಔರಂಗಜೇಬ್’ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.
ಚೆನ್ನಾಗಿದೆ
ವಲಸೆ ಕಾರ್ಮಿಕರ ಸಮಸ್ಯೆಸಂಕಷ್ಟಗಳು, ಅವರ ಭಾವನೆಗಳು, ತಮ್ಮತನ ಕಳೆದುಕೊಳ್ಳುತ್ತಿರುವ ತಳಮಳಗಳನ್ನು ಇಡೀ ಕಥೆಯನ್ನೆ ರೋಪಕಶಕ್ತಿಯಾಗಿಸಿ ಚಂದ ಹೇಳಿದ್ದಿರಿ. ಕಥೆ ಹೆಸರನ್ನು ಬೀಜ ಮಿಸ್ಸಿಂಗ್ ಅಂತ ಇಡಬೇಕಿತ್ತು.