ರಾಮಾಯಣದಿಂದ ಹಿಡಿದು ಧರ್ಮಗ್ರಂಥಗಳವರೆಗೆ, ಭಾರತದ ಸುದೀರ್ಘ ಮಾಂಸಹಾರದ ಇತಿಹಾಸ

ವೈದಿಕ ಧರ್ಮದಲ್ಲಿ ಕಾನೂನುಗಳಿಗಿಂತ ಪರಿಹಾರಗಳೇ ಹೆಚ್ಚು. ಸಮಯಕ್ಕೆ ಅನುಕೂಲವಾದ ಆಪದ್ಧರ್ಮವೇ ಧರ್ಮ. ಪರವಂಚನೆಯು ಐಹಿಕ ಸುಖಕ್ಕೆ ದಾರಿಯಾದರೆ, ಆತ್ಮವಂಚನೆಯು ತನ್ನ ಸುಖಕ್ಕೆ ಕುಂದುಂಟಾಗದ ಹಾಗೆ ಮಾಡಿಕೊಂಡ ಪರಿಹಾರ. ನಮ್ಮ ಆಹಾರವನ್ನೇ ಕೀಳೆಂದು ಕರೆದುಕೊಳ್ಳುವ ವಿಚಿತ್ರ. ಹಾಗೆಂದು ಭಾವಿಸಿಕೊಳ್ಳುವಂತೆ ಮಾಡುವ ರಾಜಕಾರಣ. ಒಂದು ರಾಜ್ಯದ ಮಾಜೀ-ಮುಖ್ಯಮಂತ್ರಿಯನ್ನೇ ತನ್ನ ಆಹಾರದ ಕುರಿತು ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿಗೆ ತಳ್ಳುವ ತಂತ್ರಗಳು. ಈ ಪುಟ್ಟ ಲೇಖನ ಸಾವಿರದೊಂದನೇ ಬಾರಿಗೆ “ಫ್ಯಾಕ್ಟ್ಸ್” ಗಳನ್ನು ದಾಖಲಿಸುವ ಪ್ರಯತ್ನ.   

ರಾಮಾಯಣದಿಂದ ಹಿಡಿದು ಧರ್ಮಗ್ರಂಥಗಳವರೆಗೆ, ಭಾರತವು ಮಾಂಸವನ್ನು ತಿನ್ನುವ ಸುದೀರ್ಘ ಇತಿಹಾಸವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ ವೇದಗಳು ಸುಮಾರು 50 ಪ್ರಾಣಿಗಳನ್ನು ತ್ಯಾಗಕ್ಕೆ ಯೋಗ್ಯವೆಂದು ಪರಿಗಣಿಸುತ್ತವೆ ಮತ್ತು  ಆ ಮೂಲಕ ತಿನ್ನಬಹುದೆಂದು ತೀರ್ಮಾನಕ್ಕೆ ಬರುತ್ತವೆ.

ಬಾಲಿಶ ಮನಸ್ಸಿನ ಜನರು ಯಾವುದು ಧರ್ಮ ಮತ್ತು ನಿಜವಾದ ಮಾರ್ಗ ಮತ್ತು ಯಾವುದು ಪವಿತ್ರ ಅಥವಾ ಅಪವಿತ್ರ ಎಂಬುದಕ್ಕೆ ಕಾನೂನುಗಳನ್ನು ಮಂಡಿಸುತ್ತಲೆ ಇರುತ್ತಾರೆ, ಎಂದು ಮತ್ಸ್ಯೇಂದ್ರನಾಥ್ (ಉತ್ತರ ಭಾರತದಲ್ಲಿ ನಾಥ ಪಂಥಕ್ಕೆ ಅಡಿಪಾಯ ಹಾಕಿದ ಗೋರಖನಾಥನ ಗುರು), ತನ್ನ ಮೂಲ ಗ್ರಂಥವಾದ ಅಕುಲ್ವೀರ್ ತಂತ್ರದಲ್ಲಿ (78-87) ಹೇಳುತ್ತಾರೆ.

 

ನಾಥ ಪರಂಪರೆಯ ಮತ್ಸೇಂದ್ರನಾಥ

ನಾಥ ಪರಂಪರೆಯ ಮತ್ಸೇಂದ್ರನಾಥ

ಅವರ ಇಂದಿನ ಅನುಯಾಯಿ, ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಆದಿತ್ಯನಾಥ್ ಇದನ್ನು ಒಪ್ಪುತ್ತಾರೆಯೇ ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಗುರು ಮತ್ಸ್ಯೇಂದ್ರನಾಥರ ಪ್ರಕಾರ, ನಿಜವಾದ ಜ್ಞಾನವನ್ನು ಪಡೆಯುವುದು ಎಂದರೆ ಹಲವಾರು ಸಣ್ಣತನದ ನಿಯಮಗಳು ಮತ್ತು  ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಲಾಗುತ್ತಿರುವ ವ್ಯಾಖ್ಯಾನಗಳನ್ನು ಮೀರಿ ಎತ್ತರಕ್ಕ್ಕೇರುವುದು.

ಕೌಲೋಪನಿಷದ್, ಕೌಲ್ ಸಿದ್ಧಾಂತದ ಚಿಕ್ಕದಾದ ಆದರೆ ಹೆಚ್ಚು ತೀವ್ರ/ಪರಿಣಾಮಕಾರಿ ಯಾದ ಗ್ರಂಥವಾಗಿದೆ (ಹೌದು, ಕಾಶ್ಮೀರಿ ಉಪನಾಮವು ಅದರಿಂದ ಬಂದಿದೆ), ಒಂದು ಹೆಜ್ಜೆ ಮುಂದೆ ಹೋಗಿ ನಿಷೇಧಿಸಲಾದ ಒಂದೇ ವಿಷಯವೆಂದರೆ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವುದು  ಎಂದು ಹೇಳುತ್ತದೆ (ಲೋಕ ನಿಂದೆ).ನಿಜವಾದ ಆತ್ಮಜ್ಞಾನ, ಅಧ್ಯಾತ್ಮ ಎಂದರೆ ಉಪವಾಸ, ಔತಣ ಅಥವಾ ಅದರ ನಿಯಮಗಳನ್ನು ಪಾಲಿಸುವುದು ಮತ್ತು ಪಂಥವನ್ನು ಸ್ಥಾಪಿಸುವ ಬಯಕೆಯಿಲ್ಲ. ಎಲ್ಲರೂ ಸಮಾನವಾಗಿ ರಚಿಸಲ್ಪಟ್ಟಿದ್ದಾರೆ ಮತ್ತು ಇದನ್ನು ಅರಿತುಕೊಳ್ಳುವವನು ನಿಜವಾಗಿಯೂ ಮುಕ್ತನಾಗುತ್ತಾನೆ.

ವರ್ತಮಾನದ ರಾಜಕೀಯ ವ್ಯವಸ್ಥೆಯು, ರಾಜಕೀಯಗೊಳಿಸುವ ಮತ್ತು ಸಸ್ಯಾಹಾರವನ್ನು ಒಳಗೊಂಡಂತೆ ವಿಷಯಗಳನ್ನು ಅಪಮೌಲ್ಯಗೊಳಿಸುವ ಕುರುಡು ದೃಷ್ಟಿಯ ,ತನ್ನದೇ ರಾಜಕೀಯದ ಬುದ್ಧಿ ಭ್ರಮಣೆಗೊಂಡ ಗುಂಪುಗಳಿಗೆ ಪರಕೀಯವಾದ ಮತ್ತು ಗ್ರಹಿಸಲು ಕಷ್ಟವಾದ ಭಾರತದ ನಿಜವಾದ ಸಂಸ್ಕೃತಿ ಕಡೆ ನೋಡುವುದು ಒಳ್ಳೆಯದು.

ನನ್ನ ತಾಯಿಯ ಗುರು, ಮಹಾನ್ ವಿದ್ವಾಂಸರಾದ ಹಜಾರಿ ಪ್ರಸಾದ್ ದ್ವಿವೇದಿ ಅವರು ಒಮ್ಮೆ ಇತಿಹಾಸದ ನಿಜವಾದ ತಿಳುವಳಿಕೆಗಾಗಿ ಶಾಕ್ತ ತಂತ್ರದಿಂದ ಅದ್ಭುತವಾದ ಪದವನ್ನು ಬಳಸಿದರು. ಅವರು ಅದನ್ನು ಶವ ಸಾಧನ ಎಂದು ಕರೆದು, ಒಬ್ಬ ತಾಂತ್ರಿಕ ಸಾಧಕನು ಅವರಿಗೆ ವಿವರಿಸಲು ಬಳಸಿದ ಪದವದು, ನಿಜವಾದ ಜ್ಞಾನವನ್ನು (ಸಿದ್ಧಿ) ಪಡೆಯಲು, ವ್ಯಕ್ತಿಯು ಸ್ಮಶಾನದಲ್ಲಿ ಮೃತ ದೇಹವನ್ನು ಹುಡುಕಿ, ಅದರ ಮೇಲೆ ಕುಳಿತು ಅವನ ಸುತ್ತಲಿನ ಎಲ್ಲವನ್ನೂ ಮರೆತು ನಂತರ ಧ್ಯಾನ ಮಾಡಬೇಕು ಎಂದು ವಿವರಿಸಿದರು.

ಇದೊಂದು ದೀರ್ಘ ಮತ್ತು ಬೇಸರದ ಪ್ರಕ್ರಿಯೆಯಾಗಿದ್ದು, ಈ ಸಮಯದಲ್ಲಿ ದುಷ್ಟ ಶಕ್ತಿಗಳು ಅನ್ವೇಷಕನನ್ನು ಅರ್ಧ-ಸತ್ಯದಿಂದ ವಿಚಲಿತಗೊಳಿಸಲು ಪ್ರಯತ್ನಿಸುತ್ತವೆ, ಆದರೆ ಅವನು ನಿರ್ಲಿಪ್ತನಾಗಿ ಮತ್ತು ಏಕಾಗ್ರತೆಯಿಂದ ಇರಲು ಸಾಧ್ಯವಾದರೆ, ಒಂದು ಹಂತದಲ್ಲಿ ಶವದ ತಲೆಯು ಸಂಪೂರ್ಣವಾಗಿ ತಿರುಗುತ್ತದೆ ಮತ್ತು ಅದು ಸ್ಥಿರವಾದ ಸಾಧಕನೆಡೆ  ತಿರುಗಿ ಸರ್ವೋತ್ಕೃಷ್ಟ ಜ್ಞಾನವನ್ನು  ವಿವರಿಸುತ್ತದೆ ಮತ್ತು ಅವನ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಿ ವಿಶ್ರಾಂತಿ ಕೊಡುತ್ತದೆ. ಇದನ್ನು ಚಿತ್ರಿಸಿಕೊಳ್ಳಿ: ಶುದ್ಧ ಜ್ಞಾನವು ಎಲ್ಲ ಕಡೆಯಿಂದ( ಅಂದರೆ 360 ಡಿಗ್ರೀ ಕೋನ, – ಸಂಪೂರ್ಣ ವೃತ್ತದ ಅಳತೆ) ತಲೆಯೊಳಗೆ ಜಡ ರೂಪದ ಮೂಲಕ ಹಾದುಹೋಗುತ್ತದೆ, ಹಳೆಯ ಅಥವಾ ಹೊಸ, ಸಾಂಪ್ರದಾಯಿಕ ಅಥವಾ ಅಭ್ಯಾಸದ ಜೀವನ ರೂಪಗಳಿಗೆ ಯಾವುದೇ ಬಂಧನವಿಲ್ಲದೆ, ನಿರ್ಬಂಧಿತವಾಗಿ. ಹಜಾರಿ ಪ್ರಸಾದ್ ದ್ವಿವೇದಿ ಬರೆಯುತ್ತಾರೆ, ಇಂಥ ಜ್ಞಾನವು ವ್ಯಕ್ತಿಯೊಬ್ಬನನ್ನು ಮುಕ್ತಗೊಳಿಸುತ್ತದೆ.

 ಈ ದೀರ್ಘವಾದ ತಾತ್ವಿಕ ಸಂದರ್ಭಕ್ಕೆ ಸಿದ್ಧತೆಯಾಗಿ ಮಾತ್ರ (ತತ್ತ್ವಶಾಸ್ತ್ತ್ರವು ಸಂಸ್ಕೃತದಲ್ಲಿ ದರ್ಶನ ಎಂದಾಗಿದೆ, ಅಂದರೆ ಕಾಣುವುದು) ಭಾರತದಲ್ಲಿ  ಮಾಂಸ ತಿನ್ನುವ ಸುದೀರ್ಘ ಇತಿಹಾಸದ ಹೆಚ್ಚು  ಪ್ರಚೋದನಕಾರಿ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು.

ಮಾಂಸಾಹಾರ ಅಭ್ಯಾಸದ ಇತಿಹಾಸ

ಸಿಂಧೂ ಕಣಿವೆಯ ಕಾಲದಿಂದಲೂ ಭಾರತೀಯರು ಮಾಂಸ ಮತ್ತು ಕೋಳಿಗಳೊಂದಿಗೆ ಮಾಡಿದ ಭಕ್ಷ್ಯ ಸೇವನೆಯಲ್ಲಿ ತೊಡಗಿಸಿಕೊಂಡಿದ್ದರು ಎಂಬುದಕ್ಕೆ ಇಲ್ಲಿಯವರೆಗೆ ಸಾಕಷ್ಟು ಐತಿಹಾಸಿಕ ಪುರಾವೆಗಳು ‌ದೊರಕಿವೆ: ಝೆಬು ಜಾನುವಾರು (ಭುಜದ ಮೇಲೆ ಕೊಬ್ಬಿನ ಉಬ್ಬು ಇರುವ ಒಂದು ಸಾಕು ದನದ ಜಾತಿ), ಗೌರ್ (ಭಾರತೀಯ ಕಾಡೆಮ್ಮೆ), ಕುರಿ, ಮೇಕೆ, ಆಮೆ, ಘಾರಿಯಾಲ್ (ಮೊಸಳೆಯಂತಹ ಸರೀಸೃಪ), ಮೀನು ಕೋಳಿಯಂಥವು. ವೇದಗಳು 250 ಕ್ಕೂ ಹೆಚ್ಚು ಪ್ರಾಣಿಗಳನ್ನು ಉಲ್ಲೇಖಿಸುತ್ತವೆ, ಆವುಗಳಲ್ಲಿ ಸುಮಾರು 50 ಪ್ರಾಣಿಗಳನ್ನು ತ್ಯಾಗಕ್ಕೆ ಯೋಗ್ಯವೆಂದು ಪರಿಗಣಿಸುತ್ತವೆ ಮತ್ತು  ಆ ಮೂಲಕ ತಿನ್ನಬಹುದೆಂದು ತೀರ್ಮಾನಕ್ಕೆ ಬರುತ್ತವೆ.

ಮಾರುಕಟ್ಟೆಯು ವಿವಿಧ ರೀತಿಯ ಮಾಂಸದ ಮಾರಾಟಗಾರರಿಗೆ ವಿವಿಧ ಮಳಿಗೆಗಳನ್ನು ಹೊಂದಿತ್ತು: ಗೋಗತಕ (ದನಗಳು), ಅರಬಿಕ (ಕುರಿ), ಶೂಕರಿಕಾ (ಹಂದಿ), ನಾಗರೀಕ (ಜಿಂಕೆ) ಮತ್ತು ಶಕುಂತಿಕಾ (ಕೋಳಿ). ಅಲಿಗೇಟರ್ ಮತ್ತು ಆಮೆ ಮಾಂಸವನ್ನು (ಗಿಡ್ಡಬುಡ್ಡಕ) ಮಾರಾಟ ಮಾಡಲು ಪ್ರತ್ಯೇಕ ಸರಕು ಘಟಕಗಳು ಸಹ ಇದ್ದವು. ಋಗ್ವೇದವು ಕುದುರೆಗಳು, ಎಮ್ಮೆಗಳು, ಟಗರುಗಳು ಮತ್ತು ಮೇಕೆಗಳನ್ನು ತ್ಯಾಗ/ಬಲಿಯ ಪ್ರಾಣಿಗಳೆಂದು ವಿವರಿಸುತ್ತದೆ. ಋಗ್ವೇದದ 162 ನೇ ಸ್ತೋತ್ರವು ಚಕ್ರವರ್ತಿಗಳು  ನಡೆಸಿದ ವಿಸ್ತಾರವಾದ  ಕುದುರೆ ಬಲಿಯ(ಅಶ್ವಮೇಧ) ಯಜ್ಞಗಳನ್ನು ವಿವರಿಸುತ್ತದೆ.

ವಿವಿಧ ವೈದಿಕ ದೇವರುಗಳು ಪ್ರಾಣಿಗಳ ಮಾಂಸಕ್ಕೆ ಸಂಬಂಧಿಸಿದಂತೆ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ. ಅಗ್ನಿಯು ಗೂಳಿ ಮತ್ತು ಬಂಜೆ ಹಸುಗಳನ್ನು ಇಷ್ಟಪಡುತ್ತಾನೆ, ರುದ್ರನಿಗೆ ಕೆಂಪು ಹಸುಗಳು, ವಿಷ್ಣುವು ಕುಬ್ಜ ಎತ್ತುಗಳನ್ನು ಇಷ್ಟಪಡುತ್ತಾನೆ, ಆದರೆ ಇಂದ್ರನಿಗೆ ತಲೆಯ ಮೇಲೆ ಗುರುತು ಹೊಂದಿರುವ  ಕೊಂಬುಗಳ ಗೂಳಿಯನ್ನು ಮತ್ತು ಪುಷನ್ (ಸೂರ್ಯನ ಒಂದು ರೂಪ) ಕಪ್ಪು ಹಸುವನ್ನು ಇಷ್ಟಪಡುತ್ತಾನೆ ಹೀಗೆ. ವಿಶೇಷ ಅತಿಥಿಗಳಿಗಾಗಿ, ಕೊಬ್ಬಿದ ಎತ್ತು ಅಥವಾ ಮೇಕೆಯನ್ನು ತ್ಯಾಗ ಮಾಡಬೇಕೆಂದು ನಂತರ ಸಂಕಲಿಸಿದ ಬ್ರಹಮನಸ್ ಗ್ರಂಥಗಳು ಸೂಚಿಸುತ್ತವೆ. ತೈತ್ತಿರೀಯ ಉಪನಿಷತ್ತು ಅಗಸ್ತ್ಯ ಋಷಿಯಿಂದಾದ ನೂರು ಗೂಳಿಗಳ ಬಲಿಯನ್ನು ಹೊಗಳುತ್ತದೆ. ಮತ್ತು ವ್ಯಾಕರಣಕಾರರಾದ ಪಾಣಿನಿಯು ಅತಿಥಿಗಳನ್ನು ಹೀಗೆ ಗೌರವಿಸಲು ಗೋಘ್ನ (ಹಸುವನ್ನು ಕೊಲ್ಲುವುದು) ಎಂಬ ಹೊಸ ವಿಶೇಷಣವನ್ನೂ ಸಹ ರಚಿಸಿದನು.

ಮಾಂಸವನ್ನು ಹೆಚ್ಚಾಗಿ ಬೆಂಕಿಯಿಂದ ತುಸು ಅಂತರದಲ್ಲಿ ಹುರಿಯಲಾಗುತ್ತದೆ ಅಥವಾ ತೊಟ್ಟಿಗಳಲ್ಲಿ ಬೇಯಿಸಲಾಗುತ್ತದೆ ಎಂದು ಇಲ್ಲಿ ನಾವು ಕಲಿಯುತ್ತೇವೆ. ಬೃಹದಾರಣ್ಯಕ ಉಪನಿಷತ್ತು ಅನ್ನದೊಂದಿಗೆ ಬೇಯಿಸಿದ ಮಾಂಸದ ಉಲ್ಲೇಖವನ್ನು ಹೊಂದಿದೆ. ರಾಮಾಯಣದಲ್ಲಿ, ದಂಡಕಾರಣ್ಯ ಅರಣ್ಯದಲ್ಲಿ ವಾಸವಾಗಿದ್ದಾಗ, ರಾಮ, ಲಕ್ಷ್ಮಣ ಮತ್ತು ಸೀತೆ ಅಂತಹ ಅನ್ನವನ್ನು (ಮಾಂಸ ಮತ್ತು ತರಕಾರಿಗಳೊಂದಿಗೆ) ಸವಿಯುತ್ತಾರೆ ಎಂದು ಹೇಳಲಾಗುತ್ತದೆ. ಅದಕ್ಕೆ ಮಾಮಸಂಭೂತದಾನ ಎನ್ನುತ್ತಾರೆ. ಅಯೋಧ್ಯೆಯ ಅರಮನೆಯಲ್ಲಿ, ರಾಜ ದಶರಥನು ಮಾಡಿದ ತ್ಯಾಗದ ಸಮಯದಲ್ಲಿ, ವಿವರಿಸಿದ ಪಾಕವಿಧಾನಗಳು ಹೆಚ್ಚು ಪರಕೀಯ ವಿಧಾನಗಳಾಗಿದ್ದು, ಕುರಿಮರಿ, ಹಂದಿಮಾಂಸ, ಕೋಳಿ ಮತ್ತು ನವಿಲು ಮಾಂಸಕ್ಕೆ ಆಮ್ಲ ಹಣ್ಣಿನ ರಸವನ್ನು ಸೇರಿಸಲಾಗುತ್ತದೆ ಮತ್ತು ಲವಂಗ, ಕ್ಯಾರೆವೇ ಬೀಜಗಳು (ಜೀರಿಗೆಯ ಜಾತಿಗೆ ಸೇರಿದ)ಮತ್ತು ಮಸೂರ್ ಬೇಳೆಯನ್ನು ವಿವಿಧ ಭಕ್ಷ್ಯಗಳಿಗೆ ಸೇರಿಸಲಾಗುತ್ತದೆ ಎಂದಿದೆ.

ಮಹಾಭಾರತವು ಕೊಚ್ಚಿದ ಮಾಂಸದಿಂದ ಬೇಯಿಸಿದ ಅನ್ನವನ್ನು (ಪಿಸ್ತೌದಾನ) ಮತ್ತು ವಿವಿಧ ರೀತಿಯ ಹುರಿಯುವ ಆಟಗಳು ಮತ್ತು ಆಟ/ಸ್ಲರ್ಧೆಗಳಲ್ಲಿ ಬಳಸಿದ ಪಕ್ಷಿಗಳನ್ನು  ಹುರಿದು ಬಡಿಸುವ ವನಭೋಜನಗಳ ಉಲ್ಲೇಖಗಳನ್ನು ಹೊಂದಿದೆ.   ಎಮ್ಮೆಯ ಮಾಂಸವನ್ನು ತುಪ್ಪದಲ್ಲಿ ಕಲ್ಲುಪ್ಪಿನೊಂದಿಗೆ,  ಹಣ್ಣಿನ ರಸಗಳು, ಪುಡಿಮಾಡಿದ ಕರಿಮೆಣಸು, ಅಸೆಫೆಟಿಡಾ (ಹಿಂಗು) ಮತ್ತು ಕ್ಯಾರೆವೇ ಬೀಜಗಳೊಂದಿಗೆ ಹುರಿಯಲಾಗುತ್ತದೆ ಮತ್ತು ಮೂಲಂಗಿ, ದಾಳಿಂಬೆ ಬೀಜಗಳು ಮತ್ತು ನಿಂಬೆಹಣ್ಣುಗಳಿಂದ ಅಲಂಕರಿಸಿ ಬಡಿಸಲಾಗುತ್ತೀತ್ತು.

ನಂತರ ಬಂದ ಬೌದ್ಧ ಜಾತಕಗಳು ಮತ್ತು ಬ್ರಹತ್ಸಂಹಿತಾ (6 ನೇ ಶತಮಾನ CE) ಇನ್ನೂ ಕೆಲವು  ಜಾತಿಯ ಜೀವಿಗಳನ್ನು ಪಟ್ಟಿಗೆ ಸೇರಿಸಿ ಮಾಂಸಾಹಾರಿ ಆಹಾರ ಪದಾರ್ಥಗಳ ಪಟ್ಟಿಯನ್ನು ನಿರ್ವಹಿಸುತ್ತವೆ. ಒಟ್ಟಾರೆಯಾಗಿ, ಅಲ್ಲಿಯವರೆಗೆ ಮಾಂಸವನ್ನು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದೆ. ಪ್ರಖ್ಯಾತ ವೈದ್ಯ ಚರಕ ಅವರು ಬಡಕಲು ದೇಹಿಗಳಿಗೆ, ತುಂಬಾ ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುವವರಿಗೆ ಇದನ್ನು ಶಿಫಾರಸು ಮಾಡುತ್ತಾರೆ. ಜೈನರು, ಸಹಜವಾಗಿ, ಯಾವುದೇ ರೀತಿಯ ಜೀವಿಯನ್ನು ತಿನ್ನುವುದರಿಂದ ಸಂಪೂರ್ಣವಾಗಿ ವಿಮುಖರಾಗಿದ್ದರು. ಆದರೆ ಬೌದ್ಧ ಭಿಕ್ಕುಗಳಿಗೆ  ಮಾಂಸವನ್ನು ಭಿಕ್ಷೆ ನೀಡಿದರೆ ತಿನ್ನುವುದನ್ನು ಬುದ್ಧ ನಿಷೇಧಿಸಲಿಲ್ಲ, ಆದರೆ ಸನ್ಯಾಸಿಗಳ ಸಮ್ಮುಖದಲ್ಲಿ ಹತ್ಯೆ ನಡೆಯಬಾರದಿತ್ತು. ಇದನ್ನು ಖಾತ್ರಿಪಡಿಸುವುದು ಭಿಕ್ಷೆ ನೀಡುವವರ ಜವಾಬ್ದಾರಿಯಾಗಿತ್ತು.

ಕೃಪೆ: scroll.in

ಕೃಪೆ: scroll.in

ದಕ್ಷಿಣದಲ್ಲಿ ಯಾವುದೇ ನಿರ್ಬಂಧಗಳಿರಲಿಲ್ಲ

ದಕ್ಷಿಣದಲ್ಲಿ, ಮಾಂಸ ಮತ್ತು ಮೀನುಗಳನ್ನು ತಿನ್ನುವುದರ ವಿರುದ್ಧದ ಪ್ರತಿಬಂಧಗಳು ಅಪರೂಪ. ಕ್ರಿ.ಶ 300 ರ  ಹಿಂದಿನ ಆಹಾರದ ಮೇಲಿನ ಆರಂಭಿಕ ಬರಹಗಳಲ್ಲಿ, ಮೆಣಸು (ಕರಿ) ಮಾಂಸವನ್ನು ರುಚಿಕಟ್ಟು ಮಾಡುವ ಮುಖ್ಯ ಮಸಾಲೆ ಎಂದು ವಿವರಿಸಲಾಗಿದೆ. ಹುರಿದ ಮಾಂಸಕ್ಕೆ ಮೂರು ಬಗೆಯ ಹೆಸರುಗಳಿದ್ದವು ಮತ್ತು ಹುಣಸೆಹಣ್ಣು ಮತ್ತು ಕಾಳುಮೆಣಸಿನೊಂದಿಗೆ ಬೇಯಿಸಿದ ಮಾಂಸವನ್ನು ಪುಳಿಂಗಾರಿ ಎಂದು ಕರೆಯಲಾಗುತ್ತಿತ್ತು. ಇದನ್ನು ಸಾಂದರ್ಭಿಕವಾಗಿ ಒಂದು ರೀತಿಯ ಪೇಸ್ಟಿನ  ಅನುಭೂತಿ ಕೊಡುವಂತೆ ಮಾಡಲು ಪುಡಿಮಾಡಲಾಗುತ್ತದೆ. ಸಂಗಮ ಯುಗದ ಪ್ರಸಿದ್ಧ ಬ್ರಾಹ್ಮಣ ಪುರೋಹಿತರಾದ ಕಪಿಲರು ಮಾಂಸ ಮತ್ತು ಮದ್ಯವನ್ನು ಸೇವಿಸುವ ಒಂದು ನಿರ್ದಿಷ್ಟ ಅತ್ಯಾನಂದದ ವೈಖರಿಯ ಬಗ್ಗೆ ಮಾತನಾಡುತ್ತಾರೆ.

ಹಳೆಯ ತಮಿಳಿನಲ್ಲಿ ಗೋಮಾಂಸಕ್ಕೆ ನಾಲ್ಕು ಪದಗಳಿವೆ: ವಲ್ಲುರಂ, ಶುಶಿಯಂ, ಶುಟ್ಟಿರೈಚಿ ಮತ್ತು ಪಡಿತಿರಂ. ಕರಾವಳಿ ಪ್ರದೇಶದ ವ್ಯಾಪಾರಿಗಳ ಪತ್ನಿ ಯರಲ್ಲಿ ವಿಶೇಷ ಮೆಚ್ಚಿನವಾದ  15 ಹೆಸರುಗಳ, ಹಂದಿಮಾಂಸವು ಇದ್ದವು ಎಂದು ನಾವು ಕಲಿಯುತ್ತೇವೆ. ಕಾಡುಹಂದಿ, ಮೊಲ ಮತ್ತು ಜಿಂಕೆಗಳನ್ನು ಬೇಟೆನಾಯಿಗಳನ್ನುಬಳಸಿ ಬೇಟೆಯಾಡುವ ಉಲ್ಲೇಖಗಳಿವೆ.

ಸೆರೆಸಿಕ್ಕ ಹಂದಿಗಳನ್ನು ಅಕ್ಕಿ ಹಿಟ್ಟಿನಿಂದ ಕೊಬ್ಬಿಸಲಾಗುತ್ತಿತ್ತು ಮತ್ತು ಅವುಗಳ ಮಾಂಸವನ್ನು ರುಚಿಯಾಗಿಸಲು ಹೆಣ್ಣು ಹಂದಿಗಳಿಂದ ದೂರ ಇರಿಸಲಾಗುತ್ತಿತ್ತು. ಹೆಚ್ಚು ಅಪರಿಚಿತ/ಅದ್ವಿತೀಯ ಬಗೆಯ ಮಾಂಸಗಳಲ್ಲಿ ಮುಳ್ಳುಹಂದಿಗಳು (ಕುರುವರ್‌ಗಳ ನೆಚ್ಚಿನವು) ಮತ್ತು ಹುರಿದ ಬಸವನ ಹುಳಗಳು (ಮಲ್ಲಾರರ ಮೆಚ್ಚಿನವುಗಳು).ಕೆಳಗೆ ದಕ್ಷಿಣದಲ್ಲಿ, ದೇಶೀಯ ಕೋಳಿಗಳನ್ನು (ಕೋಜಿ) ತಿನ್ನಲು ಯಾವುದೇ ನಿಷೇಧವಿರಲಿಲ್ಲ. ಸಮುದ್ರದ ಈ ಫಲವನ್ನು ಸವಿಯಲು ಉತ್ತರವು ಕಲಿತಂತೆ ಮೀನು ಎಂಬ ಪದವು, ಮೀನ್ ಎಂದು ಸಂಸ್ಕೃತದ ಶಬ್ದಕೋಶವನ್ನು ಪ್ರವೇಶಿಸುವಷ್ಟು ಕರಾವಳಿ ಪ್ರದೇಶದಾದ್ಯಂತ ಮೀನು ಮತ್ತು ಸೀಗಡಿಗಳನ್ನು ಬಹಳವಾಗಿ ಸವಿಯಲಾಗುತ್ತಿತ್ತು.

ಪ್ರಚಲಿತ ಕಲ್ಪನೆಗಳಿಗೆ ವಿರುದ್ಧವಾಗಿ, ಆಯುರ್ವೇದಾಚಾರ್ಯರು ಮಾಂಸವನ್ನು ಕಡೆಗಣಿಸಬಹುದು ಎಂದು ಪರಿಗಣಿಸಿಲಿಲ್ಲ. ವೈದ್ಯ ಋಷಿ ಸುಶ್ರುತ ಸಂಕಲಿಸಿದ ಸುಶ್ರುತ್ ಸಂಹಿತಾ ಎಂಟು ವಿಧದ ಮಾಂಸಗಳನ್ನು ಪಟ್ಟಿಮಾಡುತ್ತದೆ. 13 ನೇ ಶತಮಾನದ ರಾಜ ಸೋಮೇಶ್ವರನದ್ದು ಎಂದು ಹೇಳಲಾದ ಮಾನಸೋಲ್ಲಾಸ ಎಂಬ ಗ್ರಂಥವು ಅನ್ನಭೋಗ ಎಂಬ ಆಹಾರದ ಅಧ್ಯಾಯಕ್ಕೆ ಸ್ಥಾನವನ್ನು ನೀಡುತ್ತದೆ.ಇದು  ಹಂದಿಯ ಯಕೃತ್ತಿನ ಗಟ್ಟಿಗಳನ್ನು ಹುರಿದ ಅಥವಾ ಕರಿದ ನಂತರ ಮೊಸರು ಅಥವಾ ಕಪ್ಪು ಸಾಸಿವೆಯ ಕಷಾಯದೊಂದಿಗೆ ಬಡಿಸಲಾಗುವ ರೀತಿಯಿಂದ ಹಿಡಿದು ಇಡಿಯಾಗಿ ಹಂದಿಗಳನ್ನು ಕಲ್ಲು ಉಪ್ಪು ಮತ್ತು ಕಾಳುಮೆಣಸಿನೊಂದಿಗೆ ಸಂಪೂರ್ಣವಾಗಿ ಹುರಿದ ನಿಂಬೆಹಣ್ಣಿನ ಜೊತೆಗೆ ತಾಳೆ ಎಲೆಗಳನ್ನು ಹೋಲುವ ಪಟ್ಟಿಗಳಲ್ಲಿ ಕೆತ್ತಿ ಬಡಿಸಲಾಗುತ್ತದೆ ಎಂದು ಹೇಳುತ್ತದೆ.

ಟ್ರಿಪ್ಟಿಚ್‌ನ ಪ್ಯಾನೆಲ್‌ಗಳಂತೆ, ಈ ಶತಮಾನದ ವಿಷಯಗಳ ನರಕದ ದೃಷ್ಟಿಯನ್ನು ಚಿತ್ರಿಸುವ ಮೂರಕ್ಕಿಂತ ಕಡಿಮೆ ಶ್ರೇಷ್ಠ ಕಲಾತ್ಮಕ ಕೃತಿಗಳು ಹಿಂದಿಯಲ್ಲಿ ಇಲ್ಲ: ಯಶಪಾಲ್‌ನ ಜೂಟಾ ಸಚ್, ರಾಹಿ ಮಾಸೂಮ್ ರಜಾ ಅವರ ಆಧಾ ಗಾಂವ್ ಮತ್ತು ಭಿಷಮ್ ಸಾಹ್ನಿಯ ತಮಸ್. ಯೋಗಿಯ ರಾಜ್, ಈಗಾಗಲೇ ಈ ಕಾಲ್ಪನಿಕ ಕಥೆಗಳು ಹೇಳಿದ ಕಲ್ಪನೆಯನ್ನು ಅನುಕರಿಸಲು ತನ್ನ ಪ್ರವೇಶವನ್ನು ಮಾಡಬೇಕಾಗಿತ್ತು.

ಮೂಲ: ಮೃಣಲ್  ಪಾಂಡೆ

ಏಪ್ರಿಲ್ 10, 2017


ಅನುವಾದ: ರಂಜಿತ ಜಿ. ಎಚ್

ಪ್ರತಿಕ್ರಿಯಿಸಿ