ಬುದ್ದಿಜೀವಿ ಬಿಕ್ಕಟ್ಟುಗಳು – ಭಾಗ ೨ : ಕೆ. ವಿ. ನಾರಾಯಣ

ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು 'A Plea for Intellectuals' ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಜಗತ್ತನ್ನು ಬದಲಿಸಬೇಕೆಂಬ ಮಾತನ್ನು ಹೇಳುವವರು ತಮ್ಮಲ್ಲೂ ಆ ಬಗೆಯ ಬದಲಾವಣೆ ಸಂಭವಿಸಬೇಕಾಗಿದೆ ಎಂಬ ಅರಿವಿಗೆ ತೆರೆದುಕೊಳ್ಳುವ ಅಗತ್ಯವಿದೆ. ಹಾಗಾಗಿ ಬುದ್ಧಿಜೀವಿಗಳನ್ನು ನಾವು ಗ್ರಹಿಸುತ್ತಿರುವ ರೀತಿಯಲ್ಲೇ ಮೂಲಭೂತ ಬದಲಾವಣೆಯ ಅಗತ್ಯವಿದೆ. ಋತುಮಾನ ಪ್ರಕಟಿಸಿರುವ ಜೀನ್ ಪಾಲ್ ಸಾರ್ತೃ ಅವರ ಪ್ರಬಂಧದ ಕುರಿತು ಕೆ. ವಿ. ಎನ್ ಇಲ್ಲಿ ಮಾತಾಡಿದ್ದಾರೆ.

ಆಸಕ್ತರು ಪುಸ್ತಕವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ. ಋತುಮಾನ ಆ್ಯಪ್ ನಲ್ಲಿ ಇ ಪುಸ್ತಕ, ಕೇಳು ಪುಸ್ತಕ ಕೂಡ ನಿಮಗೆ ಸಿಗುತ್ತದೆ.

Paperback : https://bit.ly/3QMzh81
Hardbound : https://bit.ly/3zV4S0v


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

ಪ್ರತಿಕ್ರಿಯಿಸಿ